Share

ಇರಬಲ್ಲೆವಾ ಭಾವುಕರಾಗದೆ?
ಅರ್ಚನಾ ಎ ಪಿ

 

 

 

 

 

 

 

Millions of people have decided not to be sensitive. They have grown thick skins around themselves just to avoid being hurt by anybody. But it is at great cost. Nobody can hurt them, but nobody can make them happy either.

ನಿಜ,
ಒಂದೇ ಒಂದು ಕೊಡೆಯ ಅಡಿಯಲ್ಲಿ ಅರ್ಧರ್ಧ ನೆನೆಯುತ್ತಾ,
ಅರ್ಧ ನೆಂದು, ಅರ್ಧ ಒಣಗಿ, ಹಾಗೇ ನೆನೆಯದೇ ಉಳಿಯುತ್ತಾ,
ನೆಂದ ಮನಸ್ಸಿಗೆ ಗೊತ್ತು, ನೀರಿಲ್ಲದ ಬರಗಾಲದ ಸ್ಥಿತಿ,
ಆದರೇನು,
ಒಮ್ಮೆ ಬರಗಾಲದ ಅನುಭವವೇ ನಿತ್ಯ ಸತ್ಯ ಎಂದು ತಿಳಿದರೆ ಅದೇ ಪ್ರಿಯವಾಗುವತ್ತ….

ಅಲ್ವಾ…
ಬಿಸಿಬಿಸಿ ಹಾಲನ್ನು ಕುಡಿಯಲು ಪ್ರಯತ್ನಿಸಿದ ಬೆಕ್ಕು, ನಾಲಿಗೆ ಸುಟ್ಟು ಕೊಂಡು, ಮತ್ಯಾರಾದರೂ ಕುಡಿಯಲು ನೀರಿಟ್ಟರೂ..ಆರಿಸಿ ಆರಿಸಿ.. ಕುಡಿಯಲೂ ಹೆದರುತ್ತದಂತೆ.
ಇದನ್ನೇ ಈ ಭೂಮಿ ಮೇಲಿನ ಜನರ ಯಾವ ಸಂಬಂಧಗಳಿಗೆ ಅನ್ವಯಿಸಿಕೊಂಡರೂ…ಎಂಥಾ ಸೂಕ್ಷ್ಮ ವಿಚಾರ ಇದು ಅನಿಸದೇ ಇರಲ್ಲ…. ಓನ್ಲೀ ಫಾರ್ ಸೆನ್ಸಿಟೀವ್ ಪೀಪಲ್…ಬಾಕಿಯವರಿಗೆ ಗೊತ್ತಿಲ್ಲ..

ಹೆಣ್ಮಕ್ಕಳಿಗೆ ತಂದೇನೇ ಹೀರೋ, ಫ್ರೆಂಡ್, ಕಾವಲುಗಾರ ಇತ್ಯಾದಿ ಎಲ್ಲಾ..ಹಾಗಿದ್ಮೇಲೆ, ಏನೇ ಸಮಸ್ಯೆ ಬಂದರೂ, ಬಹಳ ಬಹಳ ನಂಬಿಕೆಯಿಂದ ಬಂದು ಅಪ್ಪನ ಬಳಿ ಹೇಳಿಕೊಂಡು, ಅವರದಕ್ಕೊಂದು ಪರಿಹಾರ ಹುಡುಕುವ, ಇಲ್ಲಾ ಬಗೆಹರಿಸುವ ಭರವಸೆ ಕೊಟ್ಟಾಗ, ಎದುರಾದ ಹಿಮಾಲಯ ಕ್ಷಣಮಾತ್ರದಲ್ಲಿ ಕಣ್ಮರೆಯಾಗಿ ಕರಗಿಹೋದ ಅನುಭವ.

ಆದರೆ ಅದೇ ತಂದೆ, ಇದಕ್ಕೆ ಕಾರಣ ನೀನೇ ಇರಬೇಕು, ನಿಂದೇ ತಪ್ಪಿರಬೇಕು, ನೀನೇ ನಗ್ತಾ ನಗ್ತಾ ಮಾತಾಡ್ತಿರ್ತೀಯಾ.. ಒಂಚೂರೂ ಗಾಂಭೀರ್ಯ ಇಲ್ಲ, ಓದೋಕೆ, ಕೆಲಸ ಮಾಡೋಕೆ ಕಳಿಸಿದ್ದೇ ತಪ್ಪು.. ಅಂದರೆ..ಎಲ್ಲಿಗೂ ಹೋಗಬೇಡ, ಮನೇಲೇ ಬಿದ್ದಿರು ಅಂತ ಮುಖಕ್ಕೆ ಹೊಡೆದ ಹಾಗೆ ನಿರ್ಧಾರ ತಿಳಿಸಿಬಿಟ್ಟರೆ,
ಹೇಗೆ ಭಾವುಕರಾಗದಿರಲು ನಿರ್ಧರಿಸದೇ ಇರೋದು?

ಪ್ರತಿಯೊಬ್ಬರಿಗೂ ಸ್ಕೂಲಿಂದ ಹಿಡಿದು ಪದವಿಯೋ ಇಲ್ಲಾ ಓದಿನ ಕೊನೇ ಹಂತದವರೆಗೆ ಎಷ್ಟೋ ಸ್ನೇಹಿತರು ಸಿಕ್ಕೇ ಇರುತ್ತಾರೆ. ಅವರಲ್ಲಿ ಕೆಲವರು ಹೇಳಹೆಸರಿಲ್ಲದಂತೆ ಮಾಯವಾಗಿ ಬಿಡ್ತಾರೆ, ಇನ್ನೂ ಕೆಲವರು ನಮ್ಮನ್ನು ಮರೆತೇ ಬಿಡುತ್ತಾರೆ, ಮತ್ತೆ ಹಲವರಿಗೆ ನಮ್ಮೊಂದಿಗಿನ ಸ್ನೇಹಕ್ಕೆ ಕೊಡಲು ಪಾಪ ಸಮಯವೇ ಇರುವುದಿಲ್ಲ. ಇವರೆಲ್ಲರ ಮಧ್ಯೆ, ಕೈಬೆರಳೆಣಿಕೆಯಷ್ಟು ಸ್ನೇಹಿತರೊಂದಿಗೆ ಬಾಂಧವ್ಯ ಬೆಳೆದಿರತ್ತೆ, ಅವರ ನಡುವೆಯೂ ಕೇವಲ ಮೂರೋ ನಾಲ್ಕೋ ಜನರಿಗೆ ಮಾತ್ರ ನಮ್ಮ ಪರಮಾಪ್ತ ವಲಯಕ್ಕೆ ಜಾಗ ಕೊಟ್ಟಿರ್ತೀವಿ. ಎಷ್ಟೋ ವಿಚಾರಗಳ ಚರ್ಚೆ, ಮನೆಯ ಕಷ್ಟ ಸುಖ ಹಂಚಿಕೊಳ್ಳೋದು, ಇದ್ರೆ..ಪ್ರೀತಿ ಪ್ರೇಮದ ವಿಷಯಗಳು, ಕನಸುಗಳು, ಆಸೆಗಳು, ಭವಿಷ್ಯ, ಹೀಗೆ ಮನಬಿಚ್ಚಿಟ್ಟಿರ್ತೀವಿ..ಕಾರಣ ಇಷ್ಟೇ, ಅವರ ಮೇಲಿನ ಅಪಾರ ನಂಬಿಕೆ. ಯಾರ ಬಳಿಯೂ ಚರ್ಚಿಸಲ್ಲ, ಸಲಹೆ ಮಾರ್ಗದರ್ಶನ ನೀಡಬಹುದು, ಇಲ್ಲಾ ಹೇಳಿಕೊಂಡಾಗ ಅಬ್ಬಾ… ಒಂಚೂರು ಹಗುರಾದ ಅನುಭವ..

ಆದರೆ ಇವರ ಮೇಲಿನ ಈ ನಂಬಿಕೆಯ ಸಣ್ಣ ಎಳೆ ತುಂಡಾಗಿ ಹೋಗತ್ತೆ, ಅವರು ಈ ಬಗ್ಗೆ ನಿರ್ಲಕ್ಷ್ಯದಿಂದ ಮಾತಾಡಿ, ಎಲ್ಲರೊಂದಿಗೆ ವಿಷಯ ಹರಡಿಕೊಂಡು ಬಂದಾಗ, ಹೇಗೆ ಭಾವುಕರಾಗಲು ನಿರ್ಧರಿಸದೇ ಇರೋದು?

ಕೆಲವರಿರ್ತಾರೆ,
ಬಹಳ ಸಹಾಯ ಮಾಡ್ತೀವಿ ಅಂತ ತೋರಿಸಿಕೊಳ್ಳುವವರು,
ನಾವೇನೂ ಅವರ ಬಳಿ ಹೇಳದಿದ್ದರೂ, ಏನೋ ಮಹಾನ್ ಸಹಾಯ ಶೂರರು ಅಂತ ತಮ್ಮ ದೃಷ್ಟಿಯಲ್ಲಿ ಮೇಲೆರಲು, ಬೇಡದ ಸಲಹೆಗಳನ್ನು, ಉಪಾಯಗಳನ್ನು, ಕೆಲಸ ಮಾಡದ ವ್ರತ, ಉಪವಾಸ, ಹರಕೆಯ ‘ಉಚಿತ’ solutions ಕೊಡ್ತಿರ್ತಾರೆ.

ಈಗ ನೋಡಿ,
ಬೇರೆ ಯಾರ ಜೀವನಕ್ಕಿಂತ,
ಮನೆಯಲ್ಲಿ ಯಾರಾದರೂ ಮದುವೆಯಾಗದ ಹುಡುಗಿ ಇದ್ದರಂತೂ, ಮುಗಿದೇ ಹೋಯ್ತು ಕಥೆ, ಮೂರನೆ ಮಹಾಯುದ್ಧಕ್ಕೆ ಎಲ್ಲಾ ದೇಶಗಳೂ ಪರಮಾಣು ಬಾಂಬ್ ಹಿಡಿದು ಕೂತಿರುವಂತೆ, ಎಲ್ಲರ ಬಳಿಯೂ, ಮದುವೆಯಾಗಲು ಇರುವ ಸರಳ ಸೂತ್ರಗಳದ್ದೊಂದು ಪಿಎಚ್ ಡಿ ಮಾಡಿರೋ ಪುಸ್ತಕಗಳೇ ಇರುತ್ತವೆ, ಈ ಪಾಪದ ಪ್ರಾಣಿಯ ಮೇಲೆ ಪ್ರಯೋಗಿಸಲು. ಎಲ್ಲರ solutions ಗೊಂದು solution ಹುಡುಕಲು, ವ್ರತ ಉಪವಾಸ ಹರಕೆ ಹೊತ್ತು, ಯಾವುದೂ ಈಡೇರದಿದ್ದಾಗ, ನೀನ್ ಮನಸ್ಸಿಟ್ಟು ಮಾಡಿರಲಿಕ್ಕಿಲ್ಲ..ಅಂದಾಗ ಹೇಗೆ ಭಾವುಕರಾಗದಿರಲು ನಿರ್ಧರಿಸದೇ ಇರೋದು?

ಇವೆಲ್ಲಕೂ ಮೀರಿ,
ವರಾನ್ವೇಷಣೆ ಮಾಡಿ ಅಂತ ಹೇಳದಿದ್ದರೂ,
ಮೇಲೆ ಬಿದ್ದು ಜಾತಕ ಭಾವಚಿತ್ರ ಒಯ್ದು, ಯಾವುದೋ ಉಳಿದು ಹೋದ ಸಂಬಂಧ, ತಂದು ಮಾಡಿಕೋ ಅಂದಾಗ, ಆ ಸಂಬಂಧದ ನಿಜ ಸ್ಥಿತಿ ಅರಿತಾಗ ಆಗೋ ನೋವಿಗೆ ಹೇಗೆ ಭಾವುಕರಾಗದಿರಲು ನಿರ್ಧರಿಸದೇ ಇರೋದು?

೨೬ ರ ಯುವತಿಗೆ ೪೦ರ ಯುವಕನನ್ನು ಹುಡುಕಿ ತಂದು, ನಾನೂ ವರಾನ್ವೇಷಣೆ ಮಾಡುತ್ತಿದ್ದೇನೆ ಅಂತ ತೋರಿಸಿಕೊಳ್ಳುವ ಹಂಬಲ ಏಕೆ? ಇಲ್ಲಾ ಎಂಥದೋ ವಿಚ್ಛೇದಿತ ಸಂಬಂಧವೋ, ವರದಕ್ಷಿಣೆ ನಿರೀಕ್ಷಿಸುವವರೋ, ಯಾವುದೋ ವಿಕಲಾಂಗರೋ, ಅಥವಾ ಸರಿಹೊಂದದ ಸಂಬಂಧಗಳನ್ನು ಹುಡುಕೀ ಹುಡಿಕೀ ತಂದು, ನೋಡು, ಹೆಚ್ಚು ನೋಡೋಕೆ ಹೋಗಬಾರದು, ಯೋಚನೆ ಮಾಡು, ತಡವಾದ್ರೆ ವಯಸ್ಸು ಬೆಳೀತಾ ಹೋಗತ್ತೆ, marketನಲ್ಲಿ ಬೆಲೆ ಇಳೀತಾ ಹೋಗತ್ತೆ, ನಿನ್ನ choices ಕೂಡ ಕಡಿಮೆ ಆಗ್ತಾ ಹೋಗತ್ತೆ, ಒಂದ್ ಹಂತ ದಾಟಿದ ಮೇಲೆ, ಮದುವೆನೇ ಆಗಲ್ವೇನೋ, ಇಲ್ಲಾ ಯಾರನ್ನಾದರೂ love ಮಾಡಬಾರದಾ, ನಂಗ್ಯಾಕೋ ಸಂಶಯ, ಇಲ್ಲೀವರೆಗೆ ಯಾರೂ propose ಮಾಡೇ ಇಲ್ವಾ, ಅಂತ ನಮ್ಮ ಮನಸ್ಸಿನ ತಿಳಿ ನೀರಿಗೆ ಕಲ್ಲೆಸೆದು ಮಜಾ ನೋಡುವವರ ಮಾತುಗಳಿಗೆ, ನಮ್ಮ ಕಷ್ಟಗಳನ್ನು ಕಟ್ಟಿಗೆಯಾಗಿಸಿ ತಮ್ಮ ಚಳಿ ಕಾಣಿಸಿಕೊಳ್ಳುವ ಸಾಧನ ಮಾಡಿಕೊಳ್ಳುವವರನ್ನು ಕುರಿತು ಹೇಗೆ ಭಾವುಕರಾಗದಿರಲು ನಿರ್ಧರಿಸದೇ ಇರೋದು?

ಎಲ್ಲೂ ಸಿಗದ ಸಣ್ಣ ಪ್ರೀತಿ, ಒಂದ್ ಸಣ್ಣ ಆತ್ಮೀಯತೆ, ಒಂಚೂರು ಹೊಗಳಿಕೆ, ಸಿಗ್ತಾ ಇದೆ ಅಂತ ಆಸೆ ಪಟ್ಟು, ಸ್ನೇಹವೊಂದಕ್ಕೆ ಹಸಿರು ನಿಶಾನೆ ಕೊಟ್ಟು, ಒಪ್ಪಿಕೊಂಡು, ಕೆಲವು ವೇಳೆಯ ಕಿರಿಕಿರಿ ಬೇಜಾರಾಗೋ ಸಂಭಾಷಣೆಗಳನ್ನೂ ಬದಿಗೊತ್ತಿ, ಸ್ನೇಹದ ಎಳೆ ರಕ್ಷಿಸೋ ಜವಾಬ್ದಾರಿ ಹೊತ್ತು, ಗಂಟು ಬೀಳದ ಹಾಗೆ ಎಚ್ಚರ ವಹಿಸುವಾಗ.. ಈ ವರ್ತನೆಗೆ attitude ತೋರಿಸೋದು, ಅಂತ ಮುಲಾಜಿಲ್ಲದೆ ಅಭಿಪ್ರಾಯ ತಿಳಿಸುವವರಿಗೆ, ನಿಜವಾದ attitude ಏನಾದರೂ ತೋರಿಸಿದರೆ ಹೇಗಿರಬಹುದು ಅವರ ಸ್ಥಿತಿ ಅಂತ ಯೋಚಿಸದೇ.. ಹೇಗೆ ಭಾವುಕರಾಗದಿರಲು ನಿರ್ಧರಿಸದೇ ಇರೋದು?

ದುರ್ಯೋಧನನಂತೆ,
ನ್ಯಾಯ ಸರಿ ಅಹಿಂಸೆ ಎಲ್ಲಾ ಗೊತ್ತು, ಆದರೆ ಯಾಕೋ ಅನ್ಯಾಯ ತಪ್ಪು ಹಿಂಸೆಯನ್ನೇ ಮಾಡಬೇಕು ಅನಿಸತ್ತೆ ಅದೇ ಸೆಳೆಯತ್ತೆ ಅಂತ ಸದಾ ಕಟುವಾಗಿ ಟೀಕಿಸುವವರಿಗೆ, ತಮ್ಮ ಅವಶ್ಯಕತೆ ಇಲ್ಲದಿದ್ರೂ ಮೂಗು ತೂರಿಸುವವರಿಗೆ, ತಮ್ಮ ಸ್ವಾರ್ಥಕ್ಕಾಗಲಿಲ್ಲ ಅಂತ ಜಂಭ ಜಾಸ್ತಿ ನಿಂಗೆ ಎಂದೂ, ನಾನ್ಯಾಕೆ ಬಗ್ಗೋದು ಬೇಕಾದರೆ ಅವರೇ ಬರಲಿ ಅಂತ ನಿರೀಕ್ಷಿಸುವವರಿಗೆ ಉತ್ತರವಾಗಿ ಹೇಗೆ ಭಾವುಕರಾಗದಿರಲು ನಿರ್ಧರಿಸದೇ ಇರೋದು?

बनकर रकिब बैठे है वो जो हबीब थे यारों ने खूब फ़र्ज़ को अंजाम दिया है….उम्रभर का गम हमें इनाम दिया है…

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 10 hours ago No comment

  ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…

    ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ | ಬಿ ಲಕ್ಷ್ಮಣ್     ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ...

 • 2 days ago No comment

  ಮತ್ತೆ ಮತ್ತೆ…

        ಕವಿಸಾಲು     ನೆನಪಿನಾಗಸದಲಿ ನಗೆಚುಕ್ಕಿ ಎಣಿಸುವಾಸೆಗೆ ಕಣ್ಣಬೆಳಕು ಹಾಸಿದವ ಬಿತ್ತಿದ್ದು ಹೂವಾಗಿ ಬಾಡುವುದರೊಳಗೆ ಉದುರುವಡಿ ಬೊಗಸೆಯಾದವ ನೀರಿನಲೆ ಉಂಗುರದೊಳಗಿಂದ ಬರುತಾನೆ ಮತ್ತೆಮತ್ತೆ ಶಿಶಿರನೊಡನೆ ವಸಂತನೊಡನೆ ಜಗದ ಯಾವ ಕತ್ತಲೂ ತಲುಪದ ಮೂಲೆಗೆ ಬೆಳಕ ಬಳಿದಿಟ್ಟವ ಕಣ್ಣ ರೆಕ್ಕೆಗೆ ನಸುಕಿಗೂ ಮುಂಚೆ ಬಣ್ಣ ಹಚ್ಚಿದವ ಮೂಡಣದ ಚಿಲಿಪಿಲಿ, ಪಡುವಣದ ಉನ್ಮತ್ತ ಕೆಂಪು, ಗಲಗಲ ಹಗಲಿನಂಥವ ಮರೆಸಬರುತಾವೆ ಒಂದಷ್ಟು ನೆಪ ಬಿರುಮಾತು ಒಣಜಗಳ ಜಗ್ಗಿ ಎಳೆದಾಡುವಂತರ ...

 • 2 days ago No comment

  ದಂಡೆಯ ಕೈಯಲಿ ಚಂದ್ರನಿಟ್ಟು ಬರೋಣ

        ಕವಿಸಾಲು     ಎಲೆ ಉದುರುವ ಕಾಲ ಚಳಿಯ ದಾಟಿ ಬಿಸಿಲಿಗೆ ಮೈ ಒಡ್ಡುವ ಸಮಯ ಮರಗಳು ಸಹ ಎಲೆ ಉದುರಿಸಿ ಬೆತ್ತಲಾಗಿವೆ ಗೆಳತಿ ಇದು ವಿರಹ ಕಾಲ ಎಲ್ಲ ಮರಗಳು ಎಲೆಯುದುರಿಸಿ ಬೆತ್ತಲಾಗಿರಲು ಮಾವು ಮಾತ್ರ ಮೈತುಂಬಿಕೊಂಡಿದೆ ಹರೆಯ ಮಾಸಿದವರ ಹಾಗೂ ತುಂಟ ಹುಡುಗಿಯರ ಮಧ್ಯೆ ಬಸಿರಾದವಳಂತೆ ಚಳಿಗಾಲದಿ ಮದುವೆಯಾಗಿ ಅಪ್ಪಿ ಮುದ್ದಾಡಿ ಮೈಥುನಕೆ ಮನಸೋತು, ಹತ್ತಾರು ಆಟಗಳಿಗೆ ತೆರೆದುಕೊಂಡು, ಮುಟ್ಟುನಿಂತು ಬಯಕೆ ...

 • 4 days ago No comment

  ವೆಜ್ಜಾ? ನಾನ್-ವೆಜ್ಜಾ?

        ಸುಮಾರು ಒಂದು ತಿಂಗಳಿನಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದೇನೆ. ಆದರೆ ಇನ್ನೂ ಮನೆ ಸಿಕ್ಕಿಲ್ಲ. ಸಿಗದೆ ಇರುವುದಕ್ಕೆ, ನನಗನ್ನಿಸಿದಂತೆ ಮೂರು ಕಾರಣಗಳು. ಮೊದಲನೆಯದ್ದು ನಮ್ಮನೆಯಲ್ಲಿ ಒಂದು ನಾಯಿಯಿದೆ. ನಾಯಿ ಮಾಲೀಕರಿಗೆ ಮನೆ ಮಾಲಿಕರು ಮನೆ ಕೊಡುವುದಿಲ್ಲ. ನಮಗೆ ಮನೆಯೊಡೆಯನಿಗಿಂತಲೂ ನಮ್ಮ ಮನೆ ನಾಯಿಯೇ ಹೆಚ್ಚು; ಒಂದು ಭಾವನಾತ್ಮಕ ಸನ್ನಿವೇಶದಲ್ಲಿ ನನ್ನ ಗಂಡ, ‘ನಿಮಗ್ಯಾರಿಗೂ ನನ್ನ ಆಸ್ತಿಯಲ್ಲಿ ಬಿಡಿಗಾಸನ್ನೂ ಕೊಡುವುದಿಲ್ಲ. ಎಲ್ಲವನ್ನೂ ಚುಕ್ಕಿ ಹೆಸರಿಗೆ ಬರೆದಿಟ್ಟು ಸತ್ತು ...

 • 4 days ago One Comment

  ಅವರ ಕೆಲಸವಾದರೆ ಆಯಿತು!

                हमको जो ताने देते है हम खोये हैं इन रंगरलियों में हमने उनको भी छुप छुप के आते देखा इन गलियों में ये सच है झूठी बात नहीं तुम बोलो ये सच है ना ನಿಜ ತಾನೇ ಇದು, ಯಾವುದು? ಅದೇ… ಆಚಾರ ಹೇಳೋದು ಬದನೆಕಾಯಿ ...


Editor's Wall

 • 20 March 2018
  10 hours ago No comment

  ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…

    ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ | ಬಿ ಲಕ್ಷ್ಮಣ್     ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ...

 • 16 March 2018
  4 days ago No comment

  ಹೇಗೆಲ್ಲ ಎಡವಿ ಬಿದ್ದಾಳೆಂದು…

        ಲೀಲಾಧರ ಮಂಡಲೋಯಿ ಕಾವ್ಯ       ಲೀಲಾಧರ ಮಂಡಲೋಯಿ, ಹಿಂದಿಯ ಪ್ರಸಿದ್ಧ ಕವಿ. ಕಾವ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ಹಲವಾರು ರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾದವರು. ಸಣ್ಣಕಥೆಗಳನ್ನಾಧರಿಸಿದ 300ಕ್ಕೂ ಅಧಿಕ ಟೆಲಿಫಿಲಂಗಳನ್ನೂ ನಿರ್ಮಿಸಿದ್ದಾರೆ. ಬದುಕನ್ನು ಕುರಿತ ಆಳದ ಗ್ರಹಿಕೆಗಳನ್ನು ಕಂಡಿರಿಸುವ ಅವರ ಕಾವ್ಯ, ಹೇಗೆ ಹಣ ನಮ್ಮ ಸಂದರ್ಭವನ್ನು ತೀರ್ಮಾನಿಸುವ ಬಲವಾಗುತ್ತಿದೆ ಮತ್ತು ಮೌಲ್ಯಗಳನ್ನು ಮೆಟ್ಟಿ ಅಪಮೌಲ್ಯವೆಂಬುದು ಮುನ್ನೆಲೆಗೆ ಬಂದು ...

 • 16 March 2018
  5 days ago No comment

  ನಾ ಹಾಸಿಗೆ ಹಿಡಿದಾಗ

      ಗಝಲ್         | ನೀನೊಮ್ಮೆ ಬಂದಿದ್ದರೆ ತೊಳೆಯುತ್ತಿದ್ದೆ ನಿನ್ನ ಪಾದಗಳನು…   ತುಸುತುಸುವೇ ಮುಕ್ಕಾಗುತ್ತೇನೆ ನಾ ಹಾಸಿಗೆ ಹಿಡಿದಾಗ ಇನಿಸಿನಿಸೇ ಮನುಷ್ಯಳಾಗುತ್ತೇನೆ ನಾ ಹಾಸಿಗೆ ಹಿಡಿದಾಗ ಎಷ್ಟು ಹಾರಿದ್ದೆ ಮೇಲೆ, ಏರಿಯೇ ಏರಿದ್ದೆ ಮೇರೆ ಮೀರಿ ಬರಿದೆ ತರಗೆಲೆಯಾಗಿ ಉಳಿದಿದ್ದೇನೆ ನಾ ಹಾಸಿಗೆ ಹಿಡಿದಾಗ ಬರಿಗಣ್ಣಲ್ಲೇ ನೋಡುತ್ತಿದ್ದೆ ಮುಪ್ಪೆರಗಿ ಕನ್ನಡಕದಲೂ ಕಂಡಿದ್ದೆ ನಿಚ್ಚಳವಾಗಿ ಕಾಣತೊಡಗಿದ್ದು ಮಾತ್ರ ನಾ ಹಾಸಿಗೆ ಹಿಡಿದಾಗ ಓಡುತ್ತಿತ್ತು ...

 • 15 March 2018
  5 days ago No comment

  ನಿಕಷಕ್ಕೆ ಒಡ್ಡದೇ ನಂಬಿಬಿಡಬಹುದೇ ಎಲ್ಲವನೂ?

                      ನಮ್ಮಲ್ಲಿನ ಧಾರ್ಮಿಕ ಆಚರಣೆಗಳನ್ನು ನಂಬಿಕೆಯಂದಾದರೂ ಕರೆಯಿರಿ, ಮೌಢ್ಯವೆಂದಾದರೂ ಕರೆಯಿರಿ ಪ್ರಶ್ನಿಸುವ ಮನೋಭಾವವೇ ನಮ್ಮಲ್ಲಿ ಕ್ಷೀಣಿಸಿ ಅಥವಾ ಸತ್ತು ಹೋದಂತೆ ಈ ದಿನಗಳಲ್ಲಿ ಭಾಸವಾಗುತ್ತಿದೆ. ಎಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲವೋ ಅಲ್ಲಿ ವೈಜ್ಞಾನಿಕ ಮನೋಭಾವವೂ ಉದಯಿಸಲು ಸಾಧ್ಯವಿಲ್ಲ. ಕೊನೆಯದಾಗಿ ಮಾನವೀಯವಾಗಿ ನಡೆದುಕೊಳ್ಳುವುದೂ ಸಾಧ್ಯವಾಗುವುದಿಲ್ಲ.   ಬುದ್ಧಿವಂತರ ಜಿಲ್ಲೆ ಮಂಗಳೂರಿನ ಕಡಬ ಸಮೀಪದ ಕೋಯಿಲಗುಡ್ಡದಲ್ಲಿ ವೃದ್ಧನೊಬ್ಬ ಕುಸಿದು ...

 • 11 March 2018
  1 week ago No comment

  ಚಕ್ರವರ್ತಿಯ ಮೌನ!

        ಕವಿಸಾಲು       ಚೆಂದದ ಬಿಳಿಬಿಳಿ ಬಟ್ಟೆಯಲಿ ಅಷ್ಟೆತ್ತರದ ಸಿಂಹಾಸನದಲ್ಲಿ ಕೂತ ಮೌನಿ ಚಕ್ರವರ್ತಿಯ ಮುಖದಲ್ಲಿ ಮಾಸದ ಮಂದಹಾಸ! ಮಾತಾಡದ ಪ್ರಭುವಿನ ಭಟ್ಟಂಗಿಗಳು ರಾಜಮುದ್ರೆಯ ಹಿಡಿದು ಹೆದರಿಸುತ್ತಿದ್ದಾರೆ! ರಾಜಾಜ್ಞೆಯ ಪಾಲಿಸದವರ ತಲೆದಂಡ ಶತಃಸಿದ್ಧ! ಜನರೀಗ ಭಯಬೀತರಾಗಿದ್ದಾರೆ: ತಮಗೆ ಬೇಕಾದ್ದನ್ನು ಉಣ್ಣಲು ಉಡಲು ನುಡಿಯಲು ನಡೆಯಲು! ಮತಾಂಧ ಪಡೆಯ ಕಾಲಾಳುಗಳಿಗೀಗ ಹೊಸ ಉನ್ಮಾದ ದಣಿಯ ಮೆಚ್ಚಿಸುವ ಸಲುವಾಗಿ ಸಾರುತ್ತಿದ್ದಾರೆ ಕವಿತೆ ಬರೆದವನಿಗದರರ್ಥವ ತಿಳಿಸಲು ಆದೇಶವಾಗಿದೆ ...