Share

ಅಂಚೆ ಕಚೇರಿಯಲ್ಲಿ ಗೋಡ್ಸೆ
ಡಿ ಉಮಾಪತಿ

 

 

ಪ್ರಸಿದ್ಧ ಮಲೆಯಾಳಂ ಕವಿ ಕುರೀಪ್ಪುಳ ಶ್ರೀಕುಮಾರ್ ಅವರ ನಗ್ನ ಕವಿತೆಗಳು ಸರಣಿಯಿಂದ ಹೆಕ್ಕಿದ ಈ ಕವಿತೆಗಳನ್ನು ದಿ ಇಂಡಿಯನ್ ಎಕ್ಸ್ ಪ್ರೆಸ್ ಗಾಗಿ ಇಂಗ್ಲಿಷಿಗೆ ತರ್ಜುಮೆ ಮಾಡಿದವರು ಅಮೃತ್ ಲಾಲ್. ಕೇರಳದ ವಡಂಯಪಾಡಿ ಎಂಬಲ್ಲಿ ದಲಿತರನ್ನು ಹೊರಗಿಡಲು ದೇಗುಲದ ಜಮೀನಿನಲ್ಲಿ ಗೋಡೆ ಎಬ್ಬಿಸಿದ್ದನ್ನು ಪ್ರತಿಭಟಿಸಿದ ಅವರನ್ನು ಬಿಜೆಪಿ-ಆರೆಸ್ಸೆಸ್ ನವರು ಎನ್ನಲಾದ ಕಾರ್ಯಕರ್ತರು ಇತ್ತೀಚೆಗೆ ಥಳಿಸಿದರು.

 

 

 

 

 

ಅಂಚೆ ಮೊಹರು

ಗೋಡ್ಸೆಗೆ
ಅಂಚೆ ಕಚೇರಿಯಲ್ಲೊಂದು ಉದ್ಯೋಗ ಸಿಕ್ಕಿತು.
ಆಸಾಮಿಯ ಆನಂದಕ್ಕೆ ಪಾರವೇ ಇರಲಿಲ್ಲ.
ಅನುದಿನವೂ
ಗಾಂಧೀ ಸ್ಟ್ಯಾಂಪ್ ಮೇಲೆ
ಬಾರಿಸುತ್ತಿದ್ದ ಭಾರ ಲೋಹದ ಮೊಹರಿಂದ….

~

ಯುರೇಕಾ

ಹುಡುಗಿಯ ರೇಪ್ ಮಾಡಿದ
ಎಂಟು ಗಂಡಸರ ಪೈಕಿ
ಎಂಟು ಹಿಂದೂಗಳು
ಆರು ಮುಸ್ಲಿಮರು
ಇಬ್ಬರು ಕ್ರೈಸ್ತರು
ಯುರೇಕಾ, ಯುರೇಕಾ
ಕೋಮು ಸಾಮರಸ್ಯ, ಕೋಮು ಸಾಮರಸ್ಯ.

~

ಕೊಡಲಿ

ಹಿಂದೂ ಕೊಡಲಿ
ಮುಸಲ್ಮಾನ ಕೊಡಲಿಯೊಡನೆ ಮಾತಾಡಿತು
ಇಂದು ನಾವು ಕುಡಿದ ರಕ್ತಕ್ಕೆ
ಒಂದೇ ರುಚಿ.

~

ವ್ಯಸನ

ನಾನು
ಅವನಂತೆ
ಹೆಂಡ ಕುಡಿವುದ ಬಿಟ್ಟಿಲ್ಲ
ಆದರೆ ನಾನು
ಯಾರ ಮಸೀದಿಯನ್ನೂ ಕೆಡವಿಲ್ಲ.
ಸಿಗರೇಟು ಸೇವನೆ ತೊರೆದಿಲ್ಲ
ಆದರೂ ಯಾರನ್ನೂ ಸುಟ್ಟಿಲ್ಲ
ಗ್ಯಾಸ್ ಛೇಂಬರಿನಲ್ಲಿ.
ನಾನು
ಪೂರ್ಣ ಸಸ್ಯಾಹಾರಿಯಲ್ಲ
ಆದರೆ
ರೇಪ್ ಮಾಡಿಲ್ಲ
ಇತರೆ ಧರ್ಮಗಳ ಹೆಣ್ಮಕ್ಕಳನ್ನು.
ಹಾಗೆಯೇ ಇನ್ನೂ ಜನಿಸದೆ ಗರ್ಭದಲ್ಲಿ ಮಲಗಿದ
ಮುದ್ದು ಮಗುವನ್ನಿರಿದು
ಭರ್ಜಿಯ ತುದಿಯಲ್ಲಿ ನೇತಾಡಿಸಿಲ್ಲ
ಮತ್ತು ಬೆಂಕಿಯುರಿಯ ಸುತ್ತ ನರ್ತಿಸಿಲ್ಲ
ಹೀಗಾಗಿ ಹೇಳು ಗೆಳೆಯಾ
ಯಾವುದು ವ್ಯಸನ?

~

ಗೀತಾ

ಗಾಂಧಿ
ದಿನವೂ ಓದಿದರು ಭಗವದ್ಗೀತೆಯನ್ನು
ಜೊತೆಗೊಯ್ಯುತ್ತಿದ್ದರು ಸದಾ ಸರ್ವದಾ,
ಅಂತೆಯೇ
ಗೋಡ್ಸೆ ಕೂಡ.

~

ಪೋಸ್ಟ್ ಮಾರ್ಟಂ

ಡೋಲು ಮತ್ತು ನೇಗಿಲು ಮಾತಾಡಿಕೊಂಡಾಗ
ಮತ್ತೂ ಒಂದು ಪೋಸ್ಟ್ ಮಾರ್ಟಂ ಮಾಡಲಾಯಿತು
ದಲಿತ ದೇಹವನ್ನು
ಅದರ ಹೊಟ್ಟೆಯಲ್ಲಿ ಕಂಡುಬಂದಿತು
ಮೊದಲ ಪೋಸ್ಟ್ ಮಾರ್ಟಂ ವರದಿ

~

ಅಸ್ಥಿಪಂಜರ

ಸ್ಥಿಪಂಜರದೆಡೆ ಕೈತೋರಿದ ಮಗು
ಕೇಳಿತ್ತು ಟೀಚರನ್ನು
ಇದು ಪುರುಷನದೇ?
ಹೌದು
ಅವನು ತಿಂದ
ಮಲಗಿದ ಸತ್ತಂತೆ
ರಕ್ತ ಮಾಂಸಗಳು ತೊರೆದು ಹೋದಾಗ
ಅಸ್ಥಿಪಂಜರವಾದ
ಮೂಳೆಗಳಿಲ್ಲದೆ ನಾನೂ ಇರಲಾರೆ ನೀನೂ ಇರಲಾರೆ
ಟೀಚರ್, ಅದರ ಧರ್ಮ ಯಾವುದು ಹೇಳಿ
ಅದರ ಹಣೆ, ತೊಡೆ ಮೂಳೆ
ನೋಡಿದರು ಟೀಚರ್
ಅಸ್ಥಿಪಂಜರ ಹಲ್ಲು ಕಿರಿಯಿತು
ಫೇಲು ಮಾಡಿದೆ ಫೇಲು ಮಾಡಿದೆ ನಿನ್ನನು.

Share

One Comment For "ಅಂಚೆ ಕಚೇರಿಯಲ್ಲಿ ಗೋಡ್ಸೆ
ಡಿ ಉಮಾಪತಿ
"

  1. ಚಂದ್ರಕಾಂತ ವಡ್ಡು
    26th February 2018

    ಗೆಳೆಯ ಉಮಾಪತಿ ಇಷ್ಟೊಂದು ಸಹಜ ಅನುವಾದಕರೆಂದು ಗೊತ್ತಿರಲಿಲ್ಲ. ಅಭಿನಂದನೆಗಳು.

    Reply

Leave a comment

Your email address will not be published. Required fields are marked *

Recent Posts More

  • 1 day ago No comment

    ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

  • 6 days ago One Comment

    ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

            ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

  • 1 week ago No comment

    ವಸಂತದ ನೆನಪು; ಮಾಗುವ ಹುರುಪು!

      ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

  • 1 week ago No comment

    ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

  • 2 weeks ago No comment

    ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

    ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...


Editor's Wall

  • 11 May 2018
    1 month ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

  • 10 May 2018
    2 months ago No comment

    ಒಂದು ಪುಸ್ತಕ; ವಾರವಿಡೀ ಬಿಡುಗಡೆ!

    ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

  • 03 May 2018
    2 months ago No comment

    ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                      ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

  • 30 April 2018
    2 months ago No comment

    ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

    ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

  • 28 April 2018
    2 months ago No comment

    ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

    ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...