Share

ಹಾರದ ಹಂಗಿನಲ್ಲಿ ಬಂಧಿಯಾಗುವ ನಗು!
ಸಂಪಾದಕ

 

ಹೆಣ್ಣೊಬ್ಬಳ ಕೊನೆಯಾಸೆ ಎಂಬ ನೆಪದಲ್ಲಿ ಬಣ್ಣವೇರುವುದು,
ಬದುಕಿದ್ದಾಗ ಅವಳನ್ನು ಸುತ್ತುವರಿದು ಕೊಂದ ವ್ಯೂಹದ
ರಹಸ್ಯ ಅಹಂಕಾರವೇ ಆಗಿರುತ್ತದೆ.

 

 

ಶ್ರೀದೇವಿ ಎಂಬ ಅಧ್ಯಾಯವೊಂದು ಭಾರತೀಯ ಚಿತ್ರರಂಗದ ಪಾಲಿಗೆ ಮುಗಿದುಹೋಗಿದೆ. ಅತಿಲೋಕ ಸುಂದರಿ, ಚಾಂದನಿ ಎಂದೆಲ್ಲ ಆಕೆ ನಟಿಸಿದ್ದ ಚಿತ್ರಗಳ ಹೆಸರಿಂದಲೇ ಶ್ರೀದೇವಿ ಎಂಬ ಸೆಲೆಬ್ರಿಟಿಯ ಸಾವಿನ ಸುದ್ದಿಯನ್ನು ರಂಗುಗೊಳಿಸುವ ನಮ್ಮ ಲೋಕಕ್ಕೆ ಶ್ರೀದೇವಿಯೆಂಬ ಹೆಣ್ಣಿನ ಅಂತರಂಗದ ಲೋಕವನ್ನು ನೋಡುವ ಜರೂರು ಕಾಣಿಸುವುದಿಲ್ಲ; ಆ ವ್ಯವಧಾನವೂ ಅದಕ್ಕಿಲ್ಲ.

ಶ್ರೀದೇವಿ ಸಾವು ಸಹಜವೊ ಅಸಹಜವೊ ಎಂಬ ಗೊಂದಲ ಹಾಗೇ ಉಳಿದಿರುವುದರ ನಡುವೆಯೇ, ಅದಕ್ಕೆ ತೆರೆ ಎಳೆಯುವಂಥ ಷರಾ ಬಿದ್ದುಹೋದದ್ದೂ ಆಗಿದೆ. ದೊಡ್ಡ ಕುಟುಂಬವೊಂದರ ಹೆಣ್ಣು ಅಸಹಜ ಸಾವು ಕಂಡರೆ, ಅದಕ್ಕೆ ಆಕಸ್ಮಿಕ ಸಾವು ಎಂಬ ಮುದ್ರೆ ಬೀಳಲು ಬಹಳ ಹೊತ್ತು ಬೇಕಾಗುವುದಿಲ್ಲ. ಶ್ರೀದೇವಿ ವಿಚಾರದಲ್ಲೂ ಇಂಥ ಚಮತ್ಕಾರ ನಡೆದಿದೆಯಾ ಎಂಬ ಅನುಮಾನ ಎದ್ದಿರುವುದು ಹೌದಾದರೂ, ಅದಕ್ಕೆ ಈ ಮಾಯಾಲೋಕದಲ್ಲಿ ಹೆಚ್ಚಿನ ಜಾಗವೇನೂ ಇಲ್ಲ. ಎಲ್ಲವೂ ಮರೆತುಹೋಗುತ್ತದೆ ಇಲ್ಲಿ.

ಶ್ರೀದೇವಿ ಹೇಳಿಕೇಳಿ ಬಣ್ಣದ ಲೋಕದ ಚೆಲುವೆ. ಚಿತ್ರರಂಗದಲ್ಲಿ ಬಹು ಕಾಲ ವಿಜೃಂಭಿಸಿದ್ದ ತಾರೆಯೊಬ್ಬಳೊಳಗಿನ ಹೆಣ್ಣಿನ ತಲ್ಲಣಗಳೇನಿದ್ದವು ಎಂಬುದು ಎಷ್ಟು ನಿಗೂಢವೋ ಅಷ್ಟೇ ಗೌಣವೂ ಆಗಿಬಿಡುವುದು ವಿಪರ್ಯಾಸ. ಇನ್ನೂ ವಿಪರ್ಯಾಸವೆಂದರೆ, ಯಾವುದೇ ಹೆಣ್ಣು ತನ್ನ ನೋವುಗಳನ್ನು ತಾನೇ ಅದುಮಿಟ್ಟುಕೊಂಡು ನಗಬೇಕಾದ ವಿಲಕ್ಷಣ ಪಾತ್ರವನ್ನೇ ನಿರ್ವಹಿಸಬೇಕಾಗಿ ಬರುವುದು. ತನ್ನನ್ನು ಗಮನಿಸುವ ಹೊರಜಗತ್ತಿಗೆ ಸುಂದರವಾಗಿ ಕಾಣಿಸಬೇಕಾದ ಅಥವಾ ಸುಖವಾಗಿದ್ದೇನೆ ಎಂದು ತೋರಿಸಿಕೊಳ್ಳಬೇಕಾದ ಅಗತ್ಯದ ಸುಳಿಯಲ್ಲಿ ಗೊತ್ತಿದ್ದೂ ಸಿಲುಕಿಕೊಳ್ಳುವ ಹೆಣ್ಣು, ಆ ಸೂತ್ರದ ಬಂಧಿಯಾಗಿ ಬದುಕುವ ಪ್ರಮೇಯವೇ ಇರುತ್ತದೆ ಬಹಳ ಸಲ. ಅಂದರೆ ಆಕೆ ತನಗಾಗಿ, ತನ್ನೊಳಗಿನ ನಿಜಕ್ಕೆ ನಿಷ್ಠಳಾಗಿ ಬದುಕಲಾರದೆ, ಬರೀ ನಟಿಸುವ ದುರಂತವನ್ನೇ ಬಾಳುವ ಸ್ಥಿತಿ, ಸನ್ನಿವೇಶ. ಇಡೀ ಬದುಕೇ ನಟನೆಯಾಗುವ ಇಂಥ ಸ್ಥಿತಿ, ಸನ್ನಿವೇಶ ಅದೆಷ್ಟು ಹೆಣ್ಣುಗಳನ್ನು ನಲುಗಿಸಿದೆಯೊ, ನಲುಗಿಸುತ್ತಿದೆಯೊ.

ಹೆಣ್ಣೊಬ್ಬಳು ಬದುಕಿನುದ್ದಕ್ಕೂ ಅದೆಷ್ಟು ಭಾರ ಹೊತ್ತು ನಡೆಯಬೇಕು! ಹೊತ್ತು ಹೆತ್ತು ಹೊರೆವ ಹೆಣ್ಣು ವಿವಿಧ ಬಗೆಗಳಲ್ಲಿ ಮುಂದಿನ ಬದುಕನ್ನೆಲ್ಲ ಭಾರ ಹೊರುವುದರಲ್ಲೇ ಕಳೆದುಬಿಡುತ್ತಾಳೆ. ಈ ಸಮಾಜದ ಆಕ್ಷೇಪಗಳು, ವಕ್ರ ನೋಟ, ಹಸಿದ ಕಣ್ಣುಗಳು, ಟೀಕೆಗಳು, ಅವಮಾನಕ್ಕೀಡುಮಾಡುವ ಸಂದರ್ಭಗಳು ಇವೆಲ್ಲ ಭಾರದ ಬಳಿಕ ಸಾವಿನಲ್ಲೂ ಆಕೆಯನ್ನು ಅನೈತಿಕತೆಯ ಆರೋಪದ ಭಾರ ಹೊರಿಸಿ ಕುಗ್ಗಿಸುವ ಹಿಕಮತ್ತು ನಡೆದುಬಿಡುತ್ತದೆ. ಕಳಂಕವನ್ನು ಒಬ್ಬ ಹೆಣ್ಣಿಗೆ ಕಟ್ಟುವುದಕ್ಕಿಂತ ಸುಲಭ ಕೆಲಸ ಈ ಸಮಾಜಕ್ಕೆ ಇನ್ನಾವುದೂ ಇರಲಾರದು.

ಶ್ರೀದೇವಿ ಚೆಲುವು ಕಾಯ್ದುಕೊಳ್ಳಲು ಹಲವಾರು ಸರ್ಜರಿಗಳನ್ನು ಮಾಡಿಸಿಕೊಂಡು ನೋಡುವವರ ಕಣ್ತುಂಬುವಾಗ, ಚೆಲುವು ಆಸ್ವಾದಿಸುವ ಯಾರೂ, ಆ ಸರ್ಜರಿಗಳೆಲ್ಲ ತಂದೊಡ್ಡಬಹುದಾದ ಪರಿಣಾಮಗಳ ಬಗ್ಗೆ ಅಯ್ಯೋ ಎಂದು ಆತಂಕಗೊಂಡಿರಲಿಕ್ಕಿಲ್ಲ. ಆದರೆ ಈಗ ಆಕೆಯ ಸಾವಿನ ಎದುರಲ್ಲಿ ದೈಹಿಕ ಚೆಲುವಿನ ಬಗೆಗಿನ ಆಕೆಯ ಮೋಹವನ್ನು ದೂಷಿಸಲಾಗುತ್ತದೆ. ಹೆಣ್ಣೊಬ್ಬಳ ಮೇಲೆ ತಪ್ಪು ಹೊರಿಸುವುದಕ್ಕೆ ಎಂಥ ಹಸಿವು ಈ ಜಗತ್ತಿಗೆ!

ಯೌವನದಲ್ಲಿದ್ದ ಶ್ರೀದೇವಿಯನ್ನು ಅಷ್ಟೇ ಖ್ಯಾತಿಯ ಯೌವನದಲ್ಲಿದ್ದ ಮತ್ತು ಅದಾಗಲೇ ಮತ್ತೊಬ್ಬಳ ಗಂಡನೂ ಆಗಿದ್ದ ನಟನೊಬ್ಬ ಗುಟ್ಟಾಗಿ ಮದುವೆಯಾಗಿದ್ದ ಅಂತಲೂ ಹೇಳುತ್ತಾರೆ. ಆದರೆ ಗುಟ್ಟು ಗುಲ್ಲಾಗಿ, ಪತ್ನಿಯವರೆಗೂ ವಿಚಾರ ಮುಟ್ಟುತ್ತಿದ್ದಂತೆ ಈ ಗುಟ್ಟಿನ ಮದುವೆಯನ್ನು ಮರೆತು ಪತ್ನಿಯ ಬಳಿಗೇ ಹೋಗಿಬಿಡುತ್ತಾನೆ. ಇದು ನಿಜವೇ ಆಗಿದ್ದಲ್ಲಿ, ಇಲ್ಲಿ ಒಬ್ಬ ಹೆಣ್ಣಿನ ಪಾಲಿಗೆ ಅನ್ಯಾಯವಾಗಲಿಲ್ಲ ಎಂಬುದರ ಮಗ್ಗುಲಲ್ಲೇ ಮತ್ತೊಬ್ಬಳು ಅನ್ಯಾಯ ನುಂಗಿಕೊಂಡು ಸುಮ್ಮನಾಗುವಂತಾದುದರ ಬಗ್ಗೆ ಏನೆನ್ನುವುದು? ತಪ್ಪಿನಲ್ಲಿ ಗಂಡು ಹೆಣ್ಣು ಇಬ್ಬರದೂ ಪಾಲಿದ್ದರೂ ತಪ್ಪಿನ ಕಹಿಫಲ ಉಣ್ಣುವುದು ಹೆಣ್ಣು ಮಾತ್ರ.

ಆದರೆ ಅದೇ ಹೆಣ್ಣು ಮನೆಮುರುಕಿ ಎಂಬ ದೂಷಣೆಗೂ ತುತ್ತಾಗುವಂತಾಗುವಂತಾದದ್ದು ಶ್ರೀದೇವಿ ಪಾಲಿಗೆ ಎರಗಿದ್ದ ಆಘಾತ. ರಾಮ್ ಗೋಪಾಲ್ ವರ್ಮಾ ಫೇಸ್ಬುಕ್ಕಿನಲ್ಲಿ ಬರೆದ ‘My love letter to Sridevi’s fans’ ಉಲ್ಲೇಖದಂತೆ, ತಂದೆಯ ದಿಢೀರ್ ಸಾವು, ತಾಯಿ ಒಂದರ ಬೆನ್ನಿಗೊಂದರಂತೆ ತೆಗೆದುಕೊಂಡ ತಪ್ಪು ತೀರ್ಮಾನಗಳು, ಬದುಕಿನಲ್ಲಿ ಬೋನಿ ಕಪೂರ್ ಪ್ರವೇಶ, ಆತ ಮಾಡಿಕೊಂಡ ಸಾಲಕ್ಕೆ ಹೆಗಲು ಕೊಡಬೇಕಾದ ಸಂದರ್ಭ, ಅಭಿಮಾನಿಗಳೆಲ್ಲರ ಪಾಲಿನ ರಾಣಿಯಂತಿದ್ದವಳು ನಿಜಬದುಕಿನಲ್ಲಿ ಅಕ್ಷರಶಃ ಬರಿಗೈಯಾದದ್ದು ಇವೆಲ್ಲವೂ ಶ್ರೀದೇವಿಯ ನಗುವನ್ನು ಕಸಿದುಬಿಟ್ಟಿದ್ದವು. ಅಷ್ಟು ಎತ್ತರಕ್ಕೇರಿದ್ದ ಹೆಣ್ಣು ಒಬ್ಬ ಸೊಸೆಯಾಗಿ ಅತ್ತೆಯಿಂದ ಸಾರ್ವಜನಿಕವಾಗಿ ಒದೆಸಿಕೊಳ್ಳಬೇಕಾಯಿತೆಂದರೆ, ಇನ್ನೇನು ನಗು? ದಾರುಣವೆಂದರೆ, ನೋವನ್ನೆಲ್ಲ ಅದುಮಿಡುವುದಕ್ಕಾಗಿ ಲೇಪಿಸಿಕೊಳ್ಳುವ ಕೃತಕ ನಗೆ ಕೂಡ ಶಾಶ್ವತವಾಗಿ ಬಂಧಿಯಾಗಿಬಿಡುತ್ತದಲ್ಲ, ಹಾರದ ಹಂಗಿನಲ್ಲಿ ಉಳಿವ ಸ್ಥಿರಚಿತ್ರದಲ್ಲಿ!

ತನ್ನ ಶವವನ್ನು ಸುಂದರವಾಗಿ ಅಲಂಕರಿಸುವಂತೆ, ರೇಶಿಮೆ ಸೀರೆ ಉಡಿಸುವಂತೆ ಆಕೆ ಆಸೆ ಹೇಳಿಕೊಂಡಿದ್ದರಾ ಅಥವಾ ಅದು ಹುಟ್ಟಿಕೊಂಡ ಕಥೆಯಾ? ಅದೇನೇ ಇರಲಿ, ಆದರೆ ಹೆಣ್ಣೊಬ್ಬಳ ಕೊನೆಯಾಸೆ ಎಂಬ ನೆಪದಲ್ಲಿ ಬಣ್ಣವೇರುವುದು, ಬದುಕಿದ್ದಾಗ ಅವಳನ್ನು ಸುತ್ತುವರಿದು ಕೊಂದ ವ್ಯೂಹದ ರಹಸ್ಯ ಅಹಂಕಾರವೇ ಆಗಿರುತ್ತದೆ ಎಂಬುದು ಮಾತ್ರ ಘೋರ ಸತ್ಯ.

ಮತ್ತು ಇಂಥ ಘೋರ ಸತ್ಯಗಳನ್ನು ಅಡಗಿಸಿಡಲೆಂದೇ ಹೆಣ್ಣನ್ನು ನಿಗೂಢ ಎಂದು ಶಾಸ್ತ್ರ ಬರೆದಿಡಲಾಗಿದೆ.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...