Share

ಸಿರಿಯಾ: ಹೂಮೊಗ್ಗುಗಳ ಆಕ್ರಂದನ
ಉಷಾ ಕಟ್ಟೆಮನೆ ಕಾಲಂ

 

 

 

 

ಈ ಯುದ್ಧ ಮುಗ್ಧ ಮಕ್ಕಳನ್ನು ಸೇರಿದಂತೆ ನಿರಪರಾಧಿ ಸಿರಿಯನ್ ನಾಗರಿಕರನ್ನು ಪೈಶಾಚಿಕ ರೀತಿಯಲ್ಲಿ ನುಂಗಿ ನೊಣೆಯುತ್ತಿರುವುದು ಕಣ್ಣಿಗೆ ರಾಚುತ್ತಿದೆ.

 

ಸೋಷಿಯಲ್ ಮೀಡಿಯಾಗಳ ಪುಟಗಳನ್ನು ಸ್ಕ್ರೋಲ್ ಮಾಡುವಾಗ ಸತ್ತು ಮಲಗಿರುವ ಸಿರಿಯನ್ ಕೂಸುಗಳ ಕಂಡಾಗ ಎದೆ ನಡುಗುತ್ತದೆ. ಆಗ ತಾನೇ ಹುಟ್ಟಿದ ಮಕ್ಕಳನ್ನು ಜೋಪಾನವಾಗಿ ಬಿಳಿಯ ಬಟ್ಟೆಯಲ್ಲಿ ಸುತ್ತಿ ಲೇಬರ್ ವಾರ್ಡಿನ ತೊಟ್ಟಿಲ್ಲಲ್ಲಿ ಮಲ್ಲಗೆ ಮಲಗಿಸಿದ ಹಾಗಿವೆ, ಆದರೆ ಅವುಗಳಲ್ಲಿ ಉಸಿರಾಟವಿಲ್ಲ. ತಣ್ಣಗೆ ಕೊರಡಾಗಿ ಬಿದ್ದುಕೊಂಡಿವೆ.

ಇನ್ನೂ ಲೋಕವನ್ನು ಕಣ್ಬಿಟ್ಟು ನೋಡದ ಆ ಕಂದಮ್ಮಗಳು ಮಾಡಿದ ತಪ್ಪಾದರೂ ಏನು? ದೇಶಕ್ಕೆ ದೇಶವೇ ಯುದ್ಧಭೂಮಿಯಾಗಿರುವ ಸಿರಿಯಾ ಎನ್ನುವ ಅರಬ್ ರಾಷ್ಟ್ರವೀಗ ಮೃತ್ಯುತೊಟ್ಟಿಲಾಗಿದೆ.

ನಿಮಗೆಲ್ಲಾ ನೆನಪಿರಬಹುದು. ೨೦೧೫ರಲ್ಲಿ ನೀಲಿ ಚಡ್ಡಿ ಕೆಂಪು ಅಂಗಿ ತೊಟ್ಟ ಪುಟ್ಟ ಬಾಲಕ ಟರ್ಕಿಯ ಭೊರ್ಡಂ ಬೀಚಿನಲ್ಲಿ ಸತ್ತುಬಿದ್ದಿದ್ದ. ಸಿರಿಯಾದಿಂದ ಓಡಿಬಂದ ನಿರಾಶ್ರಿತ ಕುಟುಂಬವೊಂದರ ಮೂರು ವರ್ಷದ ಮಗು ಅದು. ಅದರ ಹೆಸರು ಅಯ್ಲಾನ್ ಕುರ್ಡಿ. ಇಡೀ ವಿಶ್ವವೇ ಆ ಮಗುವಿಗಾಗಿ ಮರುಗಿತ್ತು. ಚಿಲಿಯ ಸುಪ್ರಸಿದ್ಧ ಕಲಾಕಾರನೂ ಕವಿಯೂ ಆಗಿರುವ ರವುಲ್ ಝುರಿಟಾ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ, ಲೋಕ ಗುರುತಿಸದ ಆಯ್ಲಾನ್ ಕುರ್ಡಿಯ ತಮ್ಮ ಗಾಲಿಪ್ ಕುಡಿ ಮತ್ತು ಅವರಮ್ಮನ ಶವವನ್ನು ಕಂಡರು. ಅದಕ್ಕವರು ಪ್ರತಿಸ್ಪಂದಿಸಿದ ಕವನವೇ ‘Sea Of Pain’. ಆ ಕವನವನ್ನು ಸ್ವತಃ ರವುಲ್ ಝುರಿಟಾ ಅವರೇ ಕಳೆದ ಬಾರಿ ಕೇರಳದ ಕೊಚ್ಚಿಯಲ್ಲಿ ನಡೆದ ‘ಕೊಚ್ಚಿ ಬಿಯನಾಲೆ’ಯಲ್ಲಿ ದೃಶ್ಯೀಕರಿಸಿದ್ದರು. ನಾನು ಅದನ್ನು ನೋಡಿದ್ದೆ. ಮನಸ್ಸು ತಲ್ಲಣಗೊಂಡಿತ್ತು, ಮನೆಗೆ ಬಂದವಳೇ ‘ನೋವಿನ ಸಮುದ್ರ’ ಎಂಬ ಕಥೆಯನ್ನು ಬರೆದೆ. ಅನಂತರದಲ್ಲಿ ಅದನ್ನು ‘ನಿರುಪಮಾ ಪ್ರಶಸ್ತಿ’ಗಾಗಿ ಕಳುಹಿಸಿದೆ. ಅಲ್ಲಿ ಅದು ಪ್ರಥಮ ಪ್ರಶಸ್ತಿಯನ್ನು ಪಡೆದುಕೊಂಡಿತು. ದೇಶವೊಂದರ ಅಂತರ್ಯುದ್ದ ವಿಶ್ವದ ಸಂವೇದನಾಶೀಲ ಮನಸುಗಳ ಖಾಸಗಿ ನೋವಾಗಿ ಮತ್ತೆ ಅದು ಕಲಾರೂಪದಲ್ಲಿ ಅಭಿವ್ಯಕ್ತಿಗೊಳ್ಳುವುದೆಂದರೆ ಇದುವೇ ಇರಬೇಕು. ಒಂದು ಘಟನೆ ಕಾಲಾಂತರದಲ್ಲಿ ಸಾರ್ವತ್ರಿಕಗೊಳ್ಳುವ ಪರಿಯಿದು.

ಸಿರಿಯಾದಲ್ಲಿ ಕಳೆದ ಐದಾರು ವರ್ಷಗಳಿಂದ ಅಂತಃಕಲಹ ನಡೆಯುತ್ತಿರುವುದು ಜಗತ್ತಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಆಸಕ್ತಿಯಿರುವವರಿಗೆ ಗೊತ್ತಿರುವ ಸಂಗತಿಯೇ. ಆದರೆ ಕಳೆದ ಒಂದು ವಾರದಿಂದ ಅಲ್ಲಿ ನಡೆಯುತ್ತಿರುವ ಹಸುಗೂಸುಗಳ ಮಾರಣ ಹೋಮ ಜಗತ್ತಿನಾದ್ಯಂತ ಜನಸಾಮಾನ್ಯರನ್ನು ಕೂಡಾ ಕಂಗೆಡಿಸುವಂತೆ ಮಾಡಿದೆ. ಮಾನವೀಯತೆ ವಿನಾಶದ ಅಂಚನ್ನು ತಲುಪಿದೆ ಎಂಬುದು ಎಲ್ಲರಿಗೂ ಗೊತ್ತಾಗುತ್ತಲಿದೆ. ಆದರೆ ಏನು ಮಾಡಬೇಕೆಂದು ಯಾರಿಗೂ ಗೊತ್ತಾಗುತ್ತಿಲ್ಲ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಬೇಕಾದ ವಿಶ್ವಸಂಸ್ಥೆ ಕೂಡಾ ತನ್ನ ಪ್ರಯತ್ನದಲ್ಲಿ ಯಶಸ್ಸನ್ನು ಕಾಣುತ್ತಿಲ್ಲ.

ಸಿರಿಯಾ ಬಿಕ್ಕಟ್ಟು ಅತ್ಯಂತ ಸಂಕೀರ್ಣವಾದುದು. ಅದನ್ನು ಸುಲಭದಲ್ಲಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಅದಕ್ಕೆ ಹಲವು ಆಯಾಮಗಳಿವೆ. ಧರ್ಮ ಮತ್ತು ರಾಜಕೀಯದ ಜೊತೆಗೆ ಆರ್ಥಿಕ ಅವಕಾಶವಾದ ಮೇಳೈಸಿದರೆ ಏನೆಲ್ಲಾ ಪಾಶವೀ ಕೃತ್ಯ ಸಂಭವಿಸಬಹುದೋ ಅದೆಲ್ಲವೂ ಈಗ ಸಿರಿಯಾದಲ್ಲಿ ನಡೆಯುತ್ತಿದೆ.

ಸಿರಿಯಾ ಒಂದು ಪುಟ್ಟ ಅರಬ್ ರಾಷ್ಟ್ರ. ಟರ್ಕಿ, ಇರಾಕ್ ಜೋರ್ಡಾನ್, ಇಸ್ರೇಲ್ ಮತ್ತು ಲೆಬನಾನ್ ಅದರ ಗಡಿ ದೇಶಗಳು. ೧೯೪೬ರಲ್ಲಿ ಫ್ರಾನ್ಸಿನಿಂದ ಸ್ವಾತಂತ್ರ್ಯ ಪಡೆದ ಸಿರಿಯಾ ಇದುವರೆಗೂ ಕಂಡಿದ್ದು ಸರ್ವಾಧಿಕಾರಿಯ ಆಳ್ವಿಕೆಯನ್ನೇ. ಈಗ ಅಲ್ಲಿಯ ಅಧ್ಯಕ್ಷರಾಗಿರುವವರು ಬಶರ್ ಅಲ್ ಅಸಾದ್.

ಈಗ ಸಿರಿಯಾದಲ್ಲಿ ನಡೆಯುತ್ತಿರುವ ಸಿವಿಲ್ ವಾರ್ ಆರಂಭವಾಗಿದ್ದು ತುಂಬಾ ಸಣ್ಣ ಘಟನೆಯಿಂದ. ಮಧ್ಯಪ್ರಾಚ್ಯ ಮತ್ತು ಉತ್ತರ ಆಪ್ರಿಕಾದ ಕೆಲವು ದೇಶಗಳಲ್ಲಾದ ಪ್ರಜಾಪ್ರಭುತ್ವದ ಹೋರಾಟಗಳು ಸಿರಿಯಾದಲ್ಲಿಯೂ ಸರ್ವಾಧಿಕಾರಿ ಪ್ರಭುತ್ವವನ್ನು ಪ್ರಶ್ನಿಸುವಂತೆ ಮಾಡಿದವು. ೨೦೧೧ರಲ್ಲಿ ಕೆಲವು ಹುಡುಗರು ತಮ್ಮ ಶಾಲಾ ಗೋಡೆಯಲ್ಲಿ ಸರಕಾರದ ವಿರುದ್ಧ ಘೋಷಣೆಗಳನ್ನು ಬರೆದರು. ಅಧ್ಯಕ್ಷ ಬಶರ್ ಅಲ್ ಬಸಾರ್ ಸರಕಾರ ಆ ಹುಡುಗರ ಜೊತೆ ಕ್ರೂರವಾಗಿ ವರ್ತಿಸಿತು. ಅವರಲ್ಲಿ ಕೆಲವರು ಸತ್ತರು. ಇದನ್ನು ನಾಗರಿಕರು ಪ್ರಸ್ನಿಸಿದರು. ಆ ಒಂದು ಘಟನೆಯೇ ಮುಂದೆ ಆಳುವ ಸರಕಾರ ಮತ್ತು ಕ್ರಾಂತಿಕಾರಿಗಳೆಂಬ ಗುಂಪಿನ ನಡುವೆ ಸಂಘರ್ಷಕ್ಕೆ ಕಾರಣವಾಯ್ತು. ಕ್ರಾಂತಿಕಾರಿಗಳಿಗೆ ಬದಲಾವಣಿಯನ್ನು ಬಯಸುವ ಪ್ರಜಾಪ್ರಭುತ್ವವಾದಿಗಳು, ಮಾನವಹಕ್ಕುಗಳ ಸ್ವಯಂಸೇವಕರು ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲಕ್ಕೆ ನಿಂತವು. ಸರಕಾರ ಇವರೆಲ್ಲರೊಡನೆ ಕಟಿಣ್ವಾಗಿ ವರ್ತಿಸಿತು. ಅನೇಕ ಹತ್ಯೆಗಳಾದವು. ೨೦೧೫ರಲ್ಲಿ ರಷ್ಯ ಸಿರಿಯಾದ ಸಹಾಯಕ್ಕೆ ಬಂತು. ಅಮೇರಿಕಾ ಬಂಡುಕೋರರ ಪರ ನಿಂತಿತು. ಇಬ್ಬರೂ ದೊಡ್ಡಣ್ಣಂದಿರು ತಂತಮ್ಮ ಬಣಗಳಿಗೆ ಸೈನಿಕ ತರಬೇತಿ ಮತ್ತು ಶಸ್ತ್ರಾಸ್ತ್ರ ಪೂರೈಸತೊಡಗಿದವು. ಎರಡೂ ಬಣಗಳಲ್ಲಿ ವಿವಿಧ ದೇಶಗಳು, ಸಂಘಟನೆಗಳು ಜಮೆಗೊಳ್ಳುತ್ತಾ ಹೋಗಿ ಶೆಲ್ ದಾಳಿ, ಕೆಮಿಕಲ್ ವಾರ್ ತನಕ ಮುಂದುವರಿದಿದೆ. ಈ ಬಣಗಳ ಒಂದುಗೂಡುವಿಕೆಗೆ ಧರ್ಮವೂ ಮುಖ್ಯ ಪಾತ್ರ ವಹಿಸಿದೆ.

ಸಿರಿಯಾದ ಅಧ್ಯಕ್ಷ ಬಶರ್ ಅಲ್ ಅಸಾದ್ ಒಬ್ಬ ಶಿಯಾ ಮುಸ್ಲಿಂ. ಶಿಯಾ ಮುಸ್ಲಿಂ ಪಂಗಡವರು ಅಲ್ಲಿ ಅಲ್ಪಸಂಖ್ಯಾತರು. ಬಹುಸಂಖ್ಯಾತರು ಸುನ್ನಿ ಪಂಗಡಕ್ಕೆ ಸೇರಿದವರು. ತಮ್ಮನ್ನು ಅಲ್ಪಸಂಖ್ಯಾತನೊಬ್ಬ ಆಳುವುದನ್ನು ಸಹಿಸಿಕೊಳ್ಳದ ಸುನ್ನಿ ಮುಸ್ಲಿಮರು ಅಧ್ಯಕ್ಷ ಬಶರ್ ಅಲ್ ಅಸಾದ್ ವಿರುದ್ಧ ಒಳಗೊಳಗೇ ಕುದಿಯುತ್ತಿದ್ದರು. ಬಶರ್ ಗೆ ಶಿಯಾ ಪ್ರಾಬಲ್ಯದ ಇರಾನ್ ಮತ್ತು ಲೆಬನಾನ್ ಬೆಂಬಲ ನೀಡುತ್ತಿವೆ. ಸುನ್ನಿ ಪ್ರಾಬಲ್ಯದ ಸೌದಿ ಅರೇಬಿಯಾ ಬಂಡುಕೋರರ ಬೆಂಬಲಕ್ಕೆ ನಿಂತಿದೆ. ಆದರೂ ಅಲ್ಲಿ ಸುನ್ನಿಗಳ ಮಾರಣ ಹೋಮ ನಡೆಯುತ್ತಿದೆ. ಇದುವರೆಗೆ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚಿನ ಜನರು ಹತರಾಗಿದ್ದಾರೆ. ಅರುವತ್ತು ಲಕ್ಷಕ್ಕೂ ಹೆಚ್ಚಿನ ಜನರು ಮನೆಮಾರು ಕಳೆದುಕೊಂಡು ಅತಂತ್ರರಾಗಿದ್ದಾರೆ. ಐವತ್ತು ಲಕ್ಷಕ್ಕೂ ಹೆಚ್ಚಿನ ಜನ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಹಾಗೆ ಹೋದ ಸಾವಿರಾರು ಜನರು ಅಯ್ಲಾನ್ ಕುರ್ಡಿ ಪರಿವಾರದಂತೆ ಮೆಡಿಟೇರಿಯನ್ ಸಮುದ್ರದ ಪಾಲಾಗಿದ್ದಾರೆ. ಬದುಕುಳಿದವರು ಲೆಬನಾನ್. ಟರ್ಕಿ,ಜೋರ್ಡಾನ್ ದೇಶಗಳ ನಿರಾಶ್ರಿತರ ಶಿಬಿರಗಳಲ್ಲಿ ದಿನ ದೂಡುತ್ತಿದ್ದಾರೆ.

ಸಿರಿಯಾ ಅಂತರ್ಯುದ್ಧಕ್ಕೆ ಇವು ಕಾರಣಗಳಿರಬಹುದೆನೋ ಎಂದು ನನಗೆ ಅರ್ಥವಾದಷ್ಟು ಬರೆದೆ. ಆದರೆ ನಿಜವಾದ ಕಾರಣಗಳೇನಿರಬಹುದು ಎಂಬುದು ನನ್ನನ್ನೂ ಸೇರಿದಂತೆ ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತಿದ್ದಂತಿಲ್ಲ. ಇದು ಯುದ್ದ ನಿಲ್ಲಲಿ ಶಾಂತಿ ನೆಲೆಸಲಿ ಎಂದು ಹ್ಯಾಶ್ ಟ್ಯಾಗ್ ಹಾಕಿದಷ್ಟು ಸರಳವಲ್ಲ. ಈ ಯುದ್ಧ ಮುಗ್ಧ ಮಕ್ಕಳನ್ನು ಸೇರಿದಂತೆ ನಿರಪರಾಧಿ ಸಿರಿಯನ್ ನಾಗರಿಕರನ್ನು ಪೈಶಾಚಿಕ ರೀತಿಯಲ್ಲಿ ನುಂಗಿ ನೊಣೆಯುತ್ತಿರುವುದು ಕಣ್ಣಿಗೆ ರಾಚುತ್ತಿದೆ. ಸಂವೇದನಾಶೀಲ ಮನಸುಗಳ ನಿದ್ದೆಯನ್ನು ಕೆಲ ದಿನಗಳ ಮಟ್ಟಿಗಾದರೂ ಕಸಿದುಕೊಂಡದ್ದು ಸತ್ಯ.

ಇದನ್ನು ಹೇಗೆ ನಿಲ್ಲಿಸುವುದು? ಇದು ಮನುಷ್ಯತ್ವದಲ್ಲಿ ನಂಬಿಕೆಯಿರುವ ಎಲ್ಲರೂ ಕೇಳಿಕೊಳ್ಳುತ್ತಿರುವ ಪ್ರಶ್ನೆ.

ಉಷಾ ಕಟ್ಟೆಮನೆ

ಪತ್ರಕರ್ತೆಯಾಗಿ, ಅದಕ್ಕೂ ಮೊದಲು ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡಿದವರು. ದೃಶ್ಯ ಮಾಧ್ಯಮಕ್ಕಾಗಿಯೂ ಕೆಲಸ ಮಾಡಿದ ಅನುಭವ. ಆದರೆ ಅವರು ಪರಿಚಿತರಾಗಿರುವುದು ತಮ್ಮ ವಿಶಿಷ್ಟ ಸಂವೇದನೆಯ ಬರವಣಿಗೆಯಿಂದಾಗಿ. ಕೆಲ ವರ್ಷಗಳಿಂದ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶ ಸುತ್ತುವುದೆಂದರೆ ಇವರಿಗೆ ಅತ್ಯಂತ ಇಷ್ಟ. ‘ಪಾರಿಜಾತದ ಬಿಕ್ಕಳಿಕೆ’ ಅವರ ಪ್ರಕಟಿತ ಕೃತಿ.

Share

One Comment For "ಸಿರಿಯಾ: ಹೂಮೊಗ್ಗುಗಳ ಆಕ್ರಂದನ
ಉಷಾ ಕಟ್ಟೆಮನೆ ಕಾಲಂ
"

 1. Rajesh
  2nd March 2018

  ಉತ್ತಮ‌ ಮಾಹಿತಿ ನೀಡಿದ್ದಕ್ಕೆ, ಅದ್ಭುತ ಬರಹ.. ಆದ್ರೆ ಜನಸಾಮಾನ್ಯರಿಗೆ ಈ ಸುದ್ದಿ ತಟ್ಟಿಲ್ಲ ಅನ್ಸುತ್ತೆ.. ಭಾರತದ ಯಾವ ಮಾಧ್ಯಮವೂ ಈ ಸುದ್ದಿಯನ್ನ ಭಿತ್ತರಿಸಿಲ್ಲ. ಶ್ರೀದೇವಿ‌, ನಲಪಾಡ್ , ಕಾರ್ತಿ ವಿಚಾರಗಳಿಗೆ ತಮ್ಮ ಗಮನ ಕೇಂದ್ರಿಕರಿಸಿದ್ದವು ಅನ್ನಿಸ್ತಿದೆ

  Reply

Leave a comment

Your email address will not be published. Required fields are marked *

Recent Posts More

 • 10 hours ago No comment

  ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…

    ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ | ಬಿ ಲಕ್ಷ್ಮಣ್     ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ...

 • 2 days ago No comment

  ಮತ್ತೆ ಮತ್ತೆ…

        ಕವಿಸಾಲು     ನೆನಪಿನಾಗಸದಲಿ ನಗೆಚುಕ್ಕಿ ಎಣಿಸುವಾಸೆಗೆ ಕಣ್ಣಬೆಳಕು ಹಾಸಿದವ ಬಿತ್ತಿದ್ದು ಹೂವಾಗಿ ಬಾಡುವುದರೊಳಗೆ ಉದುರುವಡಿ ಬೊಗಸೆಯಾದವ ನೀರಿನಲೆ ಉಂಗುರದೊಳಗಿಂದ ಬರುತಾನೆ ಮತ್ತೆಮತ್ತೆ ಶಿಶಿರನೊಡನೆ ವಸಂತನೊಡನೆ ಜಗದ ಯಾವ ಕತ್ತಲೂ ತಲುಪದ ಮೂಲೆಗೆ ಬೆಳಕ ಬಳಿದಿಟ್ಟವ ಕಣ್ಣ ರೆಕ್ಕೆಗೆ ನಸುಕಿಗೂ ಮುಂಚೆ ಬಣ್ಣ ಹಚ್ಚಿದವ ಮೂಡಣದ ಚಿಲಿಪಿಲಿ, ಪಡುವಣದ ಉನ್ಮತ್ತ ಕೆಂಪು, ಗಲಗಲ ಹಗಲಿನಂಥವ ಮರೆಸಬರುತಾವೆ ಒಂದಷ್ಟು ನೆಪ ಬಿರುಮಾತು ಒಣಜಗಳ ಜಗ್ಗಿ ಎಳೆದಾಡುವಂತರ ...

 • 2 days ago No comment

  ದಂಡೆಯ ಕೈಯಲಿ ಚಂದ್ರನಿಟ್ಟು ಬರೋಣ

        ಕವಿಸಾಲು     ಎಲೆ ಉದುರುವ ಕಾಲ ಚಳಿಯ ದಾಟಿ ಬಿಸಿಲಿಗೆ ಮೈ ಒಡ್ಡುವ ಸಮಯ ಮರಗಳು ಸಹ ಎಲೆ ಉದುರಿಸಿ ಬೆತ್ತಲಾಗಿವೆ ಗೆಳತಿ ಇದು ವಿರಹ ಕಾಲ ಎಲ್ಲ ಮರಗಳು ಎಲೆಯುದುರಿಸಿ ಬೆತ್ತಲಾಗಿರಲು ಮಾವು ಮಾತ್ರ ಮೈತುಂಬಿಕೊಂಡಿದೆ ಹರೆಯ ಮಾಸಿದವರ ಹಾಗೂ ತುಂಟ ಹುಡುಗಿಯರ ಮಧ್ಯೆ ಬಸಿರಾದವಳಂತೆ ಚಳಿಗಾಲದಿ ಮದುವೆಯಾಗಿ ಅಪ್ಪಿ ಮುದ್ದಾಡಿ ಮೈಥುನಕೆ ಮನಸೋತು, ಹತ್ತಾರು ಆಟಗಳಿಗೆ ತೆರೆದುಕೊಂಡು, ಮುಟ್ಟುನಿಂತು ಬಯಕೆ ...

 • 4 days ago No comment

  ವೆಜ್ಜಾ? ನಾನ್-ವೆಜ್ಜಾ?

        ಸುಮಾರು ಒಂದು ತಿಂಗಳಿನಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದೇನೆ. ಆದರೆ ಇನ್ನೂ ಮನೆ ಸಿಕ್ಕಿಲ್ಲ. ಸಿಗದೆ ಇರುವುದಕ್ಕೆ, ನನಗನ್ನಿಸಿದಂತೆ ಮೂರು ಕಾರಣಗಳು. ಮೊದಲನೆಯದ್ದು ನಮ್ಮನೆಯಲ್ಲಿ ಒಂದು ನಾಯಿಯಿದೆ. ನಾಯಿ ಮಾಲೀಕರಿಗೆ ಮನೆ ಮಾಲಿಕರು ಮನೆ ಕೊಡುವುದಿಲ್ಲ. ನಮಗೆ ಮನೆಯೊಡೆಯನಿಗಿಂತಲೂ ನಮ್ಮ ಮನೆ ನಾಯಿಯೇ ಹೆಚ್ಚು; ಒಂದು ಭಾವನಾತ್ಮಕ ಸನ್ನಿವೇಶದಲ್ಲಿ ನನ್ನ ಗಂಡ, ‘ನಿಮಗ್ಯಾರಿಗೂ ನನ್ನ ಆಸ್ತಿಯಲ್ಲಿ ಬಿಡಿಗಾಸನ್ನೂ ಕೊಡುವುದಿಲ್ಲ. ಎಲ್ಲವನ್ನೂ ಚುಕ್ಕಿ ಹೆಸರಿಗೆ ಬರೆದಿಟ್ಟು ಸತ್ತು ...

 • 4 days ago One Comment

  ಅವರ ಕೆಲಸವಾದರೆ ಆಯಿತು!

                हमको जो ताने देते है हम खोये हैं इन रंगरलियों में हमने उनको भी छुप छुप के आते देखा इन गलियों में ये सच है झूठी बात नहीं तुम बोलो ये सच है ना ನಿಜ ತಾನೇ ಇದು, ಯಾವುದು? ಅದೇ… ಆಚಾರ ಹೇಳೋದು ಬದನೆಕಾಯಿ ...


Editor's Wall

 • 20 March 2018
  10 hours ago No comment

  ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…

    ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ | ಬಿ ಲಕ್ಷ್ಮಣ್     ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ...

 • 16 March 2018
  4 days ago No comment

  ಹೇಗೆಲ್ಲ ಎಡವಿ ಬಿದ್ದಾಳೆಂದು…

        ಲೀಲಾಧರ ಮಂಡಲೋಯಿ ಕಾವ್ಯ       ಲೀಲಾಧರ ಮಂಡಲೋಯಿ, ಹಿಂದಿಯ ಪ್ರಸಿದ್ಧ ಕವಿ. ಕಾವ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ಹಲವಾರು ರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾದವರು. ಸಣ್ಣಕಥೆಗಳನ್ನಾಧರಿಸಿದ 300ಕ್ಕೂ ಅಧಿಕ ಟೆಲಿಫಿಲಂಗಳನ್ನೂ ನಿರ್ಮಿಸಿದ್ದಾರೆ. ಬದುಕನ್ನು ಕುರಿತ ಆಳದ ಗ್ರಹಿಕೆಗಳನ್ನು ಕಂಡಿರಿಸುವ ಅವರ ಕಾವ್ಯ, ಹೇಗೆ ಹಣ ನಮ್ಮ ಸಂದರ್ಭವನ್ನು ತೀರ್ಮಾನಿಸುವ ಬಲವಾಗುತ್ತಿದೆ ಮತ್ತು ಮೌಲ್ಯಗಳನ್ನು ಮೆಟ್ಟಿ ಅಪಮೌಲ್ಯವೆಂಬುದು ಮುನ್ನೆಲೆಗೆ ಬಂದು ...

 • 16 March 2018
  5 days ago No comment

  ನಾ ಹಾಸಿಗೆ ಹಿಡಿದಾಗ

      ಗಝಲ್         | ನೀನೊಮ್ಮೆ ಬಂದಿದ್ದರೆ ತೊಳೆಯುತ್ತಿದ್ದೆ ನಿನ್ನ ಪಾದಗಳನು…   ತುಸುತುಸುವೇ ಮುಕ್ಕಾಗುತ್ತೇನೆ ನಾ ಹಾಸಿಗೆ ಹಿಡಿದಾಗ ಇನಿಸಿನಿಸೇ ಮನುಷ್ಯಳಾಗುತ್ತೇನೆ ನಾ ಹಾಸಿಗೆ ಹಿಡಿದಾಗ ಎಷ್ಟು ಹಾರಿದ್ದೆ ಮೇಲೆ, ಏರಿಯೇ ಏರಿದ್ದೆ ಮೇರೆ ಮೀರಿ ಬರಿದೆ ತರಗೆಲೆಯಾಗಿ ಉಳಿದಿದ್ದೇನೆ ನಾ ಹಾಸಿಗೆ ಹಿಡಿದಾಗ ಬರಿಗಣ್ಣಲ್ಲೇ ನೋಡುತ್ತಿದ್ದೆ ಮುಪ್ಪೆರಗಿ ಕನ್ನಡಕದಲೂ ಕಂಡಿದ್ದೆ ನಿಚ್ಚಳವಾಗಿ ಕಾಣತೊಡಗಿದ್ದು ಮಾತ್ರ ನಾ ಹಾಸಿಗೆ ಹಿಡಿದಾಗ ಓಡುತ್ತಿತ್ತು ...

 • 15 March 2018
  5 days ago No comment

  ನಿಕಷಕ್ಕೆ ಒಡ್ಡದೇ ನಂಬಿಬಿಡಬಹುದೇ ಎಲ್ಲವನೂ?

                      ನಮ್ಮಲ್ಲಿನ ಧಾರ್ಮಿಕ ಆಚರಣೆಗಳನ್ನು ನಂಬಿಕೆಯಂದಾದರೂ ಕರೆಯಿರಿ, ಮೌಢ್ಯವೆಂದಾದರೂ ಕರೆಯಿರಿ ಪ್ರಶ್ನಿಸುವ ಮನೋಭಾವವೇ ನಮ್ಮಲ್ಲಿ ಕ್ಷೀಣಿಸಿ ಅಥವಾ ಸತ್ತು ಹೋದಂತೆ ಈ ದಿನಗಳಲ್ಲಿ ಭಾಸವಾಗುತ್ತಿದೆ. ಎಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲವೋ ಅಲ್ಲಿ ವೈಜ್ಞಾನಿಕ ಮನೋಭಾವವೂ ಉದಯಿಸಲು ಸಾಧ್ಯವಿಲ್ಲ. ಕೊನೆಯದಾಗಿ ಮಾನವೀಯವಾಗಿ ನಡೆದುಕೊಳ್ಳುವುದೂ ಸಾಧ್ಯವಾಗುವುದಿಲ್ಲ.   ಬುದ್ಧಿವಂತರ ಜಿಲ್ಲೆ ಮಂಗಳೂರಿನ ಕಡಬ ಸಮೀಪದ ಕೋಯಿಲಗುಡ್ಡದಲ್ಲಿ ವೃದ್ಧನೊಬ್ಬ ಕುಸಿದು ...

 • 11 March 2018
  1 week ago No comment

  ಚಕ್ರವರ್ತಿಯ ಮೌನ!

        ಕವಿಸಾಲು       ಚೆಂದದ ಬಿಳಿಬಿಳಿ ಬಟ್ಟೆಯಲಿ ಅಷ್ಟೆತ್ತರದ ಸಿಂಹಾಸನದಲ್ಲಿ ಕೂತ ಮೌನಿ ಚಕ್ರವರ್ತಿಯ ಮುಖದಲ್ಲಿ ಮಾಸದ ಮಂದಹಾಸ! ಮಾತಾಡದ ಪ್ರಭುವಿನ ಭಟ್ಟಂಗಿಗಳು ರಾಜಮುದ್ರೆಯ ಹಿಡಿದು ಹೆದರಿಸುತ್ತಿದ್ದಾರೆ! ರಾಜಾಜ್ಞೆಯ ಪಾಲಿಸದವರ ತಲೆದಂಡ ಶತಃಸಿದ್ಧ! ಜನರೀಗ ಭಯಬೀತರಾಗಿದ್ದಾರೆ: ತಮಗೆ ಬೇಕಾದ್ದನ್ನು ಉಣ್ಣಲು ಉಡಲು ನುಡಿಯಲು ನಡೆಯಲು! ಮತಾಂಧ ಪಡೆಯ ಕಾಲಾಳುಗಳಿಗೀಗ ಹೊಸ ಉನ್ಮಾದ ದಣಿಯ ಮೆಚ್ಚಿಸುವ ಸಲುವಾಗಿ ಸಾರುತ್ತಿದ್ದಾರೆ ಕವಿತೆ ಬರೆದವನಿಗದರರ್ಥವ ತಿಳಿಸಲು ಆದೇಶವಾಗಿದೆ ...