Share

ಸಲಿಂಗಿಗಳ ಕಥೆಗೆ ನವಿರುತನ ಕೊಡುತ್ತ ಬೆಳಗುವ ಭಾಷೆ
ಅರ್ಪಣಾ ಹೆಚ್ ಎಸ್

 

 

ಸಲಿಂಗಿಗಳ ದೈಹಿಕ ಅಗತ್ಯಗಳು ಅರ್ಥವಾದಷ್ಟು ಸುಲಭವಾಗಿ ಅವರ ಭಾವನಾತ್ಮಾಕ ಅಗತ್ಯಗಳನ್ನು ಅರಿಯುವುದು ಸಾಧ್ಯವಿಲ್ಲ. ಹಾಗಾಗಿಯೇ ಸಲಿಂಗ ಕಾಮ ಹೆಚ್ಚು ಬಳಕೆಯಲ್ಲಿದೆಯೇ ಹೊರತು ಸಲಿಂಗ ಪ್ರೇಮ ಪದದ ಬಳಕೆ ಕಡಿಮೆ.

 

ನಿರ್ಭಾವುಕವಾಗಿ ಹೇಳುವುದಾದರೆ ಭಾಷೆ ನಮ್ಮ ಅಗತ್ಯಗಳಿಗಾಗಿ ರೂಪುಗೊಂಡದ್ದು ಅಷ್ಟೇ. ಹಾಗಾಗಿ, ಭಾಷೆ ಸಾಯುತ್ತದೆ ಎಂದರೆ ಅದರ ಅಗತ್ಯ ಕಡಿಮೆಯಾಗಿದೆ ಎಂದರ್ಥ. ಮೊದಲಲ್ಲಿ ನಮ್ಮ ಭಾಷೆ ಪ್ರಕೃತಿಗೆ ಹತ್ತಿರವಾಗಿತ್ತು, ಈಗ ವ್ಯವಹಾರಕ್ಕೆ ಹತ್ತಿರವಾಗಿದೆ. ಮೊದಲು ಪ್ರಕೃತಿಯ ಜೊತೆ ಸಂವಾದಿಸುತ್ತಿತ್ತು, ಈಗ ವ್ಯವಹಾರದ ಮಾತನಾಡುತ್ತದೆ.

ಆದರೆ, ಯಾವುದೇ ಭಾಷೆಯ ಸಾವನ್ನು ಅಷ್ಟು ನಿರ್ಭಾವುಕತೆಯಿಂದ ನೋಡಲು ಸಾಧ್ಯವೇ ಇಲ್ಲ. ಒಂದು ಭಾಷೆಯ ಜೊತೆ ಜೊತೆಗೆ ಹೆಣೆದುಕೊಂಡಿರುವ ನೂರಾರು ಅಂಶಗಳು ಅದನ್ನು ಅತ್ಯಂತ ಸಂಕೀರ್ಣ, ಪರಮ ಜೀವಂತ ವಸ್ತುವಾಗಿಸಿರುತ್ತದೆ. ಹೀಗಾಗಿಯೇ, “ಐ ಡ್ರೀಮ್ ಇನ್ ಅನದರ್ ಲಾಂಗ್ವೇಜ್” ಚಿತ್ರದಲ್ಲಿ ಝಿಕ್ರಿಲ್ ಭಾಷೆಗೆ ಉಪಶೀರ್ಷಿಕೆಗಳು ಇಲ್ಲವಾದಾಗ, ಅವರಾಡುವ ಮಾತು ಅರ್ಥವಾಗದೇ ಹೋಗುವಾಗ ಸಣ್ಣ ತಲ್ಲಣವಾಗುತ್ತದೆ. ಆದರೆ, ಅಲ್ಲಿ ಉಪಶೀರ್ಷಿಕೆ ಇರಲು ಸಾಧ್ಯವೂ ಇಲ್ಲ. ಏಕೆಂದರೆ ಸ್ಪಾನಿಷ್ ಭಾಷೆಯ ಈ ಚಿತ್ರದ ಆರಂಭದಲ್ಲಿ ಝಿಕ್ರಿಲ್ ಅರ್ಥಮಾಡಿಕೊಳ್ಳಬಲ್ಲ ಹಾಗೂ ಮಾತನಾಡಬಲ್ಲವರು ಜೀವಂತವಾಗಿ ಉಳಿದಿರುವವರು ಮೂವರಿರುತ್ತಾರೆ. ಸ್ವಲ್ಪ ನಿಮಿಷಗಳಲ್ಲೇ ಒಂದು ಕೊಂಡಿ ಕಳಚಿ ಇಬ್ಬರೇ ಉಳಿಯುತ್ತಾರೆ. ಇಡೀ ಭೂಮಿಯ ಮೇಲೆ ಝಿಕ್ರಿಲ್ ಬಲ್ಲವರು ಇಬ್ಬರೇ. ಇಸ್ಸಾರೋ ಮತ್ತು ಎವೆರೆಸ್ಟೋ. ವಯೋವೃದ್ಧರು. ಆದರೆ, ಆ ಇಬ್ಬರೂ ಪರಸ್ಪರ ಮಾತು ಬಿಟ್ಟು 50 ವರ್ಷ ಕಳೆದಿದೆ.

ಝಿಕ್ರಿಲ್ (ಚಿತ್ರಕ್ಕಾಗಿ ರೂಪಿಸಲಾದ ಕಾಲ್ಪನಿಕ ಭಾಷೆ) ನಿಸರ್ಗಕ್ಕೆ ಹತ್ತಿರವಾದ, ನಿಸರ್ಗಕ್ಕೆ ಅರ್ಥವಾಗುವ ಭಾಷೆ. ಆದರೆ, ಪ್ರಕೃತಿಯೊಂದಿಗೆ ಮಾತನಾಡುವುದನ್ನು ಮನುಷ್ಯ ಕಡಿಮೆ ಮಾಡಿದಂತೆ ನಿಧಾನವಾಗಿ ಸಾಯುತ್ತಾ ಬಂದಿದೆ. ಬದಲಾಗಿ ಮೆಕ್ಸಿಕೋದ ಕಾಡಿನ ನಡುವಿನ ಈ ಹಳ್ಳಿಯಲ್ಲಿ ಇಂಗ್ಲಿಷ್ ಕಲಿಸಲಾಗುತ್ತಿದೆ. ಅಮೆರಿಕಾಗೆ ಹೋಗಿ ಜೀವನ ನಡೆಸುವ ಕನಸಿರುವ ಯುವಜೀವಿಗಳಿಗಾಗಿ. 50 ವರ್ಷ ಮೊದಲು ಇದೇ ಹಳ್ಳಿಯಲ್ಲಿ ಝಿಕ್ರಿಲ್ ಮಾತ್ರ ಬರುವವರಿಗಾಗಿ ಸ್ಪಾನಿಷ್ ಕಲಿಸಲಾಗುತ್ತಿತ್ತು. ಜೀವನದ ಅಗತ್ಯಗಳು ಬದಲಾದಂತೆ ಭಾಷೆ ಕಲಿಕೆಯ ಅಗತ್ಯಗಳು ಬದಲಾಗುತ್ತವೆ.

ಝಿಕ್ರಿಲ್ ಭಾಷೆ ಅರಿಯಲು ಆ ಹಳ್ಳಿಗೆ ಕಾಲಿಟ್ಟ ಭಾಷಾ ತಜ್ಞನಿಗೆ 50 ವರ್ಷದ ಹಿಂದೆ ಸ್ನೇಹ ಮುರಿದುಕೊಂಡು ವೈರಿಗಳಾಗಿ ಮಾತು ಬಿಟ್ಟ ಹಳೆಯ ಪರಮಾಪ್ತ ಸ್ನೇಹಿತರನ್ನು ಒಂದು ಮಾಡಬೇಕಾದ ಅನಿವಾರ್ಯತೆ ಇದೆ. ತ್ರಿಕೋಣ ಪ್ರೇಮವೇ ಇಬ್ಬರ ನಡುವಿನ ದ್ವೇಷಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಾಣುವ ಸತ್ಯವಾದರೂ, ಒಳ ಸಂಗತಿ ಬೇರೆಯೇ ಇದೆ. ಚಿತ್ರ, ಭಾಷೆಯ ಅಳಿವಿನ ಬಗ್ಗೆ ಮಾತನಾಡುತ್ತಾ ಮ್ಯಾಜಿಕಲ್ ರಿಯಲಿಸಂ ಅಂಶಗಳನ್ನು ಜೋಡಿಸುತ್ತಾ ಆಕರ್ಷಿಸುತ್ತದೆಯಾದರೂ ನನ್ನನ್ನು ಸೆಳೆದ ಮತ್ತೊಂದು ಪ್ರಮುಖ ಅಂಶ ಇಸ್ಸಾರೋ ಮತ್ತು ಎವರೆಸ್ಟೋ ನಡುವಿನ ಸಲಿಂಗ ಪ್ರೇಮವನ್ನು ನಿರೂಪಿಸಿರುವ ರೀತಿ.

ಸಲಿಂಗಿಗಳ ದೈಹಿಕ ಅಗತ್ಯಗಳು ಅರ್ಥವಾದಷ್ಟು ಸುಲಭವಾಗಿ ಅವರ ಭಾವನಾತ್ಮಾಕ ಅಗತ್ಯಗಳನ್ನು ಅರಿಯುವುದು ಸಾಧ್ಯವಿಲ್ಲ. ಹಾಗಾಗಿಯೇ ಸಲಿಂಗ ಕಾಮ ಹೆಚ್ಚು ಬಳಕೆಯಲ್ಲಿದೆಯೇ ಹೊರತು ಸಲಿಂಗ ಪ್ರೇಮ ಪದದ ಬಳಕೆ ಕಡಿಮೆ. ಇತ್ತೀಚೆಗೆ ಸಲಿಂಗಿಗಳ ಕುರಿತ ಹಲವಾರು ಚಿತ್ರಗಳು ಬರುತ್ತಿದ್ದರೂ ನನಗೆ ನಿರ್ದಿಷ್ಟವಾಗಿ ಈ ಕೊರತೆ ಎದ್ದು ಕಾಣುತ್ತದೆ. ತನ್ನ ಜೊತೆಗಾರ/ ಜೊತೆಗಾರ್ತಿಯ ಜೊತೆಗಿನ ದೈಹಿಕ ಆಕರ್ಷಣೆಯನ್ನು ಮೀರಿ ಅಲ್ಲಿ ಇತರ ಸಂಬಂಧಗಳಲ್ಲಿ ಇರುವಂತೆಯೇ ಇರಬಹುದಾದ ಭಾವನಾತ್ಮಕ ಪ್ರೇಮ ಸಂಬಂಧವನ್ನು ಸಶಕ್ತವಾಗಿ, ಮನಕ್ಕೆ ಒಪ್ಪಿತವಾಗುವ ರೀತಿಯಲ್ಲಿ, ಇತರರಿಗೆ ಕನೆಕ್ಟ್ ಆಗುವ ರೀತಿಯಲ್ಲಿ ಹೇಳಿರುವ ಚಿತ್ರಗಳು ತೀರಾ ಕಡಿಮೆ. ಹಾಗೆ ನೋಡಿದರೆ, ಈ ಚಿತ್ರ ಆ ಕುರಿತು ಏನೂ ಹೆಚ್ಚು ಮಾತನಾಡುವುದಿಲ್ಲ. ಆದರೂ, ಇಬ್ಬರು ಸ್ನೇಹಿತರ ನಡುವಿನ ಸಂಬಂಧದ ಅಗಾಧತೆಯನ್ನು, ಸಂಕೀರ್ಣತೆಯನ್ನು ತುಂಬಾ ಸೂಕ್ಷ್ಮವಾಗಿ ಹೇಳುತ್ತದೆ. ಇಸ್ಸಾರೋ ಮದುವೆಯಾಗದೇ ಒಂಟಿಯಾಗಿ ಉಳಿದದ್ದು ವಿಶೇಷವೆನಿಸುವುದಿಲ್ಲ. ಚಿತ್ರದ ಅಂತ್ಯವೂ ಅವರಿಬ್ಬರ ಒಪ್ಪಿಕೊಳ್ಳದ ಪ್ರೇಮ ಸಂಬಂಧಕ್ಕೆ ನವಿರುತನ ನೀಡುತ್ತದೆ.

“ಐ ಡ್ರೀಮ್ ಇನ್ ಅನದರ್ ಲಾಂಗ್ವೇಜ್” ಚಿತ್ರದ ಬಗ್ಗೆ ಏನೂ ಗೊತ್ತಿಲ್ಲದೆಯೇ ನೋಡುವ ಆಸೆ ಮೂಡಿದ್ದಕ್ಕೆ ಕಾರಣ ಅದರ ಕಾವ್ಯಾತ್ಮಕ ಶೀರ್ಷಿಕೆ. ಚಿತ್ರವೂ ಅಷ್ಟೇ ಕಾವ್ಯಾತ್ಮಕವಾಗಿದೆ. ನನ್ನ ಮಟ್ಟಿಗಂತೂ ಪರಿಸರದ ಧ್ವನಿಯನ್ನು ಅತ್ಯಂತ ಸಮರ್ಥವಾಗಿ ಬಳಸಿಕೊಂಡಿರುವ ಚಿತ್ರ ಇದು. ಛಾಯಾಗ್ರಹಣ ಮತ್ತು ಧ್ವನಿಮುದ್ರಣ ಚಿತ್ರದ ಅತ್ಯಂತ ದೊಡ್ಡ ಪ್ಲಸ್ ಪಾಯಿಂಟ್. ಮೆಕ್ಸಿಕೋದ ಕಾಡು, ಕಾಡಿನ ಕತ್ತಲು ಸಮುದ್ರ, ಝರಿ, ಮಳೆ, ಜೀರುಂಡೆಗಳು ಚಪ್ಪಟೆ ಚಿತ್ರವಾಗಿ ಮೂಡುವ ಬದಲು ಧ್ವನಿಗಳೊಂದಿಗೆ ಸೇರಿ ದೊಡ್ಡ ತೆರೆಯ ಮೇಲೆ ಅದೇ ಲೋಕವನ್ನೇ ಅನಾಮತ್ತಾಗಿ ಇಳಿಸಿಬಿಡುತ್ತವೆ.

ಚಿತ್ರದ ಒಂದು ದುರ್ಬಲತೆ ಎಂದರೆ ಬಹುತೇಕ ಪಾತ್ರಗಳಿಗೆ ಆಳ ವಿಸ್ತಾರ ಇಲ್ಲ. ಅತ್ಯಂತ ಮೇಲ್ಮಟ್ಟದಲ್ಲಿ ನಿರೂಪಿತಗೊಂಡಿವೆ. ಇಸ್ಸಾರೋ ಮತ್ತು ಎವೆರಸ್ಟೋ ಪಾತ್ರಗಳು ಮಾತ್ರ ಈ ದುರ್ಬಲತೆಯನ್ನೂ ಮೀರಿ ಆಪ್ತವೆನಿಸುತ್ತವೆ. ಉಳಿದವುಗಳು ಸುಮ್ಮನೆ ಸ್ಪರ್ಶಿಸಿ ಮುಂದೆ ಹೋಗುತ್ತವೆ. ಆಳವಾಗಿ ತಟ್ಟುವುದಿಲ್ಲ. ಆದರೂ,”ಐ ಡ್ರೀಮ್ ಇನ್ ಅನದರ್ ಲಾಂಗ್ವೇಜ್” ಕನಸಿನಂತಹ ಚಿತ್ರ. ನನ್ನ ಮಟ್ಟಿಗಂತೂ ಈ ಬಾರಿಯ ಬೆಂಗಳೂರು ಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡ ಅತ್ಯುತ್ತಮ ಚಿತ್ರ.

ಅರ್ಪಣಾ ಹೆಚ್ ಎಸ್

arpanaಟಿವಿ ಮೀಡಿಯಾದಲ್ಲಿ ದಶಕದ ಅನುಭವ ಇರುವ ಪತ್ರಕರ್ತೆ. ಸದ್ಯ ಫ್ರೀಲ್ಯಾನ್ಸ್ ಅನುವಾದಕರಾಗಿ, ಕಂಠದಾನ ಕಲಾವಿದೆಯಾಗಿ ಹಾಗೂ ಬರಹಗಾರರಾಗಿ ತಮ್ಮ ಪ್ರೊಫೆಷನಲ್ ಬದುಕಿನಲ್ಲಿ ಮುಂದೆ ಸಾಗುತ್ತಿದ್ದಾರೆ. ಈಟಿವಿ ಕನ್ನಡ ವಾಹಿನಿಯಲ್ಲಿ ಬುಲೆಟಿನ್ ಪ್ರೊಡ್ಯೂಸರ್ ಆಗಿದ್ದವರು. ಕನ್ನಡಪ್ರಭ, ವಿಜಯವಾಣಿಯಲ್ಲಿ ಪ್ರಕಟವಾದ ಸಣ್ಣಕಥೆಗಳಿಗಾಗಿ ಹಲವು ಪ್ರಶಸ್ತಿ ಪಡೆದಿದ್ದಾರೆ. ಸರ್ಕಾರದ ಪ್ರಾಜೆಕ್ಟ್‌ಗಳಿಗೆ ಡಾಕ್ಯುಮೆಂಟರಿ ಫಿಲಂಗಳನ್ನೂ ಮಾಡಿದ ಅನುಭವ ಹೊಂದಿದ್ದಾರೆ.

Share

Leave a comment

Your email address will not be published. Required fields are marked *

Recent Posts More

 • 1 day ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 6 days ago One Comment

  ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

          ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

 • 1 week ago No comment

  ವಸಂತದ ನೆನಪು; ಮಾಗುವ ಹುರುಪು!

    ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

 • 1 week ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

 • 2 weeks ago No comment

  ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

  ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...


Editor's Wall

 • 11 May 2018
  1 month ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  2 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  2 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...