Share

ಕಟ್ಟ ಕಡೆಯ ಸಲ ಅಜ್ಜಿಯ ಕಣ್ಣುಗಳಿಗೆ
ಡಿ ಉಮಾಪತಿ

ಬರೆದದ್ದನ್ನೇ ಬದುಕಿದ, ಬದುಕಿದ್ದನ್ನೇ ಬರೆದ ಹಿಂದೀ ಕವಿ ರಮಾಶಂಕರ ವಿದ್ರೋಹಿಗೆ ಜೆ.ಎನ್.ಯು ಕ್ಯಾಂಪಸ್ಸೇ ತಲೆಮೇಲಿನ ನೆರಳಾಯಿತು. ರೈತ, ಕೂಲಿ ಕಾರ್ಮಿಕ, ಧರ್ಮನಿರಪೇಕ್ಷತೆ, ಶೋಷಣೆ, ದಬ್ಬಾಳಿಕೆಗಳ ಪ್ರತಿರೋಧಗಳು, ಯುದ್ಧಗಳು, ಅಸಮಾನತೆ, ಆತನ ಕವಿತೆಗಳ ಕೇಂದ್ರವಾಗಿದ್ದವು. ನೀವು (ಶತ್ರುಗಳು) ನನ್ನನ್ನು ಕೊಲ್ಲಬಯಸಿದ್ದರೆ ನೇರವಾಗಿ ನನ್ನ ಕಣ್ಣುಗಳೊಳಕ್ಕೆ ಕಾಡತೂಸು ಹಾರಿಸಿ. ಯಾಕೆಂದರೆ ಕಡೆಯ ಉಸಿರಿನ ತನಕ ನಿಮ್ಮ ನೋಟಕ್ಕೆ ನೋಟ ಬೆರೆಸಿ ಇರಿಯುತ್ತಿರುತ್ತೇನೆ ನಾನು. ಇರಿಯುವ ನನ್ನ ನೋಟ ನಿಮ್ಮ ಸಾಕ್ಷಿಪ್ರಜ್ಞೆಯಲ್ಲಿ ದಾಖಲಾಗಿ ಕಾಡಬೇಕು. ನಾನು ಸತ್ತ ನಂತರವೂ ನನ್ನ ಕುರಿತ ಸಾಕ್ಷ್ಯಚಿತ್ರಗಳು- ಭಾವಚಿತ್ರಗಳ ಮೂಲಕ ಇರಿಯುತ್ತಿರುತ್ತೇನೆ ಎಂದಿದ್ದ ಆತ.

ದೇಶವಿಭಜನೆ ಕುರಿತ ನೂರ್ ಮಿಯಾ ಕಾ ಸುರ್ಮಾ, ಮೈಂ ಕಿಸಾನ್ ಹೂಂ, ಮತ್ತು ಈ ಹೆಣ್ಣುಮಗಳು ಯಾರು? ಈತನ ಕೆಲ ಪ್ರಸಿದ್ಧ ಕವಿತೆಗಳು.

 

 

 

 

 

 

 

 

 

 

 

 

 

 

 

 

 

 

ನಾನು ರೈತ

ಗಸದಲ್ಲಿ ಬೀಜ ಬಿತ್ತುತ್ತಾ ಇದ್ದೇನೆ
ಕೆಲ ಮಂದಿ ಹೇಳ್ತಾ ಇದ್ದಾರೆ
ಲೋ ಹುಚ್ಚಾ!ಆಗಸದಲ್ಲಿ ಕಾಳು ಕಡ್ಡಿ ಜಮೆ ನಿಲ್ಲುವುದಿಲ್ಲವೋ
ನಾ ಅಂದೆ, ಅಲ್ಲವೋ ಮರುಳೇ!
ನೆಲದ ಮೇಲೆ ಭಗವಂತ ಜಮೆ ನಿಂತಿರುವನಾದರೆ
ಬಾಂದಳದಲ್ಲಿ ದವಸ ಧಾನ್ಯವೂ ಜಮೆ ನಿಲ್ಲದೇನು?
ಈಗಂತೂ ಎರಡರಲ್ಲಿ ಒಂದು ಆಗಿಯೇ ತೀರಬೇಕು
ಇಳೆಯಿಂದ ಭಗವಂತ ಗುಳೆ ಕೀಳಬೇಕು
ಇಲ್ಲವೇ ಅಂಬರದಲ್ಲಿ ಕಾಳು ಕಡ್ಡಿ ಜಮೆಯಾಗಬೇಕು.

~

ಈ ಹೆಣ್ಣುಮಗಳು ಯಾರು?

ಆ ಹೆಣ್ಣುಮಗಳು ಯಾರು,
ಇತಿಹಾಸದಲ್ಲಿ ಮೊತ್ತ ಮೊದಲು ದಳ್ಳುರಿಗೆ ದಬ್ಬಿಸಿಕೊಂಡು ದಹಿಸಿ ಹೋದವಳು?
ನನಗೆ ತಿಳಿಯದು.
ಆದರೆ ಆಕೆ ಯಾರೇ ಇದ್ದರೂ ನನ್ನ ತಾಯಿಯೇ ಆಗಿದ್ದಾಳು,
ಭವಿಷ್ಯದಲ್ಲಿ ಹೀಗೆ ಸುಡಿಸಿಕೊಂಡು ಸಾಯುವ
ಆ ಕಟ್ಟಕಡೆಯ ಸ್ತ್ರೀ ಯಾರಿದ್ದಾಳು ಎಂಬುದು ನನ್ನ ಚಿಂತೆ
ನನಗೆ ಗೊತ್ತಿಲ್ಲ…
ಆದರೆ ಆಕೆ ಯಾರೇ ಆಗಿದ್ದರೂ ನನ್ನ ಮಗಳೇ ಆಗಿದ್ದಾಳು
ಮತ್ತು ಹೀಗಾಗಲು ನಾನು ಬಿಡುವುದಿಲ್ಲ.

~

ನೂರ್ ಮಿಂಯಾನ ಸುರ್ಮಾ

ವತ್ತು ಬೇಕಾದರೆ ವಿಕ್ಟೋರಿಯಾ ಛಾಪದ ಕಾಡಿಗೆ ಹಚ್ಚಿಕೊಳ್ಳಿರಿ
ಅಥವಾ ರಿತಂಬರಾ ಮುದ್ರೆಯ ಅಂಜನ
ಆದರೆ ಅಸಲೀ ಆಕಳ ತುಪ್ಪದ ಸುರ್ಮಾ-
ಮಾಡೋನು ನೂರ್ ಮಿಂಯಾ ಒಬ್ಬಾಂವನೇ ಇದ್ದ
ನನ್ನ ಅಜ್ಜಿ ಮಾತ್ರ ಹಂಗೆ ಅಂದುಕೊಂಡಿದ್ಲು
ನೂರ್ ಮಿಂಯಾ ಯಾವಾಗಾದರೂ ಬರಲಿ
ನನ್ನ ಅಜ್ಜಿ ಸುರ್ಮಾ ಖರೀದಿ ಮಾಡೋದು ಖಾತ್ರಿ
ಒಂದೆಳೆ ಸುರ್ಮ ಕಣ್ಣಿಗೆ ಹಚ್ಚಿಕೊಂಡರೆ
ಕಣ್ಣಾಲಿಗಳು ಮೋಡದಂತೆ ತುಂಬಿಕೊಳ್ಳುತ್ತಿದ್ದವು
ಗಂಗೆ ಜಮುನೆಯರಂತೆ ಅಲೆಗಳ ಏಳಿಸುತ್ತಿದ್ದವು
ಕಡಲೆಂಬ ಕಡಲೇ ಆಗಿ ಹೋಗುತ್ತಿದ್ದವು ಮುದುಕಿ ಕಣ್ಣುಗಳು
ನಾವು ಪೋರರು ಕಣ್ಣೊಳಗೆ ಇಣುಕಿದರೆ
ತೆರೆದು ತೋರುತ್ತಿತ್ತು ಇಡೀ ಕಡಲು.
ನೂರ್ ಮಿಂಯಾನನ್ನೂ, ಆತನ ಸುರ್ಮಾವನ್ನೂ
ಭಾಳ ಹರಸುತ್ತಿದ್ದಳು ನನ್ನಜ್ಜಿ
ಮಿಂಯಾನ ಸುರ್ಮಾದ ದಯೆಯಿಂದಾಗಿ
ಮುಪ್ಪಾನ ಮುಪ್ಪಿನಲ್ಲೂ ನಿಚ್ಚಳ ನನ್ನ ನೋಟ
ಸೂಜಿಗೆ ದಾರ ಪೋಣಿಸುತ್ತೇನೆ..ನಡೆದಾಡುತ್ತೇನೆ ಎನ್ನುತ್ತಿದ್ದಳು.
ಮತ್ತೆ ಅದೇ ನೂರ್ ಮಿಂಯಾ ಪಾಕಿಸ್ತಾನಕ್ಕೆ ಹೊರಟು ಹೋದ
ಯಾಕೆ ಹೋದ ನೂರ್ ಮಿಂಯಾ ಪಾಕಿಸ್ತಾನಕ್ಕೆ
ಹೇಳ್ತಾರೆ ನೂರ್ ಮಿಂಯಾಗೆ ಹಿಂದೆ ಮುಂದೆ ಯಾರೂ ಇರಲಿಲ್ಲಂತೆ
ಹಾಗೆಂದರೆ..ನಾವ್ಯಾರೂ ಸಂಬಂಧವೇ ಇಲ್ಲದವರೇ ನೂರ್ ಮಿಂಯಾನಿಗೆ?
ನೂರ್ ಮಿಂಯಾ ಪಾಕಿಸ್ತಾನಕ್ಕೆ ಯಾಕಾಗಿ ಹೊರಟು ಹೋದ?
ನಮಗೆ ಹೇಳದೆ ಕೇಳದೆ
ನಮ್ಮ ಅಜ್ಜಿಗೂ ಹೇಳದೆ
ನೂರ್ ಮಿಂಯಾ ಹೋದದ್ದೇಕೆ ಪಾಕಿಸ್ತಾನಕ್ಕೆ?
ಈಗ ಆ ಕಣ್ಣುಗಳೂ ಇಲ್ಲ, ಆ ಕಾಡಿಗೆ ಕೂಡ
ನನ್ನ ಅಜ್ಜಿ ಯಾವ ತಟದಿಂದ ಬಂದಿದ್ದಳೋ
ಅದೇ ತಟಕ್ಕೆ ಮರಳಿ ಹೋದಳು
ನದಿಯಾಚೆಯಿಂದ ಮದುವೆಯಾಗಿ ಬಂದಿದ್ದಳು ನನ್ನಜ್ಜಿ
ನದಿಯಾಚೆಗೇ ಹೊರಟು ಹೋದಳು
ಆಕೆಯ ಬೂದಿಯನ್ನು ನಾನು ನದಿಗೆ ಬಿಡುತ್ತಿದ್ದೆನಲ್ಲ
ಆಗ ಅನಿಸಿತು, ಈ ನದಿ ನದಿಯಲ್ಲ. ನನ್ನ ಅಜ್ಜಿಯ ನಯನಗಳು
ಮತ್ತು ಈ ಬೂದಿ ಬೂದಿಯಲ್ಲ, ಬದಲಾಗಿ
ನನ್ನ ಅಜ್ಜಿಯ ನಯನಗಳಿಗೆ ಇಳಿಯುತ್ತಿದ್ದ
ನೂರ್ ಮಿಂಯಾನ ಸುರ್ಮಾ.
ಹೀಗೆ ನಾನು ಕಟ್ಟಕಡೆಯ ಸಲ ನನ್ನ ಅಜ್ಜಿಯ ನೇತ್ರಗಳಿಗೆ
ನೂರ್ ಮಿಂಯಾನ ಸುರ್ಮಾ ಹಚ್ಚತೊಡಗಿದ್ದೆ.

Share

2 Comments For "ಕಟ್ಟ ಕಡೆಯ ಸಲ ಅಜ್ಜಿಯ ಕಣ್ಣುಗಳಿಗೆ
ಡಿ ಉಮಾಪತಿ
"

  1. ಭಾರತಿ ಬಿ ವಿ
    3rd March 2018

    ಅಬ್ಬ! ಎಂಥ ಶಕ್ತಿಯುತ ಕವಿತೆಗಳು!!
    ಉಮಾಪತಿ ಸರ್ ಎಂಥ ಅನುವಾದ ಇದು!!!

    Reply
  2. ಪ್ರಕಾಶ್ ಜಿ
    3rd March 2018

    ವಿದ್ರೋಹಿಯವರ ಈ ಮೂರೂ ಕವಿತೆಗಳು ಬಹಳ ತಟ್ಟುತ್ತವೆ. ಉಮಾಪತಿಯವರದು ಅತ್ಯಂತ ಸಹಜ ಅನುವಾದ….

    Reply

Leave a comment

Your email address will not be published. Required fields are marked *

Recent Posts More

  • 1 day ago No comment

    ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

  • 6 days ago One Comment

    ಅಜ್ಜಿಗೇನು ಬೇಕು ಅಂತ ಅಜ್ಜಂಗೇನು ಗೊತ್ತು!

            ಕಥನ         ಅಜ್ಜ ಪೆನ್ಷನ್ ತರೋದಕ್ಕೆ ಅಂತ ಪೇಟೆಗೆ ಹೋಗಿದ್ದ. ಅಷ್ಟರಲ್ಲಿ ಮನೆ ಬಾಗಿಲಲ್ಲಿ ಕಾರು ಬಂದು ನಿಂತಿತು. ಕಾರಲ್ಲಿ ಅಜ್ಜಿಯ ಮಗ, ಸೊಸೆ ಮತ್ತೆ ಆರು ವರ್ಷದ ಮೊಮ್ಮಗ ಬಂದಿದ್ರು. ಅಜ್ಜಿಗೆ ಖುಷಿ ತಡೆಯಕ್ಕಾಗದೇ ಅಡಿಗೆ ಮನೆ ಸಂದಿ ಮೂಲೇನೆಲ್ಲಾ ಹುಡುಕಿದ್ಲು. ದಡಾ ಬಡಾ ಸದ್ದು ಮಾಡಿದ್ಲು, ಸರಾಪರಾ ಸದ್ದು ಮಾಡಿದ್ಲು. ಅಡುಗೆ ಮನೆಯಿಂದ ಕೊತಾಕೊತಾ ಸದ್ದು ...

  • 1 week ago No comment

    ವಸಂತದ ನೆನಪು; ಮಾಗುವ ಹುರುಪು!

      ಜಗತ್ತಿನ ಬಗ್ಗೆ ತಿಳಿಯುತ್ತ ಸಾಗಿ, ನಮಗೆ ಈ ಜಗತ್ತು ಹೀಗೆ ನಡೆಯುತ್ತಿದೆ ಅಂತ ಅರಿತುಕೊಳ್ಳುವವರೆಗಿನದು ಮಧ್ಯವಯಸ್ಸಿನ ಕಾಲ. ನಾವು ಅಲ್ಲಿಯವರೆಗೆ, ಕಲಿತದ್ದು, ಕೇಳಿದ್ದು, ನಮಗೆ ತಿಳಿದಿದ್ದು ಎಲ್ಲವೂ ಬದಲಾಗುವ ವೇಳೆಗೆ ನಮಗೆ ವಯಸ್ಸಾಗಿಬಿಟ್ಟಿರುತ್ತದೆ. ಕಾಲದಲ್ಲಿ ಹೊಸ ಚಿಗುರು ಟಿಸಿಲೊಡೆದಿರುತ್ತದೆ.     ಕುಣಿದಾಡುವಷ್ಟು ಚೈತನ್ಯವಿರುವ ಯೌವನಕ್ಕೂ, ಕುಂದಿದ ಶಕ್ತಿಯ ಇಳಿಗಾಲದ ವೃದ್ಧಾಪ್ಯಕ್ಕೂ ನಡುವೆ ಬರುವುದು ಮಧ್ಯವಯಸ್ಸು! ಹುಟ್ಟು, ಬದುಕು ,ಸಾವು ಎಲ್ಲರಿಗೂ ಬರುತ್ತದೆ. ಬದುಕನ್ನು ಹಲವರು ಸಾಧನೆಗಳ ...

  • 1 week ago No comment

    ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

    ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...

  • 2 weeks ago No comment

    ಪ್ರಸಾದ್ ನಾಯ್ಕ್ ಪಟ್ಟಾಂಗ | ನನಗೂ ಒಬ್ಬ ಗೆಳೆಯ ಬೇಕು…

    ಆ ಘಟನೆಯನ್ನು ನೆನಪಿಸಿಕೊಂಡಾಗಲೆಲ್ಲಾ ಈಗಲೂ ನಗು ಉಕ್ಕುಕ್ಕಿ ಬರುತ್ತದೆ. ಅಂದು ವಿಚಿತ್ರ ಘಟನೆಯೊಂದು ನಡೆದಿತ್ತು. ಅವು ನನ್ನ ಕಾಲೇಜಿನ ದಿನಗಳು. ಮಂಗಳೂರಿನ ಶಾಪಿಂಗ್ ಮಾಲ್ ಒಂದಕ್ಕೆ ಮಧ್ಯಾಹ್ನದ ಊಟಕ್ಕೆಂದು ಬಂದಿದ್ದ ನಾನು ಫುಡ್ ಕೋರ್ಟಿನಲ್ಲಿ ಸುಮ್ಮನೆ ಅಡ್ಡಾಡುತ್ತಿದ್ದೆ. ಎತ್ತ ಹೋಗಬೇಕೆಂದು ತಿಳಿಯದೆ ಸುಮ್ಮನೆ ಒಂದು ಕೌಂಟರಿನತ್ತ ನಡೆದು ಬೇಕಿದ್ದದ್ದನ್ನು ಆರ್ಡರ್ ಮಾಡಿದೆ. ಕೆಲಸವಿಲ್ಲದೆ ನೊಣ ಹೊಡೆಯುತ್ತಿದ್ದ ಆ ಹೆಂಗಸಿಗೆ ನನ್ನ ಆಗಮನವು ಅಂಥಾ ಉತ್ಸಾಹವೇನೂ ತರಲಿಲ್ಲವಾದರೂ ನಾನು ಹೇಳಿದ್ದನ್ನೆಲ್ಲಾ ...


Editor's Wall

  • 11 May 2018
    1 month ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

  • 10 May 2018
    2 months ago No comment

    ಒಂದು ಪುಸ್ತಕ; ವಾರವಿಡೀ ಬಿಡುಗಡೆ!

    ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

  • 03 May 2018
    2 months ago No comment

    ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                      ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

  • 30 April 2018
    2 months ago No comment

    ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

    ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

  • 28 April 2018
    2 months ago No comment

    ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

    ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...