Share

ಮಧುಬಾಲಾ: ಮಿನುಗಿನಂಚಿನ ವೇದನೆ
ಕನೆಕ್ಟ್ ಕನ್ನಡ

 

 

ಮಧುಬಾಲಾ ಮನಸ್ಸಿನಲ್ಲೂ ಒಬ್ಬಂಟಿತನವೇ ಇತ್ತೆಂಬುದಕ್ಕೆ ಆಕೆಯ ಈ ಮಾತು ಸಾಕ್ಷಿ: “ನಿಜವಾದ ಪ್ರೇಮವಿಲ್ಲದೆ ಬದುಕಿನಲ್ಲಿ ಶಾಂತಿ, ನೆಮ್ಮದಿಯೂ ಸಾಧ್ಯವಿಲ್ಲ.”

 

 

 

ಮೆರಿಕಾದ ನ್ಯೂಯಾರ್ಕ್ ಟೈಮ್ಸ್ ಪತ್ರಿಕೆ ಬಿಳಿಯ ಗಂಡಸರಿಗೆ ಮಾತ್ರ ಶ್ರದ್ಧಾಂಜಲಿ ಸಲ್ಲಿಸುವ ತನ್ನ 167 ವರ್ಷಗಳ ಸಂಪ್ರದಾಯವನ್ನು ಮೊದಲ ಬಾರಿಗೆ ಮುರಿದಿದೆ. ಜಗತ್ತಿನಾದ್ಯಂತದ 15 ಮಹಿಳೆಯರನ್ನು ಆರಿಸಿ ಅವರ ಬಗ್ಗೆ ಬರೆದಿದೆ. ವಿಶೇಷವೆಂದರೆ, ಆ 15 ಮಹಿಳೆಯರಲ್ಲಿ ನಮ್ಮ ಭಾರತೀಯ ಚಿತ್ರರಂಗ ಕಂಡ ಅಪ್ರತಿಮ ಚೆಲುವೆ, ಅಸಾಧಾರಣ ಕಲಾವಿದೆ, ದುರಂತ ನಾಯಕಿ ಮಧುಬಾಲಾ ಕೂಡ ಸೇರಿರುವುದು.

ತೀರಾ ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗದಲ್ಲಿ ಅತಿ ಎತ್ತರಕ್ಕೆ ಏರಿದ್ದ ಮಧುಬಾಲಾ, ಬದುಕಿನಿಂದಲೂ ಅಷ್ಟೇ ಬೇಗ ನಿರ್ಗಮಿಸಿದ್ದು ದುರಂತ. ಚೆಲುವಿನಲ್ಲಿ ಹಾಲಿವುಡ್ ನಟಿ ಮರ್ಲಿನ್ ಮನ್ರೋಗೆ ಸರಿಸಾಟಿಯಾಗಿದ್ದ ಮಧುಬಾಲಾ, ಬದುಕಿನಲ್ಲಿ ಕಂಡದ್ದೂ ಮನ್ರೋಳ ತಳಮಳಗಳನ್ನೇ. ಇಂಥ ಹೋಲಿಕೆಯೊಂದಿಗೇ ಮಧುಬಾಲಾಳ ಚಿತ್ರವನ್ನು ಕಟ್ಟಿಕೊಡುತ್ತದೆ ನ್ಯೂಯಾರ್ಕ್ ಟೈಮ್ಸ್ ಬರಹ.

ದಿಲ್ಲಿಯಲ್ಲಿ ಹುಟ್ಟಿದ ಮಧುಬಾಲಾ, ಪುಟ್ಟ ಪ್ರಾಯದಲ್ಲೇ ತನ್ನ ಬಡ ಕುಟುಂಬಕ್ಕೆ ಹೆಗಲು ಕೊಡುವುದಕ್ಕಾಗಿ ನಟನೆಗೆ ತೊಡಗಬೇಕಾದ ಕಥೆ ಮಾತ್ರವಲ್ಲ, ದಿಲೀಪ್ ಕುಮಾರ್ ಜೊತೆಗಿನ ಸಂಬಂಧ, ಕಿಶೋರ್ ಕುಮಾರ್ ಜೊತೆಗೆ ಮದುವೆ, ಕಡೆಗೆ ಆ ಸಂಬಂಧವೂ ಹಳಸಿದ ನೋವು ಎಲ್ಲವೂ ದಾಖಲಾಗಿದೆ ಅದರಲ್ಲಿ.

ದಿಲೀಪ್ ಕುಮಾರ್ ಜೊತೆಗೆ ಬಾಳಲು ಮಧುಬಾಲಾಗೂ ಇಷ್ಟವಿತ್ತು. ಆದರೆ ಅಪ್ಪನ ಕರಾರುಗಳು ಅವರಿಬ್ಬರ ಪ್ರೇಮದ ನಡುವೆ ವ್ಯವಹಾರದ ಲಾಭ ಹೊಂಚಲು ನೋಡಿದ್ದವು. ಅದನ್ನು ದಿಲೀಪ್ ಕುಮಾರ್ ಒಪ್ಪಲಿಲ್ಲ. ಕಡೆಗೆ, ದಿಲೀಪ್ ಮತ್ತು ಕುಟುಂಬ ಎರಡರ ನಡುವೆ ಆಯ್ಕೆಯ ಪ್ರಶ್ನೆ ಬಂದಾಗ ಮಧುಬಾಲಾ ನಿಂತದ್ದು ಕುಟುಂಬದ ಜೊತೆ. ಪ್ರೇಮ ಮುರಿದುಬಿದ್ದಿತ್ತು. ವಿಧೇಯ ಮಗಳಾಗಿದ್ದಳು ಮಧುಬಾಲಾ. ಹಾಲಿವುಡ್ಡಿನಲ್ಲಿ ಕೆಲಸ ಮಾಡುವ ಅವಕಾಶದಿಂದ ಆಕೆ ವಂಚಿತಳಾದದ್ದೂ ಅಪ್ಪ ಒಪ್ಪದ ಕಾರಣದಿಂದಲೇ.

‘ಮೊಘಲ್ ಎ ಅಜಂ’ ಚಿತ್ರದ ಚಿತ್ರೀಕರಣ ಸಂದರ್ಭದಲ್ಲೇ ದಿಲೀಪ್ ಕುಮಾರ್ – ಮಧುಬಾಲಾ ಸಂಬಂಧ ವಿರಸದೆಡೆಗೆ ತಿರುಗಿತ್ತು. ಆದರೆ, ಅದು ಅವರಿಬ್ಬರ ವೃತ್ತಿಪರತೆಗೆ ಮಾತ್ರ ಅಡ್ಡಿಯೊಡ್ಡಲಿಲ್ಲ. ಅತ್ಯಂತ ಕಡಿಮೆ ಸಮಯದಲ್ಲೇ ಎಂಬತ್ತಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದ ಮಧುಬಾಲಾ, ಬದುಕು ಮುಗಿಸಿದ್ದು ಹೃದಯರಂಧ್ರದ ತೊಂದರೆಯಿಂದ.

ಜನಪ್ರಿಯತೆಯ ಉತ್ತುಂಗದಲ್ಲಿರುವ ನಟಿಯೊಬ್ಬಳ ದುರಂತ ಎಂಥದೆಂಬುದಕ್ಕೆ ಮಧುಬಾಲಾ ಬದುಕಿನಲ್ಲಿಯೂ ಉದಾಹರಣೆ ಸಿಗುತ್ತದೆ. ಏನೆಂದರೆ, ಆಕೆ ತುಂಬ ಸಲ ಸಿನಿಮಾ ಸೆಟ್ಟಿನಲ್ಲೇ ಈ ಕಾಯಿಲೆಯಿಂದಾಗಿ ತೊಂದರೆಪಡುತ್ತಿದ್ದರೂ, ಬಹುಕಾಲ ಆಕೆಯ ಅನಾರೋಗ್ಯದ ವಿಚಾರವನ್ನು ಮುಚ್ಚಿಡುವ ಕೆಲಸವೇ ನಡೆಯಿತು. ಕೊನೆಗೆ ಲಂಡನ್ನಿಗೆ ಚಿಕಿತ್ಸೆಗೆಂದು ಕರೆದೊಯ್ದಾಗ, ಇನ್ನೊಂದೇ ವರ್ಷ ಬದುಕಿದರೆ ಹೆಚ್ಚು ಎಂದ ವೈದ್ಯರು ಶಸ್ತ್ರಚಿಕಿತ್ಸೆ ಮಾಡುವುದಕ್ಕೇ ನಿರಾಕರಿಸಿದರಂತೆ. ಅಚ್ಚರಿಯೆಂದರೆ ಅದಾದ ಮೇಲೂ ಒಂಬತ್ತು ವರ್ಷ ಜೀವ ಹಿಡಿದುಕೊಂಡಿದ್ದ ಮಧುಬಾಲಾ, ತಾನು ಬದುಕಬೇಕು ಎಂದು ತೀವ್ರವಾಗಿ ಹಂಬಲಿಸಿದ್ದವಳು. ಬದುಕಗೊಡು ದೇವರೇ ಎಂದು ಆಕೆ ಕೇಳಿಕೊಳ್ಳುತ್ತಿದ್ದುದರ ಬಗ್ಗೆ ಆಕೆಯ ತಂಗಿ ಹೇಳಿಕೊಂಡಿದ್ದಿದೆ.

ಬದುಕಿನ ಕಡೆಯ ದಿನಗಳನ್ನು ಜನರ ಕಣ್ಣಿಗೆ ಬೀಳದೆ ಮನೆಯಲ್ಲೇ ಕಳೆದ ಮಧುಬಾಲಾ ಮನಸ್ಸಿನಲ್ಲೂ ಒಬ್ಬಂಟಿತನವೇ ಇತ್ತೆಂಬುದಕ್ಕೆ ಆಕೆಯ ಈ ಮಾತು ಸಾಕ್ಷಿ: “ನಿಜವಾದ ಪ್ರೇಮವಿಲ್ಲದೆ ಬದುಕಿನಲ್ಲಿ ಶಾಂತಿ, ನೆಮ್ಮದಿಯೂ ಸಾಧ್ಯವಿಲ್ಲ.”

ತೆರೆಯ ಮೇಲೆ ಮಿನುಗಿದ್ದ ಚೆಲುವೆಯೊಳಗೆ ಹೇಳಲಾಗದೆ ಹೋದ ಅದೆಷ್ಟು ಸಂಕಟಗಳಿದ್ದವೊ!

ಒಂಭತ್ತನೇ ವಯಸ್ಸಿಗೆ ಚಿತ್ರರಂಗ ಪ್ರವೇಶಿಸಿದ್ದ ತಾನು ಆಗ ಮಾಡಿದ್ದ ಪಾತ್ರದಲ್ಲಿ ಪೂರ್ತಿ ಕಳೆದುಹೋಗಿದ್ದರ ಬಗ್ಗೆ ನೆನೆಯುತ್ತ ಮಧುಬಾಲಾ ಹೇಳಿದ್ದ ಮಾತೊಂದು ಹೀಗಿತ್ತು: “ನಿಮ್ಮನ್ನು ನೀವೇ ಮರೆತ ಮೇಲೆ ನಿಮ್ಮ ಬಗ್ಗೆ ಬೇರೆಯವರಿಗೆ ಏನನ್ನು ಹೇಳಬಲ್ಲಿರಿ?”

ಬಹುಶಃ ತಮ್ಮ ಬಗ್ಗೆ ಏನನ್ನೂ ಹೇಳದ, ಎಲ್ಲವನ್ನೂ ಒಳಗೇ ನುಂಗಿಕೊಂಡು ಬದುಕಿ, ನೋವಿಗೇ ಒಪ್ಪಿಸಿಕೊಂಡು ಹೊರಟುಹೋದ ಅದೆಷ್ಟೋ ಹೆಣ್ಣುಮಕ್ಕಳಲ್ಲಿ ಮಧುಬಾಲಾ ಕೂಡ ಒಬ್ಬಳೆನ್ನಿಸುತ್ತದೆ.

 

Share

Leave a comment

Your email address will not be published. Required fields are marked *

Recent Posts More

 • 10 hours ago No comment

  ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…

    ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ | ಬಿ ಲಕ್ಷ್ಮಣ್     ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ...

 • 2 days ago No comment

  ಮತ್ತೆ ಮತ್ತೆ…

        ಕವಿಸಾಲು     ನೆನಪಿನಾಗಸದಲಿ ನಗೆಚುಕ್ಕಿ ಎಣಿಸುವಾಸೆಗೆ ಕಣ್ಣಬೆಳಕು ಹಾಸಿದವ ಬಿತ್ತಿದ್ದು ಹೂವಾಗಿ ಬಾಡುವುದರೊಳಗೆ ಉದುರುವಡಿ ಬೊಗಸೆಯಾದವ ನೀರಿನಲೆ ಉಂಗುರದೊಳಗಿಂದ ಬರುತಾನೆ ಮತ್ತೆಮತ್ತೆ ಶಿಶಿರನೊಡನೆ ವಸಂತನೊಡನೆ ಜಗದ ಯಾವ ಕತ್ತಲೂ ತಲುಪದ ಮೂಲೆಗೆ ಬೆಳಕ ಬಳಿದಿಟ್ಟವ ಕಣ್ಣ ರೆಕ್ಕೆಗೆ ನಸುಕಿಗೂ ಮುಂಚೆ ಬಣ್ಣ ಹಚ್ಚಿದವ ಮೂಡಣದ ಚಿಲಿಪಿಲಿ, ಪಡುವಣದ ಉನ್ಮತ್ತ ಕೆಂಪು, ಗಲಗಲ ಹಗಲಿನಂಥವ ಮರೆಸಬರುತಾವೆ ಒಂದಷ್ಟು ನೆಪ ಬಿರುಮಾತು ಒಣಜಗಳ ಜಗ್ಗಿ ಎಳೆದಾಡುವಂತರ ...

 • 2 days ago No comment

  ದಂಡೆಯ ಕೈಯಲಿ ಚಂದ್ರನಿಟ್ಟು ಬರೋಣ

        ಕವಿಸಾಲು     ಎಲೆ ಉದುರುವ ಕಾಲ ಚಳಿಯ ದಾಟಿ ಬಿಸಿಲಿಗೆ ಮೈ ಒಡ್ಡುವ ಸಮಯ ಮರಗಳು ಸಹ ಎಲೆ ಉದುರಿಸಿ ಬೆತ್ತಲಾಗಿವೆ ಗೆಳತಿ ಇದು ವಿರಹ ಕಾಲ ಎಲ್ಲ ಮರಗಳು ಎಲೆಯುದುರಿಸಿ ಬೆತ್ತಲಾಗಿರಲು ಮಾವು ಮಾತ್ರ ಮೈತುಂಬಿಕೊಂಡಿದೆ ಹರೆಯ ಮಾಸಿದವರ ಹಾಗೂ ತುಂಟ ಹುಡುಗಿಯರ ಮಧ್ಯೆ ಬಸಿರಾದವಳಂತೆ ಚಳಿಗಾಲದಿ ಮದುವೆಯಾಗಿ ಅಪ್ಪಿ ಮುದ್ದಾಡಿ ಮೈಥುನಕೆ ಮನಸೋತು, ಹತ್ತಾರು ಆಟಗಳಿಗೆ ತೆರೆದುಕೊಂಡು, ಮುಟ್ಟುನಿಂತು ಬಯಕೆ ...

 • 4 days ago No comment

  ವೆಜ್ಜಾ? ನಾನ್-ವೆಜ್ಜಾ?

        ಸುಮಾರು ಒಂದು ತಿಂಗಳಿನಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದೇನೆ. ಆದರೆ ಇನ್ನೂ ಮನೆ ಸಿಕ್ಕಿಲ್ಲ. ಸಿಗದೆ ಇರುವುದಕ್ಕೆ, ನನಗನ್ನಿಸಿದಂತೆ ಮೂರು ಕಾರಣಗಳು. ಮೊದಲನೆಯದ್ದು ನಮ್ಮನೆಯಲ್ಲಿ ಒಂದು ನಾಯಿಯಿದೆ. ನಾಯಿ ಮಾಲೀಕರಿಗೆ ಮನೆ ಮಾಲಿಕರು ಮನೆ ಕೊಡುವುದಿಲ್ಲ. ನಮಗೆ ಮನೆಯೊಡೆಯನಿಗಿಂತಲೂ ನಮ್ಮ ಮನೆ ನಾಯಿಯೇ ಹೆಚ್ಚು; ಒಂದು ಭಾವನಾತ್ಮಕ ಸನ್ನಿವೇಶದಲ್ಲಿ ನನ್ನ ಗಂಡ, ‘ನಿಮಗ್ಯಾರಿಗೂ ನನ್ನ ಆಸ್ತಿಯಲ್ಲಿ ಬಿಡಿಗಾಸನ್ನೂ ಕೊಡುವುದಿಲ್ಲ. ಎಲ್ಲವನ್ನೂ ಚುಕ್ಕಿ ಹೆಸರಿಗೆ ಬರೆದಿಟ್ಟು ಸತ್ತು ...

 • 4 days ago One Comment

  ಅವರ ಕೆಲಸವಾದರೆ ಆಯಿತು!

                हमको जो ताने देते है हम खोये हैं इन रंगरलियों में हमने उनको भी छुप छुप के आते देखा इन गलियों में ये सच है झूठी बात नहीं तुम बोलो ये सच है ना ನಿಜ ತಾನೇ ಇದು, ಯಾವುದು? ಅದೇ… ಆಚಾರ ಹೇಳೋದು ಬದನೆಕಾಯಿ ...


Editor's Wall

 • 20 March 2018
  10 hours ago No comment

  ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…

    ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.   ಅತಿಥಿ | ಬಿ ಲಕ್ಷ್ಮಣ್     ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ...

 • 16 March 2018
  4 days ago No comment

  ಹೇಗೆಲ್ಲ ಎಡವಿ ಬಿದ್ದಾಳೆಂದು…

        ಲೀಲಾಧರ ಮಂಡಲೋಯಿ ಕಾವ್ಯ       ಲೀಲಾಧರ ಮಂಡಲೋಯಿ, ಹಿಂದಿಯ ಪ್ರಸಿದ್ಧ ಕವಿ. ಕಾವ್ಯ, ಸಂಸ್ಕೃತಿಗೆ ಸಂಬಂಧಿಸಿದಂತೆ 35ಕ್ಕೂ ಹೆಚ್ಚು ಕೃತಿಗಳನ್ನು ಬರೆದವರು. ಹಲವಾರು ರಾಷ್ಟ್ರೀಯ ಪುರಸ್ಕಾರಗಳಿಗೆ ಪಾತ್ರರಾದವರು. ಸಣ್ಣಕಥೆಗಳನ್ನಾಧರಿಸಿದ 300ಕ್ಕೂ ಅಧಿಕ ಟೆಲಿಫಿಲಂಗಳನ್ನೂ ನಿರ್ಮಿಸಿದ್ದಾರೆ. ಬದುಕನ್ನು ಕುರಿತ ಆಳದ ಗ್ರಹಿಕೆಗಳನ್ನು ಕಂಡಿರಿಸುವ ಅವರ ಕಾವ್ಯ, ಹೇಗೆ ಹಣ ನಮ್ಮ ಸಂದರ್ಭವನ್ನು ತೀರ್ಮಾನಿಸುವ ಬಲವಾಗುತ್ತಿದೆ ಮತ್ತು ಮೌಲ್ಯಗಳನ್ನು ಮೆಟ್ಟಿ ಅಪಮೌಲ್ಯವೆಂಬುದು ಮುನ್ನೆಲೆಗೆ ಬಂದು ...

 • 16 March 2018
  5 days ago No comment

  ನಾ ಹಾಸಿಗೆ ಹಿಡಿದಾಗ

      ಗಝಲ್         | ನೀನೊಮ್ಮೆ ಬಂದಿದ್ದರೆ ತೊಳೆಯುತ್ತಿದ್ದೆ ನಿನ್ನ ಪಾದಗಳನು…   ತುಸುತುಸುವೇ ಮುಕ್ಕಾಗುತ್ತೇನೆ ನಾ ಹಾಸಿಗೆ ಹಿಡಿದಾಗ ಇನಿಸಿನಿಸೇ ಮನುಷ್ಯಳಾಗುತ್ತೇನೆ ನಾ ಹಾಸಿಗೆ ಹಿಡಿದಾಗ ಎಷ್ಟು ಹಾರಿದ್ದೆ ಮೇಲೆ, ಏರಿಯೇ ಏರಿದ್ದೆ ಮೇರೆ ಮೀರಿ ಬರಿದೆ ತರಗೆಲೆಯಾಗಿ ಉಳಿದಿದ್ದೇನೆ ನಾ ಹಾಸಿಗೆ ಹಿಡಿದಾಗ ಬರಿಗಣ್ಣಲ್ಲೇ ನೋಡುತ್ತಿದ್ದೆ ಮುಪ್ಪೆರಗಿ ಕನ್ನಡಕದಲೂ ಕಂಡಿದ್ದೆ ನಿಚ್ಚಳವಾಗಿ ಕಾಣತೊಡಗಿದ್ದು ಮಾತ್ರ ನಾ ಹಾಸಿಗೆ ಹಿಡಿದಾಗ ಓಡುತ್ತಿತ್ತು ...

 • 15 March 2018
  5 days ago No comment

  ನಿಕಷಕ್ಕೆ ಒಡ್ಡದೇ ನಂಬಿಬಿಡಬಹುದೇ ಎಲ್ಲವನೂ?

                      ನಮ್ಮಲ್ಲಿನ ಧಾರ್ಮಿಕ ಆಚರಣೆಗಳನ್ನು ನಂಬಿಕೆಯಂದಾದರೂ ಕರೆಯಿರಿ, ಮೌಢ್ಯವೆಂದಾದರೂ ಕರೆಯಿರಿ ಪ್ರಶ್ನಿಸುವ ಮನೋಭಾವವೇ ನಮ್ಮಲ್ಲಿ ಕ್ಷೀಣಿಸಿ ಅಥವಾ ಸತ್ತು ಹೋದಂತೆ ಈ ದಿನಗಳಲ್ಲಿ ಭಾಸವಾಗುತ್ತಿದೆ. ಎಲ್ಲಿ ಪ್ರಶ್ನಿಸುವ ಮನೋಭಾವ ಇಲ್ಲವೋ ಅಲ್ಲಿ ವೈಜ್ಞಾನಿಕ ಮನೋಭಾವವೂ ಉದಯಿಸಲು ಸಾಧ್ಯವಿಲ್ಲ. ಕೊನೆಯದಾಗಿ ಮಾನವೀಯವಾಗಿ ನಡೆದುಕೊಳ್ಳುವುದೂ ಸಾಧ್ಯವಾಗುವುದಿಲ್ಲ.   ಬುದ್ಧಿವಂತರ ಜಿಲ್ಲೆ ಮಂಗಳೂರಿನ ಕಡಬ ಸಮೀಪದ ಕೋಯಿಲಗುಡ್ಡದಲ್ಲಿ ವೃದ್ಧನೊಬ್ಬ ಕುಸಿದು ...

 • 11 March 2018
  1 week ago No comment

  ಚಕ್ರವರ್ತಿಯ ಮೌನ!

        ಕವಿಸಾಲು       ಚೆಂದದ ಬಿಳಿಬಿಳಿ ಬಟ್ಟೆಯಲಿ ಅಷ್ಟೆತ್ತರದ ಸಿಂಹಾಸನದಲ್ಲಿ ಕೂತ ಮೌನಿ ಚಕ್ರವರ್ತಿಯ ಮುಖದಲ್ಲಿ ಮಾಸದ ಮಂದಹಾಸ! ಮಾತಾಡದ ಪ್ರಭುವಿನ ಭಟ್ಟಂಗಿಗಳು ರಾಜಮುದ್ರೆಯ ಹಿಡಿದು ಹೆದರಿಸುತ್ತಿದ್ದಾರೆ! ರಾಜಾಜ್ಞೆಯ ಪಾಲಿಸದವರ ತಲೆದಂಡ ಶತಃಸಿದ್ಧ! ಜನರೀಗ ಭಯಬೀತರಾಗಿದ್ದಾರೆ: ತಮಗೆ ಬೇಕಾದ್ದನ್ನು ಉಣ್ಣಲು ಉಡಲು ನುಡಿಯಲು ನಡೆಯಲು! ಮತಾಂಧ ಪಡೆಯ ಕಾಲಾಳುಗಳಿಗೀಗ ಹೊಸ ಉನ್ಮಾದ ದಣಿಯ ಮೆಚ್ಚಿಸುವ ಸಲುವಾಗಿ ಸಾರುತ್ತಿದ್ದಾರೆ ಕವಿತೆ ಬರೆದವನಿಗದರರ್ಥವ ತಿಳಿಸಲು ಆದೇಶವಾಗಿದೆ ...