Share

ವೆಜ್ಜಾ? ನಾನ್-ವೆಜ್ಜಾ?
ಉಷಾ ಕಟ್ಟೆಮನೆ ಕಾಲಂ

 

 

 

ಸುಮಾರು ಒಂದು ತಿಂಗಳಿನಿಂದ ಬಾಡಿಗೆ ಮನೆಯನ್ನು ಹುಡುಕುತ್ತಿದ್ದೇನೆ. ಆದರೆ ಇನ್ನೂ ಮನೆ ಸಿಕ್ಕಿಲ್ಲ. ಸಿಗದೆ ಇರುವುದಕ್ಕೆ, ನನಗನ್ನಿಸಿದಂತೆ ಮೂರು ಕಾರಣಗಳು.

ಮೊದಲನೆಯದ್ದು ನಮ್ಮನೆಯಲ್ಲಿ ಒಂದು ನಾಯಿಯಿದೆ. ನಾಯಿ ಮಾಲೀಕರಿಗೆ ಮನೆ ಮಾಲಿಕರು ಮನೆ ಕೊಡುವುದಿಲ್ಲ.

ನಮಗೆ ಮನೆಯೊಡೆಯನಿಗಿಂತಲೂ ನಮ್ಮ ಮನೆ ನಾಯಿಯೇ ಹೆಚ್ಚು; ಒಂದು ಭಾವನಾತ್ಮಕ ಸನ್ನಿವೇಶದಲ್ಲಿ ನನ್ನ ಗಂಡ, ‘ನಿಮಗ್ಯಾರಿಗೂ ನನ್ನ ಆಸ್ತಿಯಲ್ಲಿ ಬಿಡಿಗಾಸನ್ನೂ ಕೊಡುವುದಿಲ್ಲ. ಎಲ್ಲವನ್ನೂ ಚುಕ್ಕಿ ಹೆಸರಿಗೆ ಬರೆದಿಟ್ಟು ಸತ್ತು ಹೋಗ್ತೀನಿ’ ಎಂದು ಬೆದರಿಕೆ ಹಾಕಿದ್ದ. ನಿಮ್ಮೆಲ್ಲರ ಅವಗಾಹನೆಗಾಗಿ; ಚುಕ್ಕಿ ಎಂದರೆ ನಾವು ಸಾಕಿದ ಪಗ್ ನಾಯಿಯ ಹೆಸರು. ಅನುಮಾನವೇ ಇಲ್ಲ; ಅವಳು ನಮ್ಮನೆಯ ಸದಸ್ಯಳು. ಇದು ನಾವೆಲ್ಲರೂ ಒಕ್ಕೊರಲಿನಿಂದ ಒಪ್ಪಿಕೊಂಡ ಸತ್ಯ. ಅವಳಿಗೆ ತನ್ನ ಆಸ್ತಿಯೆಲ್ಲವನ್ನು ಬರೆದುಕೊಡುತ್ತೇನೆಂದು ನನ್ನ ಗಂಡ ಹೇಳಿದ್ದಕ್ಕೆ ನಮ್ಮ ತಕರಾರಿರಲಿಲ್ಲ. ಆದರೆ ಅವನು ಏನನ್ನು ಬರೆದುಕೊಡುತ್ತಾನೆ ಎಂಬುದು ನಮಗೆಲ್ಲಾ ಕುತೂಹಲ. ಅದಕ್ಕಿಂತಲೂ ದೊಡ್ಡ ಕುತೂಹಲ ಅವನು ಮಾಡಿಟ್ಟಿರಬಹುದಾದ ಆಸ್ತಿ ಏನು? ಸ್ಥಿರ ಅಸ್ತಿ. ಓಬಿರಾಯನ ಕಾಲದ ಒಂದು ಮುರುಕು ಮನೆ ಬಿಟ್ಟರೆ ಬೇರೆ ಆಸ್ತಿಯಿಲ್ಲ. ಚರ ಆಸ್ತಿ ಎಂದರೆ ಯಾವುದರಲ್ಲೂ ಹಣ ಹೂಡಿಕೆ ಮಾಡಿಲ್ಲ. ಕನಿಷ್ಠ ಒಂದು ಎಲ್ಲೈಸಿ ಪಾಲಿಸಿಯೂ ಇಲ್ಲ. ಆರೋಗ್ಯ ವಿಮೆಯೂ ಇಲ್ಲ. ಮದುವೆಯಾಗಿ ಮೂರು ದಶಕಗಳಾಗುತ್ತಾ ಬಂತು. ಒಂದು ಗ್ರಾಂ ಚಿನ್ನವನ್ನೂ ಹೆಂಡ್ತಿ ಮಕ್ಕಳಿಗೆ ಮಾಡಿಸಿಕೊಟ್ಟಿಲ್ಲ. ಇಷ್ಟಕ್ಕೂ ಅವನು ‘ಆಸ್ತಿ’ ಎಂದು ಯಾವುದನ್ನು ಪರಿಗಣಿಸಿದ್ದಾನೆ?

ಎರಡನೆಯದ್ದು ನೀವು ವೆಜ್ಜಾ ನಾನ್ವೆಜ್ಜಾ ಎಂಬ ಮನೆಮಾಲೀಕರ ಪ್ರಶ್ನೆ. ಇದು ನನ್ನನ್ನು ತಬ್ಬಿಬ್ಬುಗೊಳಿಸುವುದುಂಟು!

ತಬ್ಬಿಬ್ಬು ಆಗಲೂ ಎರಡು ಕಾರಣಗಳುಂಟು; ಒಂದು, ಮನೆ ಮಾಲೀಕರು ನನ್ನ ಜಾತಿ ಯಾವುದೆಂದು ಪರೋಕ್ಷವಾಗಿ ಕೇಳುತ್ತಿರಬಹುದೇ? ತಾವು ಶ್ರೇಷ್ಟ ಜಾತೀಯವರು ಎಂಬ ಮೇಲರಿಮೆ ಅವರ ಹಾವಭಾವದಲ್ಲಿದೆಯೇ ಎಂದು ಪೆಚ್ಚಾಗಿ ನಿಂತುಕೊಳ್ಳುತ್ತೇನೆ. ಎರಡನೆಯದಾಗಿ ಏನು ಉತ್ತರ ಕೊಡುವುದು, ಹೇಗೆ ವಿವರಿಸುವುದು ಎಂಬ ಗೊಂದಲ. ಕಾರಣ, ನನ್ನ ಗಂಡ ಮೊಟ್ಟೆ ಬಿಡಿ ಅಣಬೆಯನ್ನೂ ತಿನ್ನದ ಮಹಾಬ್ರಾಹ್ಮಣ. ಮಗ ಹಾಲಿನ ಉತ್ಪನ್ನಗಳನ್ನು ಕೂಡಾ ತಿನ್ನದ್ ವೀಗನ್. ಮಗಳು ಕೇವಲ ಅಂಜಲ್ ಮೀನು ಮಾತ್ರ ತಿನ್ನುವ ಮೀನಾಕ್ಷಿ. ನಾನು, ನನ್ನ ತವರು ಮನೆಯಲ್ಲಿ ಮಾತ್ರ ಮಾಡುವ ನಾಟಿ ಕೋಳಿ ಮತ್ತು ಸಮುದ್ರ ಮೀನು ತಿನ್ನುವ ಸೆಲೆಕ್ಟಿವ್ ನಾನ್ ವೆಜಿಟೇರಿಯನ್. ಹೋಟೇಲ್ ನಲ್ಲಿ ತಿನ್ನುವುದಿಲ್ಲ. ಮನೆಯಲ್ಲಿ ಮಾಡುವುದಿಲ್ಲ. ಮನೆಯಲ್ಲಿ ಮಾಡದಿರುವುದಕ್ಕೆ ಒಂದು ಕಾರಣವಿದೆ.

ನಮ್ಮ ಅಮ್ಮನಿಗೆ ತನ್ನ ಬ್ರಾಹ್ಮಣ ಅಳಿಯನ ಮೇಲೆ ತುಂಬಾ ಗೌರವ, ಪ್ರೀತಿ. ಮನೆಯಲ್ಲಿ ಮೀನು ಮಾಂಸ ಮಾಡಬಾರದು ಎಂದು ಹೇಳಿದ್ದರು. ನಾನು ವರ್ಷಕ್ಕೊಂದೆರಡು ಬಾರಿ ಒಬ್ಬಳೇ ಮೀನು ಪ್ರೈ ಮಾಡಿಕೊಂಡು ತಿನ್ನುತ್ತಿದ್ದೆ. ಒಮ್ಮೆ ಈ ಬಗ್ಗೆ ತವರು ಮನೆಯಲ್ಲಿ ಮಾತುಕತೆ ನಡೆಯುತ್ತಿತ್ತು. ಆಗ ನನ್ನ ಗಂಡ ನಗುತ್ತಾ ‘ಮೊದಲೇ ಹೆಣ. ಅದನ್ನೂ ಮೂರು ದಿನ ಇಟ್ಕೊಂಡು ತಿನ್ತಾರೆ ಈ ತಾಯಿಮಕ್ಕಳು’ ಎಂದು ತಮಾಶೆ ಮಾಡಿದ್ದ. ನನ್ನ ಅಮ್ಮ ಇದನ್ನು ಗಂಭೀರವಾಗಿ ತಗೊಂಡು ಆಮೇಲೆ ನಂಗೆ ಕ್ಲಾಸ್ ತಗೊಂಡಿದ್ದರು. ಗಂಡನಲ್ಲಿ ನಾನು ಈ ಬಗ್ಗೆ ತಕರಾರು ತೆಗೆದಾಗ ‘ಮಾರಾಯ್ತಿ. ನೀನು ಮೀನು ಕಾಯಿಸಿದರೆ ಇಡೀ ಮನೆ ವಾಸನೆ ಬರುತ್ತದೆ, ಆ ವಾಸನೆ ನನಗೆ ವಾಕರಿಕೆ ಬರುತ್ತೆ’ ಅಂದ. ಅವನಿಗೆ ವಾಸನೆ, ನಂಗೆ ಸುವಾಸನೆ! ಆದರೇನು ಮಾಡುವುದು. ಹೊಂದಾಣಿಕೆಯೇ ಸಂಸಾರ. ಮನೆಯಲ್ಲಿ ಮೀನು ಪದಾರ್ಥ ಮಾಡುವುದನ್ನು ಬಿಟ್ಟೆ. ತಿನ್ನಬೇಕೆನಿಸಿದಾಗ ಗಂಡನಿಗೆ ಪೋನ್ ಮಾಡುತ್ತೇನೆ. ಅವನು ಪಾರ್ಸೆಲ್ ತಗೊಂಡು ಬರುತ್ತಾನೆ. ಅದು ಈಗಲೂ ಮುಂದುವರಿದಿದೆ.

ಹಾಗಾಗಿ ಸಮಯ ಸಂದರ್ಭ ನೋಡಿಕೊಂಡು ಒಮ್ಮೆ ನನ್ನನ್ನು ವೆಜ್ ಅಂದರೆ ಇನ್ನೊಮ್ಮೆ ನಾನ್ವೆಜ್ ಅಂದುಬಿಡುತ್ತೇನೆ. ಆದರೆ ನಾನು ನೋಡಲು ಕಪ್ಪಗೆ ಇರುವುದರಿಂದಲೋ ಅಥವಾ ಅವರು ಹುಡುಕುವ ಮುತ್ತೈದೆತನದ ಲಕ್ಷಣಗಳು ನನ್ನಲ್ಲಿ ಕಾಣಿಸದೆ ಇರುವುದರಿಂದಲೋ ಮನೆ ಓನರ್ ಗಳು ನನ್ನನ್ನು ಒಂಥರಾ ಗುಮಾನಿಯಿಂದಲೇ ದಿಟ್ಟಿಸಿ ನೋಡುತ್ತಾರೆ.

ಮೂರನೆಯದಾಗಿ ನಾನು ಹುಡುಕುತ್ತಿರುವುದು ತ್ರಿಬ್ಬಲ್ ಬೆಡ್ ರೂಮಿನ ಮನೆಯನ್ನು. ನಾವು ಈಗಿರುವುದು ಎರಡು ಬೆಡ್ ರೂಮಿನ ಮನೆಯಲ್ಲಿ. ಒಂದು ರೂಮಿನಲ್ಲಿ ನಾವು ದಂಪತಿಯಿದ್ದರೆ ಇನ್ನೊಂದು ರೂಮಿನಲ್ಲಿ ನಮ್ಮ ಇಬ್ಬರು ಮಕ್ಕಳಿರುತ್ತಿದ್ದರು, ತುಂಬಾ ಸರಳವಾದ ಜೀವನಶೈಲಿ ನಮ್ಮದು. ಆದರೆ ಮಕ್ಕಳು ಬೆಳೆಯುತ್ತಾ ಬಂದಂತೆ ತಮಗೆ ಪ್ರತ್ಯೇಕ ರೂಮ್ ಬೇಕೆಂದು ತಗಾದೆ ತೆಗೆಯುತ್ತಾ ಬಂದರು. ನಾವು ಅದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ಕೊನೆಗೆ ನನ್ನ ಮಗ ತಾನು ಪಿಯೂಸಿಗೆ ದ.ಕಕ್ಕೆ ಹೋಗುತ್ತೇನೆ ಎಂದು ಹಟ ಮಾಡಿ ಅಲ್ಲಿಗೇ ಹೋದ. ಅಕ್ಕನಿಗೆ ಪ್ರತ್ಯೇಕ ರೂಮ್ ಸಿಕ್ಕಿತು. ಮಗ ಅಲ್ಲಿಯೇ ಡಿಗ್ರಿಯೂ ಮುಗಿಸಿದ. ಈಗ ಸ್ನಾತಕೋತ್ತರ ಪದವಿಗಾಗಿ ಪಾಂಡಿಚೇರಿಗೆ ಹೋಗಿದ್ದಾನೆ. ಅಂದರೆ ಆತ ಎಸ್ಸೆಲ್ಸಿ ಮುಗಿಸಿದ ಮೇಲೆ ಮನೆಯಲ್ಲಿ ಇರಲೇ ಇಲ್ಲ. ಮಗಳು ಈ ಮಧ್ಯೆ ದೆಹಲಿ, ಲಂಡನ್ ಎಂದು ಮನೆಯಿಂದ ದೂರವೇ ಉಳಿದಳು. ಈಗ ಇರುವ ಒಂದಷ್ಟು ಕಾಲವಾದರೂ ಜೊತೆಯಲ್ಲಿ ಕಾಲ ಕಳೆಯೋಣ ಅಂತ ತ್ರಿಬ್ಬಲ್ ರೂಮಿನ ಮನೆಗಾಗಿ ಹುಡುಕಾಟ ಆರಂಭಿಸಿದ್ದೇನೆ.

ಇದರ ಮಧ್ಯೆ ಇನ್ನೂ ಒಂದು ತೊಡಕಿದೆ. ನಮ್ಮ ಮನೆಯಲ್ಲಿ ಪ್ರತಿಯೊಬ್ಬರಿಗೂ ಅವರವರದೇ ಆದ ಲೈಬ್ರರಿಯಿದೆ. ಒಟ್ಟು ಸೇರಿಸಿದರೆ ಅದೇ ಒಂದು ರೂಮನ್ನು ಆಕ್ರಮಿಸುವಷ್ಟು ವಿಸ್ತಾರವಾಗಿದೆ.
ಸಮಸ್ಯೆ ತುಂಬಾ ಇದ್ದಂತಿದೆ, ಮನೆ ಇನ್ನೂ ಸಿಕ್ಕಿಲ್ಲ. ಹುಡುಕಾಟ ಮುಂದುವರಿದಿದೆ.

ಉಷಾ ಕಟ್ಟೆಮನೆ

ಪತ್ರಕರ್ತೆಯಾಗಿ, ಅದಕ್ಕೂ ಮೊದಲು ಕನ್ನಡ ಉಪನ್ಯಾಸಕಿಯಾಗಿ ಕೆಲಸ ಮಾಡಿದವರು. ದೃಶ್ಯ ಮಾಧ್ಯಮಕ್ಕಾಗಿಯೂ ಕೆಲಸ ಮಾಡಿದ ಅನುಭವ. ಆದರೆ ಅವರು ಪರಿಚಿತರಾಗಿರುವುದು ತಮ್ಮ ವಿಶಿಷ್ಟ ಸಂವೇದನೆಯ ಬರವಣಿಗೆಯಿಂದಾಗಿ. ಕೆಲ ವರ್ಷಗಳಿಂದ ಕೃಷಿಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ದೇಶ ಸುತ್ತುವುದೆಂದರೆ ಇವರಿಗೆ ಅತ್ಯಂತ ಇಷ್ಟ. ‘ಪಾರಿಜಾತದ ಬಿಕ್ಕಳಿಕೆ’ ಅವರ ಪ್ರಕಟಿತ ಕೃತಿ.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  3 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...