Share

ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ…
ಕಾದಂಬಿನಿ

 

ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.

 

ಅತಿಥಿ | ಬಿ ಲಕ್ಷ್ಮಣ್

 

 

ಇಂದು ವಿಶ್ವ ಗುಬ್ಬಿದಿನ ಮಾತ್ರವಲ್ಲ; ಅಸೀಮ ಗುಬ್ಬಿ ಪ್ರೇಮಿಯ ದಿನವೂ ಹೌದು. ಬೆಳಿಗ್ಗೆ ಇಂದು ಗುಬ್ಬಿಗಳ ದಿನವೆಂದು ಪತ್ರಿಕೆಯಲ್ಲಿ ನೋಡಿ ಫೇಸ್ಬುಕ್ ತೆರೆದರೆ, ಗುಬ್ಬಿ ಸಂತತಿಯೇ ನಾಶವಾಗಿ ಹೋಗುತ್ತಿರುವ ದಿನಗಳಲ್ಲಿ ನೂರಾರು ಗುಬ್ಬಿಗಳಿಗೆ ಆಶ್ರಯದಾತರಾದ ಆತ್ಮೀಯ ಗೆಳೆಯ ಲಕ್ಷ್ಮಣ್ ಅವರ ಜನ್ಮದಿನವೂ ಇಂದೇ ಎಂದು ತಿಳಿದು ಬೆಕ್ಕಸ ಬೆರಗಾದೆ!

ಅಷ್ಟೇ ಅಲ್ಲ, ಇಂದು ಒಂದು ಪತ್ರಿಕೆಯಲ್ಲಿ ಪ್ರಕಟವಾದ ಗುಬ್ಬಿಯ ಫೋಟೋ ಕೂಡ ಅವರದೇ ಮನೆಯದು ಎಂದು ತಿಳಿದು ಮತ್ತೊಂದು ಅಚ್ಚರಿಯಾಯಿತು.

ಈ ಬೆರಗನ್ನು ಈ ಲೇಖನದ ಮುಖೇನ ನಿಮ್ಮೊಂದಿಗೆ ಹಂಚಿಕೊಳ್ಳದಿರಲಾರೆ.

ಗುಬ್ಬಿ ಕಾಗೆ ಕಥೆ ಕೇಳಿ ಬೆಳೆಯದ ಮಕ್ಕಳಿಲ್ಲ. ಚೀಂವ್ ಚೀಂವ್ ಗುಬ್ಬಿ ಹಾಡು ಹಾಡದ ವಿದ್ಯಾರ್ಥಿಗಳಿಲ್ಲ ಎನ್ನುವ ಕಾಲವೊಂದಿತ್ತು. ಪ್ರಸಿದ್ಧ ಕವಿ ರಮ್ಜಾನ್ ದರ್ಗಾರವರು ತಮ್ಮ ಕವಿತೆಯಲ್ಲಿ ‘ಬಂದೂಕಿನ ನಳಿಕೆಯಲ್ಲಿ ಗುಬ್ಬಿಗಳು ಗೂಡು ಕಟ್ಟಲಿ’ ಎಂದು ಆಶಿಸಿದ್ದ ಕಾಲವೂ ಒಂದಿತ್ತು. ಅದು ಗುಬ್ಬಿಗಳು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದಾಗಿನ ಮಾತದು. ಆದರೆ ಬಂದೂಕಿನ ನಳಿಕೆಯಲ್ಲಿ ಗೂಡು ಕಟ್ಟುವುದಕ್ಕೆ ಇರಲಿ ಇಂದಿನ ಮಕ್ಕಳಿಗೆ ಇದು ಗುಬ್ಬಿಯೆಂದು ತೋರಿಸಲೂ ಗುಬ್ಬಿಗಳಿಲ್ಲ. ಗುಬ್ಬಿಗಳು ನಾಶವಾಗುತ್ತಿರುವುದಕ್ಕೆ ಮೊಬಾಯಿಲ್ ಟವರ್ ಗಳು ಕಾರಣ ಎನ್ನುವವರಿದ್ದಾರೆ. ಆದರೆ ಇದು ತಪ್ಪೆಂದು ಅಥವಾ ಅದು ಪೂರ್ತಿ ಸತ್ಯವಲ್ಲ ಎಂದು ನನ್ನ ಗ್ರಹಿಕೆ.

ಹಿಂದೆಲ್ಲ ಹುಲ್ಲಿನ ಮನೆಗಳಿರುತ್ತಿದ್ದವು, ಆಗ ಪ್ರತಿಮನೆಗಳಲ್ಲೂ ಗುಬ್ಬಿ ಗೂಡುಕಟ್ಟುತ್ತಿದ್ದವು. ಮುಂದೆ ಹಂಚಿನ ಮನೆಗಳು ನಿರ್ಮಾಣವಾಗತೊಡಗಿದವು. ಗುಬ್ಬಿಗಳು ಅಲ್ಲೂ ಹೇಗೋ ಹೊಂದಾಣಿಕೆ ಮಾಡಿಕೊಂಡಿದ್ದವು. ಈಗಂತೂ ಸಂಪೂರ್ಣ ಕಾಂಕ್ರೀಟ್ ಕಟ್ಟಡಗಳಾದವು. ಆಗ ಅವಕ್ಕೆ ನೆಲೆಯೇ ಇಲ್ಲವಾಯಿತು. ಭತ್ತ ಬೆಳೆಯುವವರು ವಾಣಿಜ್ಯ ಬೆಳೆಗಳ ಕಡೆ ಹೊರಳಿದರು. ಅಕ್ಕಿ ಮಿಲ್ಲುಗಳು ಕದ ಮುಚ್ಚಿಕೊಂಡು ಕ್ರಮೇಣ ಕೆಡವಲ್ಪಟ್ಟು ಆ ಜಾಗವನ್ನು ಮತ್ತಿನ್ನು ಯಾವುದೋ ಕಟ್ಟಡಗಳು ಆಕ್ರಮಿಸಿದವು. ಗುಬ್ಬಿಗಳು ಗೂಡು ಕಟ್ಟಲೆಂದು ಹೊತ್ತುತರುತ್ತಿದ್ದ ಹುಲ್ಲು ಬೆಳೆಯುವ ಕಾಡು, ಬಯಲು, ಬೆಟ್ಟ, ಹೊಲ ಗದ್ದೆಗಳು ಲೇಔಟಾಗಿ, ಸೈಟುಗಳಾಗಿ, ಬಂಗಲೆಗಳೆದ್ದು ನಿಂತವು. ಹಕ್ಕಿಸಂಕುಲಕ್ಕೆ ನೀರುಣಿಸುತ್ತಿದ್ದ ಕೆರೆ ಕುಂಟೆಗಳು ಮುಚ್ಚಿಕೊಂಡವು, ಮುಚ್ಚಳ ಹಾಕಿಕೊಂಡ ಸಿಂಟ್ಯಾಕ್ಸ್ ನೀರಿನ ಟ್ಯಾಂಕಿಗಳು ಹಕ್ಕಿಗಳಿಗೆ ನೀರಿಲ್ಲೆಂದವು. ಮನೆಯ ಹಿಂದೆ ಮುಂದೆ ಇರುತ್ತಿದ್ದ ಸಣ್ಣ ಪುಟ್ಟ ಹಿತ್ತಲುಗಳೂ ಮಾಯವಾದವು. ಇಂಥಲ್ಲಿ ಕಾಗೆಗಳು, ಪಾರಿವಾಳಗಳು ಹೇಗೋ ಜೀವ ಹಿಡಿದುಕೊಂಡವು ಎನ್ನೋಣ. ಗುಬ್ಬಿಗಳ ಜೀವನ ವಿಧಾನಕ್ಕೆ ಒಗ್ಗದ ಪರಿಸರ ನಿರ್ಮಾಣವಾಗುತ್ತ ಹೋದಂತೆ ಗುಬ್ಬಿಗಳೂ ನಾಶಹೊಂದುತ್ತ, ಅವುಗಳ ನಾಶಕ್ಕೆ ನೇರಾ ನೇರಾ ಹೊಣೆಗಾರನಾದ ಮನುಷ್ಯ ಆ ಆಪಾದನೆಯನ್ನು ಬಹಳ ಜಾಣತನದಿಂದ ಮೊಬಾಯಿಲ್ ಟವರ್ ಮೇಲೆ (ಅದೂ ತನ್ನದೇ ಸೃಷ್ಟಿಯಾಗಿದ್ದರೂ ಕೂಡ) ಎತ್ತಿಹಾಕುತ್ತ ಜಾರಿಕೊಳ್ಳತೊಡಗಿದ್ದ! ಇಷ್ಟಲ್ಲದೆ ಗುಬ್ಬಿಗಳ ನಾಶಕ್ಕೆ ಗ್ಲೋಬಲ್ ವಾರ್ಮಿಂಗ್ ನಂತಹ ಸಂಗತಿಗಳೂ ಆಹಾರಧಾನ್ಯಗಳಿಗೆ ಸಿಂಪಡಿಸುವ ಕೀಟನಾಶಕಗಳೂ ಕಾರಣವಾಗಿದ್ದಿರಬಹುದು.

ನನಗೆ ಫೇಸ್ಬುಕ್ಕಿನಲ್ಲಿ ಗೆಳೆತನಕ್ಕೆ ಘನತೆ ತಂದುಕೊಟ್ಟು, ಅತ್ಯಂತ ಆಪ್ತರಾದ ಕೆಲ ಗೆಳೆಯರಲ್ಲಿ ಬಿ. ಲಕ್ಷ್ಮಣ್ ಒಬ್ಬರು. ಕಟ್ಟಡಗಳ ಪೇಂಟಿಂಗ್ ಗುತ್ತಿಗೆದಾರರಾಗಿರುವ ಲಕ್ಷ್ಮಣ್ ಅವರಿಗೆ ಬಾಲ್ಯದಿಂದಲೂ ಗುಬ್ಬಿಗಳ ಮೇಲೆ ಅಮಿತ ಪ್ರೇಮ. ಸುಮಾರು ಹದಿನೈದು ವರ್ಷಗಳಿಗೂ ಹಿಂದೆ ದಾವಣಗೆರೆಯ ಲೇಬರ್ ಕಾಲನಿಯ ಹಳೆ ಮನೆಯಲ್ಲಿ ಅವರು ವಾಸವಿದ್ದಾಗ ಅಲ್ಲಿ ಹೊಲಗಳಿದ್ದು ಸಾಕಷ್ಟು ಗುಬ್ಬಿಗಳಿದ್ದವು. ಕ್ರಮೇಣ ಹೊಲಗಳನ್ನು ಸೈಟುಗಳನ್ನಾಗಿ ಪರಿವರ್ತಿಸಿದ ಮೇಲೆ ಅಲ್ಲಿನ ಗುಬ್ಬಿಗಳು ತಾವು ಕಳೆದುಕೊಂಡವು. ಅಲ್ಲಿಂದ ಅವು ಭಗತ್ ಸಿಂಗ್ ನಗರಕ್ಕೆ ವಲಸೆ ಹೋಗಿ ಅಲ್ಲಿದ್ದ ಅಕ್ಕಿ ಮಿಲ್ಲುಗಳಲ್ಲಿ ವಾಸಿಸತೊಡಗಿದವು. ನಂತರ ಈ ಅಕ್ಕಿಮಿಲ್ಲುಗಳಿಗೂ ಸಂಚಕಾರ ಬಂದು ಅಲ್ಲಿ ಐಸ್ ಫ್ಯಾಕ್ಟ್ರಿ ಆಯಿತು. ಗುಬ್ಬಿಗಳಿಗದು ಅಲ್ಪಕಾಲದ ನೆಲೆಯಾಯಿತಷ್ಟೇ. ಅಷ್ಟು ಹೊತ್ತಿಗೆ ಲಕ್ಷ್ಮಣ್ ಅವರು ದಾವಣಗೆರೆಯ ಬೈಪಾಸ್ ರಸ್ತೆಯ ಎಸ್.ಎಸ್. ಹೈಟೆಕ್ ಆಸ್ಪತ್ರೆಯ ಹಿಂದಿರುವ ಎಸ್.ಓ.ಜಿ. ಕಾಲನಿಯಲ್ಲಿ ವಾಸ ಆರಂಭಿಸಿದರು. ಆಗ ಅಲ್ಲಿ ಗುಬ್ಬಿಗಳೇ ಇರಲಿಲ್ಲ. ಅಸೀಮ ಗುಬ್ಬಿಪ್ರೇಮಿಯಾಗಿದ್ದ ಲಕ್ಷ್ಮಣ್ ಅವರಿಗೆ ಇದು ಸಹಿಸಲೇ ಆಗಲಿಲ್ಲ.

ಆಗ ಅವರು ಮಾಡಿದ ಪ್ರಯೋಗ ಪ್ರತಿಯೊಬ್ಬ ಹಕ್ಕಿ ಪ್ರೇಮಿಗೂ ಮಾದರಿ ಎನಿಸುವಂಥದ್ದು. ಪ್ಲೈವುಡ್ಡಿನ ಬಾಕ್ಸುಗಳನ್ನು ಮಾಡಿ ಅದರಲ್ಲಿ ಕೃತಕ ಗುಬ್ಬಿಗಳನ್ನು ಇರಿಸಿದರು. ಎಲ್ಲೋ ಹೇಗೋ ಅಪರೂಪಕ್ಕೆ ಹಾರಾಡುವ ಗುಬ್ಬಿಗಳು ಇದನ್ನು ಕಂಡು ಗೂಡೊಳಗಿನ ಕೃತಕ ಗುಬ್ಬಿಗಳನ್ನು ಕಚ್ಚಿ ಉರುಳಿಸಿ ತಮ್ಮ ವಾಸ ಆರಂಭಿಸಿದವು. ನಂತರ ತಮ್ಮ ಮಲಗುವ ಕೋಣೆಯಲ್ಲೂ ಗುಬ್ಬಿವಾಸಕ್ಕೆ ವ್ಯವಸ್ಥೆಯಾಯಿತು. ನಂತರ ಲಕ್ಷ್ಮಣ್ ಕೆಇಬಿಯವರ ಮೀಟರ್ ಬೋರ್ಡಿನ ಬಾಕ್ಸಿನಲ್ಲಿ ಒಂದು ತೂತು ಕೊರೆದಿಟ್ಟರು. ಗುಬ್ಬಿಗಳು ಅಲ್ಲೂ ವಾಸಿಸತೊಡಗಿದವು. ಆಮೇಲೆ ಅದರ ಪಕ್ಕದಲ್ಲೇ ಕಿಟಕಿಯ ಬಳಿ ಒಂದು ತೂತು ಕೊರೆದರು. ಅಲ್ಲೂ ಗುಬ್ಬಿ ಗೂಡು ಕಟ್ಟಿದವು.

ಸಾಮಾನ್ಯವಾಗಿ ಗೇಟಿನಲ್ಲಿ ಪೋಸ್ಟ್ ಹಾಕಲು ಬಳಸುವ ಬಾಕ್ಸುಗಳನ್ನು ಇವರು ಗೋಡೆಗಳಲ್ಲಿ ತೂಗುಬಿಟ್ಟರು. ಈ ವ್ಯವಸ್ಥೆ ಏನೇನೂ ಸಾಲದು ಎಂದು ಭಾವಿಸಿದ ಗುಬ್ಬಿಗಳು ನೇರ ಸ್ನಾನದ ಕೋಣೆ, ದೇವರ ಕೋಣೆಗಳನ್ನೂ ಹೊಕ್ಕು ಅಲ್ಲಿದ್ದ ಅಟ್ಟದ ಮೇಲೆ ಪೇರಿಸಿಟ್ಟ ಪಾತ್ರೆಗಳಲ್ಲೆಲ್ಲ ಹುಲ್ಲು ತಂದು ಗೂಡು ನೇಯ್ದು ವಾಸಿಸತೊಡಗಿದವು. ಇಷ್ಟೇಕೆ ಅಡುಗೆ ಮನೆಯೂ ನಮ್ಮದೇ ಎಂದು ಅಲ್ಲೂ ಹೊಕ್ಕವು. ನಮ್ಮ ಲಕ್ಷ್ಮಣ್ ಅವರಿಗೆ ಹಲವು ಸದಭಿರುಚಿಯ ಹವ್ಯಾಸಗಳು. ಅವುಗಳಲ್ಲಿ ಸಂಗೀತ ಅವರಿಗೆ ಜೀವದ ಉಸಿರು. ಹೀಗೆಂದೇ ಅವರ ಬಳಿ ಗ್ರಾಮಾಫೋನ್ ಡಿಸ್ಕುಗಳ ಸಂಗ್ರಹವಿದೆ. ಗ್ಯಾಸ್ ಸ್ಟವ್ ಮೇಲಿನ ಅಟ್ಟಣಿಗೆಯ ಮೇಲೆ ಜೋಡಿಸಿಟ್ಟ ಈ ಡಿಸ್ಕುಗಳಿಗೂ ಗೋಡೆಗೂ ನಡುವೆ ಎರಡು ಇಂಚಿನ ಅಂತರವಿದೆ. ಗುಬ್ಬಿಗಳು ಇಲ್ಲಿಯೂ ಉಳಿದವು. ಆದರೆ ನೋವಿನ ಸಂಗತಿ ಎಂದರೆ ಮರಿಗಳು ಆಯ ತಪ್ಪಿ ಬಿಸಿ ಪಾತ್ರೆಗಳ ಮೇಲೆ ಬಿದ್ದು ಸಾಯತೊಡಗಿದ್ದರಿಂದ ಅಲ್ಲಿ ವಾಸಿಸಲು ಅವಕ್ಕೆ ನಿರ್ಬಂಧ ವಿಧಿಸಲಾಯ್ತು!

ಈಗ ಲಕ್ಷ್ಮಣ್ ಅವರ ಮನೆಯಲ್ಲಿ ಸುಮಾರು ಹನ್ನೊಂದು ಗೂಡುಗಳು ಇವೆ, ಅದಲ್ಲದೆ 3 ಅಂಗುಲ ವ್ಯಾಸದ 12 ಅಡಿ ಉದ್ದದ ಬಿದಿರು ಬೊಂಬಿನಲ್ಲಿ ಗುಬ್ಬಿಗಳ ನಾಲ್ಕು ಸಂಸಾರಗಳಿವೆ. ಬಾಗಿಲ ಬಳಿಯ ಪೆಟ್ಟಿಗೆಯಲ್ಲಿ ಒಂದು ಕುಟುಂಬ, ಕಿಟಕಿಯ ಪಕ್ಕದಲ್ಲಿ ಒಂದು ಕುಟುಂಬ, ಮೀಟರ್ ಬಾಕ್ಸಿನಲ್ಲೊಂದು, ಡ್ರಾಯಿಂಗ್ ಕೋಣೆಯಲ್ಲಿ ಒಂದು, ದಾಳಿಂಬೆ ಗಿಡದ ಪೆಟ್ಟಿಗೆಯಲ್ಲಿ ಒಂದು ಕುಟುಂಬ, ಪೇರಲೆ ಗಿಡದಲ್ಲಿ ತೂಗುಬಿಟ್ಟ ಬೊಂಬಿನಲ್ಲಿ ಮತ್ತೊಂದು ಕುಟುಂಬ, ಮಾವಿನ ಮರದಲ್ಲಿ ನೇತಾಡಿಸಿದ ಬೊಂಬಿನಲ್ಲಿ ಒಂದು ಕುಟುಂಬ ಹೀಗೆ ಗುಬ್ಬಿಗಳ ಹಿಂಡೇ ಇವರ ಮನೆಯಲ್ಲಿ ನೆಲೆಕಂಡುಕೊಂಡು, ವರ್ಷಕ್ಕೆ ಏನಿಲ್ಲ ಅಂದರೂ 600 ರಿಂದ 1000 ಮರಿ ಮಾಡುವ ಗುಬ್ಬಿಗಳು ಸಂಗೀತ ಪ್ರೇಮಿಯಾದ ಲಕ್ಷ್ಮಣರಿಗೆ ತಮ್ಮ ಸಂಗೀತದಿಂದ ಸಂತೃಪ್ತಗೊಳಿಸುತ್ತ ಅವರ ಮನೆಯನ್ನು ನಿಜದಲ್ಲಿ ಹ್ಯಾಪ್ಪಿ ಹೋಮ್ ಆಗಿಸಿವೆ.

ನನಗೆ ತಿಳಿದಂತೆ ಲಕ್ಷ್ಮಣ್ ಕೇವಲ ಗುಬ್ಬಿ ಪ್ರೇಮಿಯಲ್ಲ. ಸಾಮಾನ್ಯವಾಗಿ ಗುಬ್ಬಿಗಳನ್ನು ತಿನ್ನಲು ಗಿಡುಗಗಳು ಬರುವುದಿದೆ. ಆಗ ಬುಲ್ ಬುಲ್ ಹಕ್ಕಿಗಳು ತಮ್ಮ ಇಂಪಾದ ತೀಕ್ಷ್ಣ ದನಿಯಿಂದ ಕೂಗಿ ಗುಬ್ಬಿಗಳನ್ನು ಎಚ್ಚರಿಸುತ್ತವೆ. ಆಗ ಗುಬ್ಬಿಗಳು ತಮ್ಮ ರಕ್ಷಣೆ ಮಾಡಿಕೊಳ್ಳುತ್ತವೆ. ಒಮ್ಮೆ ಹೀಗೆಯೇ ಗುಬ್ಬಿಗಳನ್ನು ಹಿಡಿಯಲು ಬಂದ ಗಿಡುಗವೊಂದನ್ನು ಕೆಡವಿದ್ದರು ಲಕ್ಷ್ಮಣ್. ಹೀಗೆ ಕೆಡವಿದರೂ ಆ ಗಿಡುಗನ ಮೇಲೆ ಪ್ರೀತಿಯವರಿಗೆ. ನೋಡುತ್ತಾರೆ ಅದರ ಹೊಟ್ಟೆಯಲ್ಲಿ ಏನೇನೂ ಇಲ್ಲ. ಸರಿ ಇವರು ಕೋಳಿ ಮಾಂಸದ ಅಂಗಡಿಗೆ ಧಾವಿಸಿ ಚಿಕನ್ ತುಣುಕುಗಳನ್ನು ಹೊಟ್ಟೆತುಂಬ ತಿನ್ನಿಸಿ ದೂರಕ್ಕೆ ಒಯ್ದು ಬಿಟ್ಟುಬಂದರು. ಆದರೇನು ಈ ಗಿಡುಗ ಪ್ರತಿದಿನ ಮಾಂಸದ ತುಣುಕುಗಳಿಗಾಗಿ ಲಕ್ಷ್ಮಣ್ ಅವರನ್ನು ಹುಡುಕಿ ಬರತೊಡಗಿತು.

ಇಂಥ ಲಕ್ಷ್ಮಣರಿಗೆ ನಾನು ಕೇಳಿದೆ, ನಿಮಗೆ ಈ ಹಕ್ಕಿ ಸಾಕುವಾಗ ಕಷ್ಟ ಆಗುವುದಿಲ್ಲವೇ ಎಂದು. ಅದಕ್ಕವರು, ಇದು ಯಾವ ಮಹಾ ಕಷ್ಟ ಎನ್ನುವಂತೆ, ಏನಿಲ್ಲ ಸಿಸ್ಟರ್, ಆಗಾಗ ಗೂಡು ಸ್ವಚ್ಛಗೊಳಿಸಬೇಕು ಇಲ್ಲವೆಂದರೆ ಗುಬ್ಬಿಗಳು ತಂದೊಟ್ಟುವ ಹುಲ್ಲೇ ಇಡೀ ಗೂಡನ್ನು ತುಂಬಿಕೊಂಡು ಮರಿಗಳು ಆಯ ತಪ್ಪಿ ಕೆಳಗೆ ಬೀಳುತ್ತವೆ ಎಂದು. ಇಷ್ಟೇ ಅಲ್ಲ. ಸಮಸ್ಯೆಗಳು ಇನ್ನೂ ಇರುತ್ತವೆ. ಹಕ್ಕಿ, ಪ್ರಾಣಿಗಳನ್ನು ಸಾಕಿ ಬಲ್ಲ ನನಗೆ ಅದು ತಿಳಿದಿದೆ. ಆದರೆ ಪ್ರೀತಿ ಇರುವೆಡೆ ಅದು ಯಾವುದೂ ಗಣನೆಗೆ ಬರುವುದಿಲ್ಲ. ಅಷ್ಟೇ. ಲಕ್ಷ್ಮಣ್ ಅವರ ಪತ್ನಿ ಅಲ್ಫೋನ್ಸಾ, ಮಕ್ಕಳಾದ ಮೀನಾ, ಮಹಿಮಾ, ಮತ್ತು ಜೀವನ್ ಕೂಡ ಲಕ್ಷ್ಮಣರಂತೆಯೇ ಪಕ್ಷಿ ಪ್ರೇಮಿಗಳು. ಅವರ ಸಹಕಾರವಿಲ್ಲದಿದ್ದರೆ ಈ ಮನೆ ಸ್ವರ್ಗವಾಗುವುದು ಹೇಗೆ ತಾನೇ ಸಾಧ್ಯವಿತ್ತು? ಇಂದು ಈ ಪಕ್ಷಿಪ್ರೇಮಿ ಲಕ್ಷ್ಮಣ್ ಅವರ ಜನ್ಮದಿನ. ಅವರ ಬಾಳು ಬಂಗಾರವಾಗಲಿ ಎಂದು ಹಾರೈಸೋಣವೇ?

 

Share

Leave a comment

Your email address will not be published. Required fields are marked *

Recent Posts More

 • 21 hours ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 1 day ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 2 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  2 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...