1

ಅತೀ ದೂರದವರೆಗಿನ ಸಂಕಟವೇ…
ನಾಗಶ್ರೀ ಶ್ರೀರಕ್ಷ

1 year ago

ಕವಿಸಾಲು | KAVISALU       ಹಾಡಿಗೆ ಮೂಡುವ ಜೀವವೇ… ಹಂಬಲದ ಹೊತ್ತು ಕಾಣುವ ಸುಖ ನೀನಿರಬಹುದು ಈ ಮಿಂದ ಕೂದಲುಗಳು ಎಷ್ಟು ಹಾಯಾಗಿ ಹಾರಾಡುತ್ತಿದೆ ಅಲ್ಲೇ ಇರುವೆ ನೀನು ಒದ್ದೆ ಮಣ್ಣಿನ ಮುದ್ದೆಯಲ್ಲಲ್ಲ ಒಂದು ರಾಶಿ ಬಿಳಿ ...

0

ನಾನು ನಾನೇ ಆಗಿ…
ಅಮೃತಾ ಮೆಹಂದಳೆ

1 year ago

 ಕವಿಸಾಲು | KAVISALU   ಸ್ವಂತಿಕೆ ಅಗೋ ನಾನೊಂದು ಪ್ರೇಮದೇವತೆಯಾಗಿ ಕಂಡೆ ಆ ಕಣ್ಣಿಗೆ, ಪೆಡಂಭೂತವಂತೆ ಇಲ್ಲೊಬ್ಬನ ಕತ್ತಲಿಗೆ, ತೊಡಿಸಿದ ಸರಪಳಿಯ ಹಾಗಂತೆ ಕೈ ಕಾಲಿಗೆ. ಬಂಧಸಂಬಂಧಗಳ ಸತ್ಯಾಸತ್ಯತೆಗಳ ತಕ್ಕಡಿಯಲಿ ನಾನ್ಯಾವ ಕಡೆಗೆ? ನಾನೊಂದು ಚುಕ್ಕಿ ಮಾತ್ರವೇ ರಂಗೋಲಿ ಸಾಲಿಗೆ? ...

0

ಒಳಗಿನ ಕತ್ತಲು
ಸಂದೀಪ್‌ ಈಶಾನ್ಯ

1 year ago

ಕವಿಸಾಲು | KAVISALU   ಎಷ್ಟೋ ದಿನದ ಕತ್ತಲದು ಮನೆಯ ಯಾವ ಮೂಲೆಯಲ್ಲೂ ಬೆಳಕಿಲ್ಲ ಹತ್ತಿರದ ಅಡಿಗೆಮನೆಯಲ್ಲಿ ಎಂದೋ ಸುಟ್ಟಿದ ಕರುಕುಲು ರೊಟ್ಟಿ ಮಹಡಿಯ ಮೇಲೆ ಒಣಗಲು ತೂಗುಹಾಕಿದ ಒದ್ದೆ ಬಟ್ಟೆಯ ಮುಗ್ಗಲು ವಾಸನೆ ಬಂದವನು ಸುಮ್ಮನೆ ಒಂದು ಕಿಟಕಿ ...

1

ಮಾರುವೇಷ
'ಶ್ರೀ' ತಲಗೇರಿ

1 year ago

ಕವಿಸಾಲು | KAVISALU   ಹಗಲ ಬಗಲಿಗೆ ಹರಿದ ಜೋಳಿಗೆ ನಿಶೆಯ ಮೈತುಂಬ ಚಂದಿರನ ಬೆವರು.. ಕಡಲ ಮಡಿಲಿಗೆ ಕರೆದಂತೆ ಬೆಸುಗೆ ನದಿಯ ಹರಿವಿನಲಿ ನೆನಪಾಗೋ ತವರು… ಬಿಸಿಲ ಕುಸುರಿಯಲಿ ಅರಳುವುದು ಗಂಧ ಮುಳ್ಳ ಜತನದಲಿ ದುಂಬಿಗೆ ಮಕರಂದ.. ತರಗೆಲೆಯ ಪ್ರಣಯಕ್ಕೆ ತರತರದ ಸ್ವರವು ಹೆಜ್ಜೆಗಳ ಕಚಗುಳಿಗೆ ಅನುಭವದ ಮಧುವು… ಕಂಪನದ ಪಿಸುದನಿಗೆ ಮರುದನಿಯ ಮದಿರೆ ಸಂವಹನ ಹದವರಿತ ಯೌವನದ ಥಳುಕು.. ಬಿಡಿತನದ ಒಡೆತನಕೆ ಕೆನೆಯುವಾ ಕುದುರೆ ಮುಗಿಯದಾ ಮಾಗಿಯಲಿ ಬೆಚ್ಚನೆಯ ಅಳುಕು… ಗರಿಗೆದರಿದಾ ಹಕ್ಕಿ ಗೆರೆದಾಟಿ ಬರಲು ಆಸೆಗಳ ರೆಕ್ಕೆಗೆ ಹೊಸ ಮಾರುವೇಷ.. ಬರಿ ಭ್ರಾಂತಿಯಾ ಹಗಲು ನವಿರಾಗಿ ನಗಲು ಕತ್ತಲಿನ ಪಕ್ಕೆಯಲಿ ಬಣ್ಣಗಳ ಸಮಾವೇಶ… ಬೆರಗಿನಾ ಮುಗಿಲು ಬಾಗಿನದ ತೆರದಿ ಪುಳಕ ತರುವುದು ಬಾನೆದೆಯ ಪದರದಿ.. ಕರಗಿದಾ ಕಲ್ಲು ಹೊಸ ಮನ್ವಂತರದಿ ಬೆಳಕ ಹಡೆವುದು ಹಣತೆಯಾ ಪಾತ್ರದಿ…

5

ಕವಿತೆ ನಶೆಯೇರಿಸುತ್ತದೆ
ವಿನಯಾ ನಾಯಕ್‌

1 year ago

ಕವಿಸಾಲು | KAVISALU   ಇವನು ವಿಸ್ಕಿ ಕುಡಿಯುತ್ತಾನೆ ಸಿಗರೇಟು ಸೇದುತ್ತಾನೆ ಹಗಲೆಲ್ಲಾ ಮಲಗುತ್ತಾನೆ ರಾತ್ರೀಯೀಡಿ ಬರೆಯುತ್ತಾನೆ ಹಳೆ ಗೆಳತಿಯರ ನೆನಪಲ್ಲಿ.. ಅವಳು ಬೆಳಿಗ್ಗೆದ್ದು ರಂಗೋಲಿ ಬಿಡಿಸುತ್ತಾಳೆ ದೇವರ ಪಾದಕ್ಕೆ ಹೂವಿಟ್ಟು ನೀಲಾಂಜನ ಬೆಳಗುತ್ತಾಳೆ ಸುಶ್ರಾವ್ಯವಾಗಿ ಹಾಡುತ್ತಾಳೆ ಇಳಿಸಂಜೆ ಇವನು ...

1

ಸಾಬೂನು ಮತ್ತು ಸೌಂದರ್ಯ
ವಿನಯಾ ನಾಯಕ್

1 year ago

ಕವಿಸಾಲು | KAVISALU   ಅಲ್ಲೊಂದು ಜಾಹಿರಾತು; ಕೇವಲ ಏಳು ದಿನಗಳಲ್ಲಿ ಮುಖದ ಸುಕ್ಕನ್ನೆಲ್ಲ ನಿವಾರಿಸಿ ನಿಮ್ಮನ್ನು ಚಿಕ್ಕವರನ್ನಾಗಿ ಕಾಣಿಸುವಂತೆ ಚಮತ್ಕಾರ ಮಾಡುವ ಸಾಬೂನು. ಅಜ್ಜಿ ನೆನಪಾದಳು ಮುಖದಲ್ಲಿ ಕೋಮಲ ಸುಕ್ಕುಗಳು ಬೆಳ್ಳನೆಯ ತಲೆಗೂದಲು ಪ್ರಶಾಂತವಾಗಿ ಸೆಳೆಯುವ ಸೌಂದರ್ಯವದು. ಎತ್ತಿದ್ದು, ...

17

ನನ್ನೊಳಗಿನ ನಿನ್ನ ಪದ್ಯಗಳು
ರೇಣುಕಾ ರಮಾನಂದ

1 year ago

ಕವಿಸಾಲು | KAVISALU   ಪದ್ಯ ಬರೆಯುವುದನ್ನು ಬಿಟ್ಟುಬಿಟ್ಟೆ ಸತ್ಯ ಸುಳ್ಳು ಎರಡನ್ನೂ ಬೆರೆಸಿ ಒಂದಿಷ್ಟು ಪದ್ಯ ಬರೆದೆ ನಿನ್ನ ಬಗ್ಗೆ….. ನೀನಾಗ ಊರುಬಿಟ್ಟು ಓಡಿಹೋಗಿದ್ದೆ ಚಿನ್ನಿದಾಂಡು ಮರಕೋತಿ ಕಣ್ಣುಮುಚ್ಚಾಲೆ ಆಡುವಾಗ ಇಲ್ಲದ ಪ್ರೀತಿ ನೀನೆಲ್ಲೋ ದೇಶಾಂತರಕ್ಕೆ ಹೋದಮೇಲೆ ಅಂಕುರಿಸಿ ...

1

ನವಿಲ ಬಾಹುಬಲಿ
ರಾಜೇಂದ್ರ ಪ್ರಸಾದ್‌

1 year ago

  ಕವಿಸಾಲು | KAVISALU   ನೀವು ನಂಬುವುದಿಲ್ಲ ಬೆಟ್ಟದ ಬಾಹುಬಲಿ ಕೆಳಗಿಳಿದು ನಮ್ಮನೆಗೆ ಬಂದಿದ್ದನೆಂದರೆ ನಂಬುವುದಿಲ್ಲ ಅವನೊಡನೆ ಆ ನವಿಲೂ ಬಂದಿತ್ತೆಂದರೆ ನೀವು ಮೂಗು ಮುರಿಯುವಿರಿ! ಖಂಡಿತಾ.. ವೈಶಾಖ ಹುಣ್ಣಿಮೆಯ ರಾತ್ರಿ ಮಳೆಯಲ್ಲಿ ನೆನೆದು ಬಂದಿದ್ದ ಗೊಮ್ಮಟನ ಗುಂಗುರು ...

1

ಹೂವು ಮತ್ತು ಮಗು
ಮಾಬು ಡಂಬಳ

1 year ago

ಕವಿಸಾಲು | KAVISALU   ಕೂಸೆ ಕಿಸೆಗೊಂದಿಷ್ಟು ಮೊಗ್ಗು ಸಿಕ್ಕಿಸಿಕೊಂಡು ಅಷ್ಟೂ ದೂರದ ನನ್ನ ಕೈಮಾಡಿ ಕರೆದೆ ನೋಡು! ಅಲ್ಲಿಟ್ಟ ಹೆಜ್ಜೆ ಕಿತ್ತಿಡಲಾಗಲಿಲ್ಲ ತುಟಿಬಿರಿದು ನಗು ಹೊರಚೆಲ್ಲಲಿತ್ತೇನೋ!?! ಬೊಗಸೆಯಲಿ ಹಿಡಿದೆ ನೋಡು ಅಂಗಳವೆಲ್ಲ ಖುಷಿಯ ಪರಿಮಳ ಮುಷ್ಟಿಗಾತ್ರದ ಗುಂಡಿಗೆ ನಿನ್ನ ...

2

ನಾಡಿಗ್‌ ಕವಿತೆಗಳು
ವಾಸುದೇವ ನಾಡಿಗ್‌

1 year ago

  ಕವಿಸಾಲು | KAVISALU     ಪ್ರತಿ ಕವನವೂ ಮತ್ತೊಂದು ಸೋಲು ಪದ್ಯ ಬರೆಯುವಾಗಲೆಲ್ಲ ಕಿಸಕ್ಕನೆ ನಕ್ಕಂತಾಗುತ್ತದೆ ಯಾರೋ ಏನು ಬರೆದರೂ ನನ್ನದಾಗದ ಯಾವುದೋ ಋಣ ತಿವಿದಂತಾಗುತ್ತದೆ ದೇವತೆ ತಂದು ಕೊಟ್ಟ ಯಾವ ಕೊಡಲಿಯೂ ನನ್ನದಾಗದು ಅಂಗಳದಲ್ಲಿ ಬಿತ್ತಿದ ...