0

ಮತ್ತೆ ಮರಳಲಿಲ್ಲ
ಶುಭಶ್ರೀ ಭಟ್ಟ

4 days ago

ಸೊಂಟದಿ ತಂಪಾಗಿ ಪವಡಿಸಿದ ಕೊಳಲು ಕೆಂದುಟಿಗೆ ತಾಕಿದೊಡೆ ಚಿಗುರೆಲೆಯಂತಹ ಎಳಸು ಬೆರಳ ಜೋಡಿಯು ತಿಲ್ಲಾನ ಹಾಡಿದವು.. ಅಲೆಅಲೆಯಾಗಿ ತೇಲಿ ಬಂದ ಮೋಹನರಾಗದ ಮೋಡಿಗೆ ದುಂಡು ಮಲ್ಲಿಗೆ ದಂಡೆಯ ಹೆಣೆಯುವ ಕೈಗಳು ತಲ್ಲಣಿಸಿದವು.. ಮನ ಕೇಳಲಿಲ್ಲ ತನು ನಿಲ್ಲಲಿಲ್ಲ ನಲಿದೋಡಿದೆ ರಾಗದ ...

0

ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ…
ಭುವನೇಶ್ವರಿ ಹಿರೇಮಠ

4 days ago

ತುಟಿಗೆ ತಲುಪದ ನಿನ್ನ ಮುತ್ತು ಮುಡಿಯದ ಕೆಂಡಸಂಪಿಗೆಯ ಘಮ, ಕಂಪನದ ಒಗಟನು ಬಿಡಿಸದ ಕೆನ್ನೆಯ ಮೇಲಿನ ಚಿತ್ರದ ಆವಿಯಲ್ಲೂ ನಿನದೆ ನಾದನರ್ತನ ಕೈ ಬೆಸೆದರೆ ತಲ್ಲಣಕೆ ಮುಕ್ತಿ ಭಾವ ಮತ್ತೆ ಮತ್ತೆ ಬಂಧಿ, ಕಾದ ಕಾವಲಿಗೆ ನೀರಿಗಿಂತ ಉರಿಯೆ ತಂಪು, ...

0

ಕಿಡಿ
ವಿಷ್ಣು ಭಟ್ಟ ಹೊಸ್ಮನೆ

7 days ago

ಯಾವುದು-ಯಾರದ್ದು ? ಹೇಗೋ? ಯಾರು ಎಲ್ಲಿಂದ ಏನ ತಂದರೋ? ಬೆತ್ತಲೆಯಾಗಿ ಬಂದವರು ಗಡಿ-ಗಡಿಗೆ ಸಮರ ನಟ್ಟನಡುರಾತ್ರಿಯಲ್ಲಿ ಬಡಿದೆಬ್ಬಿಸುವ ಯುದ್ಧ ಬೇಲಿ-ಬೇಲಿಯ ಮಧ್ಯ ತನ್ನದ್ದಲ್ಲದ್ದಕ್ಕೆ ನನ್ನದು ಭಾವನೆಯ ಜೂಜಾಟ ನಿತ್ಯ ಸ್ಮಶಾನದಲ್ಲಿ ಜೀವಂತ ನೆರಳುಗಳು ಬೊಬ್ಬಿಟ್ಟು ಸಾರಿವೆ ಗತವ ಆಲಿಸದ ಕಿವಿಗಳಲ್ಲಿ ...

0

ಸ್ವಾತಂತ್ರ್ಯದ ಸೊಬಗು
ಪ್ರಸಾದ್ ನಾಯ್ಕ್ ಕಾಲಂ

1 week ago

ಅಲ್ಲಿ ಆಗುತ್ತಿರುವ ಬೆಳವಣಿಗೆಗಳನ್ನು ನಾನು ಗಮನಿಸುತ್ತಲೇ ಇದ್ದೆ. ವಾಗ್ವಾದಕ್ಕೆ ಮೆಲ್ಲಗೆ ಬಿಸಿಯೇರತೊಡಗಿತ್ತು. ಆತ ಚೀನಾ ಮೂಲದ ಧಣಿ. ಈತ ಅಂಗೋಲಾದ ಸ್ಥಳೀಯ ಕಾರ್ಮಿಕ. ಚೀನೀಯ ಈ ಆಫ್ರಿಕನ್ ಕಾರ್ಮಿಕನಿಗೆ ಕೆಲಸವೊಂದನ್ನು ಕೊಟ್ಟಿದ್ದಾನೆ. ಆದರೆ ಈತ ಅದನ್ನು ಸರಿಯಾಗಿ ಮಾಡದೆ ಧಣಿಯ ...

0

ವಿಷ ಕುಡಿಯುತ್ತಿದ್ದೇವೆ
ಸುಧಾ ಶರ್ಮ ಚವತ್ತಿ ಕಾಲಂ

1 week ago

          ಹೀಗೆ ನೋಡಿದ ತಕ್ಷಣ ಅಂದುಕೊಳ್ಳುತ್ತೀರಿ, ಇವಳು ಪರಿಸರ ಮಲೀನತೆಯ ಬಗೆಗೆ ಮಾತನಾಡುತ್ತಾಳೆ. ನಾವು ಕುಡಿಯುವ ನೀರು, ತಿನ್ನುವ ಆಹಾರವೆಲ್ಲವೂ ವಿಷವಾಗಿದೆ ಎನ್ನುವುದನ್ನು ಓದಿ, ನೋಡಿ ನಮಗೆ ಹೀಗೆ ಯೊಚಿಸುವುದು ಅಭ್ಯಾಸವಾಗಿದೆ. ನಿಜ, ಈ ...

0

ಈ ಮಳೆ ರಾಗ…
ರಚನೆ: ನಾಗರಾಜ್ ಹರಪನಹಳ್ಳಿ | ಗಾಯನ: ದೀಪ್ತಿ ಅರ್ಗೇಕರ್

1 week ago

ಕವಿ ನಾಗರಾಜ್ ಹರಪನಹಳ್ಳಿ ಅವರು ಬರೆದ ಮಳೆಯೆ ಸುರಿ ಮಳೆಯೆ ಭಾವಗೀತೆಯನ್ನು ಕೆಲ ದಿನಗಳ ಹಿಂದೆ ಕನೆಕ್ಟ್ ಕನ್ನಡ ಪ್ರಕಟಿಸಿತ್ತು. ಅದನ್ನೀಗ ನಿಮಗೆ ಕೇಳಿಸೋಣ ಎಂದುಕೊಂಡೆವು. ಈ ಸೊಗಸಾದ ರಚನೆಗೆ ಗಾಯಕಿ ದೀಪ್ತಿ ಅರ್ಗೇಕರ್ ಜೀವ ತುಂಬಿದ್ದಾರೆ. ಅವರ ದನಿಯಲ್ಲಿ ...

0

ಬಾಲ್ಯ, ಯೌವನದ ನಡುವೆ ಕಂದಕ ಸೃಷ್ಟಿಸಿದ ಆ ಮೂರು ದಿನಗಳು
ಬಾಲ್ಯ ಬಂಗಾರ | ನಾಗರೇಖಾ ಗಾಂವಕರ

2 weeks ago

                  ಬಾಲ್ಯ ಬಂಗಾರ   ಬಾಲ್ಯದ ನೆನೆಪುಗಳೆಲ್ಲಾ ತೀರಾ ಮಧುರ. ಆದರೆ ಎಲ್ಲವೂ ಅಲ್ಲ. ಆ ನೆನಪುಗಳಲ್ಲಿ ಕೆಲವು ಇಂದಿಗೂ ನೆನಪಾದರೆ ಇರಿಸು ಮುರಿಸಾಗುತ್ತವೆ. ಮೈಮೇಲೆ ಸಣ್ಣಗೆ ಮುಳ್ಳುಗಳೆದ್ದು ...

1

ಛಾಯಾ ಅಕ್ಷರಗಳ ಬೆಳಕು
ಓದುಗರ ಕೈಗೆ 'ಹಿಮಗಿರಿ ಯಾನ'

2 weeks ago

ಲೇಖಕಿ, ರಂಗಕರ್ಮಿ ಛಾಯಾ ಭಗವತಿಯವರ ಪ್ರವಾಸ ಕಥನ ‘ಹಿಮಗಿರಿ ಯಾನ’ ಬಿಡುಗಡೆಯಾಗಿದೆ. ತುಮಕೂರಿನ ಗೋಮಿನಿ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಆಗಸ್ಟ್ 6ರಂದು ಬೆಂಗಳೂರಿನ ನಯನ ಸಭಾಂಗನದಲ್ಲಿ ನಡೆದ ಸುಂದರ ಸಮಾರಂಭದಲ್ಲಿ ಓದುಗರ ಕೈಸೇರಿತು. “ಛಾಯಾ ಒಂದು ನಿರ್ಮಲ ಮನಸ್ಸಿನ ...

1

ಕಾಸರಗೋಡಿನಲ್ಲಿ ಕಂಡ ಕನ್ನಡ ಮುಖಗಳು
ನಾಗರಾಜ್ ಹರಪನಹಳ್ಳಿ, ಕಾರವಾರ

2 weeks ago

“ಥೇಟ್ ನಮ್ಮ ಕರಾವಳಿಯ ಹಾಗೆ ಇರುವ ಕಾಸರಗೋಡು ಪರಕೀಯ ಎನ್ನಿಸಲಿಲ್ಲ. ಕಾಸರಗೋಡು, ಮಂಜೇಶ್ವರದಲ್ಲಿ, ಬದಿಯಡ್ಕದಲ್ಲಿ, ಬೇಕಲ್ ಕೋಟೆ, ಕಾಸರಗೋಡು ರೈಲ್ವೆ ನಿಲ್ದಾಣದಲ್ಲಿ ಸಿಕ್ಕವರೆಲ್ಲಾ ಕನ್ನಡದಲ್ಲೇ ಮಾತಾಡಿದ್ರು. ಅದು ವಿಶೇಷ. ಕನ್ನಡ ಬದುಕಿರುವುದು ಹಾಗೆ. ಕಾಸರಗೋಡು ಕನ್ನಡ ತಾಯಿಯ ಒಡಲ ಸೆರಗು ...

1

ತಂಪು ಕರುಣೆಯ ಹಾಲು
ನಾಗರೇಖಾ ಗಾಂವಕರ

2 weeks ago

ರಾತ್ರಿಯಲ್ಲಿ ಹಗಲಿನ ಪಾಳಿ ಉರಿವ ಕೊಳ್ಳಿಯ ಭಾರಕ್ಕೆ ಸ್ನಾಯುಗಳು ಸಡಿಲವಾಗಿಲ್ಲ. ದೀಪದ ಮಾದಕ ಮತ್ತು ಆಫೀಮು ತುಂಬಿದ ಸೀಸೆ ಅಮೃತಶಿಲೆಯ ಕಣ್ಣುಗಳಲ್ಲೂ ಕಡುಕಪ್ಪು ಗೋಲ ನಿದ್ದೆ ಭರಿಸದ ಯಾವುದೋ ಮಾಯೆ. ರಾತ್ರಿ ಜಾಗರಣೆ ತೇಪೆ ಹಾಕಿದ ಸೀರೆಯ ಅರೆತೆರೆದ ಎದೆಯ ...