ಪ್ರಸಾದ್ ಪಟ್ಟಾಂಗ | ತಾಯಿ-ಮಗಳ ಜುಗಲ್ಬಂದಿ
ಈ ಬಾರಿಯ ಅಮ್ಮಂದಿರ ದಿನದ ವಿಶೇಷವಾಗಿ ಬಹಳ ಹಿಂದೆ ನೋಡಿದ್ದ ವೀಡಿಯೋ ಒಂದನ್ನೇ ಮತ್ತೊಮ್ಮೆ ನೋಡಿ ಕಣ್ತುಂಬಿಕೊಂಡೆ. ಕಿರುಚಿತ್ರದಂತಿದ್ದ ಈ ವೀಡಿಯೋ ‘ಅಮ್ಮನೇ ಮಗಳ ಆತ್ಮೀಯ ಗೆಳತಿ’ ಎಂದು ಹೇಳುತ್ತಿತ್ತು. ಇಲ್ಲಿ ಓರ್ವ ಹರೆಯದ ಮಗಳು ಮತ್ತು ಮಧ್ಯವಯಸ್ಕ ತಾಯಿಯಿದ್ದಾಳೆ. ...