Share

ಅಕ್ಷರ ಸುಗ್ಗಿಯ ‘ಅಂತಃಕರಣ’
ಬುಕ್ ಮಾರ್ಕ್

ಅಂತಃಕರಣ. ಈ ಸುಂದರ ಹೆಸರಿನ ಹುಡುಗ, ದೇಸಿ ಚಿಂತಕ ಮತ್ತು ಬರಹಗಾರರಾದ ಸರ್ಜಾಶಂಕರ್ ಹರಳಿಮಠ ಅವರ ಮಗ. ಈಗ ಆರನೇ ತರಗತಿಯಲ್ಲಿ ಓದುತ್ತಿರುವ ಅಂತಃಕರಣ, ಆಗಲೇ ಹತ್ತು ಪುಸ್ತಕಗಳ ಲೇಖಕ. ಅಚ್ಚರಿಯಾಗುತ್ತದೆ ಅಲ್ಲವೆ? ನಿಜ. ಸರ್ಜಾಶಂಕರ್ ಅವರು ಮಗನ ಆಸಕ್ತಿಯ ದಿಕ್ಕನ್ನು ಶುರುವಿನಲ್ಲೇ ಗುರುತಿಸಿ, ಅವನಿಗೆ ಅಗತ್ಯ ವಾತಾವರಣವನ್ನು ಕಲ್ಪಿಸಿಕೊಟ್ಟದ್ದರ ಫಲ ಇದು.

ant5

ತಂದೆ ಸರ್ಜಾಶಂಕರ್‌ ಹರಳಿಮಠ ಅವರೊಂದಿಗೆ ಅಂತಃಕರಣ

ಈಗಾಗಲೇ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಸೈ ಎನಿಸಿಕೊಂಡಿರುವುದು, ತನ್ನ ಕೃತಿಗಳಿಗಾಗಿ ಬೇಂದ್ರೆ ಪುಸ್ತಕ ಬಹುಮಾನ ಪಡೆದಿರುವುದು ಅಂತಃಕರಣನ ಹೆಗ್ಗಳಿಕೆ.

ಅಂತಃಕರಣನಿಗೆ ಅಭಿನಂದನೆಗಳು.

~ ~ ~

ಮಗನ 10ನೇ ಕೃತಿ ‘ನನ್ನ ಕನಸಿನ ಕ್ರಿಕೆಟ್’ ಹೊರಬರುತ್ತಿರುವ ಸಂದರ್ಭದಲ್ಲಿ ಸರ್ಜಾಶಂಕರ್ ಅವರು ಹೇಳಿಕೊಂಡ ಕೆಲವು ಮಾತುಗಳು ಇಲ್ಲಿವೆ:

ಇದು ಅಂತಃಕರಣನ ಕ್ರೀಡೆಗಳ ಕುರಿತ 3ನೇ ಪುಸ್ತಕವೂ ಹೌದು. ಕ್ರಿಕೆಟ್ ಕುರಿತ 40 ಲೇಖನಗಳನ್ನು ಇದು ಒಳಗೊಂಡಿದೆ.

ಅಂತಃಕರಣನಿಗೆ ಮೂರನೇ ತರಗತಿಯಿಂದ ಕ್ರಿಕೆಟಿನ ಬಗೆಗಿನ ಹುಚ್ಚು ಆರಂಭವಾಯಿತು. ಅದು ವಿಶ್ವಕಪ್ ನಡೆಯುತ್ತಿದ್ದ ಸಂದರ್ಭ. ಅಮ್ಮಮ್ಮನ ಮನೆಯಲ್ಲಿ ಅಮ್ಮನೂ ಸೇರಿದಂತೆ ಬಹತೇಕರು ಆಸಕ್ತಿಯಿಂದ ನೋಡುತ್ತಿದ್ದ ಕ್ರಿಕೆಟ್ ಅವನಿಗೆ ಈ ಹುಚ್ಚು ಹಿಡಿಸಿತು. ಆನಂತರ ಬರೀ ಕ್ರಿಕೆಟಿನ ಬಗೆಗಿನ ಸ್ಕೋರು ವಿವರ ಬರೆಯುವುದು, ಆಟಗಾರರ ಹೆಸರನ್ನು ಬರೆಯುವ ಹವ್ಯಾಸ ಆರಂಭವಾಯಿತು.(ಹೀಗೆ ಬರೆದ 15-20 ನೋಟುಬುಕ್ಕುಗಳು ಮೊನ್ನೆ ಅಂತಃಕರಣನ ಪುಸ್ತಕಗಳನ್ನು ಮರು ಜೋಡಿಸುವಾಗ ಸಿಕ್ಕವು) ಆಗಲೇ ನನಗೆ ಆತಂಕವಾಗತೊಡಗಿತು. ನಾನು ಈ ಕ್ರಿಕಟಿನ ಹುಚ್ಚಿನ ಬಗ್ಗೆ ಗದರತೊಡಗಿದೆ. ಆದರೆ ಅವನ ಮಾವನವರು ‘ಇದೇ ಅವನ ಆಸಕ್ತಿಯಾಗಬಹುದು, ಅವನಷ್ಟಕ್ಕೆ ಅವನನ್ನು ಬಿಟ್ಟುಬಿಡಿ’ ಎಂದರು . ನಾವೂ ಒಂದು ಎಚ್ಚರದಲ್ಲಿ ಅವನನ್ನು ಅವನಷ್ಟಕ್ಕೆ ಬಿಟ್ಟುಬಿಟ್ಟೆವು. ಹೀಗಿದ್ದರೂ ಕಳೆದ ವರ್ಷ ಅವನ ಪುಸ್ತಕ ಬಿಡುಗಡೆ ಸಂದರ್ಭದವರೆಗೆ ಮನೆಯ ಟೀವಿಗೆ ಕೇಬಲ್ ಕನೆಕ್ಷನ್ ಕೊಡಿಸಿರಲಿಲ್ಲ. ಬರೀ ಪತ್ರಿಕೆಗಳನ್ನು ಓದಿ ಆತ ಕ್ರಿಕೆಟಿನ ತನ್ನ ಬಯಕೆಯನ್ನು ಪೂರೈಸಿಕೊಳ್ಳುತ್ತಿದ್ದ. ಆ ಸಂದರ್ಭ ಅಂತಃಕರಣನನ್ನು ಪತ್ರಿಕೆಗಾಗಿ ಮಾತನಾಡಿಸಲು ನಮ್ಮ ಮನೆಗೆ ಬಂದ ಪತ್ರಕರ್ತ ಮಿತ್ರರಾದ ‘ದಿ ಹಿಂದೂ’ ಪತ್ರಿಕೆಯ ವೀರೇಂದ್ರ ಅವರು ನಯವಾಗಿ ನಮ್ಮ ನಿಲುವನ್ನು ಟೀಕಿಸಿ ಕೇಬಲ್ ಕನೆಕ್ಷನ್ ಕೊಡಿಸಿ ಅವನಿಷ್ಟದ ಆಟಗಳನ್ನು ನೋಡಲು ಅವಕಾಶ ಮಾಡಲು ಸೂಚಿಸಿದರು. ಅವರು ಮನೆಗೆ ಬಂದು ಹೋದ ದಿನವೇ ಮನೆಗೆ ಕೇಬಲ್ ಹಾಕಿಸಿದೆವು.

ವೀರೇಂದ್ರರಿಗೂ ಬಾಲ್ಯದಲ್ಲಿ ಆಟಗಳ ಕುರಿತು ವಿಪರೀತ ವ್ಯಾಮೋಹವಿತ್ತಂತೆ. ಈಗ ಪ್ರಕಟವಾಗು ತ್ತಿರುವ ‘ನನ್ನ ಕನಸಿನ ಕ್ರಿಕೆಟ್’ ಗೆ ಗೆಳೆಯ ವೀರೇಂದ್ರರೇ ಅರ್ಥಪೂರ್ಣ ಮುನ್ನುಡಿ ಬರೆದಿದ್ದಾರೆ. ಅಂತಃಕರಣನ ಎಲ್ಲಾ ಕ್ರೀಡೆಗಳ ಕುರಿತಾಗಿ ಕ್ರೀಡಾಬರಹಗಳ ವಿಮರ್ಶಕರಾದ ಡಾ.ಕೆ.ಪುಟ್ಟಸ್ವಾಮಿ ಅವರು ಬರೆದ ಕೆಲವು ಮುಖ್ಯ ಮಾತುಗಳು ಬೆನ್ನುಡಿಯಲ್ಲಿವೆ.

ಸರ್ಜಾಶಂಕರ್ ಹರಳಿಮಠ

~ ~ ~

ant1

‘ಹರಳಿಮಠದ ಸಾಹಸಿ ಹುಡುಗರು’ ಅಂತಃಕರಣನ 9ನೇ ಪುಸ್ತಕ, ಮೂರನೇ ಪುಟ್ಟ ಕಾದಂಬರಿ. ಇದರಲ್ಲಿ ಅಂತಃಕರಣ ತನ್ನ ಹರಳಿಮಠದ ಮಕ್ಕಳನ್ನೇ ಪಾತ್ರಗಳನ್ನಾಗಿಸಿದ್ದಾನೆ. ಎಲ್ಲ ನಿಜ ವ್ಯಕ್ತಿಗಳೇ! ಈ ಪುಸ್ತಕಕ್ಕೆ ಮುನ್ನುಡಿ ಬರೆದವರು ಅಂತಃಕರಣನ ಬರಹಗಳನ್ನು ಆರಂಭದಿಂದಲೂ ಪ್ರೀತಿಯಿಂದ ಓದುತ್ತಾ, ಬೆನ್ನು ತಟ್ಟುತ್ತಾ ಬಂದಿರುವ ಹಿರಿಯ ಲೇಖಕರಾದ ವಸುಮತಿ ಉಡುಪ. ಅವರ ಮಾತುಗಳು:

ಅಂತಃಕರಣನ ‘ಹರಳಿಮಠದ ಸಾಹಸಿ ಹುಡುಗರು’ ಕಿರು ಕಾದಂಬರಿ ಓದಿದಾಗ ಒಂದೆಡೆ ಬೆರಗು, ಮತ್ತೊಂದೆಡರ ಮೆಚ್ಚುಗೆ. ‘ಹರಳಿಮಠದ ಸಾಹಸಿ ಹುಡುಗರು’ ಕಾದಂಬರಿಯ ಆರಂಭದಲ್ಲಿ ಬರುವ ಹರಳಿಮಠ ಎನ್ನುವ ಹಳ್ಳಿಯ ಸಹಜ ವರ್ಣನೆಯೇ ಒಂದು ಸೊಬಗು.

ನಾಲ್ಕನೇ ತರಗತಿಯಿಂದ ತೊಡಗಿ ಎಂಟನೇ ತರಗತಿಯವರೆಗಿನ ಐದು ಮಕ್ಕಳ ಸಾಹಸಯಾತ್ರೆ ಪುಸ್ತಕದಲ್ಲಿ ಚಿತ್ರಿತವಾಗಿದೆ. ಈ ಅಂತಃಕರಣ ಪರಿಸರದ ಕಾಳಜಿಯಿಂದ ತೊಡಗಿ ಶಿವಮೊಗ್ಗ ಸ್ಮಾರ್ಟ್ ಸಿಟಿಯಾಗಲು ಆಗಬೇಕಾದ ಬದಲಾವಣೆಗಳೇನು ಎನ್ನುವವರೆಗೆ ತನ್ನ ಸರಳ, ಆಪ್ತ ಭಾಷೆಯಲ್ಲಿ ವಿವರಿಸಬಲ್ಲ. ಮಕ್ಕಳ ಮನೋಭೂಮಿಕೆ ಯಾವ್ಯಾವ ಕಲ್ಪನೆಗಳನ್ನು ಕಾಣಬಲ್ಲುದು ಎಂಬುದನ್ನು ಕಾದಂಬರಿ ಓದಿಯೇ ತಿಳಿದುಕೊಂಡರೆ ಚಂದ.

ನವಿಲುಕಲ್ಲು ಬೆಟ್ಟಕ್ಕೆ ಹೋಗುವ ಹುಡುಗರು ಕರಡಿಯಿಂದ ತಪ್ಪಿಸಿಕೊಳ್ಳುವ, ಕಿಡ್ನ್ಯಾಪ್ ಆದ ಮಕ್ಕಳನ್ನು ರಕ್ಷಿಸುವ, ಬ್ರೇಕ್ ಫೇಲ್ಯೂರ್ ಆದ ಆಟೋ ದಿಂದ ಹಾರಿ ಬಚಾವಾಗುವ, ಬಸ್ಸಿಗೆ ನುಗ್ಗಿದ ಡಕಾಯಿತರನ್ನು ಮಣಿಸಿ ಪೋಲಿಸರಿಗೊಪ್ಪಿಸುವ, ಮರಗಳ ವಿನಾಶ ತಪ್ಪಿಸುವ ಮಕ್ಕಳ ಸಾಹಸವೇ ಸಾಹಸ.

ಈ ಕಾದಂಬರಿ ಓದಿ ಮುಗಿಸಿದಾಗ ಮಕ್ಕಳ ಮನೋಸಾಮ್ರಾಜ್ಯದಲ್ಲಿ ಒಂದು ಸುತ್ತು ವಿಹರಿಸಿ ಬಂದ ಖುಷಿಯಾಗುತ್ತದೆ.

ವಸುಮತಿ ಉಡುಪ

ಅಂತಃಕರಣನ 8ನೇ ಪುಸ್ತಕ “ವೀರಸೈನಿಕ” (ಕಥಾಸಂಕಲನ)

ant3

ಅಂತಃಕರಣನ 6ನೇ ಪುಸ್ತಕ “ಓಪನ್ ಗ್ರೌಂಡ್ “

ant4

Share

One Comment For "ಅಕ್ಷರ ಸುಗ್ಗಿಯ ‘ಅಂತಃಕರಣ’
ಬುಕ್ ಮಾರ್ಕ್
"

 1. Paru
  13th February 2016

  Very nice!! I was happy to read about child prodigy.

  Reply

Leave a comment

Your email address will not be published. Required fields are marked *

Recent Posts More

 • 6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 6 days ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 6 days ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 1 week ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  6 days ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  2 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  3 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  3 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...