Share

ಉದ್ದ ಜಡೆಯ ಹುಡುಗಿ
ಎಸ್ ಗಂಗಾಧರಯ್ಯ

ಮ್ಮೆ ಅಜ್ಜಿಯೊಬ್ಬಳು ತನ್ನ ಮೊಮ್ಮಗನಿಗೆ ಒಂದು ಚಂದದ ಹುಡುಗಿಯನ್ನು ಕುರಿತ ಕಥೆಯೊಂದನ್ನು ಹೇಳುತ್ತಾಳೆ. ಒಂದು ಊರಿನಲ್ಲಿ ಒಬ್ಬಳು ಹುಡುಗಿ ಇದ್ದಳಂತೆ. ಅವಳಿಗೆ ತುಂಬಾ ಉದ್ದದ ಜಡೆ ಇತ್ತಂತೆ. ಅದು ಎಷ್ಟು ಉದ್ದದ ಜಡೆ ಅಂದರೆ, ಅವಳು ನಡೆಯುವಾಗ ಅದು ನೆಲ ಮುಟ್ಟುತ್ತಿತ್ತಂತೆ. ಅಂಥ ಹುಡುಗಿಗೆ ಒಂದು ದಿನ ಒಂದು ಹುಚ್ಚು ನಾಯಿ ಕಡಿದುಬಿಡುತ್ತೆ. ಅದೇ ನೆಪವಾಗಿ ಅವಳು ಸತ್ತು ಹೋಗಿ ಬಿಡುತ್ತಾಳೆ. ಹಾಗೆ ಸತ್ತ ಮೇಲೆ ಅವಳು ಸುತ್ತ ಮುತ್ತಲ ಊರುಗಳಲ್ಲೆಲ್ಲಾ ದಂತ ಕಥೆಯಾಗಿ ಬಿಡುತ್ತಾಳೆ. ಅವಳು ಅನೇಕ ಪವಾಡಗಳನ್ನು ಮಾಡಿದ್ದಳೆಂದು ಜನ ಮಾತನಾಡಿಕೊಳ್ಳ ತೊಡಗುತ್ತಾರೆ. ಹಾಗಾಗಿ, ಆ ಜನರಿಗೆ ಅವಳ ಮೇಲೆ ಎಂಥದೋ ಗೌರವ ಹುಟ್ಟಿ, ಅವಳನ್ನು ಪೂಜಿಸತೊಡಗುತ್ತಾರೆ.

ಎಂದೋ ಅಜ್ಜಿ ಹೇಳಿದ ಈ ಕಥೆ, ಇದರೊಳಗಿನ ಆ ಹುಡುಗಿ, ಮತ್ತವಳ ಉದ್ದದ ಜಡೆ, ಪುಟ್ಟ ಹುಡುಗನ ಹೂ ಮನಸ್ಸಿನೊಳಗೆ ಅಳಿಯದೇ ಉಳಿದುಬಿಡುತ್ತವೆ. ವರ್ಷಗಳು ಕಳೆಯುತ್ತವೆ. ಮೊಮ್ಮಗ ಬೆಳೆದು ದೊಡ್ಡವನಾಗುತ್ತಾನೆ. ವರದಿಗಾರನಾಗಿ ಪತ್ರಿಕೆಯೊಂದರಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾನೆ. ಒಂದು ದಿನ ಇವನು ಕೆಲಸ ಮಾಡುತ್ತಿದ್ದ ಪತ್ರಿಕೆಯ ಸಂಪಾದಕನಿಗೆ ಕ್ರೈಸ್ತ ಸನ್ಯಾಸಿನಿಯರ ಹೆಣ ಹೂಳುತ್ತಿದ್ದ ಹಳೆಯ ನೆಲಮನೆಯನ್ನು ಕೆಡವುತ್ತಿರುವುದಾಗಿ ಸುದ್ದಿ ಬರುತ್ತದೆ. ತುಂಬಾ ಹಿಂದೆ ಈ ಜಾಗ ಹೆಸರುವಾಸಿ ಕಾನ್ವೆಂಟ್ ಆಗಿತ್ತು. ನಂತರ, ಅಂದರೆ ಸುಮಾರು ನೂರು ವರ್ಷಗಳ ಹಿಂದೆ ಇದನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಸದ್ಯ ಆ ಆಸ್ಪತ್ರೆಯನ್ನೂ ಮುಚ್ಚಿ, ಅದರ ಜಾಗದಲ್ಲಿ ಫೈವ್ ಸ್ಟಾರ್ ಹೊಟೇಲ್ಲೊಂದನ್ನು ಕಟ್ಟಲು ಯೋಜಿಸಲಾಗಿತ್ತು. `ಅಲ್ಲಿ ಹೋಗು, ಏನಾದರೂ ವಿಷಯ ಸಿಗಬಹುದಾ ಅಂತ ನೋಡು’ ಅಂತ ಸಂಪಾದಕ ಈ ವರದಿಗಾರನಿಗೆ ಹೇಳುತ್ತಾನೆ.

ಅದರಂತೆ ವರದಿಗಾರ ಅಲ್ಲಿಗೆ ಹೋಗುತ್ತಾನೆ. ಅಕ್ಟೋಬರ್ ತಿಂಗಳು. ಬೆಂಕಿ ಕಕ್ಕುತ್ತಿದ್ದ ಸೂರ್ಯ. ಸುಮಾರು ಜನ ಕೆಲಸಗಾರರು ಹಾರೆ, ಗುದ್ದಲಿ, ಪಿಕಾಸಿಗಳಿಂದ ಗೋರಿಗಳನ್ನು ಅಗೆಯುತ್ತಿರುತ್ತಾರೆ. ಅಗೆಯುತ್ತಾ ಸಿಕ್ಕ ಅಳಿದುಳಿದ ಮೂಳೆಗಳನ್ನು, ಬಟ್ಟೆಯ ಚೂರುಗಳನ್ನು, ತಲೆಯ ಕೂದಲನ್ನು ಬೇರ್ಪಡಿಸುತ್ತಾ, ಒಂದೊಂದನ್ನೂ ಒಂದೊಂದು ಕಡೆ ಜೋಡಿಸುತ್ತಾ ಜೋಪಾನ ಮಾಡುತ್ತಿರುತ್ತಾರೆ. ಕೆಲವು ಮೇಲ್ವಿಚಾರಕರು ಅಗೆಯುವುದಕ್ಕೆ ಮುಂಚೆ ಗೋರಿಯ ಕಲ್ಲುಗಳ ಮೇಲೆ ಕೆತ್ತಿದ್ದ ಹೆಸರುಗಳನ್ನು ಬರೆದುಕೊಳ್ಳುತ್ತಾ, ಕೆಲಸಗಾರರು ಆಗಲೇ ಜೋಪಾನ ಮಾಡಿದ್ದ ಮೂಳೆ, ಬಟ್ಟೆಯ ರಾಶಿಗಳ ಮೇಲೆ ಆಯಾಯ ಹೆಸರುಗಳನ್ನು ಬರೆದು ಅಂಟಿಸುತ್ತಿರುತ್ತಾರೆ.

ಹೀಗೆ ಆ ಇಡೀ ಜಾಗವೇ ಸತ್ತವರ ಚೂರು ಪಾರುಗಳಿಂದ, ಧೂಳಿನಿಂದ ತುಂಬಿ ಹೋಗಿರುತ್ತದೆ. ಕೆಲಸಗಾರರು ಗೋರಿಗಳನ್ನು ಒಡೆದು ತೆಗೆಯುವ ಒರಟುತನಕ್ಕೆ ಬೆಚ್ಚುತ್ತಾ ಒಂದೊಂದು ಗೋರಿಯನ್ನೂ ವರದಿಗಾರ ತುಂಬಾ ಕುತೂಹಲದಿಂದ ಗಮನಿಸುತ್ತಿರುತ್ತಾನೆ.

ಒಂದಾದ ಮೇಲೆ ಒಂದರಂತೆ ಗೋರಿಗಳು ಖಾಲಿಯಾಗುತ್ತಾ ಹೋಗುತ್ತಿರುತ್ತವೆ. ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದ ಕೆಲಸಗಾರರಿಗೆ ಒಂದು ಗೋರಿಯನ್ನು ಒಡೆದಾಗ ಮಾತ್ರ ಅಚ್ಚರಿಯಾಗುತ್ತದೆ. ಆ ಗೋರಿಗೆ ಕವುಚಿದ್ದ ಕಲ್ಲು ಚಪ್ಪಡಿ ಒಂದೇ ಒಂದು ಹೊಡೆತಕ್ಕೆ ಮುರಿದುಬೀಳುತ್ತದೆ. ಹಾಗೆ ಬಿದ್ದ ಕಲ್ಲಿನ ಸಂದಿನಿಂದ ತಾಮ್ರದ ಬಣ್ಣದ ಕೂದಲು ಹೊರ ಚಿಮ್ಮುತ್ತದೆ. ಕೆಲಸಗಾರರು ಆ ಕೂದಲನ್ನು ಹಿಡಿದು ಎಳೆಯ ತೊಡಗುತ್ತಾರೆ. ಎಳೆದಂತೆಲ್ಲಾ ಅದು ಬರುತ್ತಲೇ ಹೋಗುತ್ತದೆ. ಇದು ಮುಗಿಯುವುದೇ ಇಲ್ಲವೇನೋ ಅಂದುಕೊಳ್ಳುತ್ತಿದ್ದ ಕೆಲಸಗಾರರ ಸಮಾಧಾನಕ್ಕೆ ಅನ್ನುವಂತೆ, ಅದರ ಕೊನೆಯಲ್ಲಿ ಪುಟ್ಟ ತಲೆ ಬುರುಡೆಯೊಂದು ಆಚೆ ಬರುತ್ತದೆ. ಆ ಕೂದಲಿನ್ನೂ ಬುರುಡೆಗೆ ಕಚ್ಚಿಕೊಂಡಿರುತ್ತದೆ. ಅದೊಂದು ಹುಡುಗಿಯ ತಲೆ ಬುರುಡೆಯಾಗಿರುತ್ತದೆ.

ಶವಪೆಟ್ಟಿಗೆಯೊಳಗೆ ಸಣ್ಣ ಪುಟ್ಟ ಮೂಳೆಯ ಚೂರುಗಳನ್ನು ಬಿಟ್ಟರೆ,ಮತ್ತೇನೂ ಇರುವುದಿಲ್ಲ. ಕೆಲಸಗಾರರು ಆ ಕೂದಲನ್ನು ನೆಲದ ಮೇಲೆ ಹಾಸಿ ಅಳೆಯುತ್ತಾರೆ. ಅದು ಬರೋಬ್ಬರಿ ಇಪ್ಪತ್ತೆರಡು ಮೀಟರಿನ ಮೇಲೆ ಹನ್ನೊಂದು ಸೆಂಟಿಮೀಟರ್ ಇರುತ್ತದೆ. ಮನುಷ್ಯರು ಸತ್ತ ನಂತರವೂ ಕೂದಲು ತಿಂಗಳಿಗೆ ಒಂದು ಸೆಂಟಿಮೀಟರಿನಷ್ಟು ಬೆಳೆಯುತ್ತದೆ ಅಂತ ವರದಿಗಾರನಿಗೆ ಮೇಲ್ವಿಚಾರಕನೊಬ್ಬ ಹೇಳುತ್ತಾನೆ. ಅಂದರೆ, ಆ ಹುಡುಗಿಯ ಕೂದಲು ಸುಮಾರು ಇನ್ನೂರು ವರ್ಷಗಳಷ್ಟು ಹಳೆಯದ್ದು ಎಂಬುದು ವರದಿಗಾರನ ಅಂದಾಜಿಗೆ ಸಿಕ್ಕುತ್ತದೆ.

ಆಗ ಈ ವರದಿಗಾರನಿಗೆ ಇದರ ಜೊತೆಗೆ ತಾನು ಚಿಕ್ಕಂದಿನಲ್ಲಿ ಕೇಳಿದ ಅಜ್ಜಿಯ ಕಥೆಯ ನೆನಪಾಗಿ ಬಿಡುತ್ತದೆ. ಈ ಹುಡುಗಿ ಅಜ್ಜಿ ಹೇಳಿದ ಕಥೆಯ ಹುಡುಗಿಯೇ ಯಾಕಾಗಿರಬಾರದು ಅನಿಸತೊಡಗುತ್ತದೆ. ಇಂಥ ಇವನ ಅನಿಸಿಕೆಯೇ ಇವನ ಕಾದಂಬರಿಯೊಂದಕ್ಕೆ ಮೂಲ ಧಾತುವಾಗಿಬಿಡುತ್ತದೆ.

sg

ಹೀಗೆ ಇವನಿಂದ ಬರೆಸಿಕೊಂಡ ಕಾದಂಬರಿಯ ಹೆಸರು, ‘ಆಫ್ ಲವ್ ಅಂಡ್ ಅದರ್ ಡೆಮನ್ಸ್’. ಈ ವರದಿಗಾರ ಬೇರೆ ಯಾರೂ ಅಲ್ಲ, ಗ್ಯಾಬ್ರಿಯಲ್ ಗಾರ್ಸಿಯಾ ಮಾರ್ಕ್ವೇಜ್ ಎಂಬ ನೊಬೆಲ್ ಬಹುಮಾನ ಪಡೆದ ಕೊಲಂಬಿಯಾದ ಲೇಖಕ. ಹೀಗೆ ಹುಡುಗಿಯೊಬ್ಬಳ ಕೂದಲ ಎಳೆಯಿಂದಾಗಿ ತನ್ನೊಳಗೆ ಅನುರಣಗೊಂಡ ಕಥೆಯೇ ಮುಂದೊಂದು ದಿನ ಹೇಗೆ ಕಾದಂಬರಿಯಾಗಿ ತನ್ನಿಂದ ಬರೆಸಿಕೊಂಡಿತು ಅನ್ನುವುದನ್ನು ಇದರ ಮುನ್ನುಡಿಯಲ್ಲಿ ಮಾರ್ಕ್ವೇಜ್ ಬರೆದುಕೊಂಡಿದ್ದಾನೆ. ಮಾರ್ಕ್ವೇಜ್‍ನ ಬರಹಗಳಲ್ಲಿ ನನಗೆ ತುಂಬಾ ಇಷ್ಟವಾದ ಈ ಕಾದಂಬರಿಯ ಲೋಕ ಹಲವು ಕಾರಣಕ್ಕೆ ನನ್ನನ್ನು ಮತ್ತೆ ಮತ್ತೆ ತನ್ನತ್ತ ಸೆಳೆಯುತ್ತದೆ.

sg2

‘ಮ್ಯಾಜಿಕ್ ರಿಯಲಿಸಂ’ನ ಮಾಂತ್ರಿಕ ಶೈಲಿಯಲ್ಲಿ ಲ್ಯಾಟಿನ್ ಅಮೇರಿಕಾದ ಸಂಕೀರ್ಣ ಅನುಭವಗಳನ್ನು ಕಡೆಯುತ್ತಾ ಹೋಗುವ ಹಾಗೂ ಮಾನವ ಲೋಕದ ವೈವಿಧ್ಯಮಯ ಅನುಭವಗಳ ಅನ್ವೇಷಣೆಯಲ್ಲಿ ನಿರತನಾಗಿರುವ ಮಾರ್ಕ್ವೇಜ್, ಇತಿಹಾಸ ಪುರಾಣ ಹಾಗೂ ವರ್ತಮಾನಗಳನ್ನು ಜೊತೆ ಜೊತೆಗೇ ಬೆಸೆಯುತ್ತಾ,ವಿಶಿಷ್ಠ ಲೋಕವೊಂದನ್ನು ಅನಾವರನಗೊಳಿಸುವ ಮೂಲಕ ಓದುಗರನ್ನು ನಿಬ್ಬೆರಗಾಗಿಸಬಲ್ಲಂಥ ಲೇಖಕ.

ಅದೇ ರೀತಿ, ಲೇಖಕನೊಬ್ಬನ ಸೃಜನಶೀಲ ಪ್ರಕ್ರಿಯೆಯಲ್ಲಿ ಬಾಲ್ಯ, ಅವನ ನೆನಪುಗಳು, ಕನಸುಗಳು, ಎಂದೋ ಕೇಳಿದ ಕಥೆಗಳು ಸ್ಮತಿಯ ಒಂದು ಅಂಶವಾಗಿ ವಿಸ್ತತಗೊಳ್ಳುತ್ತಾ, ಅವುಗಳು ವರ್ತಮಾನದ ತಲ್ಲಣಗಳಾಗಿ, ಸತ್ಯಗಳಾಗಿ, ಒದಗಿ ಬರದೇ ಹೋದಲ್ಲಿ, ಲೇಖಕನೊಬ್ಬ ಹೇಗೆ ಅದೇ ಸವಕಲು ಗೆರೆಗಳಲ್ಲಿ ಹಾಗೂ ಹಳಹಳಿಕೆಗಳಲ್ಲೇ ಉಳಿದು ಬಿಡುತ್ತಾನೆ ಅನ್ನುವುದು ಮಾರ್ಕ್ವೇಜ್‍ನ ಲೋಕ ದರ್ಶನ ಪಡೆದವರಿಗೆ ಅನಿಸದೇ ಇರಲಾರದು.

————

sgangadharaiahಎಸ್‌ ಗಂಗಾಧರಯ್ಯ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಮಾಕಳ್ಳಿಯವರು. ಕಥೆಗಾರರಾಗಿ ವಿಶಿಷ್ಟ ಸಂವೇದನೆಯನ್ನು ದಾಖಲಿಸಿದವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂಎ. ಪ್ರಸ್ತುತ ಮತಿಘಟ್ಟದ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರು. ತಿಪಟೂರಿನಲ್ಲಿ ವಾಸ. ನವಿಲ ನೆಲ, ವೈಕಂ ಕಥೆಗಳು, ಲೋರ್ಕಾ ನಾಟಕ-ಎರ‍್ಮಾ, ಚರಮ ಗೀತೆ-ಲೋರ್ಕಾ ಕಾವ್ಯ, ಹಲವು ರೆಕ್ಕೆಯ ಹಕ್ಕಿ, ಬೇಟೆಗಾರನ ಚಿತ್ರಗಳು, ದಾರಿಯೊ ಫೋ ನಾಟಕ-ಗುಲಾಬಿ ಗರ್ಭ ಅವರ ಪ್ರಕಟಿತ ಕೃತಿಗಳು. ವೈಕಂ ಕಥೆಗಳು ಕೃತಿಗೆ 1996ರ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕೃಷಿ ಮತ್ತು ತಿರುಗಾಟ ಬಲು ಪ್ರಿಯ.

 

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...