Share

ಎಮ್ಮೆ ಮಾಡಿದ ಮೋಸ
ಎಸ್ ಗಂಗಾಧರಯ್ಯ ಕಾಲಂ

IMG-20160516-WA0001

ಕಲರವ | KALARAVA

 

 

 

s gangadaraಚಿಕ್ಕಂದಿನಲ್ಲಿ ನಮ್ಮ ಮನೆಯಲ್ಲಿ ಎಮ್ಮೆ,ದನಕರು,ಕುರಿಗಳು ಹೀಗೆ ಹಿಂಡು ಹಿಂಡೇ ಸಾಕು ಪ್ರಾಣಿಗಳಿದ್ದವು. ಹಾಗಾಗಿ ಮನೆಯ ಮಕ್ಕಳಿಗೆ ಇವುಗಳೆಲ್ಲಾ ಕುಟುಂಬದ ಸದಸ್ಯರುಗಳೇ ಆಗಿದ್ದವು. ಅವುಗಳೂ ಅಷ್ಟೆ, ನಮ್ಮನ್ನು ಕಂಡರೆ ಸಾಕು ಅಷ್ಟೇ ಅಕ್ಕರೆ ತೋರಿಸುತ್ತಿದ್ದವು. ರಜಾ ದಿನಗಳು ಬಂದರೆ ಇವುಗಳನ್ನು ನೋಡಿಕೊಳ್ಳುವ ಜವಾಬ್ದಾರಿ ನಮ್ಮ ಮೇಲೆ ಬೀಳುತ್ತಿತ್ತು. ಹೊಲ, ತೋಟದ ಬದುಗಳಲ್ಲಿ ಮೇಯಿಸಲು ಮೇವಿದ್ದರೂ, ಮನೆಯವರು ಬೇಡವೆಂದರೂ, ನಾವು ಮಾತ್ರ ಹೆಚ್ಚಾಗಿ ಊರಿನಿಂದ ಒಂದೆರಡು ಮೈಲಿಗಳಷ್ಟು ದೂರವಿರುವ ಪುಟ್ಟ ಕಾಡಿಗೆ ಹೋಗುತ್ತಿದ್ದೆವು. ಅಲ್ಲಿ ದನಗಳ ಪಾಡಿಗೆ ದನಗಳು ಮೇಯ್ದುಕೊಂಡರೆ, ನಾವು ಈಜು, ಮರಕೋತಿ ಮುಂತಾದ ಆಟಗಳಲ್ಲಿ ಮುಳುಗುತ್ತಿದ್ದೆವು.

ಅದೇ ರೀತಿ, ಹದಿನೈದು ದಿನ ಅಥವಾ ತಿಂಗಳಿಗೊಮ್ಮೆ ಇವುಗಳಿಗೆ ಸ್ನಾನ ಮಾಡಿಸುವ ಕೆಲಸವೂ ಆಗಾಗ ನಮಗೆ ಬೀಳುತ್ತಿತ್ತು. ಊರ ಪಕ್ಕದ ಕಟ್ಟೆ ಅಂತ ಕರೆಯುವ ಪುಟ್ಟ ಕೆರೆಯೇ ಇವುಗಳಿಗೆಲ್ಲಾ ಸ್ನಾನದ ಗೃಹವಾಗಿತ್ತು. ಊರಿನಿಂದ ಕಾಡಿಗೆ ಹೋಗುವಾಗ, ಬರುವಾಗ ನೀರು ಕುಡಿಯುವ ತಾಣವೂ ಆಗಿತ್ತು. ಸತೊಂಭತ್ತು ಕಾಲವೂ ಈ ಕೆರೆಯಲ್ಲಿ ನೀರಿರುತ್ತಿತ್ತು. ಮೇಲಿನ ದಿಬ್ಬದ ಕೆಮ್ಮಣ್ಣು ಹೊಲಗಳಿಂದ ಹರಿದು ಬಂದು ತುಂಬಿಕೊಳ್ಳುತ್ತಿದ್ದ ನೀರು ಸದಾ ಅದೇ ಬಣ್ಣಕ್ಕಿರುತ್ತಿತ್ತು. ಇದರಿಂದಾಗಿ ಇದನ್ನ ಕೆಲವರು ಕೆಮ್ಮಣ್ಣು ಗುಂಡಿ ಅಂತಲೂ ಕರೆಯುತ್ತಿದ್ದರು.

ಚಿಕ್ಕವ್ವ ಅಂತ ಕರೆಯಲ್ಪಡುವ ಎಮ್ಮೆಯೊಂದು ನಮ್ಮ ಮನೆಯಲ್ಲಿತ್ತು. ನಮ್ಮ ಅಜ್ಜ ಇದಕ್ಕೆ ಹೀಗೆ ನಾಮಕರಣ ಮಾಡಿದ್ದರು. ಅಜ್ಜನ ಚಿಕ್ಕವ್ವ ಇದನ್ನು ಕೊಟ್ಟಿದ್ದರಿಂದ, ತನ್ನ ಚಿಕ್ಕವ್ವನ ಮೇಲಿನ ಪ್ರೀತಿಯಿಂದಾಗಿ, ಅಜ್ಜ ಹಾಗೆ ಕರೆಯುತ್ತಿದ್ದರು. ಇದು ಈ ಎಮ್ಮೆಗೂ ಗೊತ್ತಾಗುತ್ತಿತ್ತು. ಏಕೆಂದರೆ ಚಿಕ್ಕವ್ವ ಅಂತ ಕೂಗಿದರೆ,ಕತ್ತೆತ್ತಿ ನೊಡುತ್ತಿತ್ತು, ಕೆಲವೊಮ್ಮೆ ಅರಚುತ್ತಿತ್ತು. ಇದು ತುಂಬಾ ಸಾಧು ಪ್ರಾಣಿಯಾಗಿದ್ದರಿಂದಲೂ, ನನ್ನನ್ನು ತನ್ನ ಬೆನ್ನ ಮೇಲೆ ಸವಾರಿ ಮಾಡಲು ಬಿಡುತ್ತಿದ್ದುದರಿಂದಲೂ, ಇದರ ಮೇಲೆ ನನಗೆ ತುಂಬಾ ಅಕ್ಕರೆಯಿತ್ತು. ಈ ಕಾರಣಕ್ಕಾಗಿಯೇ ಈ ಸಾಕು ಪ್ರಾಣಿಗಳ ಮೈ ತೊಳೆಯುವ ಸಂದರ್ಭ ಬಂದರೆ, ನಾನು ಈ ಚಿಕ್ಕವ್ವನನ್ನು ಕಟ್ಟೆಯ ಹತ್ತಿರ ಹೊಡೆದುಕೊಂಡು ಹೋಗುತ್ತಿದ್ದೆ. ಸಾಮಾನ್ಯವಾಗಿ ದನಕರುಗಳಂತೆ,ಎಮ್ಮೆಗಳ ಮೈ ತೊಳೆಯದಿದ್ದರೂ, ಮನೆಯವರು ಬೇಡವೆಂದರೂ ಕೇಳುತ್ತಿರಲಿಲ್ಲ.

ಒಮ್ಮೆ ಹೀಗೆ ಚಿಕ್ಕವ್ವನೊಂದಿಗೆ ಕಟ್ಟೆಯ ಬಳಿ ಹೋದೆ. ಅದು ಮಳೆಗಾಲ. ನೀರು ತುಂಬಿ ತುಳುಕುತ್ತಿತ್ತು. ಸಣ್ಣ ಪುಟ್ಟ, ಮೊಳಕಾಲುದ್ದದ ನೀರಿನಲ್ಲಿ ಒದ್ದಾಡುವುದನ್ನು ಬಿಟ್ಟರೆ, ಆಗಿನ್ನೂ ನನಗೆ ಈಜಲು ಬರುತ್ತಿರಲಿಲ್ಲ. ನಾನಲ್ಲಿಗೆ ಹೋಗುವ ಹೊತ್ತಿಗೆ, ನನ್ನ ವಾರಿಗೆಯ ಹಲವರು ಆಗಲೇ ಅಲ್ಲಿದ್ದರು. ಅವರಲ್ಲಿ ಕೆಲವರಾಗಲೇ ದನಗಳ ಮೈ ತೊಳೆದು, ಏರಿಯ ಮೇಲಿ ಗಿಡಗಳಿಗೆ ಅವುಗಳನ್ನು ಕಟ್ಟಿ, ಈಜಿಗಿಳಿದಿದ್ದರು. ಚೆನ್ನಾಗಿ ಈಜು ಬರುವವರು ಕಟ್ಟೆಯ ನಡೂ ಮಧ್ಯಕ್ಕೆ ಹೋಗುತ್ತಿದ್ದರೆ, ಬಾರದವರು ದಡದಲ್ಲಿ, ಮಂಡಿಯುದ್ದದ ನೀರಿನಲ್ಲಿ ಒದ್ದಾಡುತ್ತಿದ್ದರು.

ಇವರುಗಳನ್ನು ನೋಡಿದ ಕೂಡಲೆ, ನನಗೆ ಎಮ್ಮೆಗೆ ಸ್ನಾನ ಮಾಡಿಸುವುದಕ್ಕಿಂತ ಈಜಿನ ಸೆಳೆತವೇ ಜಾಸ್ತಿಯಾಗಿ, ಕಾಟಾಚಾರಕ್ಕೆ ಎಮ್ಮೆಯನ್ನು ಮುಂದೆ ಬಿಟ್ಟುಕೊಂಡು ನೀರಿನಲ್ಲಿ ಒದ್ದಾಡತೊಡಗಿದೆ.ಅಷ್ಟರಲ್ಲಿ ಹಸುವಿನ ಸ್ನಾನ ಮಾಡಿಸಲೆಂದು ಬಂದಿದ್ದ ಕೊಚ್ಚನೆಂಬ ಗೆಳೆಯ, ನೀರಿನಲ್ಲಿ ಹಸುವನ್ನು ಮುಂದೆ ಬಿಟ್ಟುಕೊಂಡು, ಅದು ಈಜಿದಂತೆ ಅದರ ಬಾಲವನ್ನು ಹಿಡಿದುಕೊಂಡು ಸುಮಾರು ದೂರ ಹೋಗಿ ವಾಪಸ್ಸು ಬರುತ್ತಿದ್ದ. ಇದನ್ನು ಕಂಡು ನನ್ನ ಜೀವ ಮಿಳ್ಳೆಂದಿತು. ನಾನೂ ಯಾಕೆ ಈ ಪ್ರಯತ್ನ ಮಾಡಬಾರದು, ಅಂತ ಅನಿಸಿದ್ದೇ ತಡ, ನನ್ನ ಚಿಕ್ಕವ್ವನನ್ನು ಮೆಲ್ಲಗೆ ಮುಂದೆ ಹೊಡೆದೆ. ಅವಳು ಮುಂದೆ ಹೋದಂತೆಲ್ಲಾ, ನೀರು ತೊಡೆ, ಸೊಂಟವನ್ನು ಬಿಟ್ಟು ಕುತ್ತಿಗೆಯವರೆಗೆ ಬರುತ್ತಿದ್ದಂತೆಯೇ, ಅವಳ ಬಾಲದ ತುದಿಯನ್ನು ಒಂದು ಸುತ್ತು ಮುಷ್ಟಿಗೆ ಸುತ್ತಿಸಿಕೊಂಡೆ.

ಮೊದಲೇ ನೀರಿನ ಸುಖಕ್ಕೆ ಪುಳುಕಿತಗೊಂಡಿದ್ದ ಚಿಕ್ಕವ್ವ, ಮೆಲ್ಲಗೆ ನೀರನ್ನು ಸೀಳಿಕೊಂಡು ಮುಂದೆ ಸಾಗುತ್ತಿದ್ದಂತೆ, ನನಗೆ ನೆಲದ ಸಂಪರ್ಕ ತಪ್ಪಿ, ನೀರಿನಲ್ಲಿ ತೇಲತೊಡಗಿದಂತೆ, ಅಗಾಇಗಾ ಅನ್ನುವುದರೊಳಗೆ ನಾನು ಮತ್ತು ಚಿಕ್ಕವ್ವ ನಡು ಕೆರೆಯಲ್ಲಿದ್ದೆವು. ಅದುವರೆವಿಗೂ ಒಂದು ಸ್ಪೀಡಿನಲ್ಲಿದ್ದ ಚಿಕ್ಕವ್ವ ಇದ್ದಕ್ಕಿದ್ದಂತೆ ಸ್ಪೀಡನ್ನು ಕಡಿಮೆ ಮಾಡಿಕೊಂಡಳು. ಮೊದಲ ವೇಗಕ್ಕೆ ಹೊಂದಿಕೊಂಡಿದ್ದ ನನಗೆ, ಇದ್ದಕ್ಕಿದ್ದಂತೆ ಕಸಿವಿಸಿಯಾಗಿ ಅವಳ ಬಾಲದ ಕುಚ್ಚನ್ನು ಬಿಟ್ಟು, ಮಧ್ಯದಲ್ಲಿ ಹಿಡಿದುಕೊಂಡೆ. ನಂತರ ಬರಬರುತ್ತಾ ಮತ್ತೂ ವೇಗ ಕಡಿಮೆ ಮಾಡಿಕೊಂಡ ಚಿಕ್ಕವ್ವ ಇದ್ದಕ್ಕಿದ್ದಂತೆ, ತನ್ನಿಡೀ ದೇಹವನ್ನು ನೀರೊಳಗೆ ಮುಳುಗಿಸಿಕೊಂಡು, ತನ್ನೆರಡೂ ಮೂಗಿನ ಸೊಳ್ಳೆಗಳನ್ನು ಮಾತ್ರ ಮೇಲೆತ್ತಿಕೊಂಡು ನಿಂತೇ ಬಿಟ್ಟಳು.

ನನಗೀಗ ಏನು ಮಾಡಬೇಕೆಂಬುದು ತಿಳಿಯದೆ, ಚಿಕ್ಕವ್ವನ ಜಾರುತ್ತಿದ್ದ ಬಾಲವನ್ನೇ ಆಸರೆಯಾಗಿಸಿಕೊಂಡು, ಅವಳ ಬೆನ್ನ ಮೇಲೆ ಕೂತು ಬಚಾವಾಗುವ ಆಸೆಯಿಂದ, ಮೆಲ್ಲಗೆ ಅವಳ ಮೈಯ್ಯ ಹತ್ತಿರ ಸಾಗಿದೆ. ಇನ್ನೇನು ಮೈ ಸಿಕ್ಕಿತು ಅನ್ನುತ್ತಲೇ ಬಾಲವನ್ನು ಬಿಟ್ಟು ಬಿಟ್ಟೆ. ಅದು ನಾನು ಮಾಡಿಕೊಂಡ ದೊಡ್ಡ ಯಡವಟ್ಟಾಗಿತ್ತು. ಮೊದಲೇ ನೊಣ ಕೂತರೆ ಜಾರುವಷ್ಟು ನುಣುಪಾಗಿದ್ದ ಅವಳ ಮೈ, ನೀರಿನೊಳಗಿದ್ದುದರಿಂದ ಮತ್ತೂ ಜಾರುತ್ತಾ, ನಾನು ಎಷ್ಟೇ ಪ್ರಯತ್ನಿಸದರೂ ಬಿಗಿ ಸಿಗಲಿಲ್ಲ.

ಭಯದಿಂದ ಕೆಮ್ಮಣ್ಣು ನೀರಿನಿನೊಳಗೆ ಕಣ್ಣು ಬಿಟ್ಟುಕೊಂಡು ಕೆಳಗಿಳಿಯುತ್ತಿದ್ದುದಷ್ಟೇ ಗೊತ್ತಾಗುತ್ತಿದ್ದ ನನಗೆ, ಎಚ್ಚರವಾದಾಗ ಕೆರೆಯ ಏರಿಯ ಮೇಲಿದ್ದೆ. ನನ್ನನ್ನು ನೀರಿನಿಂದ ಆಚೆ ತಂದಿದ್ದ ನಮ್ಮ ಮನೆಯ ಕುರಿ ಕಾಯುತ್ತಿದ್ದ ಕೆಂಪ್ಲಿಂಗಜ್ಜನ ಮುಖದಲ್ಲಿ ಕೋಪ ಅವುಡುಗಟ್ಟಿತ್ತು.

———–

sgangadharaiahಎಸ್ ಗಂಗಾಧರಯ್ಯ, ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿಯ ಮಾಕಳ್ಳಿಯವರು. ಕಥೆಗಾರರಾಗಿ ವಿಶಿಷ್ಟ ಸಂವೇದನೆಯನ್ನು ದಾಖಲಿಸಿದವರು. ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ, ಮಾನಸಗಂಗೋತ್ರಿಯಲ್ಲಿ ಇಂಗ್ಲಿಷ್ ಎಂಎ. ಪ್ರಸ್ತುತ ಮತಿಘಟ್ಟದ ಪದವಿಪೂರ್ವ ಕಾಲೇಜಿನಲ್ಲಿ ಇಂಗ್ಲಿಷ್ ಉಪನ್ಯಾಸಕರು. ತಿಪಟೂರಿನಲ್ಲಿ ವಾಸ. ನವಿಲ ನೆಲ, ವೈಕಂ ಕಥೆಗಳು, ಲೋರ್ಕಾ ನಾಟಕ-ಎರ್ಮಾ, ಚರಮ ಗೀತೆ-ಲೋರ್ಕಾ ಕಾವ್ಯ, ಹಲವು ರೆಕ್ಕೆಯ ಹಕ್ಕಿ, ಬೇಟೆಗಾರನ ಚಿತ್ರಗಳು, ದಾರಿಯೊ ಫೋ ನಾಟಕ-ಗುಲಾಬಿ ಗರ್ಭ ಅವರ ಪ್ರಮುಖ ಕೃತಿಗಳು. ವೈಕಂ ಕಥೆಗಳು ಕೃತಿಗೆ 1996ರ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ. ಕುವೆಂಪು ಭಾಷಾ ಭಾರತಿ ಪ್ರಕಟಿಸುತ್ತಿರುವ ‘ಆಫ್ರಿಕನ್‌ ಸಾಹಿತ್ಯ ವಾಚಿಕೆ’ ಸಂಪಾದಕ ಮಂಡಳಿಯ ಸದಸ್ಯರು.ಇವರ ‘ವೈಕಂ ಕಥೆಗಳು’ ಮತ್ತು ‘ಎರ್ಮಾ’ ಬೆಂಗಳೂರು ವಿವಿ ಕನ್ನಡ ಎಂಎ ವಿದ್ಯಾರ್ಥಿಗಳಿಗೆ ಪಠ್ಯಗಳಾಗಿದ್ದವು. ಸದ್ಯ ‘ಸೀಬೆ ಸೊಗಡು’ ಕೃತಿ ಕರ್ನಾಟಕ ಕೇಂದ್ರೀಯ ವಿವಿ ಕನ್ನಡ ವಿಭಾಗ ಗುಲ್ಬರ್ಗಾ ಇಲ್ಲಿ ಪಠ್ಯವಾಗಿದೆ. ಕೃಷಿ ಮತ್ತು ತಿರುಗಾಟ ಬಲು ಪ್ರಿಯ.

Share

One Comment For "ಎಮ್ಮೆ ಮಾಡಿದ ಮೋಸ
ಎಸ್ ಗಂಗಾಧರಯ್ಯ ಕಾಲಂ
"

  1. ಬಸವರಾಜು
    4th June 2016

    ಗಂಗಾಧರಯ್ಯ… ಚೆನ್ನಾಗಿದೆ ನಿಮ್ಮ ಕತೆ. ನಿಮ್ಮ ಈಜಿನ ಕತೆ ನೆನಪಾಗುತ್ತಿದ್ದಂತೆ ನನ್ನ ಕಥೆಯೂ ನೆನಪಾಯಿತು. ಆದರೆ ಆ ಜಾಗದಲ್ಲಿ ನಾನಿರಲಿಲ್ಲ, ನನ್ನ ಗೆಳೆಯ ನರಸಿಂಹ ಇದ್ದ. ನಮ್ಮಪ್ಪ ನೀರಿಗೆ ಹಾರಿ ಅವನನ್ನು ಬದುಕಿಸಿದರು. ಅವನನ್ನು ಈಗಲೂ ನೋಡಿದಾಗಲೆಲ್ಲ, ಅದೇ ಕಟ್ಟೆ, ಈಜು, ಎಮ್ಮೆ, ನಮ್ಮಪ್ಪ ಎಲ್ಲ ನೆನಪಾಗುತ್ತಾರೆ. ಇವೇ ನಮ್ಮ ಜೀವದ್ರವ್ಯಗಳು…

    Reply

Leave a comment

Your email address will not be published. Required fields are marked *

Recent Posts More

  • 2 weeks ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 2 weeks ago No comment

    ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

          ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

  • 2 weeks ago No comment

    ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

    ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

  • 2 weeks ago No comment

    ಉಷಾ ಚಿತ್ತ | ಮೊಲದ ಮರಿ ಗಿಫ್ಟ್

          ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

  • 3 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

  • 14 April 2019
    2 weeks ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 04 April 2019
    3 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

  • 29 March 2019
    4 weeks ago One Comment

    ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                      ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

  • 26 March 2019
    4 weeks ago No comment

    ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

    ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

  • 12 March 2019
    1 month ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...