Share

ಕವಿತೆ, ಕತೆ
ಬುಕ್ ಮಾರ್ಕ್

ನೀರ ಮೇಲಣ ಚಿತ್ರ (ಕವಿತಾ ಸಂಕಲನ)
ಲೇ: ಅಕ್ಷತಾ ಹುಂಚದಕಟ್ಟೆ

ಈ ಸಂಕಲನದ ‘ನಿದ್ದೆ ಚಿತ್ರ’ ಕವಿತೆಯ ‘ಕಣ್ಣರೆಪ್ಪೆಗೆ ಕನಸೊಂದು ಮೆತ್ತಿಕೊಂಡ ಮುಖ ನಿದ್ದೆಯಲ್ಲೂ ಬೆಳಗಿರುತ್ತದೆ’ ಎಂಬ ಸಾಲಿನಲ್ಲಿ ಕಾಣಿಸಿಕೊಳ್ಳುವ ಬೆಳಕು, ‘ತಾನು ಜೀವಂತಿಕೆ ಚಿಮ್ಮಿಸುತ್ತಾ ನಡೆದಾಡಿದರೆ/ಒಂದು ನಮೂನೆ ಕಸಿವಿಸಿಯಿಂದ/ನರಳುವ ಲೋಕದ/ಕುರಿತು ಬಲ್ಲ ಜಾಣೆ/ತಾನು ನಿದ್ದೆಯಲ್ಲಿದ್ದರೆ/ಅಷ್ಟರ ಮಟ್ಟಿಗೆ ತನ್ನ ಲೋಕವೂ/ಸುಖದಲ್ಲಿರುವುದನ್ನು ಬಲ್ಲಳು’ ಎಂಬ ಸಾಲುಗಳಲ್ಲಿ ತುಂಟ ಲಾಸ್ಯವಾಗಿ, ಸಹಜ ಎಚ್ಚರಿಕೆಯಾಗಿ ಮುಂದುವರಿಯುತ್ತದೆ. ‘ಒಳಹೊರಗು’ ಎಂಬ ಕವಿತೆಯಲ್ಲಿ ನೇವರಿಸುತ್ತಾ, ಸಂಕೋಚಗಳ ನಿವಾರಿಸುತ್ತಾ, ವಿವಶವೊ ಪರವಶವೊ ಆಗಲು ನೊಡುತ್ತಾ ಹೊರಟ ಮಿಥುನ ಕ್ರಿಯೆ, ಅರೆನಿಮಿಷದ ತುರ್ತಾಗಿ ಮುಗಿದೇಹೋದಾಗ, ‘ಉಳಿದಿರುವುದೀಗ ಕಟ್ಟಿಕೊಳ್ಳುವ ಪರಿಪಾಟಲು’ ಎಂದು ತಣ್ಣಗೆ ಮುಗಿಯುತ್ತದೆ. ಒಂದು ಶೃಂಗಾರಕಾವ್ಯವಾಗಿ, ರೋಚಕವಾಗಿ ಓದಿಸಿಕೊಂಡು ಹೋಗಬೇಕಿದ್ದ ಕವಿತೆಯೊಂದು ಹೀಗೆ ನಿಜದ ಸಾಕ್ಷಾತ್ಕಾರವಾಗಿ ಆಳಕ್ಕೆ ಇಳಿಯುತ್ತದೆ. ‘ಕಣ್ತಪ್ಪಿಸಿ ಹೋಗುವೆವು, ಕಣ್ಣೊಪ್ಪಿಸಿ ಬರುವೆವು/ಕಣ್ಣೋಟ, ಚಿಮ್ಮುನಗೆ/ಅರಳದೇ ಬಿಟ್ಟೀತೇ ದೇಹ ಕಮಲ/ಘಟಿಸಿದರೂ/ಘಟಿಸದೇ ಕಂಗಾಲಾದರೂ/ಬಾಯಿಬಿಡಲಾರೆವು ನಿಮ್ಮ ಸಾಕ್ಷ್ಯ’. ಎಚ್ಚೆತ್ತುಕೊಂಡಿರುವ ಹೆಣ್ಣೊಬ್ಬಳ ಆಧುನಿಕ ಧ್ಯೇಯವಾಕ್ಯಗಳಾಗಿ ಮೂಡಿಬಂದಿರುವ ಈ ಸಾಲುಗಳು ತನ್ನ ಲವಲವಿಕೆಯನ್ನೂ ಕಳೆದುಕೊಳ್ಳದೆ, ಕವಿತೆಯಾಗಿಯೂ ನಿಜವಾಗುತ್ತದೆ. ಇದು ಎರಡನೆಯ ಸಂಕಲನವಾದರೂ ತಾನು ಕವಯಿತ್ರಿ ಎಂಬ ಹಮ್ಮೇನೂ ಇಲ್ಲದ ಅಕ್ಷತಾರಿಗೆ ಈ ಹೊಸ ಕವಿತೆಗಳು ಪ್ರಕಟವಾಗದಿದ್ದರೆ ತಾನು ಬರೆಯುವುದನ್ನು ಮರೆತುಬಿಟ್ಟೇನು ಎಂಬ ಭಯ. ಬರೆಯುವುದು ಒಂದು ರೀತಿಯ ಪೊರೆ ಕಳಚುವಿಕೆಯಂತಹದು. ಅದು ನಡೆಯದೇ ಹೋದರೆ ತಾನಿಲ್ಲಿ ಸಹಜವಾಗಿಲ್ಲ ಎನ್ನುವ ಹೆದರಿಕೆ. ‘ತನ್ನ ಕೆನ್ನೆಗೆ ತಾನೇ ಕಪಾಳಮೋಕ್ಷ’ ಮಾಡಿಕೊಳ್ಳದೇ ಹೋದರೆ ನಿಂತಲ್ಲೇ ಬೇರುಬಿಟ್ಟೇನು ಎನ್ನುವ ತಳಮಳ.

ಅಬ್ದುಲ್ ರಶೀದ್ (ಬೆನ್ನುಡಿ)

ಜೋಗತಿ ಜೋಳಿಗೆ (ಕತೆಗಳು)
ಲೇ: ಅನುಪಮಾ ಪ್ರಸಾದ್

‘ಇಸುಮುಳ್ಳು’ ಹಲವು ಆಯಾಮಗಳನ್ನು ಹೊಂದಿರುವ ಸಂಕೀರ್ಣ ಕಥೆ. ಹಳ್ಳಿ, ನಗರ, ನಿಸರ್ಗ, ಸ್ಲಮ್ಮು, ನಗರ ಜೀವನದ ನಿಗೂಢಗಳು -ಎಲ್ಲವನ್ನು ಹಕ್ಕಿ ಕಡ್ಡಿಗಳಿಂದ ಗೂಡು ಕಟ್ಟುವಂತೆ ರೂಪಿಸಲು ಸಾಧ್ಯವಾಗಿರುವುದು ವಾಸ್ತವವನ್ನು ಮೀರುವ ಕಲೆಗಾರಿಕೆಯಿಂದ. ಈ ಕಥೆಗಾರ್ತಿಗೆ ಕಥೆಯನ್ನು ವಿವರಗಳಲ್ಲಿ ದಾಖಲೆ ಮಾಡುವುದಕ್ಕಿಂತ, ಅದನ್ನು ಕಲಾತ್ಮಕವಾಗಿ ಕಟ್ಟಿಕೊಡುವುದು ಮುಖ್ಯವಾಗಿದೆ. ಬದುಕು ಮತ್ತು ಮಾನವ ಸಂಬಂಧಗಳ ಬಗ್ಗೆ ನಿರ್ಇಷ್ಟವಾದ ತಾತ್ವಿಕತೆಯನ್ನು ರೂಪಿಸಿಕೊಡುವ ಆಶಯ ಈ ಕಥೆಯ ಆಳದಲ್ಲಿ ಹುದುಗಿದೆ; ಅದು ಸಫಲವಾಗಿದೆ. ಹೆಣ್ಣುಗಂಡಿನ ಸಂಬಂಧಗಳ ಹಿಂದಿರುವ ಭಾವತರ್ಕ ಮತ್ತು ದೇಹತರ್ಕವನ್ನು ಬಹಳ ಜಾಗರೂಕತೆಯಿಂದ ಅತಿ ವಿವರಗಳಿಗೆ ಹೋಗದೆ ಕಥೆ ಕಟ್ಟಿಕೊಡುತ್ತದೆ.

ಡಾ. ಎಚ್ ಎಸ್ ರಾಘವೇಂದ್ರರಾವ್ (ಬೆನ್ನುಡಿ)

(ಈ ಎರಡೂ ಪುಸ್ತಕಗಳ ಪ್ರಕಾಶಕರು: ಶಿವಮೊಗ್ಗದ ಅಹರ್ನಿಶಿ)

Share

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...