Share

‘ಗುರುವಿನ ಗುನುಗಿನಲ್ಲಿ’
ಪ್ರಸಾದ್ ನಾಯ್ಕ್ ಕಾಲಂ

ash

‘ಅದೇ ರಾಗ, ಅದೇ ತಾಳ’ ಅನ್ನುವಂತೆಯೇ ದೈನಂದಿನ ಜೀವನವು ನಡೆಯುತ್ತಿದ್ದರೂ ಅಚಾನಕ್ಕಾಗಿ ಕೆಲವು ಸಂಗತಿಗಳು ಸುಮ್ಮನೆ ಘಟಿಸಿ ಖುಷಿಕೊಡುತ್ತವೆ.

ಮೊನ್ನೆಯೂ ಹಾಗಾಯಿತು. ಬೆಂಗಳೂರಿನ ಪ್ರತಿಷ್ಠಿತ ವಿದ್ಯಾಸಂಸ್ಥೆಯೊಂದರಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದ, ನನ್ನ ಆಪ್ತವಲಯದಲ್ಲಿರುವ ಯುವ ಪ್ರಾಧ್ಯಾಪಕರೊಬ್ಬರು ಇನ್ನೊಂದು ಪ್ರತಿಷ್ಠಿತ ಕಾಲೇಜಿಗೆ ವರ್ಗಾವಣೆಯಾಗಿದ್ದರು. ಹೀಗೆ ತೊರೆದುಹೋಗುತ್ತಿದ್ದ ಇವರನ್ನುದ್ದೇಶಿಸಿ ಕಾಲೇಜಿನ ವಿದ್ಯಾರ್ಥಿಯೊಬ್ಬ ಚೆಂದದ ಪತ್ರವನ್ನು ಫೇಸ್-ಬುಕ್ಕಿನ ಗೋಡೆಯಲ್ಲಿ ಬರೆದಿದ್ದ. ಕೆಲವೇ ತಿಂಗಳುಗಳ ಕಾಲ ಸೇವೆ ಸಲ್ಲಿಸಿದ್ದರೂ ತನ್ನನ್ನು ಅಪಾರವಾಗಿ ಪ್ರಭಾವಿಸಿದ ಈ ಯುವಪ್ರಾಧ್ಯಾಪಕರನ್ನು ಅಭಿನಂದಿಸುತ್ತಾ ಅವರ ಮುಂದಿನ ಪಯಣಕ್ಕೆ ಶುಭವನ್ನು ಹಾರೈಸಿದ್ದ. ಆ ಮುದ್ದಾದ ಪತ್ರವನ್ನು ನೋಡಿ ನಿಜಕ್ಕೂ ಸಂತಸವಾಗಿತ್ತು. ಶಿಕ್ಷಕನೊಬ್ಬನಿಗೆ ಸಿಗಬಹುದಾದ ಇದಕ್ಕಿಂತ ಹೆಚ್ಚಿನ ಮನ್ನಣೆಯಾದರೂ ಏನು?

ಕೆಲವು ಶಿಕ್ಷಕರು ನಿಜಕ್ಕೂ ಹಾಗಿರುತ್ತಾರೆ. ಅವರಿಂದ ಕಲಿತು, ಬೆಳೆದು, ಕೂದಲು ಹಣ್ಣಾಗಿ ಹೋದರೂ ಅವರು ಮಾತ್ರ ಸದಾ ನೆನಪಿನಲ್ಲಿರುತ್ತಾರೆ. ಹೈಸ್ಕೂಲಿನಲ್ಲಿ ಬೋಧಿಸುತ್ತಿದ್ದ ನಮ್ಮ ಶಾಲೆಯ ಸಂಸ್ಕøತ ಅಧ್ಯಾಪಕರೊಬ್ಬರು ಕಾಳಿದಾಸನ ಬಗ್ಗೆ ಅದೆಷ್ಟು ಚೆನ್ನಾಗಿ ವರ್ಣಿಸುತ್ತಿದ್ದರೆಂದರೆ ಶಾಲಾಕೊಠಡಿಯ ನಾಲ್ಕು ಗೋಡೆಗಳ ಮಧ್ಯೆ ಒಂದು ಶೃಂಗಾರಲೋಕವೇ ಸೃಷ್ಟಿಯಾಗುತ್ತಿತ್ತು. ಕನ್ನಡ ಪಂಡಿತರು ಕುಮಾರವ್ಯಾಸನ ಸಾಲುಗಳನ್ನು ಉದ್ಧರಿಸುತ್ತಿದ್ದರೆ ಕುಳಿತಲ್ಲೇ ಗತಕಾಲಕ್ಕೆ ಹೋಗಿ ಬಂದ ಅದ್ಭುತ ಅನುಭವವಾಗುತ್ತಿತ್ತು. ಗಣಿತದಲ್ಲಿ ಕುಂಟುತ್ತಿದ್ದ ನನ್ನಂಥವರಿಗೆ ಭಾಷಾವಿಷಯಗಳ ಹುಚ್ಚು ಹಿಡಿಸಿದ್ದೇ ಇಂಥಾ ಅಪರೂಪದ ಶಿಕ್ಷಕರು. ಮುಂದೆ ಇದೇ ತಳಹದಿಯಲ್ಲಿ ಓದಿನ ಹವ್ಯಾಸವು ಗಟ್ಟಿಯಾಗಿ ನಿಂತಿತ್ತು. ಹಾಗೆಯೇ ಕಲೆ, ಸಾಹಿತ್ಯ ಮತ್ತು ಇತರೆ ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುತ್ತಿದ್ದ ಮತ್ತೋರ್ವ ಶಿಕ್ಷಕರಿದ್ದರು. ನಾಲ್ಕು ವರ್ಷಗಳ ಅವಧಿಯಲ್ಲಿ ಮಕ್ಕಳಿಗೆ ಎರಡೇಟು ಬಿಟ್ಟಿದ್ದಿರಲಿ, ಅವರೆಂದೂ ಕೋಪಗೊಂಡಿದ್ದನ್ನೂ ನಾನು ನೋಡಿರಲಿಲ್ಲ. ಬುದ್ಧನಂತಿದ್ದ ಅವರನ್ನು ನೋಡಿಯೇ ಸಹನೆಯನ್ನು ಮೈಗೂಡಿಸುವುದನ್ನು ನಾನು ಕಲಿತಿದ್ದೆ.

ವೈಯಕ್ತಿಕ ನೆಲೆಯಲ್ಲೂ ಶಿಕ್ಷಕವೃತ್ತಿಯು ನನಗಿಷ್ಟವಾದದ್ದು. ಅದರಲ್ಲೂ ತನ್ನ ವೃತ್ತಿಯ ಬಗ್ಗೆ ಪ್ರೀತಿಯಿದ್ದರೆ ಶಿಕ್ಷಕನೊಬ್ಬ ಪವಾಡಗಳನ್ನೇ ಸೃಷ್ಟಿಸಬಲ್ಲ ಎಂಬುದು ನನ್ನ ನಂಬಿಕೆ. ವಾರಕ್ಕೊಂದು ಸಿಗುವ ರಜೆಯ ಭಾನುವಾರವನ್ನು ಲೆಕ್ಕಿಸದೆ ಕಿಕ್ಕಿರಿದ ಮೇಟ್ರೋನಲ್ಲಿ ಹೇಗೋ ನುಗ್ಗಿಕೊಂಡು ದೆಹಲಿಯಿಂದ ಗುರುಗ್ರಾಮದವರೆಗೆ ಮಕ್ಕಳಿಗೆ ಪಾಠ ಹೇಳಲೆಂದೇ ನಾನು ಹೋಗುತ್ತಿದ್ದೆ. ಹಲವು ಬಾರಿ ತರಗತಿಗಳು ಸಮಯವನ್ನು ಮೀರಿ ಮುಂದೆ ಹೋಗುತ್ತಿದ್ದವು. ಕಾಲೇಜಿನ ವಿದ್ಯಾರ್ಥಿಗಳಿಗೆ ಪಾಠ ಹೇಳಿ ತಕ್ಕ ಮಟ್ಟಿನ ಅನುಭವವಿದ್ದ ನನಗೆ ಎಂಟು ವರ್ಷದ ಮಗುವಿನೊಂದಿಗೆ ಕುಳಿತು, ತಾನೂ ಮಗುವಾಗಿ, ಆಟವಾಡುತ್ತಲೇ ಪಾಠವನ್ನು ಹೇಳುವುದು ವಿಶಿಷ್ಟವಾದ ಅನುಭವವಾಗಿತ್ತು. ಹಲವು ಬಾರಿ ಸಾಮಾನ್ಯ ಜ್ಞಾನ, ಎನ್ಸೈಕ್ಲೋಪೀಡಿಯಾಗಳಂತಹ ಪುಸ್ತಕಗಳನ್ನು ಸ್ವತಃ ಖರೀದಿಸಿ ಈ ಮಕ್ಕಳಿಗೆ ನೀಡುತ್ತಿದ್ದೆ. ಪ್ರತೀ ಪುಟದಲ್ಲೂ ಬಣ್ಣಬಣ್ಣದ ಚಿತ್ರಗಳನ್ನು ನೋಡುತ್ತಾ ಸಹಜವಾಗಿಯೇ ಮಕ್ಕಳು ಖುಷಿಯಾಗುತ್ತಿದ್ದರಲ್ಲದೆ ಇದೇ ನೆಪದಲ್ಲೇ ಹೊಸ ವಿಚಾರಗಳು ಅವರಿಗೆ ತೆರೆದುಕೊಳ್ಳುತ್ತಿದ್ದವು.

ಬೋಧನೆಯನ್ನು ಮಾಡುತ್ತಿರುವುದು ಮಕ್ಕಳಿಗಾಗಲೀ, ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಾಗಲೀ ಶಿಕ್ಷಕರಿಗೆ ಅವರದ್ದೇ ಆದ ಸವಾಲುಗಳಿರುತ್ತವೆ ಎಂಬುದೂ ಒಪ್ಪಲೇಬೇಕಾದ ಮಾತು. ಬೆತ್ತ ಹಿಡಿಯುವ ಕಾಲವು ಯಾವತ್ತೋ ಕಳೆದುಹೋಗಿದೆ. ಹೊಸದಾಗಿ ಮೀಸೆ ಬರುತ್ತಿರುವ ವಿದ್ಯಾರ್ಥಿಗಳನ್ನು ಹಿಡಿಯುವುದೇ ಕಷ್ಟ. ಸ್ಮಾರ್ಟ್ ಫೋನುಗಳು ವಿದ್ಯಾದೇಗುಲಗಳಿಗೂ ಬಂದಾಗಿವೆ. ಸೆಮಿಸ್ಟರು, ಅಸೈನ್ಮೆಂಟು, ಸೆಮಿನಾರುಗಳ ನಡುವೆಯೂ ಪಠ್ಯೇತರ ಚಟುವಟಿಕೆಗಳು, ಶಿಬಿರಗಳ ಹೆಚ್ಚುವರಿ ಜವಾಬ್ದಾರಿಗಳು ಬೇರೆ. ಶಾಲಾಶಿಕ್ಷಕರಿಗೆ ವೇತನದ ಕಿರಿಕಿರಿಗಳಿದ್ದರೆ, ಸ್ನಾತಕೋತ್ತರ ಪದವಿಯನ್ನು ಪಡೆದೂ ಪಿ.ಎಚ್.ಡಿಯ ಕಿರೀಟವಿಲ್ಲದೆ ನೌಕರಿಯಲ್ಲಿ ಉಳಿಗಾಲವಿಲ್ಲವೆಂಬಂತಿರುವ ಯುವಪ್ರಾಧ್ಯಾಪಕರ ಚಿಂತೆಗಳು ಇನ್ನೊಂದು ಕಡೆ.

ಇವೆಲ್ಲದರ ಮಧ್ಯೆಯೂ ಶಿಕ್ಷಕವೃತ್ತಿಯ ಘನತೆಯನ್ನು ಎತ್ತಿಹಿಡಿಯುವಂತೆ ಸೇವೆ ಸಲ್ಲಿಸುತ್ತಿರುವ ಸಾವಿರಾರು ಶಿಕ್ಷಕರು ಇನ್ನೂ ಇದ್ದಾರೆ. ಕೋಚಿಂಗ್ ಕೇಂದ್ರಗಳು ಎಲ್ಲೆಲ್ಲೂ ನಾಯಿಕೊಡೆಗಳಂತೆ ಏಳುತ್ತಿದ್ದರೂ ಇವರಿಗೆ ನಯಾಪೈಸೆಯ ಸ್ವಾರ್ಥವಿಲ್ಲ. ತಮ್ಮದೇ ಅಸಂಖ್ಯಾತ ವೈಯಕ್ತಿಕ ಜಂಜಾಟಗಳಿದ್ದರೂ ಹೆಚ್ಚಿನ ಸಮಯವನ್ನು ತಮ್ಮ ವಿದ್ಯಾರ್ಥಿಗಳಿಗೆ ನೀಡುವುದಲ್ಲದೆ ತಮ್ಮ ಸ್ವಂತ ಖರ್ಚಿನಿಂದ ಪುಸ್ತಕಗಳನ್ನು, ಅಧ್ಯಯನ ಸಂಬಂಧಿ ಪರಿಕರಗಳನ್ನು ನೀಡಿ ಬೆನ್ನುತಟ್ಟುವ ಶಿಕ್ಷಕರೂ ಇದ್ದಾರೆ, ಪಠ್ಯದ ಜೊತೆಗೇ ಪರಿಸರ, ಸಾಕ್ಷರತೆ, ನೈರ್ಮಲ್ಯ, ಸ್ವಚ್ಛತೆ ಇತ್ಯಾದಿಗಳ ಬಗ್ಗೆ ವಿದ್ಯಾರ್ಥಿಗಳಲ್ಲಿ ಜಾಗೃತಿಯನ್ನು ಮೂಡಿಸುತ್ತಾ, ದೂರದೃಷ್ಟಿಯನ್ನೊಳಗೊಂಡ ಪೀಳಿಗೆಯನ್ನು ಕಟ್ಟುತ್ತಿರುವ ಹಲವು ಶಿಕ್ಷಕ ಬಂಧುಗಳು ನಮ್ಮ ನಡುವಿದ್ದಾರೆ. ಈ ಪಡೆಯಲ್ಲಿ ಯುವ ಶಿಕ್ಷಕರೂ, ಪ್ರಾಧ್ಯಾಪಕರುಗಳೂ ಸೇರಿರುವುದು ಸಂತಸದ ವಿಷಯ.

ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳನ್ನು, ಅಧ್ಯಾಪಕರನ್ನು ಕಂಡು ಮಾತನಾಡಿಸುವುದೆಂದರೆ ನನಗಿಷ್ಟವಾದ ವಿಚಾರ. ಇಂಥಾ ಹಲವು ಚರ್ಚೆಗಳಲ್ಲಿ ವಿಶಿಷ್ಟವಾದ ಅನುಭವಗಳು, ಅಚ್ಚರಿಯೆನಿಸುವ ಕಥೆಗಳು ಮತ್ತು ಮರೆಯಲಾಗದ ಕ್ಷಣಗಳು ನನ್ನದಾಗಿವೆ. ನನ್ನ ಆಪ್ತವಲಯದಲ್ಲಿರುವ ಹೆಚ್ಚಿನವರು ಶಾಲೆಗಳಿಂದ ಹಿಡಿದು ವಿಶ್ವವಿದ್ಯಾಲಯಗಳಲ್ಲಿ ಬೋಧಿಸುತ್ತಿರುವವರೇ ಆಗಿರುವುದು ನನಗಂತೂ ಹೆಮ್ಮೆಯ ವಿಷಯ. ಕಲ್ಲಿನೊಳಗಿರುವ ಶಿಲೆಯನ್ನು ಗುರುತಿಸಿ, ಕೆತ್ತಿ, ಅದಕ್ಕೊಂದು ರೂಪವನ್ನು ಕೊಡುವ ಶಿಕ್ಷಕರನ್ನು ಎಷ್ಟು ಸ್ಮರಿಸಿದರೂ ಕಮ್ಮಿಯೇ. ಈ ಬಾರಿಯ ಅಂಕಣದಲ್ಲಿ ಅಂಥಾ ಶಿಕ್ಷಕರಿಗೊಂದು ಸಲಾಂ.

———

ಪ್ರಸಾದ್ ನಾಯ್ಕ್

Prasadಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರಾದ ಪ್ರಸಾದ್ ನಾಯ್ಕ್ ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿಯನ್ನು ಪಡೆದವರು. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ತಕ್ಕಮಟ್ಟಿಗೆ ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

2 Comments For "‘ಗುರುವಿನ ಗುನುಗಿನಲ್ಲಿ’
ಪ್ರಸಾದ್ ನಾಯ್ಕ್ ಕಾಲಂ
"

 1. Prajna G K
  5th August 2016

  Nice article . We really respect our teachers

  Reply
  • Prasad
   12th August 2016

   Thank you Prajna… True Story…

   Reply

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...