Share

ಮೂರು ಪುಸ್ತಕಗಳು
CK ಸ್ಟೋರಿ

ವೈವಿಧ್ಯ
ಲೇ: ಕೆ ಸತ್ಯನಾರಾಯಣ; ಪ್ರ: ವಸಂತ ಪ್ರಕಾಶನ, ಬೆಂಗಳೂರು

ಕನ್ನಡದ ಪ್ರಮುಖ ಬರಹಗಾರರಾದ ಕೆ ಸತ್ಯನಾರಾಯಣ, ಶ್ರೇಷ್ಠ ಕಥೆಗಾರರು ಮತ್ತು ಪ್ರಬಂಧಕಾರರು. ಕಾದಂಬರಿ, ವಿಮರ್ಶೆ, ವೈಚಾರಿಕ ಪ್ರಬಂಧ, ಅಂಕಣ ಬರಹ -ಇತ್ಯಾದಿ ಕ್ಷೇತ್ರಗಳಲ್ಲಿಯೂ ಗಣನೀಯ ಸಾಧನೆ ಮಾಡಿದ್ದಾರೆ, ಮಾಡುತ್ತಿದ್ದಾರೆ. ಸೃಜನಶೀಲತೆಯೊಂದಿಗೆ ನಿರಂತರ ಪ್ರಯೋಗಶೀಲತೆಗೂ ಅವರ ಬರವಣಿಗೆ ಸಾಕ್ಷಿಯಾಗಿದೆ.

‘ಖಾಸಗಿ ವಿಮರ್ಶೆ’, ‘ಸುಮ್ಮನೆ ಓದೋಣ’ ವಿಮರ್ಶಾ ಸಂಕಲನಗಳ ತರುವಾಯ ಪ್ರಕಟಗೊಳ್ಳುತ್ತಿರುವ ‘ವೈವಿಧ್ಯ’ ಅವರ ಚಿಂತನಶೀಲ ಮನೋಧರ್ಮವನ್ನು ಪ್ರತಿನಿಧಿಸುವ ಕೃತಿಯಾಗಿದೆ. ಇವರ ವ್ಯಾಸಂಗದ ವ್ಯಾಪ್ತಿ, ವಿಸ್ತಾರ ಮತ್ತು ವೈವಿಧ್ಯ ಬೆರಗು ಮೂಡಿಸುವಂಥದು ಮತ್ತು ಸಹಜವಾಗಿಯೇ ಅವು ಇಲ್ಲಿಯ ಬರಹಗಳಲ್ಲಿ ಪ್ರತಿಫಲಿಸಿವೆ. ಇವರ ವಿಶ್ಲೇಷಣೆ ಸಾಕಲ್ಯದಿಂದ ಕೂಡಿದ್ದು, ಅಪರೂಪದ ಒಳನೋಟವನ್ನು ಕಾಣಿಸುತ್ತದೆ. ಇತಿಹಾಸವನ್ನು ವರ್ತಮಾನದ ಮತ್ತು ವರ್ತಮಾನವನ್ನು ಇತಿಹಾಸದ ಪರಿಪ್ರೇಕ್ಷ್ಯದಲ್ಲಿಟ್ಟು ಸತ್ಯನಾರಾಯಣ ನೋಡಬಲ್ಲರು. ವಿದ್ವತ್ತಿನ ಭಾರವನ್ನು ಹೇರದೆ, ಸಹಯಾತ್ರಿಯೆಂಬಂತೆ ಓದುಗರನ್ನು ತಮ್ಮ ಚಿಂತನೆಯ ಪಥದಲ್ಲಿ ಜೊತೆಯಲ್ಲಿ ಕರೆದೊಯ್ಯುವ ಗುಣವನ್ನು ಉಳಿಸಿಕೊಂಡಿದೆಯೆಂಬುದೇ ಅವರ ಬರವಣಿಗೆಯ ಹೆಗ್ಗಳಿಕೆಯಾಗಿದೆ.

ಎಂ ವಿ ವೆಂಕಟೇಶಮೂರ್ತಿ (ಹಿನ್ನುಡಿಯಲ್ಲಿ)

—————

ಈಶ್ವರ ಅಲ್ಲಾ ತೆರೋ ನಾಮ್
ಲೇ: ಡಾ. ಮಹೇಶ್‌ ಕುಮಾರ್ ಸಿ ಎಸ್; ಪ್ರ: ಪ್ರಗತಿ ಗ್ರಾಫಿಕ್ಸ್, ಬೆಂಗಳೂರು

ಕೆಲ ದಶಕಗಳಿಂದ ಕರ್ನಾಟಕದ ಗುರು ದತ್ತಾತ್ರೇಯ ಬಾಬಾ ಬುಡನ್ಗಿರಿ ದರ್ಗಾದ ವಿವಾದ ಕಾರಣ ಮತ್ತು ಅದರ ನಿವಾರಣೆಗೆ ಒಂದು ಪರಿಹಾರವನ್ನು ಈ ಕೃತಿಯು ತನ್ನದೇ ನೆಲೆಯಲ್ಲಿ ಮಂಡಿಸುತ್ತದೆ. ಗಿರಿಯ ವಿವಾದವೇ ಈ ಸಂಶೋಧನೆಯ ಕೇಂದ್ರ ಪ್ರಶ್ನೆಯನ್ನು – ದರ್ಗಾಗಳು ಸಿಂಕ್ರಟಿಸಂನ ಪರಿಣಾಮವೇ? – ರೂಪಿಸುವುದು ಮಾತ್ರವಲ್ಲದೆ, ಅದು ಗಿರಿಯ ವಿವಾದವನ್ನು ಬಗೆಹರಿಸಲು ಮತ್ತಷ್ಟು ವಿಶಾಲ ಪರಿಪ್ರೇಕ್ಷ್ಯದಲ್ಲಿ ದರ್ಗಾಗಳನ್ನು ಇಟ್ಟು ನೋಡಬೇಕಾದ ಅಗತ್ಯವನ್ನು ಸೂಚಿಸುತ್ತದೆ. ಈ ಅಗತ್ಯವನ್ನು ಆಧರಿಸಿ ಮಹೇಶ್, ದರ್ಗಾವನ್ನು ಸಿಂಕ್ರಟಿಸಂ ಎಂದು ಪರಿಕಲ್ಪಿಸುವುದು ಏಕೆ ಸರಿಯಲ್ಲ, ಅದು ಹೇಗೆ ದರ್ಗಾದ ಶ್ರದ್ಧೆಯ ಭಾಗವಾಗಿರುವ ಜನರ ದೃಷ್ಟಿಗೆ ಅನುಗುಣವಾಗಿಲ್ಲ ಎನ್ನುವುದನ್ನು ವಿವರಿಸುತ್ತಾ, ಮುಂದೆ ಹೋಗಿ ದರ್ಗಾ ಸಿಂಕ್ರಟಿಸಂನ ಪರಿಣಾಮವಲ್ಲ ಎಂದು ವಾದಿಸುತ್ತಾರೆ. ಈ ವಾದ ಮಂಡನೆಗೆ, ಸಿಂಕ್ರಟಿಸಂ ಪರಿಭಾಷೆಯ ಪೂರ್ವಗ್ರಹಿಕೆ, ಭಾರತದಲ್ಲಿ ಇದರ ಬಳಕೆಯ ಇತಿಹಾಸವನ್ನು ಪರಿಶೀಲನೆಗೆ ಮತ್ತು ಈ ಪರಿಕಲ್ಪನೆಯ ಬಳಕೆ ಮಾಡುವ ವಿದ್ವಾಂಸರ ತಿಳುವಳಿಕೆಯ ಚೌಕಟ್ಟನ್ನು ಹೊರತೆಗೆದು ತೋರಿಸುತ್ತದೆ. ಇದು ಸಂಶೋಧನೆಯ ಅರ್ಧ ದಾರಿಯ ಪ್ರಯಾಣವಾಗಿದೆ. ಉಳಿದರ್ಧ, ದರ್ಗಾಗಳಿಗೆ ಸಿಂಕ್ರಟಿಸಂಗಿಂತ ಭಿನ್ನವಾದ ವಿವರಣೆಯನ್ನು, ಅದಕ್ಕೆ ನಡೆದುಕೊಳ್ಳುವ ಜನರ ಗ್ರಹಿಕೆಯನ್ನು – ಸಂಶೋಧಕರ ಮಾತಿನಲ್ಲೇ ಹೇಳುವುದಾದರೆ, ವಸ್ತು ಪಾತಳಿಯ ಹಂತದಲ್ಲೇ – ವಿವರಿಸುವ ಸವಾಲನ್ನು ಕೈಗೆತ್ತಿಕೊಳ್ಳುತ್ತದೆ.

ಪ್ರೊ. ಜಿ ಶಿವರಾಮಕೃಷ್ಣನ್ (ಬೆನ್ನುಡಿಯಿಂದ)

——————

ನಮ್ಮ ಸಮಾಜವಾದಿಗಳು (ಕರ್ನಾಟಕದ ಸಮಾಜವಾದಿಗಳ ಪರಿಚಯ)
ಸಂ: ಡಿ ಎಸ್ ನಾಗಭೂಷಣ

ಈ ಸಮಾಜವಾದಿಗಳಲ್ಲಿ ಹಲವರು – ಮುಖ್ಯವಾಗಿ ಎರಡನೇ ತಲೆಮಾರಿನವರು – ರಾಜಕೀಯ ಭ್ರಷ್ಟತೆಯ ಸುಳಿಗೆ ಸಿಕ್ಕರು. ಅದಕ್ಕೆ ಮತ್ತೆ ಅವರ ವೈಯಕ್ತಿಕ ದೌರ್ಬಲ್ಯಗಳಷ್ಟೇ ಸಮಾಜವಾದವನ್ನು ತಾತ್ವಿಕ ಸ್ಥೂಲತೆಯಿಂದ ಕಾಪಾಡಲಾಗದ ಅದರ ಮೊದಲ ತಲೆಮಾರಿನವರ – ಮೇಲೆ ತಿಳಿಸಿದ ಕಾಂಗ್ರೆಸ್ ಯಜಮಾನಿಕೆಯ ರಾಜಕೀಯ ಪ್ರಧಾನ ಧಾರೆಯ ದಟ್ಟ ಪ್ರಭಾವದಿಂದಾಗಿಯೊ ಏನೊ – ರಾಜಕೀಯ ಅಸಹಾಯಕತೆಯೂ ಕಾರಣವಾಗಿರಬಹುದು. ಇದರಿಂದಾಗಿ ಸಮಾಜವಾದ ಮತ್ತು ಸಮಾಜವಾದಿ ಎಂಬ ಎರಡು ಶಬ್ದಗಳೂ ಜನತೆಯ ಮನಸ್ಸಿನಲ್ಲಿ ಅನುಮಾನಾಸ್ಪದ ಶಬ್ದಗಳಾದವು. ಆದರೆ ಈ ಅನುಮಾನಾಸ್ಪದತೆಗೆ ಈ ಎರಡೂ ಶಬ್ದಗಳಲ್ಲಿ ಕಾರಣವಿಲ್ಲ ಎಂಬುದನ್ನು ಶೃತಪಡಿಸುವ ಒಂದು ಪ್ರಯತ್ನವಾಗಿ ಈ ಸಂಕಲನವನ್ನು ಸಂಪಾದಿಸಿ ನೀಡುವ ಪ್ರಯತ್ನ ಮಾಡಲಾಗಿದೆ. ಸಮಾಜವಾದ ಮತ್ತು ಸಮಾಜವಾದಿ ಎಂಬೀ ಶಬ್ದಗಳ ನಿಜವಾದ ಘನತೆ ಮತ್ತು ಗೌರವಗಳನ್ನು ಎತ್ತಿಹಿಡಿಯುವ, ಅಗತ್ಯವಿದ್ದೆಡೆ ಅವನ್ನು ವಿಮರ್ಶೆಗೆ ಈಡುಮಾಡುವಂತಹ ಬರಹಗಳು ಇಲ್ಲಿವೆ.

ಡಿ ಎಸ್ ನಾಗಭೂಷಣ (ಸಂಪಾದಕರ ಮಾತುಗಳಿಂದ)

Share

Leave a comment

Your email address will not be published. Required fields are marked *

Recent Posts More

  • 1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 2 weeks ago No comment

    ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

          ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

  • 2 weeks ago No comment

    ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

    ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

  • 2 weeks ago No comment

    ಉಷಾ ಚಿತ್ತ | ಮೊಲದ ಮರಿ ಗಿಫ್ಟ್

          ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

  • 3 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

  • 14 April 2019
    1 week ago No comment

    ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

            ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

  • 04 April 2019
    3 weeks ago No comment

    ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

    ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

  • 29 March 2019
    4 weeks ago One Comment

    ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                      ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

  • 26 March 2019
    4 weeks ago No comment

    ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

    ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

  • 12 March 2019
    1 month ago No comment

    ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

    ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...