Share

ರಾಮಚಂದ್ರ ದೇವ: ವಿನಯ, ವಿದ್ವತ್ತು
ಮಮತಾ ದೇವ

ರಾಮಚಂದ್ರ ದೇವ (1948-2013) ಕನ್ನಡ ಸಾಹಿತ್ಯದಲ್ಲಿ ಭಿನ್ನ ಸಂವೇದನೆ ದಾಖಲಿಸಿದ ಕವಿ, ಕಥೆಗಾರ ಮತ್ತು ವಿಮರ್ಶಕ. ಇಂಗ್ಲಿಷ್‌ನಲ್ಲೂ ಅಗಾಧ ಪಾಂಡಿತ್ಯವಿದ್ದ ಅವರು, ಷೇಕ್ಸ್‌ಪಿಯರ್‌ನನ್ನು ಎರಡು ಸಂಸ್ಕೃತಿಗಳ ನೆಲೆಯಿಂದ ನೋಡುವ ಅಧ್ಯಯನ ನಡೆಸಿ, ಅದಕ್ಕಾಗಿಯೇ ಪಿಎಚ್‌ಡಿ ಪಡೆದಿದ್ದರು. ಯಾವುದೇ ಪ್ರಶಸ್ತಿ ಬಯಸದೇ ಸದಾ ಕ್ರಿಯಾಶೀಲರಾಗಿದ್ದ, ಅಧ್ಯಯನಶೀಲರೂ ಪರಿಸರ ಹಾಗೂ ದೇಸೀ ಸಂಸ್ಕೃತಿಯ ಅಭಿಮಾನಿಯೂ ಆಗಿದ್ದ ದೇವ ಅವರ ಸಾಹಿತ್ಯ ಕೃಷಿಯ ವ್ಯಾಪ್ತಿ ಕೂಡ ಅಷ್ಟೇ ದೊಡ್ಡದು. ವೈಚಾರಿಕತೆ, ಹೊಸತನ ತುಂಬಿದ ಬರವಣಿಗೆಗಳಿಂದ ಗಮನ ಸೆಳೆದವರು. ಸಾಹಿತ್ಯದ ವಿವಿಧ ಪಂಥಗಳ,ನಾಲ್ಕು ತಲೆಮಾರಿಗೆ  ಸೇರಿದ  ಮೂವತ್ತಕ್ಕೂ ಅಧಿಕ ಲೇಖಕರು,ಪ್ರಸಿದ್ಧ ಸಾಹಿತಿಗಳು, ರಾಮಚಂದ್ರ ದೇವ ಅವರ ಕೃತಿಗಳ ಬಗ್ಗೆ ಬರೆದ ಅನಿಸಿಕೆಗಳು,ವಿಮರ್ಶಾ ಬರಹಗಳು ದೇವಸಾಹಿತ್ಯ ಎಂಬ ಹೆಸರಿನಲ್ಲಿ ಪ್ರಕಟವಾಗಿವೆ.

ದೇವ ಅವರ ಕುರಿತ ಒಂದು ಆತ್ಮೀಯ ನೆನಪು ಈ ಬರಹ.

————————

ನೀನಾಸಂ ನಾಟಕವೆಂದರೆ ಜನ ಮುಗಿಬಿದ್ದು ವೀಕ್ಷಿಸುತ್ತಿದ್ದ ಕಾಲದಲ್ಲಿ ನಾನು ಪದವಿ ತರಗತಿಗೆ ಪಠ್ಯವಾಗಿದ್ದ ಮ್ಯಾಕ್ ಬೆತ್ ಅನುವಾದದ ಪುಸ್ತಕದಿಂದಾಗಿ ರಾಮಚಂದ್ರ ದೇವರವರ ಹೆಸರು ಕೇಳಿದ್ದು. ಗೆಳತಿಯಲ್ಲಿದ್ದ ‘ಮ್ಯಾಕ್ ಬೆತ್’ ಪುಸ್ತಕವನ್ನು ನೋಡಿ ಕಣ್ಣಾಡಿಸಿದ್ದೆ. ಅದರ ನಂತರ ಕೆಲವೇ ತಿಂಗಳುಗಳಲ್ಲಿ ನನಗೆ ಮದುವೆಯ ಪ್ರಪೋಸಲ್ ಬಂದು ನಿಶ್ವಿತಾರ್ಥವಾಗಿದ್ದು ‘ದೇವ’ ಕುಟುಂಬಕ್ಕೆ ಸೇರಿದ ಹುಡುಗ ಶಂಕರ ನಾರಾಯಣ ದೇವರೊಂದಿಗೆ. ಡಾ.ರಾಮಚಂದ್ರ ದೇವ ರ ಬಗ್ಗೆ ವಿಚಾರಿಸುವ ಮೊದಲೇ ಫಿಯಾನ್ಸಿ ಜೊತೆಯಲ್ಲಿ ಕೊಡಗಿನ ಸೋಮವಾರಪೇಟೆಯಲ್ಲಿ ಚಳಿಗಾಲದ ಸಂಜೆಯಲ್ಲಿ ಜೊತೆಯಾಗಿ ಕುಳಿತು ನೀನಾಸಂ ತಂಡದ ರಾಮಚಂದ್ರ ದೇವ ಅನುವಾದಿಸಿರುವ ಮ್ಯಾಕ್ ಬೆತ್ ನೋಡುವ ಅವಕಾಶ ಒದಗಿತ್ತು. ನಾಟಕದ ಸಂಭಾಷಣೆ ಕೇಳುವಾಗ ‘ಆಹಾ ! ಅದೇನು ಭಾಷಾ ಮೋಡಿ !’ ಅನ್ನಿಸಿತ್ತು. ನಟನೆಯೂ ಚೆನ್ನಾಗಿತ್ತು. ಮೆಲುಕು ಹಾಕುವಂತಿದ್ದ ನುಡಿಗಳು- ರಾಮಚಂದ್ರ ದೇವ ಅನುವಾದಿಸಿದ್ದು ಎಂದು ಹೆಮ್ಮೆಯೂ ಆಯಿತು. ಅದಾಗಲೇ ನನ್ನ ಭಾವೀ ಪತಿಯ ಕೈಯಲ್ಲಿ ಸ್ವತ: ರಾಮಚಂದ್ರ ದೇವರವರು ದೆಹಲಿಯಿಂದ ಕಳುಹಿಸಿದ್ದ ಮ್ಯಾಕ್ ಬೆತ್ (ಕನ್ನಡ ಅನುವಾದ) ಪುಸ್ತಕದ ಪ್ರತಿ ಹಾಗೂ ಪತ್ರವೂ ಇತ್ತು. ಇದಲ್ಲದೇ ಇವರ ರಥಮುಸಲ,ಹ್ಯಾಮ್ಲೆಟ್ ಮೊದಲಾದ ಹಲವು ನಾಟಕಗಳು ತೆರೆಕಂಡಿವೆ.ಸಂಸ್ಕೃತದ ಭಗವದಜ್ಜುಕೀಯಂನ ನಾಟಕದ ದೇವರ ಇಂಗ್ಲೀಷ್ ಅನುವಾದ ಇಂಗ್ಲೆಂಡಿನ ಲೀಡ್ಸ್ ಯೂನಿವರ್ಸಿಟಿಯಲ್ಲಿ ಪ್ರಥಮವಾಗಿ ಪ್ರದರ್ಶಿತವಾಗಿತ್ತು.

ನಾನು ‘ದೇವ’ದಲ್ಲೇ ಇದ್ದರೂ ರಾಮಚಂದ್ರ ದೇವರವರ ಭೇಟಿ ಬಹಳ ತಡವಾಗಿಯೇ ಆಯಿತು. ನಾವು ಮೂಲತ: ದೇವದ ಕುಟುಂಬವಿದ್ದಲ್ಲಿದ್ದರೆ, ಡಾ. ರಾಮಚಂದ್ರ ದೇವ ಅವರು ನಮ್ಮ ಕುಟುಂಬಿಕರಾದರೂ 1940-50 ರ ದಶಕದಲ್ಲಿ ಸುಳ್ಯ ತಾಲೂಕಿನ ದೇವಚಳ್ಳ ಗ್ರಾಮದ ‘ದೇವ’ ಮನೆಯಿಂದ,’ದೇವ’ ಗ್ರಾಮದಿಂದ ಅವರ ಹೆತ್ತವರಾದ ದೇವ ರಾಘವೇಂದ್ರಯ್ಯ ಮತ್ತು ಹೊನ್ನಮ್ಮ ತಮ್ಮ ಜಮೀನನ್ನು ಮೂಲಗೇಣಿಗೆ ನೀಡಿ ಕಲ್ಮಡ್ಕ ಗ್ರಾಮಕ್ಕೆ ವಲಸೆ ಹೋದವರು ಮತ್ತು ದೇವ ಅವರು ಉದ್ಯೋಗ ನಿಮಿತ್ತ ದೂರದ ದೆಹಲಿಯಲ್ಲಿದ್ದವರು ಎಂದು ನನಗೆ ನಮ್ಮ ಮನೆಯವರಿಂದ ತಿಳಿಯಿತು.

2016-01-15_20.18.33

ರಾಮಚಂದ್ರ ದೇವ ಊರಿಗೆ ಬರುತ್ತಾರಂತೆ ಇಲ್ಲೇ ಸೆಟಲ್ ಆಗ್ತಾರಂತೆ ಅಂತ ನನ್ನ ಪತಿ ಒಂದು ದಿನ ಹೇಳಿದರು. ಭೇಟಿಯಾಗಬಹುದೆಂಬ ಭರವಸೆ ಇತ್ತು. ನಂತರ ನನ್ನ ಪತಿಗೆ ಕಲ್ಮಡ್ಕದ ಒಂದು ಸಮಾರಂಭದಲ್ಲಿ ದೇವರವರು ಮಾತನಾಡಲು ಸಿಕ್ಕಿದ್ದು ಬಹಳ ಸಂತೋಷವೆನಿಸಿತ್ತು.ಜೊತೆಯಾಗಿ ಕುಳಿತು ಊಟ ಮಾಡುತ್ತಾ ತುಂಬಾ ಮಾತನಾಡಿದರಂತೆ ಇಬ್ಬರೂ. ಸಾಹಿತ್ಯ ಲೋಕದ ಪ್ರಮುಖ ವ್ಯಕ್ತಿಯಾದರೂ ಸರಳ ಹಾಗೂ ಸಜ್ಜನ ನನ್ನ ಅಣ್ಣ (ದೊಡ್ಡಪ್ಪನ ಮಗ ) ಎಂದು ನನ್ನ ಪತಿಗೆ ಸಂತೋಷವಾಗಿತ್ತು. ನಂತರ ಹಲವು ಬಾರಿ ಭೇಟಿಯಾಗಿದ್ದರು. ಅನೇಕ ಪುಸ್ತಕಗಳನ್ನೂ ಕೊಟ್ಟಿದ್ದರು. ನಾನು ಇಂಗ್ಲೀಷ್ ಎಂ.ಎ. ಮಾಡುತ್ತಿದ್ದ ದಿನಗಳಲ್ಲಿ ಅವರನ್ನು ಫೋನ್ ನಲ್ಲಿ ಮಾತನಾಡಿಸಿದ್ದೆ. ನನಗೆ ಸ್ವಲ್ಪ ಅಳುಕಿತ್ತು. ಆದರೆ ಬಹಳ ಚೆನ್ನಾಗಿ ಮಾತನಾಡಿ ನನ್ನ ಅನುಮಾನಗಳಿಗೆ ಉತ್ತರಿಸಿದ್ದರು. ಮನೆಗೂ ನಮ್ಮನ್ನು ಆಹ್ವಾನಿಸಿದ್ದರು. ನನಗೆ ಬೇಕಾದ ಪುಸ್ತಕಗಳು ಎಲ್ಲಿ ಲಭ್ಯವಿದೆ ಎಂದು ತಿಳಿಸಿದ್ದರು. ನಾನವರನ್ನು ಮುಖತ: ಭೇಟಿಯಾಗಿದ್ದು ಪಂಜದಲ್ಲಿ – ಕನ್ನಡ ಸಾಹಿತ್ಯ ಪರಿಷತ್ ನ ಕಾರ್ಯಕ್ರಮದಲ್ಲಿ ನಾನು ತಾಲೂಕು ಕ.ಸಾ.ಪ. ನಿರ್ದೇಶಕಿಯಾಗಿ ತಂಡದವರೊಂದಿಗೆ ತೆರಳಿದಾಗ ಅವರು ಉದ್ಘಾಟಕರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ದದ ಜುಬ್ಬಾ ಧರಿಸಿದ,ಬಿಳಿಗೂದಲು,ಉದ್ದದ ಬಿಳಿಗಡ್ಡವಿದ್ದ ದೇವರವರು ನನ್ನ ಕಣ್ಣಿಗೆ ಕವಿ ರವೀಂದ್ರನಾಥ್ ಟ್ಯಾಗೋರರಂತೆ ಕಂಡಿದ್ದರು. ಪೂಜ್ಯತೆಯಿಂದ ಕೈಮುಗಿದು ಪರಿಚಯ ಹೇಳುವ ಮೊದಲೇ ಸೂಕ್ಷ್ಮ ಗ್ರಹಿಕೆಯಿಂದ ‘ ಮಮತಾ ಅಲ್ವೋ..ನನಗೆ ಶಂಕರ್ ಮಾತ್ರ ನೋಡಿ ಗೊತ್ತು,ಭೇಟಿಯಾಗಿದ್ದು ಸಂತೋಷವಾಯಿತು’ ಎಂದಿದ್ದರು. ಒಂದೆರಡು ನಿಮಿಷ ಮಾತನಾಡಿದರು. ಜೊತೆಯಲ್ಲಿದ್ದವರಿಗೆ –‘ ನನ್ನ ಕಸಿನ್, ತಮ್ಮನ ಪತ್ನಿ’ ಎಂದು ಪರಿಚಯಿಸಿದ್ದರು. ನಂತರ ವೇದಿಕೆಯನ್ನೇರಿದ್ದರು.ನಾನು ಮುಂದಿನ ಸಾಲಿನಲ್ಲಿ ಕುಳಿತು ಪ್ರಥಮವಾಗಿ ಅವರ ಭಾಷಣ ಕೇಳಿದ್ದೆ.ಒಂದೆರಡು ಫೋಟೋಗಳನ್ನು ತೆಗೆದಿದ್ದೆ.

ನಮ್ಮ ಮನೆಗೆ ಬಂದಿದ್ದಾಗ ಅನೇಕ ಸಾಹಿತಿಗಳ ಮತ್ತು ಎಸ್. ಎಲ್ .ಭೈರಪ್ಪನವರ ಬರಹಗಳ ಬಗ್ಗೆ ಮಾತನಾಡಿದ್ದರು.ಅನುಭವ ಹಾಗೂ ಆಳವಾಗಿ ಅಭ್ಯಸಿಸಿ ಬರೆಯುವ ಭೈರಪ್ಪನವರ ಕೃತಿಗಳು ಅವರಿಗೆ ಹೆಚ್ಚು ಹಿಡಿಸಿದ್ದವು. ಅಭಿಮಾನಿಯಾಗಿದ್ದರು ಮಾತ್ರವಲ್ಲ ಅವರು ಅನಂತ ಮೂರ್ತಿಯವರ ಮಿತ್ರರಾಗಿದ್ದರೂ ಅನಂತಮೂರ್ತಿಯವರಿಗಿಂತ ಭೈರಪ್ಪರ ಬರಹಗಳು ಹೆಚ್ಚು ಅನುಭವಾಧಾರಿತ ಮತ್ತು ಹೆಚ್ಚು ಜನಪ್ರಿಯ ಎಂಬುದು ಅವರ ನಿಲುವಾಗಿತ್ತು. ಕೆಲವು ಪುಸ್ತಕಗಳನ್ನು ಕೊಟ್ಟು ಪ್ರೇರೇಪಿಸಿದ್ದರು. ನಾನೊಮ್ಮೆ ಅವರು ಅನುವಾದಿಸಿದ ಯರ್ಮುಂಜ ರಾಮಚಂದ್ರರ ಕತೆಗಳ ಇಂಗ್ಲೀಷ್ ಅನುವಾದವಿದ್ದ ದೇವ ಸಾಹಿತ್ಯ ಬ್ಲಾಗಿನ ಪೋಸ್ಟನ್ನು ಲೈಕ್ ಮಾಡಿದಾಗ – “ ಐ ಯಾಮ್ ಸೊ ಗ್ಲಾಡ್ ಯೂ ಲೈಕ್ಡ್ ಮೈ ಟ್ರಾನ್ಸ್ ಲೇಶನ್ ಆಫ್ ಯರ್ಮುಂಜ. ಇಂಗ್ಲಿಷ್ ನಮ್ಮ ನೆಲದ ನುಡಿಯಲ್ಲ. ನನಗೆ ಬರೆಯಲು ಇಂಗ್ಲೀಷ್ ಗಿಂತ ನಮ್ಮ ನಾಡಿನ ನುಡಿ ಕನ್ನಡವೇ ಇಷ್ಟ…” ಎಂದು ಹೇಳಿದ್ದರು. ನವ ದೆಹಲಿಯಿಂದ ಪ್ರಕಟವಾಗುವ ಸಾಹಿತ್ಯ ಅಕಾಡೆಮಿಯ ದ್ವೈಮಾಸಿಕ ಜರ್ನಲ್ ಇಂಡಿಯನ್ ಲಿಟರೇಚರ್ ನಲ್ಲಿ ಪ್ರಕಟವಾದ ರಿಸಾರ್ಟ್ ಕಥೆಯ ಪ್ರತಿ ಅವರ ಹಸ್ತಾಕ್ಷರದೊಂದಿಗೆ ಮರುದಿನವೇ ಕೊರಿಯರ್ ಮೂಲಕ ನಮಗೆ ತಲುಪಿತ್ತು. ಅದನ್ನು ಸ್ವತ: ಇಂಗ್ಲೀಷ್ ಗೆ ಅನುವಾದಿಸಿದ್ದರು. ನಮಗೆ ಕೊಟ್ಟ ಪುಸ್ತಕಗಳಲ್ಲಿ ಶಂಕರ ಮತ್ತು ಮಮತಾಗೆ … ಎಂದು ಹಸ್ತಾಕ್ಷರದೊಡನೆ ಕೊಡುತ್ತಿದ್ದರು. ಎಲ್ಲಿಯವರೆಗೆ ಓದಿದೆ ?ಎಂದು ಫೋನ್ ಮಾಡಿದಾಗ ಕೇಳುತ್ತಿದ್ದರು. ನಾನೂ ಕೆಲವು ಸಾನೆಟ್ ಗಳನ್ನು ಅನುವಾದ ಮಾಡಿದ್ದನ್ನು ನೋಡಿ ಮೆಚ್ಚುಗೆ ವ್ಯಕ್ತಪಡಿಸಿ ಇನ್ನೂ ಬರೆಯಲು, ಪುಸ್ತಕವಾಗಿ ಪ್ರಕಟಿಸಲು ಸೂಚಿಸಿದ್ದರು. ನಾನು ಬರೆದ ಕತೆಗಳನ್ನು ಓದಿ ಒಂದು ಕಾದಂಬರಿಗೆ ಬೇಕಾದಷ್ಟು ವಿಷಯವಿದೆ. ಬರೆಹ ಚೆನ್ನಾಗಿದೆ ಅದನ್ನು ಪ್ರೀತಿಯಿಂದ,ಶ್ರಧ್ಧೆಯಿಂದ ಇನ್ನೊಮ್ಮೆ ತಿದ್ದಿಯೂ ಬರೆಯಬಹುದು ಎಂದು ಕಿವಿಮಾತು ಹೇಳಿದ್ದರು. (ನಾನು ಒಮ್ಮೆ ಬರೆದುದನ್ನು ಮತ್ತೆ ಯಾಕೋ ನೋಡುತ್ತಿರಲಿಲ್ಲ.) ಕೆಲವು ಕನ್ನಡ ಲೇಖಕರಲ್ಲದೆ, ನಾನೆಂದೂ ಹೆಸರು ಕೇಳಿರದ ಕೆಲವು ವಿದೇಶೀ ಲೇಖಕರ ಕೃತಿಗಳನ್ನು ಓದಲೂ ಸೂಚಿಸಿದ್ದರು!

ಸುದೀರ್ಘ ಹಾಗೂ ಮಹತ್ತರವಾದ ಸಾಹಿತ್ಯ ಜೀವನಾನುಭವದ ಜೊತೆಗೆ ಸಾಹಿತ್ಯದ ಪಾಂಡಿತ್ಯದಿಂದ,ಹೊಸತನದ, ಹೊಸ ಚಿಂತನೆ ನೀಡುವ ಬರಹಗಳ ಅಪರೂಪದ , ಬಹುಮುಖಿ ವ್ಯಕ್ತಿತ್ವದ ಅವರಿಗೆ ಅವರೇ ಸಾಟಿ ಎನಿಸಿದ್ದ ಡಾ.ರಾಮಚಂದ್ರ ದೇವ ಅವರ ವಿಚಾರಧಾರೆ ಹಾಗೂ ಕೃತಿಗಳಿಂದ ಪ್ರೇರಿತಳಾಗಿದ್ದೇನೆ. ಅವರ ಚಿಂತನೆ ಮತ್ತು ಮಾರ್ಗದರ್ಶನವನ್ನೆಂದೂ ಮರೆಯಲಾರೆ.

———————

ಮಮತಾ ದೇವ 2016ಮಮತಾ ದೇವ, ಕೊಡಗಿನಲ್ಲಿ ಜನಿಸಿದವರು. ಬಿ.ಕಾಂ ಪದವೀಧರೆ. ದೆಹಲಿಯ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಿಂದ ಇಂಗ್ಲಿಷ್ ಎಂಎ, ಹಾಗೂ MICE ಸಂಸ್ಥೆಯಿಂದ ಮಾಹಿತಿ ತಂತ್ರಜ್ಞಾನದಲ್ಲಿ ಡಿಪ್ಲೊಮ ಪದವಿ ಪಡೆದಿದ್ದಾರೆ. ಫ್ರೀಲ್ಯಾನ್ಸ್ ಬರಹಗಾರ್ತಿಯಾಗಿ ನಾಡಿನ ವಿವಿಧ ಪತ್ರಿಕೆಗಳಲ್ಲಿ ಬರೆಯುತ್ತಿರುವವರು. ‘ದೇವದುಂದುಭಿ’ ಎಂಬ ಬ್ಲಾಗ್‌ನಲ್ಲೂ ನಿಯಮಿತವಾಗಿ ಬರೆಯುತ್ತಾರೆ. ಇಂಗ್ಲಿಷ್ ಉಪನ್ಯಾಸಕಿಯಾಗಿಯೂ ಕೆಲಸ ಮಾಡಿದ್ದಾರೆ.

Share

2 Comments For "ರಾಮಚಂದ್ರ ದೇವ: ವಿನಯ, ವಿದ್ವತ್ತು
ಮಮತಾ ದೇವ
"

 1. K.Satyanarayana
  17th January 2016

  Nice that some one wrote on DEVA so intimately.His doctoral thesis on Shakespear was not appreciated to the extent it deserved.His essays, translations and poems were also not seen in correct perspective.In essence he has been wronged much.He gave me a rare opportunity to write intro for his essay collection .Though i was moving with him closely for few years i lost touch with him gradually because of my transfers etc. I cherishthe relationship and his guidance .

  Reply
  • Mamatha Deva
   17th January 2016

   I greatly appreciate your nice words Sir. I re-read your Afterword in Dr. Ramachandra Deva’s books.

   Reply

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...