Share

ನನ್ನೊಳಗಿನ ಮೈನಾ ಪಿಸುಗುಟ್ಟಿದಾಗ…
ಅರ್ಚನಾ ಎ ಪಿ

 

 

 

 

ಕಾಣಲು ಸಣ್ಣವೆಂಬ ಸಂಗತಿಗಳ ಸೂಕ್ಷ್ಮದಲ್ಲಿ ಸಂಬಂಧಗಳ ಬಿಂಬ ಗಮನಿಸುತ್ತ…

 

 

ದೊಂದು ಫಲವತ್ತಾದ ಭೂಮಿ, ಎಷ್ಟು ಫಲವತ್ತಾಗಿದೆ ಅಂದರೆ ಕಾಳಿಗೊಂದು ತೆನೆ, ತೆನೆಗೆಂಟು ದಂಟು ಕೊಡೋಷ್ಟು… ಕೇಳುವುದಕ್ಕೇನೇ ಖುಷಿ, ಸಂಭ್ರಮ ಅಲ್ವಾ! ಯಾರಿಗೂ ಅನ್ನದ ಕೊರತೆ ಆಗದಷ್ಟು… ಹಂಚಿತಿನ್ನುವ ಭಾವವೇ ಸಾಕು ಅನ್ನುವ ತೃಪ್ತಿಯ ಪರಾಕಾಷ್ಠೆ. ಅಂದರೆ ಒಂದು ಕೈಯಿಂದ ಕೊಟ್ಟರೆ ಹತ್ತು ಕಡೆಯಿಂದ ಬಂದು ಸೇರತ್ತೆ ಅಂತ ನಮ್ಮ ಹಿರಿಯರು ಹೇಳ್ತಿದ್ರಲ್ಲ ಹಾಗೆ…

ಇದನ್ನೇ ನಾವು ಸಂಬಂಧಗಳಿಗೂ ಅನ್ವಯಿಸಿಕೊಂಡು ನೋಡಿದರೆ, ಎಂತಹ ಮನಮುಟ್ಟುವ, ಅಂತರಂಗದ ಮುಚ್ಚಿದ ಬಾಗಿಲುಗಳನ್ನು ತೆರೆದು, ಶುಭ್ರ ಗಾಳಿಯನ್ನು ಉಸಿರಾಡಲು ಸಾಧ್ಯವಾಗುವ ಅವಕಾಶ ಅನುವಾಗುತ್ತದೇನೋ…

ಬರೀ ತತ್ವ ಆಯ್ತು, ನಿಜ ಜೀವನದಲ್ಲಿ ಇವೆಲ್ಲವೂ ಸಾಧ್ಯ ಇಲ್ಲವೇನೋ ಅಂತ ನನಗೂ ಅನ್ನಿಸ್ತಿತ್ತು, ಆದರೆ ನಿಧಾನವಾಗಿ, ಒಂದೊಂದೇ ಹಂತದಲ್ಲಿ, ಒಂದೊಂದು ಕೆಲಸದ ಜಾಗದಲ್ಲಿ ಅಳವಡಿಸಿಕೊಳ್ಳಲು ಶುರು ಮಾಡಿದಾಗ ಗೊತ್ತಾಯ್ತು, ಆಡೋದೇ ಕಷ್ಟ ಮಾಡೋದೇ ಸುಲಭ ಅಂತ.

ಇದಕ್ಕೆಲ್ಲಾ ಯಾವುದಾದರೂ ಒಂದು ಪ್ರೇರಣೆ, ದೀಪ ಹತ್ತೋಕೆ ಒಂದು ಕಿಡಿ ಬೇಕಲ್ವಾ ಆ ಮಿಂಚು ಹೊಳೆದದ್ದು ತರಂಗ ವಾರಪತ್ರಿಕೆಯಲ್ಲಿ ಆ ಕಥೆ (ಘಟನೆ) ಓದಿದಾಗ. ಅದರ ಸಾರ ಇಷ್ಟೇ:

ಒಂದು ಕುಟುಂಬ… ಎಲ್ಲರ ಮನೆ ಅಂದರೆ ಅತ್ತೆ ಸೊಸೆಯರಿರೋ ಪರಿವಾರದಲ್ಲಿ ಎದುರಾಗುವ ದೈನಂದಿನ ಸಮಸ್ಯೆಯೇ. ಸೊಸೆ ಆ ಸಮಸ್ಯೆ ಹಿಡಿದುಬಂದಿದ್ದು ಒಬ್ಬ ಗುರುಗಳ ಹತ್ತಿರ. ಅವರು ಹೇಳಿದ್ದೂ ಇದನ್ನೇ. ಪ್ರೀತಿ ‘ಕೊಡು’ವಿಕೆ ಬಗ್ಗೆ. ಆಗಲ್ಲ ಅಂದಾಗ ವಿಧಾನವೊಂದನ್ನು ಹೇಳಿಕೊಟ್ಟರು. ಅವಳದನ್ನು ಶುರು ಮಾಡಿ ಯಾವ ಹಂತ ತಲುಪಿತು ಅಂದ್ರೆ ಅತ್ತೆಯ ಕೊನೆಯ ಕಾಲದಲ್ಲಿ ಅತ್ಯಂತ ದುಃಖಪಡೋಷ್ಟು. ಹೆತ್ತ ತಾಯಿಯನ್ನು miss ಮಾಡಿಕೊಳ್ಳುವಷ್ಟು…

ಇದನ್ನು ನನ್ನ ಸಹೋದ್ಯೋಗಿಗಳ ಜೊತೆಗೆ, ಸ್ನೇಹಿತರ ಜೊತೆಗೆ ಇರಬೇಕಾದರೂ ಪಾಲನೆ ಮಾಡಲು ಶುರು ಮಾಡಿದಾಗ ಮೊದಲಿಗೆ ಎಲ್ಲರ ಹಾಗೆ ಹೊಸ ಬದಲಾವಣೆಗೆ ಮನಸ್ಸು ಒಪ್ಪಲ್ಲ, ಸ್ವೀಕರಿಸೋದೂ ಇಲ್ಲ ಅಂತಾರಲ್ಲ ಹಾಗೇ ಆಯ್ತು. ಆದರೆ ಸಂಬಂಧ ಉಳಿಯಬೇಕಾದರೆ ಪರಸ್ಪರರೂ ಎರಡೆರಡು ಹೆಜ್ಜೆ ಇಟ್ಟರೆ ಸರಿ. ಇಲ್ಲಾ ನೀನೇ ನಾಲ್ಕೂ ಹೆಜ್ಜೆ ನಡೆದು ಬಾ ಅಂದಾಗ ಅಲ್ಲಿ ನಿಜವಾಗಿಯೂ ಯಾವ ಬಂಧವೂ ಇರಲ್ವೇನೋ…

ಹೀಗಿರುವಾಗ ನೋಡೇಬಿಡೋಣ ಅಂತ…

ಹಿರಿಯ ಸಹೋದ್ಯೋಗಿ ಒಬ್ಬರು – ನಾನ್ ಯಾವುದೋ ಭಾವಚಿತ್ರ ಹಾಕೊಕೊಂಡಿದ್ದೆ WhatsAppನಲ್ಲಿ, ಜೊತೆಗೆ ಇರುವವರು ಯಾರು ಅಂತ ತಮಗೆ ಬೇಡದ ವಿಚಾರವಾಗಿ (ಅವರ ಸ್ವಭಾವವೇ ಅಂಥಾದ್ದು) ಕೇಳಿದಾಗ ಸಹಜವಾಗಿಯೇ ಕೋಪ ಬಂದು ಒರಟಾಗಿ ಉತ್ತರ ಕೊಟ್ಟಿದ್ದೆ. ಅದಕ್ಕೆ ಮುನಿಸಿಕೊಂಡು ಮಾತು ಬಿಟ್ಟಾಗ ನಾನೇ ಅವರ ಪಾಲಿನ ಎರಡು ಹೆಜ್ಜೆನೂ ಇಟ್ಟು ಮಾತಾಡಿಸಿದಾಗ ಪರಿಸ್ಥಿತಿ ತಿಳಿಯಾಗಿರುವುದಂತೂ ಸುಳ್ಳಲ್ಲ.

ಹೀಗೇ ಇನ್ನೊಂದು ಸಂದರ್ಭ…

ಸಂದಿಗ್ಧ ಎದುರಾಗಿದೆ ಈಗ. ಹಿಂಗೆ ಮುಖಪುಸ್ತಕದಲ್ಲಿ ಆದ ಪರಿಚಯವದು. ಮತ್ತದೇ ಭಾವಚಿತ್ರ ಮತ್ತು status ವಿಚಾರವೇ. “ನಿಮ್ಮ ಹಿಂದಿಯಲ್ಲಿರೋ ಸ್ಟೇಟಸ್ ಮತ್ತು ನಿಮ್ಮ ನಗುಮುಖದ ಹಿಂದಿರೋ ಸೀಕ್ರೆಟ್ ನಂಗೆ ಅರ್ಥ ಆಗ್ಲಿಲ್ಲ. ಆದರೂ ಅರ್ಚನಾ, ಒಂದು ಓದಬೇಕು ಅನ್ಸತ್ತೆ, ಇನ್ನೊಂದು ನೋಡಬೇಕು ಅನ್ಸತ್ತೆ” ಅಂತ ಹೊಗಳಿ ಹೊನ್ನ ಶೂಲಕ್ಕೇರಿಸಿದಾಗ ಎಲ್ಲ ಹೆಂಗಳೆಯರಂತೆ ಹೊಗಳಿಕೆಗೆ ಮನಸೋತು ಸ್ನೇಹ ಒಪ್ಪಿಕೊಂಡು ಮಾತುಕತೆ ಮುಂದುವರೆದು, ಕಾರಣವಿಲ್ಲದೇ ನಿಂತು, ಮತ್ತೆ ಶುರುವಾಗೋದು ಆಗ್ತಿತ್ತು… ಈಗೊಂದಿಷ್ಟು ವಿರಾಮದ ಕಾಲ ಇನ್ನೊಮ್ಮೆ…

ಇದೇ ನಿಯಮದನ್ವಯ ಕೆಲಸ ಹಚ್ಕೊಳ್ಳಬೇಕಾಗಿದೆ.

ಆದರೆ ಒಮ್ಮೊಮ್ಮೆ, ಅಲ್ಲಲ್ಲ ಯಾವಾಗಲೂ ಈ ಥರದ ಸಂಬಂಧದ ಸಂದರ್ಭ ಬಂದಾಗ ನನಗೆ ಬರೋ ಪ್ರಶ್ನೆ, ನಮಗೆ ಇಷ್ಟವಿಲ್ಲದ್ದು ನಾವು ಬೇರೆಯವರಿಗೂ ಮಾಡಬಾರದಲ್ವಾ?

ಉದಾಹರಣೆಗೆ ಕೋಪಿಸಿಕೊಳ್ಳೋದು, ಮಾತು ಬಿಡುವುದು, ಬೈಯುವುದು, ಹಂಗಿಸಿಕೊಳ್ಳುವುದು, ಸ್ಪಂದಿಸದೇ ಇರೋದು, ಉತ್ತರಿಸದೇ ಇರೋದು… ಹೀಗೆ.

ಆಗ ಎಲ್ಲಾ ಬಿಟ್ಟು, ನಮ್ಮತನವನ್ನೂ ಬಿಟ್ಟು, ಏನೋ ಆ ಸಂಬಂಧದ ಅಸ್ತಿತ್ವ ನಮಗೇ ಮುಖ್ಯ ಅನ್ನೋ ಥರ ಇದ್ದುಬಿಡ್ತಾರಲ್ಲ ಎದುರಿನವರು ಅಂತ.

ಏನೇ ಆಗಲಿ, ಹೀಗೆ ನಾವು ಅಂದರೆ ಮನುಷ್ಯರೂ ಒಳ್ಳೇದೇ ಮಾಡ್ತಾರೆ. ಕಾರಣ ನಾನವರಿಗೆ ಒಳ್ಳೆಯದೇ ಶ್ರೇಷ್ಠವಾದದ್ದೇ ಮಾಡ್ತಿದ್ದೀನಿ ಅಂತ ಭೂಮಿತಾಯಿ ನಿರೀಕ್ಷಿಸದೇ ಅದಳನ್ನವಳು ಧಾರೆ ಎರೆಯುತ್ತಾಳೆ.

ನಾನವಳ ಮಗಳು. ಹೇಗೆ ಹಾಗಿರದಿರಲು ಸಾಧ್ಯ!?

ಪಂಛೀ..ನದಿಯಾಂ…ಪವನ್ ಕೆ ಝೋಂಕೆ…ಕೋಯಿ ಸರ್ಹದ್ ನಾ ಇನ್ಹೇ ರೋಕೆ… ಹಾಡು ಯಾಕೋ ನೆನಪಾಗ್ತಿದೆ…

—-

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕವಿಸಾಲು | ಕೈಗಳ ಚಾಚಿ ನೋಡು

      ಕವಿಸಾಲು         ಕಟ್ಟಿಕೊಂಡ ಚೌಕಟ್ಟುಗಳ ಮುರಿದುಬಿಡು ಹರಿಯಬಿಡು ಬಿಳಿ ಗೆಣ್ಣುಗಳಿಗೆ ಮೈಯ ತುಂಬ ಹರಿವ ಮಿಂಚುಗಳನು ತುಂಬಿಕೊಳ್ಳಲಿ ರಕ್ತ, ಮಾಂಸಕ್ಕೆ ಮತ್ತೊಮ್ಮೆ ಭಾವಗಳು ಸುಖಿಸಲಿ ಬೊಗಸೆ ತುಂಬ ಬಿಗಿಯಾಗಿ ಮುಚ್ಚಿದ ಮುಷ್ಠಿಯನ್ನು ಬಿಚ್ಚಿ ಒಮ್ಮೆ ನನಗೆ ತೋರಿಸಿಬಿಡು ಬಚ್ಚಿಟ್ಟುಕೊಂಡಿರುವುದು ನಿನ್ನನ್ನೋ ಕಳೆದುಹೋದರೆ ಎಂಬ ಭಯದಲ್ಲಿ ಭದ್ರವಾಗಿ ಹಿಡಿದ ನೆನಪುಗಳನ್ನೋ ಚೆನ್ನಾಗಿ ಗೊತ್ತು ನಿನ್ನ ಬೆಳಗಾಗುವುದು ಆ ಹಸ್ತ ದರ್ಶನದಲಿ ರಾತ್ರಿಯಾಗುವುದು ಅದೇ ...

 • 7 days ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 2 weeks ago No comment

  ಕಥನ | ಮುಕ್ತಾಯ

    ಕಥನ       ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ನನ್ನ ಜೀವನದ್ದೂ ಕೂಡಾ. ರಣರಂಗದಲ್ಲಿ ವೈರಿಗಳೊಡನೆ ಕಾದಾಡುವಾಗ, ಅದೆಷ್ಟೋ ಸೈನಿಕರ ಛಿದ್ರವಾದ ಶವಗಳನ್ನು ಮಣ್ಣು ಮಾಡಿ ಎದೆಗುಂದಿದಾಗ, ಯುಧ್ಧಖೈದಿಯಾಗಿ ಶತ್ರುದೇಶಕ್ಕೆ ಸೆರೆಸಿಕ್ಕಿ ಅವರು ಕೊಟ್ಟ ಚಿತ್ರಹಿಂಸೆಗಳನ್ನು ಅನುಭವಿಸಿದಾಗ ...

 • 2 weeks ago No comment

  ಕವಿಸಾಲು | ಕಾಡುತ್ತಿರು ಆಗಾಗ ನೀನು

      ಕವಿಸಾಲು         ಎಷ್ಟೊಂದು ಸಾರಿ ಮಾತಾಡುತ್ತಿದ್ದೆ ನಿನ್ನೊಡನೆ ಕೂತು ಗಿಡ, ಬಳ್ಳಿ, ಮರ ಮೋಡಗಳನು ಮನ ಮುಟ್ಟುವ ಪ್ರತಿ ಅಲೆಗಳನು ಕರೆದು ಮಾತಾಡಿಸುತ್ತಿದ್ದೆವು ಹದವಾಗಿ ಬೆರೆತು ರಾತ್ರೋ ರಾತ್ರಿಯ ಕಪ್ಪಿನಲಿ ಕೌತುಕದ ಅಪ್ಪುಗೆಯಲಿ ನಡುಗುವ ಚಳಿಯಲಿ ಒಂದಾಗಿ ಬೆಚ್ಚಗೆ ಕುಳಿತು ಕರಿ ಗಿರಿಶಿಖರಗಳ ಬೆಳ್ಳಿರೇಖೆಗಳನು ಫಳ್ಳನೆ ಮಿನುಗುವ ನಕ್ಷತ್ರಗಳನೂ ಕೈಯಲ್ಲಿ ಹಿಡಿದು ಕುಳಿತು ಮುಖಾಮುಖಿಯಾಗಿ ಕೂತು ಹರಟುತ್ತಿದ್ದೆವು ನಾವೊಂದಾಗಿದ್ದಾಗ ನಮಗನಿಸಿದ್ದನ್ನು ದಿನಚರಿ ...

 • 3 weeks ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...


Editor's Wall

 • 09 November 2018
  7 days ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  3 weeks ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...

 • 31 August 2018
  3 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...