Share

ಇಳಿಸಂಜೆಯ ಪ್ರೀತಿ
ಪ್ರಸಾದ್ ನಾಯ್ಕ್ ಕಾಲಂ

ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು.

 

ವರಿಬ್ಬರೂ ಅಂದು ಜೊತೆಯಾಗಿದ್ದರು.

ಎಲ್ಲಾ ರೀತಿಯಲ್ಲೂ ಕ್ಷಣಗಣನೆಯ ಕಾಲವದು. ಈ ಹಿಂದೆ ಇದ್ದಿದ್ದು ಆ ಭೇಟಿಗಾಗಿ ನಿರೀಕ್ಷೆಯ ಕ್ಷಣಗಣನೆ. ಈಗಿರುವುದು ಇನ್ನೇನು ಈ ಕ್ಷಣವು ಮುಗಿದು ಹೋಗಲಿದೆಯಲ್ಲಾ ಎಂಬ ಆತಂಕದ ಕ್ಷಣಗಣನೆ. ಏಕೆಂದರೆ ಈ ಭೇಟಿಯ ನಂತರ ಮತ್ತೆ ಅವನು ಎಲ್ಲೋ ಹೋಗುತ್ತಾನೆ. ಅವಳು ಇನ್ನೆಲ್ಲಿಗೋ ಸಾಗುತ್ತಾಳೆ. ಅದೊಂದು ಭೌತಿಕವಾದ ದೂರವಷ್ಟೇ ಎಂಬುದು ಇಬ್ಬರಿಗೂ ಗೊತ್ತು. ಆದರೆ ಆತ್ಮಸಾಂಗತ್ಯವಿದ್ದವರಿಗೆ ಎಂಥಾ ದೂರಗಳು? ಆದರೆ ಆಕಾರಕ್ಕೂ ಒಂದು ಮಹತ್ವವಿರುತ್ತದಲ್ಲವೇ? ಹೀಗಾಗಿಯೇ ಈ ಚಿಕ್ಕಪುಟ್ಟ ತವಕ ತಲ್ಲಣಗಳೆಲ್ಲಾ!

ಇಬ್ಬರದ್ದೂ ಮಾಗಿದ ಬಾಂಧವ್ಯ. ಹಾಗೆಂದು ಮುದುಕರೇನೂ ಅಲ್ಲ. ಆದರೆ ತನ್ನ ಅಸಲಿ ವಯಸ್ಸಿನ ದೇಹದೊಳಗೆ, ವಯಸ್ಸಿನ ಎರಡು ಪಟ್ಟು ಹೆಚ್ಚಿನಷ್ಟು ಪ್ರಾಯದ ಆತ್ಮವನ್ನು ಹಿಡಿದುಕೊಂಡು ತಿರುಗಾಡುವಂಥವರ ಪಟ್ಟಿಗೆ ಸೇರುವವರು. ಜೀವನದ ಸಾಕಷ್ಟು ಏಳುಬೀಳುಗಳನ್ನು ಕಂಡವರು. ಅದರಲ್ಲಿ ಮಿಂದೆದ್ದವರು. ಹೀಗಾಗಿಯೇ ಅಲ್ಲಿ ವೃಥಾ ಅವಸರಗಳಿಲ್ಲ. ತೋರಿಕೆಯ ಕ್ಲೀಷೆಗಳಿಲ್ಲ. ಸಾಂಗತ್ಯಕ್ಕೆ ಹೆಚ್ಚಿನ ತೂಕ. ಅದೊಂದು ಹಿತವಾದ ಮುಸ್ಸಂಜೆಯಂಥದ್ದು. ಮಧ್ಯಾಹ್ನದ ಬಿರುಬಿಸಿಲು ಮತ್ತು ರಾತ್ರಿಯ ಕತ್ತಲುಗಳ ನಡುವಿನ ಒಂದು ಆಹ್ಲಾದಕರ ಅವಧಿ. ಸಂಜೆಯಾಗುವುದೆಂದು ಸುಡುವ ಮಧ್ಯಾಹ್ನಕ್ಕೂ ಗೊತ್ತಿರುತ್ತದೆ. ಇನ್ನೇನು ರಾತ್ರಿಯ ಕತ್ತಲು ಬಂದು ನನ್ನನ್ನು ನುಂಗಿಹಾಕಲಿದೆ ಎಂಬುದು ಮುಸ್ಸಂಜೆಗೂ ತಿಳಿದಿರುತ್ತದೆ. ಆದರೂ ಆ ಸಂಜೆಗೊಂದು ಲಾಲಿತ್ಯವಿದೆ. ಇರುವಷ್ಟು ಹೊತ್ತು ಯಾವಾಗಲೂ ನೀನೇ ಇರಬಾರದೇ ಎನ್ನುವಷ್ಟು ಕಾಡುವಂತೆ ಇದ್ದುಬಿಡುತ್ತದೆ. ಇವರಿಬ್ಬರ ಕ್ಷಣಗಳೂ ಕೂಡ ಈ ಮುಸ್ಸಂಜೆಯಂಥದ್ದೇ. ಆ ಕ್ಷಣಗಳನ್ನು ತಮ್ಮದಾಗಿಸಿಕೊಳ್ಳುವುದಷ್ಟೇ ಅವರ ಮುಂದಿರುವ ಆಯ್ಕೆ.

ಅಷ್ಟಿದ್ದೂ ಇಲ್ಲಿ ಗರಿಗರಿಯಾದ ಭಾವಗಳಿವೆ. ಮಾಗಿದ ಪ್ರೀತಿಯೆಂದರೆ ಲವಲವಿಕೆಯಿರಬಾರದು ಎಂದೇನೂ ಇಲ್ಲವಲ್ಲಾ! ಹಾಗಾಗಿ ಇಲ್ಲೂ ಕಾಲೆಳೆಯುವಿಕೆ, ಕುಲುಕುಲು ನಗು, ಹುಸಿಮುನಿಸು, ಪಿಸುಮಾತುಗಳಿವೆ. ಕೈ-ಕೈ ಹಿಡಿದುಕೊಂಡು ಹೋಗುವ ಕಾಲ್ನಡಿಗೆಯಿದೆ. ತೀರಕ್ಕೆ ಬಂದು ಕಾಲಿಗೆ ಮುತ್ತಿಕ್ಕಿ ಮರಳುವ ಪುಟ್ಟ ಅಲೆಗಳನ್ನು ಕಂಡು ಪುಳಕಗೊಳ್ಳುವ ಕ್ಷಣಗಳಿವೆ. ಇವೆಲ್ಲದರ ನಡುವೆ ಕೊಂಚ ಗೊಂದಲಗಳೂ ಇವೆ. ಕರಗುತ್ತಿರುವ ಬೆರಳೆಣಿಕೆಯ ನಿಮಿಷಗಳದ್ದು, ಮುಂದಿನ ಭೇಟಿಯದ್ದು, ನಡೆಯುತ್ತಿರುವ ಅಸಾಂಪ್ರದಾಯಿಕ ದಾರಿಯದ್ದು, ಕನಸಿನಂತೆ ಕಾಣುವ ನನಸಿನದ್ದು… ಹೀಗೆ ಬಹಳಷ್ಟು. ಹೀಗಾಗಿಯೇ ಕೆಲವೊಮ್ಮೆ ನನಗನ್ನಿಸುವುದು. ಮಾಗಿದ ಪ್ರೀತಿಯೆಂದರೆ ಯೌವನದ ಹುಮ್ಮಸ್ಸಿನ, ನಡುವಯಸ್ಸಿನ ಪ್ರಬುದ್ಧತೆಯ ಮತ್ತು ಈವರೆಗೆ ದಕ್ಕಿದ ಜೀವನಾನುಭವಗಳ ಅದ್ಭುತ ಕಾಕ್ ಟೇಲ್ ಎಂದು. ಬಹಳಷ್ಟು ಮಂದಿ ಇದನ್ನು ಸವಿದವರಲ್ಲ. ಹೀಗಾಗಿಯೇ ಇದು ಅವರಲ್ಲಿ ಭಯವನ್ನು ಹುಟ್ಟಿಸುತ್ತದೆ. ಇರಿಸುಮುರುಸಾಗುವಂತೆ ಮಾಡುತ್ತದೆ. ತಪ್ಪು ಮಾಡಿದೆನೋ ಎಂಬ ಪಶ್ಚಾತ್ತಾಪವು ಕಾಡುವಂತೆ ಮಾಡುತ್ತದೆ. ಆದರೆ ಜೀವನದಲ್ಲಿ ಖುಷಿ, ಗೊಂದಲಗಳೆಲ್ಲವೂ ಬೇಕೆಂಬುದು ಅವರಿಬ್ಬರಿಗೂ ಗೊತ್ತಿದೆ. ಏಕೆಂದರೆ ಹಾಗಿಲ್ಲದಿದ್ದರೆ ಬಂಧದಲ್ಲಿ ಕೌತುಕವು ಉಳಿಯುವುದಿಲ್ಲ. ಅಸಲಿಗೆ ‘ತೆರೆದ ಪುಸ್ತಕದಂತಿನ ಜೀವನ’ ಎನ್ನುವುದು ಶುದ್ಧ ಬದನೆಕಾಯಿ. ಗುಟ್ಟು ತಿಳಿಯುವ ಮುನ್ನ ನೋಡಿ ಹುಬ್ಬೇರಿಸಿದ ಪವಾಡಕ್ಕೂ, ನಂತರ ನೋಡುವ ಪವಾಡಕ್ಕೂ ವ್ಯತ್ಯಾಸವಿರುತ್ತದೆ. ಹಿಂದೆ ಟೆಲಿವಿಷನ್ ಸ್ಕ್ರೀನಿನಲ್ಲಿ ಗಾಡ್ಝಿಲಾ, ಜುರಾಸಿಕ್ ಪಾರ್ಕಿನ ಡೈನೋಸಾರುಗಳು ಅಬ್ಬರಿಸಿದಾಗ ನಾವು ಕಣ್ಣರಳಿಸಿ ನೋಡುತ್ತಿದ್ದೆವು. ಈಗ ಅವುಗಳೆಲ್ಲಾ ಕೆಲ ಯಂತ್ರಗಳ, ತಂತ್ರಾಂಶಗಳ ಕೈಚಳಕವಷ್ಟೇ ಎಂದು ನಮಗೆ ಗೊತ್ತಾಗಿಬಿಟ್ಟಿದೆ. ಹೀಗಾಗಿ ಅವುಗಳ ಬಗೆಗಿನ ಕೌತುಕವೂ ಮಣ್ಣುಪಾಲಾಗಿದೆ. ಸಂಬಂಧಗಳಲ್ಲೂ ಅಷ್ಟೇ. ಅಚ್ಚರಿಗಳು ಅಲ್ಲಲ್ಲಿ ಅಷ್ಟಿಷ್ಟು ಬೇಕೇ ಬೇಕು. ಉಡುಗೊರೆ ‘ಸರ್ಪ್ರೈಸ್’ ಆಗಿ ಬಂದಾಗಲೇ ಹೆಚ್ಚಿನ ಸಂತಸವಲ್ಲವೇ?

ಇಂಥಾ ಅಸಾಂಪ್ರದಾಯಿಕ ಬಂಧಗಳಲ್ಲಿ ಸಾಮಾನ್ಯವಾಗಿ ನಾವು ಎತ್ತ ಹೋಗುತ್ತಿದ್ದೇವೆ ಎಂಬುದೇ ತಿಳಿಯುವುದಿಲ್ಲ. ಅಂಥಾ ಚಿಕ್ಕಪುಟ್ಟ ಗೊಂದಲಗಳನ್ನು ಬಿಟ್ಟರೆ ಇನ್ನೇನೂ ಅಲ್ಲಿ ಮಹಾಸಮಸ್ಯೆಗಳಿಲ್ಲ. ವಿಪರ್ಯಾಸವೆಂದರೆ ನಮ್ಮ ನಡುವಿನ ಪ್ರೇಮಕಥೆಗಳು ಸಂಗಮವಾದರಷ್ಟೇ ಸಾಫಲ್ಯ, ಸಾರ್ಥಕತೆ ಎಂಬಂತೆ ಬಿಂಬಿಸಿವೆ. ಸುಖಾಂತ್ಯವಲ್ಲದ ಖ್ಯಾತ ಪ್ರೇಮಕಥೆಗಳು ಶೋಕೇಸಿನೊಳಗಿಟ್ಟ ಆದರ್ಶವೆಂಬ ಟ್ರೋಫಿಯಷ್ಟೇ. ಎಲ್ಲರಿಗೂ ಪಯಣಕ್ಕಿಂತ ಹೆಚ್ಚಾಗಿ ಗಮ್ಯದತ್ತಲೇ ಗಮನ. ಥೇಟು ಮ್ಯೂಚುವಲ್ ಫಂಡ್ ಸ್ಕೀಮುಗಳ ಥರ. ಇಷ್ಟು ವರ್ಷಗಳ ನಂತರ ಎಷ್ಟು ಕೈಗೆ ದಕ್ಕುತ್ತದೆ ಎಂಬ ಬಗ್ಗೆಯೇ ಹೆಚ್ಚಿನ ಆಸಕ್ತಿ ಲೋಕಕ್ಕೆ. ಆದರೆ ಅವಳೋ ಅಕ್ಷರಶಃ ಕವಿತೆಯಂತೆ, ನೆರೂಡನ ಕಾವ್ಯದಂತೆ ಬದುಕುವವಳು. ಇತ್ತ “ಉಮ್ರ್ ಭರ್ ಕಾ ಸಾಥ್ ದೇ ಜೋ ಕ್ಯೋ ವಹೀ ಪ್ಯಾರ್ ಹೋ, ಕ್ಯೋ ನ ಮಿಟ್ ಕೇ ಜೋ ಫನಾ ಹೋ ವೋ ಭೀ ಪ್ಯಾರ್ ಹೋ…”(ಜೀವನಪೂರ್ತಿ ಜೊತೆಯಲ್ಲಿ ಇರುವಂಥದ್ದು ಮಾತ್ರವೇ ಏಕೆ ಪ್ರೀತಿಯಾಗಬೇಕು? ಇದ್ದು ನಂತರ ಕಾಣದಂತೆ ಲೀನವಾಗುವ ಪ್ರೀತಿಯೂ ಕೂಡ ಪ್ರೀತಿಯಲ್ಲವೇ?) ಕವಿಸಾಲು ಅವನಿಗೆ ಪ್ರಿಯವಾದದ್ದು. ಈ ವೈರುದ್ಧ್ಯಗಳ ಮಧ್ಯೆಯೇ ಅವರ ದಿನಗಳು ಸಾಗುತ್ತಿವೆ. ಅಷ್ಟಕ್ಕೂ ಪ್ರೀತಿಯೆಂಬುದು ಇಂಥಾ ಪ್ರಶ್ನೆಗಳಿಗಿಂತಲೂ ಮಿಗಿಲಾಗಿದ್ದಲ್ಲವೇ? ಎಲ್ಲದಕ್ಕೂ ಉತ್ತರ ಸಿಗುವಂತಿದ್ದರೆ ಮನುಷ್ಯ ಪ್ರೀತಿಗೂ ಎ ಪ್ಲಸ್ ಬಿ ಅಂತೆಲ್ಲಾ ಫಾರ್ಮುಲಾಗಳನ್ನು ಹಾಕಿ ಕೈಯೆತ್ತಿಬಿಡುತ್ತಿದ್ದ.

ಹಾಗೆ ನೋಡಿದರೆ ಅವರಿಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ತಕ್ಕಮಟ್ಟಿನ ಯಶಸ್ಸನ್ನು ಪಡೆದವರು. ಆದರೆ ಅಂದು ಅಲ್ಲಿ ಯಾರೂ ಮೇಲುಕೀಳಾಗಿರಲಿಲ್ಲ, ನಾ ಮುಂದು ತಾ ಮುಂದು ಎಂಬ ಸ್ಪರ್ಧೆಯಿರಲಿಲ್ಲ. ಎದುರಿಗಿದ್ದ ಕಡಲು, ಮೇಲಿದ್ದ ಬಾನು ಅಂಥದ್ದೊಂದು ವಿನಯವನ್ನು ಅವರಲ್ಲಿ ತಂದಿತ್ತೇ? ಇದ್ದರೂ ಇರಬಹುದು. ಇದನ್ನೇಕೆ ಹೇಳಿದೆನೆಂದರೆ ಇತ್ತೀಚೆಗೆ ಕೆಲವರು ಮಾತುಮಾತಿಗೂ ‘ಡೋರ್ ಮ್ಯಾಟ್’ ಎಂಬ ಪದವನ್ನು ಬಳಸುತ್ತಾರೆ. ‘ತಾನು ಡೋರ್ ಮ್ಯಾಟ್’ ಆಗಬಯಸುವುದಿಲ್ಲ’ ಎನ್ನುತ್ತಾರೆ. ಈ ‘ಡೋರ್ ಮ್ಯಾಟ್’ ಶರಣಾಗತಿಯೇ ಏಕಾಗಬೇಕು ಎಂಬುದು ಅವನನ್ನು ಕಾಡಿದೆ. ಪ್ರೀತಿಯಲ್ಲಿ ಶರಣಾದರೂ ನಾವೇನು ಸಣ್ಣವರಾಗುತ್ತೇವೆಯೇ? ಕೃಷ್ಣನ ಬಗ್ಗೆ ಮೀರಾಳಿಗಿದ್ದ ಪ್ರೀತಿ, ಇಮ್ರೋಜ್ ರಿಗೆ ಅಮೃತಾರ ಬಗೆಗಿದ್ದ ಪ್ರೀತಿ ಇಂಥವರಿಗೆ ಅರ್ಥವಾಗಬಲ್ಲದೇ ಎಂಬ ಕೌತುಕ ಇವನದು. ಪ್ರೀತಿಯು ಆರಾಧನೆಯ ಭಾವವನ್ನು ತಳೆದಾದ ಮೇಲೆ ಎಲ್ಲಿಯ ಪಾದ, ಎಲ್ಲಿಯ ಕಾಲಡಿಯ ಧೂಳು? ಶುರುವಾಯಿತಲ್ಲಾ! ಇರಲಿ. ಅವನು ಹೀಗೆಯೇ. ಸ್ವಗತದಂತೆ ಪದೇ ಪದೇ ತನ್ನ ಯೋಚನಾಲಹರಿಯಲ್ಲಿ ಕಳೆದುಹೋಗುತ್ತಾನೆ. ಅದೊಂದು ನಿಲ್ಲದ ಚೈನ್ ರಿಯಾಕ್ಷನ್. ತರಹೇವಾರಿ ಭಾವಗಳ ರೋಲರ್ ಕೋಸ್ಟರ್ ಸವಾರಿ.

ಹೀಗೆ ಇಲ್ಲೇ ಇದ್ದು, ಎಲ್ಲೋ ಕಳೆದುಹೋಗಿರುವವನನ್ನು ಅವಳು ಮತ್ತೆ ಈ ಲೋಕಕ್ಕೆ ಎಳೆದುಕೊಂಡು ಬರುತ್ತಾಳೆ. ಪಟಪಟ ಎಂದು ಅರಳುಹುರಿದಂತೆ ಮಾತಾಡುತ್ತಾಳೆ. ಅವನ ಮುಖದಲ್ಲಿ ನಗೆಯನ್ನುಕ್ಕಿಸುತ್ತಾಳೆ. “ನಾನೇನು ಪಿಟೀಲಿನಂತೆ ಕುಯ್ಯುತ್ತಿದ್ದೇನಾ” ಎಂದು ನಗುತ್ತಾ ಕೇಳುತ್ತಾಳೆ. “ನೀ ವಟವಟ ಎಂದರೂ ಗಝಲ್ ನಂತೆ ಕೇಳುತ್ತದೆ” ಎಂದು ಅವನು ಕಾವ್ಯಮಯವಾಗಿ ನಿಷ್ಕಪಟ ದನಿಯಲ್ಲಿ ಉತ್ತರಿಸುತ್ತಾನೆ. ಹವೆಯಲ್ಲಿ ನಗುವು ಬೆರೆತುಹೋಗುತ್ತದೆ. ಈ ಗುಂಗಿನಲ್ಲೇ ತನ್ನ ಮಾತುಗಳು ಎಲ್ಲಿ ಕಳೆದುಹೋದವು ಎಂದು ಅವನು ನಿಜಕ್ಕೂ ತಲೆಕೆರೆದುಕೊಳ್ಳುತ್ತಾನೆ. ಇಲ್ಲವಾದರೆ ಈ ಬಗ್ಗೆ ಅವಳೇ ಕೇಳಿ ಅವನು ತಲೆಕೆರೆದುಕೊಳ್ಳುವಂತೆ ಮಾಡುತ್ತಾಳೆ. “ಸದ್ಯ ನಾನು ಕನಸು ಕಾಣುತ್ತಿದ್ದೇನೋ, ಇವೆಲ್ಲವೂ ನಿಜವಾಗಿಯೂ ನಡೆಯುತ್ತಿವೆಯೋ ಗೊತ್ತಾಗುತ್ತಿಲ್ಲ. ಹೀಗಾಗಿ ಕಳೆದುಹೋಗಿದ್ದೆ” ಎಂದು ಅವನು ಅಳುಕುತ್ತಲೇ ಹೇಳುತ್ತಾನೆ. ಹೀಗೆಲ್ಲಾ ಅಪ್ರಿಯ ಸತ್ಯವನ್ನು ನೇರವಾಗಿ ಹೇಳುವುದು, ಅನಿಸಿದ್ದನ್ನೆಲ್ಲವನ್ನೂ ದನಿಯಾಗಿಸುವುದು ಅವನ ಮಟ್ಟಿಗೆ ನಿಲುಕುವಂಥದ್ದಲ್ಲ. ಆದರೂ ಅವನು ಹಾಗೆಂದು ಹೇಳಿಬಿಡುತ್ತಾನೆ. ಏಕೆಂದರೆ ಅವಳೊಂದಿಗೆ ಅವನಿಗೆ ಅಂಥಾ ಅಳುಕಿಲ್ಲ. ಈ ಮಾತನ್ನು ಕೇಳಿದ ಅವಳೋ ಜೋಕು ಕೇಳಿದವಳಂತೆ ನಕ್ಕುಬಿಡುತ್ತಾಳೆ. “ಯೂ ಆರ್ ಸೋ ಫಿಕ್ಷನಲ್, ಟೂ ಗುಡ್ ಟು ಬಿ ಟ್ರೂ” ಅಂತಲೂ ಅವನು ಕಣ್ಣರಳಿಸಿ ಹೇಳುತ್ತಾನೆ. ಅದಕ್ಕವಳು ಮತ್ತಷ್ಟು ನಗುತ್ತಾಳೆ.

ದಿನವು ಇಳಿಸಂಜೆಯ ಮಗ್ಗುಲನ್ನು ಬದಲಾಯಿಸಿ ರಾತ್ರಿಯ ಕಡೆಗೆ ಹೊರಳುತ್ತಿದೆ. ಸಮಯ ಸರಿದದ್ದು ಒಮ್ಮೆಲೇ ಗೊತ್ತಾಗುತ್ತದೆ. ಸಮಯದ ಪರಿವೆಯೇ ಇಲ್ಲದೆ ಹರಟುತ್ತಿದ್ದವರಿಗೆ ಒಮ್ಮೆಲೇ ಆಗುವ ಜ್ಞಾನೋದಯವದು. ಕ್ಷಣವು ಇಂದು ಇಲ್ಲಿಗೇ ಸ್ತಬ್ಧವಾಗಬಾರದಿತ್ತೇ ಎಂದು ಇಬ್ಬರೂ ಒಳಗೊಳಗೇ ಯೋಚಿಸುತ್ತಾರೆ. “ಇಡೀ ದಿನ ನಾನೊಬ್ಬಳೇ ಮಾತಾಡಿದ್ದು. ನೀನು ಕಲ್ಲಿನ ಮೂರ್ತಿಯಂತಿದ್ದೆ” ಎಂದು ಅವಳು ಹುಸಿಮುನಿಸು ತೋರಿಸುತ್ತಾಳೆ. ಅವನು ಅದಕ್ಕೂ ಮಾತಾಗದೆ ನಗುತ್ತಾನೆ. ನಂತರ “ಅದೇನೋ ದೇ ಟಾಕ್ಡ್ ಅಬೌಟ್ ಎವೆರಿಥಿಂಗ್ ಆಂಡ್ ನಥಿಂಗ್ ಅಂತಾರಲ್ವಾ ಹಾಗಾಯ್ತು ನಮ್ಮ ಕಥೆ” ಎನ್ನುತ್ತಾನೆ ಆತ. ಅವನ ಮಾತಿಗೆ ಹೌದ್ಹೌದೆನ್ನುವಂತೆ ಕಡಲ ತೀರದ ತೆಂಗಿನ ಗರಿಗಳೂ ಕೂಡ ತಲೆದೂಗುತ್ತವೆ. ಅತ್ತ ದೂರದ ದಿಗಂತದಲ್ಲಿ, ನೀಲಿ ನೀರಿನಲ್ಲಿ ತೇಲುತ್ತಿರುವ ಸೂರ್ಯ ಕಿತ್ತಳೆಯಂತೆ ಕಾಣುತ್ತಿದ್ದಾನೆ. ಚಂದ್ರನ ಪಾಳಿ ಇನ್ನೇನು ಶುರುವಾಗಲಿದೆ. “ತಾನು ಚಂದಿರನ ಪ್ರೇಯಸಿ” ಎಂದು ಬೀಗುವ ಅವಳ ಮಾತನ್ನು ನೆನೆಸಿಕೊಂಡು ಅವನ ತುಟಿಯಂಚಿನಲ್ಲಿ ನಗುವೊಂದು ಮೂಡುತ್ತದೆ. ಏನಾಯ್ತು, ಕೇಳುತ್ತಾಳೆ ಅವಳು. ಏನಿಲ್ಲ ನಡಿ, ಅನ್ನುತ್ತಾನೆ ಅವನು.

ಹೊರಡುವ ಹೊತ್ತು ಬಂದಿದೆ. ಕ್ಷಣಗಣನೆ ಮಾಡಲು ಇನ್ನು ಕೈಯಲ್ಲೀಗ ಕ್ಷಣಗಳು ಉಳಿದಿಲ್ಲ. ಜೊತೆಯಲ್ಲಿ ಕಳೆದ ಕ್ಷಣಗಳು ಪದಗಳಲ್ಲಿ ಹಿಡಿದಿಡಲಾರದಷ್ಟು ಸುಂದರ. ನೆನಪುಗಳು ಬರೋಬ್ಬರಿ ಮೂರು ಜನ್ಮಗಳಿಗಾಗುವಷ್ಟು ಸಾಕು. ಗಾಢವಾದ ಆಲಿಂಗನದೊಂದಿಗೆ, ಮುಂದೆ ಮತ್ತೆ ಭೇಟಿಯಾಗುವ ತಾರೀಖಿಲ್ಲದ ಭರವಸೆಯೊಂದಿಗೆ ಇಬ್ಬರೂ ತಮ್ಮ ತಮ್ಮ ದಾರಿ ಹಿಡಿಯುತ್ತಾರೆ. ಎದೆಬಡಿತಗಳು ತಾಳತಪ್ಪಿದಂತೆ, ಮೌನಗಳು ಮಾತಾಡತೊಡಗಿದಂತೆ ಭಾಸವಾಗುತ್ತದೆ. ಹೃದಯವೀಗ ಹವಾಮಹಲ್.

ಸೂರ್ಯ ಮುಳುಗುತ್ತಾನೆ. ಪ್ರೀತಿ ಉಳಿಯುತ್ತದೆ!

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 13 hours ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 week ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 2 weeks ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 3 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  4 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  1 month ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...