Share

ಭ್ರಷ್ಟತೆಯೆಂಬ ಕೊಳಚೆಯ ಹರಿವೊಡೆದು…
ಕಾದಂಬಿನಿ ಕಾಲಂ

 

 

 

 

 

 

 

 

 

 

ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?

 

ನಾನು ತುಂಬ ಸಣ್ಣವಳಿದ್ದಾಗ ನಾವು ಆ ಮನೆ ಖರೀದಿಸಿದ್ದೆವು. ಅದರ ಎದುರಲ್ಲಿ ಒಂದು ಬೋರ್ಡ್ಗಲ್ಲು ಇತ್ತು. ನಾನು ಮತ್ತು ತಮ್ಮ ಅದರ ಸುತ್ತ ಮುತ್ತ ಆಡಿಕೊಂಡಿರುತ್ತಿದ್ದೆವು. ಆ ಸಣ್ಣ ವಯಸ್ಸಿನಲ್ಲಿ ನಾನು ಅಕ್ಷರಗಳು ಕಂಡಲ್ಲೆಲ್ಲ ಕೂಡಿಸಿ ಓದತೊಡಗುತ್ತಿದ್ದೆ. ಆ ಬೋರ್ಡಿನಲ್ಲಿ ಎರಡೂ ಬದಿ ನಮ್ಮ ಪಕ್ಕದೂರಿನ ಹೆಸರುಗಳು ಹಾಗೂ ಬಾಣದ ಗುರುತಿದ್ದು, ಕೆಳಗಡೆಯಲ್ಲಿ ಲೋಕೋಪಯೋಗಿ ಇಲಾಖೆ ಎಂದು ಬರೆದಿತ್ತು. ಆಗೆಲ್ಲ ರಸ್ತೆ ಹೊಂಡ ಬಿದ್ದರೆ ಅವಕ್ಕೆ ಜಲ್ಲಿಕಲ್ಲುಗಳನ್ನು ತುಂಬಿ, ಕಾಯಿಸಿ ಕರಗಿಸಿದ ಡಾಂಬರನ್ನು ಸಾರಣಿಗೆಯಂತಹ ತೂತುಗಳುಳ್ಳ ಸೌಟಿನಂತಹ ಪಾತ್ರೆಯಲ್ಲಿ ತೆಗೆದು ಜಿಲೇಬಿಯನ್ನು ಬಾಣಲೆಗೆ ಹೊಯ್ಯುವಂತೆ ಈ ಜಲ್ಲಿಕಲ್ಲುಗಳ ಮೇಲೆ ಹೊಯ್ಯುತ್ತಿದ್ದರು. ನನ್ನ ಪರಿಚಿತ ಕೆಲ ಹುಡುಗರು ಹಿರಿಯರ ಕಣ್ಣು ತಪ್ಪಿಸಿ ಸುಡುಬಿಸಿಲಲ್ಲಿ ಈ ಡಾಂಬರು ಕರಗಿದ್ದ ಸಮಯದಲ್ಲಿ ಅದನ್ನು ತೆಗೆದು ಬೋರ್ಡ್ಗಲ್ಲಿನ ಅಕ್ಷರಗಳನ್ನು ಕೆಡಿಸಿ ಅಪಭ್ರಂಶಗೊಳಿಸುತ್ತಿದ್ದರು. ಇದನ್ನು ನೋಡುತ್ತಿದ್ದ ನಾನು ಶಾಲೆಗೆ ಹೋಗುವಾಗ ದಾರಿಯಲ್ಲಿ ಸಿಗುತ್ತಿದ್ದ ಮೈಲುಗಲ್ಲುಗಳ ಮೇಲೆ ‘ಸಾಗರ’ ಎಂದು ಬರೆದಿದ್ದರೆ ಅದನ್ನು ಸ್ವಲ್ಪ ಮಟ್ಟಿಗೆ ತಿದ್ದುವುದರಿಂದ ಹೇಗೆ ‘ನಾರಠ’ ಅಥವಾ ‘ಸಾಠಠ’ ಎಂದೆಲ್ಲ ಯೋಚಿಸುತ್ತಿದ್ದೆ. ಯಾಕೆಂದರೆ ನನಗಾಗ ಹಾಗೆ ಮಾಡುವುದು ತಪ್ಪೆಂಬ ಅರಿವಿರಲಿಲ್ಲ. ತಿಳಿಸಿಕೊಡುವವರೂ ಇರಲಿಲ್ಲ.

ನಂತರ ಪ್ರೈಮರಿ ಶಾಲೆಯಿಂದ ಮಿಡ್ಲ್ ಸ್ಕೂಲಿಗೆ ಹಾಕಿದಾಗ ನಾನು ಎರಡು ಕೆರೆಗಳನ್ನೂ ಒಂದು ಪೇಟೆಯನ್ನೂ ದಾಟಿ ಹೋಗಬೇಕಿತ್ತು. ನಮ್ಮ ಶಾಲೆಯ ಹತ್ತಿರದಲ್ಲೇ ಜೋಗ್ ಫಾಲ್ಸ್ ಚಿತ್ರವುಳ್ಳ ದೊಡ್ಡದೊಂದು ಬೋರ್ಡ್ಗಲ್ಲು ಇತ್ತು. ಅದರ ಮೇಲೆ ‘ಪ್ರಪಂಚದಲ್ಲಿಯೇ ಅತ್ಯಂತ ಸುಂದರವಾದ ಜೋಗ್ ಜಲಪಾತವನ್ನು ಸಂದರ್ಶಿಸಲು ಮರೆಯದಿರಿ’ ಎಂದು ಬರೆದಿದ್ದರೆ ಯಾರೋ ಈ ಸಾಲಿನಲ್ಲಿರುವ ಪ್ರಪಂಚ ಪದದ ‘ಪ್ರ’ ಅಕ್ಷರವನ್ನು ಪೂರ್ಣವಾಗಿ ಕಿತ್ತು ‘ಚ’ ಅಕ್ಷರವನ್ನು ‘ಚೆ’ ಮಾಡಿ ‘ಜಲಪಾತ’ ಪದದ ‘ಪಾ’ ಅಕ್ಷರವನ್ನು ‘ತೂ’ ಎಂದು ತಿದ್ದಿಹಾಕಿದ್ದರು. ಇದನ್ನು ನೋಡಿದ್ದೇ ಆ ಸಣ್ಣ ವಯಸ್ಸಿನಲ್ಲೂ ಏನೋ ಹೇಸಿಗೆ ಭಾವ ಮೂಡಿ ಬೋರ್ಡ್ಗಲ್ಲುಗಳನ್ನು ನೋಡಲು ಒಳಗೊಳಗೇ ಭಯವಾಗತೊಡಗಿತು.

ನಮ್ಮ ಶಾಲೆಯಲ್ಲಿ ಶಿಕ್ಷಕರಿಗಾಗಿ ಎರಡು ಶೌಚಾಲಯಗಳು ಒಂದಕ್ಕೊಂದು ತಾಗಿಕೊಂಡೇ ಇದ್ದವು. ನಮ್ಮ ಕಿಟಕಿಯಿಂದ ಅವು ಕಾಣುತ್ತಿದ್ದವು. ಇದರ ಗೋಡೆಯ ತುಂಬ ಏನೇನೋ ಕೆಟ್ಟ ಭಾಷೆಯಲ್ಲಿ ಬರೆದಿರುತ್ತಿತ್ತು. ಅದೇ ಸಂದರ್ಭ ಒಂದು ದಿನ ನಮ್ಮ ಶಾಲೆಯ ಗೋಡೆಗಳ ತುಂಬೆಲ್ಲ ನಮ್ಮ ಟೀಚರು ಮತ್ತು ಮೇಷ್ಟ್ರು ಒಬ್ಬರ ಹೆಸರನ್ನು ಬರೆದು ನಡುವೆ ಬಾಣ ತೂರಿಹೋದ ಹೃದಯದ ಚಿತ್ರವನ್ನು ಮತ್ತು ಅಶ್ಲೀಲ ಪದಗಳನ್ನು ಬರೆಯಲಾಗಿತ್ತು. ಆಗ ನಮ್ಮ ಮುಖ್ಯೋಪಾಧ್ಯಾಯರು ಅದನ್ನು ಮಕ್ಕಳ ಕೈಲಿ ಸ್ವಚ್ಛಗೊಳಿಸಲು ಹೇಳಿದ್ದರೂ ಅದು ಪೂರ್ತಿ ಅಳಿಸಿ ಹೋಗಿರಲಿಲ್ಲ. ಪ್ರಾರ್ಥನೆಗೆ ನಿಂತಾಗ ಮುಖ್ಯೋಪಾಧ್ಯಾಯರು ಇದು ಕಿಡಿಗೇಡಿಗಳ ಕೆಲಸವೆಂದಿದ್ದರು. ನಾನು ಸಾಲಾಗಿ ನಿಂತ ಮಕ್ಕಳನ್ನೇ ನೋಡುತ್ತ ನಮ್ಮ ನಡುವೆಯೇ ಆ ಕಿಡಿಗೇಡಿಗಳು ಇದ್ದಾರಲ್ಲವಾ ಎಂದು ಯೋಚಿಸುತ್ತಿದ್ದೆ. ನನಗೂ ‘ಸಾರಠ’ ಎಂದು ಅಕ್ಷರ ತಿದ್ದಬಹುದೆಂದು ಅನಿಸಿದ ಹಾಗೆಯೇ ಆ ಕಿಡಿಗೇಡಿಗೂ ಅನಿಸಿರಬಹುದು, ಈ ಕಿಡಿಗೇಡಿತನ ಹೆಚ್ಚಾಗಿ ಈ ಮಟ್ಟಕ್ಕೆ ಹೋಗಿರಬಹುದು ಎಂದು ತರ್ಕಿಸುತ್ತಿದ್ದೆ. ನಂತರದ ದಿನಗಳಲ್ಲಿ ನಾನು ಇಂಥವನ್ನು ತುಂಬ ನೋಡುತ್ತಿದ್ದೆ. ನನಗನಿಸುತ್ತದೆ, ನನ್ನ ಹಾಗೆಯೇ ಅವರಿಗೂ ಅವರು ಮಾಡುವುದು ತಪ್ಪೆಂಬ ಅರಿವಿರಲಿಕ್ಕಿಲ್ಲ. ಹಾಗೆಲ್ಲ ಯಾಕೆ ಮಾಡಕೂಡದೆಂದು ತಿಳಿಸುವವರು ಯಾರೂ ಇದ್ದಿರಲಿಕ್ಕಿಲ್ಲ.

ಡೆಸ್ಕುಗಳ ಮೇಲೆ ಏನೇನೋ ಗೀಚಿರುವುದು, ಕಾಂಪೌಂಡುಗಳ ಮೇಲೆಲ್ಲ ಇಲ್ಲಿ ಪೋಸ್ಟರು ಅಂಟಿಸಬಾರದು, ಏನೂ ಬರೆಯಬಾರದು ಎಂದಿದ್ದರೂ ಅಲ್ಲಿ ಅದೆಲ್ಲವನ್ನೂ ಮಾಡಿ ಹೊಲಸೆಬ್ಬಿಸಿರುವುದು, ಇಲ್ಲಿ ಮೂತ್ರ ವಿಸರ್ಜಿಸಬಾರದು ಎಂದು ಬರೆದಿರುವಲ್ಲೇ ಮೂತ್ರ ವಿಸರ್ಜಿಸುವುದು, ಉಗುಳಬಾರದು ಎಂದು ಬರೆದಲ್ಲೇ ಉಗುಳುವುದು, ಇಲ್ಲಿ ಪಾರ್ಕಿಂಗ್ ಮಾಡಬಾರದು ಎಂದು ಬರೆದರೂ ಪಾರ್ಕ್ ಮಾಡುವುದು, ಪಾರ್ಕಿನ ಹೂ-ಹೂಗಿಡಗಳನ್ನು ಕೀಳಬಾರದು ಎಂದಲ್ಲೇ ಕಿತ್ತುಕೊಂಡು ಹೋಗುವುದು, ಬಸ್ಸುಗಳ ಸೀಟುಗಳಿಗೆ ಬ್ಲೇಡ್ ಹಾಕುವುದು, ಮಹಿಳೆಯರಿಗೆ, ಅಂಗವಿಕಲರಿಗೆ ಮೀಸಲಾದ ಜಾಗಗಳನ್ನು ಇತರರು ಆಕ್ರಮಿಸುವುದು, ಧೂಮಪಾನ ಮಾಡಬಾರದು ಎಂದು ಬರೆದಲ್ಲೇ ಅದನ್ನು ಮಾಡುವುದು, ಹೋಟೆಲುಗಳಲ್ಲಿ ತಟ್ಟೆಯಲ್ಲಿ ಕೈ ತೊಳೆಯಬಾರದು ಎಂದು ಬರೆದಿದ್ದರೂ ಅವರಿವರ ಕಣ್ಣು ತಪ್ಪಿಸಿ ಕೈ ತೊಳೆದುಬಿಡುವುದು ಇದನ್ನೆಲ್ಲ ನೋಡುವಾಗ ಅವರಿಗೂ ಅದು ತಪ್ಪೆಂಬ ಅರಿವಿಲ್ಲವೇ? ಅವರಿಗೂ ಯಾರೂ ಹೇಳಿಕೊಟ್ಟಿಲ್ಲವೇ ಇದೆಲ್ಲ ತಪ್ಪೆಂದು ಎಂದು ನನಗೆ ಅನಿಸತೊಡಗುತ್ತದೆ.

ಕಳೆದ ವಾರದ ನನ್ನ ಅಂಕಣ ಬರಹದಲ್ಲಿ ನಾನು ‘ಬಡತನ ದೇಶಕ್ಕಂಟಿದ ಶಾಪವಲ್ಲ, ಶಾಪವಾಗಿರುವುದು ಭ್ರಷ್ಟ ರಾಜಕಾರಣ ಮತ್ತು ಭ್ರಷ್ಟ ವ್ಯವಸ್ಥೆ’ ಎಂದು ಬರೆದಿದ್ದೆ. ಈ ಭ್ರಷ್ಟತೆ, ಕೊಳಕು ಮನಸ್ಸು ಎಷ್ಟೆಲ್ಲ ಓದಿಕೊಂಡರೂ ಯಾಕೆ ನಮ್ಮೊಳಗೆ ಉಳಿದುಕೊಂಡುಬಿಟ್ಟಿದೆ ಎಂದು ನಾನು ಚಕಿತಗೊಳ್ಳುತ್ತಲೇ ಇರುತ್ತೇನೆ. ಕೆಲ ದಿನಗಳ ಹಿಂದೆ ವಿದೇಶಕ್ಕೆ ಹೋದ ನಮ್ಮ ದೇಶದ ಪತ್ರಕರ್ತರು ಅಲ್ಲಿ ಔತಣ ಕೂಟದಲ್ಲಿ ಬೆಳ್ಳಿಯ ತಟ್ಟೆ ಚಮಚಗಳನ್ನು ಕದ್ದು ಸಿಕ್ಕಿಬಿದ್ದರು ಎಂಬ ವರದಿ ನೋಡಿದೆ. ಮೊನ್ನೆ ಗೊಮ್ಮಟನ ಮಹಾಮಸ್ತಕಾಭಿಷೇಕದ ಭದ್ರತೆಗಾಗಿ ಹೋದ ಪೋಲೀಸರೇ ಕಂಬಳಿ ಕದ್ದು ಸಿಕ್ಕಿಬಿದ್ದರು ಎಂಬ ವರದಿ. ಹಾಗಾದರೆ ಓದು ಇದು ತಪ್ಪೆಂಬ ಅರಿವನ್ನು ಕರುಣಿಸದೇ ಹೋಯಿತೇ? ಏನು ದಕ್ಕೀತು ಇದನ್ನೆಲ್ಲ ಕದಿಯುವುದರಿಂದ? ಯಾರೋ ನಟಿ ವಿದೇಶಕ್ಕೆ ಹೋದಾಗ ಏನೋ ಕದ್ದು, ಸಿಕ್ಕಿಬಿದ್ದ ವರದಿಯಾಗುವಾಗ ಈ ಸ್ವಭಾವಕ್ಕೆ ಕ್ಲೆಪ್ಟೋಮೇನಿಯಾ ಎನ್ನುತ್ತಾರೆ ಎಂದು ನಾವುಗಳು ಸಮಾಧಾನಪಟ್ಟುಕೊಳ್ಳುವಂತಾಗುತ್ತದೆ.

ಹೌದು, ಅದೆಂತಹ ಗುರುತರ ಅಪರಾಧವೇ ಆಗಿದ್ದರೂ ಎಲ್ಲದಕ್ಕೂ ನಮ್ಮಲ್ಲಿ ಸಮರ್ಥನೆಗಳಿವೆ. ಇವತ್ತಿನ ಶಿಕ್ಷಣ, ಸಮಾಜ ನಮ್ಮಲ್ಲಿ ನೈತಿಕತೆಯನ್ನು ತುಂಬಲು ಅಸಮರ್ಥವಾಗಿದೆ ಎಂದು ಸಮರ್ಥಿಸಿಕೊಂಡು ಸಮಾಧಾನ ತಾಳಿಬಿಡುತ್ತೇವೆ. ಹಾಗೆ ಆಗಿದ್ದರಿಂದ ಹೀಗಾಯಿತು, ಹೀಗೆ ಮಾಡಿದ್ದರಿಂದ ಹಾಗಾಯಿತು ಎಂದು ಸಂತಯಿಸಿಕೊಂಡು ಸುಮ್ಮನಾಗಿಯೇಬಿಡುತ್ತೇವೆ.

ನನಗೀಗಲೂ ಆತಂಕವಾಗುವುದು, ಅರೆಬರೆ ಓದಿಕೊಂಡವನೊಬ್ಬ ಕೊಲೆಗಡುಕ, ಕಳ್ಳ, ರೌಡಿ, ಮತಾಂಧ ಹೀಗೆ ಹೇಗೆಹೇಗೋ ಬದುಕಿಬಿಡುವವರ ಕುರಿತಲ್ಲ. ಬದಲಿಗೆ ಕವಿ, ಸಾಹಿತಿ, ಸಜ್ಜನ ರಾಜಕಾರಣಿ, ಪ್ರಾಮಾಣಿಕ ವ್ಯಕ್ತಿ, ನಿಷ್ಠಾವಂತ ಅಧಿಕಾರಿ, ಸತ್ಯವಂತ, ಹೃದಯವಂತ ಅನಿಸಿಕೊಂಡವರೇ ಹಿಂಬಾಗಿಲಲ್ಲಿ ಮತ್ತಾವುದೋ ಮುಖವಾಡಗಳಲ್ಲಿ ಸಂಚರಿಸತೊಡಗುವಾಗ. ಯಾವುದೋ ಯೂನಿವರ್ಸಿಟಿಯ ಉನ್ನತ ಸ್ಥಾನದಲ್ಲಿರುವ, ಒಳ್ಳೆಯ ವ್ಯಕ್ತಿ ಎನಿಸಿಕೊಂಡಿರುವ ಹಿರಿಯರೊಬ್ಬರು ಹೊಸದಾಗಿ ಸೇರ್ಪಡೆಯಾದ ಕಿರಿಯ ವಿದ್ಯಾರ್ಥಿನಿಯೊಟ್ಟಿಗೆ ಸಂಬಂಧವಿರಿಸುವುದು ಅಸಂಬದ್ಧ ಎನಿಸಬಹುದಾದರೂ ಅದನ್ನು ಅವರ ವೈಯಕ್ತಿಕ ವಿಚಾರವೆಂದು ಬಿಟ್ಟುಬಿಡಬಹುದು. ಆದರೆ ಅದೇ ಹಿರಿಯರು ಈ ಕಿರಿಯಳ ಜೊತೆ ತಿರುಗುವ ದರಬಾರದಲ್ಲಿ ಇನ್ನಾರಿಗೋ ಅನ್ಯಾಯವೆಸಗುವುದು, ಮತ್ತಾರಿಗೋ ಪಕ್ಷಪಾತಿಯಾಗುವುದು, ಈ ಮೋಹದಲ್ಲಿ ಅರ್ಹರ ಅವಕಾಶಗಳನ್ನು ಕಿತ್ತುಕೊಂಡು ಆ ಕಿರಿಯಳಿಗೆ ಆಯಕಟ್ಟಿನ ಜಾಗಗಳಲ್ಲಿ ಕೂರಿಸುವುದು, ಮುಂದೆ ಆ ಅನರ್ಹ ಕಿರಿಯಳಿಂದ ಅದೆಷ್ಟೋ ಜನ ನಲುಗಬೇಕಾಗಬೇಕಾಗಿ ಬರುವುದು ಹೀಗೆಯೇ ಗೊತ್ತೇ ಆಗದಂತೆ ಬಚ್ಚಲ ನೀರು ಮನೆಬಾಗಿಲ ಕಿರು ಚರಂಡಿಗೂ, ಕಿರು ಚರಂಡಿಯ ಕೊಳಚೆ ಹಲವು ಚರಂಡಿಗಳು ಸೇರುವ ದೊಡ್ಡ ಕಾಲುವೆಗೂ ಅಲ್ಲಿಂದ ನದಿಗೂ ಹರಿಯುವಂತೆ ಸಾಗಿಬಿಡುತ್ತದೆ ಭ್ರಷ್ಟತೆಯ ಹರಿವು!

ಹಾಗಾದರೆ ರೋಗವೊಂದು ಬಾಧಿಸುತ್ತಿದೆಯೆಂದಾದರೆ ರೋಗಕ್ಕೆ ಮದ್ದು ಹುಡುಕುವ ಮುನ್ನ ರೋಗಕ್ಕೆ ಕಾರಣ ಹುಡುಕಬೇಕಾಗುತ್ತದೆಯಲ್ಲವೇ? ಯಾಕೆಂದರೆ ಎಷ್ಟೋ ಸಲ ಆ ಕಾರಣದಲ್ಲೇ ಮದ್ದು ಕೂಡ ಇರುತ್ತದೆ. ರೋಗವು ಕವಲೊಡೆದು ಹಬ್ಬುತ್ತಿದೆಯೆಂದಾದರೆ ಅದರ ಬೇರು ಕೀಳುವುದರ ಬದಲು ನೆತ್ತಿಯ ಚಿಗುರು ಕಡಿದೇನು ಫಲ? ಈ ಭ್ರಷ್ಟತೆ ಎನ್ನುವುದು ಎಷ್ಟು ವಿಚಿತ್ರ ವೃಕ್ಷವೆಂದರೆ ಒಳ್ಳೆಯ ವ್ಯಕ್ತಿಯೊಬ್ಬನಲ್ಲಿ ಭ್ರಷ್ಟತೆಯ ಕಿರು ಬೇರುಗಳೂ, ವ್ಯಕ್ತಿ ಹೆಚ್ಚು ಹೆಚ್ಚು ಕೆಟ್ಟವನಾಗುತ್ತ ಸಾಗಿದಂತೆ ಅವನೊಳಗಿನ ಕೆಟ್ಟತನಕ್ಕೆ ತಕ್ಕಂತೆ ರೆಂಬೆ, ಕೊಂಬೆಗಳು, ಕಾಂಡ ಅಡಗಿ ಅದು ಚಿಗುರೊಡೆಯುತ್ತ ಬೆಳೆಯುತ್ತಲೇ ಇರುತ್ತದೆ. ಹಾಗಾಗಿ ಸಜ್ಜನರೊಳಗಿನ ಬೇರುಗಳನ್ನು ಹುಡು ಹುಡುಕಿ ಕಿತ್ತೆಸೆಯದ ಹೊರತು ದುರ್ಜನರ ಒಳಗಿನ ಭ್ರಷ್ಟತೆಯ ಹೆಮ್ಮರ ಸಾಯುವುದಿಲ್ಲ. ಹೌದು. ಅವರು ಹೀಗೆ ಪ್ರಶ್ನಿಸುತ್ತಾರೆ, ‘ಅವನು ಅಷ್ಟೆಲ್ಲ ಓದಿ, ಅಷ್ಟು ಪುಸ್ತಕ ಬರೆದು ಅಷ್ಟು ದೊಡ್ಡ ಸಾಹಿತಿ ಅನಿಸಿಕೊಂಡೋನೇ ಲಾಬಿ ಮಾಡಿ ಪ್ರಶಸ್ತಿ ತಗೋತಾನೆ ನಮ್ಮದೇನ್ರೀ?’, ‘ಆ ಹೋರಾಟಗಾರ ಎಷ್ಟು ಸಾಚಾ ಅನ್ನೋದು ಗೊತ್ತೇನ್ರೀ?’ ಎಂದು. ಮತ್ತು ನಾನು ಇಲ್ಲಿ ಹೇಳುವ ಭ್ರಷ್ಟತೆಯ ಬೇರು ಅಡಗಿರುವುದು ಇಲ್ಲಿಯೇ! ಯಾರಿಗೂ ಕಾಣುವುದಿಲ್ಲವೆಂದು ಬಚ್ಚಿಟ್ಟುಕೊಂಡ ನಮ್ಮ ಠಕ್ಕ ಮನಸ್ಸೇ ಆ ಕಿರುಬೇರು. ಇವತ್ತು ‘ಕದ್ದರೆ ಕಳ್ಳನಲ್ಲ ಸಿಕ್ಕಿಬಿದ್ದರೆ ಮಾತ್ರ ಕಳ್ಳ’ ಎಂಬ ಪರಿಸ್ಥಿತಿಯಿರುವಾಗ ನಮ್ಮ ನಮ್ಮ ಠಕ್ಕ ಮನಸ್ಸುಗಳನ್ನು ನಾವು ಶುದ್ಧಗೊಳಿಸಬಲ್ಲೆವಾ? ಭ್ರಷ್ಟ ವ್ಯವಸ್ಥೆಯೊಂದನ್ನು ನಿರ್ಮೂಲನ ಮಾಡಬಲ್ಲೆವಾ?

ಸಮಾಜದ ಒಳಿತುಗಳೆಲ್ಲದರ ಅರ್ಥ ಕೆಡಿಸಿ ವಿರೂಪಗೊಳಿಸಿಲ್ಲವೇ ನಾವಿಂದು? ‘ಸರಕಾರಿ ಕೆಲಸ ದೇವರ ಕೆಲಸ’ ಎಂದು ಬೋರ್ಡು ತಗುಲಿ ಹಾಕಿಕೊಂಡ ಕಛೇರಿಗಳು, ‘ನ್ಯಾಯವೇ ದೇವರು’ ಎಂಬ ಫಲಕ ನೇತುಹಾಕಿಕೊಂಡ ನ್ಯಾಯಮಂದಿರಗಳು, ಭದ್ರತಾ ಸಿಬ್ಬಂದಿ ಎಂದು ಕರೆಸಿಕೊಂಡ ರಕ್ಷಣಾ ವ್ಯವಸ್ಥೆ, ವೈದ್ಯೋ ನಾರಾಯಣೋ ಹರಿ ಎಂದು ಸ್ತುತಿಸಿಕೊಳ್ಳುವ ವೈದ್ಯರು, ವಿದ್ಯೆ ಎಂದರೆ ಅರಿವು ಎನ್ನುವ ಶಿಕ್ಷಣ ವ್ಯವಸ್ಥೆ, ಸತ್ಯವನ್ನೇ ಹೇಳುತ್ತೇವೆ ಎನ್ನುವ ಮಾಧ್ಯಮಗಳು ಹೀಗೆ ಪ್ರತಿಯೊಂದರ ಅರ್ಥವೂ ವಿರೂಪಗೊಂಡು ವಿಕಾರವಾಗಿಲ್ಲವೇ? ಹಾಗಾದರೆ ಬೋರ್ಡ್ಗಲ್ಲುಗಳ ಮೇಲಿನ ಅಕ್ಷರ ಕೆಡಿಸಿ ಅಪಭ್ರಂಶಗೊಳಿಸಿದ ವಿಕೃತಿಗಿಂತ ಇದು ಹೇಗೆ ಭಿನ್ನ? ಅದರ ಮುಂದುವರಿದ ಭಾಗದಂತಿಲ್ಲವೇ ಇದು? ಮತ್ತು ಇದನ್ನೆಲ್ಲ ಮಾಡಿದ ವಿಕೃತ ಕಿಡಿಗೇಡಿಯೊಬ್ಬ ನಮ್ಮೊಳಗೂ ಇದ್ದಾನೆ. ಹಾಗಿದ್ದೂ ಇತರರ ಒಳಗಿನ ಆ ವಿಕೃತನನ್ನು ಕೊಲ್ಲುವಂತೆ ಆಗ್ರಹಿಸುತ್ತ ನಮ್ಮೊಳಗಿನವನನ್ನು ಪೋಷಿಸುತ್ತ ಸ್ವಸ್ಥ ಸುಂದರ ಸಮಾಜದ ಕನಸೊಂದನ್ನು ಕಣ್ಣುತುಂಬಿಕೊಂಡು ಕೂತುಬಿಟ್ಟಿದ್ದೇವೆ…

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಕೆಲವು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ.

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಕವಿಸಾಲು | ಕೈಗಳ ಚಾಚಿ ನೋಡು

      ಕವಿಸಾಲು         ಕಟ್ಟಿಕೊಂಡ ಚೌಕಟ್ಟುಗಳ ಮುರಿದುಬಿಡು ಹರಿಯಬಿಡು ಬಿಳಿ ಗೆಣ್ಣುಗಳಿಗೆ ಮೈಯ ತುಂಬ ಹರಿವ ಮಿಂಚುಗಳನು ತುಂಬಿಕೊಳ್ಳಲಿ ರಕ್ತ, ಮಾಂಸಕ್ಕೆ ಮತ್ತೊಮ್ಮೆ ಭಾವಗಳು ಸುಖಿಸಲಿ ಬೊಗಸೆ ತುಂಬ ಬಿಗಿಯಾಗಿ ಮುಚ್ಚಿದ ಮುಷ್ಠಿಯನ್ನು ಬಿಚ್ಚಿ ಒಮ್ಮೆ ನನಗೆ ತೋರಿಸಿಬಿಡು ಬಚ್ಚಿಟ್ಟುಕೊಂಡಿರುವುದು ನಿನ್ನನ್ನೋ ಕಳೆದುಹೋದರೆ ಎಂಬ ಭಯದಲ್ಲಿ ಭದ್ರವಾಗಿ ಹಿಡಿದ ನೆನಪುಗಳನ್ನೋ ಚೆನ್ನಾಗಿ ಗೊತ್ತು ನಿನ್ನ ಬೆಳಗಾಗುವುದು ಆ ಹಸ್ತ ದರ್ಶನದಲಿ ರಾತ್ರಿಯಾಗುವುದು ಅದೇ ...

 • 5 days ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 2 weeks ago No comment

  ಕಥನ | ಮುಕ್ತಾಯ

    ಕಥನ       ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ನನ್ನ ಜೀವನದ್ದೂ ಕೂಡಾ. ರಣರಂಗದಲ್ಲಿ ವೈರಿಗಳೊಡನೆ ಕಾದಾಡುವಾಗ, ಅದೆಷ್ಟೋ ಸೈನಿಕರ ಛಿದ್ರವಾದ ಶವಗಳನ್ನು ಮಣ್ಣು ಮಾಡಿ ಎದೆಗುಂದಿದಾಗ, ಯುಧ್ಧಖೈದಿಯಾಗಿ ಶತ್ರುದೇಶಕ್ಕೆ ಸೆರೆಸಿಕ್ಕಿ ಅವರು ಕೊಟ್ಟ ಚಿತ್ರಹಿಂಸೆಗಳನ್ನು ಅನುಭವಿಸಿದಾಗ ...

 • 2 weeks ago No comment

  ಕವಿಸಾಲು | ಕಾಡುತ್ತಿರು ಆಗಾಗ ನೀನು

      ಕವಿಸಾಲು         ಎಷ್ಟೊಂದು ಸಾರಿ ಮಾತಾಡುತ್ತಿದ್ದೆ ನಿನ್ನೊಡನೆ ಕೂತು ಗಿಡ, ಬಳ್ಳಿ, ಮರ ಮೋಡಗಳನು ಮನ ಮುಟ್ಟುವ ಪ್ರತಿ ಅಲೆಗಳನು ಕರೆದು ಮಾತಾಡಿಸುತ್ತಿದ್ದೆವು ಹದವಾಗಿ ಬೆರೆತು ರಾತ್ರೋ ರಾತ್ರಿಯ ಕಪ್ಪಿನಲಿ ಕೌತುಕದ ಅಪ್ಪುಗೆಯಲಿ ನಡುಗುವ ಚಳಿಯಲಿ ಒಂದಾಗಿ ಬೆಚ್ಚಗೆ ಕುಳಿತು ಕರಿ ಗಿರಿಶಿಖರಗಳ ಬೆಳ್ಳಿರೇಖೆಗಳನು ಫಳ್ಳನೆ ಮಿನುಗುವ ನಕ್ಷತ್ರಗಳನೂ ಕೈಯಲ್ಲಿ ಹಿಡಿದು ಕುಳಿತು ಮುಖಾಮುಖಿಯಾಗಿ ಕೂತು ಹರಟುತ್ತಿದ್ದೆವು ನಾವೊಂದಾಗಿದ್ದಾಗ ನಮಗನಿಸಿದ್ದನ್ನು ದಿನಚರಿ ...

 • 2 weeks ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...


Editor's Wall

 • 09 November 2018
  5 days ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  2 weeks ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...