Share

ಅವರ ಕೆಲಸವಾದರೆ ಆಯಿತು!
ಅರ್ಚನಾ ಎ ಪಿ

 

 

 

 

 

 

 

मको जो ताने देते है
हम खोये हैं इन रंगरलियों में
हमने उनको भी छुप छुप के
आते देखा इन गलियों में
ये सच है झूठी बात नहीं
तुम बोलो ये सच है ना

ನಿಜ ತಾನೇ ಇದು,
ಯಾವುದು?
ಅದೇ… ಆಚಾರ ಹೇಳೋದು ಬದನೆಕಾಯಿ ತಿನ್ನೋದು. ಹೌದು ಇರಬಹುದು. ಇರಬಹುದು ಏನು, ಇದೇ, ಅದೇ ಸತ್ಯ.

ಹಿಂಗೇ ಮುಖಪುಸ್ತಕದ ಪುಟಗಳನ್ನು ತಿರುವಿ ಹಾಕ್ತಾ ಇರಬೇಕಾದ್ರೆ, ಸಣ್ಣ ಝೆನ್ ಕಥೆ ಒಂದು ಕಣ್ಣಿಗೆ ಬಿತ್ತು.

ಒಬ್ಬ ಶಿಷ್ಯ ತನ್ನ ಗುರುವನ್ನು ‘ಹೇಗಾದರೂ ಮಾಡಿ’ ಸೋಲಿಸಬೇಕು ಅಂತ ನಿರ್ಧಾರ ಮಾಡ್ಕೊಂಡು ಪಕ್ಷಿಯೊಂದನ್ನು ಕೈಯಲ್ಲಿ ಹಿಡಿದು ತಂದು ಬಚ್ಚಿಟ್ಟುಕೊಂಡು, ಗುರುಗಳಿಗೆ ಕೇಳ್ತೀನಿ, ಕೈಲಿ ಹಿಡಿದಿರೋ ಪಕ್ಷಿ ಸತ್ತಿದೆಯಾ, ಬದುಕಿದೆಯಾ, ಅಂತ. ಅವರೇನಾದ್ರೂ ಸತ್ತಿದೆ ಅಂದರೆ ಪಕ್ಷಿಯನ್ನು ಹಾರಲು ಬಿಟ್ಟು ಅವರ ಮಾತನ್ನು ಸುಳ್ಳು ಮಾಡ್ತೀನಿ, ಅಕಸ್ಮಾತ್ ಬದುಕಿದೆ ಅಂದರೆ ಕೈಯಲ್ಲೇ ಕತ್ತು ಹಿಸುಕಿ ಕೊಂದು ಅವರ ಮುಂದಿಟ್ಟು ಸೋಲಿಸ್ತೀನಿ ಅಂತ full proof plan ಮಾಡಿಕೊಂಡು ಬಂದು ಗುರುಗಳಿಗೆ ಕೇಳಿದ:

ಗುರುಗಳೇ, ನನ್ನ ಕೈಲಿರೋ ಹಕ್ಕಿ ಬದುಕಿದೆಯಾ ಸತ್ತಿದೆಯಾ?
ಗುರುಗಳಂದ್ರು, ‘ಉತ್ತರ ನಿನ್ನ ಕೈಯಲ್ಲೇ ಇದೆ.’

ಎಷ್ಟು ಅರ್ಥಗರ್ಭಿತ ಪ್ರತಿಕ್ರಿಯೆ.
ಧನಾತ್ಮಕವಾಗಿ ಆದರೂ ತೊಗೋಬಹುದು, ಋಣಾತ್ಮಕವಾಗಿ ಆದರೂ ಸ್ವೀಕರಿಸಬಹುದು. ಏನೇನೋ ಯೋಜನೆ ಯೋಚನೆಗಳು, ವಿಚಾರ- ವಿಮರ್ಶೆಗಳು, ಏನೇನೋ ಭರವಸೆಗಳು. ಆದರೆ ಆಗೋದು ಮಾತ್ರ ಏನಾಗಬೇಕೆಂದಿರತ್ತೋ ಅದೇ. ಹಾಗಾಗಿ ವರ್ತಮಾನದಲ್ಲಿ ಬದುಕಬೇಕು ಅಂತ positive ಆಗಿ ತೊಗೊಂಡ್ರೆ ಸಂದರ್ಭ ಬೇರೆ ಆಗತ್ತೆ.

ಅದೇ,
ಹೀಗೆ ಯಾರನ್ನೋ ಸೋಲಿಸಬೇಕು, ಯಾರಿಗೋ ಗಾಳ ಹಾಕಿ ಸೆರೆ ಹಿಡಿದು ಒಂಚೂರು ಕಿಚಾಯಿಸಬೇಕು, ಮತ್ತ್ಯಾರಿಗೋ ತಮ್ಮ ತಪ್ಪುಗಳ ಪಾಲುದಾರರನ್ನಾಗಿ ಮಾಡಿ ಶಿಕ್ಷೆ ಕೊಡಿಸಬೇಕು, time pass ಮಾಡಲು ಆಟಿಕೆಯಾಗಿ ಹೀಗೆ ಹಲವಾರು ‘ನಿಸ್ವಾರ್ಥ’ ಯೋಜನೆಗಳನ್ನಿಟ್ಟುಕೊಂಡೇ ಹೆಜ್ಜೆ ಮುಂದಿಡೋದು. ಹಲವು ಬಾರಿ ಗೆದ್ದು ಬಿಡೋದು, ಕೆಲವೇ ಕೆಲವು ವೇಳೆ ಅಂದರೆ ತುಂಬಾ ಕಡಿಮೆ ಸಲ ಸೋಲು.

ಕೆಲಸ ಆಗುವವರೆಗೂ ಒಂಥರಾ, ಕೆಲಸ ಆದಮೇಲೆ ಒಂಥರಾ. ತಮ್ಮ ಹತ್ತಿರ ಇಲ್ಲದ ಪುಸ್ತಕಕ್ಕೋ, ಇಲ್ಲಾ ಯಾವುದೇ ದುಡ್ಡು ಸಿಗಲ್ಲ ಅಂತ ತಿಳಿದು ಅದರಿಂದ ತಪ್ಪಿಸಿಕೊಳ್ಳಲು ಮತ್ತು ಆ ಜವಾಬ್ದಾರಿಯನ್ನು ಹೊರಿಸಲು ಬೇಕಾದ ‘ಉಚಿತ’ ನಿರೂಪಣೆಗೆ ಸರಿಯಾದ ವ್ಯಕ್ತಿ ಅಂತಲೋ, ಯಾವುದೋ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಗೆ ಉತ್ತರ ಹುಡುಕಲು, ಬೇಕಾದ ವಸ್ತುಗಳನ್ನು ಕೇಳಲು, ಹೀಗೆ ಮುಂದುವರಿಯತ್ತೆ ಎಲ್ಲರ ಅವಶ್ಯಕತೆಗಳ ಪಟ್ಟಿ. ಆಗಷ್ಟೇ ನಮ್ಮ ಇರವು, ಅಸ್ತಿತ್ವ, ಬದುಕಿದ್ದೀವಿ ಅನ್ನುವ ‘ಜ್ಞಾನೋದಯ’ವಾಗಿಬಿಡತ್ತೆ.

ಅದೂ ಆಡೋದು ಹೇಗೆಂದರೆ, ನಮ್ಮ ಹತ್ತಿರ ಸಹಾಯ ಕೇಳಿ ಅವರು ನಮಗೇ ಉಪಕಾರ ಮಾಡ್ತಿದ್ದಾರೆ ಅಂತ ವರ್ತಿಸುವುದು, ಬೇಡ ಅಂತಂದು ನಾವು ಎಲ್ಲಿ ತಪ್ಪು ಮಾಡ್ತಿದ್ದೀವೇನೋ ಅಂತ ‘ಪಾಪಪ್ರಜ್ಞೆ’ ಕಾಡಬೇಕು, ಹಾಗೆ ಮಾಡ್ತಾರೆ ತಮ್ಮ ನಡವಳಿಕೆಗಳಿಂದ.

ये सच है झूठी बात नहीं, बोलो ये सच है ना.

ಈ ಜಗತ್ತಿನ ಎಲ್ಲಾ ರೀತಿ ನೀತಿಗಳನ್ನು ಬೈಯುತ್ತಾ, ಕದ್ದು ಮುಚ್ಚಿ ಅವುಗಳನ್ನೇ ಅನುಸರಿಸೋ ವಿಧಾನಗಳೇ ಎದ್ದು ಕಾಣುತ್ತವೆ. ಎಲ್ಲರೂ ಹೇಳ್ತಾರೆ, ಈಗ ಸಂಬಂಧಗಳಿಗೆ ಬೆಲೇನೇ ಇಲ್ಲದಾಗಿದೆ, ಅಪ್ಪ ಅಮ್ಮ, ಅಣ್ಣ ತಂಗಿ, ಹಿರಿಯರು ಮೊಮ್ಮಕ್ಕಳು, ಯಾರಿಗೂ ಯಾವ ಸಂಬಂಧ ಉಳಿಸಿಕೊಳ್ಳುವ ಹಂಬಲವೇ ಇಲ್ಲ. ಆದರೆ
ನಾನು ಮಾತ್ರ ಪ್ರಯತ್ನಪಡ್ತೀನಪ್ಪ, ಯಾರಾದರೂ ಮಾತಾಡಲಿಲ್ಲ ಅಂದರೆ ನಾನೇ ಮುಂದಾಗಿ ಹೋಗಿ ಮಾತಾಡಿಸಿ ಮೌನಕ್ಕೊಂದು ಅಂತ್ಯ ಹಾಕ್ತೀನಿ ಯಾಕೆಂದರೆ ಕೆಲವೊಂದರ ಮಹತ್ವ ಜೀವನದಲ್ಲಿ ತುಂಬಾ ಚೆನ್ನಾಗಿ ಆಗಿದೆ ಅಂತ ಜಂಭ ಹೊಡೆಯೋದು, ನಿಜವಾಗಿಯೂ ಹಾಗೊಂದು ಮೌನದ ವಿಜೃಂಭಣೆಯಾದಾಗ, ಬೇಕಿದ್ರೆ ಅವರೇ ಮಾತಾಡಲಿ ಎನ್ನುವ ಹಾಗೆ ನಡ್ಕೊಳೋ ಭಾವ. ಇದೇ ವಾಡಿಕೆ ಆಗಿಬಿಟ್ಟಿದೆ.

ये सच है झूठी बात नहीं , बोलो ये सच है ना.

ಹೇಳೋದು ಮಾತ್ರ ಈರುಳ್ಳಿ ಬೆಳ್ಳುಳ್ಳಿ ತಿನ್ನಲ್ಲಪ್ಪ, ಹೊರಗೆ ಕರೆದ ಪದಾರ್ಥಗಳನ್ನು ಮೂಸಿಯೂ ನೋಡಲ್ಲ, ಹೊಟೆಲೂಟ ಆರೋಗ್ಯಕ್ಕೆ ಒಳ್ಳೆಯದಲ್ಲ ಅಂತ. ಆದರೆ, ಹೋದ ವಾರದಲ್ಲೇ, ಅವರ ಈ ಮಾತುಗಳಿಗೆ ತದ್ವಿರುದ್ಧವಾಗಿ ಚೆನ್ನಾಗಿ ಈರುಳ್ಳಿ ಹಾಕಿ ಕರಿದ ಬೋಂಡಾ, ಬೆಳ್ಳುಳ್ಳಿ ಒಗ್ಗರಣೆ ಹಾಕಿದ ಸಾಗು ವನ್ನು ಬೆರಳು ಚಪ್ಪರಿಸುತ್ತಾ ಗುಳುಂ ಮಾಡುತ್ತಿರುವುದನ್ನು, ರಸ್ತೆ ಮೂಲೇಲೊಬ್ಬರು ಅಜ್ಜಿ, ಬಜ್ಜಿ ಮಾಡ್ತಿರೋದನ್ನು ಗಮನಿಸಿ ನಾಲಿಗೆ ಚಪಲ ತಡೆಯಲಾರದೆಯೋ, ಇಲ್ಲ ಹೊರಗೆ ಕರೆದಿರುವುದು ತಿನ್ನಲ್ಲ ಎಂಬ ತಮ್ಮದೇ ಮಾತಿನ ‘ಜಾಣ ಮರೆವೋ’ ಅಥವಾ ಯಾರ ಮುಂದೆ ಆ ವಚನ ಧಾರಣೆ ಆಗಿದೆಯೋ ಅವರೇನೂ ನೋಡ್ತಿಲ್ಲವಲ್ಲ ಅಂತಲೋ ಸವಿದೂ ಸವಿದೂ ತಿನ್ನುವುದನ್ನು ನೋಡಿದಾಗಲಂತೂ ನಮಗೆ ನೀತಿ ಹೇಳುತ್ತಿರುವವರು,

खोये हैं इन रंगरलियों में ,
ये सच है झूठी बात नहीं , बोलो ये सच है ना. ಅಂತ ಅನಿಸದೇ ಇರಲಾರದು.

ಓಹ್ ನೀವ್ ಟೀಚರಾ.. ನನ್ ಮಗನಿಗೆ ಒಂದ್ ತಿಂಗಳು ಪಾಠ ಹೇಳಿಕೊಡಿ, ಓಹ್ ನೀವ್ ಆಕಾಶವಾಣಿಯಲ್ಲಿ ಕೆಲಸ ಮಾಡೋದಾ, ನನ್ ಮಗಳೂ ತುಂಬಾ ಚೆನ್ನಾಗಿ ಹಾಡ್ತಾಳೆ ನಿಮ್ಮಲ್ಲಿ ಒಂದ್ ಅವಕಾಶ ಕೊಡಿಸಿ, ಕೇಳಿ ಹೇಳಿ. ನಿಮ್ ಶಾಲೇಲಿ ಒಂದ್ ಸೀಟ್ ಬೇಕಿತ್ತು, ಪ್ರಾಂಶುಪಾಲರಿಗೊಂದು ಮಾತ್ ಹೇಳಿ ಕೊಡಿಸಿ, ನಿನ್ ಅಕ್ಷರ ಚೆನ್ನಾಗಿದೆ‌ ಅಲ್ವಾ ಒಂದೆ ಹತ್ತು ಪುಟ ಇದೆ ಬರೆದುಕೊಡು, ಮನೆಗೆ ಹೋಗಿ ಏನ್ಮಾಡ್ತೀಯಾ ನಂದೊಂಚೂರು ಕೆಲಸ ಇದೆ ಮಾಡ್ಕೊಡು, ನಿನ್ ಹತ್ತಿರ ಹೇಗಿದ್ರೂ ಗಾಡಿ ಇದೆ ಓಡಾಡೋಕೆ ಹಾಗಾಗಿ ನೀನೆ ನಮ್ ಮನೆಗೆ ಬಂದು ಕರೆದುಕೊಂಡು ಹೋಗು, ನಿಮ್ ಅಣ್ಣ ಬ್ಯಾಂಕ್ ನಲ್ಲಿ ಇರೋದಲ್ವಾ ಒಂದ್ ಇಪ್ಪತ್ತು ಲಕ್ಷ ಸಾಲ ಕೊಡಿಸು, ಆಗಲಿಲ್ಲ ಅಂದರೆ ಕನಿಷ್ಠ ಶೂರಿಟಿನಾದ್ರೂ ಹಾಕಲು ಹೇಳು, ಅಂತ ಏನೇನೋ ಕೇಳುವವರೆಲ್ಲರಿಗೂ.. ‘ಮಾಡಲು ಬೇರೆ ಕೆಲಸವಿಲ್ಲದೆ’ ಆಗಾಗ ತಪ್ಪದೇ ಕರೆ ಮಾಡಿ ಕ್ಷೇಮ ವಿಚಾರಿಸುವ ಪರಿಪಾಠ ಇಟ್ಕೊಂಡಿದ್ದು ಈಗ ನಿಲ್ಲಿಸುವ ನಿರ್ಧಾರ ಮಾಡಿಯಾಗಿದ್ದಾಗಿದೆ. ಕಾರಣ, ಯಾವಾಗ ಅವರ ಕೆಲಸ ಆಗುವುದಿಲ್ಲ ಅಥವಾ ನನಗೆ ಸಮಯ ಕೊಡಲಾಗುವುದಿಲ್ಲ ಅಂದಾಗ ಅವರು ತೋರೋ ನಿರ್ಲಕ್ಷ್ಯ ಭರಿಸುವಷ್ಟು ‘ಶ್ರೀಮಂತಳು’ ನಾನಲ್ಲ.

ಜೊತೆಗೆ ಇವರೆಲ್ಲರ ಹೆಮ್ಮೆಯ ‘ನಾನು ಹಾಗಲ್ಲಪ್ಪ’ ಎಂಬ ಪ್ರಮಾಣ, ಮಾತು, ವಚನ ಉಳಿಸಿಕೊಳ್ಳುವ ಹೊಣೆಗಾರಿಕೆ ಕನಿಷ್ಠ ನಂದಾದರೂ ಅಲ್ವಾ!

ಆದರೂ ಕಡೆಯಲ್ಲಿ ಮತ್ತದೇ ಪ್ರಶ್ನೆ.
ಉತ್ತರವಿಲ್ಲದ ಉತ್ತರ..

हमको जो ताने देते है…
ಅವರೇನು ಮಾಡುತ್ತಿದ್ದಾರೆ?

ಗೊತ್ತಿಲ್ಲದ ಅರ್ಥೈಸುವಿಕೆಯಾ?
ಗೊತ್ತಿರುವ full proof plan ಆ?
ಅಥವಾ…

ಅರ್ಚನಾ ಎ ಪಿ

ಎಂಎ ಬಿಎಡ್, ಎಂಫಿಲ್ ಪದವೀಧರೆ. ಸುರಾನಾ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿ, ಆಕಾಶವಾಣಿ ವಿವಿಧ ಭಾರತಿ 102.9 ಎಫ್ಎಂನಲ್ಲಿ ಉದ್ಘೋಷಕಿ, ಚಂದನ ವಾಹಿನಿಯಲ್ಲಿ ವಾರ್ತಾ ವಾಚಕಿ ಮತ್ತು ಕಾರ್ಯಕ್ರಮ ನಿರೂಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯದಲ್ಲಿ ವಿಶೇಷ ಆಸಕ್ತಿ. ಚಿತ್ತಾರ ಕಲೆಯಲ್ಲೂ ಕೌಶಲ್ಯ.

Share

One Comment For "ಅವರ ಕೆಲಸವಾದರೆ ಆಯಿತು!
ಅರ್ಚನಾ ಎ ಪಿ
"

 1. Anil Kumar
  17th March 2018

  Super, Archana. You are really talented.

  Keep posting I will read.

  Reply

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...