Share

ನಮ್ಮೊಳಗೊಂದು ನಿಸ್ವಾರ್ಥ ನಿಸರ್ಗದ ಜರೂರು
ಸಂಪಾದಕ

 

 

ಮಡಿಮೈಲಿಗೆಯೆಂಬ ಕೊಳಕನ್ನೇ ತುಂಬಿಕೊಂಡ ಮನುಷ್ಯ ಅದನ್ನು ಕೊಡಹಿಕೊಳ್ಳದ ಹೊರತು ನೀರನ್ನು ಶುದ್ಧಗೊಳಿಸಲಾರ.

 

 

ಲ್ಲರಿಗೂ ಗೊತ್ತಿರುವಂತೆ ಇವತ್ತು ಮಾರ್ಚ್ 22, ವಿಶ್ವ ಜಲದಿನ. ನೀರಿನ ಮಹತ್ವ ಮತ್ತದನ್ನು ಕಾಯ್ದುಕೊಳ್ಳುವ ಅಗತ್ಯವನ್ನು ನಮಗೆ ನಾವೇ ಮನದಟ್ಟು ಮಾಡಿಕೊಳ್ಳಬೇಕಾದ ದಿನವಿದು. ಜಲದಿನ ಆಚರಿಸಲು ಆರಂಭಿಸಿದ್ದು 25 ವರ್ಷಗಳ ಹಿಂದೆ. ಈ ಸಲದ ಥೀಮ್ ‘ನೀರಿಗಾಗಿ ನಿಸರ್ಗ’. ಈಗ ನಾವೆದುರಿಸುತ್ತಿರುವ ಜಲ ಬಿಕ್ಕಟ್ಟಿಗೆ ನಿಸರ್ಗದ ಮಡಿಲಲ್ಲೇ ಪರಿಹಾರೋಪಾಯಗಳನ್ನು ಹುಡುಕಿಕೊಳ್ಳಬೇಕಾಗಿದೆ ಎಂಬುದರ ಕಡೆ ಈ ಥೀಮ್ ಬೆರಳು ಮಾಡುತ್ತಿದೆ.

ಮನುಷ್ಯ ತನ್ನದೇ ಪ್ರಮಾದಗಳಿಂದ ನಿಸರ್ಗಕ್ಕೆ ಮಾಡಿದ ಆಘಾತಗಳು ಎಂಥವೆಂದರೆ, ಅವುಗಳಿಂದಾಗಿ ಪ್ರವಾಹ ಇಲ್ಲವೆ ಬರ ಇಂಥ ಅತಿರೇಕಗಳೇ ಆಗುವಂತಾಗಿದೆ. ಕಾಯಬೇಕಾದ ನಿಸರ್ಗ ಕಲುಷಿತವಾಗುವುದಕ್ಕೆ, ಕೊಲ್ಲತೊಡಗಿರುವುದಕ್ಕೆ ಮನುಷ್ಯನ ಸಲ್ಲದ ನಡವಳಿಕೆಗಳೇ ಕಾರಣವಾದವು. ಪರಿಸರದ ಸಮತೋಲವನ್ನು ನಾವು ಅದೆಷ್ಟು ಹಾಳುಗೆಡವಿದ್ದೇವೆಂದರೆ, ಅದರಿಂದಾಗಿ ಇವತ್ತು ಮಾನವ ಬಳಕೆಗೆ ಸಿಗಬೇಕಿದ್ದ ನೀರಿನ ಪ್ರಮಾಣ ಮತ್ತು ಗುಣಮಟ್ಟ ಎರಡೂ ಪತನಗೊಂಡಿದೆ. ಕೋಟ್ಯಂತರ ಜನರ ಪಾಲಿಗೆ ಸುರಕ್ಷಿತ ಕುಡಿಯುವ ನೀರಿಲ್ಲದಂತಾಗಿದೆ. ಅದು ಅವರ ಆರೋಗ್ಯ, ಶಿಕ್ಷಣ ಮತ್ತು ಹೊಟ್ಟೆಪಾಡನ್ನೇ ಅಲುಗಾಡಿಸಿಬಿಟ್ಟಿದೆ ಕೂಡ.

ಈ ಎಲ್ಲ ವಿಪರೀತದ ಮೂಲವನ್ನು ಹುಡುಕಿಕೊಂಡು ಹೋಗುತ್ತ ಆತ್ಮಸಾಕ್ಷಿಯನ್ನು ಕೇಳಿಕೊಂಡರೆ, ನಾವು ಬಂದು ತಲುಪುವುದು ನಮ್ಮದೇ ಕಾಲಬುಡಕ್ಕೆ. ಹೌದು. ನಾವೆಲ್ಲ ನಮ್ಮದು ಎಂದು ಯೋಚಿಸುತ್ತ, ನಮ್ಮ ಸುತ್ತಲನ್ನೂ ಮರೆಯುವುದು ಜೀವ ವ್ಯವಸ್ಥೆಯನ್ನು ಹದಗೆಡಿಸುತ್ತಲೇ ಬಂದಿದೆ. ಕಡೆಗೆ ಅದು ನಮ್ಮನ್ನೇ ತಿನ್ನುವ ಮಟ್ಟಿಗೆ ರಕ್ಕಸ ರೂಪದಲ್ಲಿ ತಿರುಗಿಬಿದ್ದಿರುವುದೂ ನಿಜ. ಒಬ್ಬ ವ್ಯಕ್ತಿಗೆ, ಒಂದು ಕಾರ್ಖಾನೆಗೆ, ಒಂದು ಉದ್ಯಮಕ್ಕೆ ತನ್ನ ಸುತ್ತಲನ್ನೂ ಕಾಯ್ದುಕೊಳ್ಳುವ ಮೂಲಕವೇ ತಾನು ಇರುವುದು ಸಾಧ್ಯ ಎಂಬ ಎಚ್ಚರವಿರದೆ ಸ್ವಾರ್ಥವನ್ನೇ ಹೊದ್ದುಕೊಂಡು ಕುರುಡಾದುದರ ಪರಿಣಾಮ ಇವತ್ತು ಇಡೀ ವಿಶ್ವವನ್ನೇ ಕಂಗೆಡಿಸುತ್ತಿದೆ. ಎಲ್ಲೆಲ್ಲೂ ಇದೆಯೆಂಬಂತಿರುವ ನೀರನ್ನು ಹುಡುಕುವುದೆಲ್ಲಿ ಎಂಬಂಥ ದಿಕ್ಕುಗೇಡಿ ಘಳಿಗೆಯಲ್ಲಿ ನಿಂತಿದ್ದೇವೆ. ಸುತ್ತಲ ನದಿ, ತೊರೆಯಂಥ ಜಲಮೂಲಗಳನ್ನೆಲ್ಲ ಕೆಡಿಸಿ ಕೂತಿದ್ದೇವೆ. ಅಂತರ್ಜಲ ಮೇಲೇಳದಷ್ಟು ಮಟ್ಟಿಗೆ ಅನಾಚಾರವೆಸಗಿ ಮುಗಿಸಿದ್ದೇವೆ. ಇಂಥ ಹೊತ್ತಲ್ಲಿ ಮತ್ತೊಮ್ಮೆ ನಿಸರ್ಗಕ್ಕೆ ಆಪ್ತವಾಗುತ್ತ, ಒಳ್ಳೆಯ ದಿನಗಳಿಗಾಗಿ ತಾಳ್ಮೆಯಿಂದ ಕಾಯಬೇಕಾಗಿರುವುದು ಅನಿವಾರ್ಯ.

ನಿಸರ್ಗದ ಮಡಿಲಲ್ಲೇ ಪರಿಹಾರ ಹುಡುಕುವುದೆಂದರೆ ನಮ್ಮೊಳಗೇ ನಿಸರ್ಗದ ಗುಣವನ್ನು ಕೂಡಿಸಿಕೊಳ್ಳುವುದೂ ಹೌದು. ನಾನೆಂದರೆ ಎಲ್ಲರೂ ಎಲ್ಲವೂ ಎಂಬ ಭಾವನೆ ಬಾರದೆ ಹೋದರೆ ಮತ್ತೆ ತಲುಪುವುದು ದುಷ್ಕಾಳದ ದಿನಗಳನ್ನೇ. ಈ ಎಚ್ಚರದಲ್ಲೇ ನಿಸ್ವಾರ್ಥವೊಂದು ನಮ್ಮೊಳಗೆ ಮೊಳೆಯಬೇಕಾಗಿದೆ. ಆ ಮೂಲಕವೇ ನಾವು ನಿಸರ್ಗಕ್ಕೆ ಆಪ್ತವಾಗುವುದಕ್ಕೆ ದಾರಿಯಿದೆ.

ನೀರಿಗೆ ಮಡಿಮೈಲಿಗೆಯಿಲ್ಲ. ಆದರೆ ಮಡಿಮೈಲಿಗೆಯೆಂಬ ಕೊಳಕನ್ನೇ ತುಂಬಿಕೊಂಡ ಮನುಷ್ಯ ಅದನ್ನು ಕೊಡಹಿಕೊಳ್ಳದ ಹೊರತು ನೀರನ್ನು ಶುದ್ಧಗೊಳಿಸಲಾರ. ಜಲದಿನದ ನೆಪದಲ್ಲಿ ಹೀಗೆ ನಾವೊಮ್ಮೆ ಶುದ್ಧಗೊಳ್ಳಬೇಕಾಗಿದೆ.

Share

Leave a comment

Your email address will not be published. Required fields are marked *

Recent Posts More

  • 2 days ago No comment

    ಈ ಸಂಜೆಯೊಳಗೆ

      ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

  • 5 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 6 days ago No comment

    ಹುಲ್ಲಿನ ಕಡ್ಡಿ

      ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

  • 2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 2 weeks ago No comment

    ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

      ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

  • 15 August 2018
    5 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 09 August 2018
    2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 01 August 2018
    3 weeks ago No comment

    ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                        ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

  • 25 July 2018
    4 weeks ago No comment

    ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                        ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

  • 11 May 2018
    3 months ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...