Share

ಇರಲಿ ಈ ಚಿತ್ರ ಕಣ್ಣಲಿ!
ಸಂಪಾದಕ

 

 

ಹೆಣ್ಣು ತನ್ನ ಓಟವನ್ನು ನಿರಂತರವಾಗಿಸಿಕೊಳ್ಳುವುದಕ್ಕೆ ಅವಳೊಳಗಿನ ಕಾಯುವ ಗುಣವೇ ಪ್ರೇರಣೆ. ಅದು ಎಂದೂ ಬತ್ತದ ತೊರೆ. ಎಂಥ ಹತಾಶೆಯಲ್ಲೂ ಮತ್ತೆ ಅವಳನ್ನೆಬ್ಬಿಸಿ ಬದುಕಿಗೆ ನಿಲ್ಲಿಸುವುದು ಇದೇ.

 

ಷ್ಟೇ ಆಧುನಿಕವಾಗಿದ್ದೇವೆ ಎಂದುಕೊಂಡರೂ, ಇವತ್ತಿಗೂ ಮಹಿಳೆಯನ್ನು ಟಿಪಿಕಲ್ ಚೌಕಟ್ಟಿನೊಳಗಿಟ್ಟೇ ನೋಡುವ ಪುರುಷ ಪ್ರಾಧಾನ್ಯ ಮನಃಸ್ಥಿತಿಯೊಂದು ಬುಸುಗುಟ್ಟುತ್ತಲೇ ಇದೆಯೆಂಬುದನ್ನು ಯಾರೂ ಒಪ್ಪುತ್ತಾರೆ. ಮಹಿಳೆಯೊಬ್ಬಳು ಪುರುಷನಿಗೆ ಎಷ್ಟೇ ಸಮಸಮವಾಗಿ ನಿಂತರೂ ಅವಳು ಎದುರಿಸುವ ಪೂರ್ವಾಗ್ರಹಗಳು, ಅವಳನ್ನಿರಿಯುವ ಕೊಂಕುಗಳು ಇದ್ದೇ ಇವೆ. ಅತ್ಯಂತ ದುಃಖದ ಸಂಗತಿಯೆಂದರೆ, ಇಂಥವೆಲ್ಲ ತೀರಾ ಬಡ ಮತ್ತು ಅನಕ್ಷರಸ್ಥ ಕುಟುಂಬಗಳಲ್ಲಾಗುವುದಕ್ಕಿಂತ ಹೆಚ್ಚಾಗಿ ಸುಶಿಕ್ಷಿತರೆಂಬವರ ನಾಲ್ಕು ಗೋಡೆಗಳೊಳಗೆ ಬೆಂಕಿಯಂತೆ ಹೆಣ್ಣನ್ನು ಉರಿಸುತ್ತಿವೆ ಎಂಬುದು.

ಇಂಥ ಪ್ರವಾಹಕ್ಕೆ ವಿರುದ್ಧ ಮುಖದಲ್ಲಿ ಹೆಣ್ಣು ಅದೆಷ್ಟೋ ತಲೆಗಳಿಗೆಯಿಂದ ಸೆಣೆಸುತ್ತಲೇ ಬಂದಿರುವುದೂ ಸುಳ್ಳಲ್ಲ. ಅವಳ ಆತ್ಮಬಲವೇ ಅವಳನ್ನು ಅದೆಷ್ಟೋ ಅಡೆತಡೆಗಳನ್ನು ದಾಟಿಸಿ ನಡೆಸುತ್ತಿದೆ. ಅಲ್ಲಿ ಆಗುವ ಅವಮಾನಗಳು, ಹಿಂಸೆ ಎಲ್ಲವನ್ನೂ ಸಹಿಸುವ ಹೆಣ್ಣೊಬ್ಬಳು ಈ ಸಮಾಜಕ್ಕೆ ಅಗಾಧವಾದ್ದನ್ನು ಕೊಡುತ್ತ ಬಂದಿದ್ದಾಳೆ. ಎಷ್ಟೋ ಮನೆಗಳೊಳಗೆ ಯಕಃಶ್ಚಿತ್ ಕೆಲಸದವಳೆಂಬಂತೆ ಹಗಲಿರುಳೂ ದುಡಿಯುವ ಹೆಣ್ಣು, ಕುಟುಂಬವನ್ನು ಕಾಯುವ ಕೆಲಸವನ್ನು ಮಾಡಿಕೊಂಡೇ ಬಂದಿರುತ್ತಾಳೆ, ತ್ಯಾಗಮಯಿಯಾಗಿ.

ನಾವೆಲ್ಲರೂ ನೆನಪಿಡಬೇಕಾದ ಒಂದು ಪ್ರಾಕೃತಿಕ ವಾಸ್ತವವೇನೆಂದರೆ, ಗಂಡಸಿನ ದಮನಕಾರಿ ಧೋರಣೆಯನ್ನು ಸಹಿಸುತ್ತಲೇ ಅಥವಾ ಅದರ ಸದ್ದಡಗಿಸುತ್ತಲೇ ಹೆಣ್ಣು ತನ್ನ ಓಟವನ್ನು ನಿರಂತರವಾಗಿಸಿಕೊಳ್ಳುವುದಕ್ಕೆ ಅವಳೊಳಗಿನ ಈ ಕಾಯುವ ಗುಣವೇ ಪ್ರೇರಣೆ. ಅದು ಎಂದೂ ಬತ್ತದ ತೊರೆ. ಎಂಥ ಹತಾಶೆಯಲ್ಲೂ ಮತ್ತೆ ಅವಳನ್ನೆಬ್ಬಿಸಿ ಬದುಕಿಗೆ ನಿಲ್ಲಿಸುವುದು ಇದೇ.

ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಮಾಡುತ್ತಿರುವ ಅಫ್ಘಾನ್ ಮಹಿಳೆಯ ಈ ಚಿತ್ರ ಬರೀ ಒಂದು ಚಿತ್ರವಾಗಿ ಉಳಿವಂತೆ ಕಾಣುತ್ತಿಲ್ಲ. ಬದಲಾಗಿ ಅದೊಂದು ಸ್ಫೂರ್ತಿಯ ಚಿಲುಮೆಯಂತೆ ಚಲನೆಯಂತೆ ವಿಸ್ತರಿಸಿಕೊಳ್ಳುತ್ತದೆ. 25ರ ಈಕೆಗೆ ಪರೀಕ್ಷೆಯೊಂದನ್ನು ಬರೆಯಬೇಕಿದೆ. ರೈತನೊಬ್ಬನ ಹೆಂಡತಿಯಾಗಿರುವ ಈ ಜಹಾನ್ ತಾಬ್ ತನ್ನ ಎರಡು ತಿಂಗಳ ಕಂದಮ್ಮನನ್ನು ಮನೆಯಲ್ಲೇ ಬಿಟ್ಟುಹೋಗುವ ಹಾಗಿಲ್ಲ. ಪರೀಕ್ಷೆ ಹಾಲ್‍ಗೆ ಕಂದನೊಡನೆಯೇ ಬಂದು ಬರೆಯಲು ಕೂತಾಗ ಅಳಲು ತೊಡಗುವ ಕಂದನಿಗಾಗಿ ನೆಲದ ಮೇಲೆ ಕೂತು ಸಂತಯಿಸುತ್ತ ಪರೀಕ್ಷೆ ಬರೆಯುವುದನ್ನು ಮುಂದುವರಿಸಿದ ಹೊತ್ತಿನ ಅವಳ ಈ ಚಿತ್ರ, ಹೆಣ್ಣೊಬ್ಬಳು ತನ್ನ ಹೆಗಲ ಮೇಲಿನ ಹಲವು ಹೊಣೆಗಳನ್ನು ನಿಭಾಯಿಸಲು ಒಳಗೊಳಗೇ ಬಹುಭುಜೆಯಾಗಿದ್ದಾಳೇನೋ ಎಂದು ಅಂತರಂಗಕ್ಕೆ ಅನ್ನಿಸುವ ಹಾಗಿದೆ.

ಈ ಚಿತ್ರ ಎಲ್ಲರ ಕಣ್ಣು ತುಂಬಲಿ. ಇದರ ಸ್ವರ ಸಾವಿರ ಸಾವಿರ ಮನಸ್ಸುಗಳ ಒಳಗೆ ಅನುರಣಿಸಿ ಗೆಲ್ಲಲಿ.

Share

Leave a comment

Your email address will not be published. Required fields are marked *

Recent Posts More

  • 2 days ago No comment

    ಈ ಸಂಜೆಯೊಳಗೆ

      ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

  • 5 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 6 days ago No comment

    ಹುಲ್ಲಿನ ಕಡ್ಡಿ

      ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

  • 2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 2 weeks ago No comment

    ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

      ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

  • 15 August 2018
    5 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 09 August 2018
    2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 01 August 2018
    3 weeks ago No comment

    ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                        ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

  • 25 July 2018
    4 weeks ago No comment

    ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                        ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

  • 11 May 2018
    3 months ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...