Share

ಚುನಾವಣೆ ಹೊತ್ತಿನ ಭಿನ್ನಮತ: ಜನನಿಷ್ಠೆಗೆ ಜಾಗವೆಲ್ಲಿ?
ಕನೆಕ್ಟ್ ಕನ್ನಡ

ಚುನಾವಣೆ ಘೋಷಣೆಯಾಗಿದೆ. ವಿವಿಧ ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಕಸರತ್ತಿನಲ್ಲಿ ತೊಡಗಿವೆ. ಇದು ಅಸಮಾಧಾನಗಳು ಭುಗಿಲೇಳುವ ಕಾಲ. ಪಕ್ಷಾಂತರ ರಾಜಕಾರಣವೂ ಈ ಹೊತ್ತಲ್ಲಿ ಸಾಮಾನ್ಯ. ಮತ್ತು ಜನಪ್ರತಿನಿಧಿಯಾಗಿದ್ದವರು ಅಥವಾ ಆಗಲಿರುವವರು ನಿಜವಾಗಿಯೂ ಜನರಿಗೆ ನಿಷ್ಠರಾ ಎಂಬುದು ತಂತಾನೇ ಬಯಲಾಗುವ ಹೊತ್ತೂ ಹೌದು.

ಕೆಲವು ಶಕ್ತರಿಗೆ ನಿರ್ದಿಷ್ಟ ರಾಜಕೀಯ ಪಕ್ಷದ ಟಿಕೆಟ್ ನಿಕ್ಕಿಯಾಗಿರುತ್ತದೆ. ಮತ್ತೆ ಕೆಲವರಿಗೆ ಪಕ್ಷವೊಂದರ ಮುಂಚೂಣಿ ನಾಯಕನ ಕೃಪಾ ಕಟಾಕ್ಷವಿದ್ದು, ಇನ್ನಾರೂ ಇದಿರಾಡದ ಸ್ಥಿತಿಯಲ್ಲಿ ತೀರ್ಮಾನ ಜರುಗುತ್ತದೆ. ಕೆಲ ಅಭ್ಯರ್ಥಿಗಳ ಆಯ್ಕೆಯ ಹಿಂದೆ ‘ಒಳ ಒಪ್ಪಂದ’ವಿರುವ ಮಾತೂ ಕೇಳಿಬರುವುದು ಎಲ್ಲರಿಗೂ ಗೊತ್ತಿದೆ. ಈ ಒಳ ಒಪ್ಪಂದವೆಂಬುದು ಸೂಕ್ಷ್ಮವಾಗಿ ಪಕ್ಷದ ಯಾವುದೋ ಒಂದು ಹಂತದ ನಾಯಕತ್ವದ ಮಟ್ಟದಲ್ಲಿ ನಿಶ್ಚಯಗೊಳ್ಳುವ, ಆದರೆ ಪಕ್ಷಕ್ಕೆ ಏಟು ಕೊಡುವ ಅಥವಾ ಇನ್ನಾವುದೋ ದಿಕ್ಕಿನಿಂದ ಲಾಭ ತಂದುಕೊಡುವುದೆಂದು ಭಾವಿಸಿ ತೆಗೆದುಕೊಳ್ಳುವ ನಿರ್ಧಾರ. ಈ ಎಲ್ಲ ಪ್ರಕ್ರಿಯೆಗಳೂ ಯಾವುದೇ ರಾಜಕೀಯ ಪಕ್ಷದ ಆಂತರಿಕ ವಿಚಾರಗಳಾಗಿರುತ್ತವೆ.

ರಾಜಕೀಯ ಪಕ್ಷಗಳ ಈ ಆಂತರಿಕ ವಿಚಾರವೆಂಬುದು ಕೆಲವೊಮ್ಮೆ ಬೀದಿರಂಪವಾಗುವುದು ಪಕ್ಷದೊಳಗೇ ಭಿನ್ನರು ಎದ್ದುನಿಂತಾಗ. ಪಕ್ಷದ ಮುಖಂಡನೊಬ್ಬನ ಸರ್ವಾಧಿಕಾರಿ ಧೋರಣೆ ಅಥವಾ ಪಕ್ಷದ ಒಳ ಒಪ್ಪಂದದ ವಿರುದ್ಧ ಬಂಡಾಯದ ದನಿಗಳು ಎದ್ದಾಗ ಸಾಮಾನ್ಯವಾಗಿ ಮುಖ್ಯ ಬಣ ಮತ್ತು ಬಂಡೆದ್ದ ಬಣಗಳಲ್ಲಿ ಒಂದು ಜನರ ಕಡೆಗಿದೆಯೆಂದೂ ಇನ್ನೊಂದು ಜನರಿಗೆ ನಿಷ್ಠವಾಗಿಲ್ಲವೆಬಂತೆಯೂ ಕಾಣಿಸುವುದಿದೆ. ಸೂಕ್ಷ್ಮವೇನೆಂದರೆ, ಇವರಲ್ಲಿ ಯಾರೂ ಜನರಿಗೆ ನಿಷ್ಠರಾಗಿ ಆ ಹೊತ್ತಲ್ಲಿ ಯೋಚಿಸಿರುತ್ತಾರೆ ಎಂಬುದು ಸತ್ಯಕ್ಕೆ ದೂರವೇ ಆಗಿರುತ್ತದೆ. ವಾಸ್ತವದಲ್ಲಿ ನಡೆಯುವುದು ಅಧಿಕಾರದ ಕಡೆಗೆ ಹೋಗುವ ಅವಕಾಶ ಕೈತಪ್ಪಿದವರ ರಾಜಕಾರಣವೇ ಆಗಿರುತ್ತದೆ.

ತುಂಬ ನಿರೀಕ್ಷೆಯಿಟ್ಟುಕೊಂಡಿದ್ದ ಪ್ರಭಾವಿ ನಾಯಕನೊಬ್ಬನಿಗೆ ಟಿಕೆಟ್ ಕೈತಪ್ಪಿತು ಎಂದುಕೊಳ್ಳಿ. ಆಗ ಆತ ತಾನು ಅವಕಾಶ ವಂಚಿತನಾದ ಸಂದರ್ಭವನ್ನು ‘ನನ್ನ ಜೊತೆಗಿರುವ ಜನರಿಗೆ ಅನ್ಯಾಯವಾಗಿದೆ’ ಎಂದು ಬಣ್ಣಿಸುವುದು ಸಾಮಾನ್ಯ. ಜನರನ್ನು ಹೀಗೆ ತನ್ನ ಹಿಂದೆ ಸೇರಿಸಿಕೊಳ್ಳುವ ಚಾಣಾಕ್ಷತನ ಆತನ ಗೆಲುವನ್ನು ನಿರ್ಧರಿಸುವ ಅಂಶವಾಗಿ ಬದಲಾಗುವ ಸಾಧ್ಯತೆಯೂ ಇಲ್ಲದೇ ಇಲ್ಲ. ಪಕ್ಷದ ನಾಯಕರ ಮೇಲೆ ಒತ್ತಡ ಹೆಚ್ಚಿ ಅದೇ ಪಕ್ಷದ ಟಿಕೆಟ್ ಆತನಿಗೆ ಸಿಗಲೂಬಹುದು; ಆ ಪಕ್ಷ ಯಾವ ಮುಲಾಜನ್ನೂ ತೋರಿಸದೇ ಇದ್ದಾಗ, ಆತನ ಅಸಮಾಧಾನದ ರಾಜಕೀಯ ಲಾಭ ಪಡೆಯುವ ಮತ್ತೊಂದು ಪಕ್ಷದ ಆಲೋಚನೆಯೂ ಆತನಿಗೆ ಅವಕಾಶವಾಗಿ ಒದಗಬಹುದು.

ಒಬ್ಬ ಟಿಕೆಟ್ ಕಾರಣಕ್ಕಾಗಿ ಪಕ್ಷಾಂತರ ಮಾಡಿದರೆ ಅದನ್ನು ತನ್ನನ್ನು ನಂಬಿರುವ ಜನರಿಗಾಗಿ ಎನ್ನಲು ಮರೆಯುವುದಿಲ್ಲ. ಅಲ್ಲಿಯವರೆಗೂ ತಾನಿದ್ದ ಪಕ್ಷದ ವಿರುದ್ಧ ಮಾತನಾಡುತ್ತ, ಅದನ್ನು ಮಣ್ಣು ಮುಕ್ಕಿಸುವ ಆಕ್ರೋಶದ ಪ್ರತಿಜ್ಞೆಗೈಯುವಾಗ ಅಲ್ಲಿ ಟಿಕೆಟ್ ಪಡೆದು ಉಪಕೃತನಾದುದರ ಪಾಲೆಷ್ಟು, ಜನನಿಷ್ಠೆಯ ಪಾಲೆಷ್ಟು ಎಂಬುದು ಅಂದಾಜಿಗೆ ಸಿಕ್ಕುವುದು ಬಹುಶಃ ಕಷ್ಟ. ಹೀಗೆ ರಾಜಕೀಯ ಮುಂದುವರಿಯುತ್ತದೆ.

ನಿಜವಾಗಿಯೂ ಲೆಕ್ಕಕ್ಕೆ ಇರದೇ ಹೋಗುವವರು ಜನತೆ ಮಾತ್ರ. ಹಾಗಾಗಿಯೇ ಜನನಿಷ್ಠೆ ಎಂಬುದು ಬಣ್ಣದ ಕಾಗದ ಅಷ್ಟೆ. ನೋಡುವವರ ಕಣ್ಣುಗಳನ್ನು ಮರಳುಗೊಳಿಸುವ ನಾಟಕ. ದನಗಳನ್ನು ಅಲಂಕರಿಸಿ ಓಡಿಸುತ್ತ ನಾವೇ ಮಜಾ ತೆಗೆದುಕೊಳ್ಳುತ್ತೇವಲ್ಲ, ಸಂಕ್ರಾಂತಿ ಹಬ್ಬದಲ್ಲಿ. ಹಾಗೆ ಇದು. ಜನರಿಗೂ ಇದೆಲ್ಲ ಅಭ್ಯಾಸವಾಗಿ ಹೋಗಿದೆ. ಎದುರಿಗೆ ನಡೆಯುವ ನಾಟಕ ನೋಡುತ್ತ ಅವರೂ ಮಜಾ ತೆಗೆದುಕೊಳ್ಳುತ್ತಾರೆ. ತಮ್ಮ ಸಂಕಟವೆಂಬುದು ರಾಜಕಾರಣಕ್ಕೆ ಅರ್ಥವಾಗುವುದಿಲ್ಲ ಎಂಬ ಕಟುವಾಸ್ತವ ಗೊತ್ತಿರುವ ಜನರೆದುರಲ್ಲಿ ನಾಟಕ ಮುಂದುವರಿಯುತ್ತದೆ, ಮಧ್ಯಂತರವಿಲ್ಲದೆ.

Share

Leave a comment

Your email address will not be published. Required fields are marked *

Recent Posts More

  • 21 hours ago No comment

    ಮೋದಿ ಮಾತಾಡಲಿಲ್ಲ

    ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

  • 1 day ago No comment

    ಇವರನ್ನು ನೋಡಿ…

    ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

  • 2 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 2 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 2 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...


Editor's Wall

  • 18 April 2018
    2 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 18 April 2018
    2 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 17 April 2018
    2 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

  • 16 April 2018
    4 days ago No comment

    ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

    ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

  • 14 April 2018
    5 days ago No comment

    ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

    ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...