Share

ಮುಗ್ಧತೆಯನ್ನೂ ಕೊಂದ ಹಿಂಸೆಯ ದಳ್ಳುರಿಯಲ್ಲಿ ಮಕ್ಕಳೇನಾದವಮ್ಮ?
ಕನೆಕ್ಟ್ ಕನ್ನಡ

 

 

ಹಿಂಸೆಯ ಮೂಲಕ ಮುಟ್ಟುವುದು ಘೋರ ನಾಳೆಗಳನ್ನು ಮಾತ್ರ ಎಂಬ ಸತ್ಯದ ಮುಂದೆಯೂ ಭಯಗೊಳ್ಳದೇ ಇರುವುದು ಹೇಗೆ ಸಾಧ್ಯ?

 

 

ಮ್ಮು ಕಾಶ್ಮೀರದಲ್ಲಿನ ಹಿಂಸಾಚಾರದ ದಳ್ಳುರಿಗೆ ಮಕ್ಕಳು ಕೂಡ ಮಕ್ಕಳ ಹಾಗೆ ಕಾಣಿಸುವುದಿಲ್ಲ. ತಪ್ಪಿತಸ್ಥರಂತೆ ಚಿತ್ರಹಿಂಸೆಗೆ ತುತ್ತಾಗುತ್ತಾರೆ. ಯಾವ ಕ್ಷಣದಲ್ಲೂ ಗುಂಡು ಅವರ ಎದೆ ಸೀಳಿ ಮುಗಿಸಿಹಾಕಿಬಿಡಬಹುದು. ಅಕಸ್ಮಾತ್ ಜೀವ ಹಿಡಿದುಕೊಂಡರೂ ಈ ನತದೃಷ್ಟರ ಬೊಗಸೆಯಲ್ಲಿರುವುದು ಘೋರ ಭವಿಷ್ಯ ಮಾತ್ರ.

2003ರಿಂದ ಆರಂಭವಾಗಿ ಈ ಒಂದೂವರೆ ದಶಕದಲ್ಲಿ ಜಮ್ಮು ಕಾಶ್ಮೀರದಲ್ಲಿ ಸೇನೆ ಮತ್ತು ಉಗ್ರರ ನಡುವಿನ, ಸರ್ಕಾರ ಮತ್ತು ಪ್ರತಿಭಟನಾಕಾರರ ನಡುವಿನ ಸಂಘರ್ಷದಲ್ಲಿ 318 ಮಕ್ಕಳು ಜೀವ ತೆತ್ತಿರುವ ಸಂಗತಿ ಹೃದಯ ಒಡೆಯುವಂಥದ್ದು. ಹಸುಗೂಸಿನಿಂದ ಹಿಡಿದು 17 ವರ್ಷದವರೆಗಿನ ಮಕ್ಕಳು ಹೀಗೆ ಬಲಿಯಾದವರಲ್ಲಿ ಸೇರಿದ್ದಾರೆ. ‘ದಿ ವೈರ್’ ವರದಿ ಮಾಡಿರುವಂತೆ, Jammu Kashmir Coalition of Civil Society (JKCCS) ಬಿಡುಗಡೆ ಮಾಡಿರುವ ವರದಿಯು ಈ ಭಯಂಕರ ಸತ್ಯವನ್ನು ಬಹಿರಂಗಪಡಿಸಿದೆ. ಕ್ಷೇತ್ರಕಾರ್ಯ ಮತ್ತು ಪತ್ರಿಕಾ ವರದಿಗಳ ಸಂಯೋಜನೆಯೊಂದಿಗೆ ತಯಾರಿಸಲಾದ ವರದಿ ಅದು.

318 ಮಕ್ಕಳಲ್ಲಿ 144 ಮಕ್ಕಳು ಸೇನೆ ಮತ್ತು ಜಮ್ಮು ಕಾಶ್ಮೀರ ಪೊಲೀಸರಿಗೇ ಬಲಿಯಾದವರು. 12 ಮಕ್ಕಳು ಉಗ್ರ ಗುಂಡಿಗೆ ಪ್ರಾಣ ತೆತ್ತವರು. 147 ಮಕ್ಕಳು ಅಪರಿಚಿತ ಬಂದೂಕುಧಾರಿಗಳ ನೆತ್ತರ ದಾಹಕ್ಕೆ ಜೀವ ಕೊಟ್ಟವರು. 15 ಮಕ್ಕಳು ಗಡಿ ನಿಯಂತ್ರಣ ರೇಖೆಯಲ್ಲಿನ ಗುಂಡಿನ ಮೊರೆತದಲ್ಲಿ ಪ್ರಾಣ ಕಳೆದುಕೊಂಡವರು.

ಕಳೆದ 15 ವರ್ಷಗಳಲ್ಲಿ ಹಿಂಸಾಚಾರಕ್ಕೆ ತುತ್ತಾದ ಅತ್ಯಂತ ಕಿರಿಯ ವಯಸ್ಸಿನ ಮಗುವೆಂದರೆ 2010ರಲ್ಲಿ ಬಲಿಯಾದ ಹತ್ತು ತಿಂಗಳ ಇರ್ಫಾನ್. ಬಾರಾಮುಲ್ಲಾದಲ್ಲಿ ನಡೆದ ಹಿಂಸಾಚಾರದ ವೇಳೆ ಪ್ರತಿಭನಾಕಾರರು ಮತ್ತು ಪೊಲೀಸರ ಸಂಘರ್ಷದ ನಡುವೆ ಈ ಮಗುವಿನ ತಾಯಿ ಸಿಕ್ಕಿಹಾಕಿಕೊಂಡಾಗ ಕೈಗೂಸನ್ನೇ ಕಳೆದುಕೊಳ್ಳಬೇಕಾದ ದಾರುಣ ನಡೆದುಹೋಯಿತು. ಈ 15 ವರ್ಷಗಳಲ್ಲಿ ಸೇನೆ ನೀಡಿದ ಚಿತ್ರಹಿಂಸೆಯಿಂದಾಗಿಯೇ 7 ಮಕ್ಕಳು ಸತ್ತಿರುವ ಅಂಶವನ್ನೂ ವರದಿ ಪ್ರಸ್ತಾಪಿಸುತ್ತದೆ. ತನ್ನ ವಶಕ್ಕೆ ಸಿಕ್ಕ ಮಕ್ಕಳನ್ನು ವಯಸ್ಕರೆಂಬಂತೆಯೇ ಸೇನೆ ಮತ್ತು ಪೊಲೀಸ್ ಪಡೆ ನೋಡುತ್ತದೆಂಬುದನ್ನು ಹೇಳುತ್ತದೆ ವರದಿ.

ವರದಿಯಲ್ಲಿ ಜೆಕೆಸಿಸಿಎಸ್ ಹಲವು ಸಾಮೂಹಿಕ ಬಲಿ ಪ್ರಕರಣಗಳನ್ನು ಉಲ್ಲೇಖಿಸಿದೆ. ಅದರ ಪ್ರಕಾರ, 2006ರಲ್ಲಿ ಕ್ರಿಕೆಟ್ ಆಡುತ್ತಿದ್ದ ನಾಲ್ಕು ಮಂದಿಯನ್ನು ಹಂದ್ವಾರದಲ್ಲಿ ಮಿಲಿಟರೆ ಪಡೆ ಕೊಂದುಹಾಕಿತು. ಆ ನಾಲ್ವರಲ್ಲಿ ಇಬ್ಬರು ಮಕ್ಕಳಿದ್ದರು. ಇನ್ನೊಂದು ಘಟನೆಯಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ 24 ಮಂದಿಯನ್ನು ಅಪರಿಚಿತ ಬಂದೂಕುಧಾರಿಗಳು ಕೊಂದರು. ಆ 24 ಮಂದಿಯಲ್ಲಿ 2 ವರ್ಷದ ಇಬ್ಬರು ಮಕ್ಕಳಿದ್ದರು.

ಜೆಕೆಸಿಸಿಎಸ್ ಎತ್ತುವ ಪ್ರಶ್ನೆಯೇನೆಂದರೆ, ಯಾರೋ ಅಪರಿಚಿತರ ಗುಂಡಿಗೆ ಬಲಿಯಾದ ಮಕ್ಕಳ ಕುಟುಂಬದ ವಿಷಯದಲ್ಲಂತೂ ನ್ಯಾಯದ ನಿರೀಕ್ಷೆ ಸಾಧ್ಯವೇ ಇಲ್ಲ. ಆದರೆ ಸೇನೆ ಮತ್ತು ಪೊಲೀಸರ ಕೈಯಲ್ಲೇ ಜೀವ ತೆತ್ತ ಮಕ್ಕಳ ವಿಷಯದಲ್ಲೂ ನ್ಯಾಯವಿಲ್ಲವೆಂದರೆ? ಅವರಿಗೆ ಬಲಿಯಾದ ಆ 144 ಮಕ್ಕಳ ಸಾವಿಗೆ ನ್ಯಾಯವೆಂಬುದು ಸಿಕ್ಕಿಯೇ ಇಲ್ಲ. ಯಾರಿಗೂ ಈ ಸಂಬಂಧ ಶಿಕ್ಷೆಯಾಗಿಯೇ ಇಲ್ಲ. ಜೆಕೆಸಿಸಿಎಸ್ ಸಂಯೋಜಕ, ಮಾನವ ಹಕ್ಕುಗಳ ಹೋರಾಟಗಾರ ಖುರಮ್ ಪರ್ವೇಜ್ ಹೇಳುವುದು: “ಜಮ್ಮು ಕಾಶ್ಮೀರದ್ಲಿ ಯಾವ ಸಮುದಾಯಕ್ಕೂ – ಅದು ಹಿಂದೂ, ಸಿಖ್, ಮುಸ್ಲಿಂ ಯಾವುದೇ ಇರಲಿ – ನ್ಯಾಯವೆಂಬುದಿಲ್ಲ. ನಾವು ಯಾವಾಗಲೂ ಈ ವಿಷಯವನ್ನು ಚರ್ಚೆಗೆ ಎತ್ತುತ್ತಲೇ ಇರುತ್ತೇವೆ. ಆದರೆ ಸರ್ಕಾರಕ್ಕೆ ಇದೆಂದೂ ಆದ್ಯತೆಯ ವಿಚಾರವೇ ಅಲ್ಲ. ಅದರ ಗಮನವೇನಿದ್ದರೂ ಮಿಲಿಟರಿ ಉದ್ದೇಶದ ಕಡೆಗೆ. ಭದ್ರತಾ ಪಡೆಯನ್ನು ಬಳಸಿ ಕಾಶ್ಮೀರವನ್ನು ಹತೋಟಿಯಲ್ಲಿಟ್ಟುಕೊಳ್ಳುವುದರಲ್ಲೇ ಆಸಕ್ತಿ ಅದಕ್ಕೆ.”

ಕಾಶ್ಮೀರ ಕಣಿವೆಯಲ್ಲಿ 1990ರ ನಂತರ ಹುಟ್ಟಿದ ಮಕ್ಕಳನ್ನು ಕನ್‍ಫ್ಲಿಕ್ಟ್ ಚಿಲ್ಡ್ರನ್ ಎಂದೇ ಕರೆಯಲಾಗುತ್ತದೆ. “ಅವರೆಂದೂ ಶಾಂತಿಯನ್ನು ಕಂಡವರೇ ಅಲ್ಲ. ಅವರ ಇಡೀ ಬದುಕಿನಲ್ಲಿ ಅವರ ಅನುಭವಕ್ಕೆ ಬಂರುವುದು ಹಿಂಸೆಯೇ” ಎಂಬುದು ಪರ್ವೇಜ್ ಮಾತು. ತೀರಾ ಆತಂಕದ ಸಂಗತಿಯೇನೆಂದರೆ, ಹಿಂಸೆಯನ್ನೇ ನೋಡುತ್ತ ಬರುವ ಈ ಮಕ್ಕಳು ಎಲ್ಲವನ್ನೂ ಒಪ್ಪಿಕೊಳ್ಳುವ ಒಂದು ಹಂತವನ್ನು, ಯಾವುದಕ್ಕೂ ಅಂಜದ ಒಂದು ಮನೋಭಾವವನ್ನು ಮುಟ್ಟಿಬಿಡುತ್ತಾರೆಂಬುದು. ಯಾರೇನು ಮಾಡಿಯಾರು, ಹೆಚ್ಚೆಂದರೆ ಕೊಲ್ಲಬಹುದಲ್ಲವೇ ಎಂಬಂಥ ಮನಃಸ್ಥಿತಿಗೆ ತಲುಪಿದ್ದಾರೆ ಅಲ್ಲಿನ ಯುವಕರು ಎಂಬುದನ್ನು ಅಲ್ಲಿನ ಮಕ್ಕಳೊಂದಿಗೆ ಕಳೆದೆರಡು ದಶಕಗಳಿಂದ ಕೆಲಸ ಮಾಡುತ್ತಿರುವ ವೈದ್ಯರೊಬ್ಬರು ಹೇಳುತ್ತಾರೆ. ಇಂದು ಗುಂಡಿಗೆ ಬಲಿಯಾದ ಒಬ್ಬನನ್ನು ನೋಡಿದಾಗ, ಇನ್ನಾವುದಾದರೂ ಒಂದು ದಿನ ನಮ್ಮ ಗತಿಯೂ ಇದೇ ಎಂದು ಭಾವಿಸುತ್ತ ಭಯಗೊಳ್ಳುವುದನ್ನೇ ಆ ಯುವಕರು ಮರೆತಿದ್ದಾರೆ ಎಂಬುದು ಕರಾಳ ವಾಸ್ತವ.

ಹೀಗೆ ಹಲವು ವಿಚಾರಗಳತ್ತ ಗಮನ ಸೆಳೆಯುವ ಜೆಕೆಸಿಸಿಎಸ್, ಹಿಂಸೆಯ ವಿಚ್ಛಿದ್ರಕಾರಕ ಸ್ವರೂಪವನ್ನೇ ವರದಿಯಲ್ಲಿ ಬಿಚ್ಚಿಡುತ್ತಿರುವಂತೆ ಕಾಣಿಸುತ್ತದೆ. ಹಿಂಸೆಯೆಂಬುದು ಮುಗ್ಧತೆಯನ್ನೂ ಕೊಂದುಹಾಕಿದೆಯೆಂಬುದು ಕರುಳು ಹಿಂಡುತ್ತದೆ. ಹಿಂಸೆಯ ಮೂಲಕ ಮುಟ್ಟುವುದು ಘೋರ ನಾಳೆಗಳನ್ನು ಮಾತ್ರ ಎಂಬ ಸತ್ಯದ ಮುಂದೆಯೂ ಭಯಗೊಳ್ಳದೇ ಇರುವುದು ಹೇಗೆ ಸಾಧ್ಯ ಎಂಬುದೇ ಪ್ರಶ್ನೆ.

Share

Leave a comment

Your email address will not be published. Required fields are marked *

Recent Posts More

 • 6 days ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 week ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 2 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  3 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  4 weeks ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...