Share

ಮಹಾರಾಣಿಯೊಬ್ಬಳ ದಮನಿತರೆಡೆಗಿನ ಮಿಡಿತದ ಬಗ್ಗೆ…
ದ್ರವಿಡ

 

ರಾಜತ್ವದ ಸುಪ್ಪತ್ತಿಗೆ ಮಧ್ಯೆಯೂ ಈ ಸಮಾಜದ ದಮನಿತರ ಕಡೆಗೆ ನೋಡುವ ಮಿಡಿತವೊಂದು ಕಿರುದಾರಿಯಲ್ಲಿ ನಡೆದುಬಂದಿತ್ತೆಂಬುದನ್ನು ಗಮನಿಸಲೇಬೇಕೆನ್ನಿಸುತ್ತದೆ; ಚುನಾವಣೆ ಗೆಲ್ಲುವ ಇರಾದೆಯನ್ನೂ ದಾಟಿದ್ದ ಹೊತ್ತಲ್ಲಿನ ಮಿಡಿತ ಅದಾಗಿತ್ತಲ್ಲ ಎಂಬುದಕ್ಕಾಗಿ.

 

 

ತ್ಯಂತ ಶಾಂತ ಚಹರೆಯ ಮುಖ; ಅಷ್ಟೇ ಸುಂದರ ಮುಗುಳ್ನಗು; ಸರಿಸಾಟಿಯಿಲ್ಲದ ಚೆಲುವು. ಹುಟ್ಟಿ ಬೆಳೆದದ್ದು ಶ್ರೀಮಂತಿಕೆಯ ಮಡಿಲಲ್ಲೇ ಆದರೂ. ಆ ಸಂಪತ್ತನ್ನು ಅಗತ್ಯವಿರುವವರಿಗೆ ನೆರವಾಗುವುದಕ್ಕೆ ಬಳಸುವ ಮನಸ್ಸು. ಭಾರತೀಯ ಊಳಿಗಮಾನ್ಯ ವ್ಯವಸ್ಥೆಯ ಪ್ರತಿನಿಧಿಯಾಗಬಯಸದೆ ಪ್ರಜಾಪ್ರಭುತ್ವದಲ್ಲಿ ಸಕ್ರಿಯವಾಗಿ ಭಾಗವಹಿಸುವ ನಿರ್ಧಾರ. ಮಹಿಳೆಯರೆಲ್ಲ ಗೌರವದಿಂದ ಕಂಡ ಮತ್ತು ಆರಾಧಿಸಿದ ವ್ಯಕ್ತಿತ್ವ. ಈ ದೇಶ ಕಂಡ ಅತ್ಯಂತ ಆಧುನಿಕ, ಸ್ವತಂತ್ರ ಮನೋಭಾವದ ಮತ್ತು ಫ್ಯಾಷನೆಬಲ್ ಆದ ರಾಣಿಯರಲ್ಲಿ ಒಬ್ಬರು. ಜೈಪುರದ ಈ ಮಹಾರಾಣಿಯ ಹೆಸರು ಗಾಯತ್ರಿದೇವಿ.

‘ವೋಗ್’ನ ವಿಶ್ವದ ಅತ್ಯಂತ ಸುಂದರಿಯರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದ ಗಾಯತ್ರಿದೇವಿ, ಅಷ್ಟೊಂದು ಸ್ಟೈಲಿಷ್ ಆಗಿದ್ದುದರ ಹಿಂದೆ ತಾಯಿಯ ಪ್ರಭಾವವಿತ್ತು. ಪಶ್ಚಿಮ ಬಂಗಾಳದ ಕೂಚ್ ಬೆಹರ್ ರಾಜಮನೆತನದ ಗಾಯತ್ರಿದೇವಿಯ ತಾಯಿ ಬರೋಡಾದ ಮರಾಠಾ ರಾಜಮನೆತನದ ಇಂದಿರಾ ರಾಜೇ ಉಡುಗೆ ತೊಡುಗೆಗಳ ಬಗ್ಗೆ ತೀವ್ರ ಗಮನ ಕೊಡುವವರಾಗಿದ್ದರು. ಚಿಫಾನ್ ಸೀರೆಯನ್ನುಡಲು ಶುರು ಮಾಡಿದ ಮೊದಲ ಮಹಿಳೆ ಅವರಾಗಿದ್ದರೆಂಬುದನ್ನು ಗಾಯತ್ರಿದೇವಿಯೇ ಹೇಳಿದ್ದಾರೆ ಒಂದೆಡೆ.

ಆದರೆ ಗಾಯತ್ರಿದೇವಿ ಬೆಳಗಿದ್ದು ಈ ಸೌಂದರ್ಯದಿಂದ ಮಾತ್ರವಲ್ಲ. ಬದಲಾಗಿ ಕ್ರಾಂತಿಕಾರಕ ಮನೋಭಾವದ ಮತ್ತು ಸ್ವತಂತ್ರ ಆಲೋಚನೆಯ ದಿಟ್ಟ ಹೆಣ್ಣಾಗಿ. ಐನೂರು ಆಳುಗಳಿದ್ದ ಅರಮನೆಯಲ್ಲಿ ಪ್ರೀತಿಯಿಂದ ಆಯೇಷಾ ಎಂದು ಕರೆಯಿಸಿಕೊಳ್ಳುತ್ತಿದ್ದ ಗಾಯತ್ರಿ, ಯಾವ ಕಟ್ಟುಗಳಿಲ್ಲದೆ ಬೆಳೆದವಳು. ಶಿಕಾರಿಯೆಂದರೆ ಆಸಕ್ತಿಯಿದ್ದ ಆಕೆ 12 ವರ್ಷದವಳಿದ್ದಾಗಲೇ ಚಿರತೆಯನ್ನು ಹೊಡೆದಿದ್ದಳಂತೆ. ಇಂಥ ಗಟ್ಟಿತನ ಮತ್ತು ಬಂಧನಕ್ಕೆ ಸಿಲುಕಲಿಚ್ಛಿಸದ ಮನೋಭಾವ ಗಾಯತ್ರಿದೇವಿಗೆ ಇದ್ದಕ್ಕಿದ್ದಂತೆ ಬಂದುದೇನೂ ಆಗಿರಲಿಲ್ಲ. ಆಕೆಯ ಕುಟುಂಬದಲ್ಲಿದ್ದ ಅಂಥದೇ ಗಟ್ಟಿಗಿತ್ತಿ ಹೆಂಗಸರ ಸ್ಫೂರ್ತಿಯನ್ನೇ ಒಳಗೊಂಡು ಬಂದಿದ್ದಳು ಗಾಯತ್ರಿ. ಆಕೆಯ ಅಜ್ಜಿ ಚಿಮಣಾಬಾಯಿ ಸಮಪ್ರದಾಯಬದ್ಧ ಮದುವೆಯನ್ನು ನಿರಾಕರಿಸಿ, ತನಗಿಷ್ಟವಾದವನೊಂದಿಗೆ ಮದುವೆಯಾಗಿದ್ದರು. ಗಾಯತ್ರಿದೇವಿ ಕೂಡ ತನ್ನ ಬದುಕು ಇನ್ನಾರದೋ ನಿರ್ದೇಶನದಂತೆ ನಡೆಯಲು ಬಿಟ್ಟುಕೊಟ್ಟವರಾಗಿರಲಿಲ್ಲ.

ಎಲ್ಲ ರೂಢಿಗಳನ್ನು ಮುರಿದ ಗಾಯತ್ರಿದೇವಿ ತಾನಿಷ್ಟಪಟ್ಟಿದ್ದ, ಆದರೆ ತನಗಿಂತ ದುಪ್ಪಟ್ಟು ವಯಸ್ಸಿನ ಮತ್ತು ಆಗಲೇ ವಿವಾಹಿತನೂ ಆಗಿದ್ದವನ ಹೆಂಡತಿಯಾದರು. ಆ ಹುಡುಗನನ್ನು ಆಕೆ ಮೋಹಿಸಿದ್ದು ಇನ್ನೂ 12 ವರ್ಷದವಳಿದ್ದಾಗ. 21ನೇ ವಯಸ್ಸಿನಲ್ಲಿ ಆತನೊಂದಿಗೆ ಮದುವೆಯಾಯಿತು. ಆತ ಜೈಪುರದ ಸವಾಯಿ ಮಾನ್ ಸಿಂಗ್ ಬಹಾದ್ದೂರ್. ಇಬ್ಬರು ರಾಣಿಯರಿದ್ದ ಆತನ ಮೂರನೇ ರಾಣಿಯಾಗಿ ಜೈಪುರ ಅರಮನೆ ಸೇರಿದರು ಗಾಯತ್ರಿ. ಎಷ್ಟೆಲ್ಲ ವಿರೋಧಗಳ ನಡುವೆಯೂ ಇಂಥದೊಂದು ಪ್ರೇಮಸಂಬಂಧ ಏರ್ಪಟ್ಟಿದ್ದು 1940ರಲ್ಲಿ.

ಜೈಪುರ ಮಹಾರಾಜನ ಮೂರನೇ ಪತ್ನಿಯಾಗಿ ಹೋದ ಗಾಯತ್ರಿದೇವಿ, ಆ ರಾಜಮನೆತನದ ಶಿಷ್ಟಾಚಾರ ಮತ್ತು ಕಟ್ಟುಪಾಡುಗಳಿಗೆ ಹೊಂದಿಕೊಂಡು ಕಳೆದುಹೋಗಲು ಬಯಸಲಿಲ್ಲ. ಇತರ ಪತ್ನಿಯರಂತೆ ಅವಕುಂಠನದೊಳಗೆ ಮುಖ ಅಡಗಿಸಿಕೊಂಡು ಬದುಕಲು ಒಪ್ಪಲಿಲ್ಲ. ಬದಲಿಗೆ ತನ್ನ ಪಟ್ಟದ ಅಧಿಕಾರ ಬಳಸಿ, ರಾಜಮನೆತನದ ಎಲ್ಲ ಹೆಣ್ಣುಮಕ್ಕಳು ತಮ್ಮ ನಿರ್ಬಂಧಿತ ಬದುಕಿನಿಂದ ಆಚೆ ಬರುವಂತೆ ಮಾಡಿದರು. ಎಲ್ಲವೂ ಒಪ್ಪಿತವಾಗಿರುವ ಈ ಕಾಲಕ್ಕಿಂತ ಆ ದಿನಗಳು ಅದೆಷ್ಟು ರೋಚಕವಾಗಿದ್ದವು ಎಂಬುದನ್ನು ಗಾಯತ್ರಿದೇವಿ ನೆನೆದಿರುವುದು ಹೀಗೆ: “ಹಿರಿಯರನ್ನು ಎದುರುಹಾಕಿಕೊಳ್ಳುವುದು, ಗುಟ್ಟಾಗಿ ಪ್ರೇಮಿಯನ್ನು ಭೇಟಿಯಾಗುವುದು, ಆತನೊಡನೆ ಡ್ರೈವ್ ಹೋಗುವುದು, ಔತಣದ ಖುಷಿಯನುಭವಿಸುವುದು, ದೋಣಿವಿಹಾರ ಹೀಗೆ ಅದು ಸುಂದರ ಮತ್ತು ಮಾದಕವೆನ್ನಿಸಿದ ಕಾಲವಾಗಿತ್ತು.”

ಅವಕುಂಠನದ ಮರೆಯಲ್ಲೇ ಮಹಿಳೆಯರು ಕಳೆದುಹೋಗುವುದನ್ನು, ಅವರನ್ನು ಬಹಿಷ್ಕೃತರಂತೆ ಸಮಾಜ ನಡೆಸಿಕೊಳ್ಳುವುದನ್ನು ವಿರೋಧಿಸಿದ ಗಾಯತ್ರಿದೇವಿ, 1943ರಲ್ಲಿ ಹೆಣ್ಣುಮಕ್ಕಳಿಗೆಂದೇ ಶಾಲೆ ತೆರೆದರು. 40 ವಿದ್ಯಾರ್ಥಿಗಳು ಮತ್ತು ಒಬ್ಬ ಇಂಗ್ಲಿಷ್ ಶಿಕ್ಷಕಿಯೊಂದಿಗೆ ಆರಂಭವಾದ ಗಾಯತ್ರಿದೇವಿ ಸ್ಕೂಲ್ ಫಾರ್ ಗರ್ಲ್ಸ್ ಇವತ್ತು ದೇಶದ ಅತ್ಯುತ್ತಮ ಶಾಲೆಗಳಲ್ಲಿ ಒಂದು.

ಅಂತಃಪುರವನ್ನು ದಾಟಿದ ಗಾಯತ್ರಿದೇವಿ, ಆಗ ರಾಷ್ಟ್ರೀಯ ಕಾಂಗ್ರೆಸ್‍ಗೆ ಪ್ರತಿಪಕ್ಷವಾಗಿದ್ದ ಸಿ ರಾಜಗೋಪಾಲಾಚಾರಿ ಸ್ಥಾಪಿಸಿದ್ದ ಸ್ವತಂತ್ರ ಪಕ್ಷವನ್ನು ಸೇರಿದ್ದು ರಾಜಸ್ಥಾನ ರಾಜ್ಯ ರಚನೆಯಾದಾಗ. 1962ರಲ್ಲಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ 2.46.516 ಮತಗಳಲ್ಲಿ 1,92,909 ಮತಗಳನ್ನು ಪಡೆದು ಗೆದ್ದದ್ದಂತೂ ಭಾರತದ ಇತಿಹಾಸದಲ್ಲೊಂದು ಮೈಲಿಗಲ್ಲು. ಅದು ಗಿನ್ನಿಸ್ ದಾಖಲೆಯಾಯಿತು. ಅವರ ಈ ಸಾಧನೆ ಬಗ್ಗೆ ಕೇಳಿದೊಡನೆ ಜಾನ್ ಎಫ್ ಕೆನಡಿ, “ಚುನಾವಣೆಯಲ್ಲಿ ಯಾರೊಬ್ಬರೂ ಎಂದೂ ಗಳಿಸಿರದ ಅತಿ ಬೆರಗಿನ ಬಹುಮತ ಪಡೆದ ಮಹಿಳೆ” ಎಂದು ಬಣ್ಣಿಸಿದ್ದರು.

1967ರಲ್ಲಿ ಮತ್ತೆ ಲೋಕಸಭೆಗೆ ಆಯ್ಕೆಯಾದರು ಗಾಯತ್ರಿದೇವಿ. ಆದರೆ ಆಕೆಯ ಕುಟುಂಬಕ್ಕಿದ್ದ ಸವಲತ್ತುಗಳನ್ನು ತೆಗೆದುಹಾಕುವ ಮಸೂದೆಯನ್ನು ಕಾಂಗ್ರೆಸ್ ಸರ್ಕಾರ ಪಾಸು ಮಾಡಿದಾಗ ಎಲ್ಲ ಅಧೋಗತಿ ಶುರುವಾಯಿತು. ಆಕೆಯ ಕುಟುಂಬ ಲಂಡನ್ನಿಗೆ ಪರಾರಿಯಾಗಬೇಕಾಯಿತು. ಮಾನ್‍ ಸಿಂಗ್ ಮೊದಲ ಪತ್ನಿಯ ಹಿರಿಯ ಮಗ ಮಹಾರಾಜನಾಗಿ, ಗಾಯತ್ರಿದೇವಿ ರಾಜಮಾತೆಯಾಗಿ ಒಂದೇ ತಿಂಗಳಲ್ಲಿ ಮಾನ್‍ ಸಿಂಗ್ ಸಾವಿಗೀಡಾದ ಮೇಲೆ ಸ್ಥಿತಿ ಮತ್ತಷ್ಟು ದುರಂತ ಮುಟ್ಟಿತು. ಇದೆಲ್ಲದರ ನಡುವೆಯೇ 1971ರಲ್ಲಿ ಮೂರನೇ ಬಾರಿಗೆ ಮತ್ತೆ ಲೋಕಸಭೆಗೆ ಗೆದ್ದರು. ಅದೇ ವರ್ಷ ರಾಜತ್ವವೆನ್ನುವುದು ಸಂವಿಧಾನಾತ್ಮಕವಾಗಿ ಇಲ್ಲವಾಯಿತು. ಬದುಕು ಕಠಿಣವಾಯಿತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಿ 1975ರಲ್ಲಿ ಗಾಯತ್ರಿದೇವಿ ಮತ್ತು ಮಲಮಗನ ಬಂಧನವಾಗಿ ಆರು ತಿಂಗಳು ತಿಹಾರ್ ಜೈಲಿನಲ್ಲಿ ಕಳೆಯಬೇಕಾಯಿತು.

ಜೈಲಿನಿಂದ ಬಂದ ಬಳಿಕ, ಜೈಲೊಳಗೆ ಹೀನಾಯ ಬದುಕು ಬದುಕುತ್ತಿದ್ದ ಹಂತಕರು, ವೇಶ್ಯೆಯರು ಮತ್ತು ಪಿಕ್ ಪಾಕೆಟರುಗಳ ಹಕ್ಕುಗಳಿಗಾಗಿ ಗಾಯತ್ರಿದೇವಿ ಹೋರಾಟಕ್ಕೆ ನಿಂತರು. ಸಮಾಜದಲ್ಲಿ ಯಾರಿಗೂ ಬೇಡವಾದ ಅಂಥವರ ಪರ ದನಿ ಎತ್ತಿದ್ದರು. ತಾನು ಈ ಸಮಾಜದಲ್ಲಿ ಒಬ್ಬ ಹೆಣ್ಣಾಗಿ ಬಯಸಿದ್ದ ಸ್ವಾತಂತ್ರ್ಯ ಇತರ ಮಹಿಳೆಯರಿಗೂ ಸಿಗಬೇಕೆಂಬ ಹಂಬಲದಲ್ಲೇ ರಾಜಸ್ಥಾನದ ಪರ್ದಾ ಪದ್ಧತಿ ಕೊನೆಗಾಣಿಸುವಲ್ಲೂ ಗಾಯತ್ರಿದೇವಿ ಗೆದ್ದರು. ರಾಜತ್ವದ ಸುಪ್ಪತ್ತಿಗೆ ಮಧ್ಯೆಯೂ ಈ ಸಮಾಜದ ದಮನಿತರ ಕಡೆಗೆ ನೋಡುವ ಮಿಡಿತವೊಂದು ಕಿರುದಾರಿಯಲ್ಲಿ ನಡೆದುಬಂದಿತ್ತೆಂಬುದನ್ನು ಗಮನಿಸಲೇಬೇಕೆನ್ನಿಸುತ್ತದೆ; ಚುನಾವಣೆ ಗೆಲ್ಲುವ ಇರಾದೆಯನ್ನೂ ದಾಟಿದ್ದ ಹೊತ್ತಲ್ಲಿನ ಮಿಡಿತ ಅದಾಗಿತ್ತಲ್ಲ ಎಂಬುದಕ್ಕಾಗಿ.

Share

Leave a comment

Your email address will not be published. Required fields are marked *

Recent Posts More

 • 21 hours ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 1 day ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 2 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  2 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...