Share

ದಮನಿತರ ಬೇಗುದಿಯಲ್ಲಿ ಬಿಜೆಪಿ ‘ಮುಖ’ದ ಬಿಂಬಗಳು
ಕನೆಕ್ಟ್ ಕನ್ನಡ

 

ಯಾವುದೇ ಸರ್ಕಾರ ಗೌರವಿಸಿದ್ದಕ್ಕಿಂತಲೂ ಹೆಚ್ಚಾಗಿ ಅಂಬೇಡ್ಕರ್ ಅವರನ್ನು ತಮ್ಮ ಸರ್ಕಾರ ಗೌರವಿಸಿದೆ ಎಂದು ಹೇಳುವವರು, ಆ ಗೌರವವೆಂಬುದು ವಾಸ್ತವದಲ್ಲಿ ರೂಪ ಪಡೆದಿದೆಯೇ ಎಂದು ತಮ್ಮನ್ನೇ ತಾವು ಕೇಳಿಕೊಳ್ಳುವುದೂ ಅಷ್ಟೇ ಅಗತ್ಯವಲ್ಲವೇ?

 

 

ಸ್‍ಸಿ ಎಸ್‍ಟಿ ಕಾಯ್ದೆ ವಿಚಾರದಲ್ಲಿ ಬಿಜೆಪಿ ನಿಲುವು ಗುಟ್ಟಾಗಿ ಉಳಿದಿಲ್ಲ. ಸುಪ್ರೀಂ ಕೋರ್ಟ್‍ನ ಮಾ. 20ರ ತೀರ್ಪಿಗೆ ದಲಿತರ ತೀವ್ರ ವಿರೋಧ ವ್ಯಕ್ತವಾದ ಬಳಿಕ ತೀರ್ಪು ಮರುಪರಿಶೀಲನೆಗೆ ಕೇಂದ್ರ ಮನವಿ ಮಾಡಿದ್ದೇಕೆಂಬುದಕ್ಕೂ ಚುನಾವಣೆ ಎದುರಿಗಿರುವ ಈ ಹೊತ್ತಿನಲ್ಲಿ ಉತ್ತರ ನಿಚ್ಚಳವಿದೆ. ಮೇಲ್ಜಾತಿ ಬಲದ ಮೇಲೆಯೇ ಹೆಚ್ಚು ವಾಲಿರುವ ಬಿಜೆಪಿ, ದಲಿತರು ಮತ್ತು ಹಿಂದುಳಿದವರನ್ನು ಓಲೈಸುವ ತಂತ್ರಗಾರಿಕೆಯಲ್ಲೂ ಹಿಂದಿಲ್ಲ. ಮತ್ತು ಮೇಲ್ಜಾತಿಯವರ ಮತಕ್ಕಿಂತ ಹೆಚ್ಚಿನ ಬೆಂಬಲವನ್ನು ಕೆಳವರ್ಗದವರಿಂದ ಪಡೆಯುತ್ತಲೇ ಬಂದಿರುವುದೂ ನಿಜ. ಆದರೆ ಅಧಿಕಾರದ ಪ್ರಶ್ನೆ ಬಂದಾಗ ಅದು ಕೆಳವರ್ಗದವರನ್ನು ಅದೆಷ್ಟು ಗಮನಿಸಿದೆ ಎಂಬುದನ್ನು ನೋಡಿದರೆ ಕಾಣುವ ಆಳವೇ ಬೇರೆ.

ದಲಿತರು ಮತ್ತು ಆದಿವಾಸಿಗಳ ಇತ್ತೀಚಿನ ಪ್ರತಿಭಟನೆ ಸಂದರ್ಭದಲ್ಲಿ ಬಿಜೆಪಿ ಜಾತಿ ಧೋರಣೆ ಬಯಲಾಗಿರುವುದರ ಬಗ್ಗೆ ‘ಲೈವ್ ಮಿಂಟ್’ ಪ್ರಕಟಿಸಿರುವ ವರದಿಯೊಂದು ಹಲವು ವಾಸ್ತವಾಂಶಗಳನ್ನು ತೋರಿಸುತ್ತದೆ. ದಲಿತರು ಮತ್ತು ಆದಿವಾಸಿಗಳ ಹಿತಾಸಕ್ತಿ ಕಾಯುವಲ್ಲಿ ಕೇಂದ್ರ ಸರ್ಕಾರ ಅಸಮರ್ಥವಾದದ್ದು 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಹಾನಿ ತಂದೀತೇ ಎಂದು ಶೋಧಿಸುವ ವರದಿ, ಈ ಮಧ್ಯೆ ಆ ವರ್ಗದವರನ್ನು ಓಲೈಸುವುದಕ್ಕೂ ಹೊರಟಿರುವ ಬಿಜೆಪಿ ತನ್ನ ಆಧಾರವಾಗಿರುವ ಮೇಲ್ಜಾತಿಯವರ ಅಸಮಾಧಾನವನ್ನು ಎದುರಿಸುವುದೇ ಎಂಬ ಪ್ರಶ್ನೆಯೆತ್ತುತ್ತದೆ.

ಬಿಜೆಪಿಗೆ ಇಡೀ ಸಂದರ್ಭ ಸಂಕೀರ್ಣ ಎನ್ನಿಸುತ್ತಿರುವುದು, ಕಳೆದೊಂದು ದಶಕದಲ್ಲಿ ಅದು ಭಾರೀ ಪ್ರಮಾಣದಲ್ಲಿ ಸೆಳೆದಿರುವ ಕೆಳವರ್ಗದವರ ಮತಗಳನ್ನು ಮುಂದೆಯೂ ಉಳಿಸಿಕೊಳ್ಳುವುದು ಮತ್ತು ತನಗೆ ಮುಖ್ಯವಾಗಿರುವ ಮೇಲ್ಜಾತಿಯ ಬೆಂಬಲವನ್ನೂ ಕಾಪಾಡಿಕೊಳ್ಳುವುದು ಸವಾಲಿನದ್ದಾಗಿ ಕಾಣಿಸುತ್ತಿರುವುದರಿಂದ. ಕಾಂಗ್ರೆಸ್‍ಗೆ ಇರುವ ಮುಸ್ಲಿಂ ಮತಗಳ ಬಲವನ್ನೂ ಮೀರಿಸುವ ಹಾಗೆ ಬಿಜೆಪಿಗೆ ಮೇಲ್ಜಾತಿಯವರ ಮತಗಳ ಕೃಪೆಯಿರುವುದನ್ನು ಅಂಕಿಆಂಶಗಳು ಕಾಣಿಸುತ್ತವೆ.

ಸೆಂಟರ್ ಫಾರ್ ದಿ ಸ್ಟಡಿ ಆಫ್ ಡೆವಲಪಿಂಗ್ ಸೊಸೈಟೀಸ್‍ನ ಸಮೀಕ್ಷೆಯಂತೆ ಮೇಲ್ಜಾತಿಯ ಹೆಚ್ಚು ಕಡಿಮೆ ಅರ್ಧಕ್ಕರ್ಧದಷ್ಟು ವೋಟುಗಳು 2014ರ ಚುನಾವಣೆಯಲ್ಲಿ ಬಿಜೆಪಿ ಪಾಲಾಗಿವೆ ಮತ್ತು ಇದು 2014ರ ಚುನಾವಣೆಯಲ್ಲಿ ಅದು ಗಳಿಸಿದ್ದ ಮೇಲ್ಜಾತಿಯವರ ಮತಗಳಿಗಿಂತ ಶೇ. 12.5ರಷ್ಟು ಹೆಚ್ಚು. ಇದೇ ವೇಳೆ, 2004 ಮತ್ತು 2014ರ ಚುನಾವಣೆಗಳಲ್ಲಿನ ಮತಗಳ ಪ್ರಮಾಣ ಗಮನಿಸಿದರೆ, ಬಿಜೆಪಿ ಗಳಿಸಿದ ದಲಿತರು (ಎಸ್‍ಸಿ), ಆದಿವಾಸಿಗಳು (ಎಸ್‍ಟಿ) ಮತ್ತು ಹಿಂದುಳಿವರ (ಒಬಿಸಿ) ಮತಗಳ ಸಂಖ್ಯೆಯಲ್ಲೂ ಭಾರೀ ಏರಿಕೆಯಾಗಿದೆ. ಶೇ.25ರಷ್ಟು ದಲಿತ ಮತಗಳನ್ನು ಬಿಜೆಪಿ ಪಡೆದಿರುವುದು ಒಂದೆಡೆಯಾದರೆ, ಮೇಲ್ಜಾತಿ ಬೆಂಬಲವೂ ಅಗಾಧವಾಗಿರುವುದು ಇನ್ನೊಂದೆಡೆಯಿಂದ ಬಿಜೆಪಿಯನ್ನು ಗಟ್ಟಿಗೊಳಿಸಿದೆ. ಪ್ರತಿ ಇಬ್ಬರಲ್ಲಿ ಒಬ್ಬ ಮೇಲ್ಜಾತಿಯವನ ಮತ ಬಿಜೆಪಿಗೆ ಸಿಕ್ಕಿದೆ. ಗಮನಿಸಬೇಕಾದ ಒಂದು ಮುಖ್ಯ ಸಂಗತಿಯೆಂದರೆ, 2004ರ ಚುನಾವಣೆಯಲ್ಲಿ ಕಾಂಗ್ರೆಸ್ ಪಡೆದಿದ್ದ ಮೇಲ್ಜಾತಿ, ಎಸ್‍ಸಿ, ಎಸ್‍ಟಿ ಮತ್ತು ಹಿಂದುಳಿದವರ ಮತಗಳ ಪ್ರಮಾಣ 2014ರ ಹೊತ್ತಿಗೆ ಕುಸಿದಿರುವುದು.

1991ರ ಮಂಡಲ್ ಹಂತದ ನಂತರದ ರಾಜಕೀಯ ನಡೆಯಲ್ಲಿ ಇತರ ಪಕ್ಷಗಳಂತೆ ಬಿಜೆಪಿ ಕೂಡ ಕೆಳವರ್ಗದವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವ ಯತ್ನ ಆರಂಭಿಸಿತಾದರೂ, ಅದರ ಫಲ ಅದಕ್ಕೆ ಕಂಡಿದ್ದು 2014ರ ಚುನಾವಣೆಯಲ್ಲಿ. ಇತ್ತೀಚೆಗೆ ಅದು ದಲಿತರಾದ ರಾಮನಾಥ್ ಕೋವಿಂದ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ತನ್ನ ಅಭ್ಯರ್ಥಿಯಾಗಿ ನಾಮಕರಣ ಮಾಡಿದ್ದೂ ಸೇರಿದಂತೆ ಸಮಾಜಮುಖಿ ಇಮೇಜನ್ನು ವಿಸ್ತರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತ ಬಂದಿದೆ.

ಇದೆಲ್ಲದರ ಹೊರತಾಗಿಯೂ ಒಳಗಿನಿಂದಲೇ ಬಿಜೆಪಿಯ ಚಹರೆ ಬದಲಾಗಿದೆಯೇ ಎಂದು ನೋಡಿದರೆ ಇಲ್ಲವೆಂದೇ ಕಾಣಿಸುವ ಅಂಕಿ ಅಂಶಗಳನ್ನೂ ಆ ವರದಿ ಎತ್ತಿಕೊಡುತ್ತದೆ. ಅದರಂತೆ ಪಕ್ಷದ ನಾಯಕತ್ವ ಪ್ರಮುಖವಾಗಿ ಮೇಲ್ಜಾತಿಯವರ ಕೈಯಲ್ಲೇ ಇರುವುದನ್ನು ಅದು ನಿರಂತರವಾಗಿ ಕಾಯ್ದುಕೊಂಡು ಬಂದಿದೆ. ಹತ್ತರಲ್ಲಿ ನಾಲ್ವರು ಬಿಜೆಪಿ ಸಂಸದರು ಮೇಲ್ಜಾತಿಗೇ ಸೇರಿದವರಾಗಿದ್ದಾರೆ. ಆದರೆ ಇತರ ವರ್ಗದವರು ಬಿಜೆಪಿಯಿಂದ ಸಂಸದರಾಗಿರುವ ಪ್ರಮಾಣ ಶೇ.15ನ್ನು ದಾಟುವುದಿಲ್ಲ.

ಇನ್ನು ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲಿನ ಜಾತಿ ಆಧಾರಿತ ಸಂಯೋಜನೆಯನ್ನು ಗಮನಿಸಿದರೂ ಸಿಗುವುದು ಇಂಥದೇ ಚಿತ್ರ. ಮೂವರು ಬಿಜೆಪಿ ಮುಖ್ಯಮಂತ್ರಿಗಳಲ್ಲಿ ಇಬ್ಬರು ಮೇಲ್ಜಾತಿಯವರೇ ಆಗಿದ್ದಾರೆ. ಅಂದರೆ 15 ಬಿಜೆಪಿ ಮುಖ್ಯಮಂತ್ರಿಗಳಲ್ಲಿ 10 ಮಂದಿ ಮೇಲ್ಜಾತಿಯವರಾದರೆ, ಒಬಿಸಿ ಮತ್ತು ಪರಿಶಿಷ್ಟ ಪಂಗಡದ ತಲಾ ಇಬ್ಬರಿಗೆ ಅವಕಾಶ ಸಿಕ್ಕಿದೆ. ದಲಿತ ಪ್ರಾತಿನಿಧ್ಯ ಇಲ್ಲವೇ ಇಲ್ಲ.

ಪಕ್ಷದೊಳಗಿನ ಈ ಮೇಲ್ಜಾತಿ ಪಾರುಪತ್ಯ ಉದ್ದೇಶಪೂರ್ವಕ ತಂತ್ರವಾಗಿಲ್ಲದೆ ಇರಬಹುದು ಅಂತಲೇ ಇಟ್ಟುಕೊಳ್ಳೋಣ. ಆದರೆ, ಕೆಳವರ್ಗದವರಲ್ಲಿ ಬೆಳೆಯುತ್ತಿರುವ ಅಸಮಾಧಾನದ ಬೇಗುದಿಯನ್ನು ಏಕೆ ಶಮನಗೊಳಿಸಲಿಕ್ಕಾಗುತ್ತಿಲ್ಲ ಮತ್ತು ಕೆಳವರ್ಗದ ಮತದಾರರು ಸರ್ಕಾರದ ವಿರುದ್ಧ ತಿರುಗಿನಿಲ್ಲುವ ಸನ್ನಿವೇಶಕ್ಕೆ ಕಾರಣವೇನು ಎಂಬುದನ್ನು ಉತ್ತರಿಸುವ ಹೊಣೆ ಆಡಳಿತ ಪಕ್ಷದ್ದಾಗಿರುತ್ತದೆ.

ಯಾವುದೇ ಸರ್ಕಾರ ಗೌರವಿಸಿದ್ದಕ್ಕಿಂತಲೂ ಹೆಚ್ಚಾಗಿ ಅಂಬೇಡ್ಕರ್ ಅವರನ್ನು ತಮ್ಮ ಸರ್ಕಾರ ಗೌರವಿಸಿದೆ ಎಂದು ಹೇಳುವವರು, ಆ ಗೌರವವೆಂಬುದು ವಾಸ್ತವದಲ್ಲಿ ರೂಪ ಪಡೆದಿದೆಯೇ ಎಂದು ತಮ್ಮನ್ನೇ ತಾವು ಕೇಳಿಕೊಳ್ಳುವುದೂ ಅಷ್ಟೇ ಅಗತ್ಯವಲ್ಲವೇ?

Share

Leave a comment

Your email address will not be published. Required fields are marked *

Recent Posts More

 • 1 week ago No comment

  ನಮ್ಮ ಕಣ್ಣುಗಳೇಕೆ ಭಾರವಾಗುತ್ತಿವೆ?

        ಕವಿಸಾಲು           ತಿರುಕನ ಕನಸಲ್ಲ ನನ್ನದು ತಿರುಕನಲ್ಲ ಕಣ್ರಿ ನಾನು ನಿಮ್ಮ ಮರುಕ ಗಿರುಕ ಎಲ್ಲಾ ನನಗೆ ಹಿಡಿಸಲ್ಲ ಅವ್ರು ಕೋಟೆ ಕಟ್ಟಿ ನ್ಯಾಯ ನೀತಿಗಳ ತಮ್ಮಲ್ಲೆ ಬಚ್ಚಿಟ್ಟು ಒಳಗೆ ಬೆಚ್ಚಗೆ ಕೂತಿರಬಹುದು ನ್ಯಾಯಕ್ಕೆ ಕನ್ನ ಹಾಕೋ ನಾನು ತಿರುಕ ಹೇಗೆ ಆಗಬೇಕು? ತಿರುಕನದೇನೋ ಕನಸಿತ್ತು ನನ್ನದು ಕೂಡಾ ಕನಸೆಂದು ಆ ಕೋಟೆ ಒಳಗಿರುವವರು ಕನವರಿಸುತ್ತಿರಬಹುದು ಬೂದಿ ಮುಚ್ಚಿದ ...

 • 1 week ago No comment

  ಕೊಂಕಣಿ ಪ್ರತಿಭೆಯನ್ನರಸಿ ಕರ್ನಾಟಕಕ್ಕೆ ಬಂದ ಪ್ರಶಸ್ತಿ

      ಅತಿಥಿ           ಈ ಬಾರಿ ಕರ್ನಾಟಕವು ಎರಡು ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪುರಸ್ಕಾರಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿತು ಎಂದರೆ ಅಚ್ಚರಿಯಾಗಬಹುದು. ಆದರೂ ಇದು ಸತ್ಯ. ಪ್ರಮಾದವೇನಾದರೂ ಆಯಿತೇ? ಒಂದೇ ಪುರಸ್ಕಾರವನ್ನು ಇಬ್ಬರಿಗೆ ಹಂಚಿರಬಹುದೇ? ಎಂದೆಲ್ಲ ಯೋಚಿಸಿ ತಲೆ ಕೆರೆದುಕೊಳ್ಳುತ್ತಿದ್ದೀರಾ? ಇಲ್ಲಿದೆ ನೋಡಿ ಉತ್ತರ. ಕನ್ನಡಕ್ಕೆ 2018ರ ಕೇಂದ್ರಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಘೋಷಣೆಯಾದಾಗಲೇ ಕರ್ನಾಟಕದ ಕೊಂಕಣಿ ಕವಯತ್ರಿ ವಿಲ್ಮಾ ...

 • 2 weeks ago No comment

  ಸಾಹಸದ ಆ ನಿಮಿಷಗಳು

          ಮೊದಲ ಬಾರಿಯಾದ್ದರಿಂದ ಕೆಲವೇ ನಿಮಿಷಗಳ ಈ ಜಿಗಿತದ ರೋಚಕತೆ ಒಂದು ತಿಂಗಳ ಕಾಲ ನನ್ನನ್ನು ಆವರಿಸಿದ್ದು ಸುಳ್ಳಲ್ಲ.         ಬ್ಯಾಂಕರುಗಳು, ಅಕೌಂಟೆಂಟುಗಳು ವರ್ಷದ ಮೊದಲಿಂದ ಹಿಡಿದು ಮಾರ್ಚಿ ತಿಂಗಳವರೆಗೆ ಭಾರೀ ಬ್ಯುಸಿಯಾಗುವಂತೆ ಇಂಗ್ಲೆಂಡಿನ ಸರ್ಕಾರೀ ದಂತ ವೈದ್ಯಕೀಯ ರಂಗದಲ್ಲೂ ಧಾವಂತ ಕಾಣಿಸಿಕೊಳ್ಳುತ್ತದೆ. ಸರ್ಕಾರದಿಂದ ಗುತ್ತಿಗೆ ಪಡೆದ ಕೆಲಸವನ್ನು ಮಾರ್ಚಿಯ ಕೊನೆಗೆ ಪೂರ್ತಿಗೊಳಿಸದಿದ್ದರೆ ಮುಂದಿನ ವರ್ಷದ ಕಾಂಟ್ರಾಕ್ಟ್ ನ್ನು ಕಳೆದುಕೊಳ್ಳುವ ...

 • 3 weeks ago No comment

  ಪ್ರಸಾದ್ ಪಟ್ಟಾಂಗ | ಫಿಫಾ ಫಿವರ್

  ಅಂದು ಎಲ್ಲರ ಕಣ್ಣುಗಳೂ ಬೇರೇನನ್ನೋ ದಿಟ್ಟಿಸುತ್ತಿದ್ದವು. ಅದೊಂದು ಸುಂದರ ರೆಸ್ಟೊರೆಂಟ್. ಆವರಣದ ಒಳಗೂ ಹೊರಗೂ ಬಂದವರಿಗೆ ಕುಳಿತುಕೊಳ್ಳಲು ಸಾಕಷ್ಟು ಜಾಗವಿರುವಂಥದ್ದು. ಜೊತೆಗೇ ಒಂದು ಪುಟ್ಟ ಮೈದಾನದಂತಿರುವ ಜಾಗವನ್ನೂ, ಈಜುಕೊಳವನ್ನೂ ಹೊಂದಿರುವ ಸುಸಜ್ಜಿತ ರೆಸ್ಟೊರೆಂಟ್. ನಾನು ಪ್ರತೀ ತಿಂಗಳು ಲುವಾಂಡಾಗೆ ಬಂದಿಳಿದಾಗಲೆಲ್ಲಾ ಇಲ್ಲಿಯ ಸಿಬ್ಬಂದಿಯೇ ನನಗೆ ಅನ್ನದಾತರು. ಹೀಗಾಗಿ ಎಲ್ಲೆಲ್ಲೂ ನನಗೆ ಪರಿಚಿತ ಮುಖಗಳೇ. ಅಂದು ಮಾತ್ರ ಸಿಬ್ಬಂದಿಯೊಬ್ಬ ಗಡಿಬಿಡಿಯಲ್ಲಿ ನನ್ನ ಆರ್ಡರ್ ಬರೆದುಕೊಂಡು ಅಷ್ಟೇ ಅವಸರದಲ್ಲಿ ಖಾದ್ಯಗಳನ್ನು ತಂದಿಟ್ಟು ...

 • 3 weeks ago No comment

  ಸವಿತಾ ನಾಗಭೂಷಣ ಪ್ರವಾಸ ಕಥನ | ದಾರಿಯೇ ದೈವ… ವೈಷ್ಣೋದೇವಿ

  ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ...


Editor's Wall

 • 11 May 2018
  2 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

 • 10 May 2018
  2 months ago No comment

  ಒಂದು ಪುಸ್ತಕ; ವಾರವಿಡೀ ಬಿಡುಗಡೆ!

  ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

 • 03 May 2018
  2 months ago No comment

  ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                    ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

 • 30 April 2018
  3 months ago No comment

  ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

  ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

 • 28 April 2018
  3 months ago No comment

  ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

  ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...