Share

ಈ ಪ್ರೊಫೆಸರ್ ಕಣ್ಣು ಹೆಣ್ಣುಮಕ್ಕಳ ಜೀನ್ಸ್ ಮೇಲೆ!
ಕನೆಕ್ಟ್ ಕನ್ನಡ

 

ಹೆಣ್ಣುಮಕ್ಕಳು ಹೇಗಿರಬೇಕು ಹೇಗಿರಬಾರದು, ಏನು ಮಾಡಬೇಕು ಏನನ್ನು ಮಾಡಬಾರದು, ಅವರ ಉಡುಪು ಹೇಗಿರಬೇಕು ಹೇಗಿರಕೂಡದು ಎಂದೆಲ್ಲ ಹೇಳುವ, ನಡುರಾತ್ರಿಯಲ್ಲಿ ಹೆಣ್ಣು ಹೊರಗೇಕಿರಬೇಕು ಎಂದು ಪ್ರಶ್ನಿಸುವ ಇಂಥವರಿರುವ ಯೂನಿವರ್ಸಿಟಿಗಳು ಇನ್ನೆಂಥ ದಾರಿದ್ರ್ಯಕ್ಕೆ ಒಡ್ಡಿಕೊಳ್ಳಬಹುದೆಂಬುದನ್ನು ಊಹಿಸಬಹುದು. 

 

 

“ಗಂಡಸರಂತೆ ಜೀನ್ಸ್ ಮತ್ತು ಶರ್ಟ್ ಧರಿಸುವ ಮಹಿಳೆ ತೃತೀಯ ಲಿಂಗಿ ಮಗುವನ್ನು ಹಡೆಯುತ್ತಾಳೆ.” ಕೇರಳ ಯೂನಿವರ್ಸಿಟಿಯ ಸಸ್ಯಶಾಸ್ತ್ರ ಪ್ರಾಧ್ಯಾಪಕನೊಬ್ಬ ಇಂಥ ಹೇಳಿಕೆಯನ್ನು ಕೊಟ್ಟಿರುವುದು ವರದಿಯಾಗಿದೆ. ರಜಿತ್ ಕುಮಾರ್ ಎಂಬ ಈ ಪ್ರೊಫೆಸರ್ ಮಹಾಶಯನ ಪ್ರಕಾರ, ಇರಬೇಕಾದ ರೀತಿಯಲ್ಲಿ ಇರುವ ಗಂಡಸು ಮತ್ತು ಹೆಂಗಸಿನ ದಾಂಪತ್ಯದಲ್ಲಿ ಮಾತ್ರ ‘ಒಳ್ಳೆಯ ಮಗು’ ಹುಟ್ಟಲು ಸಾಧ್ಯ. ಉತ್ತಮ ಚಾರಿತ್ರ್ಯವಿಲ್ಲದ ದಂಪತಿಯ ಮಕ್ಕಳು ಆಟಿಸಂ, ಸೆರೆಬ್ರಲ್ ಪಾಲ್ಸಿಯಂಥ ವೈಕಲ್ಯದೊಂದಿಗೇ ಹುಟ್ಟುತ್ತಾರೆಂದು ಆತ ಹೇಳಿದ್ದಾನಂತೆ.

ತೃತೀಯ ಲಿಂಗಿಗಳಿಗಾಗಿ ಇಂಡಿಯಾದಲ್ಲೇ ತನ್ನದೇ ಆದ ನೀತಿ ರೂಪಿಸಿದ ಏಕೈಕ ರಾಜ್ಯವಾಗಿರುವ ಕೇರಳದಲ್ಲೇ ಇಂಥ ವಕ್ರಬುದ್ಧಿಜೀವಿಗಳೂ ಹೀಗೆ ನಾಲಿಗೆ ಹೊರಳಾಡಿಸುವುದು ವಿಪರ್ಯಾಸ. ಹೆಣ್ಣಿನ ಬಗ್ಗೆ, ತೃತೀಯ ಲಿಂಗಿಗಳ ಬಗ್ಗೆ ಸುಶಿಕ್ಷಿತರೆನ್ನಿಸಿಕೊಂಡವರು ಅದೆಷ್ಟು ಪೂರ್ವಾಗ್ರಹಿಗಳಾಗಿದ್ದಾರೆಂಬುದಕ್ಕೂ ಇದೊಂದು ಉದಾಹರಣೆ.

ಅಂಥ ಹೇಳಿಕೆ ಬಗ್ಗೆ ಗೊತ್ತಾಗುತ್ತಿದ್ದಂತೆಯೇ ಕೇರಳ ಸರ್ಕಾರ ಆತನ ವಿರುದ್ಧ ಕಾನೂನು ಕ್ರಮ ಕೈಗೆತ್ತಿಕೊಳ್ಳುವುದಾಗಿ ಹೇಳಿದೆ. ಮಾತ್ರವಲ್ಲ, ಶಾಲೆ ಕಾಲೇಜುಗಳಲ್ಲಿನ ಸರ್ಕಾರಿ ಪ್ರಾಯೋಜಿತ ಜಾಗೃತಿ ಕಾರ್ಯಕ್ರಮಗಳಲ್ಲಿ ಆತನಿಗೆ ನಿಷೇಧ ಹೇರುವ ಬಗ್ಗೆಯೂ ಮಾತನಾಡಿದೆ. ಈ ವಿಚಾರವಾಗಿ ಮಾತನಾಡಿರುವ ಕೇರಳ ಆರೋಗ್ಯ ಸಚಿವೆ ಕೆ ಕೆ ಶೈಲಜಾ, ಆತ ಸತತವಾಗಿ ಮಹಿಳಾ ವಿರೋಧಿ ಹೇಳಿಕೆಗಳನ್ನು ಕೊಡುತ್ತಿರುವುದರ ಬಗ್ಗೆ ಮತ್ತು ಮೌಢ್ಯವನ್ನು ಪ್ರಚಾರ ಮಾಡುತ್ತಿರುವುದರ ಬಗ್ಗೆಯೂ ತೀವ್ರ ಆಕ್ಷೇಪವೆತ್ತಿದ್ದಾರೆ.

ತೃತೀಯ ಲಿಂಗಿಗಳಿಗೆಂದೇ ಪ್ರತ್ಯೇಕ ನ್ಯಾಯಮಂಡಳಿಯನ್ನು ಸ್ಥಾಪಿಸುವ ಬಗ್ಗೆಯೂ ಕೇರಳ ಸರ್ಕಾರ ಘೋಷಿಸಿದೆ. ತೃತೀಯ ಲಿಂಗಿಗಳಿಗೆ ಸಮಾನನ ಹಕ್ಕುಗಳೊಂದಿಗೆ ಈ ಸಮಾಜದಲ್ಲಿ ಬದುಕುವ ಹಕ್ಕು ನೀಡುವ ನಿಟ್ಟಿನಲ್ಲಿ ಕಳೆದ ನವೆಂಬರ್‍ನಲ್ಲಿ ಪ್ರಕಟಿಸಲಾಗಿರುವ ನೀತಿಯ ಮುಂದುವರಿದ ಭಾಗವಾಗಿ ಈ ನ್ಯಾಯಮಂಡಳಿ ಅಸ್ತಿತ್ವಕ್ಕೆ ಬರಲಿದೆ.

ವಾಸ್ತವವೇನೆಂದರೆ, ಸರ್ಕಾರದ ಇಂಥದೊಂದು ಗಮನೀಯ ಹೆಜ್ಜೆಯ ಹೊರತಾಗಿಯೂ, ತೃತೀಯ ಲಿಂಗಿಗಳನ್ನು ಒಪ್ಪಿಕೊಳ್ಳದ ಮನಸಃಸ್ಥಿತಿಯೊಂದು ಸರ್ಕಾರದೊಳಗಿರುವವರಿಂದಲೇ ವ್ಯಕ್ತವಾಗುತ್ತಿದೆ. ತೃತಿಯ ಲಿಂಗಿಗಳ ಕೊಲೆ ನಡೆಯುತ್ತಿದೆ ಅಲ್ಲಿ. ಪೊಲೀಸರಿಗೂ ಇವರೆಂದರೆ ಆಗದೆಂಬುದರ ಬಗ್ಗೆಯೂ ವರದಿಗಳಿವೆ.

ಮಹಿಳೆಯರ ವಿಚಾರದಲ್ಲಿ ಅನಪೇಕ್ಷಿತ ಧೋರಣೆ ವ್ರಣದ ಕೀವಿನಂತೆ ಮತ್ತೆ ಮತ್ತೆ ಕಾಣುತ್ತಲೇ ಇದೆ. ಈ ರಜಿತ್ ಕುಮಾರ್ ಎಂಬ ಪ್ರೊಫೆಸರ್ ಮಾತ್ರವಲ್ಲ, ಕೇರಳದಲ್ಲೇ ಮುನವ್ವಿರ್ ಎಂಬ ಮತ್ತೊಬ್ಬ ಪ್ರಾಧ್ಯಾಪಕ ಹೆಣ್ಣುಮಕ್ಕಳ ಕಾಲೇಜಿನಲ್ಲೇ ಹೆಣ್ಣುಮಕ್ಕಳ ಬಗ್ಗೆ ಅತ್ಯಂತ ನೀಚ ರೀತಿಯಲ್ಲಿ ಮಾತನಾಡಿದ್ದನೆಂಬುದನ್ನು ವರದಿಗಳು ಉಲ್ಲೇಖಿಸುತ್ತವೆ. ಹೆಣ್ಣುಮಕ್ಕಳು ಹೇಗಿರಬೇಕು ಹೇಗಿರಬಾರದು, ಏನು ಮಾಡಬೇಕು ಏನನ್ನು ಮಾಡಬಾರದು, ಅವರ ಉಡುಪು ಹೇಗಿರಬೇಕು ಹೇಗಿರಕೂಡದು ಎಂದೆಲ್ಲ ಹೇಳುವ, ನಡುರಾತ್ರಿಯಲ್ಲಿ ಹೆಣ್ಣು ಹೊರಗೇಕಿರಬೇಕು ಎಂದು ಪ್ರಶ್ನಿಸುವ ಇಂಥವರಿರುವ ಯೂನಿವರ್ಸಿಟಿಗಳು ಇನ್ನೆಂಥ ದಾರಿದ್ರ್ಯಕ್ಕೆ ಒಡ್ಡಿಕೊಳ್ಳಬಹುದೆಂಬುದನ್ನು ಊಹಿಸಬಹುದು. ವಿಷ ಕಕ್ಕುವವರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯದಲ್ಲಿ ಆಕ್ರಮಿಸುವ ಮಟ್ಟಕ್ಕಿರುವುದರ ಅಪಾಯವನ್ನೂ ಅಂದಾಜಿಸಬಹುದು.

ಶೈಕ್ಷಣಿಕ ವಲಯದ ಇಂಥ ಪೂರ್ವಾಗ್ರಹಿಗಳದ್ದೊಂದು ದಿಕ್ಕಿನ ದಾಳಿಯಾದರೆ, ನಮ್ಮನ್ನು ಆಳುವ ರಾಜಕಾರಣಿಗಳ ಅಸಹನೀಯ ಮತ್ತು ಪ್ರಚೋದನಾತ್ಮಕ ಮಾತುಗಳು ಮತ್ತೊಂದು ದಿಕ್ಕಿನಿಂದ ಹೆಣ್ಣಿನ ಮೇಲೆ ಗೈಯುವ ದಾಳಿಗಳು ಅತ್ಯಾಚಾರಿ ಮನಃಸ್ಥಿತಿಯವೇ ಆಗಿವೆ. ಕೆಡುಕಿನ ಮೂಲ ಅಲ್ಲೆಲ್ಲೋ ಇಲ್ಲವೆಂಬುದೇ ಆಘಾತಕಾರಿ ಸಂಗತಿ.

Share

Leave a comment

Your email address will not be published. Required fields are marked *

Recent Posts More

  • 21 hours ago No comment

    ಮೋದಿ ಮಾತಾಡಲಿಲ್ಲ

    ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

  • 1 day ago No comment

    ಇವರನ್ನು ನೋಡಿ…

    ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

  • 2 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 2 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 2 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...


Editor's Wall

  • 18 April 2018
    2 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 18 April 2018
    2 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 17 April 2018
    2 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

  • 16 April 2018
    4 days ago No comment

    ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

    ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

  • 14 April 2018
    5 days ago No comment

    ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

    ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...