Share

ಸವಿತಾ ನಾಗಭೂಷಣ ಪ್ರವಾಸ ಕಥನ | ವಾಘಾ ಗಡಿಯಲ್ಲಿ ಒಂದು ಸಂಜೆ…

 

ಪ್ರವಾಸಿ ಸವಿತಾ ಕಂಡ ಇಂಡಿಯಾ

 

 

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

ಭಾಗ-1

ನ ನುಗ್ಗಾಡುತ್ತಿದ್ದರು. ನಾನು ಈ ನೂಕಾಟದ ಲಾಭ ಪಡೆದು, ಅಲ್ಲಿನ ಎಲ್ಲ ನಿಯಮಗಳನ್ನೂ ಉಲ್ಲಂಘಿಸಿ ವಿ.ಐ.ಪಿ. ಗ್ಯಾಲರಿಯತ್ತ ಹೆಜ್ಜೆ ಹಾಕಿದೆ. ಅರ್ಥಾತ್ ಬೇಲಿ ಹಾರಿದೆ! ಅಬ್ಬಾ ಎಷ್ಟು ಸಂತೋಷವಾಯಿತು! ನಾನು ಭಾರತ-ಪಾಕ್ ಗಡಿ ಬಾಗಿಲಿನ ಹತ್ತಿರವೇ ಇದ್ದೆ. ನಾನು ಕುಳಿತ ಸ್ಥಳದಿಂದ ಗೇಟು ಅಂದರೆ ಗಡಿ ಬರೀ ಹತ್ತು ಮಾರುಗಳು! ಈ ನೂಕಾಟದಲ್ಲಿ ನನ್ನ ಸಹ ಪ್ರವಾಸಿಗರು ಮತ್ತು ಸ್ನೇಹಿತರು ಎಲ್ಲೆಲ್ಲಿಯೋ ಹರಡಿ ಹೋಗಿದ್ದರು. ಎಲ್ಲಿ ಹೋಗುತ್ತಾರೆ, ಸಿಕ್ಕೇ ಸಿಗುತ್ತಾರೆ ಎಂದು ನಾನು ನಿರಾತಂಕದಿಂದ ಅಲ್ಲೇ ವಿ.ಐ.ಪಿ.ಯಾಗಿ ಆಸೀನಳಾದೆ! ನನ್ನ ಪಕ್ಕ ಕೂತಿದ್ದ ವಿದೇಶಿ(ಪಶ್ಚಿಮದ) ಮಹಿಳೆ ಗಡಿಯಾಚೆ-ಗಡಿಯೀಚೆ (ಎಂದಿನ ಕಾರ್ಯಕ್ರಮದಂತೆ) ನಡೆಯುತ್ತಿದ್ದ ಹಾಡು-ನೃತ್ಯ-ವಿಚಿತ್ರ ಸೈನಿಕ ಕಸರತ್ತುಗಳನ್ನು ಕುತೂಹಲಭರಿತ ಗಾಬರಿಯಿಂದ ವೀಕ್ಷಿಸುತ್ತಿದ್ದಳು. ನಮ್ಮ ಕಡೆಯಿಂದ ದೇಶಪ್ರೇಮದ ಘೋಷಣೆಗಳು ಮೊಳಗುತ್ತಿದ್ದವು. ಇದರ ಮಧ್ಯೆ, ನೆರೆದಿರುವ ಜನರಾರೂ ಪಾಕಿಸ್ತಾನ ವಿರೋಧಿ ಘೋಷಣೆಗಳನ್ನು ಕೂಗಬಾರದೆಂದು ಗಡಿ ಭದ್ರತಾ ಪಡೆಯವರು ಪದೇ ಪದೇ ಧ್ವನಿವರ್ಧಕದ ಮೂಲಕ ವಿನಂತಿಸುತ್ತಿದ್ದರು. ಒಂದು ರೀತಿಯ ತಲ್ಲಣಪೂರ್ಣ ಸಂಭ್ರಮ ಅಲ್ಲಿ ಮೆರೆದಾಡುತ್ತಿತ್ತು.

ಎರಡೂ ಕಡೆ ಪಥ ಸಂಚಲನ, ಹಾಡು, ನೃತ್ಯ ಎಲ್ಲ ಮುಗಿದ ಮೇಲೆ ಗಡಿಯ ಬಾಗಿಲು ಮುಚ್ಚುವ ಸಮಯ ಬಂತು. ಆಗಂತೂ ನಮ್ಮ ಪಡೆಯವರು ವಿವಿಧ ಭಾವ ಭಂಗಿಗಳಲ್ಲಿ ಕಸರತ್ತು ಮಾಡುತ್ತಾ, ಸುಳ್ಳು ಸುಳ್ಳೇ ಮುನಿಸು ಆವಾಹಿಸಿಕೊಂಡಂತೆ-ಆಕಾಶಕ್ಕೇ ಎಂಬಂತೆ ಕೈಕಾಲುಗಳನ್ನು ಎತ್ತಿ ಒಗೆಯುವುದೇನು, ಅದರ ಭಾಗವಾಗಿ ಗಡಿ ಬಾಗಿಲನ್ನು ಜೋರಾಗಿ ಒದ್ದು ಮುಚ್ಚುವುದೇನು!-ಅಬ್ಬರದ ದೇಶಪ್ರೇಮ ಮೆರೆದು ಬಾಗಿಲಿಗೆ ಬೀಗ ಜಡಿದರು. ಆ ಕಡೆಯೂ ಅದೇ ಆಗಿರಬೇಕು!

ಇದಾದ ತಕ್ಷಣವೇ ಎರಡೂ ಕಡೆಯಿಂದ ಜನ ಅವರವರ ಗಡಿಯ ಬಾಗಿಲ ಬಳಿ ಸಾರಿ ಕಿಕ್ಕಿರಿದು ನಿಂತು ಬಾಗಿಲ ಸಂದುಗಳಿಂದ ಪರಸ್ಪರ ಮಿಕಿಮಿಕಿ ನೋಡತೊಡಗಿದರು. ಯಾವುದೇ ಕಾರಣಕ್ಕೆ ಗಡಿಯ ಬಾಗಿಲು ತೆಗೆದದ್ದೇ ಆದರೆ, ಈಚೆಯಿಂದ ಆಚೆಗೆ, ಆಚೆಯಿಂದ ಈಚೆಗೆ ನುಗ್ಗಿ ಬರಲು ಸನ್ನದ್ಧರಾದಂತೆ ಆ ಈ ಜನ ವಿಚಿತ್ರ ಉದ್ವಿಗ್ನತೆಯಲ್ಲಿದ್ದಂತೆ ನಿಂತೇ ಇದ್ದರು. ನಾನೂ ಬಾಗಿಲ ಬಳಿ ನಿಂತು ಅತ್ತ ನೋಡಿದೆ. ಅವರು, ನಾವು ಇಬ್ಬರೂ. ಗಡಿ ಬಾಗಿಲೆಂಬ ಅಡ್ಡಗೋಡೆಯಿರುವ ಒಂದೇ ಬಂದೀಖಾನೆಯಲ್ಲಿ ಇದ್ದಂತೆ ಭಾಸವಾಯಿತು… ಯಾರಿಗೂ ಹೋಗುವ ಮನಸ್ಸಿಲ್ಲ! ‘ಚಲೋ! ಚಲೋ!’ ಎಂದು ಗಡಿಭದ್ರತಾ ಪಡೆಯವರು ನಮ್ಮನ್ನು ಅಲ್ಲಿಂದ ಕದಲಿಸಲು ಯತ್ನಿಸುತ್ತಿದ್ದರು. ಆದರೆ ಬಾಗಿಲಿನ ಎರಡೂ ಕಡೆ ನಿಂತವರು ಅಲ್ಲೇ ಬೇರುಬಿಟ್ಟಂತೆ ಕದಲಲು ನಿರಾಕರಿಸುತ್ತಿರುವಂತೆ ನಿಂತೇ ಇದ್ದರು! ‘ಕತ್ತಲಾಗುತ್ತಿದೆ ನಡೆಯಿರಿ’ ಎಂದು ಪದೇ ಪದೇ ಆದೇಶಿಸಿದರೂ ಜಮಾಯಿಸಿದ ಜನ ಕದಲೊಲ್ಲರು! ದ್ವೇಷವೂ ಪ್ರೀತಿಯ ಇನ್ನೊಂದು ಮುಖವಲ್ಲವೇ? ಈ ಮಾತಿನ ಸತ್ಯ ಮೊದಲಬಾರಿಗೆ ಅಲ್ಲಿ ನನಗೆ ಸಾಕ್ಷಾತ್ಕಾರವಾದಂತೆನಿಸಿತು… ಕೊನೆಗೂ ಹೊರಡಲೇ ಬೇಕಾಗಿ ಬಂದು. ಮುಂದೆ ಸಾಗುವಾಗ ಭಾರತದ ಪ್ರವೇಶ ದ್ವಾರದಲ್ಲಿನ ಅಶೋಕ ಚಕ್ರ ನನ್ನ ಕಣ್ಣನ್ನು ಮುದ್ದಿಸಿತು. ನಾನು ಭಾರತದ ನಿವಾಸಿ, ಹೆಮ್ಮೆ ಅನಿಸಿತು. ಜೊತೆಗೇ, ‘ಕುರುಡು ಹಮ್ಮು ಬೇಟೆಯಾಡಿ ಜೀವ ನರಳಿದೆ’ ಎಂಬ ಕವಿ ಸಾಲು ಏಕೋ ಒಳಗೊಳಗೇ ಅನುರಣಿಸಿತು. ಯಾರೋ ಹೇರಿರುವ ದ್ವೇಷದ ಭಾರವನ್ನು ಆದಷ್ಟು ಬೇಗ ಇಳಿಸಿಕೊಂಡು ಒಂದಾಗಬೇಕು… ಹೇಗೆ ಒಂದಾಗುವುದು? ದಾರಿಗಾಣದೆ ಹೃದಯ ಪರಿತಪಿಸಿತು.

ಅದೋ ಅಲ್ಲಿ ಗಡಿಯಾಚೆಯಿಂದ ಎಲ್ಲರ ಕಣ್ತಪ್ಪಿಸಿ ನುಸುಳಿಕೊಂಡು ಬಂದ ದುಪ್ಪಟ್ಟಾಗಳು ನಮಗಾಗಿ ಕಾದು ಕುಳಿತಿವೆ!. ಅಯ್ಯೋ ಎಷ್ಟು ಸುಲಭ ದರ ಅಂತ ಒಬ್ಬೊಬ್ಬರೂ ಮೂರು-ನಾಲ್ಕು ಖರೀದಿಸಿ ಮೈಮೇಲೆ ಹಾಕಿಕೊಂಡೆವು. ದೇವರೇ… ಎಷ್ಟು ಬೆಚ್ಚಗಿದೆ!

Share

Leave a comment

Your email address will not be published. Required fields are marked *

Recent Posts More

  • 21 hours ago No comment

    ಮೋದಿ ಮಾತಾಡಲಿಲ್ಲ

    ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

  • 1 day ago No comment

    ಇವರನ್ನು ನೋಡಿ…

    ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

  • 2 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 2 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 2 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...


Editor's Wall

  • 18 April 2018
    2 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 18 April 2018
    2 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 17 April 2018
    2 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

  • 16 April 2018
    4 days ago No comment

    ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

    ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

  • 14 April 2018
    5 days ago No comment

    ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

    ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...