Share

ಇಂಗ್ಲೆಂಡಿನಲ್ಲಿ ಕಂಡ ‘ಬೆಳದಿಂಗಳ ಬಾಲೆ’
ಡಾ. ಪ್ರೇಮಲತ ಬಿ

1993ರಿಂದಲೂ ಕನ್ನಡ ಚಿತ್ರರಂಗದ ಆಗುಹೋಗುಗಳನ್ನು ಗಮನಿಸುತ್ತಿರುವವರು ಸುಮನ್ ನಗರ್ಕರ್. ಇಷ್ಟೂ ವರ್ಷಗಳಿಂದ ಚಿತ್ರರಂಗದ ಸಂಪರ್ಕವಿಟ್ಟುಕೊಂಡು ಬಂದವರು. 2001ರಲ್ಲಿ ‘ಪ್ರೀತ್ಸು ತಪ್ಪೇನಿಲ್ಲ’ ಚಿತ್ರದಲ್ಲಿ ರವಿಚಂದ್ರನ್ ತಂಗಿಯಾಗಿ ಅಭಿನಯಿಸಿದ ನಂತರ ಇವರು ಎಲ್ಲಿಗೆ ಹೋದರು ಎಂಬುದೇ ಹಲವರಿಗೆ ತಿಳಿದಿರಲಿಲ್ಲ. ಆದರೆ ಮದುವೆಯಾಗಿ ಹಾರಿದ್ದು ಅಮೆರಿಕಾಕ್ಕೆ ಹಾರಿದ್ದರು ಸುಮನ್. ಮತ್ತೆ ನಟಿಸುವ ಅವಕಾಶ ಅವರಿಗೂ, ತೆರೆಯ ಮೇಲೆ ಅವರನ್ನು ಕಾಣುವ ಅವಕಾಶ ನಮಗೂ ಬಂದಿರಲೇ ಇಲ್ಲ.

‘ಮೇಷ್ತ್ರು’ ನಾಗತಿಹಳ್ಳಿ ಚಂದ್ರಶೇಖರ್ ಅಮೆರಿಕಾದಲ್ಲಿದ್ದ ತಮ್ಮ ಶಿಷ್ಯೆಯ ಮನೆಗೆ ಕಾಲಿಟ್ಟಿದ್ದೇ ಕಾರಣವಾಯ್ತು ಸುಮನ್ ಮತ್ತೆ ತೆರೆಮೇಲೆ ಮಿಂಚುವಂತಾಯಿತು. ಅವರಿಗೆ 2016ರ ‘ಇಷ್ಟಕಾಮ್ಯ’ ಚಿತ್ರದಲ್ಲಿ ಒಂದು ಪಾತ್ರ ದೊರಕಿತು. ‘ಗ್ರೇ’ ಎನ್ನುವ ಅಂತರ್ಜಾಲ ಕಿರುಚಿತ್ರದಲ್ಲಿಯೂ ದ್ವಿ-ಪಾತ್ರ ದಕ್ಕಿತು. ‘ಜೀರ್ಜಿಂಬೆ’ ಎನ್ನುವ ಕಾರ್ತಿಕ್ ಸರಗೂರರ ಚಿತ್ರದಲ್ಲಿಯೂ ನಟಿಸಿದರು.

ತಮ್ಮ ಮೊದಲ ಇನ್ನಿಂಗ್ಸಿನಂತೆಯೇ ಎರಡನೆಯ ಬಾರಿಯೂ ಮನಸ್ಸಲ್ಲಿ ಉಳಿಯುವ ಪಾತ್ರಗಳನ್ನೇ ಆಯ್ಕೆ ಮಾಡಿಕೊಂಡು ಅಮೆರಿಕಾ-ಭಾರತದ ನಡುವೆ ಓಡಾಡಿಕೊಂಡು ಸುಮನ್, ಪ್ರಬುದ್ಧ ಮತ್ತು ವಿಭಿನ್ನ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. 2017ರಲ್ಲಿ 4 ರಾಜ್ಯಪ್ರಶಸ್ತಿಗಳನ್ನು ದೋಚಿಕೊಂಡ ‘ಜೀರ್ಜಿಂಬೆ’ ಚಿತ್ರವನ್ನು ಬೆಂಬಲಿಸುತ್ತ ಆ ಚಿತ್ರವನ್ನು ಇಂಗ್ಲೆಂಡಿನ ಡಾನ್ಕ್ಯಾಸ್ಟರ್ ನಗರಕ್ಕೆ ತಂದಾಗ ಅವರನ್ನು ಭೇಟಿಮಾಡುವ ಸಂದರ್ಭ ಒದಗಿಬಂತು.

‘ಜೀರ್ಜಿಂಬೆ’ ಚಿತ್ರ ಪ್ರಶಸ್ತಿಗಾಗಿ ಸ್ಪರ್ಧೆಗಳಲ್ಲಿ ಇರುವ ಕಾರಣ, ಇನ್ನೂ ಕರ್ನಾಟಕದಲ್ಲೇ ವಾಣಿಜ್ಯ ಮಟ್ಟದಲ್ಲಿ ಪ್ರದರ್ಶನ ಕಂಡಿಲ್ಲ. ಆದರೆ ಅಮೆರಿಕಾ–ಇಂಗ್ಲೆಂಡಿನಲ್ಲಿ ಈಗಾಗಲೇ ಕನ್ನಡಿರಿಗರ ಅಪಾರ ಮೆಚ್ಚುಗೆ ಪಡೆದುಬಿಟ್ಟಿದೆ ಈ ಚಿತ್ರ. ಇದರಲ್ಲಿ ಸುಮನ್ ಅವರದು ಸಣ್ಣ ಪಾತ್ರ. ಅತ್ಯುತ್ತಮ ಮಕ್ಕಳ ಚಿತ್ರ, ಅತ್ಯುತ್ತಮ ಸಂಗೀತ (ಚರಣ್ ರಾಜ್), ಅತ್ಯುತ್ತಮ ಹಾಡುಗಳು ((ಕಾರ್ತಿಕ್ ಸರಗೂರು) ಮತ್ತು ಅತ್ಯುತ್ತಮ ಬಾಲ ಕಲಾವಿದೆ (ಸಿರಿ ವಾನಳ್ಳಿ) ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ.

ಸಾಫ್ಟ್ ವೇರ್ ಇಂಜಿನಿಯರಿಂಗ್ ಮಾಡಿದರೆ ಸಾಕು ಸಿನಿಮಾ ನಿರ್ಮಾಣ ಸಾದ್ಯವಿರುವ ಕಾಲವಿದು ಎನ್ನುತ್ತಾರೆ ಸುಮನ್. ಪತಿ ಗುರುದೇವ್ ಜೊತೆ ತಮ್ಮದೇ ಹೆಸರಿನ ಪ್ರೊಡಕ್ಷನ್ ಶುರುಮಾಡಿರುವ ಇವರು, ಅಮೆರಿಕಾದ ಹಲವು ಸಮಾನ ಆಸಕ್ತರ ಜೊತೆಗೂಡಿ ಸಿನಿಮಾ ನಿರ್ಮಾಣ ಮತ್ತು ನಿರ್ದೇಶನಕ್ಕೂ ಕೈ ಹಾಕಿದ್ದಾರೆ. ನೂರಕ್ಕೆ ನೂರು ಪಾಲು ಅಮೆರಿಕಾದಲ್ಲೇ ಚಿತ್ರೀಕರಣ ನಡೆಸಿ ಮುಗಿಸಿರುವ ‘ಬಬ್ರೂ’ ಎನ್ನುವ ಪೂರ್ಣ ಪ್ರಮಾಣದ ಚಲನಚಿತ್ರವನ್ನು ಇದೇ ವರ್ಷ ಹೊರತರುತ್ತಿದ್ದಾರೆ. ಈಗ ಕರ್ನಾಟಕದಲ್ಲಿ ಎಲೆಕ್ಷನ್, ಐಪಿಎಲ್ ಭರಾಟೆ. ಇದು ಕಳೆದ ನಂತರ ‘ಜೀರ್ಜಿಂಬೆ’ಯಂಥ ಚಿತ್ರವನ್ನು ಜನರಿಗೆ ಮುಟ್ಟಿಸಲು ಸಕಾಲ ಎನ್ನುವ ಈ ದಂಪತಿ, ಕನ್ನಡ ಸಿನಿಮಾದಲ್ಲಿ ಒಂದೆಡೆ ಮಾಮೂಲಿ ಫಾರ್ಮುಲಾದ ಚಿತ್ರಗಳು ಹೊರಬರುತ್ತಿದ್ದರೆ ಇನ್ನೊಂದೆಡೆ ನವೀನ ಮಾದರಿಯ ವಿಚಾರ ಧಾರೆಯಿರುವ, ವಿಭಿನ್ನ ಚಿತ್ರಗಳಿಗೆ ಯುವ ಜನತೆ ತೆರೆದುಕೊಳ್ಳುತ್ತಿದೆ ಎಂದು ನಂಬಿದ್ದಾರೆ.

‘ಭೀಮಸೇನ ನಳಮಹಾರಾಜ’, ‘ಮೇಕಿಂಗ್ ಆಫ್ ವಿವೇಕಾನಂದ’ ಇತ್ಯಾದಿ ಚಿತ್ರಗಳ ನಿರ್ದೇಶನದೊಂದಿಗೆ ತಮ್ಮ ಹಾಡುಗಳ ರಚನೆಗಾಗಿ ವೈಯಕ್ತಿಕವಾಗಿ ರಾಜ್ಯಪ್ರಶಸ್ತಿ ಪಡೆದಿರುವ ಕಾರ್ತಿಕ್ ಕೂಡ ಕಿರುಚಿತ್ರಗಳನ್ನು ಮಾಡುವ ಮೂಲಕ ಚಿತ್ರರಂಗ ಪ್ರವೇಶಿದವರು. ‘ಶುದ್ಧಿ’ ಕಿರುಚಿತ್ರ ತಂಡವನ್ನು ಕೂಡ ನೆನೆವ ಇವರು, ಇಂಟರ್ನೆಟ್ ಕನ್ನಡ ಸಿನಿಮಾಗಳನ್ನು ಮಾಡುತ್ತಿರುವ ಹೊಸ ಪೀಳಿಗೆ ಕನ್ನಡ ಚಿತ್ರರಂಗಕ್ಕೆ ನಿಸ್ಸಂದೇಹವಾಗಿ ಹೊಸ ಆಯಾಮವನ್ನು ನೀಡಿ ಹೊಸ ಅಲೆಗಳನ್ನು ಸೃಷ್ಟಿಸಿರುವುದು ಹೊಸ ಭರವಸೆ ಎನ್ನುತ್ತಾರೆ.

ಅವಾರ್ಡ್ ಮೂವಿಗಳೆಂದರೆ ಅಳಲು ಹೋಗಬೇಕು ಎನ್ನುವ ನಂಬಿಕೆಯಿದ್ದ ಕಾಲವೊಂದಿತ್ತು. ಆರ್ಟ್ ಮೂವಿ, ಕಮರ್ಷಿಯಲ್ ಮೂವಿಗಳ ನಡುವೆ ದೊಡ್ಡ ಕಂದಕವಿತ್ತು. ಇದೀಗ, ಇವೆರಡರ ನಡುವೆ ಹೊಸ ಬಗೆಯ, ಸಕಾರಾತ್ಮಕ ಸಂದೇಶ ಹೊತ್ತ, ಯುವ ಜನರ ಬದುಕಿಗೆ ಹತ್ತಿರವಾಗುತ್ತಿರುವ, ಗೋಳೇ ಪ್ರಧಾನವಾಗಿರದ, ಯುವಜನತೆಗಾಗಿ ಯುವಜನತೆಯಿಂದಲೇ ಸಿನಿಮಾಗಳು ನಿರ್ಮಾಣವಾಗುತ್ತಿದ್ದು, ಇದು ‘ನಾನ್ ಲೀನಿಯರ್’ ಸಿನಿಮಾಯುಗ ಎನ್ನುತ್ತಾರೆ.

ಕಡಿಮೆ ಬಜೆಟ್, ಹೊಸ ಮುಖಗಳು, ತಾಜಾ ಕಥೆಗಳು, ನವಿರು ಸಂವೇದನೆಗಳು, ನಾಜೂಕಾದ ಸಾಮಾಜಿಕ ತಲ್ಲಣಗಳನ್ನು ಸುಂದರವಾಗಿ ಕಡಿಮೆ ಅವಧಿಯಲ್ಲಿ ನಮ್ಮ ಮನೆಯ ಕೋಣೆಗಳಿಗೇ ತಲುಪಿಸಬಲ್ಲ ಹೊಸ ಟ್ರೆಂಡಿನ ಚಿತ್ರಗಳು ಕನ್ನಡ ಚಿತ್ರರಂಗದ ಹೊಸಬೆಳವಣಿಗೆಯೆನ್ನುವುದು ಅವರ ನಂಬುಗೆ. ಇಂಟರ್ನೆಟ್ ಕೆದಕಿದರೆ ಕನ್ನಡ ಕಿರುಚಿತ್ರಗಳ ದೊಡ್ಡ ಪಟ್ಟಿಯೇ ನಿಮ್ಮ ಕಣ್ಣೆದುರು ತೆರೆದುಕೊಳ್ಳುವುದು ಕೂಡ ಸುಳ್ಳಲ್ಲ. ಇಂತಹ ಚಿತ್ರಗಳಿಗೆ ಸ್ಪರ್ಧೆ, ಪ್ರಶಸ್ತಿಗಳ ಮನ್ನಣೆ ಎಲ್ಲವೂ ಇರುವ ಕಾರಣ ಇದು ಆಕರ್ಷಕ ಕೂಡ. ಆರ್ಟ್ ಮೂವಿಗಳ ಮೂಲಕ ಹೇಳುವ ತತ್ವಗಳು, ವಿಚಾರಗಳು, ಪ್ರಚೋದನೆಗಳನ್ನು ಹೊಸತನದ ತಳುಕಿನೊಂದಿಗೆ ಉತ್ತಮಗೊಳಿಸಲು ಸಾದ್ಯವಿದೆ ಎನ್ನುತ್ತಾರೆ ಸುಮನ್. ಹೊರನಾಡ ಕನ್ನಡಿಗರು ಹಣ ಹೂಡಿ, ಅನಿವಾಸೀ ಭಾರತೀಯರ ಸಂವೇದನೆಗಳನ್ನು, ಬದುಕನ್ನು ಹಾಸ್ಯಾತ್ಮಕವಾಗಿ ಉಣಬಡಿಸುವ ಯೋಜನೆಗಳಿರುವ ಬಗ್ಗೆ ಹೇಳಿದ್ದು ಸುಮನ್ ಪತಿ ಗುರುದೇವ್.

15 ವರ್ಷಗಳಿಂದ ಕ್ಯಾಲಿಫೋರ್ನಿಯಾ ಪ್ರಾಂತ್ಯದಲ್ಲಿರುವ ಈ ದಂಪತಿ, ಭಾರತ, ಅಮೆರಿಕಾ, ಇಂಗ್ಲೆಂಡ್, ಆಸ್ಟ್ರೇಲಿಯಾಗಳಿಗೆ ತಮ್ಮ ನೆಟ್ವರ್ಕ್ ಬೆಳೆಸುವ ಪ್ರಯತ್ನದಲ್ಲಿದ್ದಾರೆ. ಸ್ನೇಹಿತರೊಡನೆ ಹೊಸ ಭರವಸೆಯೊಂದಿಗೆ ಮರಳಿದ್ದಾರೆ.

ಡಾ. ಪ್ರೇಮಲತ ಬಿ

ದಂತವೈದ್ಯೆ. ಕಳೆದ 15 ವರ್ಷಗಳಿಂದ ಇಂಗ್ಲೆಂಡಿನಲ್ಲಿ ವಾಸ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತಿ. ಹಲವಾರು ಪತ್ರಿಕೆಗಳಲ್ಲಿ ಬರಹಗಳು ಪ್ರಕಟವಾಗಿವೆ. ಕಥೆ, ಕಾವ್ಯ ಸ್ಪರ್ಧೆಗಳಲ್ಲಿ ಬಹುಮಾನಿತರು.

Share

Leave a comment

Your email address will not be published. Required fields are marked *

Recent Posts More

 • 21 hours ago No comment

  ಮೋದಿ ಮಾತಾಡಲಿಲ್ಲ

  ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

 • 1 day ago No comment

  ಇವರನ್ನು ನೋಡಿ…

  ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

 • 2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 2 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...


Editor's Wall

 • 18 April 2018
  2 days ago One Comment

  ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                    ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

 • 18 April 2018
  2 days ago No comment

  ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

  ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

 • 17 April 2018
  2 days ago No comment

  ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

  ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

 • 16 April 2018
  4 days ago No comment

  ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

  ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

 • 14 April 2018
  5 days ago No comment

  ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

  ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...