Share

ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?
ಕನೆಕ್ಟ್ ಕನ್ನಡ

ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ.

ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ಹೇಸಿಗೆಯಿಲ್ಲದೆ ಮುಂದಾಗುವುದು, ನ್ಯಾಯ ಕೊಡಿಸಬೇಕಾದ ಕಪ್ಪುಕೋಟಿನವರು ಸಾಮೂಹಿಕ ಅತ್ಯಾಚಾರವೆಸಗಿದವರ ಪಾಲಿನ ಪರಮಾಪ್ತರಂತೆ ಒಟ್ಟಾಗುವುದು ಇಂಥ ಹಲವು ಬಗೆಯ ಹೇಯ ಮತ್ತು ಅಮಾನುಷ ಚಿತ್ರಗಳು ಹಸುಳೆ ಅಸೀಫಾ ಸಾವಿನ ಬೆನ್ನಲ್ಲೇ ಕಣ್ಣಿಗೆ ರಾಚುತ್ತಿವೆ. ಈ ದೇಶದ ನಾಗರಿಕ ಸಮುದಾಯದ ಎದೆ ಕಲಕಿಹೋಗಿದೆ. ಎಂಥ ಮೃಗೀಯ ಸನ್ನಿವೇಶವೇ ಎಲ್ಲೆಲ್ಲೂ ಆಕ್ರಮಿಸಿಕೊಳ್ಳುತ್ತ ಎಲ್ಲವನ್ನೂ ಹಿಡಿತದಲ್ಲಿಟ್ಟುಕೊಂಡಿರುವಂತೆ ಕಾಣುತ್ತಿರುವಲ್ಲಿ ಘೋರ ಭವಿಷ್ಯದ ಆತಂಕ ಕಾಡುತ್ತಿದೆ.

ಜನವರಿಯಲ್ಲಿ ನಡೆದುಹೋದ ಕತುವಾ ದುರಂತ ದೇಶಾದ್ಯಂತ ಸುದ್ದಿಯಾದದ್ದು ಮೂರು ತಿಂಗಳ ಬಳಿಕ. ಮೊನ್ನೆ ಏಪ್ರಿಲ್ 10ರಂದು ಅದೆಷ್ಟೊಂದು ಅಡೆತಡೆಗಳನ್ನೂ ದಾಟಿ ಪೊಲೀಸರು ಆರೋಪಪಟ್ಟಿ ಸಲ್ಲಿಸುತ್ತಿದ್ದಂತೆ ಕರಾಳ ಸತ್ಯಗಳು ದೇಶವನ್ನು ಮಾತ್ರವಲ್ಲ ವಿಶ್ವವನ್ನೇ ಬೆಚ್ಚಿಬೀಳಿಸಿದವು. ಕತುವಾದ ರಸ್ಸಾನಾ ಎಂಬ ಹಿಂದೂ ಪ್ರಾಬಲ್ಯವಿರುವ ಹಳ್ಳಿಯಲ್ಲಿನ ಬಕರ್ವಾಲ್ ಮುಸ್ಲಿಂರನ್ನು ಹೊರಗಟ್ಟಬೇಕೆಂಬ ಉದ್ದೇಶದಿಂದ ನಡೆದ ಕ್ರೌರ್ಯ ಆ ಸಮುದಾಯದ ಎಂಟು ವರ್ಷದ ಅಸೀಫಾಳನ್ನು ಬಲಿ ತೆಗೆದುಕೊಂಡಿತ್ತು. ಕಳೆದ ಜನವರಿ 10ರಂದು ಹುಲ್ಲುಗಾವಲಲ್ಲಿ ಮೇಯುತ್ತಿದ್ದ ಕುದುರೆಯನ್ನು ಹೊಡೆದುಕೊಂಡು ಬರಲು ಮನೆಯಿಂದ ಹೊರಹೋಗುವಾಗ ಅಸೀಫಾ ತಾನಿನ್ನು ಮನೆಗೆ ಮರಳುವುದಿಲ್ಲ ಎಂದುಕೊಂಡಿರಲೇ ಇಲ್ಲ. ಸಾಂಜಿ ಎಂಬ ಕ್ರೂರಿಯ ನೇತೃತ್ವದಲ್ಲಿ ಅಪಹರಣಕ್ಕೊಳಗಾದ ಆಕೆಯನ್ನು ದೇವಸ್ಥಾನದೊಳಗೆ ಬಂಧಿಸಿಟ್ಟು ನಿದ್ದೆಮಾತ್ರೆ ನೀಡಿ ಎಚ್ಚರ ತಪ್ಪಿಸಿ ಏಳು ಮಂದಿ ಸತತ ನಾಲ್ಕು ದಿನ ಅತ್ಯಾಚಾರವೆಸಗಿದ್ದ ಮತ್ತು ಅವಳನ್ನು ಕೊಲ್ಲುವ ಕಡೇ ಘಳಿಗೆಯಲ್ಲೂ ಮತ್ತೊಮ್ಮೆ ಅವಳ ಮೇಲೆ ಅತ್ಯಾಚಾರ ನಡೆಯಿತೆಂಬ ವಿಚಾರ ಕರುಳು ಹಿಂಡುವಂಥದ್ದು.

ಅಸೀಫಾ ದುರಂತದ ವಿಚಾರದಲ್ಲಿ ರಾಜಕಾರಣಿಗಳು ಮಾತ್ರ ಎಷ್ಟು ಕಠೋರವಾಗಿ ನಡೆದುಕೊಳ್ಳುತ್ತಿದ್ದಾರೆ ಎಂಬುದಂತೂ ಅತ್ಯಂತ ಅಸಹ್ಯಕರವಾಗಿದೆ. ಈ ಹಿಂದೆಯೂ ಅತ್ಯಾಚಾರಗಳು ಹೆಣ್ಣನ್ನು ಬಲಿ ತೆಗೆದುಕೊಂಡಾಗ ‘ಹುಡುಗರು ಹುಡುಗರೇ, ಅವರು ತಪ್ಪು ಮಾಡುತ್ತಾರೆ’, ‘ಹೆಣ್ಣು ಏನು ಸಾಚಾ ಅಲ್ಲ’, ‘ನಮ್ಮ ಸಂಸ್ಕೃತಿಯಲ್ಲಿ ಹೆಣ್ಣಿಗೆ ಜಾಗವೇ ಇಲ್ಲ. ನಾವೇನೋ ಸಹಾನುಭೂತಿಯಿಂದ ಮನೆಕೆಲಸ ಮಾಡಿಕೊಂಡಿರಲು ಆಕೆಗೆ ಅವಕಾಶ ಕೊಟ್ಟಿದ್ದೇವೆ. ಅತ್ಯಾಚಾರವೆಲ್ಲ ಅತ್ಯಂತ ಮಾಮೂಲಿ ಸಂಗತಿ. ದೊಡ್ಡ ದೊಡ್ಡ ದೇಶದಲ್ಲಿ ಇಂಥ ಸಣ್ಣ ಸಣ್ಣ ಘಟನೆಗಳು ನಡೆಯುತ್ತಿರುತ್ತವೆ’ ಎಂಬಂಥ ನುಡಿಮುತ್ತುಗಳನ್ನೇ ಉದುರಿಸಿದ ರಾಜಕೀಯ ನಾಯಕರ ದೇಶವಿದು. ಇಂಥವರಿಗೆ ಅಸೀಫಾ ಏನಾಗಿ ಕಾಣಲು ಸಾಧ್ಯ? ಏನೆಂದು ಅವಳಿಗಾಗಿ ಕಣ್ಣೀರು ಹಾಕಬಲ್ಲರು? ಅತ್ಯಾಚಾರಿಗಳ ಪರವಾಗಿ ಬೀದಿಗಿಳಿದ ರಾಜಕಾರಣಿಗಳನ್ನು ನೋಡಿದರೆ ಇವರಿಗೆ ತುಸುವಾದರೂ ಮಾನ-ಮರ್ಯಾದೆ ಇದೆಯೆಂದುಕೊಳ್ಳಲು ಸಾಧ್ಯವೇ ಆಗದು.

ಇಂಥ ಸ್ಥಿತಿಯಲ್ಲಿ ಮತ್ತೊಂದು ಆಘಾತಕಾರಿ ಸಂಗತಿ ಗುಜರಾತಿನ ಸೂರತ್‍ನಿಂದ ವರದಿಯಾಗಿದೆ. ಈ ತಿಂಗಳ 6ರಂದು ಸೂರತ್‍ನ ಭೇಸ್ತಾನ್ ಪ್ರದೇಶದ ಕ್ರಿಕೆಟ್ ಮೈದಾನದ ಬಳಿಯ ಪೊದೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದ ಗುರುತು ಸಿಗದ ಅಪ್ರಾಪ್ತೆ ಕೂಡ ಅತ್ಯಾಚಾರದ ಬಲಿಪಶುವಾಗಿರಬಹುದೇ ಎಂಬ ಅನುಮಾನವೆದ್ದಿದೆ. 9ರಿಂದ 11 ವರ್ಷದೊಳಗಿನವಳಾಗಿರಬಹುದಾದ ಈ ಬಾಲಕಿಯ ದೇಹದ ಮೇಲೆ ಒಂದೆರಡಲ್ಲ, 86 ಗಾಯಗಳಿರುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ. ಗಾಯಗಳ ಸ್ವರೂಪದ ಮೇಲೆ ಆಕೆಯನ್ನು ಚಿತ್ರಹಿಂಸೆಗೊಳಪಡಿಸಿ ಅತ್ಯಾಚಾರ ಮಾಡಿ ಕೊಲೆಗೈದಿರಬಹುದೆಂದು ವೈದ್ಯರು ಶಂಕಿಸಿದ್ದಾರೆ. ನೋವಿನ ಸಂಗತಿಯೆಂದರೆ, ಅವಳ ಗುರುತು ಪತ್ತೆಗಾಗಿ ಸಾವಿರಕ್ಕೂ ಹೆಚ್ಚು ಪೋಸ್ಟರುಗಳನ್ನು ಪೊಲೀಸರು ವಿವಿಧೆಡೆ ಅಂಟಿಸಿದ್ದರೂ ಆಕೆ ತಮ್ಮವಳೆಂದು ಯಾರೂ ಬಾರದಿರುವುದು. ಇದು ಹೆಣ್ಣು ಹಸುಳೆಯೊಂದು ನಮ್ಮ ದೇಶದಲ್ಲಿ ಈ ಪರಿ ತಬ್ಬಲಿಯಾಗುವುದೆ ಎಂಬ ವಿಷಣ್ಣತೆಯನ್ನು ಉಳಿಸಿಬಿಡುತ್ತದೆ. ಎಂಥ ದಾರುಣತೆಗೆ ದೂಡುತ್ತಿದ್ದೇವಲ್ಲ ಹೆಣ್ಣನ್ನು?

ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ಈಗಿನ ವಾತಾವರಣ ನೋಡಿದರೆ, ಸೂರತ್ ಹಸುಳೆಯ ಪ್ರಕರಣದಲ್ಲಿ ಸತ್ಯವೇನೆಂಬುದು ಹೊರಬರುವ ಯಾವ ನಂಬಿಕೆಯೂ ಕಾಣಿಸುತ್ತಿಲ್ಲ. ಕೀಚಕ ಸಂತಾನದ ವಿಕೃತಿಗೆ ಮತ್ತೊಬ್ಬಳು ಹಸುಳೆಯ ಬಲಿಯಂತೂ ಆಗಿಹೋಗಿದೆ.

ಹಸುಳೆಯೊಬ್ಬಳು ರಕ್ಕಸರ ಕೈಗೆ ಸಿಕ್ಕಿಹಾಕಿಕೊಂಡು ವಾರಗಟ್ಟಲೆ ಅವರು ಕೊಡುವ ಚಿತ್ರಹಿಂಸೆಯಲ್ಲಿ ಅದೆಂಥ ಕರಾಳವಿದ್ದಿರಬಹುದಾದ ಯಾತನೆಯನ್ನನುಭವಿಸುತ್ತ ಹೆಣವಾಗಿಹೋಗುವುದನ್ನು ಯೋಚಿಸುವಾಗ ಮೈನಡುಗುತ್ತದೆ. ಅತ್ಯಾಚಾರಿಯೊಬ್ಬನ ತಲೆತೆಗೆಯುವ ಸೌದಿ ಅರೇಬಿಯಾ, ಪುರುಷತ್ವವನ್ನೇ ತೆಗೆದುಬಿಡುವ ಚೀನಾ, ಗುಂಡಿಟ್ಟು ಕೊಲ್ಲುವ ಉತ್ತರ ಕೊರಿಯಾ ಇಂಥ ರಾಷ್ಟ್ರಗಳ ನೀತಿಗಿಂತ ಭಿನ್ನವಾಗಿ ನಮ್ಮಲ್ಲಿ ಅತ್ಯಾಚಾರಿಗಳನ್ನು ಕಾಯುವುದಕ್ಕೆಂದೇ ಕ್ರಿಯಾಶೀಲವಾಗುವ ‘ರಾಜನೀತಿ’ಯಿದೆ.

ವಾಸ್ತವ ಇಷ್ಟು ಕಠೋರವಾಗಿರುವಾಗ ಅಸೀಫಾ, ಸೂರತ್‍ನಲ್ಲಿ ಹೆಣವಾಗಿ ಸಿಕ್ಕಿರುವ ಗುರುತಿಲ್ಲದ ಬಾಲೆ ಅನಾಥೆಯರೇ ಆಗಿಹೋಗುತ್ತ, ಕಡೆಗೆ ಆ ಜೀವಗಳ ನೆನಪಿನೊಂದಿಗಿರುವುದು ಅಂತಃಕರಣವುಳ್ಳ ಯಾರೋ ಕೆಲವರ ಕಣ್ಣ ಹನಿ ಮಾತ್ರ. ಅಲ್ಲವೇ?

Share

Leave a comment

Your email address will not be published. Required fields are marked *

Recent Posts More

  • 4 days ago No comment

    ಕವಿಸಾಲು | ಕೈಗಳ ಚಾಚಿ ನೋಡು

        ಕವಿಸಾಲು         ಕಟ್ಟಿಕೊಂಡ ಚೌಕಟ್ಟುಗಳ ಮುರಿದುಬಿಡು ಹರಿಯಬಿಡು ಬಿಳಿ ಗೆಣ್ಣುಗಳಿಗೆ ಮೈಯ ತುಂಬ ಹರಿವ ಮಿಂಚುಗಳನು ತುಂಬಿಕೊಳ್ಳಲಿ ರಕ್ತ, ಮಾಂಸಕ್ಕೆ ಮತ್ತೊಮ್ಮೆ ಭಾವಗಳು ಸುಖಿಸಲಿ ಬೊಗಸೆ ತುಂಬ ಬಿಗಿಯಾಗಿ ಮುಚ್ಚಿದ ಮುಷ್ಠಿಯನ್ನು ಬಿಚ್ಚಿ ಒಮ್ಮೆ ನನಗೆ ತೋರಿಸಿಬಿಡು ಬಚ್ಚಿಟ್ಟುಕೊಂಡಿರುವುದು ನಿನ್ನನ್ನೋ ಕಳೆದುಹೋದರೆ ಎಂಬ ಭಯದಲ್ಲಿ ಭದ್ರವಾಗಿ ಹಿಡಿದ ನೆನಪುಗಳನ್ನೋ ಚೆನ್ನಾಗಿ ಗೊತ್ತು ನಿನ್ನ ಬೆಳಗಾಗುವುದು ಆ ಹಸ್ತ ದರ್ಶನದಲಿ ರಾತ್ರಿಯಾಗುವುದು ಅದೇ ...

  • 7 days ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

  • 2 weeks ago No comment

    ಕಥನ | ಮುಕ್ತಾಯ

      ಕಥನ       ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ನನ್ನ ಜೀವನದ್ದೂ ಕೂಡಾ. ರಣರಂಗದಲ್ಲಿ ವೈರಿಗಳೊಡನೆ ಕಾದಾಡುವಾಗ, ಅದೆಷ್ಟೋ ಸೈನಿಕರ ಛಿದ್ರವಾದ ಶವಗಳನ್ನು ಮಣ್ಣು ಮಾಡಿ ಎದೆಗುಂದಿದಾಗ, ಯುಧ್ಧಖೈದಿಯಾಗಿ ಶತ್ರುದೇಶಕ್ಕೆ ಸೆರೆಸಿಕ್ಕಿ ಅವರು ಕೊಟ್ಟ ಚಿತ್ರಹಿಂಸೆಗಳನ್ನು ಅನುಭವಿಸಿದಾಗ ...

  • 2 weeks ago No comment

    ಕವಿಸಾಲು | ಕಾಡುತ್ತಿರು ಆಗಾಗ ನೀನು

        ಕವಿಸಾಲು         ಎಷ್ಟೊಂದು ಸಾರಿ ಮಾತಾಡುತ್ತಿದ್ದೆ ನಿನ್ನೊಡನೆ ಕೂತು ಗಿಡ, ಬಳ್ಳಿ, ಮರ ಮೋಡಗಳನು ಮನ ಮುಟ್ಟುವ ಪ್ರತಿ ಅಲೆಗಳನು ಕರೆದು ಮಾತಾಡಿಸುತ್ತಿದ್ದೆವು ಹದವಾಗಿ ಬೆರೆತು ರಾತ್ರೋ ರಾತ್ರಿಯ ಕಪ್ಪಿನಲಿ ಕೌತುಕದ ಅಪ್ಪುಗೆಯಲಿ ನಡುಗುವ ಚಳಿಯಲಿ ಒಂದಾಗಿ ಬೆಚ್ಚಗೆ ಕುಳಿತು ಕರಿ ಗಿರಿಶಿಖರಗಳ ಬೆಳ್ಳಿರೇಖೆಗಳನು ಫಳ್ಳನೆ ಮಿನುಗುವ ನಕ್ಷತ್ರಗಳನೂ ಕೈಯಲ್ಲಿ ಹಿಡಿದು ಕುಳಿತು ಮುಖಾಮುಖಿಯಾಗಿ ಕೂತು ಹರಟುತ್ತಿದ್ದೆವು ನಾವೊಂದಾಗಿದ್ದಾಗ ನಮಗನಿಸಿದ್ದನ್ನು ದಿನಚರಿ ...

  • 3 weeks ago No comment

    ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

      ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...


Editor's Wall

  • 09 November 2018
    7 days ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

  • 28 October 2018
    3 weeks ago No comment

    ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

      ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...

  • 31 August 2018
    3 months ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

  • 30 August 2018
    3 months ago No comment

    ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                        ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

  • 26 August 2018
    3 months ago No comment

    ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

        ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...