Share

ಕುದುರೆ ಮೇಯಿಸುವ ಹುಡುಗಿ
ಕಾದಂಬಿನಿ

 

ಕವಿಸಾಲು

 

 

 

ಎಂಟು ವರ್ಷದ ಹುಡುಗಿ
ಎಂಟು ಕುದುರೆ ಮೇಯಿಸುವುದ ಕಂಡು
ಬೆರಗಾಗಿ ಬೆರಳು ಕಚ್ಚುತ್ತಿತ್ತು ಜಗ ಆಗ
ಎಂಟು ವರ್ಷದ ಬಾಲೆಯ
ಎಂಟು ಕ್ರೂರ ಮೃಗಗಳು
ಎಂಟು ದಿನಗಳ ಕಾಲ
ಹರಿ ಹರಿದು ಮುಕ್ಕಿದುದ ಕಂಡು
ಮೂಕವಾಯಿತೀಗ ಮೂಜಗ

ಅಪಹರಣದ ಆ ದಿನ ಆ ಹುಡುಗಿ
ತನ್ನ ಕುದುರೆಯೆಲ್ಲೆಂದು
ಹುಡುಕುತ್ತಿದ್ದಳಂತೆ
ಈಗ ಕುದುರೆಗಳು
ಅವಳಿಗಾಗಿ ಹುಡುಕುತ್ತಿರಬಹುದು

ಅವರು ಊರು ಕಾಡೆನ್ನದೆ
ಅವಳಿಗಾಗಿ ಹುಡುಕಿಯೇ ಹುಡುಕುವಾಗ
ಅವಳೆಲ್ಲಿಗೆ ಹೊತ್ತೊಯ್ಯಲ್ಪಟ್ಟಳೆಂದು
ಆ ಕುದುರೆಗಳಿಗೆ ಚೆನ್ನಾಗಿ ಗೊತ್ತಿತ್ತು
ಹೇಳಲು ಬಾಯಿ ಇರಲಿಲ್ಲವಷ್ಟೇ!

ಬಾಲೆ ಆಸಿಫಾ
ಪ್ರಾಣಿಗಳ ಮೇಲೆ
ನಂಬುಗೆ ಇಟ್ಟಷ್ಟೇ ಸಲೀಸಾಗಿ
ಮನುಷ್ಯರನ್ನೂ ನಂಬಿಬಿಟ್ಪಳು
ಹಾಗಲ್ಲವಾದರೆ
ಇಂಥ ಘೋರ ಅತ್ಯಾಚಾರವೆಸಗುವುದೂ
ಬರ್ಬರವಾಗಿ ಕೊಲೆಗಯ್ಯುವುದೂ
ಹೇಗೆ ತಾನೇ ಸಾದ್ಧವಿತ್ತು?!

ಕುದುರೆ ಮೇಯಿಸುವ ಹುಡುಗಿ
ಕೊನೆಯಲ್ಲಿ ಹೇಳಿದ ಮಾತು ಯಾವುದು?
ಮುಗ್ಧ ಹೂಗಳನು ಹೊಸಕಿಹಾಕುವುದು
ಪೈಶಾಚಿಕತೆಯಿಂದ ಮಾತ್ರ ಸಾಧ್ಯವೆಂದು!

ಮೃದುಲ ಮೊಗ್ಗಿನಂಥವಳ
ಅಪಹರಿಸಿ ಥಳಿಸಿದರು
ಹಸಿದೊಡಲಿಗೆ ಮತ್ತುಣಿಸಿದರು
ರಣಹದ್ದುಗಳಂತೆರಗಿ ಹಿಸಿಹಿಸಿದು ತಿಂದರು
ತೊಡೆಯೂರಿ ಕತ್ತ ಹಿಸುಕಿದರು
ಬೆನ್ನೇರಿ ಕುತ್ತಿಗೆಯ ಮುರಿದರು
ಕುದುರೆ ಮೇಯಿಸುವ ಹುಡುಗಿ
ಸತ್ತಳೇ? ಉಹೂಂ
ಕೋಟಿಕೋಟಿ ಎದೆಗಳಲಿ
ಮತ್ತೆ ಮತ್ತೆ ಹುಟ್ಟಿಬಂದಳು
ವಿಶ್ವದಗಲ ಬಾನಿನುದ್ದ ಬೆಳೆದುನಿಂತಳು!

Share

Leave a comment

Your email address will not be published. Required fields are marked *

Recent Posts More

  • 21 hours ago No comment

    ಮೋದಿ ಮಾತಾಡಲಿಲ್ಲ

    ಎಷ್ಟೋ ಜೀವಗಳ ಸಂಕಟಕ್ಕೆ, ರೋದನಕ್ಕೆ ಕುರುಡಾಗುವ ಮನ ಕರಗದ ನಡೆಯು ಇನ್ನೆಂಥ ದಿನಗಳತ್ತ ದೂಡೀತೊ ಈ ದೇಶವನ್ನು ಎಂಬ ಪ್ರಶ್ನೆಯೇ ಬೃಹದಾಕಾರದ್ದು.   ಕತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟರ ಬಾಲೆಯ ದಾರುಣ ಸಾವಾಯಿತು. ಅದೊಂದು ತೀರಾ ಸಾಧಾರಣ ಘಟನೆಯಾಗಿರಲಿಲ್ಲ. ಅತ್ಯಂತ ಬರ್ಬರವಾದ ಆ ಘಟನೆ ಧರ್ಮ, ರಾಜಕೀಯ ಮತ್ತು ಅಧಿಕಾರದ ಮತ್ತಿನಲ್ಲಿ ನಡೆದದ್ದಾಗಿತ್ತು ಮತ್ತು ಆ ಮಗುವಿನ ಸಾವಿನ ಬಳಿಕವೂ ಅಮಾನವೀಯತೆಯೇ ಉದ್ದಕ್ಕೂ ಕಂಡುಬಂತು. ದೇಶವೇ ಬೆಚ್ಚಿಬಿದ್ದಿತ್ತು. ಆದರೆ ...

  • 1 day ago No comment

    ಇವರನ್ನು ನೋಡಿ…

    ನಡುವಯಸ್ಸಲ್ಲೇ ನಡುಮುರಿದವರಂತಾಗಿ ಒದ್ದಾಡುವವರ ಕಾಲ ಇದು. ಅತ್ಯಂತ ಕೆಟ್ಟ ಜೀವನಶೈಲಿಯೂ ಸೇರಿದಂತೆ ನೂರೆಂಟು ಅಪಸವ್ಯಗಳ ಪರಿಣಾಮವಾಗಿ ಬದುಕನ್ನು ಹಾಳುಮಾಡಿಕೊಳ್ಳುತ್ತಿರುವ ನಮ್ಮ ನಡುವೆಯೇ ಸುಂದರ ಬದುಕು ನಡೆಸಿಕೊಂಡು ಬಂದು ಈಗಲೂ ಅದೇ ಸಡಗರದಲ್ಲಿ ಬದುಕುತ್ತಿರುವವರ ಆದರ್ಶವೂ ಇದೆ. ಇವರನ್ನು ನೋಡಿ ನಾವು ಕಲಿಯುವುದೂ ಬಹಳವಿದೆ. ಮಸ್ತಾನಮ್ಮ ಆಂದ್ರಪ್ರದೇಶದ ಈ ಅಜ್ಜಿ ನಿಮಗೆಲ್ಲ ಗೊತ್ತೇ ಇರುತ್ತಾರೆ. ಅಡುಗೆ ಶೋನಿಂದಾಗಿ ಖ್ಯಾತರಾಗಿರುವ ಇವರಿಗೆ ಈಗ ನೂರು ವರ್ಷ. ಜಗತ್ತಿನ ಅತ್ಯಂತ ಹಿರಿಯ ಯೂಟ್ಯೂಬರ್ ...

  • 2 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 2 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 2 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...


Editor's Wall

  • 18 April 2018
    2 days ago One Comment

    ಕಾದಂಬಿನಿ ಕಾಲಂ | ಈ ಮೂಲಭೂತವಾದಿಗಳು ಹೀಗೇಕೆ?

                      ಧಾರ್ಮಿಕ ಮೂಲಭೂತವಾದವು ಭಾಗಶಃ, ಮೆದುಳಿನ ಪ್ರಿಫ್ರಂಟಲ್ ಕಾರ್ಟೆಕ್ಸ್ ಎಂದು ಕರೆಯಲ್ಪಡುವ ಭಾಗವು ದುರ್ಬಲವಾಗಿ ಕಾರ್ಯನಿರ್ವಹಿಸುವ ಪರಿಣಾಮವಾಗಿದೆ. ಈ ಪ್ರಿಫ್ರಂಟಲ್ ಕಾರ್ಟೆಕ್ಸ್ ನ ಕೆಲ ಭಾಗಗಳಿಗೆ ಹಾನಿಯುಂಟಾಗಿರುವುದರಿಂದ ಅರಿವಿನ ನಮ್ಯತೆ ಮತ್ತು ಮುಕ್ತತೆಯನ್ನು ಕಡಿಮೆ ಮಾಡುವ ಮೂಲಕ ಧಾರ್ಮಿಕ ಮೂಲಭೂತವಾದವನ್ನು ಉತ್ತೇಜಿಸುತ್ತದೆ.   ವಿಚಾರ ಮಾಡಲೊಲ್ಲದವ ಮತಾಂಧ ವಿಚಾರಮಾಡಲರಿಯದವ ಮೂರ್ಖ ವಿಚಾರ ಮಾಡಲಂಜುವವ ಗುಲಾಮ (ಅಂಬೇಡ್ಕರ್ ಅವರ ...

  • 18 April 2018
    2 days ago No comment

    ಅಧಿಕ ಪ್ರಸಂಗ | ಹೀಗೊಂದು ಕ್ಲೀನಿಂಡಿಯಾ ನಾಟಕ

    ಬ್ಯಾಸ್ಗೆ. ಎಕ್ಸಾಮುಗಳೆಲ್ಲ ಮುಗಿದು, ಇದ್ದಬದ್ದ ಒಂದೆರಡು ನೋಟುಬುಕ್ಕುಗಳನ್ನೂ ಆಗಲೇ ರದ್ದಿರೂಪದಲ್ಲಿ ಮಾರಿ ಅದಕ್ಕೆ ಪ್ರತಿಯಾಗಿ ಒಂದೆರಡು ಬಟಾಟೆ ವಡಾ ಹೊಟ್ಟೆಗಿಳಿಸಿ ಕೃತಾರ್ಥರಾಗಿರುವ ಕಾಲೇಜು ಹುಡುಗರಲ್ಲಿ ಕೆಲವರ ಗ್ಯಾಂಗು ಲಂಕೇಶರ ಪದ್ಯದಲ್ಲಿ ಬರುವ ಕರಿಯವ್ನ ಗುಡಿಯಂಥದೇ ಗುಡಿಯೆದುರಿನ ನೆಲ್ಲಿಬೇಣದಲ್ಲಿ ಬಂದು ತಾಡುವುದಿದೆ. ಆ ಬೇಣಕ್ಕೆ ಬಿಳಿಹೂಗಳ ಸಹವಾಸವಿಲ್ಲದಿದ್ದರೂ, ಹರೆಯದಾ ಬಲೆಯಲ್ಲಿ ಸಿಕ್ಕಹಾಗಿರೋ ತುಂಟ ಹುಡುಗಿಯರೂ ಆಗೀಗ ಎಂತೆಂಥದೋ ನೆವ ಹೇಳಿ ಬರುವುದಿದೆ. ಬೇಣದ ವಿಚಾರವಾಯಿತು. ಬೇಸಿಗೆ ಬಂತೆಂದರೆ ಈ ಬೇಣಕ್ಕೆ ...

  • 17 April 2018
    2 days ago No comment

    ಮೋದಿ ವಿರುದ್ಧ ಮತ್ತೊಮ್ಮೆ ಸಿನ್ಹಾ ಕಟುಟೀಕೆಯ ಹತಾರ

    ಬಿಜೆಪಿಯೊಳಗಿನ ಮತ್ತೊಂದು ಪಡೆಯ ಈ ಅಸ್ತ್ರ ದೇಶದ ಹಿತವನ್ನು ಚಿಂತಿಸುತ್ತಿದೆಯೆಂದೇನೂ ಅಲ್ಲದಿದ್ದರೂ, ಬಿಜೆಪಿಯ ಈಗಿನ ಉನ್ಮಾದಿ ಸ್ಥಿತಿಯನ್ನು ಕೊಂಚ ತಗ್ಗಿಸೀತೆಂದು ಮಾತ್ರ ನಿರೀಕ್ಷಿಸಬಹುದೇನೊ.   ಮೋದಿ, ಶಾ ಗ್ಯಾಂಗಿಗೆ ಉಡಿಯೊಳಗಿನ ಕೆಂಡವಾಗಿರುವ, ಸರ್ಕಾರದ ನಡೆಗಳನ್ನು ನಿರಂತರವಾಗಿ ಜರಿಯುತ್ತಲೇ ಬಂದಿರುವ ಹಿರಿಯ ಬಿಜೆಪಿ ನಾಯಕ ಯಶವಂತ್ ಸಿನ್ಹಾ ಈಗ ಮತ್ತೆ ಕಟುಟೀಕೆಯ ಹತಾರ ಎತ್ತಿದ್ದಾರೆ. ಮಾತ್ರವಲ್ಲ, ಬಿಜೆಪಿಯ ಸಂಸದರೆಲ್ಲ ಒಮ್ಮೆ ತಮ್ಮನ್ನೇ ತಾವು ಮುಟ್ಟಿನೋಡಿಕೊಳ್ಳಬೇಕಾದ ಜರೂರಿನ ಬಗ್ಗೆ, ಪಕ್ಷದ ಬಾಸ್‍ಗಳೆನ್ನಿಸಿಕೊಂಡು ...

  • 16 April 2018
    4 days ago No comment

    ಹೆಣ್ಣು ಹಸುಳೆ ಈ ಪರಿ ತಬ್ಬಲಿಯಾಗುವುದೆ ಈ ದೇಶದಲ್ಲಿ?

    ಅಸೀಫಾ ಪ್ರಕರಣದಲ್ಲಿ ರಕ್ಕಸರನ್ನು ರಕ್ಷಿಸಲು ಯಾವ ಹೇಸಿಕೆಯೂ ಇಲ್ಲದೆ ರಾಜಕೀಯದವರೆನ್ನಿಸಿಕೊಂಡವರು, ಅಧಿಕಾರದಲ್ಲಿದ್ದವರು ಮತ್ತು ಸ್ವಯಂಘೋಷಿತ ಧರ್ಮರಕ್ಷಕರೆಲ್ಲ ಹೇಗೆಲ್ಲಾ ಪ್ರಯತ್ನಿಸಿದರು ಎಂಬುದನ್ನು ನೋಡಿದರೆ ಸೂರತ್‍ನಲ್ಲಿ ಹೆಣವಾಗಿ ಸಿಕ್ಕ ಬಾಲೆಯ ತಬ್ಬಲಿತನ ಕರುಳನ್ನು ಇನ್ನಷ್ಟು ಹಿಂಡುತ್ತದೆ. ದೇವರು, ಧರ್ಮದ ಹೆಸರು ಹೇಳಿಕೊಂಡು ಈ ದೇಶವನ್ನು ಹರಿದು ತಿನ್ನುತ್ತಿರುವವರು ಅದೇ ದೇವರ ಎದುರಲ್ಲೇ ಪುಟ್ಟ ಕಂದನ ಮೇಲೆ ರಣಹದ್ದುಗಳಂತೆ ಎರಗಿ ಅತ್ಯಾಚಾರವೆಸಗಿ ಕೊಲೆಗೈಯುವುದು, ಆ ರಕ್ಕಸರನ್ನು ಕಾಯಲು ಅಧಿಕಾರಸ್ಥರು ಇನಿತೂ ಪಾಪಪ್ರಜ್ಞೆ ಮತ್ತು ...

  • 14 April 2018
    5 days ago No comment

    ‘ಹೆಣ್ಣನ್ನು ದಲಿತ ಗಂಡಸರು ನೋಡುವುದೂ ಲಿಂಗತರತಮದ ಕಣ್ಣಿಂದಲೇ!’

    ವ್ಯವಸ್ಥೆಯನ್ನು ಆಳುವ ಗಂಡಸರು ಮಹಿಳೆಯರನ್ನು ನೋಡುವ ದೃಷ್ಟಿ, ಅವರೆಲ್ಲ ತಾವು ಹೇಗೆ ಬೇಕಾದರೂ ಬಳಸಿಕೊಳ್ಳುವುದಕ್ಕಿರುವ ಸ್ವಂತ ಆಸ್ತಿ ಎಂಬುದೇ ಆಗಿದೆ.   “ಹೆಣ್ಣೆಂದರೆ ಲಿಂಗತರತಮ ದೃಷ್ಟಿಯಿಂದ ನೋಡುವುದರಲ್ಲಿ ದಲಿತ ಗಂಡಸರೂ ಬೇರೆ ಗಂಡಸರ ಹಾಗೆಯೇ” ಎನ್ನುತ್ತಾರೆ ಮರಾಠಿಯ ಖ್ಯಾತ ದಲಿತ ಕವಯತ್ರಿ ಪ್ರದ್ನ್ಯಾ ಪವಾರ್. ಮರಾಠಿ ಲೇಖಕ, ಆತ್ಮಕಥೆ ಬರೆದ ಮೊದಲ ದಲಿತ ಬರಹಗಾರನೆಂಬ ಹೆಗ್ಗಳಿಕೆಯಿರುವ ದಯಾ ಪವಾರ್ ಅವರ ಪುತ್ರಿ ಪ್ರದ್ನ್ಯಾ ಪವಾರ್, ‘ಲೈವ್ ಮಿಂಟ್‍’ಗೆ ಕೊಟ್ಟಿರುವ ...