Share

ಅತ್ಯಾಚಾರಿಗಳಿಗೆ ಗಲ್ಲುಶಿಕ್ಷೆ ಏಕೆ ಬೇಡ?
ಕನೆಕ್ಟ್ ಕನ್ನಡ

ನಾವಿರುವ ಹೆಚ್ಚು ಧೃವೀಕೃತ ಮತ್ತು ಕೋಮುವಾದೀಕೃತ ಸನ್ನಿವೇಶದಲ್ಲಿ, ಅತ್ಯಾಚಾರದಂಥ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪಡೆವ ಅತಿ ಭಯಾನಕ ಮತ್ತು ವಿಧ್ವಂಸಕ ಸ್ವರೂಪಗಳ ಕಟು ವಾಸ್ತವವನ್ನು ಊಹಿಸಬೇಕು. ಇದು ದ್ವೇಷ ಅಥವಾ ‘ನಮಗೆ ಮತ್ತು ಅವರಿಗೆ’ ಎಂಬಂಥ ಸಾಮಾಜಿಕ ಪಕ್ಷಪಾತ ಮತ್ತು ಪೂರ್ವಾಗ್ರಹ ಸ್ವಭಾವದೊಂದಿಗೆ ತಳುಕು ಹಾಕಿಕೊಳ್ಳುತ್ತದೆ.

 

ತ್ಯಾಚಾರ ಪ್ರಕರಣಗಳು ನಮ್ಮ ದೇಶದಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ. ಅತ್ಯಾಚಾರಿಗಳು ಮಾತ್ರ ಯಾವ ಭೀತಿಯೂ ಇಲ್ಲದೆ ಮತ್ತೆ ಮತ್ತೆ ಅದೇ ಪಾತಕದಲ್ಲಿ ತೊಡಗುವುದೂ ಈ ದೇಶದಲ್ಲಿ ನಡೆದೇ ಇದೆ. ಅತ್ಯಾಚಾರಿಗಳಿಗೆ ಕಠಿಣ ಶಿಕ್ಷೆ ಇಲ್ಲವೆನ್ನುವುದು ಒಂದೆಡೆಯಾದರೆ, ಕಾನೂನಿನ ಕೈಯಿಂದ ತಪ್ಪಿಸಿಕೊಳ್ಳಲು ರಾಜಕಾರಣವೂ ಸೇರಿದಂತೆ ಹಲವು ಬಗೆಯ ಬಲಗಳೂ ಅವರ ಬೆನ್ನಿಗೆ ನಿಲ್ಲುತ್ತವೆ ಎಂಬುದು ಮತ್ತೊಂದು ವಿಪರ್ಯಾಸ.

ಇಂಥ ಹೊತ್ತಲ್ಲಿ, ಇತರ ಕೆಲ ದೇಶಗಳಲ್ಲಿರುವಂತೆ ಕರುಣೆಯೇ ಇಲ್ಲದ ಶಿಕ್ಷೆಗೆ ಏಕೆ ಅತ್ಯಾಚಾರಿಗಳನ್ನು ಗುರಿಪಡಿಸಬಾರದು ಎಂಬ ಪ್ರಶ್ನೆ, ಚರ್ಚೆ ಗಂಭೀರ ಸ್ವರೂಪ ಪಡೆಯುತ್ತಿದೆ. ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಾಲಿವಾಲ್ ಕಳೆದ ಶುಕ್ರವಾರದಿಂದ ದೆಹಲಿಯಲ್ಲಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದು ಅಪ್ರಾಪ್ತರ ಮೇಲೆ ಅತ್ಯಾಚಾರ ನಡೆಸುವವರನ್ನು ಗಲ್ಲು ಶಿಕ್ಷೆಗೆ ಗುರಿಪಡಿಸುವ ಕಾನೂನು ಜಾರಿಯಾಗಬೇಕೆಂದು ಪಟ್ಟು ಹಿಡಿದಿದ್ದಾರೆ.

ಆದರೆ, ಸ್ವಾತಿ ಮಾಲಿವಾಲ್ ಬೇಡಿಕೆ ಎಷ್ಟು ಸಮಂಜಸ ಎಂಬ ಪ್ರಶ್ನೆಯೂ ಈಗ ಚರ್ಚೆಯ ಕೇಂದ್ರದಲ್ಲಿದೆ. ಹೀಗೆ ಮರಣದಂಡನೆ ಶಿಕ್ಷೆಗಾಗಿ ಬೇಡಿಕೆಯಿಡುವುದರ ಔಚಿತ್ಯವೇ ಪ್ರಶ್ನೆಗೊಳಗಾಗಿದೆ. ಉಪವಾಸ ಸತ್ಯಾಗ್ರಹ ಕೈಬಿಡುವಂತೆ ಸ್ವಾತಿಯವರನ್ನು ಒತ್ತಾಯಿಸಿರುವ ವಕೀಲರುಮ ಹೋರಾಟಗಾರರು, ಪತ್ರಕರ್ತರ ಗುಂಪು, ಮರಣದಂಡನೆ ಶಿಕ್ಷೆಯ ಬೇಡಿಕೆಯಿಂದ ಕೂಡ ಹಿಂದೆ ಸರಿಯಬೇಕೆಂದು ವಿನಂತಿಸಿದೆ.

ಮರಣದಂಡನೆ ಶಿಕ್ಷೆಯ ವಿಚಾರದಲ್ಲಿ ಸ್ವಾತಿಯವರೊಂದಿಗೆ ತಮ್ಮ ಸಹಮತವಿಲ್ಲ ಎಂಬುದನ್ನು ಅವರೆಲ್ಲ ಪತ್ರದ ಮೂಲಕ ಸ್ಪಷ್ಟಪಡಿಸಿದ್ದಾರೆ. ಹೋರಾಟಗಾರರಲ್ಲಿಯೇ ಅನೇಕರು ಮರಣದಂಡನೆ ಶಿಕ್ಷೆ ವಿಧಿಸುವುದರ ವಿರುದ್ಧವಿರುವುದನ್ನು ಹೇಳಿದ್ದಾರೆ. ಶಿಕ್ಷೆಯೊಂದು ತೀವ್ರ ಮಟ್ಟದ್ದಾದ ಮಾತ್ರಕ್ಕೆ ಅಪರಾಧಗಳು ಜರುಗುವುದೇ ಇಲ್ಲವೆಂದೇನೂ ಇಲ್ಲ, ಮಾತ್ರವಲ್ಲದೆ ಪರಿಸ್ಥಿತಿ ಇನ್ನಷ್ಟು ಸಂಕೀರ್ಣತೆಯನ್ನೂ ಮುಟ್ಟಬಹುದು ಎಂಬ ಮಾತುಗಳು ಅವರ ಪತ್ರದಲ್ಲಿವೆ. ಮರಣದಂಡನೆ ಏಕೆ ಸಮಂಜಸ ಬೇಡಿಕೆಯಲ್ಲ ಎಂಬುದನ್ನು ವಿವರಿಸಿರುವ ಆ ಪತ್ರದ ಭಾಗವನ್ನು ‘ದಿ ವೈರ್’ ಪ್ರಕಟಿಸಿದ್ದು, ಅದರ ವಿವರ ಇಲ್ಲಿದೆ:

ಸ್ವಾತಿ ಮಾಲಿವಾಲ್

“ಪ್ರತಿಯೊಬ್ಬ ಮನುಷ್ಯನಿಗೂ ಜೀವಿಸುವ ಹಕ್ಕಿದೆ ಎಂಬುದನ್ನು ನಾವು ಸಮ್ಮತಿಸುತ್ತೇವೆ. ನಮ್ಮ ಆಕ್ರೋಶವು ಯಾವುದೇ ಅನಿಶ್ಚಿತತೆಗೆ, ಹಿಂಸಾಚಾರದ ಹೊಸ ಚಕ್ರಗಳಿಗೆ ದಾರಿಯಾಗಕೂಡದು. ನಮ್ಮ ನೆಪದಲ್ಲಿ ಜೀವ ತೆಗೆಯುವ ಹಕ್ಕನ್ನು ರಾಜ್ಯಕ್ಕೆ ನೀಡುವ ಯಾವುದೇ ಹಿಂಸಾಚಾರವು ‘ಕಾನೂನುಬದ್ಧ’ ಎಂದು ಪರಿಗಣಿತವಾಗುವುದನ್ನು ನಾವು ಒಪ್ಪಲಾರೆವು. ಅತ್ಯಾಚಾರಿಗಳಿಗೆ ಮರಣದಂಡನೆ ನೀಡುವ ಮೂಲಕ ಮಹಿಳೆಯರ ವಿರುದ್ಧದ ಹಿಂಸಾಚಾರದ ಸಂಕೀರ್ಣ ಸಾಮಾಜಿಕ-ರಾಜಕೀಯ ಪ್ರಶ್ನೆಗಳನ್ನು ನಿವಾರಿಸುವುದು ಸಾಧ್ಯವಿಲ್ಲ. ನಿಜವಾದ ಸಮಸ್ಯೆಯಿಂದ ಗಮನವನ್ನು ಬೇರೆಡೆಗೆ ಸೆಳೆಯಲು ಮರಣದಂಡನೆ ಮತ್ತೆ ಮತ್ತೆ ಬಳಕೆಯಾಗುತ್ತದೆ. ಇದು ಯಾವ ಬದಲಾವಣೆಗೂ ಕಾರಣವಾಗದಿದ್ದರೂ, ತನ್ನ ನಾಗರಿಕರ ಮೇಲೆ ಅಧಿಕಾರವನ್ನು ಮತ್ತಷ್ಟು ಹೆಚ್ಚಿಸಲು ರಾಜ್ಯದ ಕೈಯಲ್ಲಿನ ಒಂದು ಸಾಧನವಾಗುವುದು. ಅತ್ಯಾಚಾರದ ವ್ಯಾಪಕತೆ ಮತ್ತದು ಸರ್ವೇಸಾಮಾನ್ಯವಾಗುತ್ತಿರುವುದನ್ನು ಕೊನೆಗಾಣಿಸಲು ವ್ಯವಸ್ಥೆಯಲ್ಲಿಯೇ ದೊಡ್ಡ ಮಟ್ಟದ ಬದಲಾವಣೆಗಳ ಅಗತ್ಯವಿದೆ.

ಮರಣದಂಡನೆ ಅತ್ಯಾಚಾರಕ್ಕೆ ಪ್ರತಿರೋಧಕವಾಗಿ ಪರಿಣಾಮಕಾರಿಯೆಂದು ಸೂಚಿಸುವ ಯಾವುದೇ ಪುರಾವೆಗಳಿಲ್ಲ. ಲಭ್ಯವಿರುವ ಅಂಕಿಅಂಶಗಳು ಹೇಳುವ ಪ್ರಕಾರ, ಅತ್ಯಾಚಾರ ಪ್ರಕರಣಗಳಲ್ಲಿ ಶಿಕ್ಷೆಯಾಗುವುದು ಬಹಳ ಕಡಿಮೆ. ಮರಣದಂಡನೆಯೇ ನಿಶ್ಚಯವಾದರೆ ಶಿಕ್ಷೆಯಾಗುವ ಪ್ರಮಾಣ ಇನ್ನೂ ಕುಸಿಯಬಹುದಾದ ಪ್ರಬಲ ಸಾಧ್ಯತೆಗಳಿವೆ. ಯಾಕೆಂದರೆ, ಅದು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಕೊಡಲಾಗುವ ಶಿಕ್ಷೆ. ಬಹಳ ಮುಖ್ಯವಾದ ಸಂಗತಿಯೇನೆಂದರೆ, ಶಿಕ್ಷೆಯ ಗಂಭೀರ ಸ್ವರೂಪಕ್ಕಿಂತ ಹೆಚ್ಚಾಗಿ ಶಿಕ್ಷೆಯ ನಿಶ್ಚಿತತೆಯು ಅತ್ಯಾಚಾರಕ್ಕೆ ಪ್ರತಿರೋಧಕವಾಗಬಲ್ಲದು. ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋದ ದಾಖಲೆಗಳ ಪ್ರಕಾರ, ಮಕ್ಕಳ ಮೇಲಿನ ಅತ್ಯಾಚಾರ ಪ್ರಕರಣಗಳು 2015ಕ್ಕೆ ಹೋಲಿಸಿದರೆ ತೀವ್ರ ಪ್ರಮಾಣದಲ್ಲಿ ಅಂದರೆ ಶೇ.82ಕ್ಕಿಂತಲೂ ಹೆಚ್ಚು ಏರಿಕೆಯಾಗಿವೆ. ಕಳವಳಕಾರಿ ಸಂಗತಿಯೆಂದರೆ, ಅತ್ಯಾಚಾರ ಪ್ರಕರಣಗಳಲ್ಲಿನ ಶಿಕ್ಷೆ ಪ್ರಮಾಣವು 2016ರಲ್ಲಿ ಶೇ.18.9ರಷ್ಟಕ್ಕೆ ಕುಸಿದಿದೆ. ಅತ್ಯಾಚಾರದಂಥ ಪ್ರಕರಣಗಳಲ್ಲಿ ಭಾಗಿಯಾಗುವ ದುಷ್ಕರ್ಮಿಗಳಿಗೆ ಭಯವೆಂಬುದೇ ಇಲ್ಲದಂತಾಗಿದೆಯೆಂಬುದನ್ನು ಈ ಅಂಕಿಅಂಶಗಳೇ ಹೇಳುತ್ತವೆ.

ಕತುವಾ ಅತ್ಯಾಚಾರ ಪ್ರಕರಣದ ಬಲಿ ಅಸೀಫಾ

ಹೆಚ್ಚಿನ ಅಪ್ರಾಪ್ತರು ಅವರಿಗೆ ಗೊತ್ತಿರುವವರಿಂದಲೇ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಾರೆ. ಬಹಳ ಸಲ ಕುಟುಂಬದ ಒಳಗಿನವರು ಅಥವಾ ದೂರದ ಸಂಬಂಧಿಗಳು, ಗೆಳೆಯರು ಇಲ್ಲವೆ ಸಂಗಾತಿಗಳೇ ಅಂಥ ಆಕ್ರಮಣಕಾರರಾಗಿರುತ್ತಾರೆ. ಹೀಗಿರುವಾಗ ಸಂಬಂಧಿಕರ ವಿರುದ್ಧವೇ ಬರುವ ಇಂಥ ಆರೋಪಗಳ ಪರಿಣಾಮವಾದ ಮಾನಸಿಕ ಮತ್ತು ಸಾಮಾಜಿಕ ಆಘಾತವನ್ನು ಎದುರಿಸಲು ಯಾರು ತಾನೆ ಬಯಸುತ್ತಾರೆ?

ಇದಲ್ಲದೆ, ಮರಣದಂಡನೆಯೇ ನಿಶ್ಚಿತವಾಯಿತೆಂದಾದರೆ ಕಾನೂನಿನ ಪರಿಪಾಲಕರೆನ್ನಿಸಕೊಂಡವರು ತಮ್ಮ ವಿರುದ್ಧ ಯಾವುದೇ ದೂರುಗಳು ದಾಖಲಾಗದಂತೆ ನೋಡಿಕೊಳ್ಳುತ್ತಾರೆ. ಮಾತ್ರವಲ್ಲ, ಸಂತ್ರಸ್ತರಿಗೆ ನ್ಯಾಯ ಸಿಗದಂತೆ ಮಾಡಲು ಯಾವ ಅತಿಗೆ ಹೋಗುವುದಕ್ಕೂ ಅವರು ಹಿಂಜರಿಯುವುದಿಲ್ಲ.

ನಾವು ತಿಳಿದಿರುವಂತೆ, ಅತ್ಯಾಚಾರ ಪ್ರಕರಣಗಳಲ್ಲಿ ದುಷ್ಕರ್ಮಿಯು ಅಧಿಕಾರಸ್ಥನಾಗಿದ್ದರೆ ಶಿಕ್ಷೆಯಾಗುವುದು ತುಂಬ ಕಷ್ಟಸಾಧ್ಯ. ಇನ್ನು ಮರಣದಂಡನೆಯಂತೂ, ಈಗಾಗಲೇ ಹೇಳಲಾಗಿರುವ ಕಾರಣಗಳಿಗಾಗಿ ಸಾಧ್ಯಗೊಳ್ಳುವ ಪ್ರಶ್ನೆಯೇ ಇಲ್ಲ.

ಎಲ್ಲಕ್ಕಿಂತ ಮುಖ್ಯವಾಗಿ, ನಾವಿರುವ ಹೆಚ್ಚು ಧೃವೀಕೃತ ಮತ್ತು ಕೋಮುವಾದೀಕೃತ ಸನ್ನಿವೇಶದಲ್ಲಿ, ಅತ್ಯಾಚಾರದಂಥ ಲೈಂಗಿಕ ದೌರ್ಜನ್ಯ ಪ್ರಕರಣಗಳು ಪಡೆವ ಅತಿ ಭಯಾನಕ ಮತ್ತು ವಿಧ್ವಂಸಕ ಸ್ವರೂಪಗಳ ಕಟು ವಾಸ್ತವವನ್ನು ಊಹಿಸಬೇಕು. ಇದು ದ್ವೇಷ ಅಥವಾ ‘ನಮಗೆ ಮತ್ತು ಅವರಿಗೆ’ ಎಂಬಂಥ ಸಾಮಾಜಿಕ ಪಕ್ಷಪಾತ ಮತ್ತು ಪೂರ್ವಾಗ್ರಹ ಸ್ವಭಾವದೊಂದಿಗೆ ತಳುಕು ಹಾಕಿಕೊಳ್ಳುತ್ತದೆ. ಇಂಥ ಬಗೆಯ ಅಪರಾಧದಲ್ಲಿ, ಅಪರಾಧ ಸಾಬೀತುಪಡಿಸುವುದು ಮಾತ್ರವಲ್ಲ, ಕಟು ದ್ವೇಷ ಮತ್ತು ಪೂರ್ವಾಗ್ರಹವು ದುಷ್ಕೃತ್ಯದ ಕಡೆಗೆ ತಿರುಗುತ್ತದೆಂಬುದನ್ನೂ ಖಚಿತಪಡಿಸಿಕೊಳ್ಳಲು ಸಂಪೂರ್ಣ ಸಂಭಾವ್ಯತೆಯನ್ನು ಗ್ರಹಿಸುವ ಅವಶ್ಯಕತೆ ಇದೆ ಎಂಬುದನ್ನು ನೀವು ಒಪ್ಪುತ್ತೀರಿ. ಇದೆಲ್ಲದಕ್ಕೂ ಹೆಚ್ಚಿನ ತನಿಖೆಯ ಅತ್ಯುನ್ನತ ಮಾನದಂಡಗಳ ಅಗತ್ಯವಿರುತ್ತದೆ. ನೀವು ಒಪ್ಪಿಕೊಳ್ಳುವಂತಹವುಗಳು ಹೆಚ್ಚಾಗಿ ರಾಜಿಯಾಗುತ್ತವೆ ಮತ್ತು ಕತುವಾದ ಸಂದರ್ಭದಲ್ಲಿ, ‘ಸತ್ಯ’ ತಿಳಿಯಲು ಯಾವುದೇ ಕಲ್ಲನ್ನು ತಿರುಗಿಸಿ ನೋಡದೆ ಬಿಡಲಾಗುವುದಿಲ್ಲ ಮತ್ತು ದ್ವೇಷದ ಅಪರಾಧದ ಕೊಳಕು ಮಗ್ಗಲುಗಳನ್ನು ಅದು ಅನಾವರಣಗೊಳಿಸುತ್ತದೆ. ಸೂಕ್ತ ತರಬೇತಿ ಪಡೆದವರು ಮತ್ತು ಕಾನೂನಿನ ನಿಯಮವನ್ನು ಎತ್ತಿ ಹಿಡಿಯುವ ಜವಾಬ್ದಾರಿಯೊಂದಿಗೆ ಕೆಲಸ ಮಾಡುವವರು ಮಾತ್ರ ಇದನ್ನೆಲ್ಲ ಹೊರಗೆಳೆಯಬಲ್ಲರು.

ವಾಸ್ತವವಾಗಿ, ಅನೇಕ ಬಾರಿ ಮರಣದಂಡನೆಯ ಬೇಡಿಕೆಯು ಅಗತ್ಯ ಸಂಗತಿಯ ಕೇಂದ್ರದಿಂದಲೇ ಗಮನವನ್ನು ಬೇರೆಡೆ ಸೆಳೆಯುತ್ತದೆ: ಅಂಥ ಅಗತ್ಯ ಸಂಗತಿಯೆಂದರೆ, ಹಿಂಸೆಯನ್ನು ಅಂತ್ಯಗೊಳಿಸುವ, ಲಿಂಗ ಮತ್ತಿತರ ಅಸಮಾನತೆಗಳಿಗೆ ಕಾರಣವಾದ ಪುರುಷಪ್ರಧಾನ ಸಾಮಾಜಿಕ ರೂಢಿಗಳನ್ನು ಒಡೆಯುವ ಹೊಣೆಗಾರಿಕೆಯುಳ್ಳ ನೀತಿಗಳ ಖಚಿತಪಡಿಸಿಕೊಳ್ಳುವಿಕೆಯಾಗಿದೆ.”

ಇದನ್ನೂ ಓದಿ: ಪ್ರಶ್ನೆಗಳಿಗೆ ಎಡೆಮಾಡಿದ ಸ್ವಾತಿ ಮಾಲಿವಾಲ್ ಉಪವಾಸ ಸತ್ಯಾಗ್ರಹ

Share

Leave a comment

Your email address will not be published. Required fields are marked *

Recent Posts More

 • 2 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 6 days ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  5 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...