Share

ಪ್ರಶ್ನೆಗಳಿಗೆ ಎಡೆಮಾಡಿದ ಸ್ವಾತಿ ಮಾಲಿವಾಲ್ ಉಪವಾಸ ಸತ್ಯಾಗ್ರಹ
ಕನೆಕ್ಟ್ ಕನ್ನಡ

ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನಿಗೆ ಒತ್ತಾಯಿಸಿ ಉಪವಾಸದಲ್ಲಿರುವ ಸ್ವಾತಿಯವರ ಪ್ರಾಮಾಣಿಕತೆ ಏನೇ ಇದ್ದರೂ, ಅವರ ರಾಜಕೀಯ ಹಿನ್ನೆಲೆ ಅವರ ಉದ್ದೇಶದ ನಿಸ್ಪೃಹತೆಯನ್ನು ಮಸುಕುಗೊಳಿಸದೇ ಇರಲು ಸಾಧ್ಯವೇ ಇಲ್ಲ. ಅವರ ಉಪವಾಸಕ್ಕೆ ರಾಜಕೀಯ ಬಣ್ಣ ಬಂದುಬಿಡುವುದೂ ಅಷ್ಟೇ ಸಹಜ.


ತುವಾ ಅತ್ಯಾಚಾರ ಪ್ರಕರಣದಲ್ಲಿ ಎಂಟು ವರ್ಷದ ಹಸುಳೆ ದಾರುಣ ಸಾವು ಕಂಡ ಬಳಿಕ ದೇಶವೇ ನಡುಗಿಹೋಗಿದ್ದರೂ ಸರ್ಕಾರ ಮಾತ್ರ ಮೌನವಾಗಿ ಕೂತಿದ್ದುದಕ್ಕೆ ವ್ಯಾಪಕ ಟೀಕೆಗಳ ಅಲೆಯೇ ಎದ್ದಿತು. ಆದರೆ ಸರ್ಕಾರದ ವಿರುದ್ಧ ಮತ್ತು ಈ ಅತ್ಯಾಚಾರ ಸಂಸ್ಕೃತಿಗೆ ಒಂದು ತಾರ್ಕಿಕ ಅಂತ್ಯ ಕಾಣಿಸಬೇಕೆಂಬ ಮನಸ್ಸಿನಿಂದ ಹೋರಾಟಕ್ಕಿಳಿದಿರುವ ಒಬ್ಬರು ಸ್ವಾತಿ ಮಾಲಿವಾಲ್. 33 ವರ್ಷದ ಸ್ವಾತಿ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ. ಕಳೆದ ಶುಕ್ರವಾರದಿಂದ ದೆಹಲಿಯ ರಾಜ್‍ಘಾಟ್‍ನಲ್ಲಿ ಅವರು ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. ಆದರೆ ಇಲ್ಲಿ ಪ್ರಶ್ನೆಗಳೂ ಇಲ್ಲದೇ ಇಲ್ಲ.

ಅಪ್ರಾಪ್ತರ ಮೇಲೆ ಅತ್ಯಾಚಾರವೆಸಗುವವರ ವಿರುದ್ಧ ಕಠಿಣ ಕಾನೂನು ತಕ್ಷಣದಿಂದಲೇ ಜಾರಿಯಾಗಬೇಕೆಂಬುದು ಸ್ವಾತಿ ಮಾಲಿವಾಲ್ ಆಗ್ರಹ. ಈ ಮಧ್ಯೆ 12 ವರ್ಷದೊಳಗಿನ ಮಕ್ಕಳ ಮೇಲೆ ಅತ್ಯಾಚಾರ ಎಸಗುವವರನ್ನು ಮರಣದಂಡನೆಗೆ ಗುರಿಪಡಿಸುವ ಪ್ರಸ್ತಾವದ ಬಗ್ಗೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟಿಗೆ ಹೇಳಿದೆಯಾದರೂ, ಕಾನೂನು ಜಾರಿಗೆ ಬರುವವರೆಗೂ ಉಪವಾಸ ನಿಲ್ಲಿಸಲಾರೆ ಎಂಬ ನಿಲುವು ತಳೆದಿದ್ದಾರೆ ಸ್ವಾತಿ. ಅತ್ಯಾಚಾರ ಆರೋಪಿಗಳಿಗೆ ಆರು ತಿಂಗಳೊಳಗೆ ಗಲ್ಲು ಆಗುವಂಥ ಕಾನೂನು ಬರಬೇಕು ಎಂಬುದು ಅವರ ಪಟ್ಟು.

ಇನ್ನೊಂದೆಡೆ, ಗಲ್ಲು ಶಿಕ್ಷೆ ಬೇಡಿಕೆ ಬೇಡವೆಂದೂ ನ್ಯಾಯವಾದಿಗಳು, ಹೋರಾಟಗಾರರು, ಪತ್ರಕರ್ತರು ಮತ್ತು ನಾಗರಿಕ ಸಮಾಜದ ಇತರರ ಗುಂಪೊಂದು ಸ್ವಾತಿಯವರನ್ನು ವಿನಂತಿಸಿದೆ. ಉಪವಾಸ ಸತ್ಯಾಗ್ರಹವನ್ನು ಕೈಬಿಡುವಂತೆ ಪತ್ರದ ಮೂಲಕ ಅದು ಆಗ್ರಹಿಸಿದೆ.

ಸ್ವಾತಿ ಮಾಲಿವಾಲ್ ‘ರೇಪ್ ರೋಕೋ’ ಆಂದೋಲನ ಶುರು ಮಾಡಿದ್ದು ಈ ವರ್ಷದ ಜನವರಿಯಲ್ಲಿ, ಎಂಟು ತಿಂಗಳ ಹಸಿಗೂಸಿನ ಮೇಲೆ ನಡೆದ ಅತ್ಯಾಚಾರ ಬಯಲಾದಾಗ. ಆಕೆಯ ಟ್ವೀಟ್ ಪ್ರಕಾರ, ಸೇನಾಧಿಕಾರಿಯೊಬ್ಬರ ಮಗಳಾಗಿರುವ ಸ್ವಾತಿ ಬಿಟೆಕ್ ಪದವೀಧರೆ. ಆದರೆ ಕಾರ್ಪೋರೇಟ್ ಉದ್ಯೋಗದ ಅವಕಾಶ ತಿರಸ್ಕರಿಸಿ ಸಮಾಜಸೇವೆಯತ್ತ ಮುಖ ಮಾಡಿದ ಅವರು, ತಮ್ಮ 21ನೇ ವಯಸ್ಸಿನಲ್ಲಿ ಪರಿವರ್ತನ್ ಎಂಬ ಎನ್‍ಜಿಒ ಸೇರಿದರು. ಅದು ಅರವಿಂದ್ ಕೇಜ್ರಿವಾಲ್ ಮತ್ತು ಮಾನಿಷ್ ಸಿಸೋಡಿಯಾ ಸಂಸ್ಥಾಪಿಸಿರುವ ಎನ್‍ಜಿಒ. 2013ರವರೆಗೆ ಮಹಿಳಾ ಸ್ವಾವಲಂಬನೆ ಸೇರಿದಂತೆ ಹಲವಾರು ವಿಷಯಗಳಿಗೆ ಸಂಬಂಧಿಸಿ ಕೆಲಸ ಮಾಡಿದ್ದಾರೆ.

ಆ ನಡುವೆಯೇ 2011ರಲ್ಲಿ ಅಣ್ಣಾ ಹಜಾರೆಯವರ ಭ್ರಷ್ಟಾಚಾರ ವಿರೋಧಿ ಚಳವಳಿ ಸೇರಿ, ತಂಡ ಸಂಘಟಿಸುವ ಹೊಣೆ ಹೊತ್ತರು. ಇದೇ ಚಳವಳಿಯ ಮತ್ತು ಆಮ್ ಆದ್ಮಿ ಪಾರ್ಟಿಯ ಸದಸ್ಯ ನವೀನ್ ಜೈಹಿಂದ್, ಸ್ವಾತಿಯವರ ಪತಿ.

ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆಯಾಗುವ ಮೊದಲು ಅವರು ಸೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರಿಗೆ ಸಲಹೆಗಾರರಾಗಿ, ಜನತಾ ಸಂವಾದ್ ನಿರ್ವಹಣೆ ಜವಾಬ್ದಾರಿ ಹೊತ್ತಿದ್ದರು. ಆ ಹುದ್ದೆಯಲ್ಲಿ ಅವರಿಗೆ 1.15 ಲಕ್ಷ ಸಂಬಳ ಮಾತ್ರವಲ್ಲದೆ, ಸರ್ಕಾರಿ ವಾಹನ ಮತ್ತು ದೆಹಲಿ ಸಚಿವಾಲಯದಲ್ಲಿ ಪ್ರತ್ಯೇಕ ಕಚೇರಿ ಸೌಲಭ್ಯ ಇತ್ತೆಂಬ ವಿವರಗಳು ಅಂತರ್ಜಾಲದಲ್ಲಿ ಸಿಗುತ್ತಿವೆ.

ಸ್ವಾತಿಯವರು ಅರವಿಂದ್ ಕೇಜ್ರಿವಾಲ್ ಅವರ ಸಂಬಂಧಿಯಾಗಿದ್ದು, ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ನೇಮಕಗೊಳ್ಳಲು ಅದೊಂದೇ ಕಾರಣ ಎಂಬ ಆರೋಪಗಳೂ ಕೇಳಿಬಂದದ್ದಿದೆ. ಆದರೆ ಕೇಜ್ರಿವಾಲ್ ಈ ಆರೋಪ ಅಲ್ಲಗಳೆದಿದ್ದರು. ಈ ವಿಚಾರದಲ್ಲಿ ಆಮ್ ಆದ್ಮಿ ಪಾರ್ಟಿ ಸ್ವಜನಪಕ್ಷಪಾತದ ಆರೋಪ ಹೊರಬೇಕಾಗಿ ಬಂದದ್ದಂತೂ ನಿಜ. ಸ್ವಾತಿ ನೇಮಕವನ್ನು ದೆಹಲಿ ಗವರ್ನರ್ ನಜೀಬ್ ಜಂಗ್ ಮೊದಲು ತಿರಸ್ಕರಿಸಿ, 11 ದಿನಗಳ ಬಳಿಕ ಅದಕ್ಕೇ ಅಂಗೀಕಾರದ ಮುದ್ರೆಯೊತ್ತಿದ್ದರೆಂಬುದು ಕುತೂಹಲಕಾರಿ ಅಂಶ.

ಈಗ ಅತ್ಯಾಚಾರಿಗಳ ವಿರುದ್ಧ ಕಠಿಣ ಕಾನೂನಿಗೆ ಒತ್ತಾಯಿಸಿ ಉಪವಾಸದಲ್ಲಿರುವ ಸ್ವಾತಿಯವರ ಪ್ರಾಮಾಣಿಕತೆ ಏನೇ ಇದ್ದರೂ, ಅವರ ಇಂಥದೊಂದು ರಾಜಕೀಯ ಹಿನ್ನೆಲೆ ಅವರ ಉದ್ದೇಶದ ನಿಸ್ಪೃಹತೆಯನ್ನು ಮಸುಕುಗೊಳಿಸದೇ ಇರಲು ಸಾಧ್ಯವೇ ಇಲ್ಲ. ಅವರ ಉಪವಾಸಕ್ಕೆ ರಾಜಕೀಯ ಬಣ್ಣ ಬಂದುಬಿಡುವುದೂ ಅಷ್ಟೇ ಸಹಜ. ಹೀಗಿರುವಾಗ, ಉಪವಾಸ ಕೈಬಿಡಲು ಅವರನ್ನು ಕೇಳಿಕೊಂಡಿರುವ ಗುಂಪು ಒತ್ತಾಯಿಸಿರುವಂತೆ, ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆಯಾಗಿ ತಾವು ನಿರ್ವಹಿಸಬಹುದಾದ ಕರ್ತವ್ಯಗಳ ಕಡೆ ಗಮನ ಕೊಡುವುದೇ ಅವರ ನಿಜವಾದ ದಿಕ್ಕಿನ ಹೋರಾಟವಾಗಬಲ್ಲುದೇನೊ. ತಮ್ಮ ಈಗಿನ ಜವಾಬ್ದಾರಿಯನ್ನು ಮಕ್ಕಳು ಮತ್ತು ಮಹಿಳೆಯರ ವಿರುದ್ಧದ ಎಲ್ಲ ಹಿಂಸಾಚಾರಗಳಿಗೂ ಚುರುಕಿನ ಆಡಳಿತಾತ್ಮಕ ಪ್ರತಿಕ್ರಿಯೆ ಮೂಲಕ ನಿಭಾಯಿಸುವುದರಿಂದಲೇ, ನ್ಯಾಯಕ್ಕಾಗಿ ಕೇಳುವ ಅವರ ದನಿ ಹೆಚ್ಚು ಬಲಗೊಂಡೀತು ಎನ್ನಿಸುತ್ತದೆ.

Share

Leave a comment

Your email address will not be published. Required fields are marked *

Recent Posts More

  • 2 days ago No comment

    ಈ ಸಂಜೆಯೊಳಗೆ

      ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

  • 5 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 6 days ago No comment

    ಹುಲ್ಲಿನ ಕಡ್ಡಿ

      ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

  • 2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 2 weeks ago No comment

    ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

      ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

  • 15 August 2018
    5 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 09 August 2018
    2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 01 August 2018
    3 weeks ago No comment

    ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                        ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

  • 25 July 2018
    4 weeks ago No comment

    ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                        ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

  • 11 May 2018
    3 months ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...