Share

‘ಪಾಂಚಜನ್ಯ’ಹೀನ ಕಾಲ; ಕೃಷ್ಣ ಮೌನ ರಾಜಕಾರಣ!
ಕನೆಕ್ಟ್ ಕನ್ನಡ

ಪಾಂಚಜನ್ಯರಹಿತರಾಗಿರುವ ಕೃಷ್ಣ ಈಗೇನಿದ್ದರೂ ಮೌನರಾಜಕಾರಣಕ್ಕೆ ಶರಣಾಗಿ ಕೂತಿದ್ದಾರೆ. 1990ರಲ್ಲಿ ಕಾಂಗ್ರೆಸ್ ಪಾಲಿನ ಪಾಂಚಜನ್ಯ ಮೊಳಗಿಸಿದ್ದ ಈ ಚಾಣಾಕ್ಷ ರಾಜಕಾರಣಿಗೆ ಈಗ ಮತ್ತೆ ಮೈಕೊಡವಿ ಎದ್ದುನಿಲ್ಲುವ ಆಸಕ್ತಿಯೂ ಇದ್ದ ಹಾಗಿಲ್ಲವಾದ್ದರಿಂದ ಮೌನವೂ ರಾಜಕೀಯವಾಗಬಹುದಾಗಿದ್ದ ಸಾಧ್ಯತೆ ಕೂಡ ಗೋಚರಿಸುತ್ತಿಲ್ಲ.

ಕಾಂಗ್ರೆಸ್ಸಿನಲ್ಲಿ ತಮ್ಮನ್ನು ಮೂಲೆಗುಂಪು ಮಾಡಲಾಗಿದೆ ಎಂಬ ಅಸಮಾಧಾನವನ್ನು ಹೊತ್ತುಕೊಂಡು ಬಿಜೆಪಿ ಸೇರಿದ್ದ ಎಸ್ ಎಂ ಕೃಷ್ಣ, ಅಲ್ಲಿಯೂ ಕಡೆಗಣನೆಗೇ ತುತ್ತಾಗಿರುವುದು ಎಲ್ಲರಿಗೂ ಗೊತ್ತೇ ಇದೆ. ಯಾಕೆ ಕೃಷ್ಣರಂಥ ಹಿರಿಯ ಮುತ್ಸದ್ದಿಯೊಬ್ಬ ಹೀಗೇಕೆ ಯಾರಿಗೂ ಬೇಡವಾದರು ಎಂಬ ಪ್ರಶ್ನೆಗೆ ರಾಜಕೀಯ ವಲಯದಲ್ಲಿ ಸ್ಪಷ್ಟ ಉತ್ತರಗಳಿಲ್ಲ. ಕೃಷ್ಣ ಯಾರದೋ ಕೈಗೊಂಬೆಯಂತಾಗಬೇಕಾದ ಅನಿವಾರ್ಯತೆಗೆ ತಮ್ಮನ್ನು ತಾವೇ ಸಿಲುಕಿಸಿಕೊಂಡರೇ?

ಕೃಷ್ಣರನ್ನು ಬಿಜೆಪಿಗೆ ಕರೆದುಕೊಳ್ಳುವಾಗ ಮೋದಿ, ಶಾ ಸೇರಿದಂತೆ ಹಿರಿಯ ನಾಯಕರೆಲ್ಲ ಹೇಗೆಲ್ಲಾ ಹಾಡಿ ಹೊಗಳಿದ್ದರು ಎಂಬುದನ್ನು ನೋಡಿದವರಿಗೆ ಕೃಷ್ಣರ ಇಂದಿನ ಸ್ಥಿತಿ ರಾಜಕೀಯದೊಳಗಿನ ನಿಗೂಢವೊಂದಕ್ಕೆ ಸಾಕ್ಷಿಯಂತೆ ಕಂಡರೂ ಅಚ್ಚರಿಯಿಲ್ಲ. ಯಾಕೆಂದರೆ, ಕೃಷ್ಣರಂಥ ಹಿರಿಯ ರಾಜಕಾರಣಿಯನ್ನು ಚುನಾವಣೆ ಸಂದರ್ಭದಲ್ಲಾದರೂ ವಿಶೇಷವಾಗಿ ಆದರಿಸುವುದಕ್ಕೆ ತಂತ್ರದ ಭಾಗವಾಗಿಯಾದರೂ ಬಿಜೆಪಿ ಮುಂದಾಗಬೇಕಿತ್ತು. ಆದರೆ ಅಂಥದೇನೂ ಒಳಗೆ ನಡೆದಂತಿಲ್ಲ.

ಕೃಷ್ಣ ಬಿಜೆಪಿಗೆ ಸೇರ್ಪಡೆಯಾದ ಈ ಒಂದು ವರ್ಷದಲ್ಲಿ ಆ ಪಕ್ಷದ ರಾಷ್ಟ್ರೀಯ ಅಧ್ಯಕ್ಷರು ಹಲವು ಬಾರಿ ರಾಜ್ಯಕ್ಕೆ ಭೇಟಿ ನೀಡಿದ್ದೂ ಪಕ್ಷ ಸಂಘಟನೆಗೆ ರಾಜ್ಯದ ಪ್ರಮುಖ ನಾಯಕರ ಜೊತೆ ಚರ್ಚೆ ನಡೆಸಿದ್ದೂ ಎಲ್ಲವೂ ನಡೆದಿದೆ. ಆದರೆ ಈ ಯಾವುದರಲ್ಲೂ ಎಸ್ ಎಂ ಕೃಷ್ಣ ಅವರ ಪಾಲಿಲ್ಲ. ಹೆಸರಿಗೂ ಇದಾವುದಕ್ಕೂ ಅವರಿಗೊಂದು ಆಹ್ವಾನವಿದ್ದುದಿಲ್ಲ. ಅಸಲಿಗೆ ಪಕ್ಷದಲ್ಲಿ ಕೃಷ್ಣರಂಥ ಹಿರಿಯರಿಗೆ ದಾಕ್ಷಿಣ್ಯಕ್ಕೂ ಒಂದು ಹುದ್ದೆಯನ್ನು ಹೈಕಮಾಂಡ್ ಕೊಟ್ಟಿಲ್ಲ.

ಚುನಾವಣೆಗಾಗಿ ಅತ್ಯಂತ ಬಿರುಸಿನ ಚಟುವಟಿಕೆ ನಡೆಯುತ್ತಿರುವಾಗಲೂ, ಅಭ್ಯರ್ಥಿಗಳ ಆಯ್ಕೆಯಂಥ ಸಂದರ್ಭದಲ್ಲೂ ಯಾರೂ ಕೃಷ್ಣರನ್ನು ಕರೆದು ಕೂರಿಸಿಕೊಂಡು ಚರ್ಚಿಸಿದ್ದಿಲ್ಲ. ಮೋದಿ, ಶಾ ಅಂಥವರ ಪ್ರಚಾರ ಸಭೆಗಳಲ್ಲೂ ಕೃಷ್ಣ ಕಾಣಿಸಿಕೊಂಡದ್ದಿಲ್ಲ.

ಇಲ್ಲೂ ತಮ್ಮನ್ನು ಕಡೆಗಣಿಸುತ್ತಿರುವುದು ಕೃಷ್ಣ ಅವರಿಗೆ ಗೊತ್ತಿದೆಯಾ? ಬಿಜೆಪಿ ವಿಚಾರದಲ್ಲೂ ಕೃಷ್ಣ ಅಸಮಾಧಾನಗೊಂಡಿದ್ದಾರಾ?

ರಾಜ್ಯದ ಮುಖ್ಯಮಂತ್ರಿಯಾಗಿದ್ದವರು, ದೇಶದ ವಿದೇಶಾಂಗ ಸಚಿವ ಹುದ್ದೆಯಲ್ಲಿ ಕಣ್ಸೆಳೆದಿದ್ದವರು ಕೃಷ್ಣ. ಅಂಥವರೊಬ್ಬರು ತಮ್ಮ ಅಗಾಧ ಅನುಭವದ ಕಾರಣದಿಂದಲಾದರೂ ಯಾವುದೇ ಪಕ್ಷಕ್ಕೆ ಆಸ್ತಿಯಂತೆ ಬಲವಾಗಿರಬೇಕಾಗಿದ್ದ ಹೊತ್ತಲ್ಲಿ ನಿರ್ಲಕ್ಷ್ಯಕ್ಕೆ ತುತ್ತಾಗಿರುವುದು ರಾಜಕಾರಣವೇ ಅವರನ್ನು ನಿರಾಕರಿಸಿದ್ದರ ಪರಿಣಾಮವೊ ಅಥವಾ ಅವರನ್ನು ಅಸಹಾಯಕತೆಗೆ ಕಟ್ಟಿಹಾಕಿರುವ ಬೇರೆ ಸಂಗತಿ ಇದೆಯೊ?

ಈ ನಡುವೆ ಕಳೆದ ತಿಂಗಳು ಅವರು ಮತ್ತೆ ಕಾಂಗ್ರೆಸ್ಸಿಗೆ ಮರಳುತ್ತಾರೆ, ಡಿಕೆಶಿ ಮಧ್ಯಸ್ಥಿಕೆಯಲ್ಲಿ ಅವರನ್ನು ಪಕ್ಷಕ್ಕೆ ಮರಳಿ ಕರೆಸುವ ಯತ್ನಗಳು ನಡೆದಿವೆ ಎಂಬ ವದಂತಿಗಳು ದಟ್ಟವಾಗಿಯೇ ಹಬ್ಬಿದ್ದವು. 2017ರ ಮಾರ್ಚ್ ನಿಂದ 2018ರ ಮಾರ್ಚ್ ವರೆಗೂ ಬಿಜೆಪಿಯಲ್ಲಿ ಕೃಷ್ಣರನ್ನು ಯಾರೂ ತಮ್ಮ ನಾಯಕರೆಂಬಂತೆ ನೋಡದೇ ಇದ್ದಂಥ ಸನ್ನಿವೇಶದಲ್ಲಿ ಹಬ್ಬಿದ್ದ ಆ ವದಂತಿಗಳು ನಿಜವಾಗಲೂ ಬಹುದು ಎಂಬ ನಿರೀಕ್ಷೆಗಳೂ ರಾಜಕೀಯ ವಲಯದಲ್ಲಿ ಎದ್ದಿದ್ದವು. ಆದರೆ ಕೃಷ್ಣ ಅಂಥ ಯಾವುದೇ ತೀರ್ಮಾನ ಕೈಗೊಳ್ಳಲಿಲ್ಲ.

ಇನ್ನೂ ಒಂದು ವಿಚಾರವೆಂದರೆ, ಹೊಗಳಿ ಹೊಗಳಿ ಕೃಷ್ಣರನ್ನು ಬಿಜೆಪಿ ಕರೆದುಕೊಂಡಿತ್ತಾದರೂ, ಅದಾಗಿ ಆರೇ ತಿಂಗಳಲ್ಲಿ ಅವರ ಅಳಿಯ ಸಿದ್ಧಾರ್ಥ ಮನೆ ಮತ್ತು ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳ ದಾಳಿ ನಡೆದಿತ್ತು.

ಪಾಂಚಜನ್ಯರಹಿತರಾಗಿರುವ ಕೃಷ್ಣ ಈಗೇನಿದ್ದರೂ ಮೌನರಾಜಕಾರಣಕ್ಕೆ ಶರಣಾಗಿ ಕೂತಿದ್ದಾರೆ. 1990ರಲ್ಲಿ ಕಾಂಗ್ರೆಸ್ ಪಾಲಿನ ಪಾಂಚಜನ್ಯ ಮೊಳಗಿಸಿದ್ದ ಈ ಚಾಣಾಕ್ಷ ರಾಜಕಾರಣಿಗೆ ಈಗ ಮತ್ತೆ ಮೈಕೊಡವಿ ಎದ್ದುನಿಲ್ಲುವ ಆಸಕ್ತಿಯೂ ಇದ್ದ ಹಾಗಿಲ್ಲವಾದ್ದರಿಂದ ಮೌನವೂ ರಾಜಕೀಯವಾಗಬಹುದಾಗಿದ್ದ ಸಾಧ್ಯತೆ ಕೂಡ ಗೋಚರಿಸುತ್ತಿಲ್ಲ.

Share

Leave a comment

Your email address will not be published. Required fields are marked *

Recent Posts More

  • 2 days ago No comment

    ಈ ಸಂಜೆಯೊಳಗೆ

      ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

  • 5 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 6 days ago No comment

    ಹುಲ್ಲಿನ ಕಡ್ಡಿ

      ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

  • 2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 2 weeks ago No comment

    ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

      ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

  • 15 August 2018
    5 days ago No comment

    ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                        ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

  • 09 August 2018
    2 weeks ago No comment

    ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                        ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

  • 01 August 2018
    3 weeks ago No comment

    ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                        ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

  • 25 July 2018
    4 weeks ago No comment

    ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                        ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

  • 11 May 2018
    3 months ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...