Share

ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ.

“ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು.

ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಜೈಲು ಸೇರಿದ್ದ ಭಗತ್ ಸಿಂಗ್ ಅವರನ್ನು ಯಾವೊಬ್ಬ ಕಾಂಗ್ರೆಸ್ ನಯಕನೂ ಹೋಗಿ ಮಾತನಾಡಿಸಿರಲಿಲ್ಲ. ಭ್ರಷ್ಟಾಚಾರ ಮಾಡಿ ಜೈಲು ಸೇರಿದವರನ್ನು ಭೇಟಿ ಮಾಡಲು ಕಾಂಗ್ರಸ್ ನಾಯಕರು ಮರೆಯುವುದಿಲ್ಲ ಎಂದು ಮೇ 9ರ ಪ್ರಚಾರ ಭಾಷಣದಲ್ಲಿ ಮೋದಿ ಆರೋಪಿಸಿದ್ದರು.

ಇದಕ್ಕೂ ಮೊದಲು ರಾಜ್ಯದಲ್ಲಿನ ಇನ್ನೊಂದು ಪ್ರಚಾರ ಭಾಷಣದಲ್ಲಿ ಜನರಲ್ ತಿಮ್ಮಯ್ಯ ಅವರನ್ನು 1948ರಲ್ಲಿ ನೆಹರೂ ಅವಮಾನಿಸಿದ್ದರು ಎಂದು ಇತಿಹಾಸವನ್ನು ತಪ್ಪಾಗಿ ಉಲ್ಲೇಖ ಮಾಡಿದ್ದ ಮೋದಿ ಈಗ ಮಾಡಿರುವುದೂ ಅಂಥದೇ ಒಂದು ತಪ್ಪು ಉಲ್ಲೇಖವೇ ಆಗಿದೆ ಎಂಬುದಕ್ಕೆ ಸಾಕ್ಷಿಯಿದೆ.

ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. ಲಾಹೋರ್ ಜೈಲಿನಲ್ಲಿ 1929ರಲ್ಲಿ ಭಗತ್ ಸಿಂಗ್ ಅವರನ್ನು ಭೇಟಿಯಾಗಿದ್ದರ ಬಗ್ಗೆ ನೆಹರೂ ನೆನಪಿಸಿಕೊಂಡಿದ್ದಾರೆ ತಮ್ಮ ಆತ್ಮಕಥನದ ಪುಟಗಳಲ್ಲಿ.

ತಾವು ಭಗತ್ ಸಿಂಗ್ ಅವರನ್ನು ಕಂಡಿದ್ದು ಅದೇ ಮೊದಲ ಬಾರಿಗೆ ಎಂಬುದನ್ನೂ ಉಲ್ಲೇಖಿಸಿದ್ದಾರೆ ನೆಹರೂ. ಭಗತ್ ಮಾತ್ರವಲ್ಲದೆ ಜತೀಂದ್ರನಾಥ ದಾಸ್ ಮತ್ತಿತರ ಕೆಲವರನ್ನೂ ಕಂಡಿದ್ದೆ. ಎಲ್ಲರೂ ತುಂಬ ನಿಶ್ಶಕ್ತರಾಗಿಬಿಟ್ಟಿದ್ದರು. ಹಾಸಿಗೆ ಹಿಡಿದಿದ್ದರು. ತುಂಬ ಮಾತನಾಡುವುದು ಸಾಧ್ಯವಾಗಲಿಲ್ಲ. ಭಗತ್ ಸಿಂಗ್ ಬಲು ಆಕರ್ಷಕ ಮತ್ತು ಬುದ್ಧಿವಂತನಂತಿದ್ದರು. ಶಾಂತ ಮುಖಭಾವವಿತ್ತು. ಕೋಪದ ಲವಲೇಶವೂ ಕಾಣಿಸುತ್ತಿರಲಿಲ್ಲ. ಅವರ ನಡೆ ನುಡಿ ಸಜ್ಜನಿಕೆಯಿಂದ ಕೂಡಿತ್ತು ಎಂದೆಲ್ಲ ನೆಹರೂ ದಾಖಲಿಸಿದ್ದಾರೆ.

ನೆಹರೂ ಆತ್ಮಕಥನದ ಈ ಭಾಗವನ್ನು ಮಾತ್ರವಲ್ಲ, ಭಗತ್ ಸಿಂಗ್ ಮತ್ತು ಬಟುಕೇಶ್ವರ ದತ್ ಅವರನ್ನು ಲಾಹೋರ್ ಜೈಲಿನಲ್ಲಿ ನೆಹರೂ ಭೇಟಿಯಾಗಿದ್ದರ ಕುರಿತು ‘ದಿ ಟ್ರಿಬ್ಯೂನ್’ನ 1929ರ ಆಗಸ್ಟ್ 9 ಮತ್ತು 10ರ ಸಂಚಿಕೆಗಳಲ್ಲಿ ವರದಿಯಾಗಿದ್ದುದರ ಕುರಿತ ದಾಖಲೆಯನ್ನು ಪ್ರಸ್ತುತಪಡಿಸುತ್ತ ‘ದಿ ವೈರ್’ ಪೋರ್ಟಲ್ ಮೋದಿ ಹೇಳಿಕೆ ಸತ್ಯವಲ್ಲ ಎಂಬುದನ್ನು ನಿರೂಪಿಸಿದೆ. ‘ದಿ ಟ್ರಿಬ್ಯೂನ್’ ಪತ್ರಿಕೆ ಲಾಹೋರ್ ಮೂಲದ್ದೇ ಆಗಿತ್ತೆಂಬುದನ್ನೂ ಅದು ಹೇಳಿದೆ.

(ಚಿತ್ರ ಕೃಪೆ: ದಿ ವೈರ್)

Share

Leave a comment

Your email address will not be published. Required fields are marked *

Recent Posts More

  • 15 hours ago No comment

    ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ

        ಪ್ರಸ್ತಾಪ     ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ...

  • 16 hours ago No comment

    ಚಿತ್ರದಲ್ಲಿನ ಹೆಂಗಸು

      ಕವಿಸಾಲು               ತಲೆಮಾರುಗಳ ಸ್ಥಿರತೆ ಕಮಾನ ಬಿಲ್ಲಿನಂತೆ ಬಾಗಿದ ಹುಬ್ಬುಗಳಲಿ ತೂಗಿ ಕಂದು ಕಣ್ಣುಗಳ ಆಳದಲ್ಲೆಲ್ಲೋ ಅಡಗಿದ ಇನಿತಿನಿತು ಬಾಲ್ಯದ ಭಯಗಳ ನಡುವೆ ಇಣುಕುವ ವಿನಯದಿ ವಿಧೇಯ ಹೆಂಗಸಿದ್ದಾಳೆ, ಆಳಲ್ಲ ಬಾಯೆಂಬ ಬಾಯಿ ಅಚ್ಚುಕಟ್ಟಾಗಿ ಪಳಗಿ ಸರಿಯೆಂಬುದ ದಿಟ್ಟವಾಗಿ ಅರುಹಿ ಉದ್ದುದ್ದ ಭಾಷಣಗಳ ಕಟ್ಟಿಟ್ಟು ತೂಗಿ ಬಿಡಿಸಲಾಗದ ಒಗಟಿನ ಜೀವನ ಸೌಂದರ್ಯವ ಆಸ್ವಾದಿಸುವಲ್ಲಿ ಜೀವಂತವಿದ್ದಾಳೆ, ಕಳೆಯಿಲ್ಲ ಶಿರವೆಂಬ ಶಿಖರವ ...

  • 7 days ago No comment

    ಕೊನಾರ್ಕ್ ‘ಕಾಲ ದೇಗುಲ’

      ಪ್ರವಾಸಿ ಸವಿತಾ ಕಂಡ ಇಂಡಿಯಾ   ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ ...

  • 1 week ago No comment

    ಅಳಿದುಳಿದ ಊರಿನ ಹೂದೋಟದೊಳಗೆ

      ಕವಿಸಾಲು       ಯಾವ ಕತ್ತಿಯೂ ಕತ್ತರಿಸದಿರಲಿ! ಹಗಲು ಸೂರ್ಯನ ಬಿಸಿಲ ಕುಣಿಕೆ ಬಿಗಿಬಿಗಿ ಉರಿಯುವ ನಿಗಿನಿಗಿ ಕೆಂಡ ಭಸ್ಮವಾಗಿಬಿಡುವ ಭಯದ ಕಂಪನ ಬಿಸಿಯುಸಿರೂ ಧಗೆಯಾಗಿ ಅರಳಿದ ಮಲ್ಲೆಹೂಗಳು ಸುಟ್ಟು ಕರಕಲಾಗಿ ರಕ್ಕಸ ಗಣಕೊ ಭಾರೀ ಭೋಜನದೌತಣ ಭವಿಷ್ಯದ ಕಂದಮ್ಮಗಳ ಕತ್ತು ಹಿಚುಕಿ ಭ್ರೂಣಗಳ ಕಲೆಸಿಹಾಕಿ ಕಟ್ಟಬಯಸಿದ ಭವ್ಯ ಸೌಧಗಳ ಬುನಾದಿಗಳಡಿಯಲ್ಲಿ ಅಸ್ಥಿಪಂಜರಗಳ ರಾಶಿ ಒರೆಯಲ್ಲವಿತ ಕತ್ತಿಗಳು ಬಯಲಿಗೆ ಬಂದು ಒಳಕೋಣೆಯ ಸಂಚುಗಳು ಹೊಂಚುಹಾಕಿ ಕೊಲ್ಲುವ ...

  • 2 weeks ago No comment

    ಕಾದಂಬಿನಿ ಕಾಲಂ | ಜಾನೂ ಎಂದು ಕರೆಯುತ್ತೇನೆ!

                      ನಾನು ಸಾಹಿತಿಯಾಗುವ ಕನಸನ್ನು ಕಣ್ಣಿಗೆ ಮೆತ್ತಿಕೊಂಡು ಬೆಳೆದವಳಲ್ಲ. ಜಗತ್ತಿನೊಡನೆ ಒಡನಾಡುವಾಗ ನನ್ನೊಳಗೆ ನಡೆಯುವ ಯುದ್ಧವನ್ನು ಅಭಿವ್ಯಕ್ತಿಸಲು ಬರಹ ಅನಿವಾರ್ಯವಾಗಿತ್ತಷ್ಟೇ!   ಬಾಲ್ಯದಲ್ಲಿ ಪ್ರಾಣಿ ಪಕ್ಷಿ, ಮಕ್ಕಳ ಅಥವಾ ಕಾರ್ಟೂನು ಚಿತ್ರಗಳು ಊರಿನ ಸಿನೆಮಾ ಟೆಂಟಿಗೆ ಬಂದಾಗ ಶಿಕ್ಷಕರು ವಿದ್ಯಾರ್ಥಿಗಳನ್ನು ಕರೆದೊಯ್ದು ಕಡಿಮೆ ದುಡ್ಡಿನಲ್ಲಿ ಸಿನೆಮಾ ತೋರಿಸುತ್ತಿದ್ದರು. ಇಲ್ಲವೇ ರಜೆಯಲ್ಲಿ ನನ್ನ ಮಾಮನ ಥಿಯೇಟರಿನಲ್ಲಿ ಅಂಥ ಸಿನೆಮಾ ...


Editor's Wall

  • 11 May 2018
    2 weeks ago No comment

    ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

    ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...

  • 10 May 2018
    2 weeks ago No comment

    ಒಂದು ಪುಸ್ತಕ; ವಾರವಿಡೀ ಬಿಡುಗಡೆ!

    ಪುಸ್ತಕವೊಂದನ್ನು ಪ್ರಕಟಿಸಿದ ಬಳಿಕ ಅದರ ಬಿಡುಗಡೆ ಕಾರ್ಯಕ್ರಮವೂ ಕಡ್ಡಾಯವೆಂಬಂಥ ಕಾಲವಿತ್ತು. ಈಗಲೂ ಇಲ್ಲವೆಂದಲ್ಲ. ಆದರೆ ಸಾವಿರ, ಲಕ್ಷದ ಲೆಕ್ಕದಲ್ಲಿ ಹಣ ಸುರಿದು ವ್ಯವಸ್ಥೆ ಮಾಡುವ ಬಿಡುಗಡೆ ಕಾರ್ಯಕ್ರಮವು ಒಂದು ಪುಸ್ತಕದ ಕುರಿತ ಮಾತಿಗೆ ಬೇಕಾದ ಆಪ್ತ ವಾತಾವರಣವನ್ನು ಕಟ್ಟಿಕೊಡುತ್ತದೆಯೇ? ದುಡ್ಡಿನ ವಿಚಾರಕ್ಕಿಂತ ಹೆಚ್ಚಾಗಿ ಕಾರ್ಯಕ್ರಮ ಆಯೋಜನೆ ಬೇಡುವ ಶ್ರಮ ಬಹಳ ದೊಡ್ಡದು. ಹಾಲ್ ಬುಕ್ ಮಾಡಬೇಕಾದಲ್ಲಿಂದ ಹಿಡಿದು, ಅತಿಥಿಗಳನ್ನು ಗೊತ್ತುಮಾಡುವುದು, ಅವರಿಗೆಲ್ಲರಿಗೂ ಹೊಂದುವಂತೆ ದಿನಾಂಕ ನಿಗದಿಪಡಿಸುವುದು, ಆಮಂತ್ರಣ ಪತ್ರಿಕೆ ಪ್ರಕಟಿಸುವುದು, ...

  • 03 May 2018
    3 weeks ago No comment

    ಕಾದಂಬಿನಿ ಕಾಲಂ | ಏನಿಲ್ಲದಿದ್ದರೂ ಬದುಕು ದೂಡಬೇಕು

                      ಆಗೆಲ್ಲ ತಪಸ್ಸು ಮಾಡುವ, ದೇವರು ಪ್ರತ್ಯಕ್ಷವಾಗುವ ಮತ್ತು ಕೇಳಿದ ವರ ಕೊಡುವ ಕಥೆಗಳು ಮಸ್ತು ಚಾಲ್ತಿಯಲ್ಲಿದ್ದ ಕಾರಣ ನಾನು ದೇವರನ್ನು ಕಾಣುವ ಹಟಕ್ಕೆ ಬಿದ್ದು ತಪಸ್ಸು ಮಾಡುತ್ತಿದ್ದೆ.   ನನ್ನ ಜೊತೆ ಇವೆಲ್ಲ ಯಾವ ಕಾರಣಕ್ಕೆ ಘಟಿಸಿತ್ತೋ ಅರಿಯೆ. ಬಾಲ್ಯದಲ್ಲಿ ನಮ್ಮ ಮನೆಗೆ ನೆರೆಮನೆಯ ಒಬ್ಬ ಹೆಂಗಸು ಬರುತ್ತಿದ್ದರು. ಮೂಕಕ್ಕ ಎಂದು ಅವರನ್ನು ಎಲ್ಲರೂ ಕರೆಯುತ್ತಿದ್ದುದು. ...

  • 30 April 2018
    4 weeks ago No comment

    ಅತ್ಯಾಚಾರ, ಹೋರಾಟದ ಐದು ವರ್ಷಗಳು ಮತ್ತು ಆ ಪುಟ್ಟ ಗೂಡು

    ತನ್ನ ಬದುಕಿನ ಅಮೂಲ್ಯ ಘಳಿಗೆಯೇ ಇಂಥದೊಂದು ಘಟನೆಗೆ ಬಲಿಯಾದ ಆಘಾತದಲ್ಲಿರುವ ಆಕೆ ಒಮ್ಮೆ ಗೆಲುವಾದವಳಂತೆ ಕಂಡರೂ ಮತ್ತೆ ಗಂಭೀರಳಾಗುತ್ತಾಳೆ. ಎಷ್ಟು ಬೇಕೋ ಅಷ್ಟೇ ಮಾತು. ಕಟ್ಟಿಕೊಂಡಿದ್ದ ಕನಸೂ ಒಡೆದುಹೋಗಿದೆ.   ಅನ್ಯಾಯದ ವಿರುದ್ಧದ ಹೋರಾಟ, ಸಮಾಜದೆದುರು ದೊಡ್ಡ ಮನುಷ್ಯನಂತೆ ಕಾಣಿಸಿಕೊಳ್ಳುವ ಮುಖವಾಡ ತೊಟ್ಟುಕೊಂಡ ಮತ್ತು ಸಾಧ್ಯವಿರುವಷ್ಟೂ ವಾಮಮಾರ್ಗಗಳಿಂದ ಎಲ್ಲರನ್ನೂ ಎಲ್ಲವನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳಬಲ್ಲಂಥ ಅತ್ಯಂತ ಬಲಿಷ್ಠ ದುಷ್ಟನೊಬ್ಬನನ್ನು ಎದುರುಹಾಕಿಕೊಳ್ಳುವ ದಿಟ್ಟತನ ಹೇಗೆ ಅಗಾಧ ಸಾಗರದ ನಟ್ಟ ನಡುವಿನ ಒಂದು ಸಣ್ಣ ...

  • 28 April 2018
    4 weeks ago No comment

    ಮೈಬಣ್ಣವೆಂಬ ಮಾನದಂಡ ಮತ್ತು ‘ವಿಪ್ಲವ’ ಮನಃಸ್ಥಿತಿಯ ರಾಜಕಾರಣ

    ಈ ‘ವಿಪ್ಲವ’ ಮನಃಸ್ಥಿತಿ ಅಧಿಕಾರಸ್ಥವಾದುದಾಗಿದೆ. ದೇವರು, ಧರ್ಮದ ಹೆಸರಲ್ಲಿ ಒಡೆಯುವುದನ್ನು ತನ್ನ ಪರಮೋನ್ನತಿ ಎಂಬಂತೆ ಭ್ರಮಿಸುವ ಈ ಕುರೂಪವು ಮನುಷ್ಯರ ಮೇಲೆ ಮನುಷ್ಯರನ್ನು ಎತ್ತಿಕಟ್ಟುತ್ತದೆ. ಹೆಣ್ಣಿನ ಮೇಲೆ ಹೆಣ್ಣನ್ನೇ ಅಸ್ತ್ರವಾಗಿ ಪ್ರಯೋಗಿಸುವ ಹುನ್ನಾರಗಳ ಮೂಲಕ, ನಿಜವಾದ ಸೌಂದರ್ಯವನ್ನು ನಾಶಗೈಯುತ್ತಿದೆ. 21 ವರ್ಷಗಳ ಕೆಳಗೆ ಅಂದರೆ 1997ರಲ್ಲಿ ವಿಶ್ವಸುಂದರಿ ಪಟ್ಟ ಗೆದ್ದ ಡಯಾನಾ ಹೇಡನ್ ಮೈಬಣ್ಣದ ಬಗ್ಗೆ ಅತಿ ಕೀಳು ಅಭಿರುಚಿಯಿಂದ ಮಾತನಾಡಿದ ತ್ರಿಪುರಾ ಮುಖ್ಯಮಂತ್ರಿ ವಿಪ್ಲವ್ ಕುಮಾರ್ ದೇವ್ ...