Share

ಸಂವೇದನೆ..!? ಹಾಗಂದ್ರೆ ಏನ್ರೀ..!? ಅದ್ಯಾವ ಆ್ಯಂಡ್ರಾಯ್ಡ್ ಆ್ಯಪ್..!?
ಆದಿತ್ಯ

 

ಚಿಟ್ಟೆಬಣ್ಣ

 

 

 

ಹಾಗೊಂದು, ಸುಮಾರು ೬-೭ ವರ್ಷಗಳ ಹಿಂದಿನ ಘಟನೆ. ಅಂದು ಅಪ್ಪ ಕಿವಿಗೆ ಫೋನನ್ನು ಹಚ್ಚಿಕೊಂಡು ಕುಳಿತುಬಿಟ್ಟಿದ್ದರು. ಒಬ್ಬರ ನಂತರ ಒಬ್ಬರಿಗೆ ಕರೆ ಮಾಡಿ ಜೋರು ದನಿಯಲ್ಲಿ ಒಂದೇ ಸಂಗತಿಯನ್ನು ಹೇಳುತ್ತಿದ್ದರು, “ಹಲೋ, ಕೇಳ್ತಾ ಇದ್ಯಾ..!? ಒಂದು ಒಳ್ಳೆ ಸುದ್ದಿ ಇದೆ ಮಾರಾಯ್ರೇ. ರಾಯರ ಮನೆಯವರು ನಮ್ಮ ರಾಮಮಂದಿರಕ್ಕೆ ದೊಡ್ಡ ಮೊತ್ತದ ದೇಣಿಗೆಯನ್ನು ನೀಡಿದ್ದಾರೆ. ನಿನ್ನೆ ತಡರಾತ್ರಿ ಫೋನ್ ಮಾಡಿ ತಿಳಿಸಿದರು. ತುಂಬಾ ಸಂತೋಷದ ಸಂಗತಿ ಅಲ್ವಾ!?” ಈ ಒಂದು ಸಂಗತಿಯನ್ನು ಹಂಚಿಕೊಳ್ಳಲು ಅಂದು ಅದೆಷ್ಟು ಜನರಿಗೆ ಕರೆ ಮಾಡಿದರೋ. ನನಗೆ ಅನಿಸಿತ್ತು, ಇಷ್ಟೆಲ್ಲಾ ಜನರಿಗೆ ಕರೆ ಮಾಡಿಯೇ ಹೇಳುವ ಅಗತ್ಯವಾದರೂ ಏನು..? ಅಪ್ಪನ ಹತ್ತಿರ ಕೇಳಿಯೇಬಿಟ್ಟೆ, “ಅಲ್ಲ ಅಪ್ಪ ನಿಮಗೆ ಫ್ರೀ ಎಸ್.ಎಮ್.ಎಸ್. ಇದೆ ತಾನೆ..? ಮತ್ತೆ ಅಷ್ಟೊಂದು ಜನರಿಗೆ ಕರೆ ಮಾಡುವ ಬದಲು ವಿಷಯ ಹೀಗೆ ಅಂತ ಒಂದು ಟೆಕ್ಸ್ಟ್ ಮೆಸೇಜ್ ಫಾರ್ ವರ್ಡ್ ಮಾಡಿದ್ದರೆ ಆಗುತ್ತಿತ್ತಲ್ಲಾ..!? ಎಲ್ಲರಿಗೂ ಕರೆ ಮಾಡುತ್ತಾ ಕೂರುವ ಅಗತ್ಯವಿರಲಿಲ್ಲ”. ಆಗ ಅಪ್ಪ ಹೇಳಿದ ಮಾತುಗಳನ್ನು ನಾನು ಯಾವ ಕಾಲಕ್ಕೂ ಮರೆಯದಂತೆ ನನ್ನ ಮನಸ್ಸು ಮತ್ತು ಮೆದುಳಿನಲ್ಲಿ ಅಚ್ಚೊತ್ತಿ ನಿಂತುಬಿಟ್ಟವು. ಅವರು ಹೇಳಿದರು: “ಮಗಾ, ಮನುಷ್ಯನಿಗೆ ಭಾವನೆ, ಸಂವೇದನೆ ಅನ್ನುವ ಸಂಗತಿಗಳುಂಟು, ಅವುಗಳನ್ನು ಇನ್ನೊಬ್ಬರೊಂದಿಗೆ ಹೇಗೆ ಹಂಚಿಕೊಳ್ಳಬೇಕೋ ಹಾಗಯೇ ನಡೆದುಕೊಳ್ಳಬೇಕು ಈ ಸಂತಸದ ಸುದ್ದಿಗೆ ಬಹಳಷ್ಟು ಜನ ಕಾರಣರಾಗಿದ್ದಾರೆ ಅವರೆಲ್ಲರಿಗೂ ನಾನೇ ಸ್ವತಃ ಕರೆ ಮಾಡಿ ವಿಷಯ ತಿಳಿಸುವುದು ಸೌಜನ್ಯವೆನಿಸಿಕೊಳ್ಳುತ್ತದೆ. ಟೆಕ್ಸ್ಟ್ ಮೆಸೇಜ್ ನಿಂದ ಕೇವಲ ವಿಷಯ ವಿನಿಮಯವಾಗುತ್ತದಷ್ಟೇ. ಭಾವನೆಗಳ, ಸಂವೇದನೆಗಳ ಅನುಭವವಾಗುವುದಿಲ್ಲ. ಅದಿಲ್ಲದೇ ಮನುಷ್ಯ-ಮನುಷ್ಯರ ನಡುವೆ ಬಾಂಧವ್ಯ ಉಳಿಯುವುದಿಲ್ಲ..!”

ಹೀಗೊಂದು, ಬರ್ತ್ ಡೇ ದಿನ ಸ್ನೇಹಿತನೊಬ್ಬನ ವಾಟ್ಸ್ ಆ್ಯಪ್ ಮೆಸೇಜ್. “Hey many many happy returns of the day, happy birthday!” ಪಕ್ಕದಲ್ಲಿ ನಗುತ್ತಿರುವ, ಬರ್ತ್ ಡೇ ಟೊಪ್ಪಿಯ, ಗಿಫ್ಟ್ ಬಾಕ್ಸ್ ನ ಸ್ಮೈಲಿಗಳು, “thank you so much” ನಾನು ಉತ್ತರಿಸಿದೆ. “ಪಾರ್ಟಿ ಎಲ್ಲಿ..? ಯಾವಾಗ..?” ಆತ ಕೇಳಿದ, ನಾನು ಒಡನೆಯೇ ಡ್ರಿಂಕ್ಸ್, ಬರ್ಗರ್, ಚಾಕ್ಲೇಟ್ ಗಳೆಲ್ಲವುಗಳ ಸ್ಮೈಲಿಗಳನ್ನು ಕಳಿಸಿದೆ. “ಹೇಯ್, ಇದೆಂಥಾ ಪಾರ್ಟಿ.!?” “ಆನ್ಲೈನ್ ವಿಷ್ ಗೆ ಆನ್ಲೈನ್ ಪಾರ್ಟಿ” ನಾನು ತರ್ಕ ಹೇಳಿದೆ. “ನೋಡು ಪಾರ್ಟಿ ಎಲ್ಲಾ ಹೊಟ್ಟೆಯ ವಿಷಯ ಮಾರಾಯ” ಆತ ಪ್ರತಿಕ್ರಿಯಿಸಿದ. “ಅಂತೆಯೇ ಶುಭಾಶಯ ಕೂಡ ಹೃದಯದ ವಿಷಯ ಮಾರಾಯ” ನಾನು ಉತ್ತರಿಸಿದೆ.

ಕೇವಲ ೬-೭ ವರ್ಷಗಳಲ್ಲಿ ಏನೆಲ್ಲಾ ಬದಲಾವಣೆಯಾಗಿ ಹೋಗಿದೆ. ಅಷ್ಟೇಕೆ ತೀರಾ ಕಳೆದೊಂದು ವರ್ಷದಲ್ಲೇ ಜಗತ್ತು ಬಿಡಿ ಜನರು ಅದೆಷ್ಟು ಚೇಂಜ್ ಆಗಿದ್ದಾರೆ.! ಹೋದ ವರ್ಷ ಕರೆ ಮಾಡಿ ಹುಟ್ಟುಹಬ್ಬದ ಶುಭಾಶಯಗಳನ್ನು ಹೇಳಿದವರು ಈ ಸಲ ವಾಟ್ಸ್ ಆ್ಯಪ್ ಮೆಸೇಜ್ ಗಳಲ್ಲೇ ವಿಷ್ ಮಾಡಿದರು. ಹಿಂದಿನ ಬಾರಿ “happy B’day may all your dreams come true” ಎಂದವರು ಈ ಬಾರಿ “WHB!” ಎಂದಷ್ಟೇ ಟೈಪ್ ಮಾಡಿದರು. ಇನ್ನು ಕೆಲವರು ನೀನು ಫೇಸ್ಬುಕ್ ನಲ್ಲಿ ಇಲ್ಲ ಇಲ್ಲದಿದ್ದರೆ ನೋಟಿಫಿಕೇಶನ್ ಬರುತ್ತಿತ್ತು, ಹಾಗಾಗಿಯೇ ನನಗೆ ಮರೆತು ಹೋಯಿತು ಎಂದರು..! ಅಯ್ಯೋ ಕರ್ಮವೇ..! ಇವರಿಗೆಲ್ಲಾ ಏನು ಹೇಳುವುದು ಮಾರಾಯ್ರೇ..!? ಹುಟ್ಟುಹಬ್ಬದ ಶುಭಾಶಯವೊಂದರಿಂದಾಗಿ ಹೇಳಿದವರಿಗೆ, ಹೇಳಿಸಿಕೊಂಡವರಿಗೆ ದೊರೆಯುವ ಆನಂದದ ಅರಿವೇ ಇವರಿಗಿಲ್ಲವೇ..!? ಅಥವಾ ಆ್ಯಂಡ್ರಾಯ್ಡ್ ಫೋನ್ ಬಂದ ಮರುಕ್ಷಣವೇ ಭಾವನೆ, ಸಂವೇದನೆಗಳು ಹಾರಿ ಹೋದವೇ..!? ಇನ್ನು ಬರ್ತ್ ಡೇ ನೆನಪಿಟ್ಟುಕೊಳ್ಳಲು ಒಂದು ನೋಟಿಫಿಕೇಶನ್ ಅನಿವಾರ್ಯವೇ..!? ಫೇಸ್ಬುಕ್ ಸೇರುವ ಮೊದಲು ಎಲ್ಲರ ಬರ್ತ್ ಡೇಟ್ಸ್ ನೆನಪಿರುತ್ತಿದ್ದವಲ್ಲ..! ಈಗ ಮತ್ತೇನು, ಮೆದುಳನ್ನು ಫೇಸ್ಬುಕ್ಕಿಗೆ ಮಾರಿಕೊಂಡಿರಾ..!? ಹೀಗೆಲ್ಲಾ ಹೇಳಿದರೆ, ಅಯ್ಯೋ ಇವತ್ತು ಎಲ್ಲಾ ಹಾಗೆ ಕಾಲಕ್ಕೆ ತಕ್ಕ ಹಾಗೆ ಅಪ್ಡೇಟ್ ಆಗ್ಬೇಕಪಾ, ಮೊದಲಿನ ಹಾಗೆ ಇರಬೇಕಂದ್ರೆ ಹೇಗಾಗುತ್ತೆ ಅಂತ ಮೂಗು ಮುರಿವವರೇ ಇಂದು ಜಾಸ್ತಿ., ಸ್ವಾಮಿ.! ಅಪ್ಡೇಟ್ ಅನ್ನೋದು ನಮ್ಮ ಚಿಂತನೆ, ಯೋಚನೆಗಳಲ್ಲಿ ಅದು ಬಿಟ್ಟು ಮನುಷ್ಯನ ಮೂಲಸ್ವಭಾವವನ್ನೇ ಅಪ್ಡೇಟ್ ಹೆಸರಿನಲ್ಲಿ ಮರೆತು ಕೂರುವುದಲ್ಲ.., ಆಗ ಸಂಬಂಧಗಳೆಂಬ ಸಿಸ್ಟಮ್ ಕ್ರ್ಯಾಷ್ ಆಗುತ್ತದಷ್ಟೆ..!

ತಾಂತ್ರಿಕ ಅಭಿವೃದ್ಧಿಯ ಲಾಭ ಉಣ್ಣುತ್ತಿರುವ ಇವತ್ತಿನ ಮನುಷ್ಯನಿಗೆ ತನ್ನ ಮೂಲ ಗುಣಗಳೇ ಮರೆತು ಹೋಗಿವೆ. ಕೆಲವರಿಗಂತೂ ತಾಂತ್ರಿಕತೆಯ ಉಗಮಕ್ಕಿಂತಲೂ ಮೊದಲಿನಿಂದ ಮನುಷ್ಯನ ಅಸ್ತಿತ್ವವಿದೆ ಎನ್ನುವ ಸರಳ ಸತ್ಯವೇ ಗೊತ್ತಿಲ್ಲ..! ಇಂದಿನ ದಿನ ಎಲೆಕ್ಟ್ರಾನಿಕ್ ಗ್ಯಾಜೆಟ್ಟುಗಳಿಗೂ, ಅಪ್ಲಿಕೇಶನ್ ಪ್ರೋಗ್ರಾಮುಗಳಿಗೂ ಮನುಷ್ಯನೆಂಬ ಅತೀ ಬುದ್ದಿವಂತ ಸೃಷ್ಟಿಗೂ ವ್ಯತ್ಯಾಸವೇ ಇಲ್ಲ..! ಮೊದಲಿನವೆರಡು ಮನುಷ್ಯನ ಮೇಲೆ ಅವಲಂಬಿತವಾಗುವುದು ಒಪ್ಪುವ ಮಾತು. ಯಾಕೆಂದರೆ ಅವುಗಳನ್ನು ನಾವೇ ಸೃಷ್ಟಿಸಿದ್ದು ತಾನೇ!? ಆದರೆ ಮನುಷ್ಯನೇ ಉಳಿದವುಗಳ ಮೇಲೆ ಅವಲಂಬಿತನಾಗುವುದು ಎಷ್ಟರ ಮಟ್ಟಿಗೆ ಸರಿ..!? ಟೆಕ್ನಾಲಜಿಯ ಹೆಸರು ಬಳಸುತ್ತಾ ಮನುಷ್ಯ ತನ್ನನ್ನು ತಾನೇ ಮಾರಿಕೊಳ್ಳುತ್ತಾ ಸಾಗುತ್ತಿಲ್ಲವೇ..? ತಾನೇ ಸಂಶೋಧಿಸಿದ, ಆವಿಷ್ಕರಿಸಿದ ಸಂಗತಿಗಳ ಕೈಗೊಂಬೆಯಾಗಿ ಅದ್ಭುತ ಮತ್ತು ಅಮೂಲ್ಯವಾದ ತನ್ನ ಭಾವನಾ ಶಕ್ತಿ, ವಿವೇಚನಾ ಶಕ್ತಿಗಳನ್ನು ಕಳೆದುಕೊಳ್ಳುತ್ತಿಲ್ಲವೇ.? Freedom of speech, expression, belief, worship, ಎಂದೆಲ್ಲಾ ದೊಡ್ಡ ದೊಡ್ಡ ಮಾತನಾಡುವ ಇಪ್ಪತ್ತೊಂದನೇ ಶತಮಾನದ ಮನುಷ್ಯ ತನ್ನತನವೆನ್ನುವುದನ್ನೇ ದಾಸ್ಯದ ಅಡಿಯಲ್ಲಿಟ್ಟುಕೊಂಡು ಬದುಕುತ್ತಲ್ಲವೇ..!? ಹೀಗೆ ಸಾಗಿದರೆ ಮುಂದೊಂದು ದಿನ ಮನುಷ್ಯನಿಗೂ ಮಷಿನುಗಳಿಗೂ ವ್ಯತ್ಯಾಸವೇನೂ ಉಳಿಯುವುದಿಲ್ಲ ಸಾಮಾನ್ಯವಾಗಿ ಮನೆಯಲ್ಲಿ ಅಜ್ಜ-ಅಜ್ಜಿಯರು “ನಮ್ಮ ಕಾಲದಲ್ಲಿ ಹೀಗಿರ್ಲಿಲ್ಲಪ” ಅಂತ ಹೇಳುವುದನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ನಮಗೂ ಅವರಿಗೂ ಒಂದು ಜನರೇಷನ್ ಗ್ಯಾಪ್ ಇದೆ ಅನ್ನುವ ಸತ್ಯದಿಂದ ಅವರು ಹೇಳಿದ್ದನ್ನು ಒಪ್ಪಬಹುದು. ಆದರೆ ಈಗ ಸ್ವತಃ ನಾವೇ ನಮಗಿಂತ ಮೂರ್ನಾಲ್ಕು ವರ್ಷಕ್ಕೆ ಸಣ್ಣವರನ್ನು ನೋಡಿ ಇದೇ ಮಾತನ್ನು ಹೇಳುವಂತೆ ಆಗುತ್ತದಲ್ಲಾ.!? ಇದು ಅರಗಿಸಿಕೊಳ್ಳಲಾಗದಂಥ ಸಂಗತಿ. ಅಂಥದ್ದೇನಾಗಿದೆ ಈಗಿನ ಕಾಲದಲ್ಲಿ ..!? ಶರವೇಗದಲ್ಲಿ ಸಾಗುತ್ತಿರುವ ತಾಂತ್ರಿಕ ಅಭಿವೃದ್ಧಿಯಿಂದಾಗಿ ನಮ್ಮೆಲ್ಲರ ಬದುಕು ಸುಲಭವೇನೋ ಆಗಿದೆ, ಆದರೆ ಮೊದಲಿದ್ದ ಸುಂದರತೆ ಈಗಿಲ್ಲ. ಅದನ್ನು ತಾಂತ್ರಿಕತೆಯೇ ಹಂತಹಂತವಾಗಿ ಕಿತ್ತುಕೊಳ್ಳುತ್ತಾ ಸಾಗಿದೆ…!

ಕೊನೆಯಲ್ಲಿ ಒಂದು ಮಾತು, “ಸಂವೇದನೆ..!? ಹಾಗಂದ್ರೆ ಏನ್ರೀ..!? ಅದ್ಯಾವ ಆ್ಯಂಡ್ರಾಯ್ಡ್ ಆ್ಯಪ್..!? ಯಾವುದಕ್ಕೆ ಯೂಸ್ ಮಾಡ್ತಾರೆ ಅದನ್ನ..!?” ಅಂತ ಹೇಳೋ ಕಾಲ ಮುಂದೊಂದು ದಿನ ಬರದೇ ಇದ್ರೆ ಸಾಕು..!

ಆದಿತ್ಯ

ಸಾಗರ ಬಳಿಯ ಆನಂದಪುರ ಎಂಬ ಪುಟ್ಟ ಊರಿನ ಅಷ್ಟೇ ಪುಟ್ಟ ಹುಡುಗ. ಮೈಸೂರಿನ ಸರ್ಕಾರಿ ಸಿಪಿಸಿ ಪಾಲಿಟೆಕ್ನಿಕ್ ನಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್ ಮುಗಿಸಿ ಪ್ರಸ್ತುತ ಕುಂಬಳಗೋಡಿನ ಡಾನ್ ಬಾಸ್ಕೋ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ. ಚಿತ್ರಕಲೆಯಲ್ಲೂ ಸುಮಾರಷ್ಟು ಕೃಷಿ ಮಾಡಿದ ಇವರ ಆಸಕ್ತಿಯ ಇತರ ಮಾಧ್ಯಮ ಓದು ಮತ್ತು ವಾದ್ಯ ಸಂಗೀತ. ತುಂಬಾ ಬರೆದಿಲ್ಲವಾದರೂ ಬರೆದರೆ ತುಂಬಾ ಚಂದ!

Share

One Comment For "ಸಂವೇದನೆ..!? ಹಾಗಂದ್ರೆ ಏನ್ರೀ..!? ಅದ್ಯಾವ ಆ್ಯಂಡ್ರಾಯ್ಡ್ ಆ್ಯಪ್..!?
ಆದಿತ್ಯ
"

  1. ಸಂವೇದನಾಶೀಲ ಬರಹ …. ತುಂಬಾ ಚೆನ್ನಾಗಿ ಬರೆದಿದ್ದೀರಿ.

    Reply

Leave a comment

Your email address will not be published. Required fields are marked *

Recent Posts More

  • 6 days ago No comment

    ಕವಿಸಾಲು | ಒಲವಿನಾಟ

        ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

  • 1 week ago No comment

    ಕವಿಸಾಲು | ನಕ್ಷತ್ರ ನಾವೆ

      ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

  • 2 weeks ago No comment

    ಕಲರವ | ಒಂದು ಸಿನಿಮಾ ನೋಡಿದ ಕಥೆ…

        ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

  • 2 weeks ago No comment

    ಕವಿಸಾಲು | ಅಲೆಗಳೆದ್ದ ಕೊಳ…

        ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...

  • 3 weeks ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...


Editor's Wall

  • 31 August 2018
    3 weeks ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

  • 30 August 2018
    3 weeks ago No comment

    ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                        ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

  • 26 August 2018
    3 weeks ago No comment

    ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

        ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

  • 26 August 2018
    4 weeks ago No comment

    ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

      ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

  • 23 August 2018
    4 weeks ago No comment

    ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                        ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...