Share

ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ
ಕಾದಂಬಿನಿ

 

 

ಪ್ರಸ್ತಾಪ

 

 

ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ಈ ದೇಶ, ಈ ಸರಕಾರಗಳು ನೆನೆಯುವುದು ಅಗತ್ಯವಿದೆ.

 

ರ್ನಾಟಕ ವಿಧಾನಸಭಾ ಚುನಾವಣೆಗೂ ಮುನ್ನ ದೆಹಲಿ ವಲಯದ ಆರ್ಚ್ ಬಿಷಪ್ ಅನಿಲ್ ಕೌಟೋ ಅವರು ಕ್ರೈಸ್ತ ಧಾರ್ಮಿಕ ಸಂಸ್ಥೆಗಳಿಗೆ ಪತ್ರವನ್ನು ಬರೆದು, ‘ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದ್ದು, ಈ ಪರಿಸ್ಥಿತಿಯು ಭಾರತದ ಪ್ರಜಾಪ್ರಭುತ್ವ ತತ್ವಗಳು ಮತ್ತು ಜ್ಯಾತ್ಯತೀತ ವ್ಯವಸ್ಥೆಗೆ ಬೆದರಿಕೆಯಾಗಿದೆ. ಆದ್ದರಿಂದ ಕ್ರೈಸ್ತರು 2019ರ ಚುನಾವಣೆಗೂ ಮೊದಲು ದೇಶಕ್ಕಾಗಿ ಪ್ರತಿ ಶುಕ್ರವಾರ ಪ್ರಾರ್ಥನಾ ಅಭಿಯಾನ ನಡೆಸಬೇಕು’ ಎಂದಿದ್ದರು. ಈ ವಿಷಯಕ್ಕೆ ಸಂಬಂಧಿಸಿ ಪರ ವಿರೋಧ ಹೇಳಿಕೆಗಳು ಬಂದಿದ್ದವು. ಹಾಗೆ ನೋಡಿದರೆ ಈ ಪತ್ರದಲ್ಲಿ ಅಂಥ ವಿಶೇಷವೇನೂ ಕಾಣಿಸುವುದಿಲ್ಲ. ಯಾಕೆಂದರೆ ಇದು ಕ್ರೈಸ್ತರ ಆಂತರಿಕ ವಿಷಯವಾಗಿದೆ ಅಲ್ಲದೆ ಹಿಂದಿನಿಂದಲೂ ದೇಶದ ಮಾತ್ರವಲ್ಲ ವಿಶ್ವದ ಯಾವುದೇ ಮೂಲೆಯಲ್ಲೂ ಪ್ರಕೃತಿ ವಿಕೋಪವಿರಲಿ, ಭಯೋತ್ಪಾದನೆ ಇರಲಿ, ಯುದ್ಧವಿರಲಿ, ಖಾಯಿಲೆಗಳಿರಲಿ, ರಾಜಕೀಯ ಪ್ರಕ್ಷುಬ್ಧತೆಗಳಿರಲಿ ಯಾವುದೇ ಬಗೆಯ ಗಂಡಾಂತರಗಳು ಒದಗಿದಾಗಲೂ, ಕ್ರೈಸ್ತರಲ್ಲಿ ಇಂಥ ಸುತ್ತೋಲೆಯನ್ನು ಹೊರಡಿಸುವ ಮೂಲಕ ಪ್ರಾರ್ಥಿಸುವ ಕೋರಿಕೆ ಇಡುವುದು ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ದೇಶದಲ್ಲಿ ಸಣ್ಣ ಪುಟ್ಟ ಸಂಗತಿಗೂ ಪೂಜೆ, ಹೋಮ ಹವನ ನಡೆಸುವ ಹಿಂದೂಗಳು ಕ್ರೈಸ್ತರು ಪ್ರಾರ್ಥನಾ ಅಭಿಯಾನಕ್ಕೆ ಕರೆ ಕೊಟ್ಟಾಗ ಅದೇಕೆ ತಿರುಗಿಬೀಳಬೇಕು ಎಂದು ಅರ್ಥವಾಗುವುದಿಲ್ಲ. ಇಂಥದ್ದೊಂದು ಪತ್ರವನ್ನು ಕ್ರೈಸ್ತ ಧರ್ಮಗುರುಗಳು ಹೊರಡಿಸಿದ್ದೇ ತಡ, ಕೇಂದ್ರ ಸರಕಾರವೇ ನೇರವಾಗಿ ಇದರಲ್ಲಿ ಅನಗತ್ಯ ಮೂಗು ತೂರಿಸಿ ಇದನ್ನು ತೀವ್ರವಾಗಿ ಟೀಕಿಸಿ ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇದೆಯೆನ್ನುವುದನ್ನು ಅಲ್ಲಗಳೆದಿದೆ ಮಾತ್ರವಲ್ಲ ಇದು ಆರ್ಚ್ ಬಿಷಪ್ ಅವರ ಪೂರ್ವಾಗ್ರಹ ಪೀಡಿತ ಮನಃಸ್ಥಿತಿಯನ್ನು ತೋರಿಸುತ್ತದೆ ಎಂದಿದೆ. ಕೇಂದ್ರ ಸರಕಾರದ ಅನಗತ್ಯ ಪ್ರತಿಸ್ಪಂದನೆಯೇ ಎಲ್ಲೋ ಒಂದು ಕಡೆ ಆರ್ಚ್ ಬಿಷಪ್ ಹೇಳಿರುವ ಮಾತನ್ನು ನಿಜವೆಂದು ಸಾಬೀತು ಮಾಡಹೊರಟಂತೆ ಕಂಡರೆ ಅಚ್ಚರಿಯಿಲ್ಲ.

ಇದರ ಬೆನ್ನಲ್ಲೇ ರಾಷ್ಟ್ರೀಯ ಅಲ್ಪಸಂಖ್ಯಾತರ ಆಯೋಗದ (ಎನ್.ಸಿ.ಎಂ.) ಅಧ್ಯಕ್ಷ ಸಯ್ಯದ್ ಘಹೂರುಲ್ ಹಸನ್ ರಿಜ್ವಿಯವರು ಆರ್ಚ್ ಬಿಷಪ್ ಕೌಟೋರ ಮಾತನ್ನು ಅಲ್ಲಗಳೆದು, ‘ದೇಶದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಇಲ್ಲ. ಆದರೆ ಆರ್ಚ್ ಬಿಷಪ್ ಅವರು ಬರೆದ ಪತ್ರವು ನಿಶ್ಚಿತವಾಗಿಯೂ ಭಯದ ವಾತಾವರಣವನ್ನು ಸೃಷ್ಟಿಸಲಿದೆ. ಕೇಂದ್ರವು ಎಲ್ಲರಿಗಾಗಿ ಕೆಲಸ ಮಾಡುತ್ತಿದೆ ಮತ್ತು ಧರ್ಮದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡುತ್ತಿಲ್ಲ’ ಎಂದು ಹೇಳಿದ್ದಾರೆ. ಹೀಗೆ ಹೇಳುವ ಮೂಲಕ ರಿಜ್ವಿಯವರು ಇದೇ ಕೇಂದ್ರ ಸರಕಾರವು ಹಿಂದುತ್ವದ ಅಜೆಂಡಾ ಹೊಂದಿರುವುದನ್ನೂ, ಮುಸ್ಲಿಮ್, ಕ್ರೈಸ್ತ ಹಾಗೂ ದಲಿತರ ಮೇಲಿನ ಎಲ್ಲ ದಾಳಿಗಳನ್ನೂ ಅವರ ಮೇಲಿನ ಅಸಹನೆ, ದ್ವೇಷದ ಧೋರಣೆಯನ್ನೂ ನಿಯಂತ್ರಿಸಲು ಯತ್ನಿಸದಿರುವುದನ್ನು ಮತ್ತು ಈ ಸಂಬಂಧ ಕೇಂದ್ರ ಸರಕಾರದ ಜಾಣ ಮೌನವನ್ನೂ ಅದೇಕೋ ಮುಚ್ಚಿಡಲು ಯತ್ನಿಸಿದ್ದಾರೆ ಎನಿಸುತ್ತದೆ.

ನಿಜಕ್ಕೂ ಕೇಂದ್ರ ಸರಕಾರವು ಮತ್ತು ಅದರ ಬೆನ್ನ ಮರೆಯಲ್ಲೇ ಕಾರ್ಯಾಚರಿಸುವ ಹಿಂದುತ್ವವಾದಿಗಳು ಎಷ್ಟರ ಮಟ್ಟಿಗೆ ಅಲ್ಪಸಂಖ್ಯಾತರನ್ನೂ, ಈ ನೆಲದ ಬಹುಸಂಖ್ಯಾತ ದಲಿತರನ್ನೂ ಸೈರಣೆಯಿಂದ ತರತಮವಿಲ್ಲದೆ ಕಂಡಿದೆ? ಎಷ್ಟರ ಮಟ್ಟಿದ ಸಂವಿಧಾನದ ಆಶಯದಂತೆ ಜ್ಯಾತ್ಯತೀತ ನಿಲುವನ್ನು ಪೋಷಿಸಿದೆ? ಸಂವಿಧಾನವನ್ನೇ ಬದಲಿಸಬೇಕು ಎನ್ನುವ ಹೇಳಿಕೆಗಳು ಕೇಂದ್ರ ಸರಕಾರದ ಕುರ್ಚಿಯ ಬುಡದಿಂದಲೇ ತೂರಿಬರುವಾಗ, ರಾಷ್ಟ್ರವನ್ನು ಹಿಂದೂ ರಾಷ್ಟ್ರವಾಗಿ ಮಾಡಲು ಪಣತೊಟ್ಟಂತೆ ಕಾಣುವಾಗ, ಈ ದೇಶದ ಅಲ್ಪಸಂಖ್ಯಾತರ ಆಹಾರದ ತಟ್ಟೆಯಲ್ಲಿ ಇಣುಕಿ ನೋಡುವ, ಅತ್ಯಾಚಾರ, ಹಲ್ಲೆಗಳಿಂದ ಬದುಕಿನ ಹಕ್ಕು, ಅವರ ಧಾರ್ಮಿಕ ಹಕ್ಕುಗಳ ಮೇಲೆಯೇ ಮೇಲೆಯೇ ಪ್ರಹಾರಗಳು ನಡೆಯುವಾಗ, ಅವರ ಪ್ರಾರ್ಥನಾ ಮಂದಿರಗಳನ್ನು, ಶಾಲೆಗಳನ್ನು ಕೆಡವುವಾಗ, ಮತಾಂತರ, ಲವ್ ಜಿಹಾದ್, ಭಯೋತ್ಪಾದನೆಯ ಮಿಥ್ಯಾರೋಪಗಳನ್ನು ಅವರ ಮೇಲೆ ಹೊರಿಸುವಾಗ, ಘರ್ ವಾಪಸಿಯಂಥದ್ದನ್ನು ಮಾಡುವ ಮೂಲಕ ಹಿಂದೂವಾಗಿ ಪರಿವರ್ತಿಸುವ ವಿಕೃತಿಗಿಳಿದಾಗ, ಕ್ರೈಸ್ತ ಅಥವಾ ಮುಸ್ಲಿಮ್ ಎಂದು ತಿಳಿಯುತ್ತಿದ್ದಂತೆ ಅವರಿಗೆ ಸೈಟು ಕೊಳ್ಳದಂತೆ, ಮನೆ ಕಟ್ಟದಂತೆ, ಅವರೊಂದಿಗೆ ವ್ಯಾಪಾರ ವಹಿವಾಟು ನಡೆಸದಂತೆ, ಅವರಿಗೆ ಉದ್ಯೋಗಗಳಲ್ಲಿ ಅವಕಾಶ ವಂಚಿತರನ್ನಾಗಿಸುವಂತೆ, ಭಯೋತ್ಪಾದಕರಂತೆ, ಅಪರಾಧಿಗಳಂತೆ, ವೈರಿಗಳಂತೆ ಕಾಣುವಂತೆ ಸಮಾಜದಲ್ಲಿ ವಾತಾವರಣ ಸೃಷ್ಟಿ ಮಾಡಿರುವಾಗ, ಅವರ ಧಾರ್ಮಿಕ ಆಚರಣೆಗಳಿಗೆ ಅಡ್ಡಿಪಡಿಸುವ ಚಟುವಟಿಕೆಗಳು ನಡೆಯುತ್ತಿರುವಾಗಲೂ ಅದನ್ನು ತಡೆಯುವ ಬದಲು ಪ್ರೋತ್ಸಾಹಿಸುವಂತೆ ಹೇಳಿಕೆಗಳು ಸರಕಾರದ ಒಳಗಿನಿಂದಲೇ ತೂರಿ ಬರುವಾಗ, ಹಿಂದುತ್ವದ ವಾರಸುದಾರರು ಎಂದು ಹೇಳಿಕೊಳ್ಳುವವರು ಸಾಮಾಜಿಕ ಜಾಲತಾಣಗಳಲ್ಲಿ ಕೆಟ್ಟ ಕೊಳಕು ಭಾಷೆಯಲ್ಲಿ ಬೆದರಿಕೆಗಳನ್ನೊಡ್ಡುವುದನ್ನು ಕಂಡೂ ಕಾಣದಂತಿರುವ ಸರಕಾರವೊಂದು ನಮ್ಮನ್ನಾಳುವಾಗ ಧರ್ಮಗುರುವೊಬ್ಬರು ಇಂಥ ಪತ್ರ ಬರೆದುದರಲ್ಲಿ ಯಾವ ಅಚ್ಚರಿ ಕಾಣಿಸುವುದಿಲ್ಲ. ಬಹು ಸಂಸ್ಕೃತಿಯನ್ನು ಪೋಷಿಸಿಕೊಂಡು ಬಂದ ಜ್ಯಾತ್ಯತೀತ ರಾಷ್ಟ್ರವೊಂದನ್ನು ಒಂದು ದೇಶ, ಒಂದು ಧರ್ಮ, ಒಂದು ಬಣ್ಣ, ಒಂದು ಸಂಸ್ಕೃತಿ ಎನ್ನುವ ಪ್ರಾಸಿಸ್ಟ್ ಧೋರಣೆಯ ಕಾಲುಗಳಡಿ ಹೊಸಕುವ ಸ್ಪಷ್ಟ ಚಿತ್ರಗಳು ಕಣ್ಣಿಗೆ ಗೋಚರವಾಗುತ್ತಿರುವಾಗ ಧಾರ್ಮಿಕ ಮುಖಂಡರೊಬ್ಬರು ತಮ್ಮ ಸಮುದಾಯದವರಿಗೆ ಹೀಗೆ ಪತ್ರ ಬರೆದುದರಲ್ಲಿ ತಪ್ಪೇನಿದೆ?

ಇಲ್ಲಿ ನಾವು ಗಮನಿಸಬಹುದಾದ ಬಹುಮುಖ್ಯ ಅಂಶವೆಂದರೆ ಆರ್ಚ್ ಬಿಷಪ್ ಅನಿಲ್ ಕೌಟೋ ಅವರು ದೇಶದ ಪರಿಸ್ಥಿತಿಯ ಕುರಿತು ಪ್ರಾರ್ಥಿಸಲು ಕರೆ ಕೊಟ್ಟಿದ್ದಾರೆಯೇ ಹೊರತು, ಯಾವುದೇ ಹಿಂಸಾತ್ಮಕ ಅಥವಾ ಅಹಿಂಸಾತ್ಮಕ ಪ್ರತಿಭಟನೆಗೂ ಅಲ್ಲ ಎನ್ನುವುದು.

ಭಾರತದಲ್ಲಿ ಕ್ರೈಸ್ತರ ಮೇಲೆ ನಿರಂತರ ಮೇಲೆ ದೌರ್ಜನ್ಯ ನಡೆದುಕೊಂಡೇ ಬಂದಿದೆ. ಕೇವಲ 2.3% ಜನಸಂಖ್ಯೆಯುಳ್ಳ ಕ್ರೈಸ್ತರು ಮುಸ್ಲಿಮ್ ಅಥವಾ ದಲಿತರಂತೆ ದೇಶದ ರಾಜಕೀಯ/ ಚುನಾವಣಾ ಪ್ರಕ್ರಿಯೆಯಲ್ಲಿ ನಿರ್ಣಾಯಕ ಪಾತ್ರವಹಿಸಲಾರರು ಎನ್ನುವುದು ಈ ದೌರ್ಜನ್ಯಕ್ಕೆ ಇನ್ನೊಂದು ಕುಮ್ಮಕ್ಕು. ಗ್ರಹಾಂ ಸ್ಟೇನ್ಸ್ ಮತ್ತು ಮಕ್ಕಳನ್ನು ಜೀವಂತ ಸುಟ್ಟು ಹಾಕಿದ್ದು, ಅದರ ಅಪರಾಧಿಗಳನ್ನು ಪ್ರಕರಣದಿಂದ ಖುಲಾಸೆಗೊಳೊಸಿದ್ದು, ಕನ್ಯಾಸ್ತೀಯರ ಮೇಲಿನ ಅತ್ಯಾಚಾರ ಪ್ರಕರಣಗಳು, ಚರ್ಚ್ ಮೇಲಿನ ದಾಳಿಗಳು, ಮತಾಂತರದ ಹೆಸರಿನಲ್ಲಿ ಮದರ್ ತೆರೆಸಾ ಸೇರಿದಂತೆ ಕ್ರೈಸ್ತ ಸನ್ಯಾಸಿನಿಯರ ಸೇವೆಯನ್ನೂ ಕಡೆಗಣಿಸಿ ಅವರನ್ನು ಕಿವಿ ಮುಚ್ಚಿಕೊಳ್ಳುವಷ್ಟು ಹೀನಾಯವಾಗಿ ಅವಹೇಳನ ಮಾಡುತ್ತಿರುವುದು, ಕ್ರೈಸ್ತ ಮೇಲಿನ ಹಲ್ಲೆಗಳು ಹೀಗೆ ನಿರಂತರವಾಗಿ ನಡೆದರೂ ಸರಕಾರಗಳು ಕ್ರೈಸ್ತರ ನೆರವಿಗೆ ಬರುವುದಿಲ್ಲ ಮತ್ತು ಸೂಕ್ತ ಭದ್ರತೆ ಒದಗಿಸುವುದಿಲ್ಲ. ಕ್ರೈಸ್ತ ಮತದಾದರರ ಸಂಖ್ಯೆಯೂ ಸರಕಾರಗಳನ್ನು ರಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸುವಷ್ಟು ಇದ್ದಿದ್ದರೆ ಹೀಗಾಗುತ್ತಿರಲಿಲ್ಲವೆಂಬುದು ಕ್ರೈಸ್ತರಿಗೆ ತಿಳಿಯದ್ದೇನಲ್ಲ.

ಇಷ್ಟಾದರೂ ಕ್ರೈಸ್ತರು ಶಾಂತಿಪ್ರಿಯರು, ಕ್ಷಮಾದಾನಿಗಳು. ತಮ್ಮ ಹಾಗೂ ತಮ್ಮ ಧರ್ಮದ ಮೇಲೆ ಯಾವುದೇ ರೀತಿಯ ದೌರ್ಜನ್ಯಗಳು ನಡೆದಾಗಲೂ ಅವರು ಬಂಡೆದ್ದು ತಿರುಗಿ ಬಿದ್ದದ್ದು, ಬೀದಿಗಿಳಿದು ಪ್ರತಿಭಟಿಸಿದ್ದು, ಆಯುಧ ಹಿಡಿದದ್ದು, ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಮೇಲಿನ ದೌರ್ಜನ್ಯವನ್ನು ಎತ್ತಿಹಿಡಿದು ದೇಶದ ಮಾನ ಕಳೆದದ್ದು ಇಲ್ಲವೇ ಇಲ್ಲ. ಕ್ರೈಸ್ತರ ಧಾರ್ಮಿಕ ಮುಖಂಡರು ಇಂಥದ್ದಕ್ಕೆ ಎಂದೂ ಕರೆ ಕೊಡುವುದಿಲ್ಲ ಮತ್ತು ಧಾರ್ಮಿಕ ಮುಖಂಡರ ಮಾತು ಮೀರಿ ಆ ಜನತೆ ಎಂದೂ ಹೋಗಿದ್ದಿಲ್ಲ.ಅವರದ್ದೇನಿದ್ದರೂ ಮೌನ ಪ್ರತಿಭಟನೆ ಮತ್ತು ‘ಸಬ್ ಕೋ ಸನ್ಮತಿ ದೇ ಭಗವಾನ್’ ಎಂಬಂಥ ಪ್ರಾರ್ಥನೆ ಮಾತ್ರ.

ರಾಜಕೀಯ ಕ್ಷೇತ್ರ ಮತ್ತು ಕ್ರೈಸ್ತರು: ಕ್ರೈಸ್ತ ಜನಸಂಖ್ಯೆ ಮೇಲೆ ಹೇಳಿದಂತೆ ದೇಶದಲ್ಲಿ ಇರುವುದೇ 2%. ಇವರೂ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಧುಮುಕುವುದು ತೀರಾ ಕಡಿಮೆ. ಹಾಗೆ ಧುಮುಕುವ ಆಸಕ್ತಿ ಇದ್ದರೂ ಕ್ರೈಸ್ತ ಮತದಾರರ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಪ ಸಂಖ್ಯಾತ ಕೆಟಗರಿಯಲ್ಲಿ ಚುನಾವಣೆ ಎದುರಿಸುವುದು ಕಷ್ಟವಿದೆ. ಏನಿದ್ದರೂ ಜನರಲ್ ಕೆಟಗರಿಯಲ್ಲಿ ಟಿಕೆಟ್ ಪಡೆಯಬೇಕು. ಇದು ಕಷ್ಟ ಸಾಧ್ಯ. ಇದು ಒಂದು ವಿಚಾರವಾದರೆ, ರಾಜಕೀಯದಲ್ಲಿ ಹಿಂದೂ ಮಠಾಧೀಶರಂತೆ ರಾಜಕೀಯ ಪ್ರಕ್ರಿಯೆಗಳಲ್ಲಿ ಮೂಗುತೂರಿಸದೆ ತಮ್ಮ ಪಾಡಿಗೆ ತಾವು ತಮ್ಮ ಧಾರ್ಮಿಕ ಚಟುವಟಿಕೆಗಳಲ್ಲಿ ಮುಳುಗಿಹೋದವರು.

ಹುಸಿ ರಾಷ್ಟ್ರ ಭಕ್ತಿಯಲ್ಲಿ ಆರ್ಭಟಿಸುವ ಹಿಂದುತ್ವದ ಸ್ವಘೋಷಿತ ವಾರಸುದಾರರು ಮಾತೆತ್ತಿದರೆ ಕ್ರೈಸ್ತರನ್ನು ಈ ದೇಶದವರಲ್ಲ, ಅವರನ್ನು ದೇಶದಿಂದ ಒದ್ದೋಡಿಸಬೇಕು ಎನ್ನುವಂತೆ ವರ್ತಿಸುತ್ತಾರೆ. ಆದರೆ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಹೀಗೆ ಪ್ರತಿ ರಾಷ್ಟ್ರೀಯ ಹಬ್ಬಗಳನ್ನೂ ಧ್ವಜಾರೋಹಣ ಮಾಡಿ ರಾಷ್ಟ್ರಗೀತೆ ಹಾಡಿ ಆಚರಿಸಿಯೇ ಧಾರ್ಮಿಕ ಚಟುವಟಿಕೆಯನ್ನು ಶುರುಮಾಡುವ ಕ್ರೈಸ್ತರಿಂದ ಕಲಿಯುವುದು ಬೇಕಾದಷ್ಟಿದೆ. ಆಸ್ಪತ್ರೆ, ಶಿಕ್ಷಣ, ಸಮಾಜ ಸುಧಾರಣೆಯ ಕಾರ್ಯಗಳಲ್ಲಿ ಕ್ರೈಸ್ತ ಸಂಸ್ಥೆಗಳು ಮಾಡುವ ಸೇವೆಯನ್ನು ಈ ದೇಶ, ಈ ಸರಕಾರಗಳು ನೆನೆಯುವುದು ಅಗತ್ಯವಿದೆ.

ಕ್ರೈಸ್ತರು ಮತ್ತು ಮತಾಂತರದ ಸುತ್ತಮುತ್ತ: ನಮ್ಮ ಸಂವಿಧಾನದಲ್ಲಿ ನಮ್ಮ ದೇಶದಲ್ಲಿ ಯಾವುದೇ ಧರ್ಮವಾಚರಿಸಲು ಮತ್ತು ಮತಾಂತರ ಹೊಂದಲು ಮುಕ್ತ ಅವಕಾಶವಿದೆ. ಆದರೂ ಕ್ರೈಸ್ತರ ವಿರುದ್ಧ ಮತಾಂತರದ ಗುರುತರ ಆಪಾದನೆಯನ್ನು ಹೊರಿಸುವ ಮತ್ತು ಘರ್ ವಾಪಸಿಯಂತಹ ಯೋಜನೆಯನ್ನು ಹಾಕಿಕೊಂಡು ಕ್ರೈಸ್ತರ ಮರುಮತಾಂತರ ಮಾಡುವ ಸಂವಿಧಾನ ವಿರೋಧಿ ಕೃತ್ಯಗಳನ್ನು ನಾವಿಂದು ನೋಡಿದ್ದೇವೆ. ನಿಜ ಹೇಳಬೇಕೆಂದರೆ ಕ್ರೈಸ್ತರಲ್ಲಿ ರೋಮನ್ ಕಥೋಲಿಕ್ ಮತ್ತು ಪ್ರಾಟೆಸ್ಟೆಂಟ್ ಎಂಬ ಬೃಹತ್ ಸಮುದಾಯಗಳಲ್ಲಿ ಮತಾಂತರ ನಡೆಯುವುದನ್ನು ನಿಲ್ಲಿಸಿ ಮುಕ್ಕಾಲು ಶತಮಾನವೇ ಕಳೆದಿದೆ. ಯಹೋವ ವಿಟ್ನೆಸ್, ಪೆಂತೆಕೋಸ್ತ್, ಬ್ರದರನ್ ಮುಂತಾದ ಚಿಕ್ಕಪುಟ್ಟ ಸಮುದಾಯಗಳು ಬೈಬಲ್ಲಿನ ಸುವಾರ್ತೆ ಸಾರುವ ಕೆಲಸ ಮಾಡಿದರೂ ಅವರು ತಮ್ಮ ಪಂಗಡಗಳಿಗೆ ಈ ಕಥೋಲಿಕ, ಪ್ರಾಟೆಸ್ಟೆಂಟ್(ಸಿ.ಎಸ್.ಐ) ಈ ಪಂಗಡಗಳ ಜನರನ್ನೇ ‘ನಿಮ್ಮ ಪಂಗಡದಲ್ಲಿ ಪೂಜಾವಿಧಾನ ಸರಿಯಿಲ್ಲ ಪ್ರಾರ್ಥನಾ ವಿಧಾನವೇ ಸರಿಯಿಲ್ಲ’ ಎಂದು ತಮ್ಮ ಪಂಗಡಗಳಿಗೆ ಪಂಗಡಾಂತರ ಮಾಡಿಕೊಳ್ಳುವುದಿದೆ. ಮೊದಲನೇದಾಗಿ ಈ ಸಣ್ಣ ಪುಟ್ಟ ಪಂಗಡಗಳಿಗೆ ಕ್ಯಥೋಲಿಕ್, ಪ್ರಾಟೆಸ್ಟೆಂಟರಂತೆ ಬುಡವೂ ತುದಿಯೂ ಗಟ್ಟಿಯಿಲ್ಲದೆ ಗಲ್ಲಿಗೊಬ್ಬ ಸ್ವಘೋಷಿತ ಪಾಸ್ಟರ್ ಇದ್ದು ಈ ಪಂಗಡಗಳು ಎಷ್ಟು ಬೇಗ ಕಟ್ಟಲ್ಪಡುತ್ತವೋ ಅಷ್ಟೇ ಬೇಗ ಚದುರಿಯೂ ಹೋಗುತ್ತವೆ. ಇವರು ಅ ಕ್ರೈಸ್ತರನ್ನು ತಮ್ಮ ಪಂಗಡಗಳಿಗೆ ಮತಾಂತರ ಮಾಡಿಕೊಂಡರೂ ದಾಖಲಾತಿಗಳಲ್ಲಿ ಅವರು ತಮ್ಮ ಮೂಲ ಜಾತಿಯನ್ನೇ ಉಳಿಸಿಕೊಂಡಿರುತ್ತಾರೆ ಮತ್ತು ಹಣ ದೊರೆಯುವ, ಕಾಯಿಲೆ ವಾಸಿಯಾಗುವ ಆಶೋತ್ತರಗಳನ್ನು ಕಣ್ಣಿನಲ್ಲಿ ಮುಡಿದು ಮತಾಂತರಗೊಂಡವರು ಒಂದು ಕಾಲನ್ನು ತಮ್ಮ ಮೂಲ ಜಾತಿಯನ್ನೂ ಇನ್ನೊಂದು ಕಾಲನ್ನು ಈ ಹೊಸ ಜಾತಿಯಲ್ಲೂ ಇಟ್ಟುಕೊಂಡು ಅಲ್ಲೂ ಇರಲಾಗದೆ ಇಲ್ಲೂ ಇರಲಾಗದೆ ಈ ಮತಾಂತರವು ಬಿದ್ದುಹೋಗುವ ಸಂದರ್ಭಗಳೇ ಹೆಚ್ಚು. ಅಲ್ಲದೆ ಕ್ರೈಸ್ತರ ಒಳಪಂಗಡಗಳಲ್ಲಿ ಮದುವೆಗಳು ನಡೆಯುವುದಿಲ್ಲ. ಹೀಗಾಗಿಯೇ ಏನೋ, ಕ್ರೈಸ್ತರ ಜನಸಂಖ್ಯೆ ಐವತ್ತು ವರ್ಷಗಳ ಹಿಂದೆ ಇದ್ದ ಪ್ರಮಾಣಕ್ಕಿಂತ ಈಗ ಕುಸಿತ ಕಂಡಿದೆಯೇ ಹೊರತು ಏರಿಕೆಯಾಗಿಲ್ಲ. ಭಾರತದ ಜನಗಣತಿಯ ಪ್ರಕಾರ 1951ರಲ್ಲಿ 2.30%, 1991ರಲ್ಲಿ 2.32%, 2001ರಲ್ಲಿ 2.30%, 2011ರಲ್ಲಿ 2.30 ಮತ್ತು ಈಗ ಕೇವಲ 2.3% ಕ್ರೈಸ್ತರು ಇದ್ದಾರೆಂದು ದಾಖಲೆಗಳು ಹೇಳುತ್ತವೆ. ಅಂದಮೇಲೆ ಈ ಮತಾಂತರದ ಆರೋಪದಲ್ಲಿ ಎಷ್ಟು ಮಾತ್ರದ ಹುರುಳಿದೆ ಎನ್ನುವುದನ್ನು ಯೋಚಿಸಬೇಕಾಗುತ್ತದೆ.

ಹಿಂದುತ್ವವಾದಿಗಳ ಕ್ರೈಸ್ತವಿರೋಧಿ ನೀತಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಅವರು ಕ್ರೈಸ್ತರ ವಿರುದ್ಧ ಬರೆಯುವ ಪೋಸ್ಟುಗಳೂ, ಮತಾಂತರದಂತಹ ಗುರುತರ ಆಪಾದನೆಗಳು ಮತ್ತು ಬೆದರಿಕೆಗಳಿಂದ, ಕ್ರೈಸ್ತರ ಪ್ರಾರ್ಥನಾ ಮಂದಿರಗಳ ಮೇಲೆ ದಾಳಿ ಮಾಡಿ ಅವರು ಮಾಡುವ ಹಲ್ಲೆಗಳಿಂದ ನಿತ್ಯ ಅಭದ್ರತಾ ಭಾವ, ಭಯ, ನೋವು, ಆತಂಕಗಳನ್ನ ಎದುರಿಸುತ್ತಾ ಭಯಭೀತ ವಾತಾವರಣದಲ್ಲಿ ಬದುಕುವಂತಾದರೂ ಈ ಎಲ್ಲವನ್ನೂ ಗಟ್ಟಿದನಿಯಿಂದ ಹೇಳಿಕೊಳ್ಳಲು, ಇದರ ವಿರುದ್ಧ ಸೆಣೆಸಲು ಅವರಿಗಿನ್ನೂ ಸಾಧ್ಯವಾಗಿಲ್ಲವೆನಿಸುತ್ತದೆ. ಇದೀಗ ಆರ್ಚ್ ಬಿಷಪ್ ಅನಿಲ್ ಕೌಟೋರವರು ದೇಶದ ಪ್ರಕ್ಷುಬ್ಧ ಪರಿಸ್ಥಿತಿಯು ಪ್ರಜಾಪ್ರಭುತ್ವ ತತ್ವಗಳು ಹಾಗೂ ಜಾತ್ಯತೀತ ವ್ಯವಸ್ಥೆಗೆ ಬೆದರಿಕೆಯಾಗಿದೆ. ಇದಕ್ಕಾಗಿ ಪ್ರಾರ್ಥನಾ ಅಭಿಯಾನ ಶುರುಮಾಡಲು ಕರೆ ಕೊಟ್ಟ ಅವರ ಪತ್ರದ ಹಿಂದಿನ ದನಿಯನ್ನು ಗುರುತಿಸಿದ ಕೇಂದ್ರ ಸರಕಾರ ಹಾಗೂ ಹಿಂದುತ್ವವಾದಿಗಳು, ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ದನಿಯು ತಮಗೆ ಎಲ್ಲಿ ಮುಳುವಾಗುವುದೋ ಎಂಬ ಆತಂಕದಿಂದ ಈ ದನಿಯನ್ನೇ ಅಡಗಿಸುವ ಹುನ್ನಾರ ನಡೆಸಿದಂತಿದೆ. ಇದು ಪ್ರಜಾಪ್ರಭುತ್ವ ರಾಷ್ಟ್ರವೊಂದರ ಜಾತ್ಯತೀತ ವ್ಯವಸ್ಥೆಯಲ್ಲಿ ನಂಬಿಕೆಯಿಟ್ಟು ವಾಸಿಸುವ ಪ್ರಜೆಗಳ ಧಾರ್ಮಿಕ ಸ್ವಾತಂತ್ರ್ಯದ ಮತ್ತು ಅಭಿವ್ಯಕ್ತಿ ಸ್ವಾಂತಂತ್ರದ ಹರಣವಲ್ಲದೆ ಬೇರೇನೂ ಅಲ್ಲ.

Share

One Comment For "ಕ್ರೈಸ್ತರ ಪ್ರಾರ್ಥನಾ ಅಭಿಯಾನದ ಕರೆಯ ಸುತ್ತಮುತ್ತ
ಕಾದಂಬಿನಿ
"

 1. Abraham
  28th May 2018

  “ಅವರು ಪ್ರಾಣದ ಮೇಲಣ ಪ್ರೀತಿಯನ್ನು ತೊರೆದು ಮರಣಕ್ಕೆ ಹಿಂತೆಗೆಯದೆ ಯಜ್ಞದ ಕುರಿಯಾದಾತನ ರಕ್ತದ ಬಲದಿಂದಲೂ ತಮ್ಮ ವಾಕ್ಯದ ಬಲದಿಂದಲೂ ಅವನನ್ನು ಜಯಿಸಿದರು.” ಪ್ರಕಟನೆ:12:11

  ಎಲ್ಲಾ ಕ್ರೈಸ್ತರೂ ಈ ಮೇಲಿನ ವಾಕ್ಯದ ಪ್ರಕಾರ ನಡೆದರೆ ಮಾತ್ರ ಈ ಹಿಂದುತ್ವದ ಹಿಂದೆ ಇರುವ ದುರಾತ್ಮವನ್ನು ಜಯಿಸಲು ಸಾಧ್ಯ. ಉಳಿದೆಲ್ಲವೂ ವ್ಯರ್ಥ.

  “ನಾವು ಹೋರಾಡುವದು ಮನುಷ್ಯ ಮಾತ್ರದವರ ಸಂಗಡವಲ್ಲ; ರಾಜತ್ವಗಳ ಮೇಲೆಯೂ ಅಧಿಕಾರಿಗಳ ಮೇಲೆಯೂ ಈ ಅಂಧಕಾರದ ಲೋಕಾಧಿಪತಿಗಳ ಮೇಲೆಯೂ ಆಕಾಶಮಂಡಲದಲ್ಲಿರುವ ದುರಾತ್ಮಗಳ ಸೇನೆಯ ಮೇಲೆಯೂ ನಾವು ಹೋರಾಡುವವರಾಗಿದ್ದೇವೆ.”
  ಎಫೆಸದವರಿಗೆ 6:12

  “ತನ್ನ ಪ್ರಾಣವನ್ನು ಕಂಡುಕೊಂಡವನು ಅದನ್ನು ಕಳಕೊಳ್ಳುವನು; ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳಕೊಂಡವನು ಅದನ್ನು ಕಂಡುಕೊಳ್ಳುವನು.”
  ಮತ್ತಾಯ 10:39

  Reply

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 1 week ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...