Share

ಸವಿತಾ ನಾಗಭೂಷಣ ಪ್ರವಾಸ ಕಥನ | ಗಂಗೆಯ ತಟದಲ್ಲಿ, ‘ಮಾಯೆ’ಯ ಪಟದಲ್ಲಿ…

ಪ್ರವಾಸಿ ಸವಿತಾ ಕಂಡ ಇಂಡಿಯಾ

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

 

ಭಾಗ-8

ನಾವು ಜಗತ್ತಿನ ಅತ್ಯಂತ ಪ್ರಾಚೀನ ನಗರಗಳಲ್ಲೊಂದಾದ ಕಾಶಿಯಲ್ಲಿದ್ದೆವು. ಕಾಶಿಯನ್ನು ನಿರಂತರವಾಗಿ ಪೊರೆದಿರುವ ಗಂಗೆ ಬಹುಶಃ ಭೂಮಿ ಹುಟ್ಟಿದ ದಿನವೇ ಹುಟ್ಟಿದವಳಿರಬಹುದು. ಇವಳು ಭೇದವೆಣಿಸದೆ ಕೋಟಿ ಕೋಟಿ ಮನುಜರ ಮೈತೊಳೆದು, ಕೊಳೆ ಕಳೆದು, ನೀರುಣಿಸಿ ಹರಸಿದವಳು. ನಾನು ಗಂಗೆಯ ಸ್ನಾನಘಟ್ಟದ ಮೇಲೆ ನಿಂತು ಹೀಗೆ ಯೋಚಿಸುತ್ತಿದ್ದೆನು. ಜನರ ಭಕ್ತಿ ಹೆಚ್ಚಾದಷ್ಟೂ ನದಿಗಳು ಹೆಚ್ಚು ಮಲಿನಗೊಳ್ಳುವುದು ಸಾಬೀತಾಗಿದೆ. ಜಪ-ತಪ-ಯೋಗ-ಧ್ಯಾನ-ಪೂಜೆ-ಪುನಸ್ಕಾರ-ಸ್ನಾನಗಳ ನೆಪದಲ್ಲಿ ಪ್ರತಿ ದಿನವೂ ಹೂವಿನಿಂದ ಹೆಣದ ಬೂದಿಯವರೆಗೆ ಅಪರಿಮಿತ ಕಸ-ಕಡ್ಡಿ-ಕೊಳಚೆ ನದಿಯೊಳಗೆ ಬಂದು ಸೇರುತ್ತದೆ. ಸ್ನಾನಘಟ್ಟ ಎಂದು ಹೇಳುವುದಕ್ಕಿಂತ ನಾವು ನರಕ ಸದೃಶವಾದ ತಿಪ್ಪೆಯ ಮೇಲೆ ನಿಂತಿದ್ದೇವೆ ಎಂದು ಹೇಳಿದರೆ ತಿಪ್ಪೆಗೂ ಅವಮಾನ ಮಾಡಿದಂತೆ ಎನಿಸೀತು ಎನಿಸುವಷ್ಟು ಕೊಳಕು ತುಂಬಿತ್ತು ಅಲ್ಲಿ!

ನನ್ನೂರಿನ ಕೊಳಚೆ ತುಂಬಿದ ಚರಂಡಿಗಳು, ಪ್ಲಾಸ್ಟಿಕ್ ತ್ಯಾಜ್ಯಗಳಿಂದ ತುಂಬಿ ತುಳುಕುವ ಧೂಳು ತುಂಬಿದ ರಸ್ತೆಗಳು, ಗಬ್ಬು ವಾಸನೆ ಸೂಸುವ ಕಸದ ತೊಟ್ಟಿಗಳು ನಮ್ಮ ಕಣ್ಣ ಮುಂದೆ ನಿಂದು ನಾನು ಶಿವಮೊಗ್ಗೆಯಲ್ಲಿರುವೆನೋ ಎಂಬಂತೆ ಭಾಸವಾಗಿ ನನ್ನ ಹೋಮ್ ಸಿಕ್ನೆಸ್ ಕರಗಿ ಹೋಯಿತು. ನನ್ನೂರಿನ ತುಂಗಾ ನದಿಯ ಬದಿಯ ಸೋಪಾನ ಘಟ್ಟಗಳು ಇಷ್ಟೇ ಕೊಳಕಿನಿಂದ ತುಂಬಿದ್ದು ಬಹುಶಃ ನದಿಗಳಿರುವುದೇ ಮಲಿನಗೊಳ್ಳುವುದಕ್ಕೇ ಎಂದು ನಾವು ನಂಬಿಟ್ಟಿದ್ದೇವೇನೋ ಎನಿಸಿತು.

ಆದರೆ ಕೊಳಕು ಕೊಳಕು ಎಂದೆನ್ನುತ್ತಲೇ ನಾವು ತುಂಬಿ ಹರಿಯುತ್ತಿದ್ದ ಗಂಗೆಯ ಆಕರ್ಷಣೆಯನ್ನು ತಡೆಯಲಾಗದೆ ನೀರಿಗಿಳಿದೆವು. ತಾಯಿಯನ್ನು ಅಪ್ಪಿಕೊಂಡ ಕೂಸಿನಂತೆ ಆಕೆಯನ್ನು ಆತುಕೊಂಡು ಅದೆಷ್ಟೋ ಹೊತ್ತು ಅವಳ ಮಡಿಲಿನಲ್ಲಿ ಈಸಿಕೊಂಡು ಬೆಚ್ಚನೆಯ ಪ್ರೀತಿ ಉಂಡೆವು. ನಮ್ಮ ಮಾಯಾವತಿ, ಈ ಪವಿತ್ರ ಗಂಗೆಯ ಮಗಳು, ಬೃಹದಾಕಾರದ ಕಲ್ಲಿನ ಆನೆಗಳನ್ನೂ, ಎತ್ತರೆತ್ತರವಾದ ಸ್ವಂತ ಮೂರ್ತಿಗಳನ್ನೂ ನಿಲ್ಲಿಸುವುದಕ್ಕಿಂತ ಈ ಗಂಗೆಯ ಸೋಪಾನಗಳನ್ನೂ, ಸೊಂಪಾದ ನೀರನ್ನೂ ಮಲಿನಗೊಳಿಸದಂತಹ ರೀತಿಯಲ್ಲಿ ಒಂದು ವ್ಯವಸ್ಥಿತ ಕಾರ್ಯಾಚರಣೆ ಕೈಗೊಂಡಿದ್ದಲ್ಲಿ ಇಡೀ ಭಾರತವೇ ಅವರಿಗೆ ಋಣಿಯಾಗಿರುತ್ತಿತ್ತೇನೋ ಎಂದೆನಿಸದಿರಲಿಲ್ಲ. ನಮ್ಮ ದೇಶದ ಜನರು ಸಂಪಾದಿಸಿ ಕೂಡಿಟ್ಟಿರುವ ಕಪ್ಪು ಹಣದ ಒಂದು ಸಾಸಿವೆಯಷ್ಟು ಪಾಲು ಖರ್ಚು ಮಾಡಿದರೂ ಈ ಗಂಗಾ ನದಿಯನ್ನು ಕೊಳೆಯಿಂದ ಮುಕ್ತಗೊಳಿಸಬಹುದು. ನಮ್ಮ ಮಾಲಿನ್ಯವನ್ನು ಸ್ವೀಕರಿಸಿ ತಾನು ಮಲಿನಗೊಂಡರೂ ಅಮಾಯಕಳಂತೆ ಹರಿದೇ ಹರಿಯುತ್ತಿರುವ ಗಂಗೆಯನ್ನು ನೋಡಿ ನನಗಂತೂ ಅಳುವೇ ಬಂದಿತು. ಪ್ರತಿಯೊಬ್ಬ ಭಾರತೀಯನಿಗೂ ತನ್ನೂರಿನ ಪ್ರತಿಯೊಂದು ಹಳ್ಳವೂ ಬಸಿದ ಬೆವರ ತುಂಬಿಕೊಟ್ಟ ಗಂಗೆ. ಹೀಗೆಲ್ಲ ಯೋಚಿಸುತ್ತಾ ಎರಡು ಹನಿ ಕಣ್ಣೀರನ್ನು ಅವಳ ಪ್ರೀತಿ ಪ್ರವಾಹದಲ್ಲಿ ಬೆರೆಸಿ ಧನ್ಯತೆಯ ಭಾವ ಅನುಭವಿಸಿದೆನು.

ಒಂದು ಹನಿ ನೀರನ್ನೂ ಒಂದು ಕಣ ಮಣ್ಣನ್ನೂ ಉತ್ಪತ್ತಿ ಮಾಡಲು ಸಾಧ್ಯವಿಲ್ಲದ ಮನುಷ್ಯ ಇಡೀ ಜೀವ ಸಂಕುಲದಲ್ಲಿ ಅತ್ಯಂತ ಹೀನ ಬುದ್ಧಿ ಪಡೆದವನು. ಬೆಟ್ಟ-ನದಿ-ಗುಡ್ಡ-ಕಾಡುಗಳನ್ನು ಕರಗಿಸುವ, ಬತ್ತಿಸುವ, ಸುಡುವ ಹೀನ ಬುದ್ಧಿಯನ್ನು ಅವನು ಅದೆಲ್ಲಿಂದ ಮತ್ತು ಯಾಕೆ ಪಡೆದು ಬಂದನೋ ಎಂದು ಯೋಚಿಸುತ್ತಾ ವಿಷಾದದಿಂದ ಕುಗ್ಗಿ ಹೋದೆನು.

ಕಾಶಿಯ ಇಕ್ಕಟ್ಟಾದ ಬೀದಿಗಳು, ಲಗುಬಗೆಯಿಂದ ಓಡಾಡುತ್ತಿದ್ದ ಮಹಂತರು-ಪೂಜಾರಿಗಳು, ಇವರನ್ನು ಹೇಗೆ ಸುಲಿಯುವುದು ಎಂದು ಹೊಂಚು ಹಾಕುತ್ತಿದ್ದ ವ್ಯಾಪಾರಿಗಳು -ಇವರ ನಡುವೆ ಕಂಗೆಟ್ಟಿರುವ ಕಾಶಿಯ ವಿಶ್ವನಾಥ, ಅವನೆದುರು ಎಲ್ಲಿಂದಲೋ ಬಂದ ನಾವು ಭಕ್ತರು ಇದಲ್ಲವೆ ವಿಚಿತ್ರ ಮಾಯೆ ಎಂದುಕೊಂಡೆ. ಕಾಶಿ ವಿಶ್ವನಾಥನ ದರುಶನ ಪಡೆಯಲು ಏನಿಲ್ಲವೆಂದರೂ ಎರಡು ತಾಸು ಕಾಯಬೇಕಾಯಿತು. ದೇವಾಲಯಕ್ಕೆ ಅಪಾರ ಭದ್ರತೆ ಒದಗಿಸಿದ್ದು, ನೀರಿನ ಬಾಟಲಿಗಳನ್ನು ಕೂಡ ಒಯ್ಯುವಂತಿರಲಿಲ್ಲ. ಹೀಗಾಗಿ ಏರು ಬಿಸಿಲಿನಲ್ಲಿ ಕಾದೂ ಕಾದೂ ಸಕ್ಕರೆ ಕಾಯಿಲೆ ಇದ್ದ ಇಬ್ಬರು ನನ್ನ ಸಹಯಾತ್ರಿಕರು ತೇಲುಗಣ್ಣು ಮೇಲುಗಣ್ಣಾಗಿ ಅವರಿಗೆ ತುರ್ತು ಚಿಕಿತ್ಸೆ ನೀಡಬೇಕಾಯಿತು. ಕೊನೆಗೆ ವಿಶ್ವನಾಥನನ್ನು ಸಮೀಪಿಸಿ ಜ್ಯೋರ್ತಿಲಿಂಗವನ್ನು ಸ್ಪರ್ಶಿಸಿದೆವು. ದೇಗುಲದಲ್ಲಿ ನೂಕು-ತಾಕು ಎಷ್ಟಿತ್ತೆಂದರೆ, ಸಾವಿರಾರು ರೂಪಾಯಿ ನೀಡಿ ಪ್ರಸಾದದ ಚೀಟಿ ಪಡೆದು ವಿಶ್ವನಾಥನಿಗೆ ಅಭಿಷೇಕ ಮಾಡಿಸಿ ಹೂವಿನ ಪ್ರಸಾದಕ್ಕಾಗಿ ಕಾದು ನಿಂತಿದ್ದ ಭಕ್ತರೋರ್ವರಿಗೆ ಸಲ್ಲಬೇಕಾಗಿದ್ದ ಹೂವಿನ ಪ್ರಸಾದ ಅವರಿಗೆ ತಪ್ಪಿ ಆಕಸ್ಮಿಕವಾಗಿ ನನ್ನ ಕೊರಳಿಗೆ ಬಿತ್ತು! ಅಂತೂ ಇಂತೂ ನುಗ್ಗಾಡಿ ಏದುಸಿರು ಬಿಡುತ್ತಾ ಭೋಜನಾಲಯದಲ್ಲಿ ಜಾಗ ಹಿಡಿದು ಊಟ(ಪ್ರಸಾದ) ಪಡೆದದ್ದಾಯಿತು. ಊಟದ ಕೊನೆಯಲ್ಲಿ ಬಡಿಸಿದ್ದ ಗಟ್ಟಿಯಾದ, ಸಿಹಿಯಾದ ಕೆನೆ ಮೊಸರು ಎಷ್ಟು ರುಚಿಕಟ್ಟಾಗಿತ್ತೆಂದರೆ, ಬಹುಶಃ ಅದೇ ನಮ್ಮ ಕಾಶಿ ಯಾತ್ರೆಯ ಸಿಹಿ ನೆನಪು!

ಹೆಚ್ಚೆಚ್ಚು ದೇಗುಲಗಳನ್ನು ಸಂದರ್ಶಿಸಿದಷ್ಟೂ ದೇವರ ಬಗ್ಗೆ ಭಕ್ತನಿಗೆ ಇರುವ ಅಷ್ಟಿಷ್ಟು ಶ್ರದ್ಧೆಯೂ ಕಡಿಮೆಯಾಗುತ್ತಾ ಹೋಗುವುದೇನೋ ಎನಿಸಿತು. ಸುತ್ತಿ ಸುಳಿದು, ಬಸವಳಿದು ಈ ಎಲ್ಲ ನಾಟಕಗಳಿಂದ ಅಂತೂ ಇಂತೂ ಪಾರಾಗಿ ಕಾಶಿಯ ಗಲ್ಲಿಯ ಒಂದು ಮೂಲೆ ಮನೆಯ ಜಗುಲಿಯ ಮೇಲೆ ದಣಿವಾರಿಸಿಕೊಳ್ಳಲು ಕುಳಿತೆ. ಒಂದಾನೊಂದು ಕಾಲದಲ್ಲಿ ಭಾರತದ ಅತ್ಯಂತ ಪ್ರತಿಷ್ಠಿತ ಮಹಾನಗರಿಯಾಗಿದ್ದ ಈ ಕಾಶಿಯ ವೈಭವ ಹೇಗಿತ್ತೋ ಎಂದು ಯೋಚಿಸುತ್ತಾ ಕುಳಿತಿರಲು, ಮಾಯಾವತಿ, ಕಾನ್ಶಿರಾಂ, ಅಂಬೇಡ್ಕರ್, ಬುದ್ಧ ಇವರ ಭಾವಚಿತ್ರಗಳನ್ನು ಒಳಗೊಂಡ ಪೋಸ್ಟರ್ ಒಂದು ನನ್ನ ಕಣ್ಣ ಸೆಳೆಯಿತು. ಸರ್ಕಾರಿ ಕಛೇರಿಗಳಲ್ಲಿ ಪ್ರತಿ ದಿನವೂ ಬಂದು ಬೀಳುವ ಸಾವಿರ ಸಾವಿರ ಅರ್ಜಿಗಳು, ಕೋರ್ಟುಗಳಲ್ಲಿ ಬಾಕಿ ಇರುವ ಲಕ್ಷಾಂತರ ಮೊಕದ್ದಮೆಗಳು ನಮ್ಮ ರಾಜಕಾರಣಿಗಳು ಪ್ರತಿ ನಿಮಿಷವೂ ನೀಡುವ ಕೋಟಿ ಕೋಟಿ ಭರವಸೆಗಳು -ಏನೆಲ್ಲವನ್ನು ನೆನೆದು ನಮ್ಮ ಜನತೆ ಪ್ರಜಾಪ್ರಭುತ್ವದಲ್ಲಿ ಇಟ್ಟಿರುವ ಅಸೀಮ ನಂಬುಗೆಯ ಬಗ್ಗೆ ಹೆಮ್ಮೆ ಎನಿಸಿತು. ಸಂವಿಧಾನವೇ ಧರ್ಮ. ಅದನ್ನು ರೂಪಿಸಿದ ಅಂಬೇಡ್ಕರರೇ ಧರ್ಮಗುರು. ಗೊತ್ತಿದ್ದೋ ಗೊತ್ತಿಲ್ಲದೆಯೋ ಭಾರತದ ಈ ಕಟ್ಟ ಕಡೆಯ ಮನುಷ್ಯನಿಗೇ ನಮ್ಮ ಜನತೆ ಶರಣು ಬಂದಿರುವರಲ್ಲವೇ?

ಇದೆಲ್ಲ ಇಲ್ಲೇಕೆ ಹೀಗೇಕೆ ಹೊಳೆಯುತ್ತಿದೆ? ಅದೂ ಪ್ರಪಂಚದ ಅತ್ಯಂತ ಕಲುಷಿತ ನದಿಯಾದ ಗಂಗೆಯ ತೀರದಲ್ಲಿರುವ ಕರ್ಮಠ ಕಾಶಿಯಲ್ಲಿ…. ತಿಳಿಯದಾಯಿತು!

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 1 week ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...