Share

ಪ್ರಸಾದ್ ಪಟ್ಟಾಂಗ | ತಾಯಿ-ಮಗಳ ಜುಗಲ್ಬಂದಿ

ಬಾರಿಯ ಅಮ್ಮಂದಿರ ದಿನದ ವಿಶೇಷವಾಗಿ ಬಹಳ ಹಿಂದೆ ನೋಡಿದ್ದ ವೀಡಿಯೋ ಒಂದನ್ನೇ ಮತ್ತೊಮ್ಮೆ ನೋಡಿ ಕಣ್ತುಂಬಿಕೊಂಡೆ.

ಕಿರುಚಿತ್ರದಂತಿದ್ದ ಈ ವೀಡಿಯೋ ‘ಅಮ್ಮನೇ ಮಗಳ ಆತ್ಮೀಯ ಗೆಳತಿ’ ಎಂದು ಹೇಳುತ್ತಿತ್ತು. ಇಲ್ಲಿ ಓರ್ವ ಹರೆಯದ ಮಗಳು ಮತ್ತು ಮಧ್ಯವಯಸ್ಕ ತಾಯಿಯಿದ್ದಾಳೆ. ಇಬ್ಬರೂ ಮಾಡರ್ನ್ ಲೋಕದ ಮಾಡರ್ನ್ ತಾಯಿ-ಮಗಳು. ಸದ್ಯದ ತರಾತುರಿಯ ಜೀವನದಲ್ಲಿ ಎಲ್ಲರಂತೆ ಮುನ್ನುಗ್ಗುವವರು. ವರ್ಕಿಂಗ್ ವುಮನ್ ಆಗಿರುವುದಲ್ಲದೆ ಸಿಂಗಲ್ ಪೇರೆಂಟ್ ಕೂಡ ಆಗಿರುವ ಈ ತಾಯಿ ತನ್ನ ವಯಸ್ಸೂ ನಾಚಿಕೊಳ್ಳುವಷ್ಟು ತನ್ನನ್ನು ತಾನು ಫಿಟ್ ಆಗಿರಿಸಿಕೊಂಡಿದ್ದಾಳೆ. ಆಕೆಯ ವ್ಯಕ್ತಿತ್ವದಲ್ಲಿರುವ ಲಾವಣ್ಯ ಎಷ್ಟೆಂದರೆ ಆಕೆಯ ಮಗಳ ಗೆಳೆಯರೂ ಕೂಡ ಒಂದು ಕ್ಷಣ ಆಕೆಯತ್ತ ಗೌರವಪೂರ್ವಕ ನೋಟ ಬೀರುವಷ್ಟು.

ಇಂಥಾ ಒಂದು ಸಂದರ್ಭದಲ್ಲೇ ಮನೆಗೆ ಬಂದಿದ್ದ ಮಗಳ ಗೆಳೆಯನೊಬ್ಬ ಈ ಮಾಡರ್ನ್ ಮಮ್ಮಿಯ ನಂಬರ್ ಅನ್ನು ವಿನಂತಿಸಿ ಪಡೆದುಕೊಳ್ಳುತ್ತಾನೆ. ನಿನ್ನ ತಾಯಿಯಲ್ಲಿರುವ gracefulness ನನಗೆ ಬಹಳ ಇಷ್ಟವಾಯಿತು ಎಂದು ಖಾಸಗಿಯಾಗಿ ಮಗಳಲ್ಲಿ ಹೇಳಿ ಅವಳನ್ನು ಒಂದಿಷ್ಟು ಅಭದ್ರತೆಗೂ ದೂಡುತ್ತಾನೆ. ಮಗಳೋ ಪಾಪ ಮೊದಲೇ ಮೊಡವೆ, ಹೇರ್ ಸ್ಟೈಲ್, ಎತ್ತರ, ತೂಕ… ಹೀಗೆ ಹಲವು ತನ್ನದೇ ಆದ ವಯೋಸಹಜ ಗೊಂದಲಗಳಲ್ಲಿ ಮುಳುಗಿದ್ದಾಳೆ. ಇನ್ನು ಗೆಳೆಯನು ತನ್ನನ್ನು ಕಡೆಗಣಿಸಿ ತನ್ನೆದುರೇ ತಾಯಿಯನ್ನು ಹೊಗಳಿದರೆ ಅವಳಿಗೆ ಹೇಗಾಗಬೇಡ! ಇದಾದ ಬೆರಳೆಣಿಕೆಯ ದಿನಗಳಲ್ಲೇ ತನ್ನ ಗೆಳೆಯನ ಸಂದೇಶವೊಂದನ್ನು ತಾಯಿಯ ವಾಟ್ಸಾಪಿನಲ್ಲಿ ನೋಡುತ್ತಾಳೆ ಮಗಳು. ಮಗಳ ಗೆಳೆಯ ಕಳಿಸಿದ ಜೋಕ್ ಎಂಬ ಒಂದೇ ಒಂದು ಕಾರಣಕ್ಕೆ ಅಮ್ಮ ಅದಕ್ಕುತ್ತರವಾಗಿ ಒಂದು ಸ್ಮೈಲಿಯನ್ನು ಕಳಿಸಿರುತ್ತಾಳೆ. ಆದರೆ ಈ ಬಾರಿ ಮಾತ್ರ ತಾಯಿ ತನ್ನ ಸಂಗಾತಿಯನ್ನು ಕಸಿದುಕೊಳ್ಳುತ್ತಿದ್ದಾಳೆ ಎಂಬ ದುಃಖದಲ್ಲಿ ಮಗಳು ಅಮ್ಮನ ಮೇಲೆ ಸಿಡಿದೇಳುತ್ತಾಳೆ. ತನ್ನನ್ನು ತಾನು ಕೋಣೆಯಲ್ಲಿ ಕೂಡಿಹಾಕಿಕೊಂಡು ರೋದಿಸುತ್ತಾ ಅಮ್ಮನನ್ನೂ ಚಿಂತೆಗೊಳಗಾಗುವಂತೆ ಮಾಡುತ್ತಾಳೆ.

ಎಲ್ಲಾ ಮನೆಗಳಲ್ಲೂ ಸಾಮಾನ್ಯವಾಗಿ ಕಾಣಸಿಗುವ ಅಪ್ಪ ಮತ್ತು ಮೀಸೆ ಮೂಡುತ್ತಿರುವ ಹರೆಯದ ಮಗನ ತಿಕ್ಕಾಟಗಳನ್ನು ನಾವು ನೋಡಿಯೇ ಇರುತ್ತೇವೆ. ‘ತಾನೂ ಗಂಡಸಾಗುತ್ತಿದ್ದೇನೆ’ ಎಂಬ ಸೂಚನೆಯನ್ನು ಮಗರಾಯ ನೀಡುತ್ತಿದ್ದಂತೆಯೇ ಮನೆಯಲ್ಲಿ ಈವರೆಗೆ ಒಬ್ಬನೇ ಗಂಡಸಾಗಿ ಮೆರೆದಿದ್ದ ತಂದೆಗೆ ನಡುಕವುಂಟಾಗುವುದನ್ನು, ಇಬ್ಬರ ‘ಪುರುಷಾಹಂಕಾರ’ವೂ ಘರ್ಷಣೆಯಾಗುವುದನ್ನೂ ಕಂಡಿರುತ್ತೇವೆ. ಈ ನಿಟ್ಟಿನಲ್ಲಿ ನಮ್ಮ ಆಧುನಿಕ ಸಮಾಜದಲ್ಲಿ ತಾಯಿ-ಮಗಳ ಒಂದು ಭಾವನಾತ್ಮಕ ಸಮೀಕರಣವನ್ನೂ ಕೂಡ ಅಷ್ಟೇ ಪರಿಣಾಮಕಾರಿಯಾಗಿ ತೆರೆಗೆ ತಂದಿದ್ದು ಈ ತಂಡದ ಹೆಗ್ಗಳಿಕೆಯೇ. ಇಲ್ಲಿ ಆ ತಾಯಿಯು ತನ್ನ ಮಗಳಿಗೆ ಅರ್ಥಪೂರ್ಣವಾದ ಮಾತೊಂದನ್ನು ಹೇಳುತ್ತಾಳೆ: “ಮಗಳೇ, ನಿನ್ನದು ಈಗ ‘graceful’ ಆಗಿ ಕಾಣುವ ವಯಸ್ಸಲ್ಲ, ಬದಲಾಗಿ ‘beautiful’ ಆಗಿ ಕಾಣುವ ವಯಸ್ಸು. ಯಾವತ್ತೂ ಮನದಲ್ಲಿ ಕಲ್ಮಶವನ್ನಿಟ್ಟುಕೊಂಡು ಹೆಣಗಾಡಬೇಡ” ಎಂದು. ಹರೆಯದ ದಿನಗಳಲ್ಲಿ ದೈಹಿಕ, ಮಾನಸಿಕ ಗೊಂದಲಗಳಿಂದ ದಿಕ್ಕುತಪ್ಪಿದ ಹಾಯಿದೋಣಿಯಂತಾಗಿರುವ ಮಗಳ ಮೊಗ್ಗುಮನಸ್ಸನ್ನು ಅದೆಷ್ಟು ಚೆನ್ನಾಗಿ ಅರ್ಥೈಸಿಕೊಂಡು ಅವಳಿಗೆ ಹೆಗಲಾಗಿದ್ದಳು ಆ ತಾಯಿ! ‘ಅಮ್ಮ ಎಂದರೆ ಕಂಫರ್ಟ್’ ಎಂಬುದು ಅತಿಶಯೋಕ್ತಿಯಲ್ಲ.

ಇವೆಲ್ಲಾ ನೆನಪಾಗಿದ್ದು ಇತ್ತೀಚೆಗೆ ಓದಲು ಸಿಕ್ಕ ಒಂದು ಸುಂದರ ಪತ್ರದಿಂದಾಗಿ. ಲೇಖಕಿ, ಬ್ಲಾಗರ್ ಮತ್ತು ವೈಯಕ್ತಿಕ ತರಬೇತುದಾರರಾಗಿರುವ ಮಿಶೆಲ್ ಲೇಯ್ನ್ ಪದವಿಯನ್ನು ಪಡೆಯಲು ತಯಾರಾಗಿ ನಿಂತಿರುವ ತನ್ನ ಮಗಳನ್ನುದ್ದೇಶಿಸಿ ಬರೆದ ಪತ್ರವಾಗಿತ್ತದು. ‘Stronger than the Storm’ ಎಂಬ ಬೆಸ್ಟ್ ಸೆಲ್ಲರ್ ಕೃತಿಯ ಲೇಖಕಿಯಾಗಿರುವ ಮಿಶೆಲ್ ಫಿಟ್ನೆಸ್ ತರಬೇತುದಾರರಾಗಿಯೂ, ಕೋಚ್ ಆಗಿಯೂ ಕೂಡ ಮಿಂಚಿದವರು. ಹೆತ್ತವರ ರಕ್ಷಾಕವಚದಿಂದ ಹೊರಬಂದು ಇನ್ನೇನು ನೈಜಜಗತ್ತಿಗೆ ಸಂಪೂರ್ಣವಾಗಿ ತೆರೆದುಕೊಳ್ಳಲಿರುವ ತನ್ನ ಮಗಳನ್ನುದ್ದೇಶಿಸಿ ಮಿಶೆಲ್ ಬರೆದ ಪತ್ರದ ಯಥಾವತ್ ಅನುವಾದ ಇಲ್ಲಿದೆ. ಓದಿ ನೀವೂ ಖುಷಿಪಡಿ.

“ಪ್ರೀತಿಯ ಮಗಳೇ,
ಅಂತೂ ಸಮಯವು ಬಂದೇಬಿಟ್ಟಿದೆ. ಹೈಸ್ಕೂಲಿನ ಪಯಣವನ್ನು ಮಗಿಸಿ ನೀನು ತಯಾರಾಗಿ ನಿಂತಿದ್ದೀಯಾ. ಜೀವನವು ಈಗ ನಿನಗಾಗಿ ಕಾಯುತ್ತಿದೆ. ಪದವಿಗ್ರಹಣ ಸಮಾರಂಭಕ್ಕೆಂದು ನೀನು ಧರಿಸಿರುವ ಈ ಟೋಪಿ ಮತ್ತು ಗೌನು ನಿನ್ನ ಉಳಿದ ಜೀವನದ ಆರಂಭಿಕ ದಿನಗಳ ಸಂಕೇತವೆಂಬಂತೆ ನನಗನ್ನಿಸುತ್ತಿದೆ. ನೀನು ಹುಟ್ಟಿದಾಗ ಈ ಪದವಿಗ್ರಹಣದ ದಿನವು ಅದೆಷ್ಟೋ ದೂರವಿದೆಯೆಂಬಂತೆ ಅನ್ನಿಸಿತ್ತು. ಆದರೆ ನಾವಿಬ್ಬರೂ ಪರಸ್ಪರರ ಕೈ ಹಿಡಿದುಕೊಂಡು ಅದೆಷ್ಟು ದೂರ ಬಂದುಬಿಟ್ಟೆವು ನೋಡು. ಹೀಗೆ ಕೈ-ಕೈ ಹಿಡಿದುಕೊಂಡು ಹೆಜ್ಜೆ ಹಾಕಿದ್ದು, ಮಲಗುವ ಮುನ್ನ ಕಥೆ ಹೇಳುತ್ತಿದ್ದರಿಂದ ಹಿಡಿದು ನಿನ್ನೆ ಈ ಗರಿಗರಿಯಾದ ಬಟ್ಟೆಗಳನ್ನು ಧರಿಸಿ ರಿಹರ್ಸಲ್ ಮಾಡುವವರೆಗೂ! ಈ ಸುದೀರ್ಘ ಪಯಣದಲ್ಲಿ ಬಹಳಷ್ಟು ಸಂಗತಿಗಳು ಕಾಲಾಂತರದಲ್ಲಿ ಬದಲಾಗಿವೆ. ಕಥೆಗಳು ಶಾಲೆಯ ಹೋಂ-ವರ್ಕ್ಗಳಾಗಿ, ಪುಟ್ಟ ಹೆಜ್ಜೆಗಳು ಕಾರಿನ ಕೀ ಗಳಾಗಿ, ಧರಿಸಿಕೊಂಡರೆ ಪುಟ್ಟ ದೇವತೆಯಂತೆ ಕಾಣುತ್ತಿದ್ದ ನಿನ್ನ ಬಟ್ಟೆಗಳಿಂದ ಹಿಡಿದು ಫ್ಯಾಷನ್ ಮತ್ತು ಪ್ರಸಾಧನ ಸಾಮಗ್ರಿಗಳನ್ನು ನೀನಿಂದು ಬಳಸುತ್ತಿರುವ ದಿನಗಳವರೆಗೂ!

ನಿನ್ನನ್ನೀಗ ನೋಡಿದರೆ ಈ ಜಗತ್ತಿನ ಸಾಹಸಗಳನ್ನು ಎದುರುಗೊಳ್ಳಲು ಸನ್ನದ್ಧಳಾಗಿ ಬೆಳೆದು ನಿಂತಿರುವ, ಸೌಂದರ್ಯದ ಪ್ರತಿರೂಪದಂತಿರುವ, ಧೈರ್ಯವಂತೆಯಾದ ತರುಣಿಯೊಬ್ಬಳು ನನಗೆ ಕಾಣುತ್ತಿದ್ದಾಳೆ. ಜೊತೆಗೇ ನನ್ನ ಪುಟ್ಟ ಮಗಳಾಗಿಯೂ ಕೂಡ. ಓರ್ವ ತಾಯಿಯಾಗಿ ನನ್ನೆಲ್ಲಾ ನಿರೀಕ್ಷೆ, ಭರವಸೆ, ಸಾಧನೆಗಳ ಸುಂದರ ಪ್ರತಿಬಿಂಬದಂತೆ, ಈ ಜಗತ್ತಿನಲ್ಲಿ ಯಶಸ್ಸನ್ನು ಕಾಣಲು ತನ್ನೆಲ್ಲಾ ಶ್ರಮವನ್ನು ನಿನ್ನ ಮೇಲೆ ಹಾಕಿ ಈಗ ಮೂಡಿಬಂದಿರುವ ಹದಿನೇಳು ವರ್ಷದ ಒಂದು ಫಲಿತಾಂಶದಂತೆ. ಈ ವಯಸ್ಸಿನಲ್ಲಿ ನಿನಗೆ ಹೇಳಬೇಕಾಗಿರುವ ಯಾವುದಾದರೂ ಸಂಗತಿಗಳು ನನ್ನಿಂದ ಉಳಿದುಹೋಗಿದೆಯೇ ಎಂಬುದನ್ನು ಈಗಲೂ ಯೋಚಿಸುತ್ತಿದ್ದೇನೆ ನಾನು. ಆದರೆ ಕೆಲ ವಿಷಯಗಳ ಬಗ್ಗೆ ನನಗೂ ಅರಿವಿದೆ. ಅವುಗಳನ್ನು ಜೀವನವೆಂಬ ಪಯಣದಲ್ಲಿ ನೀನೇ ಸ್ವತಃ ಕಂಡುಕೊಳ್ಳಬೇಕಿದೆಯೆಂದು. ಇದು ನನ್ನೊಳಮನಸ್ಸಿನ ಮಾತೂ ಹೌದು. ನೀನು ಚಿಕ್ಕವಳಿದ್ದಾಗ ನಿನ್ನ ಕಣ್ಣುಗಳು ಹೇಗಿದ್ದವೋ ಈಗಲೂ ಕೂಡ ಅವುಗಳು ಅಷ್ಟೇ ಆತ್ಮವಿಶ್ವಾಸದ ಕಾಂತಿಯನ್ನು ಹೊಂದಿರುವ ಬಗ್ಗೆ ನನಗದೆಷ್ಟು ಖುಷಿ. ಬುದ್ಧಿವಂತಿಕೆಯ, ಜಿಜ್ಞಾಸೆಯ, ಸ್ವಾತಂತ್ರ್ಯದ ಹೊಳಪುಳ್ಳ ಅವೇ ಆಕರ್ಷಕ ಕಣ್ಣುಗಳು. ಜೀವನದ ಪಯಣವನ್ನು ಖುದ್ದಾಗಿ ಸಾಗಲು ಹೊರಟಿರುವ ನಿನಗಿಂದು ವಿದಾಯವನ್ನು ಹೇಳಲು ಕಷ್ಟವಾಗುತ್ತಿರುವುದು ತಾಯಿಯಾಗಿ ನನಗೆ ಸಹಜವೇ. ಆದರೆ ನಾವಿಬ್ಬರೂ ಜೊತೆಯಾಗಿ ಸಾಗಬೇಕಾದ ದಾರಿಗಳು, ಮಾಡಬೇಕಾದ ಸಾಹಸಗಳು ಇನ್ನೂ ಸಾಕಷ್ಟಿವೆ. ಇತ್ತೀಚಿನ ದಿನಗಳಲ್ಲಿ ಬಹಳ ಕೇಳಿಬರುತ್ತಿರುವ ‘the letting go’ ಎಂದರೆ ಪ್ರಾಯಶಃ ಇದೇ ಇರಬೇಕು.

ಸರಿಯಾಗಿರುವುದನ್ನು ಧೈರ್ಯವಾಗಿ ಸಮರ್ಥಿಸುವ, ಜೀವನದ ಆಯ್ಕೆಗಳನ್ನು ಜಾಣತನದಿಂದ ಮಾಡುವ, ತನ್ನದೇ ಗಟ್ಟಿದನಿಯನ್ನು ಹೊಂದಬೇಕಾಗಿರುವ, ಅಂತಃಸಾಕ್ಷಿಗೆ ಯಾವತ್ತೂ ದ್ರೋಹ ಬಗೆಯಬಾರದ… ಹೀಗೆ ಹಲವಾರು ಸಂಗತಿಗಳ ಬಗ್ಗೆ ಅದೆಷ್ಟೋ ಬಾರಿ ನಾವಿಬ್ಬರೂ ಕೊನೆಮೊದಲಿಲ್ಲವೆಂಬಂತೆ ಚರ್ಚಿಸಿದ್ದೇವೆ. ಹಾಂ… ಒಂದು ಸಂಗತಿಯನ್ನು ನಾನು ನಿನಗಿಲ್ಲಿ ಹೇಳಲೇಬೇಕು. ನಿನ್ನಲ್ಲಿರುವ ಬುದ್ಧಿವಂತಿಕೆ, ದೃಢತೆ, ಹುಮ್ಮಸ್ಸು, ಸಹಾನುಭೂತಿಯಂಥಾ ಗುಣಗಳ ಬಗ್ಗೆ ನನಗೆ ಅಪಾರ ಹೆಮ್ಮೆಯಿದೆ. ನಿನ್ನ ಸೃಜನಶೀಲತೆ, ದೂರದೃಷ್ಟಿ, ಶೈಲಿಗಳು ನನಗೂ ಪ್ರೇರಣಾತ್ಮಕವಾದದ್ದು. ಜಗತ್ತು ನಿನ್ನ ಕಣ್ಣಿನಿಂದ ಅದೆಷ್ಟು ಸುಂದರವಾಗಿ ಕಾಣುತ್ತಿದೆ ಎಂಬುದನ್ನು ನಾನು ಕಲ್ಪಿಸಿಕೊಳ್ಳಬಲ್ಲೆ ಮತ್ತು ಆ ದೃಷ್ಟಿಯು ಬದಲಾಗದಿರಲಿ ಎಂಬುದೇ ನನ್ನ ಆಶಯ. ಇದು ನಿಜಕ್ಕೂ ವಿಶಿಷ್ಟ ಮತ್ತು ಅಮೂಲ್ಯ. ಇದನ್ನೇ ಉಳಿಸಿಕೊಂಡು ನೀನು ತನ್ನನ್ನು ತಾನು ಅರಳಿಸಿಕೋ. ಜಗತ್ತಿಗೆ ನಿನ್ನ ನಂಬಿಕೆಗಳ, ದೃಷ್ಟಿಕೋನಗಳ, ಅಭಿಪ್ರಾಯಗಳ ಮತ್ತು ಪ್ರತಿಭೆಯ ಅವಶ್ಯಕತೆಯಿದೆ. ನಿನ್ನೊಂದಿಗೆ ಆತ್ಮಸಾಂಗತ್ಯವನ್ನು ಹೊಂದಬಲ್ಲ ಯಾವುದಾದರೂ ಸಂಗತಿ ಈ ಜಗತ್ತಿನಲ್ಲಿದ್ದರೆ ನಿಸ್ಸಂದೇಹವಾಗಿಯೇ ಅದರ ಬೆನ್ನಟ್ಟು, ಅದರಲ್ಲಿ ಅಕ್ಷರಶಃ ತಲ್ಲೀನಳಾಗು. ಮುಂದೆ ಅದರ ಸುತ್ತಮುತ್ತಲೇ ನಿನ್ನ ಜೀವನವನ್ನು ಯಾವುದೇ ಭಯಗಳಿಲ್ಲದೆ ಕಟ್ಟಿಕೋ.

ನಮ್ಮೊಳಗನ್ನೇ ಮತ್ತಷ್ಟು ಶೋಧಿಸಿ, ಅರ್ಥೈಸಿ, ನಮ್ಮನ್ನು ನಾವು ಕಂಡುಕೊಳ್ಳಬಹುದಾದ ಒಂದು ಅತ್ಯದ್ಭುತವಾದ ವರವನ್ನು ನಾವೆಲ್ಲರೂ ಹೊಂದಿದ್ದೇವೆ ಎಂಬುದು ನನ್ನ ಬಲವಾದ ನಂಬಿಕೆ. ಇದು ಮೆಚ್ಚುಗೆ, ಸ್ವೀಕಾರ ಮತ್ತು ಸ್ಫೂರ್ತಿಯನ್ನು ಇತರರಲ್ಲೂ ಹುಟ್ಟಿಸಲು ನಮ್ಮೊಳಗೇ ಇರುವ ಒಂದು ದನಿ ಮತ್ತು ಶಕ್ತಿ. ಅದು ನಿನ್ನಾತ್ಮದೊಳಗೇ ಇರುವಂಥದ್ದು ಮತ್ತು ನಿನ್ನ ಎದೆಬಡಿತದಲ್ಲೇ ಮಿಡಿಯುವಂಥದ್ದು. ನಿನ್ನ ಬುದ್ಧಿಯಿಂದ ಪ್ರಯೋಗಿಸಲ್ಪಡುವ ಇವುಗಳು ನಿನ್ನ ಕಣ್ಣಿನಿಂದ ವ್ಯಕ್ತವಾಗಬಲ್ಲವು. ಸೃಷ್ಟಿ, ರೂಪಾಂತರ, ಅಭಿವ್ಯಕ್ತಿ ಹೀಗೆ ಎಲ್ಲವೂ ಕೂಡ ಇದರದ್ದೇ ಭಾಗಗಳು. ನಿನ್ನ ಈ ಶಕ್ತಿಯ ಬಗ್ಗೆ ಯಾವತ್ತೂ ಭಯಪಟ್ಟುಕೊಳ್ಳಬೇಡ. ಅದೆಷ್ಟೇ ಸಮಯ ಹಿಡಿದರೂ ತನ್ನನ್ನು ತಾನು ಸಂಪೂರ್ಣವಾಗಿ ಅರಿತುಕೊಳ್ಳುವುದರಿಂದ ವಿಮುಖಳಾಗಬೇಡ. ಯಾವ್ಯಾವ ಅಂಶಗಳು ನಿನ್ನಲ್ಲಿ ಸಂತಸ, ದುಃಖ, ಪ್ರೀತಿ, ಸಹಾನುಭೂತಿ, ಶಕ್ತಿ, ಭಯಗಳನ್ನು ಹುಟ್ಟಿಸುತ್ತವೆ ಎಂಬುದನ್ನು ಗುರುತಿಸಿ, ಅವುಗಳನ್ನು ಒಪ್ಪಿಕೊಂಡು ಜೀವನದುದ್ದಕ್ಕೂ ತನ್ನ ಒಳಿತಿಗಾಗಿ ಬಳಸಿಕೋ. ಭೂತಕಾಲದಲ್ಲಿಟ್ಟ ತಪ್ಪು ಹೆಜ್ಜೆಗಳನ್ನು ಮತ್ತೆ ಮತ್ತೆ ನೋಡುವುದಾಗಲೀ, ಪರಿತಪಿಸಿಕೊಳ್ಳುವುದಾಗಲೀ ಮಾಡಬೇಡ. ಏಕೆಂದರೆ ಜೀವನವೆಂಬುದು ಒಂದು ನಿರಂತರ ಪಯಣ. ಈ ಎಲ್ಲಾ ಅನುಭವಗಳು ನಿನ್ನನ್ನು ಜೀವನದ ವಿವಿಧ ಹಂತಗಳಿಗಾಗಿ ರೂಪಿಸುತ್ತಿವೆ ಎಂಬ ಬಗ್ಗೆ ನೆನಪಿರಲಿ.

ನಿನ್ನ ಆಂತರ್ಯದ ಸೌಂದರ್ಯ ಮತ್ತು ಶಕ್ತಿಯು ನಿನ್ನ ಬಾಹ್ಯಸೌಂದರ್ಯಕ್ಕಿಂತ ಅದೆಷ್ಟೋ ಪಟ್ಟು ಮೇಲು ಎಂಬ ಸತ್ಯವನ್ನು ಯಾವತ್ತೂ ಮರೆಯಬೇಡ. ಸಂತಸ, ಉತ್ಸಾಹ ಮತ್ತು ರೋಮಾಂಚನದೊಂದಿಗೆ ಡಿಪ್ಲೊಮಾದ ಪದವಿಯನ್ನು ನೀನಿಂದು ಪಡೆಯುತ್ತಿರುವಂತೆಯೇ ಈ ಸಂಗತಿಯೂ ನಿನ್ನ ನೆನಪಿನಲ್ಲಿರಲಿ. ಅದೇನೆಂದರೆ ಸ್ಟ್ಯಾಂಡ್ ನಲ್ಲಿ ನಿಂತು ದೊಡ್ಡ ದನಿಯಲ್ಲಿ ‘ವೂ… ಹೂ…’ ಎಂದು ಉತ್ಸಾಹದಿಂದ ನಿನ್ನನ್ನು ಪ್ರೋತ್ಸಾಹಿಸುತ್ತಿರುವ, ಹೆಮ್ಮೆಯಿಂದ ಚಪ್ಪಾಳೆಗಳನ್ನು ತಟ್ಟುತ್ತಿರುವಂತೆಯೇ ಕಣ್ಣುಗಳು ಉಕ್ಕಿಹರಿಯುತ್ತಿರುವ ಆನಂದಬಾಷ್ಪದಿಂದ ಮಂಜಾಗಿರುವ, ನಿನ್ನ ಈ ಮೈಲುಗಲ್ಲಿಗೆ ಸಾಕ್ಷಿಯಾಗಿ ನಿನ್ನನ್ನು ಮತ್ತಷ್ಟು ಹುರಿದುಂಬಿಸುತ್ತಾ ನಿನ್ನ ದೊಡ್ಡ ‘ಚಿಯರ್ ಲೀಡರ್’ ಆಗಿರುವ, ನಿನ್ನನ್ನು ಈ ಪ್ರಪಂಚದಲ್ಲಿ ಅತ್ಯಂತ ಹೆಚ್ಚು ಪ್ರೀತಿಸುವ ಜೀವ ನಾನೇ ಎಂದು. ಜೀವನದ ಪಯಣದಲ್ಲಿ ನೀನ್ಯಾವತ್ತೂ ಏಕಾಂಗಿಯಾಗಿರಲಾರೆ ಎಂಬುದನ್ನು ಸದಾ ನೆನಪಿನಲ್ಲಿಟ್ಟುಕೋ. ನಿನ್ನ ಮನಸ್ಸು ಮತ್ತು ಬುದ್ಧಿಯಲ್ಲಿ ಒಳದನಿಯಾಗಿ ನಾನು ಇದ್ದೇ ಇರುತ್ತೇನೆ. ನೀನ್ಯಾವತ್ತೂ ನನ್ನ ಪುಟ್ಟ ಮಗಳೇ!
ಪ್ರೀತಿಯಿಂದ,
ಅಮ್ಮ

*
ಆ ಕಿರುಚಿತ್ರವು ಸತ್ಯವನ್ನೇ ಹೇಳಿತ್ತು. ಯಾರೇನೇ ಹೇಳಲಿ. ನಿಸ್ಸಂದೇಹವಾಗಿಯೂ ತಾಯಿಯೇ ಮಗಳ ಬೆಸ್ಟ್ ಫ್ರೆಂಡ್!

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

 • 3 days ago No comment

  ಈ ಸಂಜೆಯೊಳಗೆ

    ಕವಿಸಾಲು       ಈ ಸಂಜೆಯೊಳಗೆ ಗರಿಗೆದರುತ್ತವೆ ಮೌನದಲ್ಲೆ ಗರಬಡಿದ ಮಾತುಗಳು ಹೊಸ ಬಟ್ಟೆಯ ತೊಟ್ಟ ಮಗುವಂತೆ ಸಮುದ್ರದ ದಂಡೆಯಲಿ ದೂರ ಉಳಿದ ಭಾವಗಳು ಅಲೆಗಳಾಗಿ ಬಂದು ಪಾದಮುಟ್ಟಿ ತಮಾಷೆ ಮಾಡುತವೆ ಆಪ್ತ ಗೆಳೆಯನಂತೆ ಗೂಡಿಗೆ ಹೊರಟ ಹಕ್ಕಿಗಳು ತಿರುಗಿ ನೋಡಿವೆ ಬರುವಾಗ ಏನೋ ತಂದಿದ್ದು ಮರೆತು ಬಂದನೋ ಎಂಬಂತೆ ಅಪ್ಪನಿಲ್ಲದ ಮಕ್ಕಳು ಕೂಲಿಗೆ ಹೋದ ತಾಯಿಯ ದಾರಿಯ ಕಣ್ಣು ಮಿಟುಕಿಸದೇ ನೋಡುತಿವೆ ಅರ್ಧದಲೇ ಮರೆತ ...

 • 6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 1 week ago No comment

  ಹುಲ್ಲಿನ ಕಡ್ಡಿ

    ಕವಿಸಾಲು       ಜೋಪಡಿ ತುಂಬಾ ಮಂಪರುಗಣ್ಣಲ್ಲಿ ನೇತಾಡುವ ಚುಕ್ಕಿಗಳು ಚಂದಿರನ ಅಂಗಳ ಸೃಷ್ಟಿಸಿದ್ದವು ಗುಡಿಸಲು ಕಣ್ಣೊಳಗೆ ಜಾತಿ ಧರ್ಮದ ಹಂಗು ತೊರೆದು ನಡು ಮನೆಯ ದೀಪವಾಗಿ ಬೆಳಗಿದ ಕಸಬರಿಗೆಯ ನಾಡಿಗಳು ಹಲವು ಬಗೆಯ ರಕ್ತ ಬಸಿದವರ ರೂಪಾಂತರ ಸಾಲು ನದಿಗಳ ಸರಪಳಿಯಂತೆ ಬೆಸೆದುಕೊಂಡ ಹುಲ್ಲಿನ ಕಡ್ಡಿಗಳು ಹೊಗೆ ಜಂತಿಯ ಮನೆಯೊಳಗೆ ಜಪ್ಪೆನ್ನದ ತಪೋ ವನಗಳು ಮಳೆ ಗುಡುಗು ಬಿರುಗಾಳಿಯ ಅಬ್ಬರದೊಳಗೂ ಸದಾ ಕುದಿಯುತ್ತಾ ಹದಗೊಳ್ಳೊ ...

 • 2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 2 weeks ago No comment

  ಪ್ರಸಾದ್ ಪಟ್ಟಾಂಗ | ಅರ್ಥ ಅರಿಯದವರಿಗೆ ಸ್ವಾತಂತ್ರ್ಯವೂ ಅಗ್ಗವೇ!

    ನಾವಿಂದು ಸವಿಯುತ್ತಿರುವ ಸ್ವಾತಂತ್ರ್ಯದ ಹಿಂದೆ ಅದೆಷ್ಟೋ ಜೀವಗಳ ಬಲಿದಾನದ ಇತಿಹಾಸವಿದೆ, ಮುತ್ಸದ್ದಿಗಳ ಕನಸಿದೆ, ಧೀಮಂತ ನಾಯಕರ ದೂರದೃಷ್ಟಿಯ ಹಿನ್ನೆಲೆಗಳಿವೆ. ಇವೆಲ್ಲದರ ಬಗ್ಗೆ ಒಂದಿಷ್ಟಾದರೂ ನಮಗೆ ಕೃತಜ್ಞತೆಯ ಭಾವವಿರಬೇಕಷ್ಟೇ.   ಅದೊಂದು ಟೆಲಿವಿಷನ್ ಕಾರ್ಯಕ್ರಮ. ಸುದ್ದಿವಾಹಿನಿಯೊಂದು ನಮ್ಮ ದೇಶದ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ, ಪ್ರಸ್ತುತ ರಾಜಕೀಯ ನಾಯಕರ ಬಗ್ಗೆ… ಹೀಗೆ ಸಾಮಾನ್ಯಜ್ಞಾನ ಎಂದು ಕರೆಯಬಹುದಾದ ಹಲವು ಪ್ರಶ್ನೆಗಳನ್ನು ತರುಣ-ತರುಣಿಯರಲ್ಲಿ ಕ್ಯಾಮೆರಾ ಮುಂದೆ ಕೇಳುತ್ತಿತ್ತು. ಮಹಾತ್ಮಾ ಗಾಂಧಿಯವರ ಸಂಪೂರ್ಣ ಹೆಸರೇನು? ...


Editor's Wall

 • 15 August 2018
  6 days ago No comment

  ಕಾದಂಬಿನಿ ಕಾಲಂ | ವೇದಿಕೆ, ಶಾಲು, ಸನ್ಮಾನ, ಬಿರುದು ಬಾವಲಿ ಇತ್ಯಾದಿ

                      ಕವಿತೆಯ ಬಗ್ಗೆ ಇರುವ ಆಸಕ್ತಿ ಆ ದೀನ ಹೆಣ್ಣುಮಗಳ ಮಾತು ಆಲಿಸುವುದರಲ್ಲಿ ಇಲ್ಲವೆಂಬುದು ಲೈಕು ಕಮೆಂಟುಗಳಿಂದಲೇ ಸಾಬೀತಾಯಿತು. ಉಳ್ಳವರ ಜಗಮಗಿಸುವ ಲೋಕದಲ್ಲಿ ಒಬ್ಬ ನಿರಾಶ್ರಿತ ಅಲೆಮಾರಿ ಜನಾಂಗದ ನಿರ್ಗತಿಕ ಹೆಣ್ಣಿನ ಅಳಲಿಗೆ ಯಾವ ಜಾಗವಿದೆ ಎನ್ನುವುದನ್ನು ಅದು ನನಗೆ ಮನಗಾಣಿಸತೊಡಗಿತು.   ಮೊನ್ನೆ ಒಬ್ಬ ಕವಿಯ ಜೊತೆ ಬೇಸರದಿಂದ ಮಾತಾಡಿಬಿಟ್ಟೆ. ‘ಶುಭಾಶಯಗಳು. ಆದರೆ ಇಂಥ ...

 • 09 August 2018
  2 weeks ago No comment

  ಕಾದಂಬಿನಿ ಕಾಲಂ | ಕಸದ ತೊಟ್ಟಿಯಲ್ಲಿ ಸಿಕ್ಕ ಒಂದು ಹೆಣ್ಣು ಶಿಶುವಿನ ಕಥೆ

                      ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಕೆಲ ಪುನರ್ವಸತಿ ಕೇಂದ್ರಗಳ ಪಾಲಾದ ಬಾಲಕಿಯರು ಗಂಡಿನ ಕಾಮದ ದಳ್ಳುರಿಯ ಕೊಂಡಕ್ಕೆ ದೂಡಲ್ಪಟ್ಟ ಕಡು ಹೇಯ, ಭೀಬತ್ಸ್ಯಕರ ಕಥೆಗಳನ್ನು ನಾವಿಂದು ಕಾಣುತ್ತಿದ್ದೇವೆ. ಆದರೆ ಹೀಗೆ ಅನಾಥಾಲಯ, ಪುನರ್ವಸತಿ ಕೇಂದ್ರಗಳಿಗೆ ದಾಖಲಾಗುವ ಮುನ್ನಿನ ಆ ಒಂದೊಂದು ಮಗುವಿನ ಕಥೆಯೂ ಅಷ್ಟೇ ಯಾತನಾಪೂರಿತವಾಗಿರುತ್ತವೆ.   ಮೊನ್ನೆ ಮೊನ್ನೆ ಬಿಹಾರದ ಮುಜಫರ್ ನಗರದ ಪುನರ್ವಸತಿ ...

 • 01 August 2018
  3 weeks ago No comment

  ಕಾದಂಬಿನಿ ಕಾಲಂ | ಕೊನೆಗೂ ಒಂಟಿಯಾಗಿ ಉಳಿದುಬಿಟ್ಟವಳು

                      ಈಗ ಆಗಿನಂತೆ ನಗು ಬರಲಿಲ್ಲ. ಅವಳ ಬದುಕಲ್ಲೂ ಅದೇ ಘಟಿಸಿಹೋದ ಚೋದ್ಯಕ್ಕೆ ಏನು ಹೇಳುವುದು?   ಮೊನ್ನಿನ ಮುಂಜಾವಲ್ಲಿ ನಾನು ಎಚ್ಚರಗೊಂಡದ್ದೇ ಅವಳ ಫೋನ್ ಕರೆಯಿಂದ. ‘ನಾನ್ ಕಣೇ ರಾಜಿ’ ಎಂದರೆ ನಾನು, ‘ರಾಣಿನಾ?’ ಅನ್ನುತ್ತಿದ್ದೆ. ಅಷ್ಟರಲ್ಲಿ ‘ರಾಜಿ ಮಾರಾಯ್ತೀ ಮರೆತುಬಿಟ್ಯಲ್ಲ’ ಆಪಾದಿಸಿದಳು. ರಾಣಿ ನನ್ನ ಮನೆಯ ಎಡಕ್ಕಿದ್ದ ಗೆಳತಿ. ರಾಜಿ ಬಲಕ್ಕಿದ್ದವಳು. ಇಬ್ಬರ ...

 • 25 July 2018
  4 weeks ago No comment

  ಕಾದಂಬಿನಿ ಕಾಲಂ | ಚೌಕಟ್ಟಿನೊಳಗಿರುವುದು ಚಿತ್ರವಲ್ಲ; ಸುಡುಸುಯ್ಲು!

                      ಹೃದಯ ಭಾರವಾಗುತ್ತದೆ. ಚೌಕಟ್ಟಿನೊಳಗಿನ ಸುಡುಸುಯ್ಲುಗಳು ಇಷ್ಟೇಕೆ ಸುಡುತ್ತವೆ? ಹೊರ ಲೋಕಕ್ಕೆ ಅದೇಕೆ ತಣ್ಣಗೆ ತಣಿದುಬಿಟ್ಟ ಮಂಜುಬೆಟ್ಟಗಳಂತೆ ಗೋಚರಿಸುತ್ತದೆ?   ಆ ದಂಪತಿ ಪ್ರಯಾಣಿಸುತ್ತಿದ್ದ ಕಾರಿನ ಚಾಲಕ ಹಾಡು ಹಾಕಿದಂತೆಲ್ಲ ಪತಿ ಅದನ್ನು ಆಫ್ ಮಾಡುತ್ತಿದ್ದ. ಚಾಲಕನಿಗೆ ವಿಚಿತ್ರವೆನಿಸಿರಬೇಕು. ‘ಏನ್ ಸಾರ್ ನಿಮಗೆ ಹಾಡು ಕೇಳುವ ಹವ್ಯಾಸ ಇಲ್ವಾ’ ಅಂದಾಗ ‘ಇಲ್ಲ ಅದರಿಂದೇನು ಸಿಗುತ್ತೆ?’ ಎಂದಿದ್ದ ...

 • 11 May 2018
  3 months ago No comment

  ಕಾಂಗ್ರೆಸ್ ನಾಯಕರು ಜೈಲಲ್ಲಿ ಭಗತ್ ಸಿಂಗ್ ಭೇಟಿಯಾಗಿರಲಿಲ್ಲವಾ?

  ಭಾರತದ ಪ್ರಥಮ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಆತ್ಮಚರಿತ್ರೆಯಲ್ಲಿಯೇ, ಅವರು ಭಗತ್ ಸಿಂಗ್ ಭೇಟಿಯಾಗಿದ್ದರೆಂಬುದರ ಕುರಿತ ವಿವರ ಸಿಗುತ್ತದೆ. “ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದ ಭಗತ್ ಸಿಂಗ್, ಬಟುಕೇಶ್ವರ್ ದತ್, ವೀರ್ ಸಾವರ್ಕರ್ ಜೈಲಿನಲ್ಲಿದ್ದಾಗ ಅವರನ್ನು ಯಾರಾದರೊಬ್ಬ ಕಾಂಗ್ರೆಸ್ ನಾಯಕರು ಹೋಗಿ ಕಂಡಿದ್ದರಾ? ಆದರೆ ಕಾಂಗ್ರೆಸ್ ನಾಯಕರು ಭ್ರಷ್ಟನೊಬ್ಬ ಜೈಲಿನಲ್ಲಿದ್ದರೆ ಅವನನ್ನು ನೋಡಲು ಹೋಗುತ್ತಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಚುನಾವಣೆ ಪ್ರಚಾರ ಸಭೆಯಲ್ಲಿ ವಾಗ್ದಾಳಿ ನಡೆಸಿದ್ದರು. ಬ್ರಿಟಿಷ್ ...