Share

ಸವಿತಾ ನಾಗಭೂಷಣ ಪ್ರವಾಸ ಕಥನ | ಬುದ್ಧನ ಗಯೆಯಲ್ಲಿ, ಮೋಹದ ಬಲೆಯಲ್ಲಿ…

ಪ್ರವಾಸಿ ಸವಿತಾ ಕಂಡ ಇಂಡಿಯಾ

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

 

ಭಾಗ-9

ಸಾರನಾಥ್, ಬುದ್ಧಗಯಾ ಇಲ್ಲಿಗೆ ಭೇಟಿ ನೀಡಬೇಕೆಂಬ ಅನೇಕ ವರ್ಷಗಳ ನನ್ನ ಮಹದಾಸೆ ಕೊನೆಗೂ ಪೂರೈಸಿತ್ತು. ನಮ್ಮ ಟೂರ್ ಮ್ಯಾನೇಜರ್ ಬುದ್ಧಗಯೆಯ ವಿಶಾಲ ಬುದ್ಧಮಂದಿರದ ಬಳಿ ನಮ್ಮನ್ನು ಬಸ್ಸಿಂದ ಇಳಿಸಿ ‘ಇಲ್ಲಿ ಹಲವು ದೇಶಗಳ ಬುದ್ಧ ಮಠಗಳಿವೆ. ನಿಮಗೆ ಎಷ್ಟು ಸಾಧ್ಯವೋ ನೋಡಿಕೊಂಡು ಬನ್ನಿ. ಕಟ್ಟಕಡೆಗೆ ಮಹಾಬೋಧಿ ವಿಹಾರ ನೋಡುವಿರಂತೆ. ಅಲ್ಲಿಯೇ ಬುದ್ಧನಿಗೆ ಜ್ಞಾನೋದಯವಾದದ್ದು’ ಎಂದು ಹೇಳಿ ಹೊರಟು ಹೋದ.

ಲೋಕದ ಚೇಷ್ಟೆಗೆ ಬೀಜವಾದವನು ಸೂರ್ಯ. ಅದೇ ಹೊತ್ತಿಗೆ ಲೋಕದ ಚೇಷ್ಟೆಗಳಿಂದ ಬಿಡುಗಡೆ ಬಯಸಿದವನು ಈ ಬುದ್ಧ. ಈ ಎರಡು ಬೆಳಕುಗಳ ನಡುವೆ ಹೊಯ್ದಾಡುತ್ತಿರುವ ನಮಗೆ ಅದೆಂತು ಬಿಡುಗಡೆಯೋ ಎಂದುಕೊಳ್ಳುತ್ತಾ ಟಿಬೆಟ್, ಬರ್ಮಾ, ಇಂಡೊನೇಸಿಯಾ, ಮಲೇಸಿಯಾ, ಜಪಾನ್, ಚೀನಾ ಮುಂತಾದ ದೇಶಗಳ ಬೌದ್ಧಮಠಗಳನ್ನು ಸಂದರ್ಶಿಸಿದೆವು. ವಿಶಾಲ ಬುದ್ಧ ಮಂದಿರದ 94 ಅಡಿ ಎತ್ತರದ ಭವ್ಯವೆನಿಸುವ ಬುದ್ಧ ಪ್ರತಿಮೆಯನ್ನು ಹೊರತುಪಡಿಸಿದರೆ ಮಿಕ್ಕ ಬುದ್ಧ ಪ್ರತಿಮೆಗಳು ಒಂದೇ ತೆರನಾಗಿ ಇದ್ದುದರಿಂದ ನನ್ನ ಸಹಯಾತ್ರಿಕರಲ್ಲಿ ಇವು ಅಷ್ಟೇನೂ ಉತ್ಸಾಹ ಹುಟ್ಟಿಸಲಿಲ್ಲ. ನನ್ನ ಕಲ್ಪನೆಯ ಬುದ್ಧನ ರೂಪು ಇಲ್ಲಿ ಯಾವ ಬುದ್ಧನಲ್ಲೂ ಕಾಣದೆ ನಾನೂ ಅಶಾಂತಿಗೆ ಒಳಗಾಗಿದ್ದೆ… ಪದ್ಮಪತ್ರದ ಮೇಲಣ ಜಲಬಿಂದುವಿನಂತೆ ಬದುಕಿ ಎಂದು ಬುದ್ಧ ಹೇಳಿದ್ದನಷ್ಟೆ. ನಾನೋ ಬುದ್ಧನ ವಿಗ್ರಹಗಳ ಬಗೆಗೇ ಮೋಹಗೊಂಡು ಅದರ ಹಿಂದೆ ಬಿದ್ದಿದ್ದೆ! ಮನೆ ತುಂಬ ವಿವಿಧ ಮುಖ ಭಾವ ಭಂಗಿಗಳ, ಗಾತ್ರಗಳ ಬುದ್ಧರು ಇಡಿಕಿರಿದಿದ್ದರೂ ಅತ್ತಿತ್ತ ಎತ್ತೆತ್ತಲೋ ಕಣ್ಣು ಹಾಯಿಸಿ ಹೊಸ ಚಹರೆಯ ಬುದ್ಧನ ಹುಡುಕಾಟದಲ್ಲಿ ತೊಡಗಿದ್ದೆ!

ನನಗಾಗಿಯೇ ಕಾದಿದ್ದವರಂತೆ ಎಂಟು ಹತ್ತು ವರುಷಗಳ ನಾಲ್ವರು ಬಾಲಕರು ನನ್ನನ್ನು ಸುತ್ತುವರೆದು ಕಿರುಬೆರಳು ಗಾತ್ರದ ಗಾಜಿನ ಪೆಟ್ಟಿಯೊಳಗೆ ಬಂಧಿಯಾದ ಬುದ್ಧನ ಕಿರುಮೂರ್ತಿಗಳನ್ನು ನನ್ನ ಮುಂದೆ ಒಡ್ಡಿದರು. ಮೋಸ-ತಟವಟ ಅರಿಯದಂತಿದ್ದ ಆ ಮಕ್ಕಳು ‘ಕೇವಲ ಐದೇ ರೂಪಾಯಿ ಮೇಡಂ’ ಎಂದು ಸರಿಯಾದ ಬೆಲೆಯನ್ನು ಹೇಳಿದಂತಿತ್ತು. ನಾನು ಭೇದವೆಣಿಸದೆ ನಾಲ್ವರ ಹತ್ತಿರವೂ ತಲಾ ಐದೈದು ಬುದ್ಧನನ್ನು ಖರೀದಿಸಿ ಅವರನ್ನು ಖುಷಿಪಡಿಸಿ ನನ್ನ ಜೋಳಿಗೆ ತುಂಬಾ ಬುದ್ಧನನ್ನು ತುಂಬಿಕೊಂಡು ಮಹಾ ಬೋಧಿ ವಿಹಾರದತ್ತ ಹೆಜ್ಜೆ ಹಾಕಿದೆ.

ಬುದ್ಧ ಜ್ಞಾನೋದಯ ಹೊಂದಿದ ಮೂಲ ಅರಳಿ ಮರದ ಸಸಿಯ ಸುತ್ತ ಭದ್ರವಾದ ಉಕ್ಕಿನ ಬೇಲಿ ಹಾಕಿದ್ದರಿಂದ ಆ ಮರದ ಒಂದು ಎಲೆಯನ್ನಾದರೂ ಒಯ್ಯಬೇಕೆಂದಿದ್ದ ನನ್ನ ಆಸೆ ಈಡೇರಲಿಲ್ಲ. ಮಹಾ ಬೋಧಿ ವಿಹಾರದ ಸುತ್ತಮುತ್ತ ಸಾಕಷ್ಟು ಮರಗಿಡಗಳು ಬಣ್ಣ ಬಣ್ಣದ ಹೂವಿನ ಗಿಡಗಳು ಇದ್ದು, ಪರಿಸರ ಸ್ವಚ್ಛವಾಗಿದ್ದು ಮನಸ್ಸಿಗೆ ಶಾಂತಿ ನೀಡುವಂತಹ ವಾತಾವರಣವಿತ್ತು. ವಿಹಾರದ ಒಳಗೆ ಸ್ವರ್ಣಲೇಪಿತ ಬುದ್ಧನ ಬೃಹತ್ ವಿಗ್ರಹವಿದ್ದು; ಎಲ್ಲೆಲ್ಲೂ ಶಿಸ್ತು-ಸಂಯಮ ಆವರಿಸಿತ್ತು, ವಿವಿಧ ದೇಶಗಳಿಂದ ಬಂದ ಭಕ್ತರು ಮೌನವಾಗಿ ಬುದ್ಧನ ಮುಂದೆ ಧ್ಯಾನದಲ್ಲಿ ಮುಳುಗಿದ್ದರು. ನಾನೂ ನನ್ನ ಸಹಯಾತ್ರಿಕರು ಸಹ ಅವರೊಂದಿಗೆ ಸೇರಿ ಕಣ್ಮುಚ್ಚಿ ಕುಳಿತುಕೊಂಡೆವು. ಸದಾಚಾರ, ಸದಾಶಯ, ಸನ್ನುಡಿ, ಸನ್ನಡತೆ, ಸಜ್ಜೀವನ ಸತ್ಪ್ರಯತ್ನ, ಸದ್ಭಾವನೆ, ಸತ್ಪ್ರಾರ್ಥನೆ ಏನೆಲ್ಲ ಕುರಿತು ಎರಡು ಸಾವಿರದ ಐನೂರು ವರ್ಷಗಳ ಹಿಂದೆ ಬುದ್ಧ ಹೇಳಿದ್ದನೋ ಅದನ್ನು ಅರುಹಿದ ಜಾಗೆಯಲ್ಲಿಯೇ ನಾನೂ ಸಹ ಇಂದು ಕುಳಿತುಕೊಂಡಿರುವೆನಷ್ಟೆ… ಇನ್ನು ಮುಂದಾದರೂ ಇವನ್ನೆಲ್ಲ ಪಾಲಿಸುವ ಇಚ್ಛೆ ತೋರಬೇಕು ಎಂದು ಮನಸ್ಸಿನಲ್ಲೇ ಸಂಕಲ್ಪಿಸಿದೆನು.

ಪ್ರತಿಯೊಂದು ಜೀವಕ್ಕೂ ತನ್ನದೇ ಮೂಲ ಸ್ವಭಾವ ಇರುವುದರಿಂದ ಅದು ಪಟ್ಟಾಗಿ ತನ್ನದೇ ಮನೋಧರ್ಮವನ್ನು ಅನುಸರಿಸುವುದರಿಂದ ಎಷ್ಟು ಕಷ್ಟಪಟ್ಟರೂ ಬುದ್ಧನನ್ನು ಅನುಸರಿಸಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಕಳವಳವೂ ಮನಸ್ಸಿನಲ್ಲಿ ಮೂಡಿತು. ಅಷ್ಟಕ್ಕೂ ಬೌದ್ಧ ಧರ್ಮವನ್ನು ಬುದ್ಧನಲ್ಲದೆ ಮತ್ತಾರಾದರೂ ನಿಜಾರ್ಥದಲ್ಲಿ ಆಚರಿಸಿವರೇ?! ಸ್ವತಃ ಬುದ್ಧನೇ ತನ್ನ ವಿಚಾರಗಳನ್ನು ಸರಿಯಾಗಿ ಪರೀಕ್ಷಿಸಿದ ನಂತರವೇ ಆಚರಿಸಿರಿ ಎಂದು ಹೇಳಿದ್ದನಲ್ಲವೇ? ಹೀಗೆ ನನ್ನ ಸೋಲಿಗೆ ಏನೆಲ್ಲ ಕಾರಣಗಳನ್ನು ಕಂಡುಕೊಳ್ಳುತ್ತಾ ಬುದ್ಧರಿಂದ ತುಂಬಿದ ಜೋಳಿಗೆಯನ್ನು ಎದೆಗಪ್ಪಿಕೊಂಡು ಅವನ್ನೆಲ್ಲ ಊರಿಗೆ ಹೋದ ನಂತರ ನನ್ನ ಪ್ರೀತಿಪಾತ್ರರಿಗೆಲ್ಲ ಹಂಚುವ ಭಾವನೆಯೊಂದಿಗೆ ಮಹಾಬೋಧಿ ವಿಹಾರದಿಂದ ಹೊರಬಂದೆ.

ಮಹಾಬೋಧಿ ವಿಹಾರದ ಹೊರಗೆ ಸಾಲು ಅಂಗಡಿಗಳಿದ್ದು, ಒಮ್ಮೆ ಕಣ್ಣು ಹಾಯಿಸಿದ್ದೇ, ಒಂದು ಹುಣಿಸೆ ಬೀಜದ ಗಾತ್ರದ ಬುದ್ಧ ಕಣ್ಣಿಗೆ ಬೀಳಬೇಕೆ! ಹುಟ್ಟು-ಸಾವಿನಿಂದ ಮುಕ್ತಗೊಳ್ಳುವ ಮೊದಲು ಈ ಬುದ್ಧನ ಗೀಳಿನಿಂದ ಹೊರಬರಬೇಕು ಎನಿಸದಿರಲಿಲ್ಲ. ಕಾಶಿಗೆ ಹೋದವರು ಪ್ರಿಯವಾದದನ್ನು ಬಿಟ್ಟುಬರುವ ಪರಿಪಾಠವಿದೆಯಂತೆ. ಈ ಬುದ್ಧಗಯೆಯಲ್ಲಿ ಬುದ್ಧನನ್ನೇ ಬಿಟ್ಟುಬರಬೇಕೆಂದುಕೊಳ್ಳುತ್ತಾ ಹಿಂದೆ ನೋಡದೆ ಮುನ್ನಡೆದೆ.

ನಮ್ಮ ಪ್ರವಾಸ ಕಾರ್ಯಕ್ರಮದಲ್ಲಿ ಸಾರನಾಥದ ಭೇಟಿ ಸೇರಿರದಿದ್ದರೂ, ನಾವೇ ಐದಾರು ಜನ ಪ್ರತ್ಯೇಕ ವಾಹನ ಮಾಡಿಕೊಂಡು ಅಲ್ಲಿಗೆ ಭೇಟಿ ಇತ್ತೆವು. ಸಿದ್ಧಾರ್ಥ ಬುದ್ಧನಾಗಿ ಪ್ರಪ್ರಥಮವಾಗಿ ಐವರು ಬ್ರಾಹ್ಮಣ ವಟುಗಳಿಗೆ ಉಪದೇಶ ನೀಡಿದ ಗುಡ್ಡವಿರುವ ಜಾಗವದು. ಗುಡ್ಡವನ್ನೀಗ ಒಂದು ಸ್ಮಾರಕವಾಗಿ ಅಭಿವೃದ್ಧಿಪಡಿಸಲಾಗಿದೆ. ಅಲ್ಲಿ ನಳಂದ ವಿಶ್ವವಿದ್ಯಾಲಯದ ಅವಶೇಷಗಳಿದ್ದು, ವಸ್ತುಸಂಗ್ರಹಾಲಯದಲ್ಲ್ಲಿ ವಿವಿಧ ಕಾಲಘಟ್ಟಗಳ ಆಕರ್ಷಕ ಬುದ್ಧ ಪ್ರತಿಮೆಗಳನ್ನೂ ಮತ್ತು ಇತರ ವಸ್ತುಗಳನ್ನೂ ಇಡಲಾಗಿದೆ. ಅಖಂಡ ಶಿಲೆಯಿಂದ ಕಡೆದಿರುವ ಬುದ್ಧನ ಸಂದೇಶ ಹೊತ್ತ 128 ಅಡಿಗಳೆತ್ತರದ, 93 ಅಡಿ ವ್ಯಾಸದ ಧಮ್ಮಿಕ ಸ್ತೂಪವನ್ನೂ, ಬುದ್ಧನ ಧರ್ಮ ಸಂದೇಶವನ್ನು ಸಾರಲು ಸ್ಥಾಪಿಸಿರುವ ಅಶೋಕ ಸ್ತಂಭವನ್ನೂ ನಾವು ವೀಕ್ಷಿಸಿದೆವು. ಈ ಅಶೋಕ ಸ್ತಂಭದ ಮೇಲೆ ಕಡೆಯಲ್ಪಟ್ಟಿರುವ ಧರ್ಮಚಕ್ರವೇ ಮುಂದೆ ನಮ್ಮ ಸ್ವತಂತ್ರ ಭಾರತದ ಲಾಂಛನವಾಗಿ ಭಾರತದ ಸ್ವಾತಂತ್ರ್ಯ, ಏಕತೆ ಮತ್ತು ಜಾತ್ಯತೀತ ರಾಷ್ಟ್ರೀಯ ಹೆಮ್ಮೆ ಸಂಕೇತವಾಗಿ ಕಂಗೊಳಿಸುತ್ತಿರುವುದು.

ಯಾರು ಹೇಳಿದರು ಬೌದ್ಧ ಧರ್ಮವನ್ನು ಭಾರತದಿಂದ ಓಡಿಸಲಾಗಿದೆಯೆಂದು?

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...