Share

ಅನಾರೋಗ್ಯದ ಆಸರೆ!
ಡಿ ಎಂ ಹೆಗಡೆ

 

ಆರೋಗ್ಯವನ್ನು ಪ್ರೀತಿಸುವವರಿರುವಂತೆಯೇ, ಅನಾರೋಗ್ಯವನ್ನು ಪ್ರೀತಿಸುವವರಿರುತ್ತಾರೆ! ತಮ್ಮ ಮನಸ್ಸು ಹಾಗೂ ಶರೀರದಲ್ಲಿ ಅನಾರೋಗ್ಯವನ್ನು ಸಲಹುತ್ತ ಇರುತ್ತಾರೆ. ಇವರು ಅನಾರೋಗ್ಯದ ಆಸರೆಯನ್ನು ಪಡೆದುಕೊಂಡಿರುತ್ತಾರೆ!

 

 

ನಾವೆಲ್ಲರೂ ಆರೋಗ್ಯಪೂರ್ಣ ಜೀವನವನ್ನು ಇಷ್ಟಪಡುತ್ತೇವೆ. ಆರೋಗ್ಯವಂತರಾಗಿರಬೇಕೂಂತ ಆಶಿಸುತ್ತೇವೆ. ಅದಕ್ಕಾಗಿಯೇ ಬಹಳಷ್ಟು ಶ್ರಮಪಡುತ್ತೇವೆ. ‘ಆರೋಗ್ಯವೇ ಭಾಗ್ಯ’ ಅಂತ ನಂಬಿಕೊಂಡಿದ್ದೇವೆ. ಬದುಕಿನ ಎಲ್ಲಾ ಭಾಗ್ಯಗಳನ್ನು ಅನುಭವಿಸಲಿಕ್ಕೆ ಆರೋಗ್ಯಭಾಗ್ಯ ಇರಬೇಕು ಎನ್ನುವುದನ್ನು ಕಂಡುಕೊಂಡಿದ್ದೇವೆ. ಆರೋಗ್ಯವಂತರ ಶರೀರದ ಠೇಂಕಾರ ಮತ್ತು ಅವರ ಮನಸ್ಸಿನ ಉತ್ಸಾಹವನ್ನು ನೋಡುವುದೇ ಚಂದ. ಅವರ ಜೀವನೋತ್ಸಾದ ಕಾಂತಿಯೇ ಚಂದ. ಆರೋಗ್ಯವಂತ ವ್ಯಕ್ತಿ ನಿಂತಲ್ಲಿ, ಕೂತಲ್ಲಿ ಸೌಂದರ್ಯ ಹೊರಹೊಮ್ಮುತ್ತದೆ. ಸುತ್ತಲಿನವರ ಕಣ್ಣೋಟ ಕ್ಷಣಕ್ಕಾದರೂ ಅವರನ್ನು ಆವರಿಸುತ್ತದೆ. ಅಕಸ್ಮಾತ್ ಆರೋಗ್ಯವೇ ಸರಿಯಾಗಿ ಇಲ್ಲದಿದ್ದರೆ, ಏನೀದ್ದರೇನು ಪ್ರಯೋಜನ? ಆರೋಗ್ಯವಿಲ್ಲದರ ಬದುಕಿನಲ್ಲಿ ಸಂತೋಷ ಇರುವುದಿಲ್ಲ. ಸಂತೋಷವಿಲ್ಲದ ಬದುಕನ್ನು ಯಾರೂ ಬಯಸುವುದಿಲ್ಲ. ಇದು ನಮ್ಮೆಲ್ಲರ ಬದುಕಿನ ರೀತಿ.

ಈ ಆಲೋಚನೆಗೆ ತೀರಾ ಭಿನ್ನವಾದ ಬಹಳ ವಿಚಿತ್ರವಾದ ಇನ್ನೊಂದು ವಿಷಯವಿದೆ. ಅದನ್ನು ಕೇಳಿದರೆ, ‘ಹೀಗೂ ಉಂಟೇ!?’ ಅಂತ ನೀವು ಹುಬ್ಬೇರಿಸಬಹುದು. ಆರೋಗ್ಯವನ್ನು ಪ್ರೀತಿಸುವವರಿರುವಂತೆಯೇ, ಅನಾರೋಗ್ಯವನ್ನು ಪ್ರೀತಿಸುವವರಿರುತ್ತಾರೆ! ತಮ್ಮ ಮನಸ್ಸು ಹಾಗೂ ಶರೀರದಲ್ಲಿ ಅನಾರೋಗ್ಯವನ್ನು ಸಲಹುತ್ತ ಇರುತ್ತಾರೆ. ಇವರು ಅನಾರೋಗ್ಯದ ಆಸರೆಯನ್ನು ಪಡೆದುಕೊಂಡಿರುತ್ತಾರೆ! ಅನಾರೋಗ್ಯವನ್ನು ಆಕರ್ಷಿಸುತ್ತ ಇರುತ್ತಾರೆ.

ಹೀಗೆ ಹೇಳಿದರೆ ತಕ್ಷಣಕ್ಕೆ ನೀವು ನಂಬಲಾರಿರಿ. ಇಂತಹ ವ್ಯಕ್ತಿಗಳ ಲಕ್ಷಣವನ್ನು ಹೇಳಿದರೆ, ನೀವು ನಿಮ್ಮ ಪರಿಚಯದವರಲ್ಲಿ ಅಥವಾ ನಿಮ್ಮ ನೆರೆಹೊರೆಯಲ್ಲಿ ಇರಬಹುದಾದ ಇಂತಹವರನ್ನು ಗುರುತಿಸಬಹುದು. ಅಕಸ್ಮಾತ್ ನಿಮ್ಮಲ್ಲಿಯೇ ಇಂತಹ ಗುಣಲಕ್ಷಣಗಳು ಕಂಡುಬಂದರೆ ಪ್ರಾಮಾಣಿಕವಾಗಿ ಗಮನಿಸಿಕೊಳ್ಳಬಹುದು.
ಅನಾರೋಗ್ಯ ಪ್ರಿಯರನ್ನು ನೀವು ಯಾವಾಗ ಮಾತನಾಡಿಸಿದರೂ ಕೂಡ, ಅವರು ತಮ್ಮ ಅನಾರೋಗ್ಯದ ಬಗ್ಗೆಯೇ ಮಾತನಾಡುತ್ತಾರೆ. ತಮ್ಮ ಅನಾರೋಗ್ಯಕ್ಕೆ ಸಾಕಷ್ಟು ಕಾರಣಗಳನ್ನು ಕೊಡುತ್ತಾರೆ. ನಿಮ್ಮಿಂದ ಒಂದಿಷ್ಟು ಸಾಂತ್ವನದ ಮಾತುಗಳನ್ನು ಅಪೇಕ್ಷಿಸುತ್ತಾರೆ. ಹಾಗಂತ ಅವರಲ್ಲಿ ಬಹುತೇಕರಿಗೆ ತಾವು ಬುದ್ಯಾಪೂರ್ವಕವಾಗಿ ನೋವಿನ ಆಸರೆಯನ್ನು ಪಡೆದುಕೊಂಡಿರುವ ಬಗ್ಗೆ ಖಂಡಿತವಾಗಿಯೂ ತಿಳಿದಿರುವುದಿಲ್ಲ. ಹಾಗಾಗಿ ನೋವು ಮಾತ್ರ ಅವರ ವ್ಯಕ್ತಿತ್ವದ ಅಂಗವಾಗಿರುತ್ತದೆ. ಅನಾರೋಗ್ಯವಿಲ್ಲದೇ (ನೋವಿಲ್ಲದೇ) ಅವರಿಲ್ಲ ಅಂತಾಗಿರುತ್ತದೆ.

‘ಚೆನ್ನಾಗಿದ್ದೀರಾ?’ ಅಂತ ನೀವು ಕೇಳಿದರೆ ಸಾಕು, ಅವರು, ‘ಏನೂ ಇದ್ದೀನಪ್ಪಾ. ಏನು ಚೆನ್ನವೋ ಏನೋ, ಬೆಳಗ್ಗೆ ಹಾಸಿಗೆಯಿಂದ ಏಳುವಾಗಲೇ ಈ ತಲೆನೋವು ಹಿಡಿದುಕೊಂಡಿರುತ್ತದೆ! ಇಡೀ ದಿನ ನರಕಯಾತನೆ..’ ಅಂತ ಹೇಳುತ್ತಾರೆ. ಇನ್ನು ಕೆಲವರು, ‘ಹೊಟ್ಟೆಯಲ್ಲಿ ಒಂಥರಾ ಕಿರಿಕಿರಿಯಾಗುತ್ತಿದೆ, ಮಾರಾಯಾ! ಹಸಿವಾಗುತ್ತದೆ. ಆದರೆ, ತಿನ್ನಲಿಕ್ಕೆ ಮನಸ್ಸಾಗುವುದಿಲ್ಲ’ ಅಂತ ಎರಡು ಸುತ್ತು ತಮ್ಮ ಹೊಟ್ಟೆಯನ್ನು ನೀವಿಕೊಳ್ಳುತ್ತಾರೆ. ಮತ್ತೆ ಕೆಲವರು ತಮ್ಮ ಅನಾರೋಗ್ಯದ ಬಗ್ಗೆ ಹೇಳುತ್ತಾ, ನಿಮ್ಮ ಆರೋಗ್ಯದ ಬಗ್ಗೆ ತಮ್ಮದೇ ರೀತಿಯಲ್ಲಿ ಕೊಂಕು ಮಾತನಾಡುತ್ತಾರೆ. ನೀವು ಅವರಿಗೆ ಲೋಕಾರೂಢಿಯ ಮಾತುಗಳನ್ನಾಡಿಯೋ, ನಿಮ್ಮನ್ನು ಹಿಂದೊಮ್ಮೆ ಕಾಡಿದ್ದ ಹೊಟ್ಟೆಯ ತೊಂದರೆಯ ಬಗ್ಗೆ ನಾಲ್ಕು ಮಾತುಗಳನ್ನಾಡಿಯೋ, ಅವರಿಗೆ ಧೈರ್ಯ ಹೇಳುತ್ತೀರಿ. ಇನ್ನಷ್ಟು ಕಾಳಜಿಪೂರ್ವಕವಾಗಿ ಅವರಿಗೆ ‘ನೀವು, ಆಸ್ಪತೆಗ್ರೆ ಹೋಗಿದ್ದೀರಾ? ಒಳ್ಳೆಯ ವೈದ್ಯರಿಗೆ ತೋರಿಸಿದ್ದೀರಾ?’ ಅಂತ ಕೇಳಿದರೋ, ಅವರ ನೋವಿನ ಇತಿಹಾಸ ಹಾಗೂ ಅವರ ದುರದೃಷ್ಟದ ಪುರಾಣವನ್ನು ಶುರುಮಾಡುತ್ತಾರೆ. ‘ಎಷ್ಟೊಂದು ಆಸ್ಪತ್ರಗಳಿಗೆ ಅಲೆದದ್ದಾಯಿತು. ಎಷ್ಟೊಂದು ಡಾಕ್ಟರಗೆ ತೋರಿಸಿದ್ದಾಯಿತು. ಯಾವ ಡಾಕ್ಟರಿಂದಲೂ ಕಡಿಮೆ ಮಾಡಕಾಗಿಲ್ಲರೀ!’ ಅಂತ ಒಂದಿಷ್ಟು ಹೆಮ್ಮೆಯಿಂದಲೇ ಮಾತನಾಡುತ್ತಾರೆ. ‘ವರ್ಷಗಳಿಂದ ಎಷೆಲ್ಲ ಔಷಧಿ – ಮಾತ್ರೆ ತಿಂದಿದ್ದಾಯಿತು ಕಡಿಮೆನೇ ಆಗುತ್ತಿಲ್ಲ ಕರ್ಮದ್ದು’ ಅಂತ ವಿಷಾದದಿಂದಲೂ ಹೇಳುತ್ತಾರೆ. ಎಷ್ಟೂಂತ ಡಾಕ್ಟರಿಗೆ ತೋರಿಸೋದು, ಎಷ್ಟೂಂತ ಗುಳಿಗೆ ತಿನ್ನೋದು? ಪೇನ್ ಕಿಲ್ಲರ್ ತಿಂದಾಗ ಸ್ವಲ್ಪ ಆರಾಮಂತನ್ನಿಸುತ್ತದೆ. ಅದರ ಪ್ರಭಾವ ಮುಗಿಯುತ್ತಿದ್ದಂತೆಯೇ ಮತ್ತೆ ನೋವು ಶುರುವಾಗುತ್ತದೆ. ಹೀಗೇ ದಿನಕಳೆಯಬೇಕೂಂತ ಹಣೆಯಲ್ಲಿಯೇ ಬರೆದಿದೇಂತ ಕಾಣುತ್ತದೆ! ಅಂತ ಮತ್ತೂ ನರಳುತ್ತಾರೆ. ಅವರ ನೋವಿನ ಕತೆಗೆ ಬಹಳ ವರ್ಷಗಳ ಇತಿಹಾಸವೂ ಇರುತ್ತದೆ. ಅವಕ್ಕೆ ಅವರದ್ದೇ ಆದ ಪ್ರಮಾಣವೂ ಇರುತ್ತದೆ. ಅವರು ಅನುಭವಿಸುತ್ತಿರುವ ತಲೆನೋವು, ಕಾಲುನೋವು, ಅಂಗಾಲಿನ ಉರಿ, ಆಗಾಗ ಕೈಕಾಲು ನಡುಗುವುದು ಅಥವಾ ಬೇರೆ ಯಾವುದೋ ನೋವು ಅವರ ಮುಖದಲ್ಲಿಯೇ ನಿಮಗೆ ಕಾಣುತ್ತದೆ.
ಅವರು ಯಾವಾಗಲೂ ತಮ್ಮ ಮುಖದಲ್ಲಿ ಯಾತನೆಯನ್ನು ವ್ಯಕ್ತಪಡಿಸುತ್ತಲೇ ಇರುತ್ತಾರೆ. ತಮ್ಮ ಯಾತನೆಯಿಂದ ತಮ್ಮ ಮನೆಯವರಿಗೂ ನೆಮ್ಮದಿಯಿಲ್ಲ ಅಂತಲೂ ಅವರು ಹೇಳುತ್ತಾರೆ. ಮನುಷ್ಯರಾಗಿ ಹುಟ್ಟಿದ ನಂತರ ಯಾವಾಗಲೂ ಆರೋಗ್ಯವಾಗಿ, ಯಾವಾಗಲೂ ಸಂತೋಷದಿಂದ ಇರಕಾಗುತ್ಯೇ? ಅಂತಲೂ ಕೆಲವರು ಪ್ರಶ್ನಿಸುತ್ತಾರೆ. ಕಳೆದ ಜನ್ಮದ್ದೋ, ಈ ಜನ್ಮದ್ದೋ ಕರ್ಮವನ್ನು ಅನುಭವಿಸುತ್ತ ಬದುಕಬೇಕು, ಅಂತೆಲ್ಲ ಅರೆವೇದಾಂತವನ್ನೂ ಮಾತನಾಡುತ್ತಾರೆ. ಆದರೆ ಅನಾರೊಗ್ಯದ ಆಸರೆಯಿಂದ ಹೊರಗೆ ಬರುವದಕ್ಕಾಗಿ ಅವರು ಪ್ರಾಮಾಣಿಕ ಪ್ರಯತ್ನವನ್ನೇನೂ ಮಾಡುವುದಿಲ್ಲ. ತಮ್ಮ ತಲೆನೋವನ್ನೇ ಅವರು ತಮ್ಮ ಐಡೆಂಟಿಟಿಯನ್ನಾಗಿ ಮಾಡಿಕೊಂಡಿರುತ್ತಾರೆ. ತಮ್ಮ ಕಾಲುನೋವು ಕಡಿಮೆಯಾಗಿಬಿಟ್ಟರೆ ತನ್ನನ್ನು ಯರೂ ಗಮನಿಸುವುದಿಲ್ಲ ಅಂತ ಅಂದುಕೊಂಡಿರುತ್ತಾರೆ. ದಿನಕೆಳೆದಂತೆ ಅವರ ನೋವು ಬಂಗಾರದ ಬೆಲೆಯಂತೆ ಏರುತ್ತಲೇ ಇರುತ್ತದೆ!

‘ನಿಮಗಂತೂ ನನ್ನ ತಲೆನೋವಿನ ಬಗ್ಗೆ ಕಾಳಜಿಯೇ ಇಲ್ಲ! ನೀವಾಯಿತು, ನಿಮ್ಮ ಕೆಲಸವಾಯಿತು’ ಅಂತ ಹೇಳುವ ಹೆಂಡತಿಯನ್ನೋ, ‘ನನ್ನ ಅನಾರೋಗ್ಯದ ಬಗ್ಗೆ, ನನ್ನ ಟೆನ್ಶನ್ ಬಗ್ಗೆ ನಿನಗೆ ಒಂದಿಷ್ಟೂ ಕಾಳಜಿಯೇ ಇಲ್ಲ. ಯಾವಾಗ ನೋಡಿದರೂ ಶಾಪಿಂಗ್, ಮೀಟಿಂಗು, ದೇವಸ್ಥಾನ ಅಂತಿರ್ತೀಯಾ!’’ ಎನ್ನುವ ಮಧ್ಯವಯಸ್ಕ ಗಂಡನನ್ನೋ ನೋಡಿರುತ್ತೀರಿ. ಇವರ ಮಾತುಗಳಲ್ಲಿಯೇ ಇವರ ಸಮಸ್ಯೆಯ ಪರಿಚಯ ಹಾಗೂ ಅದರ ಪರಿಹಾರೋಪಾಯ ಇರುತ್ತದೆ. ಅದನ್ನು ಸಂಬಂಧಪಟ್ಟವರು ಅರ್ಥಮಾಡಿಕೊಂಡು ಅದಕ್ಕೆ ಪೂರಕವಾಗಿ ಸ್ಪಂದಿಸಬೇಕಾಗುತ್ತದೆ.

ಇನ್ನು ಕೆಲವರಿಗೆ ಅಮಾವಾಸ್ಯೆ-ಹುಣ್ಣಿಮೆ ಸಮಯದಲ್ಲಿ (ಕೆಲವು ಹೆಂಗಸರಿಗೆ ಋತುಸ್ರಾವದ ದಿನಗಳಲ್ಲಿ) ಇಂತಹ ಭಾವಾತಿರೇಕಗಳು ಉದ್ರೇಕಗೊಳ್ಳುತ್ತವೆ. ಖಿನ್ನತೆಗೆ ಒಳಗಾಗುತ್ತಾರೆ. ಅಸಹನೆಯಿಂದ ಸಿಡಿಮಿಡಿಗೊಳ್ಳುತ್ತಾರೆ. ಮನೆಯವರು ತನ್ನ ಬಗ್ಗೆ ಒಂದಿಷ್ಟೂ ಕಾಳಜಿಯನ್ನು, ಆಸ್ತೆಯನ್ನು ತೋರಿಸುವುದಿಲ್ಲ ಅಂತ ಅಂದುಕೊಳ್ಳುತ್ತಾರೆ. ಇವರಿಗೆ ಚಿಕ್ಕ ಪುಟ್ಟ ವಿಷಯಕ್ಕೂ ಕೋಪ ಬರುತ್ತದೆ. ಅವರು ಇರುವ ಪರಿಸರವನ್ನಲವಲಂಬಿಸಿ ಅವರ ಕೋಪದ ತೀವ್ರತೆ ವ್ಯಕ್ತವಾಗುತ್ತದೆ. ಮಕ್ಕಳನ್ನು, ಸಂಗಾತಿಯನ್ನು, ಪಾಲಕರನ್ನು ಬೈಯತ್ತಿರುತ್ತಾರೆ.
ಸಾರಿಗೆ ಉಪ್ಪು ಕಡಿಮೆಯಾಯಿತೆಂದೋ, ಕಾಫಿಗೆ ಪೌಡರು ಜಾಸ್ತಿಯಾಯಿತೆಂದೋ, ಸಂತೆಯಿಂದ ತಂದ ತರಕಾರಿ ಒಣಗಿದೆಯೆಂದೋ, ಮೊಬೈಲಿನಲ್ಲಿ ನಗುನಗುತ್ತ ಉಲಿಯುವವರು ತನ್ನತ್ರ ಮಾತ್ರ ಸಿಡುಕುತ್ತಾರೆಂದೋ… ಹೀಗೇ ನೂರಾರು ನವನವೀನ ಕಾರಣಗಳನ್ನು ಹುಡುಕಿ, ಹೆಕ್ಕಿ ಹರಿತವಾದ ಮಾತಿನಿಂದ ತನ್ನ ಮನೆಯವರನ್ನು ಝಾಡಿಸುತ್ತಿರುತ್ತಾರೆ. ತನ್ನ ನೋವು ಕಡಿಮೆಯಾಗದೇ ಇರಲಿಕ್ಕೆ ಇನ್ನೊಬ್ಬ ವ್ಯಕ್ತಿಯನ್ನಾಗಲೀ, ಬದಲಾದ ಹವಾಮಾನವನ್ನಾಗಲೀ, ಕಾರಣವನ್ನಾಗಿಯೂ ಮಾಡಿಕೊಂಡಿರುತ್ತಾರೆ. ಬಹಳಷ್ಟು ಸಂದರ್ಭಗಳಲ್ಲಿ ಅವರ ನೋವಿಗೆ ಅವರಿಗೆ ತೀರಾ ಅಪ್ತವಾಗಿ ಸಂಬಂಧಪಟ್ಟ ವ್ಯಕ್ತಿಯೇ ಆಗಿರುತ್ತಾರೆ. ಆ ವ್ಯಕ್ತಿಯ ಬಗ್ಗೆ ಅಥವಾ ಕಾರಣದ ಬಗ್ಗೆ ಅವರು ಆಗಾಗ ಸೂಚ್ಯವಾಗಿ ಹೇಳುತ್ತಲೂ ಇರುತ್ತಾರೆ. ಆದರೆ ಸ್ಪಷ್ಟವಾಗಿ ಮಾತ್ರ ಆ ವ್ಯಕ್ತಿಯ ಬಗ್ಗೆ ಅವರು ಹೇಳುವುದಿಲ್ಲ.

ಅದೇ ನೋವಿನಲ್ಲಿ ಕೆಲವು ವರ್ಷಗಳು ಕಳೆಯುತ್ತವೆ. ಅಷ್ಟರಲ್ಲಿ ಅವರ ಮುಖಭಾವವೇ ಬದಲಾಗಿಹೋಗಿರುತ್ತದೆ. ಆಕರ್ಷಕವಾಗಿದ್ದ ಅವರ ಮುಖ ಅನಾಕರ್ಷಕವಾಗಿಬಿಟ್ಟಿರುತ್ತದೆ. ಕಣ್ಣುಗಳಲ್ಲಿ ಗಾಬರಿ ಕಾಣಿಸುತ್ತದೆ. ಅಂತರಂಗದಲ್ಲಿ ಅವರಿಗೆ ದಿಗಿಲು, ಆತಂಕ ತುಂಬಿರುತ್ತದೆ. ಅಂತಹ ವ್ಯಕ್ತಿಗಳು ಬದುಕಿನ ಭವ್ಯತೆಯನ್ನು, ಬದುಕಿನ ಮಹತ್ವವನ್ನು ಮರೆತಿರುತ್ತಾರೆ. ತಮ್ಮ ಕ್ರಿಯಾಶೀಲತೆಯನ್ನು ಕಳೆದುಕೊಳ್ಳುತ್ತಾರೆ. ಜೀವನೋತ್ಸಾಹವನ್ನು ಕಳೆದುಕೊಂಡು ದಿನದಿಂದ ದಿನಕ್ಕೆ ಬರಡಾಗುತ್ತಿರುವ ಸೋರೆಕಾಯಿಯಂತೆ ಆಗುತ್ತಾರೆ.
ಇಂತಹ ಲಕ್ಷಣಗಳನ್ನು ನಿಮ್ಮವರಲ್ಲಿಯಾಗಲೀ, ನಿಮ್ಮಲ್ಲಿಯೇ ಆಗಲಿ ಗುರುತಿಸಿಕೊಂಡರೆ, ಅದು ಪೂರ್ವಾರ್ಧದಲ್ಲಿ ಪುಣ್ಯದ ಕೆಲಸ. ಉಳಿದರ್ಧಕ್ಕಾಗಿ, ಆದಷ್ಟು ಬೇಗನೇ ಸೂಕ್ತ ಮನೋಚಿಕತ್ಸಕರನ್ನು/ ಸಂಮೋಹಿನಿ ತಜ್ಞರನ್ನು ಸಂಪರ್ಕಿಸಬೇಕು. ಅವರ ಮಾರ್ಗದರ್ಶನದಲ್ಲಿ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ಮತ್ತೂ ಮುಖ್ಯವಾಗಿ ಇಂತವರಿಗೆ ಪ್ರೀತಿಯ ಅವಶ್ಯಕತೆ ಇರುತ್ತದೆ. ಅಂದರೆ, ಚಿಕಿತ್ಸೆಯ ಜೊತೆಗೆ ನೀವು ಪ್ರೀತಿಯನ್ನೂ, ಕಾಳಜಿಯನ್ನೂ ತೋರಿಸಿದರೆ ಬಹುಬೇಗ ಗುಣಮುಖರಾಗುತ್ತಾರೆ. ನಿಮ್ಮ ಪ್ರೀತಿ ಅಥವಾ ಕಾಳಜಿ ನಟನೆಯಾಗಿರಬಾರದು. ನಿಮ್ಮ ಪ್ರೀತಿ ಪ್ರಾಮಾಣಿಕವಾಗಿರಬೇಕು. ನಿಮ್ಮ ಪ್ರೀತಿಯ ಆಸರೆ ಸಿಗದಿರುವ ಕಾರಣದಿಂದಲೇ ಇಂತಹವರು ಅನಾರೋಗ್ಯದ ಆಸರೆಯನ್ನು ಪಡೆದುಕೊಂಡಿರುತ್ತಾರೆ. ಅಥವಾ ತನಗೆ ಸಂಬಂಧಪಟ್ಟವರಿಂದ ಸರಿಯಾದ ಕಾಳಜಿ ಹಾಗೂ ಪ್ರಾಮಾಣಿಕವಾದ ಪ್ರೀತಿ ಸಿಗುತ್ತಿಲ್ಲ ಅಂತ ಅವರು ಅಂದುಕೊಂಡಿರುತ್ತಾರೆ. ಇಂತಹ ಸಮಸ್ಯೆಯನ್ನು ಎಷ್ಟು ಬೇಗ ಗುರುತಿಸಿ, ಸೂಕ್ತ ಆರೈಕೆ ಮಾಡಲಿಕ್ಕೆ ಸಾಧ್ಯವೋ, ಅಷ್ಟು ಬೇಗ ಅವರು ಸುಧಾರಿಸುತ್ತಾರೆ. ತಮ್ಮ ಜೀವನದ ಆನಂದವನ್ನು ಅನುಭವಿಸಲಿಕ್ಕೆ ಸಾಧ್ಯವಾಗುತ್ತದೆ. ಮತ್ತೂ ಮುಖ್ಯವಾಗಿ ಅವರ ಜೊತೆಗೆ ಇರುವವರಿಗೂ ಸಂತೋಷಪಡಲಿಕ್ಕೆ ಸಾದ್ಯವಾಗುತ್ತದೆ.

ನಿಮ್ಮನ್ನು ನೀವು ಸಮಾಧಾನದಿಂದ ಇರಿಸಿಕೊಳ್ಳುವುದರಿಂದ ಹಾಗೂ ಯಾವುದೇ ಸನ್ನಿವೇಶ ಅಥವಾ ಸಂದರ್ಭಗಳಲ್ಲಿಯೂ ಸಹ ನಿಮ್ಮನ್ನು ನೀವು ಸಮಚಿತ್ತದಿಂದ ಇರಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ಅಥವಾ ನಿತ್ಯವೂ ಧ್ಯಾನವನ್ನು ಮಾಡುವುದರಿಂದ ಇಂತಹ ಸಮಸ್ಯೆಗಳಿಂದ ಬಚಾವಾಗಲಿಕ್ಕೆ ಸಾಧ್ಯ.

ಡಿ ಎಂ ಹೆಗಡೆ

ಉತ್ತರಕನ್ನಡ ಜಿಲ್ಲೆಯವರು. ಸಮ್ಮೋಹನ ತಜ್ಞ, ಆಪ್ತ ಸಮಾಲೋಚಕ ಮತ್ತು ತರಬೇತುದಾರರು. ಪ್ರಸ್ತುತ ಬೆಂಗಳೂರಿನಲ್ಲಿ ಆರೋಗ್ಯ ಹೋಲಿಸ್ಟಿಕ್‌ ಹೆಲ್ತ್‌ ಕೇರ್‌ ಮೂಲಕ, ಆರೋಗ್ಯದ ತೊಂದರೆಗಳಿಗೆ ಸರಳ ಬಗೆಯಲ್ಲಿ ಉತ್ತರ ತಿಳಿಸುವ ಕೆಲಸ ಮಾಡುತ್ತಿದ್ದಾರೆ. ಸಾಹಿತ್ಯ, ಸಾಂಸ್ಕೃತಿಕವಾಗಿಯೂ ಕ್ರಿಯಾಶಿಲರು. ದಶಕಕ್ಕಿಂತಲೂ ಹೆಚ್ಚುಕಾಲ ಕರ್ನಾಟಕ ಹೈಕೋರ್ಟಿನಲ್ಲಿ ವಕಾಲತ್ತನ್ನು ನಡೆಸಿದವರು. ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಕಷ್ಟು ಕೆಲಸ ಮಾಡಿದ್ದಾರೆ. ವ್ಯಕ್ತಿತ್ವ ವಿಕಸನ ಕುರಿತ ‘ಪ್ರೀತಿಯೇ ಜೀವನ’ ಹಾಗೂ ‘ಜೀವನ ಶಿಕ್ಷಣ’ ಇವರ ಪ್ರಕಟಿತ ಕೃತಿಗಳು. ಪ್ರಸ್ತುತ ಹಿಪ್ನೋಥೆರಪಿಯ ಪ್ರಯೋಜನಗಳ ಬಗ್ಗೆ ಪುಸ್ತಕ ಬರೆಯುತ್ತಿದ್ದಾರೆ. ಕರ್ನಾಟಕ ರಾಜ್ಯ ಎನ್ನೆಸ್ಸೆಸ್ ಪ್ರಶಸ್ತಿ (1992), ಕರ್ನಾಟಕ ರಾಜ್ಯ ಯುವ ಪ್ರಶಸ್ತಿ (1993), ಆರ್ಯಭಟ ಪ್ರಶಸ್ತಿ (2007) ಇವರಿಗೆ ಸಂದಿವೆ.

ವಿಳಾಸ: ಆರೋಗ್ಯ ಹೋಲಿಸ್ಟಿಕ್ ಹೆಲ್ತ್ ಕೇರ್, ಬೆಂಗಳೂರು
ಫೋನ್: 9481405184, ಇಮೈಲ್: holisticarogya@gmail.com

Share

Leave a comment

Your email address will not be published. Required fields are marked *

Recent Posts More

 • 13 hours ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 week ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 2 weeks ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

 • 2 weeks ago No comment

  ಕಲರವ | ಒಂದು ಸಿನಿಮಾ ನೋಡಿದ ಕಥೆ…

      ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

 • 3 weeks ago No comment

  ಕವಿಸಾಲು | ಅಲೆಗಳೆದ್ದ ಕೊಳ…

      ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...


Editor's Wall

 • 31 August 2018
  3 weeks ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 weeks ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  4 weeks ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  4 weeks ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  1 month ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...