Share

ಸವಿತಾ ನಾಗಭೂಷಣ ಪ್ರವಾಸ ಕಥನ | ಭಕ್ತಿಯ ಉಬ್ಬರ… ವ್ಯಾಪಾರದ ಸಡಗರ…

ಪ್ರವಾಸಿ ಸವಿತಾ ಕಂಡ ಇಂಡಿಯಾ

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

ಭಾಗ-10

ನಾವು ಹರಿದ್ವಾರದಲ್ಲಿದ್ದೆವು. ಅಲ್ಲಿ ನಾವು ಉಳಿದುಕೊಂಡಿದ್ದ ಛತ್ರದಿಂದ ‘ಹರ್ ಕಿ ಪೌರಿ’ ಗಂಗೆಯ ಸ್ನಾನಘಟ್ಟಕ್ಕೆ ಕೇವಲ ಐದು ನಿಮಿಷದ ದಾರಿ. ನಾವು ಬೆಳ್ಳಂಬೆಳಿಗ್ಗೆ ಐದು ಘಂಟೆಗೇ ಎದ್ದು ಗಂಗೆಯ ಬಳಿ ಧಾವಿಸಿದೆವು. ಗಂಗೆಯ ಉಗಮ ಸ್ಥಾನ ಗೋಮುಖದಿಂದ ಹರಿದ್ವಾರ ಕೇವಲ 250 ಕಿಲೋಮೀಟರ್. ಅದು ಅಲ್ಲಿಯವರೆಗೆ ನಾಗರಿಕತೆಯ ಸೋಂಕಿಲ್ಲದ ಆಳ ಕಣಿವೆಗಳಲ್ಲೇ ಹರಿದುಬಂದು ಮಲಿನಗೊಳ್ಳದೆ ಸ್ಫಟಿಕ ಶುದ್ಧವಾಗಿ ಗೋಚರಿಸುತ್ತಿದ್ದುದರಿಂದ ನಾವು ನಿಶ್ಚಿಂತೆಯಿಂದ ನೀರಿಗೆ ಬಿದ್ದೆವು. ಅಬ್ಬಾ ಗಂಗಾ ನದಿಯೇ! ಅವಳು ನನ್ನ ದೇಶದ ಹೆಮ್ಮೆ. ಅವಳ ಆಳ, ಉದ್ದ, ಅಗಲ, ರಭಸ, ಉಲ್ಲಾಸಗಳನ್ನು ಕಣ್ತುಂಬಾ ನೋಡಿಯೇ ತೀರಬೇಕು! ಒಂದಾನೊಂದು ಕಾಲದಲ್ಲಿ ನಾವೂ ಜಲಚರಗಳಾಗಿದ್ದೆವಷ್ಟೆ. ತಾಯಿಯ ಗರ್ಭದಲ್ಲೂ ಜೀವಜಲದಲ್ಲಿ ನವ ಮಾಸ ತೇಲಿದ ನಮಗೆ, ಮತ್ತದೇ ಜೀವಜಲ ಪುನಶ್ಚೇತನ ನೀಡುವುದು ಸಹಜವೇ ಅಲ್ಲವೇ? ಅಂತೆಯೇ ಈ ನೀರಿನ ಆಕರ್ಷಣೆಯೋ ಏನೋ ಎಂದುಕೊಂಡೆನು. ಗಂಗೆ ರಭಸವಾಗಿ ಹರಿಯುತ್ತಿದ್ದುದರಿಂದ ಸೋಪಾನಗಳ ಬಳಿ ಅಳವಡಿಸಲಾಗಿದ್ದ ಕಬ್ಬಿಣದ ಸರಪಳಿಗಳನ್ನು ಹಿಡಿದುಕೊಂಡು ನಾವು ನಿರ್ಭಯವಾಗಿ ತೇಲಿದೆವು, ಮುಳುಗಿದೆವು. ಅಷ್ಟಕ್ಕೂ ಅದು ನನ್ನೂರಲ್ಲ. ಪರಿಚಿತರೂ ಯಾರಿಲ್ಲ. ಅಂತೆಯೇ ನಿಸ್ಸಂಕೋಚವಾಗಿ ನಾವು ಮಹಿಳೆಯರು ಮಕ್ಕಳಂತೆ ಕೈಕಾಲು ಬಡಿದು ನೀರೆರಚಿ, ನೀರೆಂದರೆ ಅಂಜುವ ಸಹಯಾತ್ರಿಕರನ್ನು ನೀರಿಗೆಳೆದು ನೀರಿನ ರುಚಿ ಹತ್ತಿಸಿದೆವು.

ಏನಿಲ್ಲವೆಂದರೂ ಎರಡು ತಾಸು ನೀರಿನಲ್ಲಿ ಆಟವಾಡಿ ನಂತರ ಬಿಲ್ವಪರ್ವತದ ಮೇಲಿರುವ ಮಾನಸ ದೇವಿ ದೇಗುಲಕ್ಕೆ ‘ರೋಪ್ ವೇ’ ಮುಖಾಂತರ ಕೆಳಗಿನ ಬೆಟ್ಟ-ಗುಡ್ಡ-ನದಿ-ಕಣಿವೆಗಳ ಸೌಂದರ್ಯ ಸವಿಯುತ್ತಾ ತೆರಳಿದೆವು. ತದನಂತರ ಹರಿದ್ವಾರದ ಸಮೀಪವೇ ಇರುವ ವಿಶ್ವದ ಯೋಗ ರಾಜಧಾನಿ ಎಂದೇ ಹೆಸರಾಗಿರುವ ಋಷಿಕೇಶಕ್ಕೆ ‘ಲಕ್ಷ್ಮಣ ಝೂಲಾ’ ಎಂದು ಕರೆಯಲಾಗುವ ಉಕ್ಕಿನ ತೂಗು ಸೇತುವೆಯ ಮೇಲೆ ನಡೆದೆವು. ಅಲ್ಲಿಯೋ ಊರ ತುಂಬಾ ಆಶ್ರಮಗಳೇ! ನಾವು ಪ್ರಸಿದ್ಧ ಶಿವಾನಂದ ಆಶ್ರಮ, ಆನಂದಮಯಿ ಆಶ್ರಮ ಮುಂತಾದವುಗಳನ್ನು ಸಂದರ್ಶಿಸಿದೆವು. ಹರಿದ್ವಾರ-ಋಷಿಕೇಶಗಳಲ್ಲಿ ಎತ್ತ ನೋಡಿದರತ್ತ ಸಾಧು ಸಂತರೇ! ಸರಳ ಜನ-ಸರಳ ಜೀವನ! ‘ಸಂಸಾರದಲ್ಲೇನಿದೆಯೋ ನಿರ್ವಾಣದಲ್ಲಿರುವುದೂ ಅದೇ’ ಎಂಬುದು ಬುದ್ಧನ ಮಾತು. ಅದನ್ನು ನಮಗೆ ಸಾಕ್ಷತ್ಕಾರಗೊಳಿಸುವಂತೆ ಅವರು ಜನಜಂಗುಳಿಯ ಮಧ್ಯೆ ನಿಶ್ಚಿಂತೆಯಿಂದ ತಮ್ಮ ಪಾಡಿಗೆ ತಾವು ಸಂಚರಿಸುತ್ತಿದ್ದನ್ನು ಕಂಡು ಬೆರಗುಗೊಂಡೆ.

ಸಂಜೆ ಗಂಗಾ ಆರತಿ ನೋಡುವ ಕಾರ್ಯಕ್ರಮವಿದ್ದುದರಿಂದ ‘ಷಾಪಿಂಗ್’ಗೆ ಸಾಕಷ್ಟು ಕಾಲಾವಕಾಶವನ್ನು ಕಲ್ಪಿಸಿದುದರಿಂದ ಸಾಲು ಸಾಲು ಅಂಗಡಿಗಳತ್ತ ಹೆಜ್ಜೆ ಹಾಕಿದೆವು. ನನ್ನ ಸಹ ಯಾತ್ರಿಕರೊಬ್ಬರು ಅಸಲಿ ರುದ್ರಾಕ್ಷಿಯ ಅನ್ವೇಷಣೆಯಲ್ಲಿದ್ದರು. ಅಳೆದೂ ಸುರಿದೂ ಕೊನೆಗೆ ತಲಾ ಆರು ನೂರಾ ಐವ್ವತ್ತು ರೂಪಾಯಿ ನೀಡಿ ಎರಡು ರುದ್ರಾಕ್ಷಿಗಳನ್ನೂ ಏಳು ನೂರಾ ಐವ್ವತ್ತು ರೂಪಾಯಿ ನೀಡಿ ಒಂದು ಸ್ಫಟಿಕ ಹಾರವನ್ನೂ ಖರೀದಿಸಿದರು. ನಾನೋ ಕೋನಾರ್ಕದಲ್ಲಿ ನೂರು ರೂಪಾಯಿಗೆ ಕಾಶಿಯಲ್ಲಿ ಎಪ್ಪತ್ತೈದು ರೂಪಾಯಿಗಳಿಗೆ, ಕಟ್ಟಕಡೆಗೆ ಹರಿದ್ವಾರದಲ್ಲಿ ಐವ್ವತ್ತು ರೂಪಾಯಿಗಳಿಗೆ ಇದೇ ಹಾರವನ್ನು ಖರೀದಿಸಿದ್ದೆ! ಹಾಗೇ ಇಪ್ಪತ್ತು ರೂಪಾಯಿಗೆ ಒಂದು ರುದ್ರಾಕ್ಷಿಯನ್ನು ಖರೀದಿಸಿದ್ದೆ. ನಾನು ಹರಿದ್ವಾರದಲ್ಲಿ ಒಬ್ಬ ಅಂಗಡಿಯಾತನ ಬಳಿ ‘ಯಾವುದು ಅಸಲಿ, ಯಾವುದು ನಕಲಿ?’ ಎಂದು ವಿಚಾರಿಸಲು, ಆತ ನಸುನಕ್ಕು ‘ಎಲ್ಲವೂ ಅಸಲಿಯೇ! ಏಕೆಂದರೆ, ಸ್ಫಟಿಕ ಭೂಮಿಯಲ್ಲಿ ಸಿಗುವ ಕಲ್ಲು; ರುದ್ರಾಕ್ಷಿ ಮರದ ಮೇಲಣ ಕಾಯಿ! ಜನ ಇದನ್ನು ಅರಿಯದೆ ಮೋಸ ಹೋಗುತ್ತಾರೆ’ ಎಂದ!

ಇನ್ನೊಂದೆಡೆ ಒಂದು ಅಂಗಡಿಯಲ್ಲಿ ನಾನು ಕಂಚಿನ ಬುದ್ಧಮೂರ್ತಿಯ ಬೆಲೆ ವಿಚಾರಿಸಲು ಅಂಗಡಿಯಾತ ಹತ್ತು ಸಾವಿರ ಎಂದ. ಕೊಡುವ ಬೆಲೆ ಹೇಳು ಎನ್ನಲು ಆರು ಸಾವಿರ ಎಂದ. ನಾನು ಬುದ್ಧನನ್ನು ಖರೀದಿಸುವ ಆಸೆ ಬಿಟ್ಟು ಮುಂದೆ ಹೋದರೆ ಮತ್ತೆ ವಾಪಸ್ ಕರೆದು ನಿಮಗೆ ಯಾವ ಬೆಲೆಗಾದರೂ ನೀಡುವ ಪ್ರೇರಣೆಯಾಗಿದೆಯೆಂದೂ, ನೀವು ಕೇಳಿದ ಬೆಲೆಗೆ ನೀಡುವೆನೆಂದೂ ಮಾತಿನ ಚಾಕಚಕ್ಯತೆ ಮೆರೆದ. ನಾನು ತಬ್ಬಿಬ್ಬಾಗಿ ಏಳುನೂರಾ ಐವ್ವತ್ತು ಎಂದು ಹೇಳಿ ಕೊನೆಗೆ ಅವನ ಅಂತಿಮ ಚೌಕಾಶಿಗೂ ಅನುವು ಮಾಡಿಕೊಟ್ಟು ಒಂಭೈನೂರಾ ಐವ್ವತ್ತು ರೂಪಾಯಿ ನೀಡಿ ಖರೀದಿಸಿದೆ.

ನನ್ನ ಕತೆ ಹೀಗಾದರೆ, ನಮ್ಮ ಗುಂಪಿನ ಲಲಿತಾ ಶುದ್ಧ ರುದ್ರಾಕ್ಷಿಯ ಹಿಂದೆ ಬಿದ್ದು, ಅದಾಗಲೇ ದುಪ್ಪಟ್ಟು ಬೆಲೆ ನೀಡಿ ಸಖತ್ ಮೋಸ ಹೋಗಿ ಪೆಚ್ಚಾಗಿದ್ದರು. ಹರಿದ್ವಾರದ ವ್ಯಾಪಾರಿಗಳು ಹೀಗೆ ಯಾತ್ರಿಕರಿಗೆ ಟೋಪಿ ಹಾಕಲು ಹವಣಿಸುತ್ತಿದ್ದರೆ, ಹಾಸನದ ಹಳ್ಳಿ ಕಡೆಗಳಿಂದ ಬಂದಿದ್ದ ನಮ್ಮ ಸಹ ಯಾತ್ರಿಕರಲ್ಲಿ ಕೆಲವರು ಸೇರಿಗೆ ಸವ್ವಾ ಸೇರೆಂಬಂತೆ ಟೋಪಿ, ಸ್ವೆಟರ್, ಟೀ-ಷರ್ಟ್, ಕೈಚೀಲ ಖರೀದಿಸುವಾಗ ಆ ವ್ಯಾಪಾರಿಗಳನ್ನೇ ಯಾಮಾರಿಸಿ ಅಂಗಡಿಗಳಲ್ಲಿದ್ದ ವಸ್ತುಗಳ ಆ ರಾಶಿಯಲ್ಲಿ, ಒಂದೆಂದು ಹೇಳಿ ಎರಡು, ಕೆಲವೊಮ್ಮೆ ಮೂರು ವಸ್ತುಗಳನ್ನು ಎಗರಿಸಿ ಆ ವ್ಯಾಪಾರಿಗಳಿಗೇ ಟೋಪಿ ಹಾಕುವಲ್ಲಿ ಯಶಸ್ವಿಯಾಗಿದ್ದರು! ಈ ನೂಕು-ನುಗ್ಗಲಿನ ವ್ಯಾಪಾರದಲ್ಲಿ ಯಾರಿಗೆ ಲಾಭವಾಯಿತೋ ಯಾರಿಗೆ ನಷ್ಟವಾಯಿತೋ ಆ ದೇವರೇ ಬಲ್ಲ!

ಅದೇ ಸಂಜೆ ಮತ್ತೆ ‘ಹರ್ ಕೀ ಪೌರಿ’ಯ ಬಳಿ ತೆರಳಿ ಸುಪ್ರಸಿದ್ಧವೆನಿಸಿದ್ದ ‘ಗಂಗಾ ಆರತಿ’ಯನ್ನು ವೀಕ್ಷಿಸಿದೆವು. ಇದು ನದಿಯ ಪೂಜೆ. ಶ್ರದ್ಧಾವಂತ ಯಾತ್ರಿಕರು ಎಲೆಗಳ ತಟ್ಟೆಗಳೊಳಗೆ ಬಗೆ ಬಗೆಯ ಹೂ ಮತ್ತು ದೀಪಗಳನ್ನಿರಿಸಿ ನದಿಯ ನೀರಿನ ಮೇಲೆ ತೇಲಿಬಿಡುವ ಆಚರಣೆಯಿದು. ಕತ್ತಲಿಳಿಯುತ್ತಿರುವ ಆ ಹೊತ್ತಿನಲ್ಲಿ ನದಿ ದೀಪದ ಹೂಗಳನ್ನು ಮುಡಿದು ಪಡುವ ಸಂಭ್ರಮ ಒಂದು ನಯನ ಮನೋಹರ ದೃಶ್ಯವೇ ಹೌದು. ಇಂತಹ ಆಚರಣೆಯನ್ನು ಕಲ್ಪಿಸಿಕೊಂಡ ನಮ್ಮ ಜನರ ಧರ್ಮ ಶ್ರದ್ಧೆಯನ್ನು ಸರಳೀಕರಿಸಿ ಮೌಢ್ಯ ಎನ್ನುವವರಿಗೆ ಧರ್ಮ ಮತ್ತು ಸಂಸ್ಕೃತಿಗಳ ಸಂಬಂಧಗಳ ಅರಿವೇ ಇರಲಾರದು. ಅದೇನೇ ಇರಲಿ, ಈ ನದಿ ಪೂಜೆಯ ಸಂಭ್ರಮವನ್ನು ನೋಡುತ್ತಾ ಮೈಮರೆತ ನಾವು ದಿಕ್ಕಾಪಾಲಾಗಿ ಒಬ್ಬರನ್ನೊಬ್ಬರು ಅರಸುತ್ತಾ, ಏಕಾಂಗಿಗಳಾದ ಗಾಬರಿಯಲ್ಲಿ ಅಲ್ಲಿಲ್ಲಿ ಅಲೆದು ಹೇಗೋ ಕೊನೆಗೂ ಛತ್ರದ ಬಳಿ ಸೇರಿದಾಗ ಅಂತಿಮ ಮುಕ್ತಿ ದೊರೆತ ಆನಂದವೇ ನಮಗೆ ದೊರಕಿದಂತಾಗಿತ್ತು!

Share

Leave a comment

Your email address will not be published. Required fields are marked *

Recent Posts More

 • 2 weeks ago No comment

  ಕವಿಸಾಲು | ಇಂಡೋನೇಶಿಯಾ

      ಕವಿಸಾಲು         ಕಿಚ್ಚೆದ್ದು ಕುಣಿವ ನೀರು ಬಿರುಗಾಳಿ ತುಂಬಿದ ಒಡಲು ಎತ್ತೊಯ್ದು ಬಿಸಾಡಿ ಇಳೆಗೆ ಎದೆಯಿಳಿಸಿದೆ ಕಡಲು ನಡುಗಿಬಿಟ್ಟಳೆ ವಸುಂಧರೆ ಶತಕೋಟಿ ಬಿರುಕು ಬಿಟ್ಟು ಸುನಾಮಿಯ ಕೋಪಕ್ಕೆ ವಿಕಾರವಾಗಿ ಬೊಬ್ಬಿರಿದು ಊಳಿಟ್ಟು ಜೀವ ಜಲ, ಉಸಿರ ಗಾಳಿ ಹುಚ್ಚೆದ್ದು ಕುಣಿದು ಅಪ್ಪಳಿಸಿದ ಆಘಾತಕ್ಕೆ ಕಂಗೆಟ್ಟು ತತ್ತರಿಸಿವೆ ಪ್ರಾಣಿ, ಮನುಜ ಕುಲ ಮಾಡು ಹಾರಿ, ಕಂಬಗಳು ಕುಸಿದು ನೆಲಕಚ್ಚಿವೆ ಮಾನವನ ಬೀಡು ಕತ್ತರಿಸಿ ...

 • 2 weeks ago No comment

  ಕವಿಸಾಲು | ತಡವಿಲ್ಲದಿರಲಿ ಇನ್ನು…

      ಕವಿಸಾಲು         ದಾಳಿಗಳಿಗೆ ಮುಕ್ಕಾದ ಮಂದಿರವಿದು ಕುಸಿದು ಕುಳಿತ ದ್ವಾರಪಾಲಕರು ಎತ್ತರದ ಗೋಡೆಗಳ, ಎಚ್ಚರಿಕೆಯ ಗಂಟೆಗಳು ಕೂಡ ಮೌನವಿಂದು ಮನ ನಿರ್ಮಿಸಿದ ಹೆಬ್ಬಾಗಿಲುಗಳು ಒಲವ ಸಿರಿಗೆ ಚೇತರಿಸಿ ತೆರೆದ ಗಳಿಗೆ ಎತ್ತರದ ಹೊಸ್ತಿಲುಗಳ ತಡೆಯ ದಾಟಿ ತಲುಪಬೇಕಿದೆಯಷ್ಟೆ ಬಯಕೆ ಗುರಿಯನ್ನು ದಟ್ಟ ಹಸಿರಿನ ಕಾಡು, ಆಗಸದ ನೀಲಿ ಬಿಳಿಯ ಮೋಡಗಳ, ಬಿಸಿಲ ಬೆಳಕಿನ ನಡುವೆ ಬಯಲ ಸ್ವೇಚ್ಛೆಯ, ತಿಳಿಗಾಳಿ ತವಕದಲಿ ಬಂಧನಗಳ ...

 • 4 weeks ago No comment

  ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

      ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

 • 1 month ago No comment

  ಕವಿಸಾಲು | ಒಲವಿನಾಟ

      ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

 • 1 month ago No comment

  ಕವಿಸಾಲು | ನಕ್ಷತ್ರ ನಾವೆ

    ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...


Editor's Wall

 • 31 August 2018
  2 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  2 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  2 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

 • 26 August 2018
  2 months ago No comment

  ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

    ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

 • 23 August 2018
  2 months ago No comment

  ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                      ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...