Share

ಸವಿತಾ ನಾಗಭೂಷಣ ಪ್ರವಾಸ ಕಥನ | ಬಂಗಾರದ ಹೊಳಪು, ಬೇಗುದಿಯ ನೆನಪು…

ಪ್ರವಾಸಿ ಸವಿತಾ ಕಂಡ ಇಂಡಿಯಾ

 

ಇದು ನಾನು 2011ರ ಮಾರ್ಚ್ ತಿಂಗಳಲ್ಲಿ ನನ್ನ ಕೆಲ ಗೆಳತಿಯರೊಂದಿಗೆ ಒಂದು ಜನಸಾಮಾನ್ಯರ ಸಮೂಹದೊಂದಿಗೆ ಸಾಮಾನ್ಯ ದರ್ಜೆಯ ರೈಲು ಪ್ರಯಾಣದ ಮೂಲಕ ಕೈಗೊಂಡ ಭಾರತ ಯಾತ್ರೆಯ ಸಂದರ್ಭದಲ್ಲಿ ಮಾಡಿಕೊಂಡ ಟಿಪ್ಪಣಿಗಳನ್ನು ಆಧರಿಸಿ ಬರೆದ ಪುಟ್ಟ ಪ್ರವಾಸ ಕಥನ. ಇದು ಈಗಾಗಲೇ 12 ಭಾಗಗಳಲ್ಲಿ ಡಿ ಎಸ್ ನಾಗಭೂಷಣ ಅವರ ಸಂಪಾದಕತ್ವದ ‘ನವ ಮಾನವ’ ಸಮಾಜವಾದಿ ಮಾಸಿಕದ (ಈ ಪತ್ರಿಕೆ ನವೆಂಬರ್ 2011ರ ಸಂಚಿಕೆಯಿಂದ ‘ಹೊಸ ಮನುಷ್ಯ’ ಎಂದು ಪುನರ್ನಾಮಕರಣಗೊಂಡಿತು) 2011ರ ಸೆಪ್ಟಂಬರಿನಿಂದ 2012ರ ಆಗಸ್ಟ್ ಸಂಚಿಕೆಗಳವರೆಗೆ ಧಾರಾವಾಹಿಯಾಗಿ ಪ್ರಕಟವಾಗಿತ್ತು.

-ಸವಿತಾ ನಾಗಭೂಷಣ, ಶಿವಮೊಗ್ಗ

 

ಭಾಗ-11

ಕ್ಕೆಲಗಳಲ್ಲಿಯೂ ಸಮೃದ್ಧಿಯಾಗಿ ಬೆಳೆದು ನಿಂತಿದ್ದ ಗೋಧಿಯ ಹೊಲಗಳನ್ನು ಕಣ್ತುಂಬಿಕೊಳ್ಳುತ್ತಾ ನಾವು ಅಮೃತಸರವನ್ನು ಪ್ರವೇಶಿಸಿದೆವು. ‘ಭಲ್ಲೆ! ಭಲ್ಲೆ!!’ ಭಂಗ್ರಾ ನೃತ್ಯ, ಹೊರವಾದ ಮೀಸೆ, ಕೈಬಳೆ. ಪೇಟಾ, ಕೃಪಾಣ – ಪಂಜಾಬಿನ ಜನ ಒಂದು ರೀತಿಯಲ್ಲಿ ತಮ್ಮದೇ ಚಹರೆಯಿರುವ ವಿಶಿಷ್ಟ ತಳಿ ಎನಿಸದಿರಲಿಲ್ಲ.

ನಾವು ಉಳಿದುಕೊಂಡಿದ್ದ ಹೋಟೆಲಿನ ಆಸುಪಾಸಿನ ಹಾದಿ ಬೀದಿಗಳು, ಮನೆಯ ಮಾಳಿಗೆಗಳು, ಮನೆಯಂಗಳಗಳೂ ವಿಭಿನ್ನ ಬಗೆಯಲ್ಲಿದ್ದವು. ಹೋಟೆಲಿನ ವಾಸ್ತುವೂ ವಿಚಿತ್ರ ಬಗೆಯಲ್ಲಿದ್ದು, ನಾವು ಓಡಾಡುವಾಗ ಗಲಿಬಿಲಿಯಾಗುವಂತಿತ್ತು. ಹೋಟೆಲಿನ ಮಾಲೀಕ ಮಾತಿನ ಮಧ್ಯೆ ‘ದೇಶ ವಿಭಜನೆಯ ನಂತರ ಅರ್ಧ ಪಂಜಾಬು ಪಾಕಿಸ್ತಾನಕ್ಕೆ ಹೋಯಿತು, ಇನ್ನರ್ಧವಷ್ಟೇ ಇಲ್ಲಿ ಉಳಿಯಿತು’ ಅಂದ. ಆ ಅರ್ಥದಲ್ಲಿ ಆತನ ಮಾತುಗಳನ್ನು ಏಕ ಕಾಲದಲ್ಲಿ ನಾವು ಪಾಕಿಸ್ತಾನದಲ್ಲೂ, ಭಾರತದಲ್ಲೂ ಇದ್ದೇವಲ್ಲವೇ ಎಂದು ವ್ಯಾಖ್ಯಾನಿಸಿ ನಕ್ಕೆವು. ಭಾರತವು ಸುಭದ್ರ ಬಾಹುಗಳನ್ನು ಕಳೆದುಕೊಂಡು ವಿಕಲಚೇತನ ರಾಷ್ಟ್ರವಾಯಿತೇ? ನೆತ್ತಿಯ ಮೇಲೊಂದು ತೂಗು ಕತ್ತಿ ಬೇರೆ! ಮನುಷ್ಯನಿಗೆ ಹೇಗೆ ದುಃಖದಿಂದ ಬಿಡುಗಡೆ ಇಲ್ಲವೋ, ರಾಷ್ಟ್ರಕ್ಕೂ ಬಿಡುಗಡೆಯಿಲ್ಲವೇನೋ! ಪಂಜಾಬಿನ ಮಟ್ಟಿಗಂತೂ ಇದು ನಿಜವೇ… ಅಲ್ಲಿನ ಜನರ ಮೇಲೆ ವಿಭಜನೆಯ ಹಿಂಸಾತ್ಮಕ ನೆನಪು ಇನ್ನೂ ಕವಿದಂತಿದೆ.

ದೇಶ ವಿಭಜನೆಯ ಕಾಲದ ಹಿಂಸೆ, ಜಲಿಯನ್ವಾಲಾಬಾಗ್ ಹತ್ಯಾಕಾಂಡ, ವಿಫಲ ಖಲಿಸ್ತಾನ ಹೋರಾಟದ ಹಿಂಸೆ, ಆಪರೇಷನ್ ಬ್ಲೂ ಸ್ಟಾರ್, ಇಂದಿರಾ ಗಾಂಧಿ ಸಾವಿನ ಹಿನ್ನೆಲೆಯಲ್ಲಿ ದೆಹಲಿಯಲ್ಲಿನ ಸಿಕ್ಖರ ನರಹತ್ಯೆ -ಇವೆಲ್ಲ ನನ್ನ ಮನದಲ್ಲಿ ಹಾದುಹೋದವು. ಈ ರಕ್ತಸಿಕ್ತ ಚರಿತ್ರೆಯನ್ನು ಮೀರಿದ ಅವರ ಜೀವನ ಪ್ರೀತಿಯ ಬಗ್ಗೆ ಅಚ್ಚರಿ ಹುಟ್ಟಿತು. ಮನುಷ್ಯ ಚರಿತ್ರೆ ಎಂದರೇನು? ಒಡೆದು ಬಾಳುವುದೇ? ಅಥವಾ ಅದೇ ಹೊತ್ತಿಗೆ ಒಂದಾಗಲು ಹಂಬಲಿಸುವುದೇ? ನಿರಂತರ ರಕ್ತಪಾತ, ಹಿಂಸೆ. ಎಲ್ಲೋ ಕೋಲ್ಮಿಂಚಿನಂತೆ ಅಲ್ಲಲ್ಲಿ ಶಾಂತಿ, ಸಹನೆ, ಔದಾರ್ಯ…

ನನ್ನ ಯೋಚನಾ ಲಹರಿ ಹೀಗೆ ಹರಿದಿರಲು ‘ಆಯಿಯೇ ಬಹೆನ್ ಜೀ ಬೈಠಿಯೇ’ ಎನ್ನುತ್ತಾ ಸರ್ದಾರ್ಜಿಯೊಬ್ಬ ಜೀಪೊಂದನ್ನು ನಮ್ಮ ಮುಂದೆ ನಿಲ್ಲಿಸಿದ. ನಮ್ಮ ಪಯಣ ಸ್ವರ್ಣ ಮಂದಿರದತ್ತ ಸಾಗಿತ್ತು. ಅವೊತ್ತು ವೈಶಾಖಿ ಹಬ್ಬವಾದ್ದರಿಂದ ಗುರುದ್ವಾರ ಗಿಜಿಗುಡುತ್ತಿತ್ತು. ಅಸಾಧ್ಯ ಜನಸಂದಣಿ. ಮಂದಿರದ ಪ್ರವೇಶ ದ್ವಾರದ ಬಳಿ ಇದ್ದ ಚಪ್ಪಲಿಗಳ ಗುಡ್ಡಕ್ಕೆ ನಮ್ಮ ಚಪ್ಪಲಿಗಳನ್ನೂ ಸೇರಿಸಿದೆವು. ಮರಳಿ ಬರುವಾಗ ಇವು ನಮಗೆ ಸಿಗುವುದು ಖಚಿತವೋ ಎಂದು ಯೋಚಿಸುತ್ತಾ ನೂಕು-ತಾಕಿನ ನಡುವೆ ಏಗುತ್ತಾ ಮಂದಿರದ ಕೊಳದ ಬಳಿ ತಲುಪಿ ಉಸಿರು ಬಿಟ್ಟೆವು. ಇರುವೆಯೋಪಾದಿಯಲ್ಲಿ ಜನ ಸಂದಣಿ ಸಂಚರಿಸುತ್ತಿತ್ತು. ದೊಡ್ಡ ಶಾಮಿಯಾನಾದೊಳಗೆ ಭಕ್ತರು ನೆರೆದು ತಾರಕ ಸ್ವರದಲ್ಲಿ ಭಜನೆ ಮಾಡುತ್ತಿದ್ದರು.

ಸಿಕ್ಖರ ಪವಿತ್ರ ಗ್ರಂಥ ‘ಗ್ರಂಥ ಸಾಹೇಬ’ ಇರಿಸಿರುವ ಮುಖ್ಯ ಮಂದಿರದ ಬಳಿ ಅದನ್ನು ಸಂದರ್ಶಿಸುವ ಸಲುವಾಗಿ ಸರತಿಯ ಸಾಲಿನಲ್ಲಿ ಸಾವಿರ ಸಾವಿರ ಭಕ್ತರು ನಿಂತಿದ್ದರು. ನಾವು ಈ ಸಾಲಿನಲ್ಲಿ ಸೇರಿಕೊಳ್ಳುವ ಆಸೆಯನ್ನೇ ತೊರೆದು ಕೊಳದಲ್ಲಿ ಕಾಲು ತೊಳೆದು ಭವ್ಯವಾದ ಪ್ರಾಂಗಣದಲ್ಲಿ ಒಂದು ಸುತ್ತು ಹಾಕಿ ದೂರದಿಂದಲೇ ಗುರು ಗ್ರಂಥ ಸಾಹೇಬ್ಗೆ ನಮಿಸಿದೆವು. ‘ಹೇ ಪ್ರಭು! ಲಕ್ಷಾಂತರ ಪುಟಗಳನ್ನು ಓದಿ ಏನೆಲ್ಲ ಜ್ಞಾನವನ್ನು ಸಂಪಾದಿಸಿದರೂ, ಸಾಗರದಷ್ಟು ಮಸಿಯನ್ನು ಉಪಯೋಗಿಸಿ ವಾಯುವೇಗದಲ್ಲಿ ಬರೆದರೂ ನಿನ್ನನ್ನಾಗಲೀ, ನಿಮ್ಮ ನಾಮವನ್ನಾಗಲೀ ಅರಿಯಲಾಗುವುದಿಲ್ಲ’ ಎಂದಿದ್ದರಲ್ಲವೇ ಸಿಖ್ ಗುರು ನಾನಕರು. ಅ ದಿವ್ಯಚೇತನಕ್ಕೆ ಮನದಲ್ಲೇ ವಂದಿಸಿದೆನು. ಅಲ್ಲೇ ಸನಿಹದಲ್ಲಿ ಎತ್ತರದ ಮಂಟಪದಲ್ಲಿ ಭಕ್ತರು ಸರತಿಯ ಸಾಲಿನಲ್ಲಿ ನಿಂತಿದ್ದನ್ನು ನೋಡಿ ಏನೋ ವಿಶೇಷವಿರಬೇಕೆಂದು ನಾವೂ ಸಾಲಿಗೆ ಸೇರಿಕೊಂಡೆವಾದರೂ ಅದು ಏಕೆಂದು ತಿಳಿಯಲಾಗದೆ ಮತ್ತು ಆ ನೂಕುನುಗ್ಗಲಿನಲ್ಲಿ ಉಸಿರು ಕಟ್ಟಿದಂತಾಗಿ ನಾವು ಕೆಲವರು ಹೇಗೋ ಪಾರಾಗಿ ಹೊರಬಂದು ಒಂದು ಎತ್ತರದ ಜಾಗ ಆರಿಸಿಕೊಂಡು ಜನಜುಂಗುಳಿ ನೋಡುತ್ತಾ ಕೂತೆವು.

ನನ್ನ ಸಹ ಯಾತ್ರಿಕರೆಲ್ಲರೂ ಎಲ್ಲೆಲ್ಲೋ ಚದುರಿ ಹೋಗಿದ್ದರು. ಒಂದು ತಾಸಿನ ನಂತರ ನಮ್ಮ ಗುಂಪಿನ ರುಕ್ಮಿಣಿ ಆ ಮಂಟಪದಿಂದ ಪ್ರಸಾದ ಕೈಯಲ್ಲಿ ಹಿಡಿದು ವಿಜಯೀ ನಗೆ ಬೀರುತ್ತಾ ಅಲ್ಲಿ ಗುರುಗಳ ಸಾಹಿತ್ಯವಿದೆಯಷ್ಟೇ ಎನ್ನುತ್ತಾ ನಮಗೂ ಪ್ರಸಾದ ಹಂಚಿದರು. ಕೊಳದ ನೀರಿನಲ್ಲಿ ಮೂಡುತ್ತಿದ್ದ ಮಂದಿರದ ಮನೋಹರ ಪ್ರತಿಬಿಂಬವನ್ನು ನೋಡುತ್ತಾ ಅದೆಷ್ಟೋ ಹೊತ್ತು ಕುಳಿತಿದ್ದೆವು. ಇಂತಹ ಒಂದು ವೈಶಾಖಿ ಹಬ್ಬದ ದಿನವೇ ಜಲಿಯನ್ ವಾಲಬಾಗ್ನಲ್ಲಿ ಅಮಾಯಕರ ಹತ್ಯೆ ನಡೆದದ್ದು. ಎಂದು ನೆನಪಿಸಿಕೊಂಡೆವು.

ನಮ್ಮ ಮುಂದಿನ ಪಯಣ ಅಲ್ಲಿಗೇ ಆಗಿತ್ತು. ಅಪಾರ ಜನಸಂದಣಿಯನ್ನು ಭೇದಿಸುತ್ತಾ ನಮ್ಮ ಚಪ್ಪಲಿಗಳನ್ನು ತಡಕುತ್ತಾ ಇರುವಾಗ ಅಲ್ಲಿನ ಸರ್ದಾರ್ಜಿಯೊಬ್ಬ ನನ್ನ ಸಹಯಾತ್ರಿಕರೊಬ್ಬರನ್ನು ನಿಲ್ಲಿಸಿ ದುರುದುರು ನೋಡುತ್ತಾ, ಭುಜದ ಮೇಲೆ ಬಿದ್ದಿದ್ದ ಅವರ ಸೆರಗನ್ನು ಅವರ ತಲೆಯ ಮೇಲೆಳೆದು ಮಣಮಣ ಎಂದು ಬೈದು ತೋರುಬೆರಳಾಡಿಸಿ ನಮ್ಮನ್ನು ಬೆದರಿಸಿ ದಾಟಿಹೋದ. ಧರ್ಮ ಯಾವುದಾದರೇನು, ದೇಶ ಯಾವುದಾದರೇನು ಕರ್ಮಠತನದಲ್ಲಿ ಅಂತಹ ವ್ಯತ್ಯಾಸವೇನೂ ಅಗುವುದಿಲ್ಲ ಎಂದುಕೊಂಡು ಜಿಗುಪ್ಸೆಪಟ್ಟುಕೊಳ್ಳುತ್ತಾ ಹೊರಬಂದೆವು.

ಸನಿಹದಲ್ಲೇ ಇದ್ದ ಜಲಿಯನ್ ವಾಲಾಬಾಗ್ ಪ್ರವೇಶಿಸಿದರೆ ಗಾಯದ ಮೇಲೆ ಉಪ್ಪು ಸುರಿದಂತೆ ಪ್ರವಾಸಿಗರ ಮೋಜು-ಮಸ್ತಿ ನಡೆಯುತ್ತಿತ್ತು! ಬ್ರಿಟಿಷ್ ಅಧಿಕಾರಿ ಡೈಯರ್ನ ರಾಕ್ಷಸೀ ಕೃತ್ಯಕ್ಕೆ ಈಡಾಗಿ ಪ್ರಾಣ ತೆತ್ತ ನೂರಾರು ನಾಗರೀಕರ ಸ್ಮಾರಕದ ಬಳಿ ಜನ ಸಿಹಿ ತಿನಿಸು ಸವಿಯುತ್ತಾ ಕೇಕೆ ಹಾಕುತ್ತಾ ವಿವಿಧ ಉಲ್ಲಾಸಗಳ ಭಾವ ಭಂಗಿಗಳಲ್ಲಿ, ಅದರಲ್ಲೂ ಯುವಕ ಯುವತಿಯರು ಚಿತ್ರ ತೆಗೆಸಿಕೊಳ್ಳುತ್ತಿದ್ದರು. ನಮ್ಮ ಯುವಜನತೆ ಪಡೆಯುತ್ತಿರುವ ಶಿಕ್ಷಣ, ಚರಿತ್ರೆಗೆ ಅವರು ನೀಡುತ್ತಿರುವ ಪ್ರತಿಸ್ಪಂದನ ಗಾಬರಿ ಹುಟ್ಟಿಸಿತು. ಈ ಹೊತ್ತಿಗೂ ನಮ್ಮ ನಡುವೆ ಸಂಭವಿಸುತ್ತಿರುವ ಹಿಂಸೆ-ಹತ್ಯಾಕಾಂಡಗಳಿಗೆ ಇವರು ಸ್ಪಂದಿಸುತ್ತಿರುವ ರೀತಿ ಇದಕ್ಕಿಂತ ಭಿನ್ನವಾಗಿ ಇರದಿರುವಾಗ ಭವಿಷ್ಯ ಭಾರತದ ಬಗ್ಗೆ ನೆನೆದು ತತ್ತರಿಸುವಂತಾಯಿತು.

Share

Leave a comment

Your email address will not be published. Required fields are marked *

Recent Posts More

 • 4 days ago No comment

  ಕವಿಸಾಲು | ಕೈಗಳ ಚಾಚಿ ನೋಡು

      ಕವಿಸಾಲು         ಕಟ್ಟಿಕೊಂಡ ಚೌಕಟ್ಟುಗಳ ಮುರಿದುಬಿಡು ಹರಿಯಬಿಡು ಬಿಳಿ ಗೆಣ್ಣುಗಳಿಗೆ ಮೈಯ ತುಂಬ ಹರಿವ ಮಿಂಚುಗಳನು ತುಂಬಿಕೊಳ್ಳಲಿ ರಕ್ತ, ಮಾಂಸಕ್ಕೆ ಮತ್ತೊಮ್ಮೆ ಭಾವಗಳು ಸುಖಿಸಲಿ ಬೊಗಸೆ ತುಂಬ ಬಿಗಿಯಾಗಿ ಮುಚ್ಚಿದ ಮುಷ್ಠಿಯನ್ನು ಬಿಚ್ಚಿ ಒಮ್ಮೆ ನನಗೆ ತೋರಿಸಿಬಿಡು ಬಚ್ಚಿಟ್ಟುಕೊಂಡಿರುವುದು ನಿನ್ನನ್ನೋ ಕಳೆದುಹೋದರೆ ಎಂಬ ಭಯದಲ್ಲಿ ಭದ್ರವಾಗಿ ಹಿಡಿದ ನೆನಪುಗಳನ್ನೋ ಚೆನ್ನಾಗಿ ಗೊತ್ತು ನಿನ್ನ ಬೆಳಗಾಗುವುದು ಆ ಹಸ್ತ ದರ್ಶನದಲಿ ರಾತ್ರಿಯಾಗುವುದು ಅದೇ ...

 • 7 days ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 2 weeks ago No comment

  ಕಥನ | ಮುಕ್ತಾಯ

    ಕಥನ       ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ನನ್ನ ಜೀವನದ್ದೂ ಕೂಡಾ. ರಣರಂಗದಲ್ಲಿ ವೈರಿಗಳೊಡನೆ ಕಾದಾಡುವಾಗ, ಅದೆಷ್ಟೋ ಸೈನಿಕರ ಛಿದ್ರವಾದ ಶವಗಳನ್ನು ಮಣ್ಣು ಮಾಡಿ ಎದೆಗುಂದಿದಾಗ, ಯುಧ್ಧಖೈದಿಯಾಗಿ ಶತ್ರುದೇಶಕ್ಕೆ ಸೆರೆಸಿಕ್ಕಿ ಅವರು ಕೊಟ್ಟ ಚಿತ್ರಹಿಂಸೆಗಳನ್ನು ಅನುಭವಿಸಿದಾಗ ...

 • 2 weeks ago No comment

  ಕವಿಸಾಲು | ಕಾಡುತ್ತಿರು ಆಗಾಗ ನೀನು

      ಕವಿಸಾಲು         ಎಷ್ಟೊಂದು ಸಾರಿ ಮಾತಾಡುತ್ತಿದ್ದೆ ನಿನ್ನೊಡನೆ ಕೂತು ಗಿಡ, ಬಳ್ಳಿ, ಮರ ಮೋಡಗಳನು ಮನ ಮುಟ್ಟುವ ಪ್ರತಿ ಅಲೆಗಳನು ಕರೆದು ಮಾತಾಡಿಸುತ್ತಿದ್ದೆವು ಹದವಾಗಿ ಬೆರೆತು ರಾತ್ರೋ ರಾತ್ರಿಯ ಕಪ್ಪಿನಲಿ ಕೌತುಕದ ಅಪ್ಪುಗೆಯಲಿ ನಡುಗುವ ಚಳಿಯಲಿ ಒಂದಾಗಿ ಬೆಚ್ಚಗೆ ಕುಳಿತು ಕರಿ ಗಿರಿಶಿಖರಗಳ ಬೆಳ್ಳಿರೇಖೆಗಳನು ಫಳ್ಳನೆ ಮಿನುಗುವ ನಕ್ಷತ್ರಗಳನೂ ಕೈಯಲ್ಲಿ ಹಿಡಿದು ಕುಳಿತು ಮುಖಾಮುಖಿಯಾಗಿ ಕೂತು ಹರಟುತ್ತಿದ್ದೆವು ನಾವೊಂದಾಗಿದ್ದಾಗ ನಮಗನಿಸಿದ್ದನ್ನು ದಿನಚರಿ ...

 • 3 weeks ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...


Editor's Wall

 • 09 November 2018
  7 days ago No comment

  ಹೊಸ ಕಾಲದ ಹರಕೆಯ ಕುರಿಗಳು!

    ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

 • 28 October 2018
  3 weeks ago No comment

  ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

    ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...

 • 31 August 2018
  3 months ago No comment

  ಪ್ರಸಾದ್ ಪಟ್ಟಾಂಗ | ಓದು ಮಗು ಓದು…

      “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

 • 30 August 2018
  3 months ago No comment

  ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                      ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

 • 26 August 2018
  3 months ago No comment

  ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

      ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...