Share

ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!
ದ್ರವಿಡ

 

ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.

 

 

 

ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ಬಿಚ್ಚಿಡುತ್ತದೆ, ಸೋಂಜಿದಾ ಎಂಬ ಪುಟ್ಟ ಹೆಣ್ಣುಮಗಳ ಕಥೆ.

ಸೋಂಜಿದಾಗೆ ಈಗ ಬರೀ 15 ವರ್ಷ. ಮತ್ತು ಆಕೆ ಈಗ ಗರ್ಭಿಣಿ. ಈ ಪುಟ್ಟ ಪೋರಿಯ ಗಂಡನ ವಯಸ್ಸು ಗೊತ್ತಾದರೆ ಅವಳ ಬದುಕಿನ ಭಯಾನಕತೆಯೂ ಕಣ್ಣೆದುರಿಗೆ ಬಂದಂತಾಗಿ ಮೈ ಝುಮ್ಮೆನ್ನುತ್ತದೆ. ನಿಜ. ಸೋಂಜಿದಾಳನ್ನು ಮದುವೆ ಮಾಡಿರುವುದು ಇವತ್ತೊ ನಾಳೆಯೋ ಸಾಯುವ ಹಾಗಿರುವ 73ರ ಮುದುಕನಿಗೆ. ಮದುವೆಯ ಬಗ್ಗೆ ಯೋಚನೆಯನ್ನು ಕೂಡ ಮಾಡಲಿಕ್ಕಾಗದ ವಯಸ್ಸಿನಲ್ಲಿ, ಆಟವಾಡಿಕೊಳ್ಳುತ್ತ ಹಾಯಾಗಿರಬೇಕಾದ ಹೊತ್ತಲ್ಲಿ ಮದುವೆಯಾಗಿ, ಸಂಸಾರ ಭಾರಕ್ಕೆ ಹೆಗಲು ಕೊಟ್ಟು ನಲುಗುತ್ತಿದ್ದಾಳೆ ಸೋಂಜಿದಾ. ಮದುವೆ ಬಗ್ಗೆ ಊಹೆಯನ್ನೂ ಮಾಡಿರದ ಸೋಂಜಿದಾಳನ್ನು ಇಂಥ ಕರಾಳತೆಯ ಕೂಪಕ್ಕೆ ತಳ್ಳಿರುವುದು ಅವಳ ಕುಟುಂಬದ ಬಡತನ.

ಕೊಂಚ ಲಜ್ಜೆಯಾಗಲೀ ಯಾವ ದಾಕ್ಷಿಣ್ಯವಾಗಲೀ ಇಷ್ಟೇ ಇಷ್ಟೂ ಪಾಪಪ್ರಜ್ಞೆಯಾಗಲೀ ಇರದ, ವಯಸ್ಸಿನಲ್ಲಿ ಆಕೆಯ ತಾತನಷ್ಟಿರುವ ಅವಳ ಗಂಡ ಈ ಮದುವೆಯಿಂದ ತನಗಾಗಿರುವ ಅನುಕೂಲತೆಗಳನ್ನು ಬಣ್ಣಿಸಿ ಬಣ್ಣಿಸಿ ಹೇಳುತ್ತಾನೆ. ಈ ಜಗತ್ತಿನಲ್ಲಿ ಸಿಗಬಹುದಾದ ಸುಖವನ್ನೆಲ್ಲ ಆಕೆ ತನಗೆ ಕೊಡುತ್ತಿದ್ದಾಳೆಂಬ, ತನ್ನ ಮನೆ ಮತ್ತು ಕುಟುಂಬವನ್ನು ನೋಡಿಕೊಳ್ಳುತ್ತಿದ್ದಾಳೆಂಬ ನಿಶ್ಚಿಂತ ನಿಲುವು ಅವನದು. ಸೋಂಜಿದಾಳ ಪುಟ್ಟ ಎದೆಯೊಳಗಿನ ತಳಮಳ, ತಲ್ಲಣಗಳ ಬಾಧೆ ಅವನಿಗಿಲ್ಲವೇ ಇಲ್ಲ. ಇರುವುದು ಸಾಧ್ಯವೂ ಇಲ್ಲ.

ಗರ್ಭಿಣಿ ಸೋಂಜಿದಾಳಿಗೆ ಮಾತ್ರ ನಾಳೆಯೆಂಬುದೇ ಘೋರವಾಗಿ ಕಾಡುತ್ತಿದೆ. ಕಟ್ಟಿಕೊಂಡಿರುವ ಮುದಿಯ ಸತ್ತರೆ ತನ್ನ ಬದುಕು ಹೇಗೆ, ಮಗುವನ್ನು ಸಾಕಿ ಬೆಳೆಸುವುದಕ್ಕೆ ದಾರಿಯೇನು ಎಂಬ ಪ್ರಶ್ನೆಗಳು ಅವಳೆದುರು ಆಗಲೇ ಬೃಹದಾಕಾರ ತಳೆದು ನಿಂತಿವೆ. ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.

ನಿರ್ಲಜ್ಜ ಧೋರಣೆಯೊಂದು ಅಸಹಾಯಕ, ಅಬಲ ಹೆಣ್ಣುಮಕ್ಕಳನ್ನು – ಅವರಿನ್ನೂ ಈ ಬದುಕಿಗೆ ಎಚ್ಚರಾಗುವುದಕ್ಕೆ ಮುಂಚೆಯೇ ಹೇಗೆ ಹರಿದು ತಿನ್ನುತ್ತಿದೆ ಎಂಬುದಕ್ಕೆ ಬಾಲ್ಯವಿವಾಹಕ್ಕೆ ಬಲಿಯಾದ ಸೋಂಜಿದಾಳಂಥವರ ಸಂದರ್ಭವೇ ಸಾಕ್ಷಿ. ಇಂಥ ಕಡು ಭಯಂಕರ ಕತ್ತಲೊಳಗೆ ಅದೆಷ್ಟು ಸೋಂಜಿದಾಗಳು ನಾಳೆಯ ಭಯದಲ್ಲಿ ಕಂಗೆಟ್ಟು ಕೂತಿದ್ದಾರೊ ಯಾರಿಗೆ ಗೊತ್ತು?

(ವಿಡಿಯೋ ಕೃಪೆ: ಯೂನಿಸೆಫ್)

Share

Leave a comment

Your email address will not be published. Required fields are marked *

Recent Posts More

  • 4 days ago No comment

    ಕವಿಸಾಲು | ಕೈಗಳ ಚಾಚಿ ನೋಡು

        ಕವಿಸಾಲು         ಕಟ್ಟಿಕೊಂಡ ಚೌಕಟ್ಟುಗಳ ಮುರಿದುಬಿಡು ಹರಿಯಬಿಡು ಬಿಳಿ ಗೆಣ್ಣುಗಳಿಗೆ ಮೈಯ ತುಂಬ ಹರಿವ ಮಿಂಚುಗಳನು ತುಂಬಿಕೊಳ್ಳಲಿ ರಕ್ತ, ಮಾಂಸಕ್ಕೆ ಮತ್ತೊಮ್ಮೆ ಭಾವಗಳು ಸುಖಿಸಲಿ ಬೊಗಸೆ ತುಂಬ ಬಿಗಿಯಾಗಿ ಮುಚ್ಚಿದ ಮುಷ್ಠಿಯನ್ನು ಬಿಚ್ಚಿ ಒಮ್ಮೆ ನನಗೆ ತೋರಿಸಿಬಿಡು ಬಚ್ಚಿಟ್ಟುಕೊಂಡಿರುವುದು ನಿನ್ನನ್ನೋ ಕಳೆದುಹೋದರೆ ಎಂಬ ಭಯದಲ್ಲಿ ಭದ್ರವಾಗಿ ಹಿಡಿದ ನೆನಪುಗಳನ್ನೋ ಚೆನ್ನಾಗಿ ಗೊತ್ತು ನಿನ್ನ ಬೆಳಗಾಗುವುದು ಆ ಹಸ್ತ ದರ್ಶನದಲಿ ರಾತ್ರಿಯಾಗುವುದು ಅದೇ ...

  • 7 days ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

  • 2 weeks ago No comment

    ಕಥನ | ಮುಕ್ತಾಯ

      ಕಥನ       ದಿನದ ಮುಕ್ತಾಯಕ್ಕೆ ಡೈರಿ ಬರೆಯುವುದೊಂದು ಚಟ ನನ್ನ ಪಾಲಿಗೆ. ಅದೆಷ್ಟೋ ಸುಳ್ಳುಗಳನ್ನು ಬರೆದ ಈ ಪಾಪಿ ಕೈಗಳು ಸತ್ಯವನ್ನು ಬರೆಯುವುದು ಇಲ್ಲಿ ಮಾತ್ರ. ಅಂದ ಹಾಗೆ ಇಂದು ಈ ದಿನದ ಮುಕ್ತಾಯವಷ್ಟೇ ಅಲ್ಲ ನನ್ನ ಜೀವನದ್ದೂ ಕೂಡಾ. ರಣರಂಗದಲ್ಲಿ ವೈರಿಗಳೊಡನೆ ಕಾದಾಡುವಾಗ, ಅದೆಷ್ಟೋ ಸೈನಿಕರ ಛಿದ್ರವಾದ ಶವಗಳನ್ನು ಮಣ್ಣು ಮಾಡಿ ಎದೆಗುಂದಿದಾಗ, ಯುಧ್ಧಖೈದಿಯಾಗಿ ಶತ್ರುದೇಶಕ್ಕೆ ಸೆರೆಸಿಕ್ಕಿ ಅವರು ಕೊಟ್ಟ ಚಿತ್ರಹಿಂಸೆಗಳನ್ನು ಅನುಭವಿಸಿದಾಗ ...

  • 2 weeks ago No comment

    ಕವಿಸಾಲು | ಕಾಡುತ್ತಿರು ಆಗಾಗ ನೀನು

        ಕವಿಸಾಲು         ಎಷ್ಟೊಂದು ಸಾರಿ ಮಾತಾಡುತ್ತಿದ್ದೆ ನಿನ್ನೊಡನೆ ಕೂತು ಗಿಡ, ಬಳ್ಳಿ, ಮರ ಮೋಡಗಳನು ಮನ ಮುಟ್ಟುವ ಪ್ರತಿ ಅಲೆಗಳನು ಕರೆದು ಮಾತಾಡಿಸುತ್ತಿದ್ದೆವು ಹದವಾಗಿ ಬೆರೆತು ರಾತ್ರೋ ರಾತ್ರಿಯ ಕಪ್ಪಿನಲಿ ಕೌತುಕದ ಅಪ್ಪುಗೆಯಲಿ ನಡುಗುವ ಚಳಿಯಲಿ ಒಂದಾಗಿ ಬೆಚ್ಚಗೆ ಕುಳಿತು ಕರಿ ಗಿರಿಶಿಖರಗಳ ಬೆಳ್ಳಿರೇಖೆಗಳನು ಫಳ್ಳನೆ ಮಿನುಗುವ ನಕ್ಷತ್ರಗಳನೂ ಕೈಯಲ್ಲಿ ಹಿಡಿದು ಕುಳಿತು ಮುಖಾಮುಖಿಯಾಗಿ ಕೂತು ಹರಟುತ್ತಿದ್ದೆವು ನಾವೊಂದಾಗಿದ್ದಾಗ ನಮಗನಿಸಿದ್ದನ್ನು ದಿನಚರಿ ...

  • 3 weeks ago No comment

    ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

      ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...


Editor's Wall

  • 09 November 2018
    7 days ago No comment

    ಹೊಸ ಕಾಲದ ಹರಕೆಯ ಕುರಿಗಳು!

      ಅಮಾಯಕತೆಯನ್ನು ಮತ್ತೆ ಮತ್ತೆ ಮೌನಕ್ಕೆ ಕಟ್ಟಿಹಾಕುವ ಇವತ್ತಿನ ಸಂದರ್ಭದಲ್ಲಿ, ಮಾತು ಸೋಲದಂತೆ ಕಾಯುವುದಕ್ಕೆ ಮೌನದ ಜರೂರು ಇನಿತಾದರೂ ಇದೆ ಎಂದು ನಂಬುವುದೂ ಸಾಧ್ಯವಿಲ್ಲ.     ಗೆಳೆಯರೊಬ್ಬರು ಕೆಲ ದಿನಗಳ ಹಿಂದೆ, ನಿಮ್ಮ ಇಷ್ಟದ ಮೂರ್ನಾಲ್ಕು ಕಥೆಗಳನ್ನು ಹೆಸರಿಸಿ ಎಂದು ಕೇಳಿದರು. ನಾನು ಯೋಚಿಸಿದೆ. ಇಷ್ಟದ ಯಾವುದೇ ಕೃತಿಯನ್ನು ನಮ್ಮೊಳಗೇ ಗುರುತಿಸಿಕೊಳ್ಳುವುದು ಸುಲಭ ಮತ್ತು ಅದು ನಮಗೆ ಆಪ್ತವಾಗುವಂಥದ್ದು. ಆದರೆ ಯಾಕೆ ಇಷ್ಟ ಎಂದು ವಿವರಿಸಬೇಕಾಗಿ ಬಂದಾಗಲೇ ...

  • 28 October 2018
    3 weeks ago No comment

    ಪ್ರಸ್ತಾಪ | #MeToo: ‘ಮಾತು’ ಎದುರಿಸುತ್ತಿರುವ ಬಿಕ್ಕಟ್ಟು

      ದಮನಿತ ದನಿಯೊಂದು ಮಾತಾದಾಗ ಎಲ್ಲ ಕಾಲದಲ್ಲೂ ಎದುರಾಗುತ್ತಲೇ ಬಂದ ಬಿಕ್ಕಟ್ಟಿನ ಸನ್ನಿವೇಶವೇ ಈಗ #MeToo ಅಭಿಯಾನಕ್ಕೂ ಎದುರಾಗಿರುವುದು.     ಕಳೆದ ಹಲವು ದಿನಗಳಿಂದ #MeToo ಅಭಿಯಾನ ಪಡೆಯುತ್ತಿರುವ ತೀವ್ರತೆ, ಹೆಣ್ಣಿನ ದನಿಗೆ ಈ ಸಮಾಜದ ಕಿವಿ ನಿಧಾನವಾಗಿಯಾದರೂ ತೆರೆದುಕೊಳ್ಳುತ್ತಿರುವುದಕ್ಕೆ ಸಾಕ್ಷಿಯಂತೆ ಕಾಣಿಸುತ್ತಿದೆ. ಆದರೆ ಅಪಸ್ವರಗಳು ಅದೇ ಹೆಣ್ಣಿನ ದನಿಯನ್ನು ಅಡಗಿಸುವಷ್ಟೇ ಗಟ್ಟಿಯಾದ ಅಬ್ಬರದೊಂದಿಗಿರುವುದೂ ಸುಳ್ಳಲ್ಲ. ಪತ್ರಕರ್ತೆ ಪ್ರಿಯಾ ರಮಾನಿ ಪತ್ರಿಕೋದ್ಯಮದಲ್ಲಿ ಲೈಂಗಿಕ ಕಿರುಕುಳ ಅನುಭವಿಸಿ ನೊಂದ ...

  • 31 August 2018
    3 months ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

  • 30 August 2018
    3 months ago No comment

    ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                        ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

  • 26 August 2018
    3 months ago No comment

    ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

        ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...