Share

ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

 

 

 

 

 

 

 

 

 

 

ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.

 

2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ಮುಂತಾದ ಕುಕೃತ್ಯವೆಸಗುವವರನ್ನು ಬಿಟ್ಟು ಪ್ರಧಾನಿಯ ಕೊಲೆ ಸಂಚು ಎನ್ನುವ ಕಟ್ಟುಕತೆಯ ಆಧಾರದಲ್ಲಿ ದೇಶದೊಳಗಿನ ಚಿಂತಕರನ್ನೂ ಹೋರಾಟಗಾರರನ್ನೂ ಬರಹಗಾರರನ್ನೂ ಬಂಧಿಸುವ ಮೂಲಕ ಸರ್ವಾಧಿಕಾರಿ ನಡೆಯನ್ನು ಖುಲ್ಲಂಖುಲ್ಲ ಮೆರೆಯಲಾಗುತ್ತಿದೆ.

ಸುತ್ತಾ ರಕ್ಷಣೆಯ ಭದ್ರಕೋಟೆ ಕಟ್ಟಿಕೊಂಡು ಜನರಿಂದ ಬಹುದೂರವೇ ಉಳಿದುಬಿಟ್ಟ ಹಾಲಿ ಪ್ರಧಾನಿಯ ಕೊಲೆ ಸಂಚು ಎಂಬ ಕಪೋಲಕಲ್ಪಿತ ನಾಟಕವನ್ನು ಯಾವುದೇ ರಕ್ಷಣಾ ವಿಧಾನವನ್ನು ಅಳವಡಿಸಿಕೊಳ್ಳದೆಯೇ ಜನಾನುರಾಗಿಯಾಗಿ ಜನಸಾಮಾನ್ಯರ ಜೊತೆ ಬೆರೆಯುತ್ತಿದ್ದ ದಿವಂಗತ ರಾಜೀವ ಗಾಂಧಿಯವರೊಂದಿಗೆ ತಳುಕು ಹಾಕಿ ಬಿಂಬಿಸುವುದೇ ಹಾಸ್ಯಾಸ್ಪದ ವಿಚಾರ.

ಹೀಗೆ ಸಂಚಿನ ಹುಸಿಕಥೆಯೊಂದನ್ನು ಹೊಸೆದು ಚಿಂತಕರು ಮತ್ತು ಹೋರಾಟಗಾರರನ್ನು ಬಂಧಿಸಿದ ಘಟನೆಯಿಂದ ದೇಶವೇ ‘ಅಘೋಷಿತ ತುರ್ತುಪರಿಸ್ಥಿತಿ ಹೇರಲಾಗಿದೆ, ಹಿಟ್ಲರನ ಸರ್ವಾಧಿಕಾರದ ಕರಾಳ ದಿನಗಳು ಬಂದೇಬಿಟ್ಟವು’ ಎಂದು ಕಳವಳಗೊಂಡಿತು. ಜನರೊಳಗಿನ ಆಕ್ರೋಶ ಬುಗಿಲೆದ್ದಿತು. ಪ್ರಭುತ್ವವೇ ಹೀಗೆ ಪ್ರಜೆಗಳ ಮೇಲೆ ಮುರುಕೊಂಡು ಬೀಳುವಾಗ ಈ ಆತಂಕ ಸಹಜವೇ ಆಗಿದೆ. ಇದಕ್ಕೆ ತಕ್ಕ ಪ್ರತಿರೋಧವೂ ಸಿಡಿಯಬೇಕಾಗಿರುವ ಅತ್ಯಂತಿಕ ಗಳಿಗೆಯೂ ಆಗಿದೆ.

ಆದರೆ ಪ್ರಜ್ಞಾವಂತರು ಈ ಕರಾಳ ಸನ್ನಿವೇಶವನ್ನು ಎದುರಿಸುವಾಗ ಸೋಲು ಖಚಿತವೇ ಎನ್ನುವ ಗೊಂದಲಮಯ ಮನಃಸ್ಥಿತಿಯಿಂದ ಹೋರಾಟದ ಕಣಕ್ಕಿಳಿಯಬೇಕೋ ಅಥವಾ ಇವರ ಆಟ ನಡೆಯುದಿಲ್ಲ ಎನ್ನುವ ಆತ್ಮವಿಶ್ವಾಸದಿಂದ ಪ್ರತಿರೋಧವನ್ನು ದಾಖಲಿಸಬೇಕೋ?

ಈ ಮಾತನ್ನು ವಿವರಿಸಲು ಒಂದು ಘಟನೆ ನೆನಪಿಸುತ್ತೇನೆ. ಆ ದಿನ ಜೆಎನ್ ಯು ವಿದ್ಯಾರ್ಥಿಗಳಾದ ಕನ್ಹಯಾಕುಮಾರ್ ಮತ್ತು ಉಮರ್ ಖಾಲಿದ್ ರನ್ನು ಬಂಧಿಸಿದಾಗ ಇಂಥದೇ ಭಯದ ವಾತಾವರಣ ಇತ್ತಲ್ಲವೇ? ಆಗ ಅಶೋಕ ಶೆಟ್ಟರ್ ತಾವು ಜೆಎನ್ ಯು ವಿದ್ಯಾರ್ಥಿಯಾಗಿ 11 ದಿನ ಜೈಲುಪಾಲಾದ ಕುರಿತು ಬರೆದ ಒಂದು ಲೇಖನದಲ್ಲಿ, ಇಂಥ ಕೇಸುಗಳೆಲ್ಲ ನಿಲ್ಲುವುದಿಲ್ಲ ಎಂದು ಹೇಳಿದ್ದು ನನ್ನಂಥವಳಲ್ಲಿ ಅದೆಂಥಾ ಭದ್ರತಾ ಭಾವವನ್ನು ತುಂಬಿತೆಂದು ಹೇಳಲಾರೆ. ಆಮೇಲೆ ಆದುದೇನು? ಈ ಪ್ರಹಸನ ಮೋದಿ ಸರಕಾರಕ್ಕೆ ಎಂಥಾ ತಪರಾಕಿ ಕೊಟ್ಟು ಯಾವ ಪರಿಯ ಮುಖಭಂಗ ಎದುರಿಸಬೇಕಾಯಿತು ನೋಡಿ.

ಮೋದಿ ಸರಕಾರ ಬಂದ ನಂತರ ದೇಶದ ಸಂವಿಧಾನವನ್ನು ಸುಟ್ಟ ಪ್ರಕರಣದಿಂದ ಹಿಡಿದು ಈ ದೇಶದಲ್ಲಿ ನಡೆದ ಎಲ್ಲ ಅಹಿತಕರ ಘಟನೆಗಳೂ ಹಿಂದೂ ರಾಷ್ಟ್ರ ನಿರ್ಮಾಣದ ಉದ್ದೇಶದಿಂದಲೇ ನಡೆಸಿದಂಥವು ಎಂಬ ಕಹಿ ಸಂಗತಿ ಎದುರಿಟ್ಟುಕೊಂಡೇ ದೇಶದ ಚಿಂತಕರು, ಹೋರಾಟಗಾರರನ್ನು ಬಂಧಿಸಿದ್ದನ್ನೂ ಅವಲೋಕಿಸಿದರೆ ಚಿಂತಕರು, ಹೋರಾಟಗಾರರ ಬಂಧನ ಎನ್ನುವುದು ಅತ್ಯಂತ ಮಹತ್ವ ಪಡೆದುಕೊಳ್ಳುತ್ತಿರುವುದು ಮುಖ್ಯವಾಗಿ ಕಾಲಬುಡದಲ್ಲೇ ಇರುವ 2019ರ ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ. ಈ ಕಾರಣದಿಂದಲೇ ದೇಶವು ಬೆಚ್ಚಿಬಿದ್ದಿರುವುದು.

ಆದರೆ ನಾವು ಇಲ್ಲಿಯೇ ಇನ್ನೊಂದು ಮಹತ್ತರ ಸಂಗತಿಯನ್ನೂ ಆಲೋಚಿಸಬೇಕು. ಬಂಧಿಸಲಾದ ಐವರು ಚಿಂತಕರು, ಹೋರಾಟಗಾರರನ್ನೂ ಸೆರೆಮನೆಗೆ ಬದಲು ಗೃಹಬಂಧನದಲ್ಲಿರಿಸಲು ಸನ್ಮಾನ್ಯ ಸುಪ್ರೀಂಕೋರ್ಟ್ ಆದೇಶಿಸಿದೆ. ಇದು ಮೋದಿ ಸರಕಾರಕ್ಕೆ ಬಿದ್ದ ತಪರಾಕಿಯಲ್ಲದೆ ಬೇರೇನಲ್ಲ. ಈಗ ನಾವು ಯೋಚಿಸಬೇಕಾದುದೆಂದರೆ ಬರಲಿರುವ ಚುನಾವಣೆಯ ಎದುರಲ್ಲೇ ಕನ್ಹಯಾನ ಕೇಸಿನಂತೆಯೇ ಈ ಕೇಸು ಬಕ್ಕಾಬೋರಲು ಮಗುಚಿಕೊಂಡಿತೆಂದರೆ ಮೋದಿ ಸರಕಾರ ಎದುರಿಸಬೇಕಿರುವ ಮುಖಭಂಗವನ್ನು ಊಹಿಸಿ ನೋಡಿ.

ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ. ಈಗಾಗಲೇ ಡಿಮಾನಿಟೈಸೇಷನ್ ಸಹಿತ ಮೋದಿ ಸರಕಾರದ ಎಲ್ಲ ಯೋಜನೆಗಳೂ ಇವಿಎಂ ಮೋಸ, ಹಣ, ಕುತಂತ್ರಗಳೂ ಪೂರ್ಣ ಯಶಸ್ಸು ತಂದುಕೊಡದೆ ಇವರ ಕಾರ್ಯತಂತ್ರ ವೈಫಲ್ಯ ಕಂಡಿವೆ. ಗೋಮಾತೆ, ಹಿಂದೂ ಮುಸ್ಲಿಮ್ ಇಷ್ಯೂಗಳೂ ಮಾಸಿ ಮುಕ್ಕಾಗಿವೆ. ಕಾಳಧನ, ಹದಿನೈದು ಲಕ್ಷ, ಮೇಕಿನ್ ಇಂಡಿಯಾ, ಬೇಟಿ ಬಚಾವೋ, ಸ್ವಚ್ಛಭಾರತ ಎಲ್ಲ ಎಲ್ಲವೂ ಮಗುಚಿಬಿದ್ದಿವೆ. ಅದರ ಮೇಲೆ ವಿಚಾರವಾದಿಗಳ ಬಂಧನದ ಹಿಂದಿನ ಕಪೋಲಕಲ್ಪಿತ ಕಥೆ ಬಯಲಾಯಿತೆಂದರೆ ಏನಾದೀತು ಊಹಿಸಿ.

ಕಾದಂಬಿನಿ

ಹೈಡ್ರೋ ಇಂಜಿನಿಯರ್ಸ್ ಕಂಪನಿಯಲ್ಲಿ ಆಫೀಸ್ ಎಕ್ಸಿಕ್ಯೂಟೀವ್. ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆಯಲ್ಲಿ ವಾಸ. ಬಿಡುವಿನ ವೇಳೆಯಲ್ಲಿ ಬರೆಯುವ ಹವ್ಯಾಸ. ಪತ್ರಿಕೆಗಳು, ವೆಬ್ ಪೋರ್ಟಲ್ ಗಳಲ್ಲಿ ಬರಹಗಳು ಪ್ರಕಟವಾಗಿವೆ. ‘ಹಲಗೆ ಮತ್ತು ಮೆದುಬೆರಳು’ ಅವರ ಮೊದಲ ಕಾವ್ಯಸಂಕಲನ.

Share

Leave a comment

Your email address will not be published. Required fields are marked *

Recent Posts More

  • 13 hours ago No comment

    ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

        ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

  • 1 week ago No comment

    ಕವಿಸಾಲು | ಒಲವಿನಾಟ

        ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

  • 2 weeks ago No comment

    ಕವಿಸಾಲು | ನಕ್ಷತ್ರ ನಾವೆ

      ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

  • 2 weeks ago No comment

    ಕಲರವ | ಒಂದು ಸಿನಿಮಾ ನೋಡಿದ ಕಥೆ…

        ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

  • 3 weeks ago No comment

    ಕವಿಸಾಲು | ಅಲೆಗಳೆದ್ದ ಕೊಳ…

        ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...


Editor's Wall

  • 31 August 2018
    3 weeks ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

  • 30 August 2018
    3 weeks ago No comment

    ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                        ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

  • 26 August 2018
    4 weeks ago No comment

    ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

        ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

  • 26 August 2018
    4 weeks ago No comment

    ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

      ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

  • 23 August 2018
    1 month ago No comment

    ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                        ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...