Share

ಪ್ರಸಾದ್ ಪಟ್ಟಾಂಗ | ಓದು ಮಗು ಓದು…

 

 

“ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು.

ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಾಮಾನ್ಯವಾಗಿ ವ್ಯಸ್ತರಾಗಿರುವವರು. ಆದರೆ ಅಷ್ಟು ಬ್ಯುಸಿಯಾಗಿದ್ದರೂ ಕೂಡ ಮಾತಾಡಬೇಕು ಎಂದಾಗಲೆಲ್ಲಾ ಅಷ್ಟೇ ಬೇಗ ಮಾತಿಗೆ ಸಿಗುವವರೂ ಹೌದು. ಅದರಲ್ಲೂ ಈ ಬಾರಿ ಮಕ್ಕಳಿಗಾಗಿ ಒಂದು ಪುಸ್ತಕ ಮಾಡೋಣ ಎಂದಾಗ ನನಗೆ ಬಹಳ ಖುಷಿಯಾಗಿದ್ದಂತೂ ಹೌದು. ಮುಂದೆ ನಡೆದದ್ದೆಲ್ಲಾ ಸೂಪರ್ ಫಾಸ್ಟ್ ಪ್ರಕ್ರಿಯೆಗಳು. ಲೇಖಕರಿಂದ ಲೇಖನಗಳನ್ನು ತರಿಸಿಕೊಂಡಿದ್ದೂ, ಗಣೇಶ್ ರವರ ಸಂಪಾದಕತ್ವದಲ್ಲಿ ಪ್ರಕಟವಾಗಿದ್ದೂ, ಮಾರುಕಟ್ಟೆಗೆ ಬಂದಿದ್ದೂ ಆಯಿತು. ಇತ್ತೀಚೆಗಷ್ಟೇ ಪುಸ್ತಕದ ಪ್ರತಿಯೊಂದು ಸ್ವತಃ ಅವರಿಂದಲೇ ಕೈಗೆ ಸಿಕ್ಕಾಗ ನನಗಾದ ಸಂತಸವು ಅಷ್ಟಿಷ್ಟಲ್ಲ.

ನನ್ನ ಓದಿನ ದಿನಗಳನ್ನು ಹಿಡಿದುಕೊಂಡು ಬರವಣಿಗೆಯ ದಿನಗಳವರೆಗೆ ಬಂದರೂ ನನ್ನಂಥವರಿಗಿದ್ದ ಒಂದೇ ಒಂದು ದೊಡ್ಡ ಪ್ರಶ್ನೆಯೆಂದರೆ ನಾವು ಏನನ್ನು ಓದಬೇಕು ಎಂಬುದು. ಪ್ರೌಢಶಾಲೆಗೆ ಬರುವವರೆಗೂ ಒಂದು ತಕ್ಕಮಟ್ಟಿನ ಗ್ರಂಥಾಲಯದ ಭಾಗ್ಯ ನನಗೆ ದೊರಕದಿದ್ದ ಪರಿಣಾಮವಾಗಿ ನಾನು ಮನೆಯಲ್ಲಿದ್ದ ಏಳೆಂಟು ಪುಸ್ತಕಗಳನ್ನೇ ಹಲವು ಬಾರಿ ಓದುತ್ತಿದ್ದೆ. ಮೊಬೈಲು, ಇಂಟರ್ನೆಟ್ಟುಗಳಿರದಿದ್ದ ಆ ದಿನಗಳಲ್ಲಿ ನಮ್ಮಂಥವರಿಗಿದ್ದ ಮನರಂಜನೆಯ ದಾರಿಯೆಂದರೆ ಓದು ಮಾತ್ರ. ಅದನ್ನು ಹೊರತುಪಡಿಸಿದರೆ ಕೆಲ ಕಾಮಿಕ್ಸ್ ಗಳು ಒಂದಿಬ್ಬರು ಮಿತ್ರರ ನಡುವಿನಲ್ಲೇ ವಿನಿಮಯವಾಗುತ್ತಿದ್ದವು. ಇನ್ನೂ ಓದಬೇಕು ಎಂದೇನೋ ಅನ್ನಿಸುತ್ತಿತ್ತು. ಆದರೆ ಏನನ್ನು ಓದಬೇಕು ಎಂಬುದು ಮಾತ್ರ ಗೊತ್ತಿರಲಿಲ್ಲ. ಇನ್ನು ಆಪ್ತವಲಯದಲ್ಲೂ ಅಂಥಾ ಗಂಭೀರ ಓದುಗರಿರದಿದ್ದ ಪರಿಣಾಮವಾಗಿ ಇಂಥದ್ದೊಂದು ಗೊಂದಲದ ಮಧ್ಯೆಯೇ ಸಿಕ್ಕಿದ್ದೆಲ್ಲವನ್ನೂ ಓದುತ್ತಾ ಹೋಗುತ್ತಿದ್ದೆವು. ಆರಂಭದ ಓದಿನ ಪಯಣ ಯಾವುದೇ ಪೂರ್ವಾಗ್ರಹಗಳಿಲ್ಲದೆ ಹೆಜ್ಜೆಹಾಕಿದ್ದೇನೋ ಸರಿ. ಆದರೆ ಇರಬೇಕಾದ ಶಿಸ್ತಂತೂ ಇರಲಿಲ್ಲ ಎಂಬುದನ್ನು ಈಗ ನೆನೆಸಿಕೊಂಡಾಗ ವಿಚಿತ್ರವೆನಿಸುತ್ತದೆ.

ನನಗೆ ನೆನಪಿರುವಂತೆ ನಮ್ಮ ಶಾಲಾ ಗ್ರಂಥಾಲಯದಿಂದ ನಿಯಮಿತವಾಗಿ ಪಠ್ಯೇತರ ವಿಷಯಗಳ ಪುಸ್ತಕಗಳನ್ನು ತೆಗೆದುಕೊಂಡು ಹೋಗುತ್ತಿದ್ದವನು ನಾನೊಬ್ಬ ಮಾತ್ರ. ನಾನು ಬಿಡಿಸುತ್ತಿದ್ದ ಕಲಾಕೃತಿಗಳ ಹೊರತಾಗಿ ಅಲ್ಲಿದ್ದ ಗ್ರಂಥಪಾಲಕಿಗೆ ನನ್ನ ಬಗ್ಗೆ ವಿಚಿತ್ರ ಕುತೂಹಲವನ್ನು ಹುಟ್ಟಿಸುತ್ತಿದ್ದ ಸಂಗತಿಯೆಂದರೆ ಈ ಪುಸ್ತಕಗಳ ಎರವಲು. ಆದರೂ ಆಕೆ ಬಲು ಮುತುವರ್ಜಿಯಿಂದ ಪುಸ್ತಕಗಳನ್ನು ಎತ್ತಿ ನನಗಾಗಿ ನೀಡುವವರು. ಇನ್ನು ಕಪಾಟಿನಲ್ಲಿದ್ದ ದಪ್ಪನೆಯ ಕೆಲ ಪುಸ್ತಕಗಳನ್ನು ನೋಡಿ ಹೆದರಿಕೊಂಡು ಕೆಲವೊಮ್ಮೆ ಓದಿದ್ದ ಕಿರುಪುಸ್ತಕಗಳನ್ನೇ ಹಲವು ಬಾರಿ ಓದಿದ್ದಿದೆ. ನನ್ನ ಈ ಹುಚ್ಚನ್ನು ನೋಡುತ್ತಾ ಇದೇನಪ್ಪಾ ಎಂದು ಅವರು ಕಣ್ಣರಳಿಸಿದ್ದೂ ಇದೆ. ಈ ದಿನಗಳಲ್ಲೇ ಶಾಲೆಯ ಸಾಹಿತ್ಯ ಸಂಘದ ಮುಖ್ಯಸ್ಥನಾಗಿದ್ದ ನಾನೊಮ್ಮೆ ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೆ. ಬಂದ ಅತಿಥಿಗಳೊಬ್ಬರು ‘ಪಂಪ, ಕುಮಾರವ್ಯಾಸನನ್ನು ಮೊದಲು ಓದಲೇಬೇಕು ಮಕ್ಕಳೇ’ ಅಂದುಬಿಟ್ಟರು. ಹಳೆಗನ್ನಡವು ಕಬ್ಬಿಣದ ಕಡಲೆಯಂತಿದ್ದ ಪರಿಣಾಮವಾಗಿ ಈ ಸಲಹೆಯೂ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ಈ ಮಧ್ಯೆ ಪಠ್ಯವಿಷಯಗಳ, ಪರೀಕ್ಷೆಗಳ ಮತ್ತು ಅಂಕಗಳ ಒತ್ತಡ. ಒಟ್ಟಿನಲ್ಲಿ ಸರ್ವಂ ಗೊಂದಲಮಯಂ!

ಶ್ರೀಯುತ ಗಣೇಶ್ ಕೋಡೂರುರವರ ಸಂಪಾದಕತ್ವದಲ್ಲಿ ಮೂಡಿಬಂದಿರುವ ‘ಪಠ್ಯದಾಚೆಗೆ ನಿಮ್ಮ ಮಕ್ಕಳು ಯಾವ ಪುಸ್ತಕಗಳನ್ನು ಓದಬೇಕು?’ ಕೃತಿಯ ಒಂದೊಂದೇ ಲೇಖನಗಳನ್ನು ಓದುತ್ತಿದ್ದರೆ ಹೀಗೆ ಹತ್ತಾರು ನೆನಪುಗಳು ಸಾಲುಗಟ್ಟಿ ನಿಂತಿದ್ದವು. ಹಾಗೆಯೇ ಇಂಥದ್ದೊಂದು ಪುಸ್ತಕ ನನಗೆ ನನ್ನ ಬಾಲ್ಯದ ದಿನಗಳಲ್ಲಿ ಸಿಕ್ಕಿದ್ದರೆ ಅದೆಷ್ಟು ಚಂದದ ಮಾರ್ಗದರ್ಶಿಯಾಗಿರುತ್ತಿತ್ತು ಎಂಬ ಅಚ್ಚರಿಯೂ ಕೂಡ. ಖ್ಯಾತ ಲೇಖಕರೂ, ಪತ್ರಕರ್ತರೂ ಆಗಿರುವ ಜೋಗಿಯವರ ಸಂಪಾದಕತ್ವದಲ್ಲಿ ಹಿಂದೆ ಮೂಡಿಬಂದಿದ್ದ ‘ಹಲಗೆ ಬಳಪ’ ಓದಿದ್ದಾಗಲೂ ಇಂಥದ್ದೊಂದು ಉದ್ಗಾರ ಹೊರಬಂದಿತ್ತು. ಖ್ಯಾತ ಲೇಖಕರು ತಮ್ಮ ಬರವಣಿಗೆಯ ಆರಂಭದ ದಿನಗಳ ಬಗ್ಗೆ ದಾಖಲಿಸಿರುವ ಸಂಗ್ರಹಯೋಗ್ಯ ಕೃತಿಯಾಗಿತ್ತದು. ಹೀಗೆ ಹೇಳಬೇಕಾಗಿರುವಂಥದ್ದನ್ನು ಸರಳ, ಸ್ಪಷ್ಟ ಶೈಲಿಯಲ್ಲಿ ಅರ್ಥವಾಗುವಂತೆ ಹೇಳುವಂತಹ ಕೃತಿಗಳು ಓದುಗರಲ್ಲಿ ಬೀರುವ ಪರಿಣಾಮವೇ ಅಂಥದ್ದು.

ಒಟ್ಟು ಹದಿಮೂರು ಲೇಖಕರ ಲೇಖನಗಳನ್ನು ಹೊಂದಿರುವ ಈ ಕೃತಿಯು ನಿಜಕ್ಕೂ ಒಂದೊಳ್ಳೆಯ ಪ್ರಯೋಗವೇ. ಖ್ಯಾತ ಲೇಖಕರಾದ ಕೆ.ಟಿ.ಗಟ್ಟಿ, ಅರವಿಂದ ಚೊಕ್ಕಾಡಿಯವರಿಂದ ಹಿಡಿದು ಶಾಲಾಶಿಕ್ಷಣದ ಸ್ವಾರಸ್ಯಕರ ಮುಖಗಳ ಬಗ್ಗೆ ಬಲು ಅಸ್ಥೆಯಿಂದ ಬರೆಯುವ ಲೇಖಕರೂ, ಅಂಕಣಕಾರರೂ ಆದ ನಾರಾಯಣ ಬಾಬಾನಗರ, ತರಹೇವಾರಿ ವಿಷಯಗಳ ಬಗ್ಗೆ ಸೊಗಸಾಗಿ ಬರೆಯಬಲ್ಲ ಅಂಕಣಕಾರರಾದ ಸದಾಶಿವ ಸೊರಟೂರು, ಡಾ. ಕೆ. ಎಸ್. ಚೈತ್ರಾರವರಂತಹ ಪ್ರತಿಭಾವಂತ ಬರಹಗಾರರ ಒಳ್ಳೊಳ್ಳೆಯ ಲೇಖನಗಳು ಇಲ್ಲಿವೆ. ಈಚಿನ ದಿನಗಳಲ್ಲಿ ಬದಲಾಗುತ್ತಿರುವ ಓದಿನ ಮುಖಗಳು, ಹೊರೆಯಾಗದಂತೆ ಓದಿನ ಹವ್ಯಾಸವನ್ನು ಮಕ್ಕಳಲ್ಲಿ ಬೆಳೆಸುವ ಬಗೆ, ಮಕ್ಕಳಿಗೆ ವಿವಿಧ ಹಂತಗಳಲ್ಲಿ ಪರಿಚಯಿಸಬಹುದಾದ ಕೃತಿಗಳು, ಈ ನಿಟ್ಟಿನಲ್ಲಿ ಪೋಷಕರು / ಶಿಕ್ಷಕರು ತೆಗೆದುಕೊಳ್ಳಬಹುದಾದ ಹೆಜ್ಜೆಗಳು… ಹೀಗೆ ಹಲವು ವಿಷಯಗಳು ಇಲ್ಲಿ ಸವಿವರವಾಗಿ, ಸರಳ ನಿರೂಪಣಾ ಶೈಲಿಯಲ್ಲಿ ಇಲ್ಲಿ ದಾಖಲಿಸಲ್ಪಟ್ಟಿವೆ.

ಇನ್ನು ಕೆಲ ಲೇಖನಗಳು ಓದಿನ ನಿರ್ದಿಷ್ಟ ವಿಷಯಗಳ ಬಗ್ಗೆಯಷ್ಟೇ ಸವಿವರವಾಗಿ ಮೂಡಿಬಂದು ಕೃತಿಯ ತೂಕವನ್ನು ಹೆಚ್ಚಿಸಿವೆ. ಆತ್ಮಕಥನ / ಜೀವನಕಥನಗಳ ಬಗ್ಗೆ ಲೇಖಕರಾದ ಗುಬ್ಬಚ್ಚಿ ಸತೀಶ್ ರವರು ಬರೆದ ಲೇಖನವು ಇದಕ್ಕೊಂದು ಒಳ್ಳೆಯ ನಿದರ್ಶನ. ಹಲವು ವರ್ಷಗಳ ಹಿಂದೆ ನನ್ನ ಶಾಲಾದಿನಗಳಲ್ಲಿ ರಾಮಕೃಷ್ಣ ಪರಮಹಂಸರ ಜೀವನಕಥನವೊಂದನ್ನು ಓದಿದ್ದೆ. ಅದು ಮಕ್ಕಳಿಗಾಗಿ ಬರೆದಿದ್ದಲ್ಲವಾದರೂ ಜೀವನಕಥನವೆಂಬ ಸಾಹಿತ್ಯಪ್ರಕಾರವು ಅಂದು ನನ್ನನ್ನು ಬಹಳ ಆಕರ್ಷಿಸಿತ್ತು. ವಿವಿಧ ಕ್ಷೇತ್ರಗಳಲ್ಲಿ ಮಹಾಸಾಧನೆಗಳನ್ನು ಮಾಡಿರುವವರ ಪುಟ್ಟ ಜೀವನಪುಸ್ತಕ ಮಾಲಿಕೆಗಳು, ಸ್ವಾತಂತ್ರ್ಯಹೋರಾಟಗಾರರ ವೀರಗಾಥೆಗಳು.. ಇತ್ಯಾದಿಗಳು ಬೆಳೆಯುವ ಮಕ್ಕಳಿಗೆ ಪ್ರೇರಣಾತ್ಮಕವಾಗಿ ಬಳಕೆಯಾಗುವುದರಲ್ಲಿ ಸಂದೇಹವಿಲ್ಲ. ಇನ್ನು ಒಳ್ಳೆಯ ಓದಿನ ಹಿನ್ನೆಲೆಯುಳ್ಳ ಗಾರ್ಗಿಯಂಥವರ ಲೇಖನಗಳು ಇಂಗ್ಲಿಷ್ ಸಾಹಿತ್ಯದ ಕೆಲ ಅದ್ಭುತ ಪುಸ್ತಕಗಳನ್ನೂ ಕೂಡ ಮಕ್ಕಳಿಗಾಗಿ ಪರಿಚಯಿಸಿ ಪುಸ್ತಕದ ಒಟ್ಟಾರೆ ವಿಸ್ತಾರವನ್ನು ಹೆಚ್ಚಿಸಿವೆ.

ಆದರೆ ಎಲ್ಲಾ ಪುಸ್ತಕಗಳು ಎಲ್ಲರಿಗೂ ರುಚಿಸಬೇಕೆಂದಿಲ್ಲವಲ್ಲಾ! ಮಕ್ಕಳ ಓದಿನ ವಿಚಾರದಲ್ಲೂ ಇದು ಸತ್ಯ. ನಾನು ಪ್ರೌಢಶಾಲೆಗೆ ಕಾಲಿಟ್ಟಾಗ ಜಿ.ಕೆ.ರೌಲಿಂಗ್ ರವರ ಹ್ಯಾರಿ ಪಾಟರ್ ಸರಣಿಯು ಒಂದಿಡೀ ತಲೆಮಾರನ್ನು ಓದಿಗೆ ಹಚ್ಚಿಸಿತ್ತು. ಮುಂದೆ ಎಂಜಿನಿಯರಿಂಗ್ ಅಧ್ಯಯನಕ್ಕೆ ಬಂದಾಗಲೂ ಬಹಳಷ್ಟು ವಿದ್ಯಾರ್ಥಿಗಳ ಕೈಯಲ್ಲಿ ಕಾಣಸಿಗುತ್ತಿದ್ದ ಕೃತಿಯದು. ಆದರೆ ಇಂಗ್ಲಿಷ್ ಓದನ್ನು ನಾನು ಆಗಲೇ ಆರಂಭಿಸಿದ್ದರೂ ಹ್ಯಾರಿ ಪಾಟರ್ ಮಾತ್ರ ನನಗೆ ಅಷ್ಟಾಗಿ ದಕ್ಕಿರಲಿಲ್ಲ. ಬದಲಿಗೆ ‘ಶಾಂತಾರಾಮ್’ನಂತಹ ವಿಶಿಷ್ಟ ಕೃತಿಗಳ ಪರಿಚಯವಾಯಿತು. ಸಮಯ ಸಿಕ್ಕರೆ ದಿನವಿಡೀ ಸಿನೆಮಾ ನೋಡುವಷ್ಟು ಸಿನೆಮಾ ಅಭಿಮಾನಿಯಾಗಿರುವ ನನಗೆ ವಿಶ್ವವಿಖ್ಯಾತ ‘ಗಾಡ್ ಫಾದರ್’ ಚಿತ್ರವನ್ನು ವೀಕ್ಷಿಸಲು ಎರಡೂವರೆ ವರ್ಷಗಳೇ ತಗುಲಿದ್ದವು. ಲ್ಯಾಪ್-ಟ್ಯಾಪಿನಲ್ಲಿದ್ದರೂ ಒಂದೆರಡು ವರ್ಷ ಡಬ್ಬದೊಳಗೇ ಬಿದ್ದುಕೊಂಡಿದ್ದ ಆ ಚಿತ್ರವನ್ನು ನೋಡಲು ನನಗೆ ಬಹುಷಃ ಒಂದು ಬಗೆಯ ಮಾನಸಿಕ ಸಿದ್ಧತೆಯ ಅವಶ್ಯಕತೆಯೂ ಇತ್ತೇನೋ. ಆ ದಿನಗಳಲ್ಲಿ ನೆನಪಿನಲ್ಲಿಡಲು ಕ್ಲಿಷ್ಟವೆನಿಸುತ್ತಿದ್ದ ಇಟಾಲಿಯನ್ ಹೆಸರುಗಳು, ನಿಧಾನಗತಿಯಲ್ಲಿ ಸಾಗುತ್ತಿದ್ದಂತೆ ಭಾಸವಾಗುತ್ತಿದ್ದ ಚಿತ್ರದ ಮೊದಲ ಭಾಗ, ಅರವತ್ತರ ದಶಕದ ಸಿನೆಮಾಗಳಿಗೆ ಇನ್ನೂ ತೆರೆದುಕೊಂಡಿಲ್ಲದ ಸಂದರ್ಭ… ಇತ್ಯಾದಿಗಳು ನನ್ನನ್ನು ಈ ಅದ್ಭುತ ಚಿತ್ರದಿಂದ ಬಹುಕಾಲ ದೂರವೇ ಉಳಿಸಿಕೊಂಡಿದ್ದವು. ಆದರೆ ಈ ಚಿತ್ರದಲ್ಲಿ ಅಂಥದ್ದೇನಿದೆಯೆಂಬುದನ್ನು ನೋಡಿಯೇ ತೀರಬೇಕು ಎಂಬ ಹಟಕ್ಕೆ ಬಿದ್ದ ನಾನು ದಿನಕ್ಕರ್ಧ ತಾಸೆಂಬಂತೆ ನೋಡತೊಡಗಿದ್ದೆ. ದೊಡ್ಡ ಚಿತ್ರವನ್ನು ಚಿಕ್ಕ ಭಾಗಗಳಾಗಿ ನೋಡುವ ಆ ಬಗೆಯು ನನ್ನನ್ನು ಒಂದು ರೀತಿಯಲ್ಲಿ ಬದಲಿಸಿತು. ಮೊದಲ ಭಾಗವನ್ನು ಇಷ್ಟಿಷ್ಟಾಗಿಯೇ ಸವಿದ ನಾನು ಉಳಿದೆರಡು ಭಾಗಗಳನ್ನು ಒಂದೇ ಏಟಿನಲ್ಲಿ ನೋಡಿ ಮುಗಿಸಿದ್ದೆ. ‘ಗಾಡ್ ಫಾದರ್’ ಸರಣಿಯು ಇಂದಿಗೂ ಜಗತ್ತಿನ ಅತ್ಯುತ್ತಮ ಚಿತ್ರಗಳ ಪಟ್ಟಿಯಲ್ಲಿ ಸ್ಥಾನವನ್ನೇಕೆ ಪಡೆದಿದೆ ಎಂಬುದು ಅರ್ಥವಾಗಿತ್ತು.

ಹೀಗೆ ಪುಸ್ತಕವಾಗಲೀ, ಸಿನೆಮಾವಾಗಲೀ ಎಲ್ಲರಿಗೂ ಇಷ್ಟವಾಯಿತೆಂದೋ, ಜನಪ್ರಿಯವೆಂದೋ, ಕೋಟಿಗಟ್ಟಲೆ ಪ್ರತಿಗಳು ಬಿಕರಿಯಾಗಿದೆಯೆಂಬ ಮಾತ್ರಕ್ಕೋ ನಮಗಿಷ್ಟವಾಗಬೇಕೆಂದಿಲ್ಲ. ನಮ್ಮಲ್ಲಿರುವಂತೆಯೇ ಮಕ್ಕಳ ಆಯ್ಕೆಗಳಲ್ಲೂ ವೈವಿಧ್ಯತೆಯಿರುತ್ತದೆ. ಹೀಗಾಗಿ ಅವರ ವಯಸ್ಸು, ಬುದ್ಧಿಮತ್ತೆ, ಆಸಕ್ತಿಗನುಗುಣವಾಗಿ ವಿವಿಧ ಬಗೆಯ ಪುಸ್ತಕಗಳನ್ನು ಆರಿಸಿಕೊಳ್ಳುವ ಬಗೆ, ಓದನ್ನು ನಿತ್ಯದ ರೂಢಿಯಾಗಿ ಅಳವಡಿಸಿಕೊಳ್ಳುವ ಪರಿ, ಶಿಕ್ಷಕರು ತಮ್ಮ ನಿತ್ಯಕಾರ್ಯಗಳ ನಡುವಿನಲ್ಲೇ ವಿದ್ಯಾರ್ಥಿಗಳಲ್ಲಿ ಓದಿನ ಹಸಿವನ್ನು ಹೆಚ್ಚಿಸಲು ಅನುಸರಿಸಬಹುದಾದ ಮಾರ್ಗಗಳು… ಹೀಗೆ ಹಲವು ಸಂಗತಿಗಳ ಮೇಲೆ ಇಲ್ಲಿಯ ಲೇಖನಗಳು ಬೆಳಕು ಚೆಲ್ಲಿವೆ. ಇನ್ನು ಮಕ್ಕಳು-ದೊಡ್ಡವರು ಒಟ್ಟಿಗೇ ಓದಿ ಆನಂದಿಸಬಹುದಾದ ಪುಸ್ತಕಗಳ ಒಂದೊಳ್ಳೆಯ ಪಟ್ಟಿಯೂ ಸೇರಿದಂತೆ ಮಕ್ಕಳ ಓದಿನ ಬಗೆಗಿನ ಹಲವು ಸ್ವಾರಸ್ಯಕರ ಮಾಹಿತಿಗಳು, ಒಳನೋಟಗಳು ಮತ್ತು ಸಲಹೆಗಳ ಗುಚ್ಛಗಳು ಇಲ್ಲಿ ಹೇರಳವಾಗಿವೆ.

‘ಮಕ್ಕಳಲ್ಲಿ ಓದಿನ ಅಭ್ಯಾಸವು ಕಮ್ಮಿಯಾಗುತ್ತಿದೆಯಲ್ಲಾ… ಅವರ ಹೆಚ್ಚುವರಿ ಓದಿನ ಬಗ್ಗೆ ಏನಾದರೂ ಮಾಡಬೇಕಲ್ಲಾ…’ ಎಂದು ಸಾಮಾನ್ಯವಾಗಿ ಎಲ್ಲರೂ ಕಾಡುಹರಟೆಯ ಧಾಟಿಯಲ್ಲಿ ಯೋಚಿಸುತ್ತಿರುವಂತೆಯೇ ಗಣೇಶ್ ರವರು ಒಂದು ಹೆಜ್ಜೆ ಮುಂದೆ ನಡೆದು ಪುಸ್ತಕವನ್ನು ಮಿಂಚಿನ ವೇಗದಲ್ಲಿ ಹೊರತಂದಿದ್ದಾರೆ. ಇನ್ನು ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ಕೋಡೂರಿನ ಆವಿ ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆಯಿಂದ (ರಿ) (ಆರುಡೋ) ಪ್ರಕಟಿತ ಈ ಕೃತಿಯನ್ನು ಓದುಗರು ಖರೀದಿಸಿದಾಗ ಬರುವ ಲಾಭದ ಸಂಪೂರ್ಣ ಹಣವನ್ನು ಗ್ರಾಮೀಣ ಭಾಗದ ಬಡಮಕ್ಕಳ ಶಿಕ್ಷಣ, ವ್ಯಕ್ತಿತ್ವ ವಿಕಸನ, ಆರೋಗ್ಯ ಎಂಬಿತ್ಯಾದಿ ಕ್ಷೇತ್ರಗಳಲ್ಲಿ ಬಳಸಿ ಇನ್ನಷ್ಟು ಕೆಲಸ ಮಾಡುವ ಯೋಜನೆಗಳೂ ಆರುಡೋ ಸಂಸ್ಥೆಯ ಮುಂದಿರುವುದು ಮತ್ತೊಂದು ವಿಶೇಷ. ಹೀಗೆ ಕಳೆದ ಕೆಲ ವರ್ಷಗಳಿಂದ ಸದ್ದಿಲ್ಲದೆ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ ಮುಂದುವರಿಯುತ್ತಿರುವ ಆರುಡೋ ಸಂಸ್ಥೆಗಿದು ಮತ್ತೊಂದು ಮೈಲುಗಲ್ಲು.

ಮಕ್ಕಳ ಕೈಗೊಂದು ಪುಟ್ಟ ಉಡುಗೊರೆಯನ್ನು ನೀಡುವುದಾದರೆ, ಮಕ್ಕಳನ್ನು ಹೊಂದಿರುವ ಪೋಷಕರಿಗೆ ಕೆಲಸಕ್ಕೆ ಬರುವಂತಹ ಏನನ್ನಾದರೂ ಕೊಡುವುದಾದರೆ ನಿಸ್ಸಂದೇಹವಾಗಿಯೂ ಇದೊಂದು ಒಳ್ಳೆಯ ಕೃತಿ. ಪೇರೆಂಟಿಂಗ್ ಮತ್ತು ವ್ಯಕ್ತಿತ್ವ ವಿಕಸನದ ನಿಟ್ಟಿನಲ್ಲಿ ಮಕ್ಕಳಿಗೂ, ದೊಡ್ಡವರಿಗೂ ಒಂದೊಳ್ಳೆಯ ಮಾರ್ಗದರ್ಶಿ. ಓದಿನಂತಹ ಆರೋಗ್ಯಕರ ಹವ್ಯಾಸಗಳು ಒಂದಿಡೀ ತಲೆಮಾರನ್ನು ಪೊರೆದು ಮುಂದಿನ ಪೀಳಿಗೆಗೂ ಭದ್ರಬುನಾದಿಯನ್ನು ಹಾಕಬಲ್ಲಂಥವುಗಳು. ಇಂಥದ್ದೊಂದು ಸದುದ್ದೇಶದ ಕೆಲಸದಲ್ಲಿ ನಮ್ಮದೂ ಒಂದಷ್ಟು ಅಳಿಲುಸೇವೆಯಿರಲಿ. ಜ್ಞಾನದ ದೀಪ ಮನೆಮನೆಗಳಲ್ಲೂ ಬೆಳಗಲಿ.

ಮಕ್ಕಳೇ, ಈ ಬಾರಿ ನಿಮಗೆ ಹ್ಯಾಪೀ ರೀಡಿಂಗ್!

ಪ್ರಸಾದ್ ನಾಯ್ಕ್

ಮೂಲತಃ ದಕ್ಷಿಣ ಕನ್ನಡದ ಕಿನ್ನಿಗೋಳಿಯವರು. ಪ್ರತಿಷ್ಠಿತ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸುರತ್ಕಲ್ (ಎನ್.ಐ.ಟಿ.ಕೆ) ನಿಂದ 2011ರಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ. ಕಳೆದ ಐದು ವರ್ಷಗಳಿಂದ ಜಲ ಸಂಪನ್ಮೂಲ ಇಲಾಖೆ, ಭಾರತ ಸರ್ಕಾರದ ಅಧೀನದಲ್ಲಿರುವ ಪ್ರತಿಷ್ಠಿತ ಸಂಸ್ಥೆಯೊಂದರಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಗುರುಗ್ರಾಮ್ ಆದ ಹರಿಯಾಣದ ಗುರ್ಗಾಂವ್ ಮತ್ತು ರಾಷ್ಟ್ರರಾಜಧಾನಿಯಾದ ನವದೆಹಲಿಯಲ್ಲಿ ಐದು ವರ್ಷಗಳ ಕಾಲ ಸೇವೆ ಸಲ್ಲಿಸಿದ ನಂತರ, ಸದ್ಯಕ್ಕೆ ದೂರದ ಆಫ್ರಿಕಾದ ದಕ್ಷಿಣ ಭಾಗದಲ್ಲಿರುವ `ರಿಪಬ್ಲಿಕ್ ಆಫ್ ಅಂಗೋಲಾ’ ದೇಶದ ವೀಜ್ ಎಂಬ ಪುಟ್ಟ ಪಟ್ಟಣದಲ್ಲಿ, ವಿಶ್ವಬ್ಯಾಂಕ್ ಪ್ರಾಯೋಜಿತ ಸ್ಥಳೀಯ ಸರ್ಕಾರದ ಯೋಜನೆಯೊಂದರಲ್ಲಿ ನಿಯುಕ್ತಿಗೊಂಡು ನೆಲೆಸಿದ್ದಾರೆ.

ಚಿತ್ರಕಲೆ ಮತ್ತು ಓದಿನ ಪಯಣದಲ್ಲೇ ಖುಷಿಯಾಗಿದ್ದ ಇವರಿಗೆ, “ತಾನೂ ಬರೆಯಬಲ್ಲೆ” ಎಂಬ ಸಂಗತಿಯ ಅರಿವಾದ ನಂತರದ ದಿನಗಳಿಂದ, ಅಂದರೆ ಕಳೆದ ನಾಲ್ಕೈದು ವರ್ಷಗಳಿಂದ ಬರೆಯುತ್ತಾ ಬಂದಿದ್ದಾರೆ. ಇವರ ಕಥೆಗಳು, ಲೇಖನಗಳು, ಪ್ರಬಂಧಗಳು, ಲಲಿತ ಪ್ರಬಂಧಗಳು, ಮಿನಿ ಸರಣಿ ಬರಹಗಳು, ವ್ಯಕ್ತಿಚಿತ್ರಗಳು, ಅನುವಾದಗಳು ಕನ್ನಡದ ವಿವಿಧ ಅಂತರ್ಜಾಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಓದುವ ಮತ್ತು ಆಗಾಗ ಬರೆಯುವ ಹೊರತಾಗಿ, ಪ್ರವಾಸದ ಹೆಸರಿನಲ್ಲಿ ದೇಶ ಸುತ್ತುವ ಮತ್ತು ವ್ಯಂಗ್ಯಚಿತ್ರಗಳನ್ನು ಬರೆಯುವ ಹವ್ಯಾಸ.

Share

Leave a comment

Your email address will not be published. Required fields are marked *

Recent Posts More

  • 13 hours ago No comment

    ಸ್ವಿಟ್ಜರ್ಲ್ಯಾಂಡಿನ ಕಣ್ಮಣಿ – ಲ್ಯೂಸರ್ನ್

        ನಾನಾ ಆಕರ್ಷಣೆಗಳಿರುವ ಈ ನಗರ ಪ್ರವಾಸಿಗರನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಸ್ವಲ್ಪವೂ ಬೇಸರ ತರಿಸದ ಸುಂದರ ಸ್ವಿಸ್ ನಗರಿ.         “ನಾಳೆ ಸ್ವಿಟ್ಜರ್ಲ್ಯಾಂಡ್” ಎಂದ ಕೂಡಲೇ ಬಸ್ಸಿನಲ್ಲಿ ಹರ್ಷೋದ್ಗಾರ! ಯೂರೋಪಿನ ಪ್ರವಾಸದಲ್ಲಿದ್ದ ನಮಗೆಲ್ಲ ಸ್ವಿಟ್ಜರ್ಲ್ಯಾಂಡ್ ಹೆಸರು ಇಂಪಾಗಿ ಕೇಳಿಸಲು ಕಾರಣಗಳು ಹಲವು. ಮೈಲುಗಟ್ಟಲೆ ಹಸಿರು ನೆಲ, ಹಚ್ಚಹಸಿರು ತುಂಬಿದ ಬೆಟ್ಟಗಳು, ಪರ್ವತಗಳಲ್ಲಿನ ಹಿಮ ಕರಗಿ ಜುಳಜುಳನೆ ಹರಿವ ತಿಳಿ ಬೂದು, ಬಿಳಿ ಬಣ್ಣದ ...

  • 1 week ago No comment

    ಕವಿಸಾಲು | ಒಲವಿನಾಟ

        ಕವಿಸಾಲು       ಶರದೃತು ತೂರಿದ ಪುಂಡ ಗಾಳಿಗೆ ಎಲೆಗಳೆಲ್ಲ ಹಾರಿ ಉದುರಿ ಮಳೆಗೆ, ಬಿಸಿಲ ಝಳಕ್ಕೆ ಒಡಲನೊಡ್ಡಿ ಹಾಡೋ ಹಕ್ಕಿಯ ಗೂಡು ಬರಿದು ಮೈಯ ಕೊಂಕಿಸಿ, ತಲೆಯ ಹೊರಳಿಸಿ ಚಳಿಯ ಮುಸುಕಿನಲ್ಲಿ ಕಂಪಿಸಿದ ಮರಕ್ಕೆ ಚಿಗುರ ಬಯಕೆಯ ನಸು ಪುಳಕ ಹಸಿರ ಉಸಿರಿನ, ಹಕ್ಕಿ ಹಾಡಿನ ಕನಸ ಹೊದಿಕೆಯ ಬಿಸಿ ಒಡಲು ತುಂಬಲು ಬಯಕೆಯಾಗಿ ಟೊಂಗೆ-ರೆಂಬೆಗಳಲಿ ಕವನ ಸದ್ದು ಗದ್ದಲವಿಲ್ಲದೆ ಇತ್ತ ಒಲವಿನೋಲೆಯ ...

  • 2 weeks ago No comment

    ಕವಿಸಾಲು | ನಕ್ಷತ್ರ ನಾವೆ

      ಕವಿಸಾಲು       ಮೋಡವೇ ಮನೆಯೊಳಗೆ ಇಳಿದಂತೆ ದಟ್ಟವಾದ ಹೊಗೆ ಮನೆಜಂತಿಗಳ ತುಂಬಾ ನೇತುಕೊಂಡಿದೆ ಚುಕ್ಕಿಗಳೇ ಮನೆಯ ಜಂತಿಗಳಲಿ ಯಾತ್ರೆ ಹೊರಟಂತೆ ಕಂಡರು ಮಿನುಕು ಹುಳುಗಳ ಹಾಗೆ ಚಿಮಣಿದೀಪದ ನೆರಳು ಸದಾ ಬೆನ್ನಿಗೆ ಗೋಡೆಗಳು ಅಕ್ಷರಶಃ ಬೂದಿಗುಡ್ಡದಂತೆ ಕಪ್ಪುಕಾಡಿಗೆಗಳ ಹಾಗೆ ಗೋಚರ ಬಾಗಿಲು ಕಿಟಕಿಗಳ ಮೂಲಕ ಬುಸುಗುಡುವ ಹೊಗೆ ಉಗಿಬಂಡಿಯ ಕಾಲಚಕ್ರದಲಿ ದಿನಗಳ ದೂಡಿದಂತೆ ಹೊಗೆಯ ಬೇಗೆಯಲಿ ಅವಳೆಂದೂ ಎದೆಗುಂದಲಿಲ್ಲ ಹಣೆಯ ಬೆವರಿನ ಗಟ್ಟಿ ತಾಜಾತನದ ...

  • 2 weeks ago No comment

    ಕಲರವ | ಒಂದು ಸಿನಿಮಾ ನೋಡಿದ ಕಥೆ…

        ಕಲರವ           “ಎರಡು ವರ್ಷಕ್ಕೊಮ್ಮೆ ಬರ್ತೀಯ, ಈ ಬಾರಿಯಾದರೂ ಒಂದು ಸಿನಿಮಾ ನೋಡು” ಎಂದಳು ಭಾರತದ ನನ್ನ ಅಕ್ಕ. “ಹೌದಲ್ಲವಾ” ಅಂತ ನಮ್ಮೂರಿನಲ್ಲಿ ನಡೆಯುತ್ತಿದ್ದ ಸಿನಿಮಾ ಪಟ್ಟಿ ನೋಡಿದೆ. ಪ್ರೀತಿ –ಪ್ರೇಮ, ಫೈಟಿಂಗ್ ಗಳ ಚಲನಚಿತ್ರವನ್ನು ನೋಡುವುದೆಂದರೆ, ‘ನೋಡಿದ್ದನ್ನೇ ನೋಡುವ’ ಕಷ್ಟ. ವೈಚಾರಿಕ ಸಿನಿಮಾಗಳು ಜಾಸ್ತಿ ಓಡದ ಕಾಲವಿದು. ಇನ್ನು ಸಾಂಸಾರಿಕ ಚಿತ್ರಗಳು ಬರುವುದು ನಿಂತ ಮೇಲೆ ಸಂಸಾರಗಳು ಒಟ್ಟಿಗೆ ...

  • 3 weeks ago No comment

    ಕವಿಸಾಲು | ಅಲೆಗಳೆದ್ದ ಕೊಳ…

        ಕವಿಸಾಲು         ಅಲೆಗಳೆದ್ದ ಕೊಳವಿದು, ಕಲ್ಲು ತೂರಿದ ಕಾಯಕವಷ್ಟೇ ನಿನ್ನದು ಎದ್ದ ಅಲೆಗಳ ಮೇಲಿಲ್ಲ ನಿನಗೆ ಇನಿತು ಅಧಿಕಾರವು ದೂರಿಲ್ಲ ನನ್ನಲ್ಲಿ, ಬೇಡಿಕೆ ತಾನೇ ಏಕೆ? ತುಂಬಿದ ಮನದಿ ಹೊಕ್ಕ ಹರ್ಷಕೆ ಪುರಾವೆಗಳ ಹಂಗಿಲ್ಲ, ನಕ್ಕ ನಗುವಿನಲಿ ನೋವಿಲ್ಲ, ತುಂಬಿವೆ ನೂರು ಭಾವಾರ್ಥ ಮುಚ್ಚಟೆಯಿಂದ ಬಚ್ಚಿಟ್ಟುಕೊಂಡು ಬೇಕಾದ ಪರಿಭಾಷೆಯಲಿ ದಿರಿಸಿಟ್ಟು ಸಿಂಗರಿಸಿ ನೋಡುತ್ತ ನಿನ್ನ ಅನುಪಸ್ಥಿತಿಯಲ್ಲೂ ಸಿಗುವ ಅನುಪಮ ಭಾವದಿ ದೊರಕಿದ್ದು ...


Editor's Wall

  • 31 August 2018
    3 weeks ago No comment

    ಪ್ರಸಾದ್ ಪಟ್ಟಾಂಗ | ಓದು ಮಗು ಓದು…

        “ಮಕ್ಕಳಿಗಾಗಿ ಒಂದು ಪುಸ್ತಕ ಮಾಡಬೇಕಲ್ಲಾ… ಪಠ್ಯದಾಚೆಗೂ ಅವರು ಏನೇನು ಓದಬಹುದು ಎಂಬುದರ ಬಗ್ಗೆ ತಿಳಿಸುವಂಥದ್ದು” ಎಂದು ಟೆಲಿಫೋನ್ ಕರೆಯ ಮತ್ತೊಂದು ತುದಿಯಲ್ಲಿ ಅಂದು ಹೇಳುತ್ತಿದ್ದರು ಮಿತ್ರರಾದ ಗಣೇಶ್ ಕೋಡೂರು. ಓದು, ಬರವಣಿಗೆ, ಫೋಟೋಗ್ರಫಿ, ಪ್ರವಾಸ, ಕಾರ್ಯಕ್ರಮ, ಸಮಾಜಸೇವೆ, ಪ್ರಕಟಣೆ… ಹೀಗೆ ಎಲ್ಲದರಲ್ಲೂ ತೊಡಗಿಕೊಂಡಿರುವ ಗಣೇಶ್ ಅವರದ್ದು ಇದೊಂದು ಹೊಸ ಪ್ರಾಜೆಕ್ಟ್ ಇರಬೇಕು ಎಂದು ತಕ್ಷಣ ಅಂದುಕೊಂಡೆ ನಾನು. ಸದಾ ಕ್ರಿಯಾಶೀಲರಾಗಿರುವ ಗಣೇಶ್ ಕೋಡೂರು ಒಂದಲ್ಲಾ ಒಂದು ...

  • 30 August 2018
    3 weeks ago No comment

    ಕಾದಂಬಿನಿ ಕಾಲಂ | ತಮ್ಮ ಶವಪೆಟ್ಟಿಗೆಗೆ ತಾವೇ ಹೊಡೆದುಕೊಂಡ ಮೊದಲ ಮೊಳೆ

                        ಬಹುದೊಡ್ಡ ಪ್ರಜಾಪ್ರಭುತ್ವದ ಅಖಂಡ ಭಾರತವನ್ನು ಅಷ್ಟು ಸುಲಭವಾಗಿ ಸರ್ವಾಧಿಕಾರದ ಹಿಡಿತದಲ್ಲಿ ಬಂಧಿಸುವುದು ಸಾಧ್ಯವಿಲ್ಲ.   2019ರ ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಅತ್ಯಂತ ಕಳವಳಕಾರಿ ಘಟನಾವಳಿಗಳು ಜರುಗುತ್ತಾ ಈ ದೇಶದ ಪ್ರಜ್ಞಾವಂತ ನಾಗರೀಕರ ಕಣ್ಣೆದುರು ಭಯದ ನೆರಳು ಕವಿಯುವಂತೆ ಮಾಡುತ್ತಿವೆ. ದೇಶದೊಳಗೆ ಕೊಲೆ, ಹಲ್ಲೆ, ಅತ್ಯಾಚಾರ, ಗಲಭೆ, ಸುಳ್ಳು ಸುದ್ಧಿ ಹಬ್ಬಿಸುವುದು, ಆತಂಕ ಸೃಷ್ಟಿಸುವುದು ಇನ್ನೂ ...

  • 26 August 2018
    4 weeks ago No comment

    ಗೆದ್ದು ಬೀಗುತ್ತಿರುವ ದುಷ್ಟ ರಾಜಕೀಯ ಮತ್ತು ಅಮರ್ತ್ಯ ಸೇನ್ ಮಾತುಗಳು

        ಜನರನ್ನೇ ಕೊಲ್ಲಲು ಜನಪ್ರಭುತ್ವವನ್ನು ದುರ್ಬಳಕೆ ಮಾಡಿಕೊಳ್ಳುವ ದುಷ್ಟತನಕ್ಕೆ ಕೊನೆಗಾಲ ಯಾವಾಗ?     “ಪ್ರಜಾಪ್ರಭುತ್ವ ಅಪಾಯದಲ್ಲಿರುವ ಈ ಹೊತ್ತಿನಲ್ಲಿ ಎಲ್ಲ ಕೋಮುವಾದಿಯೇತರ ಮತ್ತು ಬಿಜೆಪಿಯೇತರ ಶಕ್ತಿಗಳು ಒಂದಾಗಿ 2019ರ ಲೋಕಸಭಾ ಚುನಾವಣೆಯನ್ನು ಎದುರಿಸಬೇಕಿದೆ ಮತ್ತು ಇವುಗಳ ಜೊತೆಗೂಡಲು ಎಡಪಕ್ಷಗಳು ಹಿಂಜರಿಯಕೂಡದು.” ಇವು ನೊಬೆಲ್ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್ ಅವರ ಮಾತುಗಳು. “ನಾವು ಸರ್ವಾಧಿಕಾರವನ್ನು, ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಲೇಬೇಕಾಗಿದೆ. ಕೋಮುವಾದಿ ಬಲಪಂಥೀಯ ಪಡೆಗಳನ್ನು ವಿರೋಧಿಸಲು ...

  • 26 August 2018
    4 weeks ago No comment

    ಕಡು ಭಯಂಕರ ಕತ್ತಲೊಳಗೆ ಅವಳಂಥ ಅದೆಷ್ಟು ಜೀವಗಳೊ!

      ಅವಳೊಳಗೀಗ ಕನಸುಗಳೇ ಇಲ್ಲ. ಮಿಂಚು ಸ್ಫುರಿಸಬೇಕಿದ್ದ ಕಣ್ಣುಗಳಲ್ಲಿ ನಾಳೆಗಳನ್ನು ಚಿಂತಿಸುವ ಯಾತನೆ ಮಾತ್ರವೇ ಸರಿದಾಡುತ್ತಿದೆ.       ಒಂದು ವರದಿಯ ಪ್ರಕಾರ, ಕಳೆದ ಏಪ್ರಿಲ್ ಹೊತ್ತಿಗೆ ಹತ್ತಿರ ಹತ್ತಿರ ಏಳು ಲಕ್ಷದಷ್ಟು ರೋಹಿಂಗ್ಯಾಗಳು ಬಾಂಗ್ಲಾದೇಶದೊಳಕ್ಕೆ ಸೇರಿಕೊಂಡಿದ್ದಾರೆ. ಅವರಲ್ಲಿ ಅರ್ಧಕ್ಕರ್ಧದಷ್ಟು ಮಕ್ಕಳೇ. ಆ ಮಕ್ಕಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ದೈಹಿಕವಾಗಿ ಮತ್ತು ಭಾವನಾತ್ಮಕವಾಗಿ ದಮನಿತರು. ಆ ಮಕ್ಕಳ – ಅದರಲ್ಲೂ ಹೆಣ್ಣುಮಕ್ಕಳ ಬದುಕು ಎಂಥ ನರಕಮಯ ಎಂಬುದನ್ನು ...

  • 23 August 2018
    1 month ago No comment

    ಕಾದಂಬಿನಿ ಕಾಲಂ | ದುರ್ಬಲ ಗಳಿಗೆಗಳನ್ನೇ ಹೊಂಚುವ ಹದ್ದುಗಣ್ಣುಗಳೆದುರು ಹೆಣ್ಣು ದೇಹ

                        ಲೋಕದ ನೀತಿಯೇ ಅದಲ್ಲವೇ? ತನ್ನ ಮೂಗಿನ ನೇರಕ್ಕೆ ನ್ಯಾಯ ವಿತರಿಸುವುದು ಮತ್ತು ದುರ್ಬಲರನ್ನೇ ಅಲ್ಲವೇ ಬಲಿಗಂಬಕ್ಕೇರಿಸುವುದು?   ‘ಟೈಟಾನಿಕ್’ ಎನ್ನುವುದು ವಿಕೋಪದ ಸಂದರ್ಭದಲ್ಲಿ ಬಲಿಷ್ಠರ ಕೈ ಹೇಗೆ ಮೇಲಾಗುತ್ತದೆನ್ನುವುದಕ್ಕೆ ಒಂದು ಸಶಕ್ತ ರೂಪಕ. ಅಂಥಲ್ಲಿ ಕೆಳಗಿನವರನ್ನು ತುಳಿಯುವ, ಅವರ ಸವಲತ್ತುಗಳನ್ನು ಕಬಳಿಸಲು ಹವಣಿಸುವ ವಿಕರಾಳ ಆಟವೊಂದು ನಿರಾತಂಕವಾಗಿ ಜರುಗುತ್ತದೆ. ನೆನ್ನೆ ರಾತ್ರಿ ಒಬ್ಬ ಯುವಕ ...