Share

ಪ್ರೇಮದ ಬದುಕು, ಶಹರದ ರಸ್ತೆ…
ಕಾವ್ಯಾ ಕಡಮೆ ನಾಗರಕಟ್ಟೆ

2006ರ ನೋಬೆಲ್ ಪ್ರಶಸ್ತಿ ವಿಜೇತ ಲೇಖಕ ಒರ್ಹಾನ್ ಪಾಮುಕ್ ಹೊಸದೊಂದು ಕಾದಂಬರಿ ಬರೆದಿದ್ದಾರೆ ಎಂಬ ವಿಷಯವೇ ವಿಶ್ವಾದ್ಯಂತ ಸಾಹಿತ್ಯದ ಓದುಗರಲ್ಲಿ ರೋಮಾಂಚನ ಹುಟ್ಟಿಸುವಂಥದ್ದು. ಟರ್ಕಿಯ ಈ ಲೇಖಕ ಹೊಸ ಬರಹವನ್ನು ಬರೆದಾಗ ಇಡೀ ಟರ್ಕಿಯೇ ಹುಚ್ಚೆದ್ದು ಕುಣಿಯುತ್ತದೆ. ಆರು ವರ್ಷಗಳ ಕಾಲ ಅವರಿಂದ ಬರೆಸಿಕೊಂಡ, 2014ರಲ್ಲಿ ಬಿಡುಗಡೆಯಾದ ಅವರ ಹೊಸ ಕಾದಂಬರಿ ‘ದಿ ಸ್ಟ್ರೇಂಜ್‍ನೆಸ್ ಇನ್ ಮೈ ಮೈಂಡ್,’ ಇಂಗ್ಲಿಷಿಗೆ ಅನುವಾದವಾಗಿ ಜಾಗತಿಕ ಓದುಗರ ಕೈ ಸೇರಿದ್ದು 2015ರ ಅಕ್ಟೋಬರ್‍ನಲ್ಲಿ.

ಪಾಮುಕ್ ಬಹು ಸೂಕ್ಷ್ಮ ಕಲೆಗಾರ. ಇಲ್ಲಿಯವರೆಗೆ ಹದಿಮೂರು ಪುಸ್ತಕಗಳನ್ನು ಬರೆದಿರುವ ಅವರು ಇಂದಿಗೂ ಟರ್ಕಿಯಲ್ಲಿರುವ ತಾವು ಹುಟ್ಟಿದ ಮನೆಯಲ್ಲೇ ವಾಸಿಸುತ್ತಾರೆ. ರುಡ್ಯಾರ್ಡ ಕಿಪ್ಲಿಂಗ್‍ರ ನಂತರ ಅತಿ ಚಿಕ್ಕ ವಯಸ್ಸಿನಲ್ಲೇ ಸಾಹಿತ್ಯದ ನೋಬೆಲ್ ಪಡೆದ ಖ್ಯಾತಿ ಇವರದ್ದು. ಈ ಬಾರಿ, ‘ದಿ ಸ್ಟ್ರೇಂಜ್‍ನೆಸ್ ಇನ್ ಮೈ ಮೈಂಡ್’ ಕಾದಂಬರಿಯಲ್ಲಿ ಪಾಮುಕ್ ಆಯ್ದುಕೊಂಡ ಕಥೆ ಮೆವ್ಲುಟ್ ಕರಾಟಸ್‍ನದ್ದು.

ಮೆವ್ಲುಟ್ ಕರಾಟಸ್ ತನ್ನ ಹದಿ ವಯಸ್ಸಿನಲ್ಲೇ ತಂದೆಯ ಜೊತೆ ಹಳ್ಳಿಯಿಂದ ಪಟ್ಟಣದ ಕನಸು ಹೊತ್ತು ಇಸ್ತಾನ್ಬುಲ್ ನಗರ ಸೇರಿದವನು. ಚಿಕ್ಕವನಿದ್ದಾಗ ಮುಂಜಾನೆ ಶಾಲೆಗೆ ಹೋಗಿ ಸಂಜೆ ತಂದೆಯ ಜೊತೆ ಇಸ್ತಾನಬುಲ್‍ನ ಬೀದಿಗಳಲ್ಲಿ ಮೊಸರು ಮತ್ತು ಬೋಝಾ ಪಾನಕ ಮಾರಿ ಅಜ್ಞಾತ ನಗರದ ತಿರುವುಗಳಲ್ಲಿ ಬದುಕು ಕಟ್ಟಿಕೊಳ್ಳಲು ಹೆಣಗಿದವನು. ಚಿಟಿಕೆ ದಾಲ್ಚಿನ್ನಿಯ ಪುಡಿ ಮತ್ತು ಹುರಿದ ಕಡಲೆಯ ಜೊತೆಗೆ ಕುಡಿವ ಈ ಬೋಝಾ ಪಾನಕದಲ್ಲಿ ಅತಿ ಕಡಿಮೆ ಮಾದಕ ಅಂಶವಿರುವ ಕಾರಣ ಪಾನ ನಿಷೇಧವಿದ್ದ ದೇಶಗಳಲ್ಲಿ ಇದು ಒಂದು ಕಾಲದಲ್ಲಿ ಜನಪ್ರಿಯವಾಗಿತ್ತು.

strange

ಆದರೆ ಈಗ ಅವೇ ದೇಶಗಳ ರಾಜಕೀಯ ವಲಯದಲ್ಲಿ ಹೊಸ ಗಾಳಿ ಬೀಸಿ ಸರ್ಕಾರಗಳು ಪಾನ ನಿಷೇಧವನ್ನು ಹಿಂತೆಗೆದುಕೊಂಡ ಮೇಲೆ ಬೋಝಾ ಪಾನಕ ತನ್ನ ಜನಪ್ರಿಯತೆಯನ್ನು ಕಳೆದುಕೊಂಡು, ಬೀದಿಯಲ್ಲಿ “ಬೋಝಾ.. ಯಾರಿಗೆ ಬೇಕು ಒಳ್ಳೆಯ ಬೋಝಾ..” ಎಂದು ಕೂಗುತ್ತ ಮಾರುವ ಬೀದಿ ವರ್ತಕರ ಸಂಖ್ಯೆಯೂ ನಶಿಸಿಹೋಗುವ ಹಂತದಲ್ಲಿದೆ. ಈಗೇನಿದ್ದರೂ ‘ಬಾಟಲ್ ಬೋಝಾ’ದ ಕಾಲ. ನಮ್ಮ ನಾಯಕ ಮೆವ್ಲುಟ್, ಇಸ್ತಾನ್‌ಬುಲ್ಲಿನ ಬೀದಿಗಳಲ್ಲಿ ಏರು ದನಿಯಲ್ಲಿ ಕೂಗುತ್ತ ಬೋಝಾ ಮಾರುವ, ಈಗುಳಿದಿರುವ ಕೊನೆಯ ಕೆಲವೇ ಕೆಲವು ಮಂದಿ ಬೀದಿ ವರ್ತಕರಲ್ಲಿ ಒಬ್ಬ. ನೀವು ತುಸು ತನ್ಮಯರಾಗಿ ಕಿವಿಕೊಟ್ಟರೆ, ಒಂದು ಬಗೆಯ ನಿರುಪಾಯ ಖೇದ ಅವನ ದನಿಯಲ್ಲಿ ಕೇಳಿಸುತ್ತದೆ.

“ಬೋಝಾ ಮಾರಾಟಗಾರನ ದನಿಯೇ ನಿಜದಲ್ಲಿ ಅವನ ಬೋಝಾವನ್ನು ಮಾರುವುದು” ಎಂದು ತನ್ನ ತಂದೆ ಮುಸ್ತಾಫರಿಂದ ಅನುಭವದ ಪಾಠ ಕಲಿತು ಇದೇ ಇಸ್ತಾನ್‌ಬುಲ್ ಶಹರದ ಬೀದಿಗಳಲ್ಲಿ ಬಾಲ್ಯ, ಯೌವನ ಕಳೆದ ಮೆವ್ಲುಟ್ ತನ್ನ ದೊಡ್ಡಪ್ಪನ ಮಗನ ಮದುವೆಯಲ್ಲಿ ವಧುವಿನ ಇಬ್ಬರು ತಂಗಿಯರಲ್ಲಿ ಕಿರಿಯಳಾದ ಸಮಿಹಾಳ ರೂಪಕ್ಕೆ ಮನಸೋಲುತ್ತಾನೆ. ಅವಳ ನಿಜವಾದ ಹೆಸರನ್ನು ಗೊಂದಲದಲ್ಲಿ ತಪ್ಪು ತಿಳಿದು, ಸಮಿಹಾಳಿಗಿಂತ ಒಂದು ವರ್ಷ ದೊಡ್ಡವಳಾದ, ನೋಡಲು ಅಷ್ಟೇನೂ ರೂಪವತಿಯಲ್ಲದ (ಇದನ್ನು ಪಾಮುಕ್‍ರೇ ಒತ್ತಿ ಹೇಳಿದ್ದು) ರಯಿಹಾಳಿಗೆ ನೂರಾರು ಪತ್ರಗಳನ್ನು ಬರೆಯುತ್ತಾನೆ.

ಮೂರು ವರ್ಷಗಳ ಈ ಪತ್ರ ವ್ಯವಹಾರದ ನಂತರ, ಇಬ್ಬರೂ ‘ಓಡಿಹೋಗುವುದು’ ಅಂತ ಓಲೆಗಳ ಮೂಲಕವೇ ತೀರ್ಮಾನವಾಗುತ್ತದೆ. ಕೃತಿಕಾರರೇ ಕಣ್ಣಿಗೆ ಕಟ್ಟುವ ಹಾಗೆ ವರ್ಣಿಸುವಂತೆ, ಅದೆಷ್ಟೋ ದೂರ ‘ಓಡಿ’ ಬಂದ ಮೇಲೆ ಮೆವ್ಲುಟನಿಗೆ ತಾನು ಮನಸೋತ ಹುಡುಗಿ ಇವಳಲ್ಲ ಎಂಬುದು ತಿಳಿಯುತ್ತದೆ. ಮೆವ್ಲುಟನೇ ಹೇಳುವಂತೆ, ಈ ಓಡಿಹೋಗುವುದೆಂದರೆ ಮಹಾ ತಂತ್ರಗಾರಿಕೆಯ ವ್ಯವಹಾರವಾದುದರಿಂದ, ಅವನು ತನ್ನ ಅಂತರಂಗದ ಜ್ವಾಲಾಮುಖಿಯನ್ನು ಅದುಮಿಟ್ಟು, ಮುಖ್ಯವಾಗಿ ಅದನ್ನು ಹೊರಗೆ ತೋರಗೊಡದೇ ರಯಿಹಾಳೊಂದಿಗೇ ಸಂಸಾರ ಆರಂಭಿಸುತ್ತಾನೆ.

ಅದೆಷ್ಟೋ ವರ್ಷಗಳಾದ ಮೇಲೆ, ಏನೇನೋ ತಿರುವುಗಳ ನಂತರ ಸಮಿಹಾ ಮತ್ತೆ ಮೆವ್ಲುಟ್‍ನ ಬಾಳಿನಲ್ಲಿ ಬಂದಾಗ ಅವನಿಗೆ ‘ನಿಜವಾದ ಪ್ರೀತಿ’ಯ ಕುರಿತು ಗೊಂದಲ ಶುರುವಾಗುತ್ತದೆ. ಪವಿತ್ರವಾದ, ಆಳವಾದ, ಸತ್ಯವಾದ ಪ್ರೀತಿಯೆಂಬುದು ನಿಜದಲ್ಲಿ ಇದೆಯೇ? ಅಥವಾ ಅದು ಪ್ರೀತಿಯೆಂಬ ಭ್ರಮೆಯೇ ಎಂದು ನಗರದ ರಸ್ತೆಗಳಲ್ಲಿ ‘ಬೋಝಾ..’ ಕೂಗುಹಾಕುತ್ತ ಮೆವ್ಲುಟ್ ಪ್ರಶ್ನಿಸಿಕೊಳ್ಳುತ್ತಾನೆ. ಮೆವ್ಲುಟ್‍ನ ಪ್ರಕಾರ ಅವನಿಗೆ ಬೀದಿಯಲ್ಲಿ ನಡೆಯುವಾಗ ಮಾತ್ರ ಧ್ಯಾನಿಸಲು ಸಾಧ್ಯ, ಸ್ಪಷ್ಟವಾಗಿ ವಿಚಾರ ಮಾಡಲು ಸಾಧ್ಯ. ರಯಿಹಾ ಮತ್ತು ಸಮಿಹಾರ ಕುರಿತಾಗಿ ತನಗಿರುವ ಪ್ರೇಮದ ಬಗ್ಗೆ ತುಂಬಾ ಯೋಚಿಸುವ ಮೆವ್ಲುಟ್, ತನ್ನದೇ ಆದ ಧೋರಣೆಯೊಂದನ್ನು ಕಂಡುಕೊಳ್ಳಲು ಹೆಣಗುತ್ತಾನೆ. ಅವನ ದ್ವಂದ್ವಗಳು ಈ ಇಬ್ಬರು ಹೆಣ್ಣುಗಳ ಕುರಿತಾಗಿ ಮಾತ್ರ ಆಗಿರದೇ ತನ್ನ ಬದುಕಿನ ಬಗೆಗೂ ಆಗಿರುವುದು ಈ ಕಾದಂಬರಿಯ ವಿಶೇಷ. ಅವನಿಗೆ ಬದುಕಿನ ಬಗೆಗೂ, ಪ್ರೇಮದ ಬಗೆಗೂ ಕೊನೆಗೂ ಉತ್ತರ ಸಿಗದೇ ಇರುವುದು ಇನ್ನೊಂದು ವೈಶಿಷ್ಟ್ಯ.

th(1)

ಒರ್ಹಾನ್ ಪಾಮುಕ್

ಪಾಮುಕ್ ನಮ್ಮ ಕಾಲದ ಬಹು ಮೇಧಾವಿ ಬರಹಗಾರ. ಈ ಕಾದಂಬರಿಯಲ್ಲಿ ಮೆವ್ಲುಟ್‍ನ ಜೀವನದ ಕುರಿತು ಚಿತ್ರಿಸುತ್ತಲೇ ಅವರು ಬಂಡವಾಳಶಾಹಿ ಆವರಣದಲ್ಲಿ ಶಹರವೊಂದು ಹೇಗೆ ಬದಲಾವಣೆಯ ಹೊಸಗಾಳಿಯಲ್ಲಿ ನಲುಗುತ್ತದೆ ಎಂಬ ಕಥೆಯನ್ನೂ ಹೇಳುತ್ತಾರೆ. ಆ ಕಾರಣಕ್ಕಾಗಿ ಇದು ಮೆವ್ಲುಟ್‍ನ ಕಥೆ ಎಷ್ಟೋ ಅಷ್ಟೇ ಬದಲಾಗುತ್ತಿರುವ ಇಸ್ತಾನ್‌ಬುಲ್‍ನ ಕತೆಯೂ ಆಗಿದೆ, ನಗರದ ಮೌಲ್ಯಗಳಲ್ಲಿ ನಂಬಿಕೆಯಿಟ್ಟು ವಲಸೆಬಂದ ಸಾವಿರಾರು ವಲಸಿಗರ ನೋವಿನ ಕಥೆಯೂ ಆಗಿದೆ.

ಬಡವರು ಬಡವರಾಗಿಯೇ ಇರುವ, ಶ್ರೀಮಂತರನ್ನು ಇನ್ನಷ್ಟು ಶ್ರೀಮಂತಗೊಳಿಸುವ ಬಂಡವಾಳ ವ್ಯವಸ್ಥೆಯ ಚಿತ್ರಣ ಕಣ್ಣಿಗೆ ಕಟ್ಟುವಂತಿದೆ. ವಲಸಿಗರು ಮೊದಲು ಬಂದಾಗ ಕಟ್ಟಿಕೊಂಡ ‘ಗಿಸಿಕೊಂಡು’ ಮನೆಗಳು ಮರೆಯಾಗಿ ಆ ಜಾಗಗಳಲ್ಲಿ ಈಗ ಬಹುಮಹಡಿ ಕಟ್ಟಡಗಳು ತಲೆಯೆತ್ತಿ ನಿಂತಿವೆ. ಟೀವಿ, ಸಿನಿಮಾ, ಸಿಗಾರ್, ಮದುಪಾನ ಈಗ ವಿಶೇಷ ಸಂಗತಿಗಳಾಗಿ ಉಳಿದಿಲ್ಲ. ಮೊಸರು, ಬೋಝಾ ಪಾನಕ ಕೂಡ ಈಗ ಸೀಲ್ ಮಾಡಿದ ಬಾಟಲ್ಲುಗಳಲ್ಲಿ ದೊರೆಯುತ್ತಿವೆ. ಈ ವ್ಯವಸ್ಥೆಯಿಂದ ಕೆಲವು ಒಳ್ಳೆಯ ಲಕ್ಷಣಗಳೂ ಅನಾವರಣಗೊಂಡಿವೆ. ಹೆಣ್ಣುಮಕ್ಕಳು ತಮ್ಮ ತಲೆಯ ಸ್ಕಾರ್ಫನ್ನು ಅತಿ ಸಡಿಲವಾಗಿ ತೊಡಲು ಶುರು ಮಾಡಿದ್ದಾರೆ. ವಧುದಕ್ಷಿಣೆಯಿಲ್ಲದೇ ಮದುವೆಯಾಗುವುದು ಅತಿ ಸಾಮಾನ್ಯವಾಗಿದೆ.

‘ಎ ಸ್ಟ್ರೇಂಜ್‍ನೆಸ್ ಇನ್ ಮೈ ಮೈಂಡ್’ ಕಾದಂಬರಿಯ ನಿರೂಪಣೆ ಭಿನ್ನವಾಗಿದೆ. ಕೃತಿಕಾರರು ಪಾತ್ರಗಳ ‘ಧ್ವನಿ’ಗೆ ಇಲ್ಲಿ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ. ಆಯಾ ಪಾತ್ರಗಳು, ಅವು ಎಷ್ಟೇ ಸಣ್ಣ ಪಾತ್ರಗಳಾದರೂ ಸರಿ ನಡುನಡುವೆ ಬಂದು ತಮ್ಮ ಸ್ವಂತ ದೃಷ್ಟಿಕೋನದಲ್ಲಿ ಕಥೆಯನ್ನು ಮುಂದುವರೆಸಿ ಹೋಗುತ್ತವೆ. ಒಂದು ಹಂತದಲ್ಲಿ ಕಥೆಯ ನಿರೂಪಕರಿಗಿಂತ ಈ ಪಾತ್ರಗಳೇ ಹೆಚ್ಚು ನಂಬಿಕೆಗೆ ಅರ್ಹವೇನೋ ಅಂತನಿಸಿಬಿಡುವುದು ಸುಳ್ಳಲ್ಲ. ಅದೇ ಈ ಕಾದಂಬರಿಯ ಗೆಲುವೂ ಹೌದು.

ಇಲ್ಲಿ ಬರುವ ದೃಢ ಸ್ತ್ರೀ ಪಾತ್ರಗಳು ಯಾವತ್ತಿಗೂ ನೆನಪಿನಲ್ಲುಳಿಯುವಂಥವು. ಈ ಬರಹದುದ್ದಕ್ಕೂ ಮೆವ್ಲುಟ್‍ನೇ ಆವರಿಸಿಕೊಂಡಿದ್ದರೂ ಇದು ತಕ್ಕಮಟ್ಟಿಗೆ ವೇದಿಹಾ, ರಯಿಹಾ, ಸಮಿಹಾ ಸೋದರಿಯರ ಬಂಧದ ಕಥೆಯೂ ಹೌದು. ಯಾವುದೇ ಸಂಘರ್ಷವನ್ನೂ ನಿರಾಯಾಸವಾಗಿ ಬಗೆಹರಿಸಬಲ್ಲ ವೇದಿಹಾ, ಅಸೂಯೆಯಲ್ಲಿ ಕುದಿಯುತ್ತ ತಾನು ಕಟುವಾಗಿ ಧ್ವೇಷಿಸುವ ಹರಿತ ಕಣ್ಣುಗಳ ಕಸೂತಿಯನ್ನು ಕಿಟಕಿಯ ಪರದೆಗಳ ಮೇಲೆ ಬರೆಯುವ ರಯಿಹಾ, ತನ್ನ ಸೌಂದರ್ಯದ ಅರಿವಿದ್ದು ಅದೊಂದೇ ಆಯುಧದಿಂದ ಇಡೀ ಜಗತ್ತನ್ನೇ ತನ್ನ ಸುತ್ತ ಸುತ್ತುವಂತೆ ಮಾಡುವ ಸಮಿಹಾ.. ಇವೆಲ್ಲ ಎಂದಿಗೂ ಮನಸ್ಸಿನಲ್ಲಿ ಅಚ್ಚೊತ್ತಿ ಉಳಿಯುವ ಪಾತ್ರಗಳು.

ಓದುತ್ತೋದುತ್ತ ಈ ಕಾದಂಬರಿಯಲ್ಲಿ ಬರುವ ಕಥಾನಾಯಕ ಮೆವ್ಲುಟ್‍ನ ಬದುಕು ಮತ್ತು ಈ ದೀರ್ಘ ಬರಹದುದ್ದಕ್ಕೂ ಚಾಚಿಕೊಂಡ ಬದಲಾಗುತ್ತಲೇ ಇರುವ ಇಸ್ತಾನ್‌ಬುಲ್ ನಗರದ ಉದ್ದುದ್ದ ರಸ್ತೆಗಳು ಒಂದು ಹಂತದಲ್ಲಿ ಮಾಂತ್ರಿಕವಾಗಿ ಐಕ್ಯವಾಗುವುದನ್ನು ಕಾಣುವುದೇ ಒಂದು ಸೋಜಿಗ.

———————

kavya

ಕಾವ್ಯಾ ಕಡಮೆ ನಾಗರಕಟ್ಟೆ, ಉತ್ತರಕನ್ನಡದ ಕಡಮೆ ಎಂಬ ಪುಟ್ಟ ಊರಿನವರು. 1988ರಲ್ಲಿ ಜನನ. ಬಿಎಸ್ಸಿ ನಂತರ ಕರ್ನಾಟಕ ವಿವಿಯಿಂದ ಆರು ಚಿನ್ನದ ಪದಕಗಳೊಂದಿಗೆ ಪತ್ರಿಕೋದ್ಯಮ ಎಂ.ಎ ಪದವಿ. ಸದ್ಯ ಪತಿಯೊಡನೆ ಅಮೇರಿಕೆಯ ನ್ಯೂಜೆರ್ಸಿಯಲ್ಲಿ ವಾಸ. ಮೊದಲ ಕವನ ಸಂಕಲನ ‘ಧ್ಯಾನಕ್ಕೆ ತಾರೀಖಿನ ಹಂಗಿಲ್ಲ’ಕ್ಕೆ 2014ರ ಕೇಂದ್ರ ಸಾಹಿತ್ಯ ಅಕಾಡಮಿಯ ‘ಯುವ ಪುರಸ್ಕಾರ’, ಯುವ ಬರಹಗಾರರಿಗೆ ನೀಡುವ 2012ರ ಟೋಟೋ ಪುರಸ್ಕಾರ ದೊರೆತಿದೆ. ಕ್ರೈಸ್ಟ್ ಕಾಲೇಜು ಡಾ. ಬೇಂದ್ರೆ ಕವನ ಸ್ಪರ್ಧೆಯಲ್ಲಿ ಸಂಚಯದಲ್ಲಿ ಕಾವ್ಯ ಬಹುಮಾನ. ‘ಪುನರಪಿ’ ಮೊದಲ ಕಾದಂಬರಿ.

Share

6 Comments For "ಪ್ರೇಮದ ಬದುಕು, ಶಹರದ ರಸ್ತೆ…
ಕಾವ್ಯಾ ಕಡಮೆ ನಾಗರಕಟ್ಟೆ
"

 1. ಪದ್ಮನಾಭ ಭಟ್, ಶೇವ್ಕಾರ
  15th January 2016

  ಚೆನ್ನಾಗಿದೆ ಬರಹ….

  Reply
  • Nataraj honnavalli
   16th January 2016

   ಒರ್ಹಾನ್ ಪಾಮುಖ್ ಮೇಲಿನ ನಿಮ್ಮ ಬರಹ ತುಂಬಾ ಇಸ್ಟವಾಯಿತು. ನಾನೋದಿದ ಒರ್ಹಾನ್ ಪಾಮುಖ್ ಮೇಲಿನ ಕನ್ನಡ ಬರಹ ಬಹುಷಃ ಇದೇ ಮೊದಲು ಇರಬೇಕು.

   Reply
  • 17th January 2016

   ಥ್ಯಾಂಕ್ಸ್ ಲೇ:)

   Reply
   • yoeshmarenahalli
    28th January 2016

    ಬರಹ ಬಹಳ ಚೆನ್ನಾಗಿದೆ. ಕಥಾನಾಯಕನ ತಲ್ಲಣಗಳಲ್ಲಿ ಜಗದ ಪರಿವರ್ತನೆಯ (transformation) ಗಂಧವಿದೆ…
    ನಿಮ್ಮ ಅಕ್ಷರಗಳು ಪುಸ್ತಕ ಓದುಗೆ ಸ್ಫೂರ್ತಿಯಾಗಿವೆ.

    Reply
 2. Udaykumar Habbu
  19th June 2016

  The article is really inspiring and motivated me to read the novelist. Where can I get the book Please message to my email-Udaykumar Habbu, Kinnigoli-574150 D K

  Reply

Leave a comment

Your email address will not be published. Required fields are marked *

Recent Posts More

 • 1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 2 weeks ago No comment

  ಇತಿಹಾಸ ತಿರುಚಿ ವಿಷಬೀಜ ಬಿತ್ತುವವರ ಮಧ್ಯೆ…

        ಪ್ರಸ್ತಾಪ           ಕೋಮುವಾದಿಗಳ ಆಳ್ವಿಕೆಯು ರಾಜಕೀಯವನ್ನು ಧರ್ಮದ ಜೊತೆ ಬೆರೆಸುತ್ತ ಹಾಳು ಮಾಡಿದ್ದಾಗಿದೆ. ಕಲಿಕೆಯ ವಾತಾವರಣವನ್ನೂ ಕೇಸರೀಕರಣದಿಂದ ಕಲುಷಿತಗೊಳಿಸುತ್ತಿರುವುದು ಮಾತ್ರ ಅಕ್ಷಮ್ಯ. ತಿರುಚಲಾದ ಇತಿಹಾಸವನ್ನು ಮಾತ್ರ ಹೇಳುತ್ತ ಇದು ಮಾಡುತ್ತಿರುವುದು ಹೊಸ ಪೀಳಿಗೆಯ ಮನಸ್ಸುಗಳಲ್ಲಿ ವಿಷಬೀಜವನ್ನು ಬಿತ್ತುವ ಕರಾಳ ಕೃತ್ಯ.   ಇತ್ತೀಚೆಗೆ ಮಕ್ಕಳ ಶೈಕ್ಷಣಿಕ ಹೊರೆಯನ್ನು ಕಡಿಮೆಗೊಳಿಸುವ ಉದ್ದೇಶದಿಂದ ಪಠ್ಯ ಪುಸ್ತಕಗಳ ಪರಿಶೀಲನೆ, ಮುದ್ರಣ ಹಾಗೂ ಮತ್ತಿತರ ...

 • 2 weeks ago No comment

  ‘ಸೂಜಿದಾರ’ದಲ್ಲಿ ಚೈತ್ರಾ ಕೋಟೂರ್ ಹಾಡು

  ತಮ್ಮ ಸಾಧನೆಯ ಬಗ್ಗೆ ಅಹಮಿಕೆ ತೋರದವರಲ್ಲಿ ಚೈತ್ರಾ ಕೋಟೂರ್ ಖಂಡಿತವಾಗಿಯೂ ಒಬ್ಬರು. ಅವರ ಕನಸುಗಳ ದಾರಿಯಲ್ಲಿ ಈ ನಿರ್ಲಿಪ್ತ ಸಡಗರದ ಚಂದಿರ ಎಂದೆಂದೂ ಜೊತೆಗಿರಲಿ.   ಇವತ್ತು ಕನ್ನಡ ರಂಗಭೂಮಿ, ಸಿನಿಮಾ, ಸಾಹಿತ್ಯ ಕ್ಷೇತ್ರಗಳಲ್ಲಿ ಹೊಸಬರ ಪಡೆಯೊಂದು ಜಾದೂವನ್ನೇ ಮಾಡುತ್ತಿದೆ. ಬೆರಗು ಹಚ್ಚುವಂಥ ಸೃಜನಾತ್ಮಕತೆ, ಶ್ರದ್ಧೆ ಮತ್ತು ಅದಕ್ಕೆಲ್ಲ ಪೂರಕವಾದ ಪರಿಣತಿಯೊಂದಿಗೆ ಇರುವವರು ಇವರೆಲ್ಲ. ಇಂಥವರ ಸಾಲಿನಲ್ಲಿ ಚೈತ್ರಾ ಕೋಟೂರ್ ಅವರದೂ ಪ್ರಮುಖ ಹೆಸರು. ಚೈತ್ರಾ ಅವರ ಹೆಚ್ಚುಗಾರಿಕೆಯೆಂದರೆ, ...

 • 2 weeks ago No comment

  ಉಷಾ ಚಿತ್ತ | ಮೊಲದ ಮರಿ ಗಿಫ್ಟ್

        ‘ಚಲಿತ ಚಿತ್ತ’ದಲ್ಲಿ ಕವಿಸಾಲು       ಮೇರು ಸದೃಶ್ಯವಾಗಿ ಕಂಡದ್ದು ಬರಬರುತ್ತಾ ಕಾಲಕೆಳಗಿನ ಗುಡ್ಡವಾಯಿತು. ಹೋಗ ಹೋಗುತ್ತಾ ಚುಕ್ಕಿಯಾಗಿ, ಆಕಾಶದ ನೀಲಿಯಲಿ ಲೀನವಾಯಿತು. ನೆನಪಿನ ಕೋಶ ಸೇರಿದಾಗ, ಅಂತರಾಳದಲಿ ಕಡಲಾಯಿತು. ಅಲ್ಲೀಗ ಕನಸುಗಳ ಸರಕು ಹೊತ್ತ ದೋಣಿಯೊಂದು ತೇಲುತ್ತಿದೆ. ನಿರ್ಜನ ರಾತ್ರಿ, ಹುಟ್ಟು ಕೈಯ್ಯಲ್ಲಿದೆ; ದಡದಿಂದ ಕೇಳುತಿದೆ ಮೋಹಕ ಕೊಳಲ ಗಾನ. ಮನ ಕಂಪಿಸುತಿದೆ, ಬಾರೆನ್ನ ಪೂರ್ಣಚಂದಿರ. ಕಡಲು ಅಬ್ಬರಿಸುತ್ತರಲಿ, ನನ್ನ ಕೈಗಳಿಗೆ ...

 • 3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...


Editor's Wall

 • 14 April 2019
  1 week ago No comment

  ಈ ಸಂತನ ಸುತ್ತ ಸ್ವಾರ್ಥಿಗಳೇ; ಅಂದಿಗೂ ಇಂದಿಗೂ

          ಪ್ರಸ್ತಾಪ         ಅಂಬೇಡ್ಕರ್ ಕೇವಲ ಅಸ್ಪೃಶ್ಯರ ವಿಮೋಚನೆಗಾಗಿ ಹೋರಾಡಲಿಲ್ಲ. ಬದಲಿಗೆ ಈ ದೇಶದ ಸಮಸ್ತರ ಒಳಿತಿಗಾಗಿ ಶ್ರಮಿಸಿದ್ದರು. ಆದರೆ ಅವರ ಅಂತಃಕರಣವನ್ನು ಈ ದೇಶ ಅರ್ಥ ಮಾಡಿಕೊಳ್ಳಲು ಯತ್ನಿಸಿದ್ದಕ್ಕಿಂತ ಅಪಾರ್ಥ ಮಾಡಿಕೊಳ್ಳುವ ಆತುರ ಅಚಾತುರ್ಯ ತೋರಿದ್ದೇ ಹೆಚ್ಚು. ಅವರ ವಿಚಾರಧಾರೆಗಳು, ಅವರು ಬರೆದ ಸಂವಿಧಾನವಷ್ಟೇ ಇಂದು ಎಲ್ಲರನ್ನೂ ರಕ್ಷಿಸಬಲ್ಲವು. ಈ ಸತ್ಯ ಈಗಲಾದರೂ ಅರ್ಥವಾಗಬೇಕಿದೆ. ಆದರೆ ಅರ್ಥ ಮಾಡಿಕೊಳ್ಳಬೇಕಾದವರು, ...

 • 04 April 2019
  3 weeks ago No comment

  ಅನೈತಿಕತೆಯೆಡೆಗಿನ ದುಷ್ಟ ಕುತೂಹಲ ಮತ್ತು ಮಾಧ್ಯಮ

  ಯಾವುದೋ ರಹಸ್ಯ ರಣತಂತ್ರವನ್ನು ಹುದುಗಿಸಿಕೊಂಡ ಅಥವಾ ಅಂಥ ಪ್ರೇರಣೆಯಿಂದ ಹೊಮ್ಮುವ ರಾಜಕೀಯ ಹೇಳಿಕೆಯು ಉಂಟುಮಾಡುವ ಸಂಚಲನ ಹೇಗಿರುತ್ತದೆಂದರೆ, ಅದರ ತುಣುಕುಗಳಷ್ಟೇ ಸದ್ದು ಮಾಡುತ್ತವೆ. ಈ ಸದ್ದಿನಲ್ಲಿ ಸತ್ಯವಿರುವ ಅದರ ಭಾಗ ಅಡಗಿಹೋಗಿರುತ್ತದೆ.   ಇದು ಹೇಳಿಕೇಳಿ ಚುನಾವಣೆಯ ಕಾಲ. ಆರೋಪ ಪ್ರತ್ಯಾರೋಪಗಳದ್ದೇ ಅಬ್ಬರ. ರಾಜಕೀಯ ಹೇಳಿಕೆಗಳು ಒಬ್ಬೊಬ್ಬರಿಗೆ ಒಂದೊಂದು ಬಗೆಯಾಗಿ ಕೇಳಿಸುತ್ತ ಅಥವಾ ಬೇರೆಯದೇ ಅರ್ಥಗಳನ್ನು ಪಡೆಯುತ್ತ, ನರಿ ಹೋಯಿತು ಎಂಬುದು ಹುಲಿ ಹೋಯಿತು ಎಂಬಂತೆ ಬಿಂಬಿತವಾಗುವುದು ಬಹಳ ...

 • 29 March 2019
  4 weeks ago One Comment

  ಕಾದಂಬಿನಿ ಕಾಲಂ | ಹಕ್ಕಿ ಸಾಕಬೇಕೆಂದರೆ ಹುಳಗಳನ್ನೂ ಸಾಕಬೇಕು

                    ನಾವು ಯಾರನ್ನು ಪ್ರೀತಿಸುತ್ತೇವೆಯೋ ಅವರ ಆಹಾರವನ್ನೂ ಪ್ರೀತಿಸಬೇಕು. ಪ್ರತಿಯೊಂದು ಜೀವಿಯ ಆಹಾರದ ಹಕ್ಕನ್ನೂ ಗೌರವಿಸುವುದು ಎಲ್ಲರೂ ಮೊದಲು ಕಲಿತುಕೊಳ್ಳಬೇಕಾದ ಸಜ್ಜನಿಕೆ. ಅದು ಹಕ್ಕಿಯದಿರಲಿ, ಮನುಷ್ಯನದಿರಲಿ. ಕಾರ್ಕೋಟಕ ಸರ್ಪವೋ, ಹುಲಿಯೋ ಎದುರಾದರೂ ಅಷ್ಟು ಹೆದರುತ್ತೇನೋ ಇಲ್ಲವೋ ಆದರೆ ಅಕ್ಕಿ ಆರಿಸುವಾಗಲೋ ಬದನೆಕಾಯಿ ಹೆಚ್ಚುವಾಗಲೋ, ಹೂ ಗಿಡಗಳಲ್ಲಿರುವಾಗಲೋ ಚಿಕ್ಕ ಹುಳ ಕಂಡರೂ ಕಿರುಚಿ ಊರು ಒಂದು ಮಾಡಿಬಿಡುತ್ತೇನೆ. ಹಾಗೆಂದು ...

 • 26 March 2019
  4 weeks ago No comment

  ಬೆಂದರೆ ಬೇಂದ್ರೆ…ನೊಂದರೆ ಕಾದಂಬಿನಿ

  ಪುಸ್ತಕ ಪ್ರಸ್ತಾಪ     ಕಾದಂಬಿನಿ ಅವರ ‘ಕಲ್ಲೆದೆಯ ಮೇಲೆ ಕೂತ ಹಕ್ಕಿ’ ಕವನ ಸಂಕಲನದ ಬಗ್ಗೆ ಹಿರಿಯರಾದ ಚಂದ್ರಶೇಖರ ನಂಗಲಿಯವರು ತಮ್ಮ ಫೇಸ್ಬುಕ್ ವಾಲ್ ನಲ್ಲಿ ಬರೆದಿದ್ದಾರೆ. ಅದನ್ನು ಇಲ್ಲಿ ಎತ್ತಿಕೊಡಲಾಗಿದೆ.   ಪ್ರೀತಿ ಪ್ರೇಮ ಮಾನವಜೀವನದ ಚಾಲಕ ಶಕ್ತಿ. ಈ ಸ್ಟೇರಿಂಗ್ ಹಿಡಿದು ಸಮತಲ, ತಗ್ಗು ದಿಣ್ಣೆ , ಹೇರ್ ಪಿನ್ ಕರ್ವ್ಸ್, ಡೆಡ್ ಎಂಡ್ ಮುಂತಾದ ಬಗೆ ಬಗೆಯ ರಸ್ತೆಗಳಲ್ಲಿ , ಒಮ್ಮೊಮ್ಮೆ ರಸ್ತೆಯಿಲ್ಲದ ...

 • 12 March 2019
  1 month ago No comment

  ಭಾವನೆಗಳ ಜೊತೆ ಆಡುವವರ ಮೇಲೊಂದು ಕಡಿವಾಣ

  ದೇಶ ಮತ್ತೊಂದು ಮಹಾ ಚುನಾವಣೆಯ ಅಖಾಡದೊಳಕ್ಕೆ ಮುಗ್ಗರಿಸುತ್ತಿರುವ ಈ ಹೊತ್ತಿನಲ್ಲಿ, ಹಲವು ಸೂಕ್ಷ್ಮ ಸಂಗತಿಗಳು ದೇಶದ ಪಾಲಿಗೆ ಸಂಕಟವನ್ನೂ ದೇಶದೊಳಗೇ ಒಂದು ತಳಮಳವನ್ನೂ ಉಂಟುಮಾಡಿವೆ.   17ನೇ ಲೋಕಸಭೆ ಚುನಾವಣೆಗೆ ದಿನ ಗೊತ್ತಾಗುತ್ತಿದ್ದಂತೆಯೇ ಎರಡು ಅಂಶಗಳನ್ನು ಚುನಾವಣಾ ಆಯೋಗ ಕಟ್ಟುನಿಟ್ಟಾಗಿ ಹೇಳಿದೆ. ಮೊದಲನೆಯದು, ಸೇನೆಗೆ ಸಂಬಂಧಪಟ್ಟ ಯಾವುದೇ ವಿಚಾರಗಳನ್ನು ರಾಜಕೀಯದಲ್ಲಿ ಎಳೆದು ತರುವಂತಿಲ್ಲ; ಎರಡನೆಯದು, ಕೇರಳದಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನಕ್ಕೆ ಮಹಿಳೆಯರ ಪ್ರವೇಶ ವಿವಾದವನ್ನು ಚುನಾವಣಾ ವಿಷಯವಾಗಿ ಎತ್ತಿಕೊಳ್ಳುವಂತಿಲ್ಲ. ದೇಶದ ...